ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪ್ರವಾಸ ಹೋಗಲು ಮತ್ತು ಹೋದಲ್ಲಿ ತಂಗಲು ಬಳಸುವ ಕ್ಯಾರವಾನ್ ವಾಹನವನ್ನು ವಿದೇಶದಿಂದ ತರಿಸಿಕೊಂಡು, ಅದನ್ನು ದೋಣಿಯ ಮೇಲಿರಿಸಿ ದೋಣಿಮನೆಯಾಗಿ ಪರಿವರ್ತಿಸುವ ಪ್ರಯತ್ನ ಸಮೀಪದ ಪಡುವರಿಯ ದೊಂಬೆಯಲ್ಲಿರುವ ‘ಸಾಯಿ ವಿಶ್ರಾಮ್’ ಕಡಲತೀರ ಪ್ರವಾಸಿಧಾಮ ಒಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಅದಕ್ಕೆ ಅಗತ್ಯವಿರುವ 48 ಅಡಿ ಉದ್ದದ ಎರಡು ಫೈಬರ್ ದೋಣಿಗಳನ್ನು ಮತ್ತು ಅವುಗಳ ಮೇಲೆ ಮನೆ ಅಳವಡಿಸಲು ಬೇಕಾದ ವೇದಿಕೆ ಅಥವಾ ಪ್ಲ್ಯಾಟ್‌ಫಾರ್ಮನ್ನು ಶಿರೂರಿನ ಅಳ್ವೆಗದ್ದೆಯ ಮೀನುಗಾರಿಕಾ ಬಂದರಿನ ಸಮೀಪ ರಾಮ ಮೇಸ್ತ ಅವರು ನಡೆಸುತ್ತಿರುವ ಓಂ ದುರ್ಗಾಂಬಿಕಾ ಬೋಟ್ ಬಿಲ್ಡರ್ಸ್ ಸಂಸ್ಥೆ ಸಿದ್ಧಪಡಿಸಿಕೊಟ್ಟಿದೆ. ಈಚೆಗೆ ವಾಹನವನ್ನು ಬಂದರಿಗೆ ತಂದು ಎರಡು ಕ್ರೇನ್‌ಗಳ ಸಹಾಯದಿಂದ ಬೋಟ್‌ಗಳ ಮೇಲಿರಿಸುವ ಕೆಲಸ ನಡೆಯಿತು. ಅದನ್ನು ಭದ್ರಪಡಿಸುವ ಕಾರ್ಯ ಸಾಗಿದೆ. ಮನೆಯ ವಾಹನದ ಭಾಗವನ್ನು ಉಳಿಸಿಕೊಂಡಿರುವುದರಿಂದ ಮತ್ತು ಅದನ್ನು ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿರುವುದರಿಂದ (ಕೆಎ 51 ಬಿ 9558) ಈ ದೋಣಿಮನೆಯನ್ನು ಅದಕ್ಕೆ ಹೊಂದಿಸಲು ಸಾಧ್ಯವಾಗುವ ಟ್ರಕ್ ಮೂಲಕ ಎಳೆದು…
Author: ನ್ಯೂಸ್ ಬ್ಯೂರೋ
ಹಳ್ಳಿಯ ಕಾರ್ಯಕ್ರಮಗಳಿಂದ ದೇಶ ವಿಕಾಸ: ಬಿ.ಎ.ಸನದಿ ಉಡುಪಿ: ಭಾಷೆ, ಶಿಕ್ಷಣ, ಸಂಸ್ಕೃತಿಯನ್ನು ಫೋಷಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಹಳ್ಳಿಯಲ್ಲಿ ನಡೆಯ ಬೇಕು, ಅದರಿಂದ ದೇಶದ ವಿಕಾಸ ಸುಲಭವಾಗುತ್ತದೆ ಎಂದು ಮಾನವ್ಯ ಕವಿ ಪಂಪ ಪುರಸ್ಕೃತ ಸಾಹಿತಿ ಬಿ.ಎ ಸನದಿ ಹೇಳಿದರು. ಅವರು ಹಿರಿಯಡ್ಕ ಸಮೀಪದ ಪಂಚನಬೆಟ್ಟುವಿನಲ್ಲಿ ಪಂಚನಬೆಟ್ಟು ವಿದ್ಯಾವರ್ಧಕ ಸಂಘ ಮತ್ತು ಪ್ರೌಢಶಾಲೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಜೊತೆಗೂಡಿ ಆಯೋಜಿಸಿದ್ದ ಪಂಚನಬೆಟ್ಟು ಸಾಂಸ್ಕೃತಿಕ ಉತ್ಸವದಲ್ಲಿ ಸಂಘದ ಅಧ್ಯಕ್ಷ ಬಿ. ಮೋಹನ್‌ದಾಸ ಶೆಟ್ಟಿ ಅವರ ಸಂಸ್ಮರಣಾ ಗ್ರಂಥ ಸಂಮೋಹನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.ಹಳ್ಳಿಯ ಸುಂದರ ಪರಿಸರದ ಈ ಕಾರ್ಯಕ್ರಮ, ಶೈಕ್ಷಣಿಕ ಸೇವೆ, ಜನರ ಉತ್ಸಾಹ ನನಗೆ ಬಾಲ್ಯದ ನೆನಪನ್ನು ತಂದು ಕೊಟ್ಟಿದೆ. ಎ. ನರಸಿಂಹ ಮತ್ತು ಅಜೆಕಾರು ಅವರ ಒತ್ತಾಸೆಯಿಂದ ಈ ಕಾರ್ಯಕ್ರಮದಲ್ಲಿ ವಯೋಸಹಜ ಆಯಾಸವನ್ನು ಬದಿಗೊತ್ತಿ ಭಾಗವಹಿಸಿದೆ. ಹೊಸ ಹೊರಪು, ಉಲ್ಲಾಸವನ್ನು ಈ ಕಾರ್ಯಕ್ರಮ ನೀಡಿದೆ ಎಂದು ಸನದಿ ಖುಷಿ ಹಂಚಿಕೊಂಡರು. ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಂಗೊಳ್ಳಿ ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ, ತ್ರಾಸಿ ಹೊಸಪೇಟೆ ನಿವಾಸಿ ರಿತೇಶ ಖಾರ್ವಿ ಅವರಿಗೆ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ಸಹಾಯಧನದ ಚೆಕ್‌ನ್ನು ರಿತೇಶ ಖಾರ್ವಿ ಅವರಿಗೆ ಹಸ್ತಾಂತರಿಸಿದರು. ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ಉಪಾಧ್ಯಕ್ಷ ಗುರುನಾಥ ಪಟೇಲ್, ಕಾರ್ಯದರ್ಶಿ ಎಸ್.ದೇವದಾಸ ಖಾರ್ವಿ, ಚೌಕಿ ವಿಠಲ ಖಾರ್ವಿ, ನಾಗ ಖಾರ್ವಿ, ದಿನೇಶ ಖಾರ್ವಿ, ನಾಗಪ್ಪಯ್ಯ ಪಟೇಲ್ ಮತ್ತಿತರರು ಉಪಸ್ಥಿತಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಚುನಾವಣಾ ಟಿಕೇಟ್ ದೊರೆಯುತ್ತಿದ್ದಂತೆ, ಕುಂದಾಪುರ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಕಾಣಿಸಿಕೊಂಡಿದ್ದು, ಕಳೆದ ಭಾರಿಯ ಕುಂದಾಪುರ ಬಿಜೆಪಿ ಪರಾಜಿತ ಅಭ್ಯರ್ಥಿ ಬಿ. ಕಿಶೋರ್ ಕುಮಾರ್ ಸೇರಿದಂತೆ 7 ಮಂದಿ ಪಕ್ಷದ ವಿವಿಧ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರ ನಿವಾಸಕ್ಕೆ ತೆರಳಿದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಸತೀಶ್ ಮೇರ್ಡಿ ಮೊದಲಾದವರು, ಪಕ್ಷದ ವಿವಿಧ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿ ಕುಂದಾಪುರ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ನಡೆಸದೇ ದೂರ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಆದರೆ ತಾವು ಎಂದಿಗೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಕುಂದಾಪುರದ ಬದಲಾಗಿ ಇತರೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆಂದು ತಿಳಿಸಿದ್ದಾರೆ. ಹಾಲಾಡಿ ಬಿಜೆಪಿ ಪಕ್ಷದಿಂದ ಹೊರನಡೆದಾಗಿನಿಂದಲೂ ಹತ್ತಿಕೊಂಡಿದ್ದ ಭಿನ್ನಮತದ ಕಿಡಿ ಬೇರೆ ಬೇರೆ ಸಂದರ್ಭಗಳಲ್ಲಿ ಉಲ್ಭಣಗೊಂಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಇಲ್ಲಿನ ಸುರಭಿ ರಿ. ಬೈಂದೂರು ಇದರ ರಂಗ ಸುರಭಿ ವಿಭಾಗದಿಂದ 7 ದಿನಗಳ ಕಾಲ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ರಂಗ ತರಬೇತಿ ಶಿಬಿರ ಚಿಣ್ಣರ ಚಿತ್ತಾರ ರಂಗಶಿಬಿರವನ್ನು ಸುರಭಿ ಸಂಸ್ಥೆ ಸಲಹೆಗಾರ ಹಾಗೂ ರಂಗನಟರೂ ಆದ ಶ್ರೀ ಜಿ. ತಿಮ್ಮಪ್ಪಯ್ಯನವರು ಹಾಗೂ ಪುಟಾಣಿ ನಂದಿತಾ ಹೋಬಳಿದಾರ್ ಉದ್ಘಾಟಿಸಿ ಚಿಣ್ಣರ ಚಿತ್ತಾರದಿಂದ ಬಾಲಪ್ರತಿಭೆಗಳು ತಮ್ಮ ಪ್ರತಿಭೆ ಬೆಳಗುವಂತಾಗಲಿ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಿಬಿರದ ನಿರ್ದೇಶಕ ದಾವಣಗೆರೆಯ ಶ್ರೀ ಭೀಮೇಶ್‌ರವರು ಶುಭಶಂಸನೆ ಗೈದು ರಂಗ ನಿರ್ದೇಶಕಿ ಚನ್ನರಾಯ ಪಟ್ಟಣದ ಶ್ರೀಮತಿ ರಂಜಿನಿ, ಸುರಭಿ ನಿರ್ದೇಶಕ ಶ್ರೀ ಗಣಪತಿ ಹೋಬಳಿದಾರ್‌ರವರು ಪ್ರಾಸ್ತಾವಿಕ ಮಾತನಾಡಿ ಶ್ರೀ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಶಿಬಿರದಲ್ಲಿ ನಿರ್ಮಾಣಗೊಂಡ ಮಕ್ಕಳ ನಾಟಕ ಒಂದು ಗುಬ್ಬಿಯ ಹಾಡು ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಚಿತ್ರೀಕರಿಸಲ್ಪಟ್ಟು, ಬಿತ್ತರಗೊಳ್ಳಲಿದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ವಿಭಾಗದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಹಿಳಾ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬಳ್ಳಾರಿಯ ಶ್ರವಣ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆ, ಬಳ್ಳಾರಿ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇವುಗಳ ಸಹಯೋಗದೊಂದಿಗೆ ನೆಡೆದ ಟೂರ್ನಿ ಅಲ್ಲಿ ಮೂಡಬಿದ್ರೆಯ ಆಳ್ವಾಸ್ ತಂಡ ಮಹಿಳಾ ವಿಭಾಗದಲ್ಲಿ ಟೂರ್ನಿಯ ಪೂರ್ತಿ ಗಮನಾರ್ಹ ಪ್ರದರ್ಶನ ನೀಡಿತು. ಸೂಪರ್ ಲೀಗ್ ಪಂದ್ಯಗಳ 3 ಪಂದ್ಯಗಳಲ್ಲಿ ನೇರ ಸೆಟ್ ದಾಖಲಿಸಿದಲ್ಲದೆ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈನ ಎಸ್ಆರ್ಎಂ ವಿಶ್ವವಿದ್ಯಾಲಯ ತಂಡವನ್ನು 35-19 ಹಾಗೂ 35-24 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಗಳಿಸಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಮಾಜದಲ್ಲಿರುವ ಹೆಚ್ಚಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ತಿಳುವಳಿಕೆ ಇರುವ ಹಿರಿಯರಿಂದ ಸಾಧ್ಯವಾಗುವುದೇ ಹೊರತು ಇದಕ್ಕೆ ರಾಜಕೀಯದ ಅವಶ್ಯಕತೆಯಿಲ್ಲ. ಸಾಮಾನ್ಯವಾಗಿ ಜನರಿಗೆ ರಾಜಕಾರಣಿಗಳ, ರಾಜಕೀಯ ಮುಖಂಡರಿಂದ ಮಾತ್ರ ಸಮಾಜದ ಬದಲಾಣೆ ಸಾಧ್ಯ ಎಂಬ ತಪ್ಪು ತಿಳುವಳಿಕೆಯಿಂದ ಭಿನ್ನಾಭಿಪ್ರಾಯಗಳು, ಸಮಸ್ಯೆಗಳು ಇನ್ನಷ್ಟು ಜಟಿಲಗೊಳ್ಳುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು. ಬೈಂದೂರು-ಕಳವಾಡಿ ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಹವ್ಯಾಸಿ ಕಲಾತಂಡದ ೧೩ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾವೆಲ್ಲರೂ ಸಾಮಾನ್ಯವಾಗಿ ಬದುಕಲು, ಸಾಧಿಸಲು ಹಾಗೂ ಜೀವಿಸಲು ಹುಟ್ಟಿನಿಂದಾಗಿ ಒಂದೇ ರೀತಿಯ ಅವಕಾಶ ಪಡೆದಿರುತ್ತೇವೆ. ಆದರೆ ನಮ್ಮ ನಡುವೆ ಅತ್ಯುನ್ನತ ಸಾಧನೆ ಮಾಡಿದ ಮತ್ತು ಜೀವನದಲ್ಲಿ ಏನನ್ನೂ ಮಾಡದೇ ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದವರನ್ನೂ ನೋಡುತ್ತಿದ್ದೇವೆ. ಇದೆಲ್ಲ ಮನುಷ್ಯನ ವರ್ತನೆ ಹಾಗೂ ನಡವಳಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮೊಳಗಿನ ಬಾಹ್ಯ ಪರಿಸರವು ನಮ್ಮ ಆಸಕ್ತಿ ಕ್ಷೇತ್ರದಲ್ಲಿ ಸ್ಪಷ್ಟಚಿತ್ರಣ ಸೃಷ್ಠಿಸಲು ಸಹಾಯ ಮಾಡಿದರೆ ನಮ್ಮೊಳಗಿನ ಪರಿಸರವೂ ಸರಿಯಾಗಿದ್ದನ್ನು ಆರಿಸಿಕೊಳ್ಳಲು ಸಹಕರಿಸುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಪಕ್ಷವು ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಬಹತೇಕ ಹಾಲಿ ಶಾಸಕರು ಹಾಗೂ ಗೊಂದಲವಿಲ್ಲದ 72 ಕ್ಷೇತ್ರಗಳ ಅಭ್ಯರ್ಥೀಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೇಟ್ ದೊರೆತಿದ್ದು, ಬೈಂದೂರು ಕ್ಷೇತ್ರದಲ್ಲಿ ಯಾರು ಸ್ವರ್ಧಿಸಲಿದ್ದಾರೆ ಎಂಬುದು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿಲ್ಲ. ಕುಂದಾಪುರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಕಳೆದ ಭಾರಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ನೊಂದು ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಪಕ್ಷೇತರರಾಗಿ ಸ್ವರ್ಧಿಸಿ ವಿಜಯಿಯಾಗಿದ್ದರು. ಆ ಬಳಿಕವೂ ಬಿಜೆಪಿ ಪಕ್ಷದ ಪರ ಒಲವು ಹೊಂದಿದ್ದ ಅವರು ಸ್ಥಳಿಯಾಡಳಿತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಅವರನ್ನು ಸೇರ್ಪಡೆಗೂ ಮೊದಲೇ ಬಿಜೆಪಿಯ ಅಭ್ಯರ್ಥಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಘೋಷಿಸಿದ್ದರು. ಈ ನಡುವೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸ್ವಾಭಾವಿಕ ಬದುಕಿನಿಂದ ಅಸ್ವಾಭಾವಿಕ ಬದುಕಿನತ್ತ ಸಮಾಜ ನಡೆಯಿತ್ತಿದೆ. ಪ್ರಕೃತಿ ಜೊತೆಯಲ್ಲೇ ಬದುಕಬೇಕೇ ವಿನಹಾ ಪ್ರಕೃತಿ ವಿರುದ್ಧ ಬದುಕಲಾಗದು. ಸಮಾಜ ಕೃಷಿ ಸಂಸ್ಕೃತಿಯಿಂದ ವಿಮುಕ್ತವಾ ಗುತ್ತಿದ್ದು, ಪ್ಲಾಟ್ ಸಂಸ್ಕೃತಿಗೆ ಬಂದು ಮುಟ್ಟಿದ್ದೇವೆ. ಪೋಷಕರು ಅಂಕ ಪಡೆಯಲಷ್ಟೇ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ಕೊಡುತ್ತಿದ್ದು, ಪರಂಪರೆ ನಮ್ಮ ಅಮೂಲ್ಯ ಗ್ರಂಥಗಳ ಪರಿಚಯಿಸದಿದ್ದರೆ ಪೋಷಕರೂ ಪರಕೀಯರಾಗುವ ಅಪಾಯವಿದೆ. ಹೀಗೆ ಎಚ್ಚರಿಕೆ ನೀಡಿದವರು ಮಂಗಳೂರು ಕೇಮಾರು ಮಠ ಶ್ರೀ ಈಶ ಮಿಠಲದಾಸ ಸ್ವಾಮೀಜಿ. ಬೈಂದೂರು ತಾಲೂಕ್, ಮಾರಣಕಟ್ಟೆ ತೆಂಕೂರು ಶ್ರೀ ವನದುರ್ಗಾ ಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ವಠಾರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ದೇವಸ್ಥಾನಗಳು ಪ್ರಕೃತಿ ದತ್ತವಾಗಿದ್ದು, ಆಧುನಿಕತೆ ಭರಾಟೆಯಲ್ಲಿ ಶಿಲಾಮಯ, ಸ್ವರ್ಣಮಯ ದೇವಾಲಯಗಳಾಗಿ ಬದಲಾಯಿಸುತ್ತಿರುವುದರಿಂದ ದೇವಸ್ಥಾನದಲ್ಲಿ ಶಕ್ತಿ ನಷ್ಟವಾಗುತ್ತಿದೆ. ನಮ್ಮ ಮಕ್ಕಳನ್ನು ಅಂಕ ಪಡೆಯುವ ಯಂತ್ರಗಳಾಗಿ ರೂಪಿಸುತ್ತಿದ್ದು, ಉಣ್ಣುವ ಅನ್ನ ಎಲ್ಲಿಂದ ಬರುತ್ತದೆ ಎನ್ನುವ ಕನಿಷ್ಠ ಜ್ಞಾನ ಕೂಡಾ ಇಲ್ಲದಿರುವುದರಿಂದ ಮಕ್ಕಳಿಗೆ ಕೃಷಿ ಪಾಠ ಕಲಿಸದಿದ್ದರೆ, ಮುಂದಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಭಿಮಾನಿಯೋರ್ವ ಅಭಿಮಾನದಿಂದ ನೀಡಿದ ಬೆಲೆ ಬಾಳುವ ಚಿನ್ನದ ಶೂ ಅನ್ನು ಖ್ಯಾತ ಪುಟ್‌ಬಾಲ್ ಆಟಗಾರ ರೋನಾಲ್ಡ್ ಅವರು ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ಎಚ್. ಐ.ವಿ ಪೀಡಿತರ ಕಲ್ಯಾಣಕ್ಕೆ ಬಳಸಿದರು. ಅವರ ಶ್ಲಾಘನೀಯ ಸೇವಾ ಮನೋಭಾವವನ್ನು ಜಗತ್ತು ಕೊಂಡಾಡಿತು. ಇದೇ ರೀತಿಯಲ್ಲಿ ಸೇವೆ ಮಾಡಲು ನೂರಾರು ಅವಕಾಶಗಳು ನಮಗೂ ಸಿಗಬಹುದು. ಅದು ಚಿಕ್ಕದಿರಲಿ ದೊಡ್ಡದಿರಲಿ ನಮ್ಮಲ್ಲಿರುವ ತ್ಯಾಗ ಮನೋಭಾವವೇ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವುದು ಆದುದರಿಂದ ಪ್ರತಿಯೊಬ್ಬರು ಸೇವಾ ಭಾವವನ್ನು ಅಳವಡಿಸಿಕೊಂಡು ಬದುಕನ್ನು ಸುಂದರವಾಗಿಸಿಕೊಳ್ಳೋಣ ಎಂದು ರೋಟರಿ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಜಿ.ಎನ್ ಪ್ರಕಾಶ್ ಹೇಳಿದರು.ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಸ್ಥಳೀಯ ಆಶೀರ್ವಾದ ಹಾಲ್‌ನಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಗಣೇಶ್ ಐತಾಳ್ ವಹಿಸಿದ್ದರು. ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ.ಕಾಂಚನ್ ಕ್ಲಬ್ ಬುಲೆಟಿನ್ ಬಿಡುಗಡೆಗೊಳಿಸಿದರು.…
