ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿಯ ಗ್ರಾಮೀಣ ಪತ್ರಿಕೋದ್ಯಮದ ಹೆಸರು ಬಂದಾಗಲೆಲ್ಲಾ ಅಗ್ರಪಂಕ್ತಿಯಲ್ಲಿ ನಿಲ್ಲುವ ಹಿರಿಯ ಪತ್ರಕರ್ತ, ವಿಜಯ ಕರ್ನಾಟಕದ ದೈನಿಕ ಕುಂದಾಪುರದ ಸಿನಿಯರ್ ಕಾಫಿ ಎಡಿಟರ್ ಜಾನ್ ಡಿಸೋಜಾ ಅವರಿಗೆ ಪ್ರಸಕ್ತ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಬಿಎಸ್ಸಿ ಪದವೀಧರರಾಗಿರುವ ಜಾನ್ ಡಿಸೋಜಾ ಅವರನ್ನು ಸೆಳದದ್ದು ಪತ್ರಿಕೋದ್ಯಮ ಕ್ಷೇತ್ರ. ವಿದ್ಯಾರ್ಥಿಯಾಗಿದ್ದಾಗಲೇ ಕುಂದಪ್ರಭ ವಾರಪತ್ರಿಕೆಯ ಮೂಲಕ ಪತ್ರಿಕೋದ್ಯಮದ ಪ್ರವೇಶಿಸಿದ ಅವರು ಗ್ರಾಮಾಂತರ ಪ್ರದೇಶಗಳು ಹಾಗೂ ತನಿಖಾ ವರದಿಗಾಗಿ ಸುತ್ತಾಟ, ಮನೆ ಮನೆಗೆ ಪತ್ರಿಕೆಯ ಹಾಕುವುದರಿಂದ ಹಿಡಿದು ಸ್ಥಳೀಯ ಪತ್ರಿಕೆಯ ಎಲ್ಲಾ ಆಯಾಮಗಳಲ್ಲಿಯೂ ಅನುಭವ ಪಡೆದವರು. ಅದರ ನಡುವೆ ಜೈಕೊಂಕಣಿ ಕೊಂಕಣಿ ಭಾಷಿಕ ಪತ್ರಿಕೆಯ ಹೊಣೆಗಾರಿಕೆ. ಪದವಿಯ ಬಳಿಕ ೧೯೯೯ರಿಂದ ಒಂದು ವರ್ಷ ಕುಂದಪ್ರಭದ ವರದಿಗಾರರಾಗಿ ಆ ಬಳಿಕ ೨೦೦೧ರಲ್ಲಿ ಹೊಸತಾಗಿ ಆರಂಭಗೊಂಡಿದ್ದ ವಿಜಯ ಕರ್ನಾಟಕ ಪತ್ರಿಕೆಯ ಕುಂದಾಪುರದ ವರದಿಗಾರರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಅಲ್ಲಿಂದಿಚಿಗೆ ಜಾನ್ ಅವರು ಹಿಂತಿರುಗಿ ನೋಡಿದ್ದಿಲ್ಲ. ಸಾಮಾನ್ಯರನ್ನೂ ಸೆಳೆಯುವ ತನ್ನ ವಿಶಿಷ್ಟ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂಗ್ಲೆಂಡಿನ ಭಾರತೀಯ ದೂತಾವಾಸ ಆಗಸ್ಟ್‌ನಲ್ಲಿ ಲಂಡನಿನ ಜಿಮಖಾನಾ ಬಯಲಿನಲ್ಲಿ ಏರ್ಪಡಿಸಿದ್ದ ಭಾರತದ 70ನೆಯ ಸ್ವಾತಂತ್ರ್ಯೋತ್ಸವದಲ್ಲಿ ಬಡಗುತಿಟ್ಟಿನ ಯಕ್ಷಗಾನದ ತುಣುಕೊಂದನ್ನು ಪ್ರದರ್ಶಿಸಿ ಜಾಗತಿಕ ಮಾಧ್ಯಮಗಳೂ ಸೇರಿ ನೆರೆದವರ ಗಮನ ಸೆಳೆದಿದ್ದ ಕುಂದಾಪುರದ ತರುಣರಿಬ್ಬರು ನವೆಂಬರ್ ಮೊದಲ ವಾರದಲ್ಲಿ ಲಂಡನ್ ನಗರದ ಪ್ರಮುಖ ಪ್ರದರ್ಶನ ಕೇಂದ್ರಗಳಲ್ಲಿ ನಡೆಯುವ ’ಲಂಡನ್ ಇಂಟರ್‌ನ್ಯಾಶನಲ್ ಆರ್ಟ್ ಫೆಸ್ಟಿವಲ್’ನಲ್ಲಿ ಇನ್ನೊಮ್ಮೆ ಮಿಂಚುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿನ ಡಂಕ್ಯಾಸ್ಟರ್ ನಗರದಲ್ಲಿ ವೈದ್ಯರಾಗಿರುವ ಬೈಂದೂರು ಮೂಲದ ಗುರುಪ್ರಸಾದ ಪಟ್ವಾಲ್ ಮತ್ತು ಬ್ರಿಸ್ಟಲ್‌ನ ಏರ್‌ಬಸ್ ವಿಮಾನ ತಯಾರಿಕಾ ಕಂಪನಿಯಲ್ಲಿ ತಂತ್ರಜ್ಞರಾಗಿರುವ ಯೋಗೀಂದ್ರ ಮರವಂತೆ ನವಂಬರ್ 5ರಂದು ಇಲ್ಫೋರ್ಡ್‌ನ ರೆಡ್‌ಬ್ರಿಜ್ ಟೌನ್‌ಹಾಲ್‌ನಲ್ಲಿ ’ಕಂಸವಧೆ’ಯ ದೃಶ್ಯವೊಂದನ್ನು ಪ್ರಸ್ತುತಪಡಿಸಲು ಆಮಂತ್ರಿತರಾಗಿದ್ದಾರೆ. ಲಂಡನ್ ಕೇಂದ್ರವಾಗಿಸಿಕೊಂಡು 2012ರಿಂದ ಭಾರತೀಯ ಕಲೆಯನ್ನು ಪ್ರಚುರಪಡಿಸುತ್ತಿರುವ ವಯಲಿನ್ ವಿದುಷಿ ಜ್ಯೋತ್ಸ್ನಾ ಶ್ರೀಕಾಂತ್ ಅವರ ಕಲಾಸಂಸ್ಥೆ ’ಧ್ರುವ್ ಆರ್ಟ್ಸ್’ ಈ ಐದು ದಿನಗಳ ಫೆಸ್ಟಿವಲ್‌ನ ಆಯೋಜಕ. ಭಾರತವೂ ಸೇರಿದಂತೆ ವಿವಿಧ ದೇಶಗಳ ಖ್ಯಾತನಾಮ ಸಂಗೀತ, ನೃತ್ಯ ಕಲಾವಿದರು ಇದರಲ್ಲಿ ಪ್ರದರ್ಶನ…
ದಿವ್ಯಾಧರ ಶೆಟ್ಟಿ ಕೆರಾಡಿ | ಕುಂದಾಪ್ರ ಡಾಟ್ ಕಾಂ ಲೇಖನ. ಮತ್ತೆ ಬಂದಿದೆ ದೀಪಾವಳಿ. ಜಗತ್ತೇ ಸಂಭ್ರಮದಿಂದ ಆಚರಿಸುವ ಬೆಳಕಿನ ಹಬ್ಬದ ಗಮ್ಮತ್ತೆ ವಿಶೇಷವಾದುದು. ಇಂದಿನ ಅಬ್ಬರದ ದೀಪಾವಳಿ, ಚೈನಾ ಪಟಾಕಿಗಳ ಸದ್ದಿನ ಎದುರು ನಾವು ಬಾಲ್ಯದಲ್ಲಿ ಹೊಡೆಯುತ್ತಿದ್ದ ಲಕ್ಷ್ಮೀ ಪಟಾಕಿಯ ಸದ್ದೇ ಈಗ ಕೇಳಿಸುತ್ತಿಲ್ಲ ನಮ್ಮ ಹಳ್ಳಿ ಬಾಲ್ಯದ ಕಡೆಗೆ, ಕಳೆದು ಹೋದ ಆ ಕಾಲದ ದೀಪಾವಳಿಯ ನೆನಪುಗಳ ಮನೆಯೊಳಗೊಮ್ಮೆ ಮೆಲ್ಲಗೆ ಹೋಗಿ ಹಳೆಯ ಮೆಲಕುಗಳ ಹಣತೆಯನ್ನು ಸಾಲಾಗಿ ಜೊಡಿಸಿ ಹಚ್ಚಿಟ್ಟು ಬರೋಣವೇ? ಅಪ್ಪ ನಂಗೆ ನೆಲ್ಚಕ್ರ ಬೇಕ್, ಅಮ್ಮಾ ನಂಗ್ ಸುರ್ ಸುರ್ ಕಡ್ಡಿ ಬೇಕ್ ನಂಗ್ ಎಲ್ ಕೇಪ್, ನಂಗ್ ರೀಲ್ ಕೇಪ್, ಒಂದೇ ಎರಡೇ ದೀಪಾವಳಿ ಬಂತೆಂದರೆ ಅದೆಂಥ ಸಂಭ್ರಮ. ಊರಹಬ್ಬಕ್ಕಿಂತಾ ಗಮ್ಮತ್ತು. ದೊಡ್ಡ ದೊಡ್ಡ ಪಟಾಕಿ, ಹೊಸ ಹೊಸ ಬಟ್ಟೆಯ ಇಂದಿನ ಈ ಸಂಭ್ರಮ ಇದೆಲ್ಲ ನಾವು ನೋಡಿದ್ದೆ ನೆನಪಿಲ್ಲ. ಬಾಲ್ಯದ ದೀಪಾವಳಿ ಬಡತನದಲ್ಲೆ ಕಳೆದರೂ ಇದ್ದುದರಲ್ಲೆ ಅದೆಷ್ಟು ಶ್ರೀಮಂತಿಕೆ ಕಂಡ ಸಂಭ್ರಮ. ಆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಜಪ್ತಿ ಗ್ರಾಮದ ಜನತಾ ಕಾಲನಿಯ ಚಂದ್ರಾವತಿ ಶೆಟ್ಟಿಗಾರ್ತಿಯವರ ಮನೆಯಲ್ಲಿ ನೂತನ ಅರ್ಚನ ಸ್ವಸಹಾಯ ಗುಂಪಿನ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಬಿದ್ಕಲ್ ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ ಶೆಟ್ಟಿಗಾರ್ ಜ್ಯೋತಿ ಬೆಳಗಿಸಿ ಸಂಘವನ್ನು ಉದ್ಘಾಟಿಸಿ, ಪೂಜ್ಯ ಕಾವಂದಿರ ಶುಭಾಶಿರ್ವಾದದೊಂದಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಯಮಗಳಿಗೆ ಬದ್ಧರಾಗಿ,ಅತ್ಯುತ್ತಮ ಕಾರ್ಯ ನಿರ್ವಹಣೆ ಮತ್ತು ಸ್ವಅಭಿವೃದ್ಧಿಯ ಮುಖೇನ ಈ ಗುಂಪು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಸ್ರೂರು ವಲಯ ಮೇಲ್ವಿಚಾರಕರಾದ ಮಂಜುನಾಥ, ಹೊಂಬಾಡಿ ಮಂಡಾಡಿ ಜಪ್ತಿ ಒಕ್ಕೂಟದ ಸೇವಾ ಪ್ರತಿನಿಧಿ ವಿಜಯಲಕ್ಷ್ಮೀ, ಅರ್ಚನ ಸ್ವಸಹಾಯ ಗುಂಪಿನ ಅಧ್ಯಕ್ಷರಾದ ಪೂರ್ಣಿಮಾ, ಕಾರ್ಯದರ್ಶಿ ಪ್ರತಿಮಾ, ಕೋಶಾಧಿಕಾರಿ ಸುಲೋಚನಾ, ಸದಸ್ಯರಾದ ಕಮಲ ಮಿಣ್ಕ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಗುಂಪಿನ ಅಧ್ಯಕ್ಷರಾದ ಪೂರ್ಣಿಮಾ ಸ್ವಾಗತಿಸಿದರೆ, ಬಸ್ರೂರು ವಲಯ ಮೇಲ್ವಿಚಾರಕರಾದ ಮಂಜುನಾಥ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನೆಮ್ಮದಿ ಚಾರಿಟೇಬಲ್ ಟ್ರಸ್ಟ್ ಹುಟ್ಟಿ ಎರಡುವರೆ ತಿಂಗಳಿನಲ್ಲಿ ಈ ಭಾಗದಲ್ಲಿ ಒಂದು ಉತ್ತಮ ಜನಪರ ಸೇವೆಯನ್ನು ಮಾಡುವುದರ ಮೂಲಕ ಈ ಭಾಗದ ಬಡಜನರ ಅನುಕೂಲಕ್ಕಾಗಿ ಹುಟ್ಟಿಕೊಂಡ ಯುವಪಡೆಯ ಒಂದು ಶಕ್ತಿಯಾಗಿದೆ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರ ಸಹಾಯಕ್ಕಾಗಿ ನಿಂತಿದೆ ಅಲ್ಲದೆ ರಕ್ತದಾನದಂತಹ ಉತ್ತಮ ಕೆಲಸವನ್ನು ಈ ಭಾಗದಲ್ಲಿ ಮಾಡುವೂದರ ಮೂಲಕ ಯುವಪೀಳಿಗೆಯವರಲ್ಲಿ ಜನಸೇವೆಯ ಕಿಚ್ಚನ್ನು ಮೂಡಿಸುವ ಕೆಲಸ ಮಾಡಿದೆ ಎಂದು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಕರ್ಕುಂಜೆಯಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶೀಬಿರ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಮ್ಮದಿ ಚಾರಿಟೇಬಲ್ ಟ್ರಸ್ಟ್(ರಿ.)ಕೌಂಜೂರು ಇವರ ನೇತೃತ್ವದಲ್ಲಿ ರೆಡ್‌ಕ್ರಾಸ್ ರಕ್ತನಿಧಿ ಕುಂದಾಪುರ ಘಟಕ ಮತ್ತು ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ, ಶಿರೂರು ಮುದ್ಧುಮನೆ ಇವರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ರಂದು ಸರಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶ್ರೀ ಕೃಷ್ಣ ಪರಮಾತ್ಮನು ಮನುಕುಲಕ್ಕಾಗಿ ನೀಡಿದ ಭಗವದ್ಗೀತೆಯನ್ನು ಪಠಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮಾತ್ರ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಮತ್ತು ಯಶಸ್ವಿ ಜೀವನವನ್ನು ನಡೆಸಲು ಸಾಧ್ಯ ಗಂಗೊಳ್ಳಿಯ ಉದ್ಯಮಿ ಜಿ.ವಿಠಲ ಭಾಸ್ಕರ ಶೆಣೈ ಹೇಳಿದರು. ಗಂಗೊಳ್ಳಿಯ ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಗತ್ ಸಿಂಗ್ ಅಭಿಮಾನಿ ಬಳಗ ಮತ್ತು ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಸಮಿತಿಯ ಜಂಟಿ ಆಶ್ರಯದಲ್ಲಿ ಜರಗಿದ ಭಗವದ್ಗೀತೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧಾರ್ಮಿಕ ಚಿಂತಕ ಮಂಗೇಶ ಶೆಣೈ ಅವರು ಭಗವದ್ಗೀತೆಯ ಮಹಿಮೆ ಮತ್ತು ಅದನ್ನು ಪಠಿಸುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಮತ್ತು ಭಗತ್ ಸಿಂಗ್ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.ಸಂಪಿಗೆ ಜಟ್ಟಿಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಕುಷ್ಟ ದೇವಾಡಿಗ ಸ್ವಾಗತಿಸಿದರು. ಉಮಾನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಯು.ದೇವಾಡಿಗ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀಮದ್ಭಗವದ್ಗೀತೆಯು ವ್ಯಕ್ತಿತ್ವ ವಿಕಸನದಲ್ಲಿ ಔಚಿತ್ಯ ಪ್ರಜ್ಞೆಯನ್ನು ಬೋಧಿಸುತ್ತಾ ಸಂತುಲಿನ ಜೀವನ ಪದ್ಧತಿಯನ್ನು ಆಪೇಕ್ಷಿಸುತ್ತದೆ. ಅತಿಯಾದಲ್ಲಿ ಎಲ್ಲವೂ ನ್ಯೂನತೆಯಾಗುವುದರಿಂದ ಸಮಚಿತ್ತ, ಶುದ್ಧಚಾರಿತ್ಯ ಪ್ರತಿ ವ್ಯಕ್ತಿಯ ಆಂತರಿಕ ಮತ್ತು ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿನ ಪ್ರಾಮುಖ್ಯತೆಯನ್ನು ಸಾರುತ್ತದೆ. ಕಾಲಾಬಾಧಿತವಾಗದೇ ಇಂದಿಗೂ ಸೂತ್ರಪ್ರಾಯವಾಗಿರುವ ಈ ಕಿರು ಗ್ರಂಥ ವಿಶ್ವ ಮಾನ್ಯವಾಗಿದೆ ಎಂದು ಯಳಜೀತ್ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ಮಂಗೇಶ್ ಶೆಣೈ ಹೇಳಿದರು. ಹೇರಂಜಾಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜ್ಯ ಶಿರಸಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ನಡೆಯುವ ಭಗವದ್ಗೀತಾ ಸಪ್ತಾಹದ ಪ್ರಯುಕ್ತ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಖಂಬದಕೋಣೆ ಗ್ರಾಪಂ ಸದಸ್ಯ ಹೇರಂಜಾಲು ಪರಂಜ್ಯೋತಿ ಐತಾಳ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಸಂತ ವೈ. ಮಂಗೇಶ್ ಶೆಣೈ ಹಾಗೂ ಅವರ ಶಿಷ್ಯವೃಂದದವರು ಸುಮಾರು ಎರಡು ತಾಸು ಭಗವದ್ಗೀತಾ ಪಠನ ಮಾಡಿದರು. ಸಂಚಾಲಕ ಸುಬ್ರಹ್ಮಣ್ಯ ಉಡುಪ, ನಿವೃತ್ತ ಶಿಕ್ಷಕ ಮೆಟ್ಟಿನಹೊಳೆ ಬಡಿಯಾ ಹಾಂಡ, ಕಾಲ್ತೋಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾವಯವ ಮತ್ತು ರಸಗೊಬ್ಬರ ನಡುವೆ ಸಮತೋಲನ ಕಾಪಾಡುವ ಅಗತ್ಯವಿದೆ. ಅದರ ಕುರಿತು ತರಬೇತಿ ಪಡೆದುಕೊಳ್ಳಬೇಕು. ಅದರೊಂದಿಗೆ ಹೈನುಗಾರಿಕೆ, ಕೋಳಿಸಾಕಣೆ ನಡೆಸುವುದಲ್ಲದೆ ಸುಲಭದಲ್ಲಿ ಆರೋಗ್ಯ ನೀಡುವ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಸಿ ಮನೆಯ ಖರ್ಚಿಗೆ ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಕರೆ ನೀಡಿದರು. ಶಿರೂರು ಶ್ರೀವೆಂಕಟರಮಣ ಸಭಾಭವನದಲ್ಲಿ, ಸಂಸದರ ಆದರ್ಶಗ್ರಾಮ ಯೋಜನೆ, ಪ್ರಾದೇಶಿಕ ಸಾವಯವ ಕೃಷಿ ಕೇಂದ್ರ ಬೆಂಗಳೂರು, ಗ್ರಾಮ ಪಂಚಾಯತ್ ಶಿರೂರು, ಕೃಷಿ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಾವಯವ ಕೃಷಿಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಲ್ಕು ದಶಕಗಳ ಹಿಂದೆ ದೇಶದಲ್ಲಿ ಅನ್ನದ ಕೊರತೆ ಇದ್ದಾಗ ರಾಸಾಯನಿಕ ಗೊಬ್ಬರ ಬಳಸಿ ಹಸಿರು ಕ್ರಾಂತಿ ಸಾಧಿಸಲಾಯಿತು. ಆದರೆ ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿರುವುದರಿಂದ ಸಾವಯವ ಕೃಷಿಗೆ ಮರಳುವುದು ಈಗ ಅನಿವಾರ್ಯವೆನಿಸಿದೆ. ಬೇಸಾಯವೆಂದರೆ ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ ಬೆಳೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ಪ್ರಥ್ವೀನ್ ಆರ್. ಗಾಣಿಗ ಇವರು ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಕೊಲ್ಲೂರಿನ ರಮೇಶ್ ಗಾಣಿಗ ಮತ್ತು ನಯನ ಆರ್. ಗಾಣಿಗರವರ ಪುತ್ರನಾಗಿದ್ದು, ಇವರಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೀರ್ತಿಶೇಷ ಶ್ರೀ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಕುಂದಾಪುರ ಆರ್.ಎನ್.ಶೆಟ್ಟಿ ಕಲ್ಯಾಣ ಭವನದಲ್ಲಿ ಜರುಗಿದ ಯಡ್ತರೆ ಮಂಜಯ್ಯ ಶೆಟ್ಟಿ 103ನೇ ಜನ್ಮ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹೆ ವಿಶ್ರಾಂತ ಕುಲಪತಿ ಪದ್ಮಭೂಷಣ ಡಾ. ಬಿ. ಎಂ. ಹೆಗ್ಡೆ ಹಾಗೂ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರಿಗೆ ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಾ.ವೀರಪ್ಪ ಮೋಯ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಡ್ತರೆ ಮಂಜಯ್ಯ ಶೆಟ್ಟಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ಜಿ.ಕೊಡ್ಗಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ, ಪ್ರೊ. ಎಂ. ಸುಬ್ಬಣ್ಣ ಶೆಟ್ಟಿ ಕೋಟೇಶ್ವರ, ನೇತ್ರ ತಜ್ಞ ಡಾ. ವೈ. ಎಸ್. ಹೆಗ್ಡೆ, ಮಂಗಳೂರು…
