ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ರಾಮಕ್ಷತ್ರಿಯ ಮಾತೃಮಂಡಳಿಯ 2016-17ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಆಶಾ ಜಗದೀಶ್ ಪಟವಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವನಜಾ ರಾಮ. ಎಚ್, ಗಂಗಾ ಕೆ. ಜಿ. ಶಂಕರ್, ಸುಂದರಿ ಗಣಪತಿ. ಕಾರ್ಯದರ್ಶಿಯಾಗಿ ವನಜಾ ಭಾಸ್ಕರ್ ಜೊತೆ ಕಾರ್ಯದರ್ಶಿಯಾಗಿ ರೇವತಿ, ಆಶಾ ಕಿಶೋರ್, ಆಶಾ ದಿನೇಶ್, ವಸಂತಿ ವಾಸುದೇವ್, ಕೋಶಾಧಿಕಾರಿಯಾಗಿ ಗಾಯತ್ರಿ ರಾಮ, ಪೂರ್ಣಿಮಾ ರವಿರಾಜ್, ಲೆಕ್ಕ ಪರಿಶೋಧಕರಾಗಿ ಲಲಿತಾ ಕೆಶವ ನಾಯ್ಕ್ ಆಯ್ಕೆಯಾಗಿದ್ದಾರೆ.
Author: ನ್ಯೂಸ್ ಬ್ಯೂರೋ
ಸಹಕಾರದೊಂದಿಗೆ ಸನ್ಮಾನವನ್ನು ಮಾಡಿ ಬೀಳ್ಕೊಟ್ಟ ಜಾಲಾಡಿ ಯುವಕರು ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಲಾಗಿ ನಿಲ್ಲಿಸಲಾಗಿದ್ದ 37 ಟಾಟಾ ಸುಮೋಗಳ ಕೆಳಗೆ 33.64 ಸೆಕೆಂಡ್‌ಗಳಲ್ಲಿ ಲಿಂಬೋ ಸ್ಕೇಟಿಂಗ್ ಮೂಲಕ ಸಾಗಿ ಗಿನ್ನಿಸ್ ದಾಖಲೆ ಬರೆದಿದ್ದ ಬೆಂಗಳೂರಿನ ಒಂದನೇ ತರಗತಿಯ ಪೋರ ಓಂ ಸ್ವರೂಪ್ ಗೌಡ ಅಚಾನಾಕ್ಕಾಗಿ ತಾಲೂಕಿನ ಜಾಲಾಡಿ ಯುವಕರಿಗೆ ಮುಖಾಮುಖಿಗುವ ಪ್ರಸಂಗವೊಂದು ಎದುರಾಗಿತ್ತು. ತೊಂದರೆಯಲ್ಲಿದ್ದ ಆತನ ಕುಟುಂಬಕ್ಕೆ ಸಹಕಾರವಿತ್ತರಲ್ಲದೇ, ಗಿನ್ನಿಸ್ ದಾಖಲೆ ನಿರ್ಮಿಸಿದ್ದ ಹುಡುಗನ ಸಾಧನೆಯನ್ನು ಮೆಚ್ಚಿ ಸನ್ಮಾನಿಸಿ ಔದಾರ್ಯ ಮೆರೆದಿದ್ದಾರೆ. ಮರ್ಡೇಶ್ವರದಿಂದ ಉಡುಪಿ ಕಡೆಗೆ ಪೋಷಕರೊಂದಿಗೆ ಓಂ ಸ್ವರೂಪ್ ಗೌಡ ತೆರಳುತ್ತಿದ್ದ ಕಾರು ಜಾಲಾಡಿಯ ಬಳಿ ಪಂಕ್ಚರ್ ಆಗಿತ್ತು. ದುರಸ್ತಿಗೊಳಿಸುವ ಪಂಕ್ಚರ್ ಅಂಗಡಿ ಬಾಗಿಲು ಹಾಕಿದ್ದರಿಂದ ಹೆಮ್ಮಾಡಿಯ ಜ್ಯುವೆಲ್ ಪಾರ್ಕಿನಲ್ಲಿ ತಂಗುವಂತೆ ಅಲ್ಲಿಗೆ ಆಗಮಿಸಿದ ಜಾಲಾಡಿಯ ಕೆಲ ಯುವಕರು ಸಲಹೆಯಿತ್ತರಲ್ಲರೇ ಕೊನೆಗೂ ದುರಸ್ತಿಗೊಳಿಸಿಗೊಳಿಸಲು ಸಹಕಾರವಿತ್ತರು. ಈ ಮಧ್ಯೆ ಚೂಟಿಯಾಗಿ ಮಾತನಾಡುತ್ತಿದ್ದ ಹುಡುಗನನ್ನು ಗುರುತಿಸಿದ ಸ್ಥಳೀಯರು ಹತ್ತು ದಿನಗಳ ಹಿಂದಷ್ಟೇ ಗಿನ್ನಿಸ್ ದಾಖಲೆ ಬರೆದಿದ್ದ ಪೋರ ಈತನೇ ಎಂಬುದನ್ನು ಸ್ಪಷ್ಟಪಡಿಸಿಕೊಂಡು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿ ಅವಘಡದಲ್ಲಿ ಸಜೀವದಹನಗೊಂಡು ಮೃತರಾದ ಮೂವರ ಪೈಕಿ ಓರ್ವರನ್ನು ಕುಂದಾಪುರ ತಾಲೂಕಿನ ಮೇರ್ಡಿ ಸುರೇಶ್ ಹೆಗ್ಡೆ (47) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಮೆಡಿಶೇರ್ ಸರ್ಜಿಕಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಆಗಿದ್ದ ಕಾರ್ಯನಿರ್ವಹಿಸುತ್ತಿದ್ದ ಅವರು ಖಾಸಗಿ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಹಿಂತಿರುಗುವ ವೇಳೆ ಈ ಅವಘಡ ಸಂಭವಿಸಿದೆ. ಮೃತರು ಮಡದಿ ಕೃಷ್ಣವೇಣಿ ಎಸ್. ಹೆಗ್ಡೆ, ಓರ್ವ ಪುತ್ರ, ಸಹೋದರ ಉಡುಪಿ ಜಿಲ್ಲಾ ಬಿಜೆಪಿ ಕೈಗಾರಿಕಾ ಮೋರ್ಚಾದ ಜಿಲ್ಲಾಧ್ಯಕ್ಷ ಮೇರ್ಡಿ ಸತೀಶ್ ಹೆಗ್ಡೆ ಸೇರಿದಂತೆ ಮೂವರು ಸಹೋದರರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಹುಬ್ಬಳ್ಳಿಗೆ ಬರುತ್ತಿದ್ದ ಖಾಸಗಿ ಬಸ್ಸು ಹುಬ್ಬಳ್ಳಿಗೆ ಸಮೀಪ ಇರುವಾಗಲೇ ಬೆಳ್ಳಿಗೆ 5 ಗಂಟೆಯ ಸುಮಾರಿಗೆ ಬೆಂಕಿಗಾಹುತಿಯಾಗಿ ಮೂವರು ಸಜೀವ ದಹನಗೊಂಡಿದ್ದರೇ, ಎಂಟು ಮಂದಿ ಗಂಭೀರ ಗಾಯಗೊಂಡಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪುರಸಭೆ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಗೌಜು ಗದ್ದಲಗಳ ನಡುವೆ ಮೊಟಕುಗೊಂಡಿತು. ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬುಗಿಲೆದ್ದ ಭಿನ್ನಮತ ಇನ್ನೂ ಶಮನವಾಗದಿರುವುದು ಸಭೆಯ ಗೌಜಿಗೆ ಆಹಾರವಾಗಿದ್ದರೇ, ಸಭೆಯಲ್ಲಿ ಅಧ್ಯಕ್ಷರ ಬದಲು ಉಪಾಧ್ಯಕ್ಷರು ಉತ್ತರಿಸುತ್ತಿರುವುದು ವಿರೋಧ ಪಕ್ಷದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗತೊಡಗಿದೆ. ಸಭೆಯಲ್ಲಿ ಮಂಡಿಸಲಾದ 17 ಅಜೆಂಡಾಗಳು ಧ್ವನಿಮತದ ಅಂಗೀಕಾರ ಪಡೆದರೇ, ಗಲಾಟೆ ನಿಯಂತ್ರಣಕ್ಕೆ ಬಾರದೇ ಅಧ್ಯಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಹೊರನಡೆದ ಪ್ರಸಂಗವೂ ನಡೆಯಿತು. ವಿರೋಧ ಪಕ್ಷದ ಸದಸ್ಯರಾದ ಶ್ರೀಧರ ಶೇರುಗಾರ್, ಪ್ರಭಾಕರ ಕೋಡಿ, ಶಶಿಕಲಾ ಗಣೇಶ್ ಶೇರುಗಾರ್, ಸಂದೀಪ ಕೋಡಿ ಇತರರು ಎಲ್ಲಾ ಪ್ರಶ್ನೆಗಳಿಗೆ ಉಪಾಧ್ಯಕ್ಷರೇ ಉತ್ತರಿಸುತ್ತಿದ್ದಾರೆ. ಅಧ್ಯಕ್ಷರೇಕೆ ಮೌನವಹಿಸುತ್ತಾರೆ. ಅವರಿಗೆ ಮಾತನಾಡಲು ಬರುವುದಿಲ್ಲವೇ? ನಮಗೆ ಅವರೇ ಉತ್ತರಿಸಬೇಕು ಎಂದು ಪಟ್ಟ ಹಿಡಿದರು. ಎಲ್ಲಾ ಪ್ರಶ್ನೆಗಳಿಗೂ ಅಧ್ಯಕ್ಷರೇ ಉತ್ತರಿಸಬೇಕು. ಉಪಾಧ್ಯಕ್ಷರು ಮಾತನಾಡುವಂತಿಲ್ಲ ಎಂಬ ನಿಯಮವಿದೆಯೇ. ನಾನೇನು ಮೂಕಿಯೂ ಅಲ್ಲಾ, ಕಿವುಡಿಯೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ವಿದ್ಯಾರ್ಥಿ ಪರಿಷತ್ ಕುಂದಾಪುರ ವಲಯ ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹೋಟೆಲ್ ಹರಿಪ್ರಸಾದ್ ನಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಮಾನ್ಯ ಶ್ರೀ. ಕೆ. ಜಯಪ್ರಕಾಶ ಹೆಗ್ಡೆಯವರು ನಾಯಕತ್ವ ಸಂಘಟನಾತ್ಮಕ ಗುಣಗಳನ್ನು ಬೆಳೆಸಿಕೊಂಡು ಉಜ್ವಲ ಭವಿಷ್ಯತ್ತನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು. ಕರ್ನಾಟಕ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾಧ್ಯಕ್ಷರಾಗಿ ಬಾರ್ಕೂರು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಮನೋಜ್ ಶೆಟ್ಟಿ ಆಯ್ಕೆಗೊಂಡರೇ, ಪ್ರಧಾನ ಕಾರ್ಯದರ್ಶಿಯಾಗಿ ಕೋಟ ಪಡುಕೆರೆ ಕಾಲೇಜಿನ ವಿದ್ಯಾರ್ಥಿ ವಿಶ್ವನಾಥ್ ಆಯ್ಕೆಗೊಂಡರು. ಮುಖ್ಯ ಅಥಿತಿಗಳಾಗಿ ಜನಪರ ಪ್ರಗತಿಪರ ಕುಂದಾಪುರ ಸಂಚಾಲಕರಾದ ಮಾಣಿಗೋಪಾಲ್ ಭಾಗವಹಿಸಿದ್ದರು. ಕೆ.ವಿ.ಪಿ.ಯ ಉಡುಪಿ ಜಿಲ್ಲಾ ಸಂಚಾಲಕರಾದ ಪ್ರಥ್ವಿರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ವಲಯ ಸಂಚಾಲಕ ಗಿರೀಶ್ ಜಿ. ಕೆ. ಸ್ವಾಗತಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಲು ಸಂಗ್ರಹದಲ್ಲಿ ಕುಂದಾಪುರ ತಾಲೂಕು ಎರಡನೇ ಸ್ಥಾನ ಪಡೆದಿದೆ. ಕರಾವಳಿ ಭಾಗದಲ್ಲಿ ಹೈನುಗಾರರ ಸಂಖ್ಯೆ ಅಧಿಕವಾಗಿದ್ದು 4.25 ಲಕ್ಷ ಲೀ. ಹಾಲಿನ ಸಂಗ್ರಹದಲ್ಲಿ ದಾಖಲೆ ಸಾಧಿಸಿದ್ದೇವೆ. ಈ ಭಾಗದ ಹೈನುಗಾರರಿಂದ ಉತ್ತಮ ಸಹಕಾರ ದೊರೆಯುತ್ತಲೇ ಬಂದಿದೆ ಎಂದು ದ.ಕ. ಹಾಲು ಉತ್ಪಾದಕರ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು. ಇಲ್ಲಿನ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಿಂದ ಕುಂದಾಪುರ ತಾಲೂಕು ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿರುವ ಒಟ್ಟು 14 ಒಕ್ಕೂಟದಲ್ಲಿ ನಮ್ಮ ಒಕ್ಕೂಟದಿಂದ ಹೈನುಗಾರರಿಗೆ ಹೆಚ್ಚಿನ ಡಿವಿಡೆಂಡ್ ನೀಡಲಾಗುತ್ತಿದೆ. ಹಾಲಿನ ಉತ್ಪಾದನೆ ಶೇ.೨೧ ರಷ್ಟು ಹೆಚ್ಚಾಗುತ್ತಿದೆ. ಒಕ್ಕೂಟದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ,ಹಾಲಿನ ಉತ್ಪಾದನೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾದಿಸಲಿದ್ದೇವೆ ಎಂದರು. ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ, ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನೀರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆ ಮೇ ತಿಂಗಳಿನಲ್ಲಿ ನಡೆಸಿದ್ದ ಅಂತಿಮ ಸಿಎ ಪರೀಕ್ಷೆಯಲ್ಲಿ ಮರವಂತೆಯ ಪಟೇಲರ ಮನೆಯ ಶೈಲೇಶ್ ಶ್ರೀಧರ್ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಬೆಂಗಳೂರಿನ ಎಚ್‌ಸಿಜಿ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಶೈಲೇಶ್ ಕೆನರಾ ಬ್ಯಾಂಕ್‌ನ ನಿವೃತ್ತ ಉಪ ಮಹಾಪ್ರಬಂಧಕ ಎಂ. ಶ್ರೀಧರ್ ಮತ್ತು ಬ್ಯಾಂಕ್ ಆಫ್ ಇಂಡಿಯದ ಅಧಿಕಾರಿ ಶ್ರೀಮತಿ ದಂಪತಿಯ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇವಲ ಗಿಡಗಳನ್ನು ನೆಡುವುದು ಮಾತ್ರ ಮುಖ್ಯವಲ್ಲ. ನೆಟ್ಟ ಗಿಡಗಳನ್ನು ಫೋಷಿಸಬೇಕಾದುದು ಕೂಡಾ ಮುಖ್ಯ. ಎಲ್ಲಾ ವಿದ್ಯಾರ್ಥಿಗಳು ಒಂದೊಂದು ಗಿಡ ನೆಟ್ಟು, ನಂತರ ಪ್ರತೀ ದಿನವೂ ಅವುಗಳನ್ನು ಪೋಷಿಸಿ ಬೆಳೆಸಿ ಗಿಡಗಳ ಹುಟ್ಟು ಹಬ್ಬಗಳನ್ನ ಆಚರಿಸಿ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ ವಕೀಲರ ಸಂಘ (ರಿ), ಅಭಿಯೋಗ ಇಲಾಖೆ, ಅರಣ್ಯ ಇಲಾಖೆ, ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜರುಗಿದ ವನಮಹೋತ್ಸವ ಸಪ್ತಾಹ ಕಾರ್ಯಕ್ರಮ ಕುಂದಾಪುರದ ಶ್ರೀ ವೆಂಕರಮಣ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಪ್ತಾಹದ ಸಮಾರೋಪದಲ್ಲಿ ಅವರು ಮತನಾಡಿದರು. ಸಹಾಯಕ ಸರಕಾರಿ ಅಭಿಯೋಜಕರಾದ ಸಂದೇಶ ಭಂಡಾರಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ, ಉಪ ಅರಣ್ಯಾಧಿಕಾರಿಯವರಾದ ದಿಲೀಪ್, ಶ್ರೀ ವೆಂಕಟರಮಣ ಇಂಗ್ಲೀಷ್…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಉಡುಪಿ ಜಿಲ್ಲೆಯ ಖಡಕ್ ಅಧಿಕಾರಿ ಎಂದೆನಿಸಿಕೊಂಡು ತನ್ನ ಕಾರ್ಯವೈಖರಿಯ ಮೂಲಕ ಸಂಚಲನ ಮೂಡಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಚಿಕ್ಕಮಂಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ಗದಗದ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಉಡುಪಿಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಎಸ್ಪಿ ಅಣ್ಣಾಮಲೈ ಅವರ ವರ್ಗಾವಣೆಯ ಬಗೆಗಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದ್ದು ಅಂತಿಮವಾಗಿ ಅವರು ಚಿಕ್ಕಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಪೊಲೀಸ್ ಇಲಾಖೆಯನ್ನು ಸಮಾಜಸ್ನೇಹಿಯಾಗಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಎಸ್ಪಿ ಅಣ್ಣಾಮಲೈ ಅವರು ಸುರಕ್ಷಾ ಮೊಬೈಲ್ ಆಪ್, ಅಪಘಾತ ತಡೆಗೆ ವಿಶೇಷ ಕ್ರಮ, ಸುರಕ್ಷಾ ಅಭಿಯಾನ, ಜನರ ಅಹವಾಲು ಸ್ವೀಕರಿಸಲು ವಿಶೇಷ ಮುತುವರ್ಜಿ ಮುಂತಾದವುಗಳ ಮೂಲಕ ಇಲಾಖೆ ಹಾಗೂ ಜನರೊಂದಿಗೆ ನೇರ ಸಂಪರ್ಕ ಬೆಸೆಯುವಲ್ಲಿ ಶ್ರಮಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ. ತನ್ನ ಕಾರ್ಯವೈಕರಿಯ ಮೂಲಕ ಉಡುಪಿ ಜಿಲ್ಲೆ ಜನಸಾಮಾನ್ಯರ ಮನಗೆದ್ದಿದ್ದ ಈ ಪೊಲೀಸ್ ಅಧಿಕಾರಿ ಯುವಜನರ ಪಾಲಿನ ಐಕಾನ್ ಎಂದೆನಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದಷ್ಟೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಅಧ್ಯಕ್ಷರಾಗಿ ಪತ್ರಕರ್ತ, ಸಾಹಿತಿ, ಸಂಘಟಕ ಶೇಖರ ಅಜೆಕಾರು ಅವರು ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡು, ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುತಿಸಿಕೊಂಡ ಅಜೆಕಾರು ಅವರು, ವ್ಯಕ್ತಿಗಳು ಹಾಗೂ ಊರಿನ ಪರಿಚಯ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಕುಂದಪ್ರಭ ಪತ್ರಿಕೆಯಿಂದ ಆರಂಭಿಸಿ ಕನ್ನಡಮಲ್ಲ, ಜನವಾಹಿನಿ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ, ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೋತ್ಸವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಜೆಕಾರು ಹೋಬಳಿ ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡ ಶೇಖರ ಅಜೆಕಾರು ಅವರಿಗೆ ಕುಂದಾಪ್ರ ಡಾಟ್ ಕಾಂ ಅಭಿನಂದನೆಗಳನ್ನು ಸಲ್ಲಿಸುತ್ತದೆ.
