Author: ನ್ಯೂಸ್ ಬ್ಯೂರೋ

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಸಲ್ಲಿಸಲಾಗುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ಕೇಂದ್ರದಲ್ಲಿ ಶೂನ್ಯ ಅರ್ಜಿ ಸಾಧನೆಗೈದಿರುವ ಕುಂದಾಪುರ ಹೋಬಳಿಯ ಅಟಲ್‌ಜೀ ಜನಸ್ನೇಹ ಕೇಂದ್ರವು ಸಕಾಲಿಕ ವಿಲೇವಾರಿಯಲ್ಲಿ  (AJSK TImely Disposal Ranking) ರಾಜ್ಯದಲ್ಲೇ ಮೊದಲ ಪಡೆದಿದೆ. ಕೋಲಾರ ಜಿಲ್ಲೆಯ ಮುಳುಬಾಗಿಲು ಅವನಿ ದ್ವಿತೀಯ ಪಡೆದಿದ್ದರೇ, ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ಹಚ್ಚೋಳ್ಳಿ ತೃತೀಯ ಹಾಗೂ ಉತ್ತರ ಕನ್ನಡದ ಸಿರಸಿ ಮತ್ತು ಉಡುಪಿ ತಾಲೂಕು ಅನುಕ್ರಮವಾಗಿ ಐದನೇ ಮತ್ತು ಏಳನೇ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಕುಂದಾಪುರ ಈ ಭಾರಿ ಉತ್ತಮ ಪ್ರಗತಿ ಸಾಧಿಸಿದೆ. ತಾಲೂಕಿನ ಒಟ್ಟು ಮೂರು ನಾಡ ಕಛೇರಿಗಳಲ್ಲಿ ಜನಸ್ನೇಹಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಕಳೆದ ತಿಂಗಳಿನಲ್ಲಿ ಒಟ್ಟು 947 ಅರ್ಜಿ ಸಲ್ಲಿಕೆಯಾಗಿದ್ದವು. ಆ ಪೈಕಿ 48 ಅರ್ಜಿಗಳು ತಿರಸ್ಕೃತಗೊಂಡಿದ್ದು, ಉಳಿದ ಅಷ್ಟೂ ಅರ್ಜಿ ವಿಲೇವಾರಿಯಾಗಿದ್ದವು. ಪ್ರತಿದಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹಾಲಾಡಿಯಲ್ಲಿ ಯಕ್ಷಗಾನ ಮೇಳದ ಕ್ಯಾಬ್ ಹಾಗೂ ಬೈಕ್ ನಡುವಿನ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಘಟನೆ ವರದಿಯಾಗಿದೆ. ಶಿರಿಯಾರ ಯಡಾಡಿ ನಿವಾಸಿ ಗಣೇಶ್ ಹೆಗ್ಡೆ (35) ಮೃತ ದಾರುಣವಾಗಿ ಮೃತಪಟ್ಟ ದುರ್ದೈವಿ.  ಕುಂದಾಪ್ರ ಡಾಟ್ ಕಾಂ ಸುದ್ದಿ. ಸಾಲಿಗ್ರಾಮ ಮೇಳಕ್ಕೆ ಸೇರಿದ ಮಿನಿ ಬಸ್‌ನಲ್ಲಿ ಮೇಳದ ಕಲಾವಿದರು ರಾತ್ರಿ ಯಕ್ಷಗಾನವನ್ನು ಮುಗಿಸಿ ಬೆಳಿಗ್ಗೆ ಬೇರೊಂದೆಡೆಗೆ ಪ್ರಯಾಣ ಬೆಳೆಸಿರುವಾಗ ಹಾಲಾಡಿ ಸರ್ಕಲ್ ಬಳಿ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಯಾಬ್‌ನಲ್ಲಿದ್ದ ಕಲಾವಿದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಂಗಳೂರು ವಿವಿ ಪದವಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅಂಕಪಟ್ಟಿಯು ಹಲವಾರು ಲೋಪಗಳಿಂದ ಕೂಡಿದ್ದು, ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಹಾಗೂ ಇನ್ನಿತರ ಗೊಂದಲಗಳನ್ನು ನಿವಾರಿಸಬೇಕೆಂದು ಆಗ್ರಹಿಸಿ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಅಂಕದಕಟ್ಟೆ ಮಾತನಾಡಿ ೧, ೩ ಮತ್ತು ೫ನೇ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹಲವಾರು ತಪ್ಪುಗಳು ಕಂಡುಬಂದಿದೆ. ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ಇದ್ದರೂ ಕೊನೆಯಲ್ಲಿ ಅನುತ್ತೀರ್ಣವೆಂದು ನಮೂದಿಸಲಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಪರಿಗಣಿಸಲಾಗಿದ್ದು, ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಉತ್ತೀರ್ಣವೆಂಬ ಫಲಿತಾಂಶ ಬಂದಿದೆ. ವಿಶಿಷ್ಟ ದರ್ಜೆಯಲ್ಲಿ ಪಡೆಯುವ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಆತಂಕ ತಂದೊಡ್ಡಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಂಗಳೂರು ವಿವಿಗೆ ಅಪಾರ ಗೌರವಿದ್ದು, ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಆದರೆ ಈ ಭಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾಲಬಾಧೆಯಿಂದ ನೊಂದ ಕೃಷಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾಲ್ಕಲ್‌ನಲ್ಲಿ ನಡೆದಿದೆ. ತಂಗಚ್ಚನ್ ಯಾನೆ ಥೋಮಸ್ (49) ಮೃತ ದುರ್ದೈವಿ. ಘಟನೆಯ ವಿವರ: ಕುಂದಾಪುರ ಹಾಲ್ಕಲ್ ನಿವಾಸಿಯಾದ ತಂಗಚನ್ ತನ್ನ ಎರಡು ಎಕರೆ ಭೂಮಿಯಲ್ಲಿ ರಬ್ಬರ್, ತೆಂಗಿನತೋಟ ಹಾಗೂ ನರ್ಸರಿಯನ್ನು ಹೊಂದಿದ್ದು, ಕೃಷಿಯ ನಿರ್ವಹಣೆಗಾಗಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು ೫ಲಕ್ಷಕ್ಕೂ ಮಿಕ್ಕಿ ಸಾಲ ಮಾಡಿಕೊಂಡಿದ್ದ. ಸಾಲವನ್ನು ಮರುಪಾವತಿ ಮಾಡುವಂತೆ ಬ್ಯಾಂಕಿನಿಂದ ನೋಟಿಸ್ ಜಾರಿಯಾಗಿತ್ತು. ಕುಂದಾಪ್ರ ಡಾಟ್ ಕಾಂ. ಆದರೆ ನಿರೀಕ್ಷೆಯಂತೆ ಬೆಳೆ ಬಾರದ ಹಿನ್ನೆಲೆಯಲ್ಲಿ ಅಪಾರ ನಷ್ಟ ಅನುಭವಿಸಿದ್ದನೆನ್ನಲಾಗಿದ್ದು, ಸಾಲ ಮರುಪಾವತಿ ಮಾಡಲಾಗದೇ ಆತ್ಯಹತ್ಯೆಗೆ ಮುಂದಾಗಿದ್ದ. ಈವರೆಗೆ ತಾಲೂಕಿನಲ್ಲಿ ೫ ರೈತರ ಆತ್ಮಹತ್ಯಾ ಪ್ರಕರಣ ವರದಿಯಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ರೈತನ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೀಳರಿಮೆಯನ್ನು ಬಿಟ್ಟು ಸ್ವಪ್ರಯತ್ನದಿಂದ ಮುಂದೆ ಬಂದು ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ನಮ್ಮ ಏಳಿಗೆಯ ಜೊತೆಗೆ ಎಲ್ಲರ ಏಳಿಗೆ ಸಾಧಿಸಿದಾಗ ನಿಮ್ಮ ಶಕ್ತಿ ಉನ್ನತ ಮಟ್ಟದಲ್ಲಿ ಬೆಳೆದು ಸಮಾಜ ಬೆಳೆಯಲು ಸಾದ್ಯ ಎಂದು ಕುಂದಾಪುರ ಕುಲಾಲ ಸಂಘದ ಗೌರವಾಧ್ಯಕ್ಷ ಡಾ.ಎಂ.ವಿ.ಕುಲಾಲ ಹೇಳಿದರು. ಅವರು ವಕ್ವಾಡಿ ಮಗದಬೆಟ್ಟು ಮೈದಾನದಲ್ಲಿ ನಡೆದ ಕರಾವಳಿ ಕುಲಾಲ ಯುವ ವೇದಿಕೆ ವಕ್ವಾಡಿ ಘಟಕ ಉದ್ಘಾಟಿಸಿ ಮಾತನಾಡಿದರು. ನೂತನ ವೇದಿಕೆಯ ಅಧ್ಯಕ್ಷ ವಕ್ವಾಡಿ ನರಸಿಂಹ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕರಾವಳಿ ಕುಲಾಲ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ ದಿಕ್ಸೂಚಿ ಬಾಷಣ ಮಾಡಿದರು. ವೇದಿಕೆಯಲ್ಲಿ ಕುಂದಾಪುರ ಕುಲಾಲ ಸಂಘದ ಅಧ್ಯಕ್ಷ ನಿರಂಜನ ಕುಲಾಲ, ಕರ್ನಾಟಕ ರಾಜ್ಯ ಕುಂಬಾರ ಸಂಘದ ಅಧ್ಯಕ್ಷ ರಾಮ ಕುಲಾಲ ಪಕ್ಕಾಲು, ಕರ್ನಾಟಕ ರಾಜ್ಯ ಕುಂಬಾರ ಸಂಘದ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಸುನೀಲ್.ಎಸ್ ಮೂಲ್ಯ, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿಯ ಶಾಲೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರ ಚಟುವಟಿಕೆಗಳಿಗೆ ಮತ್ತು ಶಾಲೆಯ ನಿರಂತರ ಸಂಪರ್ಕ ಮತ್ತು ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿರುವುದರಿಂದ ಕುಂದಾಪುರ ಎಜುಕೇಶನ್ ಸೊಸೈಟಿ ಸ್ಕೂಲ್ ಅಲುಮ್ನಿ ಅಸೋಸಿಯೇಶನ್‌ನ್ನು ಸ್ಥಾಪಿಸಲಾಗಿದೆ. ತನ್ಮೂಲಕ ಸಂಸ್ಥೆಯು ನಿರಂತರ ಕ್ರಿಯಾಶೀಲವಾಗಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡುವಂತಾಗಲಿ ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿಯ ಸಂಸ್ಥೆಗಳಾದ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ವಿ. ಕೆ. ಆರ್. ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಗಳ ಹಳೆ ವಿದ್ಯಾರ್ಥಿಗಳ ಸಂಘ ಕುಂದಾಪುರ ಎಜುಕೇಶನ್ ಸೊಸೈಟಿ ಸ್ಕೂಲ್ ಅಲುಮ್ನಿ ಅಸೋಸಿಯೇಶನ್(ಸೆಸ್ಸಾ)ನ್ನು ಆರ್. ಎನ್. ಶೆಟ್ಟಿ ಅಡಿಟೋರಿಯಂ ಹಾಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಖ್ಯ ಅತಿಥಿಗಳಾಗಿ ಕುಂದಾಪುರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಎ.ಪಿ.ಮಿತ್ಯಂತಾಯ, ಕಾರ್ಯದರ್ಶಿ ಸೀತಾರಾಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರೀಸ್ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ಕ್ಷೇತ್ರ sಸಂಪನ್ಮೂಲ ವ್ಯಕ್ತಿ ಉದಯ್ ಗಾಂವಕರ್, ಬಳಿಕ ವಿಶ್ವ ಜನದಿನಾಚರಣೆಯ ಅಂಗವಾಗಿ ಜಲ ನಿರ್ವಹಣೆ ಮತ್ತು ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಸಂರಕ್ಷಣೆಯಿಂದ ಜಲ ಸಂಪನ್ಮೂಲವನ್ನು ರಕ್ಷಿಸಬಹುದು ಮತ್ತು ಸರಳ ಜೀವನ ಇಂತಹ ಜಟಿಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿದರು. ಶಿಲ್ಪಶ್ರೀ ಸ್ವಾಗತಿಸಿ, ಸುನೀತಾ ಧನ್ಯವಾದಗೈದರು. ಪ್ರಶಿಕ್ಷಣಾರ್ಥಿ ಮಹಿಮಾ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರಣ ಕೇಳಿದರೆ ಸಬೂಬು ಹೇಳುತ್ತೀರಿ. ಜನರು ಪ್ರಶ್ನಿಸಿದರೇ ಹಾರಿಕೆಯ ಉತ್ತರ ನೀಡುತ್ತೀರಿ. ನೀವು ಅಧಿಕಾರಿಗಳು ಇಲ್ಲಿ ತುಘಲಕ್ ದರ್ಬಾರ್ ಮಾಡತ್ತಿದ್ದೀರಾ? ಹೀಗೇಂದು ಕುಂದಾಪುರ ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡದ್ದು ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ. ಕುಮ್ಕಿ ಭೂಮಿ ಗೊಂದಲ ಸಾಕಷ್ಟು ವರ್ಷದಿಂದಲೇ ಇದೆ. ಈಗ ಹಕ್ಕಪತ್ರ ನೀಡಲು ಅಡೆತಡೆ ಇಲ್ಲದಿದ್ದರೂ 16ವರ್ಷದಿಂದ ಬಾಕಿ ಇರುವ ಅರ್ಜಿಗಳು ವಿಲೇವಾರಿಯಾಗಬೇಕಿದೆ. ಹಾಗಾಗಿ ಹಕ್ಕುಪತ್ರ ನೀಡಲು ತಡವಾಗುತ್ತಿದೆ ಎಂದು ಸಚಿವರ ಪ್ರಶ್ನೆಗೆ ಉತ್ತರಿಸುತ್ತಿದ್ದ ತಹಶೀಲ್ದಾರ್ ಅವರಿಗೆ ಎಂಎಲ್‌ಸಿ ಅವರು ಪ್ರಶ್ನೆಯ ಮೇಲೆ ಪ್ರಶ್ನೆಯನ್ನು ಕೇಳಿ ಸುಸ್ತು ಹೊಡೆಸಿದರು. ಕುಮ್ಕಿ ಭೂಮಿಯನ್ನು ಫಲಾನುಭವಿಗಳಿಗೆ ನೀಡಲು ಹೈಕೋರ್ಟ್‌ನಲ್ಲಿದ್ದ ತಡೆಯಾಜ್ಞೆ ತೆರವುಗೊಂಡಿದೆ. ಕೆಲವು ದಿನಗಳ ಹಿಂದೆಯೇ ಕುಂದಾಪುರ ತಾಲೂಕಿನ ೧೬೦೦ ಮಂದಿಗೆ ಮೊದಲ ಹಂತದಲ್ಲಿ ಹಕ್ಕುಪತ್ರ ನೀಡಲು ಅವಕಾಶವಿದ್ದರೂ ಈವರೆಗೆ ನೀಡಿಲ್ಲ. ಸಮಿತಿಯ ಕಾರ್ಯದರ್ಶಿಯಾಗಿ ಈ ವಿಚಾರವನ್ನು ಸಮಿತಿಯ ಮುಂದಿಡಬೇಕು ಎಂಬ ಪ್ರಜ್ಞೆಯೂ ತಮಗಿಲ್ಲವೇ? ತಮಲ್ಲಿಯೇ ಲೋಪ ಇಟ್ಟುಕೊಂಡು ಜವಾಬ್ದಾರಿಯನ್ನು ಮರೆತು ಮಾತನಾಡಬೇಡಿ. ಶೀಘ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂತ ಫಿಲಿಪ್ ನೆರಿ ಚರ್ಚ್ ಬಸ್ರೂರಿನಲ್ಲಿ ಪವಿತ್ರ ಶುಕ್ರವಾರವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಸ್ಥಳೀಯ ಶಾಲೆಯ ಮೈದಾನಾದಲ್ಲಿ ಸ್ಥಳೀಯ ಚರ್ಚನ ಧರ್ಮಗುರುಗಳಾದ ವಂ ವಿಶಾಲ್ ಲೋಬೊರವರ ಮುಂದಾಳತ್ವದಲ್ಲಿ ಶಿಲುಬೆಯ ಹಾದಿಯನ್ನು ನಡೆಸಲಾಯಿತು. ಈ ಭಕ್ತಿ ಕಾರ್ಯದಲ್ಲಿ  ವಂ! ವಿಶಾಲ್ ಲೋಬೊರವರ ನೇತೃತ್ವದಲ್ಲಿ ಶುಭಶುಕ್ರವಾರದ ಧಾರ್ಮಿಕ ಕಾರ್ಯಗಳನ್ನು ನೆರವೇರಿಸದರು. ಪ್ರಭು ಯೇಸುವಿನ ಜೀವನದ ಪ್ರಮುಖ ಘಟನೆಗಳನ್ನು ಸ್ಮರಿಸಿ ಭಕ್ತಿಭಾವದಿಂದ ಅವರನ್ನು ನಮಿಸಿದರು. ತಾಲೂಕಿನ ಕುಂದಾಪುರ, ಬೈಂದೂರು ಚರ್ಚ್ ಸೇರಿದಂತೆ ಎಲ್ಲಾ ಇಗರ್ಜಿಗಳು ಪವಿತ್ರ ಶುಕ್ರವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

Read More