ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ರಾಮಕ್ಷತ್ರಿಯ ಮಾತೃಮಂಡಳಿ ಆಶ್ರಯದಲ್ಲಿ ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪುಟಾಣಿಗಳಿಂದ ಮುದ್ದು ಕೃಷ್ಣ ಸ್ಪರ್ಧೆ ಜರುಗಿತು. ಸುಮಾರು 60 ಮಕ್ಕಳು ಭಾಗವಹಿಸಿದ್ದರು. ಮಾತೃ ಮಂಢಳಿಯ ಅಧ್ಯಕ್ಷೆ ಆಶಾ ಜಗದೀಶ ಪಟವಾಲ್, ಕಾರ್ಯದರ್ಶಿ ವನಜಾ ಭಾಸ್ಕರ್ ಹಾಗೂ ಸರ್ವ ಸದಸ್ಯರು ಹಾಜರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಅದರಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೋಳಿಸುವುದು ಮಹತ್ವವಾಗಿದೆ. ಜನಸಂಖ್ಯೆಯಲ್ಲಿ ಭಾರತ ಮುಂದುವರಿದ ರಾಷ್ಟ್ರವಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಹಿಂದುಳಿದಿರುವುದು ದುರದೃಷ್ಟಕರ ಎಂದು ತಾಪಂ ಸದಸ್ಯ ಜಗದೀಶ ದೇವಾಡಿಗ ಹೇಳಿದರು. ಬಿಜೂರು ಪ್ರೌಢ ಶಾಲೆಯಲ್ಲಿ ನಡೆದ ವಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಅವರಿಗೆ ಪ್ರೋತ್ಸಾಹದ ಜತೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಆಗಬೇಕಾಗಿದೆ. ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸುವ ಮೂಲಕ ಸರಕಾರ ಕ್ರೀಡೆಗಾಗಿ ಪ್ರತೇಕ ಅನುದಾನದ ನೀಡುವ ಅವಶ್ಯಕತೆ ಇದೆ ಎಂದ ಅವರು ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಶುಭಕೋರಿದರು. ಬಿಜೂರು ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಮೂರ್ತಿ ಆಧ್ಯಕ್ಚತೆ ವಹಿಸಿದ್ದರು. ನೂತನವಾಗಿ ನಿರ್ಮಾಣಗೊಂಡ ಪ್ರೌಢ ಶಾಲೆಯ ಅಕ್ಷರದಾಸೋಹ ಕೊಠಡಿಯನ್ನು ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಬಿ. ರಘರಾಮ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೂರು ಗ್ರಾಪಂ ಆಧ್ಯಕ್ಷೆ ಲೋಲಾಕ್ಷಿ ದೇವಾಡಿಗ, ಸದಸ್ಯ ಕೆ.ಟಿ ರಾಜೇಶ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲ, ಅಮೃತಾ ಯುವತಿ ಮಂಡಲ, ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಮತ್ತು ಪಂಚಗಂಗಾವಳಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 6ನೇ ವರ್ಷದ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆಯು ಮೇಲ್‌ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರಗಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಮಾಜಿ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ ಶುಭಾಶಂಸನೆಗೈದರು. ಸವಿತಾ ಸಮಾಜದ ಉಡುಪಿ ಜಿಲ್ಲಾ ಸಂಘಟಕ ಮಂಜುನಾಥ ಸಾಲಿಯಾನ್ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ವಿನೋದಾ ಕೆ., ತೀರ್ಪುಗಾರರಾದ ಆಶಾ, ಜ್ಯೋತಿ ಉಪಸ್ಥಿತರಿದ್ದರು. ಯುವತಿ ಮಂಡಲದ ಸದಸ್ಯೆ ನಯನಾ ಸ್ವಾಗತಿಸಿದರು. ಯುವತಿ ಮಂಡಲದ ಕಾರ್ಯದರ್ಶಿ ಸಹನಾ ಕೆ. ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಭಾಸ್ಕರ ಎಚ್.ಜಿ. ವಂದಿಸಿದರು. ಸ್ಪರ್ಧೆಯಲ್ಲಿ ಸುಮಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಗುರುಕುಲ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಜರುಗಿದ ತಾಲ್ಲೂಕು ಅಂತರ್ ಕಾಲೇಜು ಮಟ್ಟದ ಪುಟ್ಬಾಲ್ ಪಂದ್ಯಾವಳಿಯು ವಕ್ವಾಡಿ ಗುರುಕುಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿತು. ಪಂದ್ಯಾಟದ ಉದ್ಘಾಟನೆಯನ್ನು ಜಿಲ್ಲಾ ಕ್ರೀಡಾ ಸಂಯೋಜಕ ಶ್ರೀಧರ ಶೆಟ್ಟಿ ಇವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಗುರುಕುಲ ಕಾಲೇಜಿನ ಪ್ರಾಂಶುಪಾಲ ಚನ್ನಬಸಪ್ಪ. ಬಿ ಇವರು ವಹಿಸಿದ್ದರು. ಅತಿಥಿಗಳಾಗಿ ನಾಗರಾಜ್ ಶೆಟ್ಟಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಗುರುಕುಲ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ಸಾಯಿಜು ಕೆ. ಆರ್. ನಾಯರ್ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ನಾಗೇಶ್ ಸ್ವಾಗತಿಸಿದರು ಹಾಗೂ ಉಪನ್ಯಾಸಕಿ ಪವಿತ್ರಾರವರು ವಂದನಾರ್ಪಣೆ ಮಾಡಿದರು. ಪಂದ್ಯಾಟದಲ್ಲಿ ಗ್ರೀನ್ ವ್ಯಾಲಿ ಪದವಿ ಪೂರ್ವ ಕಾಲೇಜಿನ ತಂಡ ಜಯಶಾಲಿಯಾಗಿದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಗುರುಕುಲ…
ಕುಂದಾಪ್ರ ಡಾಟ್ ಕಾಂ ಸುದ್ದಿ, ಕುಂದಾಪುರ: ತಾಲೂಕು ಹವ್ಯಕಸಭಾದ ೧೬ನೆ ವಾರ್ಷಿಕೋತ್ಸವವು ರವಿವಾರ ಉಪ್ಪುಂದದ ರಾಘವೇಂದ್ರ ಮಠದ ಆವರಣದಲ್ಲಿ ನಡೆಯಿತು. ಸಭಾದ ಅಧ್ಯಕ್ಷ ಎಂ. ನಾಗರಾಜ ಭಟ್ ಅಧ್ಯಕ್ಷತೆ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಯು. ಸುಭಾಶ್ಚಂದ್ರ ಪುರಾಣಿಕ್ ಮಾತನಾಡಿ ಸಮುದಾಯ ಸಂಘಟನೆಯ ಗಾತ್ರಕ್ಕಿಂತ ಅದು ನಡೆಸುವ ಚಟುವಟಿಕೆ ಹೆಚ್ಚು ಪ್ರಸ್ತುತವೆನಿಸುತ್ತದೆ. ಅದು ಸಭೆ, ಸಮಾರಂಭಗಳಿಗೆ ಸಮಯ, ಹಣ ವಿನಿಯೋಗಿಸುವ ಬದಲು ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಸದಸ್ಯರಲ್ಲಿ ಸಂಸ್ಕೃತಿ ಮತ್ತು ಧರ್ಮ ಜಾಗೃತಿಗೆ ಕ್ರಮ ಕೈಗೊಳ್ಳಬೇಕು. ಯುವಜನರು ಧನಾತ್ಮಕ ಮನೋಧರ್ಮ ಹೊಂದುವಂತೆ, ಕ್ರಿಯಾಶೀಲರಾಗುವಂತೆ ಅವರಿಗೆ ಪ್ರೇರಣೆ, ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿ ಕುಂದಾಪುರ ಭಂಡಾರ್ಕಾರ‍್ಸ್ ಕಾಲೇಜಿನ ಪ್ರಾಧ್ಯಾಪಕ ಜಿ. ಎಸ್. ಹೆಗಡೆ ಅವರು ಶುಭ ಹಾರೈಸಿದರು. ಸುಭಾಶ್ಚಂದ್ರ ಪುರಾಣಿಕ್ ಮತ್ತು ಮರವಂತೆ ದುರ್ಗಾಯಕ್ಷೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಎಂ. ಜಗದೀಶ ಅವಭೃತ್ ಅವರನ್ನು ಸನ್ಮಾನಿಸಲಾಯಿತು. ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಅಂಜುಮಾನ್ ಶಬಾಬುಲ್ ಇಸ್ಲಾಂ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಉಚಿತ ರಕ್ತ ತಪಾಸಣಾ ಶಿಬಿರ ನಡೆಯಿತು. ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಸಯ್ಯದ್ ಅಲಿ ಕೋಯಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯು ಕಳೆದ ೨೫ ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಿರಂತರವಾಗಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ. ಇದೇ ಮೊದಲ ಬಾರಿಗೆ ಉಚಿತ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಮಹನೀಯರನ್ನು ಸ್ಮರಿಸಿದರು. ಸಭೆಯಲ್ಲಿ ಜಾಮೀಯಾ ಮಸೀದಿ ಇಮಾಮ್ ಫೈಝುಲ್ ಬಾರಿ, ಮೌಲಾನ ತಯ್ಯಬ್ ನೂರಿ, ಹಾಗೂ ಟ್ರಸ್ಟಿಗಳಾದ ಶೇಖ್ ಜಾಫರ್ ಸಾದಿಕ್, ಎಸ್. ಅಬ್ದುಲ್ ಖಾದರ್, ಮಹಮ್ಮದ್ ಸುಲ್ತಾನ್, ಹಾಗೂ ಶೇಖ್ ಫೈಸಲ್ ಹಾಜರಿದ್ದರು. ಶಿಬಿರದಲ್ಲಿ ಟ್ರಸ್ಟಿನ ಸರ್ವ ಸದಸ್ಯರು ಹಾಜರಿದ್ದು ಸುಮಾರು ೭೩ ಮಂದಿ ಸ್ತ್ರೀ, ಪುರುಷರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೇವೆಯನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ದೇಶದಾದ್ಯಂತ ಸನಾತನ ಹಿಂದು ಧರ್ಮದ ರಕ್ಷಣೆಯಲ್ಲಿ ಹಾಗೂ ಭಾರತೀಯ ಪರಂಪರೆ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೇತೃತ್ವದಲ್ಲಿ ರಚನೆಯಾದ ಸೇವಾಸಂಗಮ ಶಿಶುಮಂದಿರ ಕೇವಲ ಮಕ್ಕಳಿಗಲ್ಲದೇ ಮಾತೆಯರಿಗೂ ಧರ್ಮ ಜಾಗೃತಿ ಮೂಡಿಸುವ ಕೇಂದ್ರವಾಗಿದೆ ಎಂದು ಭಗವದ್ಗೀತಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಶೇರುಗಾರ್ ಬಿಜೂರು ಹೇಳಿದರು. ಬೈಂದೂರು ಸೇವಾಸಂಗಮ ಶಿಶುಮಂದಿರ ಕಟ್ಟಡದ ನೂತನ ಮೇಲ್ಮಹಡಿಯನ್ನು ಉದ್ಘಾಟಿಸಿ, ನಂತರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರೋಟರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದು ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಧರ್ಮಕ್ಕೆ ಅನೇಕ ವಿಘ್ನಗಳು ಅಡಚಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಜಾತಿಭೇಧ ಮರೆತು ಒಗ್ಗೂಡಬೇಕಿದೆ ಎಂದ ಅವರು ಆಂಗ್ಲಮಾಧ್ಯಮ ಶಿಕ್ಷಣದ ಮಧ್ಯೆಯೂ ಕೂಡ ಇಂದಿನ ಸಂಸ್ಕ್ರತಿಯ ಉಳಿವಿನ ದೃಷ್ಠಿಯಿಂದ ನಮ್ಮ ದೇಶದ ಇತಿಹಾಸ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಹೊರಾಡುತ್ತಿರುವ ಸೆವಾಸಂಗಮದ ಆಡಳಿತ ಮಂಡಳಿ ಸದಸ್ಯರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಒಂದು ಧರ್ಮದ ಪರವಾಗಿರುವ ರಾಷ್ಟ್ರವಾದ ಎಂದಿಗೂ ರಾಷ್ಟ್ರೀಯತೆಯಾಗದು. ಎಲ್ಲಾ ಧರ್ಮ, ಭಾಷೆ, ಪಂಗಡವನ್ನೊಳಗೊಂಡ ಸಂವಿಧಾನ ಮಾತ್ರ ಭಾರತದ ಶ್ರೇಷ್ಠ ಗ್ರಂಥ. ಎಲ್ಲರನ್ನೂ ಸಮಾನರಾಗಿ, ಗೌರವದಿಂದ ಕಾಣುವ, ಎಲ್ಲವನ್ನೂ ಒಳಗೊಂಡ ಸಂವಿಧಾನದ ಮೂಲ ತತ್ವವೇ ರಾಷ್ಟ್ರೀಯತೆ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಕೇಂದ್ರದ ನಿರ್ದೇಶಕ ವರದೇಶ ಹಿರೇಗಂಗೆ ಹೇಳಿದರು. ಸಮುದಾಯ ಕುಂದಾಪುರ ಇಲ್ಲಿನ ನೇತಾಜಿ ಸಭಾಭವನದಲ್ಲಿ ಆಯೋಜಿಸಿದ್ದ ’ರಾಷ್ಟ್ರೀಯತೆ – ಒಂದು ಮಾತುಕತೆ’ ಸಮುದಾಯ ಸಮೂಹ ಅಧ್ಯಯನದ ವಿಚಾರ ಸಂಕೀರಣದಲ್ಲಿ ಅವರು ಮಾತನಾಡಿದರು. ಭಾತರದ ಮಟ್ಟಿಗೆ ರಾಷ್ಟ್ರೀಯತೆ ಎನ್ನುವುದು ಆಧುನಿಕ ಸೃಷ್ಠಿ. ಇಲ್ಲಿ ವಿವಿಧ ಬಗೆಯ ರಾಷ್ಟ್ರೀಯತೆಯನ್ನು ಕಾಣಬಹುದಾದರೂ ಸಂವಿಧಾನವೇ ಪರಮೋಚ್ಚವಾದದ್ದು. ಇದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ದೇಶದ ಪ್ರಜೆಯೊಬ್ಬ ತನಗೆ ಬಡತನದಿಂದ, ಕೋಮುವಾದದಿಂದ, ಜಾತೀಯತೆಯಿಂದ ಮುಕ್ತಿಬೇಕು ಎಂದು ಹೇಳಿದರೆ, ನೆರೆಯ ರಾಷ್ಟ್ರವನ್ನು ಹೊಗಳಿದರೇ ಅದು ರಾಷ್ಟ್ರವಿರೋಧಿ ಎನ್ನಲಾಗದು. ಗಡಿಯ ರೇಖೆಗಳು ನಮ್ಮ ಸೃಷ್ಠಿ. ಮನುಷತ್ವಕ್ಕೆ ಗಡಿಗಳಿಲ್ಲ. ಮಾನವೀಯತೆಯನ್ನು ಮೀರಿತ ರಾಷ್ಟ್ರೀಯತೆಯೂ ಇಲ್ಲ ಎಂದವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾರ್ಮಿಕರ ಹದಿನೇಳು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ ಹನ್ನೊಂದು ಕಾರ್ಮಿಕ ಸಂಘಟನೆಗಳು ಸೆ.೦೨ರಂದು ಹಮ್ಮಿಕೊಂಡ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸುವ ಪ್ರಯುಕ್ತ ತಾಲೂಕಿನಾದ್ಯಂತ ಮೂರು ದಿನಗಳ ಕಾಲ ವಾಹನ ಪ್ರಚಾರ ಜಾಥಾಕ್ಕೆ ಬೈಂದೂರು ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಸಿಐಟಿಯು ತಾಲೂಕು ಅಧ್ಯಕ್ಷ ಎಚ್. ನರಸಿಂಹ ಜಾಥಾ ಉದ್ಘಾಟಿಸಿ ಮಾತನಾಡಿ, ಅಂದು ಬ್ರಿಟಿಷರ ವಿರುದ್ದ ಹೋರಾಡಿ ಕಾರ್ಮಿಕ ಕಾನೂನನ್ನು ಪಡೆದಿದೆ. ಆದರೆ ಸ್ವತಂತ್ರ ಭಾರತದಲ್ಲಿ ಇಂದಿನ ಕೇಂದ್ರ ಸರಕಾರ ೪೪ ಕಾನೂನನ್ನು ತಿದ್ದುಪಡಿ ಮಾಡಲು ಹೊರಟಿರುವುದು ಖಂಡನೀಯ ಕ್ರಮವಾಗಿದೆ. ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ವಿಫಲವಾಗಿದ್ದು, ರಸ್ತೆ ಸಾರಿಗೆ ನೌಕರರನ್ನು ಜೈಲಿಗಟ್ಟುವ ಕಾನೂನಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ದುರಾದೃಷ್ಟಕರ. ಸರ್ಕಾರದ ಇಂತಹ ನೀತಿಗಳ ವಿರುದ್ದ ತಾಲೂಕಿನಲ್ಲಿ ಮಷ್ಕರ ಯಶಸ್ವಿಗೊಳಿಸಬೇಕಾಗಿದೆ ಎಂದು ಕರೆ ನೀಡಿದರು. ಈ ಸಂದರ್ಭ ಸಿಐಟಿಯು ಮುಖಂಡ ಸುರೇಶ ಕಲ್ಲಾಗರ್, ಇಂಡಕ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕಾರ್ಯದರ್ಶಿ ಮಾಣಿ ಉದಯ ಪೂಜಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೈಂದೂರು 2015-16ನೇ ಸಾಲಿನಲ್ಲಿ 253 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ 71.94 ಲಕ್ಷ ರೂ. ಲಾಭಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ತಿಳಿಸಿದರು. ಸೋಮವಾರ ಬೈಂದೂರಿನ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸೋಸೈಟಿಯು 26.92ಕೋಟಿ ರೂ. ಠೇವಣಿ ಸಂಗ್ರಹಿಸಿ, 21.23ಕೋಟಿ ರೂ. ಸಾಲರುವುದಲ್ಲದೇ ಆರ್ಥಿಕ ವರ್ಷದಲ್ಲಿ ಒಟ್ಟು 253ಕೋಟಿ ವಹಿವಾಟು ನಡೆಸಿದೆ. 71.94ಲಕ್ಷ ರೂ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.14 ಡಿವಿಡೆಂಟ್ ಘೋಷಿಸಲಾಗಿದೆ ಎಂದರು. ಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಹೊಂದಿ ವ್ಯವಹಾರ ನಡೆಸುತ್ತಿರುವ ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಈಗಾಗಲೇ ೬ ಶಾಖೆಗಳನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಜನರ ಬೇಡಿಕೆಗನುಗುಣವಾಗಿ ಹೆಚ್ಚಸಲಾಗುವುದು ಎಂದ ಅವರು ಉನ್ನತ ವ್ಯಾಸಂಗದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಸಂಸ್ಥೆಯ ಈಗಾಗಲೇ ಆರ್ಥಿಕ ಸಹಾಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅದು…
