Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಧಾರ್ಮಿಕ ಕ್ಷೇತ್ರವೂ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಅದು ಸಾಮಾಜಿಕ ಬದ್ಧತೆಯಿಂದ ಕೆಲಸಮಾಡಬೇಕಾದ ಅನಿವಾರ್ಯತೆ ಇದೆ ಎಂದು ಇಡಗುಂಜಿಯ ಸಿದ್ಧಿವಿನಾಯಕ ಕ್ಷೇತ್ರದ ಆಡಳಿತ ಧರ್ಮದರ್ಶಿ ಡಾ. ಜಿ. ಜಿ. ಸಭಾಹಿತ ಹೇಳಿದರು. ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಪುನರ್‌ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶೋತ್ಸವದ ವರ್ಧಂತ್ಯುತ್ಸವದ ನಿಮಿತ್ತ ಶನಿವಾರ ನಡೆದ ಧರ್ಮಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ದೇವಾಲಯಗಳ ಜೀರ್ಣೋದ್ಧಾರ ನಡೆದರೆ ಅವು ಸಮಾಜದ ನೆಮ್ಮದಿಯ ತಾಣಗಳಾಗುತ್ತವೆ. ಜನರು ತಮ್ಮ ದುಡಿಮೆಯ ಹಣವನ್ನು ದೇವಾಲಯಕ್ಕೆ ನೀಡಿದರೆ ಅದರಿಂದ ಸತ್ಫಲ ಪ್ರಾಪ್ತಿಯಾಗುತ್ತದೆ. ದೇವರಿಗೂ ತನ್ನ ಭಕ್ತರು ಚೆನ್ನಾಗಿರಬೇಕೆಂಬ ಇಚ್ಛೆ ಇರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಮಾಜಿ ಆಡಳಿತ ಧರ್ಮದರ್ಶಿ ಬಿ. ಎಂ. ಸುಕುಮಾರ ಶೆಟ್ಟಿ ದೇವಸ್ಥಾನ ಶ್ರದ್ಧಾಕೇಂದ್ರ. ಅದರ ಆಡಳಿತ ಮಂಡಳಿಯಲ್ಲಿ ರಾಜಕೀಯೇತರ ಪ್ರಾಮಾಣಿಕ ವ್ಯಕ್ತಿಗಳಿರಬೇಕು. ಹಾಗಿದ್ದರಷ್ಟೆ ಆ ದೇವಸ್ಥಾನದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ತಗ್ಗರ್ಸೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವರ ಎರಡನೇ ಪ್ರತಿಷ್ಟಾ ವರ್ಧಂತ್ಯೋತ್ಸದ ಪ್ರಯುಕ್ತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉದ್ಯಮಿ ಟಿ. ನಾರಾಯಣ ಹೆಗ್ಡೆ ಮತ್ತು ಮಕ್ಕಳು ಶ್ರೀದೇವರಿಗೆ ರಜತ ಕವಚ ಮತ್ತು ದಾನಿಗಳು ಹಾಗೂ ಸಾರ್ವಜನಿಕರ ನೆರವಿನಿಂದ ಬೆಳ್ಳಿಯ ಪ್ರಭಾವಳಿ ಸಮರ್ಪಿಸಲಾಯಿತು. ಈ ಸಂದರ್ಭ ವಂಡ್ಸೆ ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಈ ಭಾರಿ ನೀರಿನ ಅಭಾವದಿಂದ ಬರ ಎದುರಿಸುತ್ತಿರುವಾಗ ಕೆರಾಡಿ ಗ್ರಾಮ ಏಕಾಏಕಿ ಮನೆ ತೆರಿಗೆ ಪರಿಷ್ಕರಣೆ ಮೂಲಕ ಐದಾರು ಪಟ್ಟು ತೆರಿಗೆ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಹೆಚ್ಚಳವಾಗಿ ಮಾಡಿರುವ ತೆರಿಗೆಯನ್ನು ಕೈಬಿಡದಿದ್ದರೆ, ಗ್ರಾಪಂಗೆ ತೆರಿಗೆ ಪಾವತಸದೇ ಪ್ರತಿಭಟಿಸಲಾಗಿತ್ತದೆ ಎಂದು ಕೆರಾಡಿ ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ ಎಚ್ಚರಿಸಿದ್ದಾರೆ. ಕೆರಾಡಿ ಗ್ರಾಪಂ. ಎದುರು ಮನೆ ತೆರಿಗೆ ಪರಿಷ್ಕಣೆ ವಿರುದ್ಧ ಬೆಳ್ಳಾಲ, ಕೆರಾಡಿ ಗ್ರಾಮಸ್ಥರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ಕೆರಾಡಿ ಮತ್ತು ಬೆಳ್ಳಾಲದಲ್ಲಿ ಕೃಷಿ ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದವರ ಮೇಲೆ ಗ್ರಾಪಂ ಹೆಚ್ಚು ತೆರಿಗೆ ಬರೆ ಎಳೆದಿದೆ. ಗ್ರಾಪಂ ತಕ್ಷಣ ತೆರಿಗೆ ಏರಿಕೆ ಕೈಬಿಡದಿದ್ದರೆ, ತೆರಿಗೆ ಹೆಚ್ಚಳ ಕೈ ಬಿಡುವವರೆಗೂ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಪಂ ಅಭಿವೃದ್ಧಿ ಹೆಸರಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದು, ಜನರನ್ನು ಕತ್ತಲಲ್ಲಿಟ್ಟು ತೆರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದಲ್ಲಿ ಅತ್ಯಂತ ತಳಮಟ್ಟದಲ್ಲಿ ಜೀವನ ನಡೆಸುತ್ತಿರುವವರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವಂತೆ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆ ತರುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಮುಖ ಪಾತ್ರವಹಿಸಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಯಡ್ತರೆ ಜೆಎನ್‌ಆರ್ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಂದೂರು ವಲಯದ ಯಡ್ತರೆ, ಬೈಂದೂರು, ಪಡುವರಿ, ತಗ್ಗರ್ಸೆ ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವ-ಸಹಾಯ ಸಂಘದ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪ್ರದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಕ್ಕೂಟದ ಸದಸ್ಯರು ಒಗ್ಗಟ್ಟಾಗಿ ಯಾವುದೇ ಹೆಚ್ಚಿನ ಫಲಾಪೇಕ್ಷೆ ಇಲ್ಲದೇ ಕಾರ್ಯನಿರ್ವಹಿಸಿದರೆ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯವಿದೆ. ರಾಜ್ಯಾದ್ಯಂತ ಶ್ರೀಕ್ಷೇತ್ರದ ಮೂಲಕ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತಂದು ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ, ಮಹಿಳೆಯರು ಆರ್ಥಿವಾಗಿ ಸ್ವಾವಲಂಬಿ ಜೀವನ ನಡೆಸುನ ವಾತಾವರಣ ನಿರ್ಮಾಣ, ಜನಜಾಗೃತಿ ವೇದಿಕೆಯ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣದಂತಹ ಮಹತ್ಕಾರ್ಯಗಳು ನಡೆಯುತ್ತಿದ್ದು, ಹತ್ತು-ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಿರುವುದು ಶ್ಲಾಘನೀಯ ಎಂದರು. ಯಡ್ತರೆ ಗ್ರಾಪಂ ಅಧ್ಯಕ್ಷ ಎನ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ಗ್ರಾಪಂ ವ್ಯಾಪ್ತಿಯ ಕುಂಜಳ್ಳಿ ಎಂಬಲ್ಲಿ ಯುವಕನೋರ್ವ ಗೇರುಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ವರದಿಯಾಗಿದೆ. ಕುಂಜಳ್ಳಿಯ ನಿವಾಸಿ ನಾರಾಯಣ ಶೆಟ್ಟಿ ಎಂಬುವವರ ಮಗ ಪ್ರವೀಣ್ (25) ಆತ್ಮಹತ್ಯೆಗೆ ಶರಣಾದ ದುರ್ದೈವಿ. ತನ್ನ ಪರಿಚಿತ ಯುವತಿ ಪ್ರೀತಿಯನ್ನು ನಿರಾಕರಿಸಿದ್ದರಿಂದ ಹತಾಶನಾದ ಯುವಕ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ತನಿಕೆ ನಡೆಯುತ್ತಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನಮ್ಮ ಹಿರಿಯರು ಸಮಾಜದ ಅಭಿವೃದ್ಧಿಗಾಗಿ ದೇವ ಗುರು ಮಂದಿರಗಳನ್ನು ಸ್ಥಾಪಿಸಿ ಸಮಾಜಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟು ಸನ್ಮಾರ್ಗದಲ್ಲಿ ಮುನ್ನಡೆಯಲು ಉತ್ತಮ ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕಡೆಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಊರಿನಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಪ್ರತಿಯೊಂದು ಊರಿನಲ್ಲಿರುವ ದೇವ ಮಂದಿರಗಳನ್ನು ಸಂರಕ್ಷಿಸುವ ಬಗ್ಗೆ ಗಮನ ಹರಿಸಬೇಕು. ಜಿಎಸ್‌ಬಿ ಸಮಾಜಬಾಂಧವರು ಒಗ್ಗಟ್ಟಾಗಿ ಎಲ್ಲಾ ಕಾರ್ಯಗಳನ್ನು ನಡೆಸಬೇಕು ಎಂದು ಶಿರಾಲಿಯ ಉದ್ಯಮಿ ವೆಂಕಟೇಶ ಪ್ರಭು ಹೇಳಿದರು. ಅವರು ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದ್ವಾರಕಾನಾಥ ಕಲ್ಯಾಣ ಮಂಟಪದಲ್ಲಿ ಜರಗಿದ ಗಂಗೊಳ್ಳಿಯ ನಿನಾದ ಸಂಸ್ಥೆಯ 11ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಜಿಎಸ್‌ಬಿ ಸಮಾಜವನ್ನು ಇಂದು ಎಲ್ಲಾ ಸಮಾಜದವರು ಅನುಕರಣೆ ಮಾಡುತ್ತಿದ್ದಾರೆ. ಆದರೆ ನಾವು ಬೇರೆ ಸಂಸ್ಕೃತಿಯನ್ನು ಅನುಸರಿಸಿ ನಮ್ಮ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದೇವೆ. ನಿನಾದ ಸಂಸ್ಥೆಯು ಭಜನೆ ಮೂಲಕ ಪ್ರತಿಯೊಂದು ಕಡೆಗಳಲ್ಲಿ ಉತ್ತಮ ಸಂಸ್ಕೃತಿಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಲ್ಲಿಗೆ ಸಮೀಪದ ಯಡಬೆಟ್ಟು ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಹಡೋಲು ಬಿದ್ದಿದ್ದ ಏಳು ಎಕರೆ ಕೃಷಿ ಭೂಮಿಗೆ ಬೆಂಕಿ ಬಿದ್ದಿದ್ದು ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಹರಸಾಹಸ ಪಡೆಬೇಕಾಯಿತು. ಸಂಜೆ 5 ಗಂಟೆರ ಸುಮಾರು ಚಿಕ್ಕದಾಗಿ ಕಾಣಿಸಿಕೊಂಡ ಬೆಂಕಿ ಗಾಳಿಗೆ ಮೆಲ್ಲನೆ ಹಬ್ಬಿ, ಯಡಬೆಟ್ಟು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿಯವರೆಗೆ ಸುಮಾರು 7 ಎಕರೆ ಜಾಗದವರೆಗೆ ಆಕ್ರಮಿಸಿತ್ತು. ಅಷ್ಟು ಜಾಗದಲ್ಲಿದ್ದ ಒಣಗಿದ ಹುಲ್ಲು ಕಡ್ಡಿಗಳು ಇದ್ದುದರಿಂದ ಬೆಂಕಿಯ ತೀವ್ರತೆ ಹೆಚ್ಚುತ್ತಿರುವುದನ್ನು ಗಮನಿಸಿ ಸ್ಥಳೀಯರು ಹಸಿ ಮರದ ಕೊಂಬೆಗಳ ಮೂಲಕ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಕೂಡ, ಬೆಂಕಿ ನಿಧಾನವಾಗಿ ಮುಂದುವರಿಯುತ್ತಾ ಸಾಗಿತ್ತು. ಬಳಿಕ ಕುಂದಾಪುರ ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಯಿಸಲಾಯಿತು. ಸುಮಾರು ಒಂದು ಗಂಟೆಗಳ ಹರಸಾಹಸದ ಬಳಿಕ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಆಗ್ನಿಶಾಮಕ ಇಲಾಖೆ ಸಫಲವಾಯಿತು. ಘಟನಾಸ್ಥಳಕ್ಕೆ ಪಾಂಡೇಶ್ವರ ಪಂಚಾಯಿತಿ ಅಧ್ಯಕ್ಷ ಗೋವಿಂದ ಉಪಸ್ಥಿತರಿದ್ದ, ಸ್ವತಃ ಬೆಂಕಿ ನಂದಿಸುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ 201-16ರಲ್ಲಿ ಸಲ್ಲಿಸಿದ ಅನುಪಮ ಸೇವೆಯ ಹಿನ್ನಲೆಯಲ್ಲಿ 12 ಪ್ರಶಸ್ತಿಗಳನ್ನು ಪಡೆದು ಎಂಟು ಕಂದಾಯ ಜಿಲ್ಲೆಯನ್ನೊಳಗೊಂಡ 3180ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಜರಾತಿಯಲ್ಲಿ ಪ್ರಥಮ, ರೋಟರಿ ಮಾಹಿತಿಯಲ್ಲಿ ಪ್ರಥಮ, ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಹಿತದೃಷ್ಠಿಯಿಂದ ಕೊಡಮಾಡಿದ ಇ-ಲರ್ನಿಂಗ್ ಕಿಟ್ ವಿತರಣೆ ವಿಭಾಗದಲ್ಲಿ ಸೇವೆಯನ್ನು ಪರಿಗಣಿಸಿ ರೋಟರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಪಡೆದುಕೊಂಡರು. ಅಲ್ಲದೇ ರೋಟರಿ ಜಿಲ್ಲೆಯ ಮದ್ಯಮ ವಿಭಾಗದ ಕ್ಲಬ್ ಮಟ್ಟದಲ್ಲಿ ಕ್ಲಬ್ ಸರ್ವಿಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಫೆಲೋಶಿಪ್‌ನಲ್ಲಿ ದ್ವಿತೀಯ, ಟೀಚರ್ ಸಪೋರ್ಟ್‌ನಲ್ಲಿ ದ್ವಿತೀಯ, ಪಬ್ಲಿಕ್ ರಿಲೇಶನ್ ಮತ್ತು ಪಬ್ಲಿಕ್ ಇಮೇಜ್, ಮ್ಯಾನೇಜ್‌ಮೆಂಟ್ ಆಫ್ ಕ್ಲಬ್ ಫೈನಾನ್ಸ್, ಕೇರಿಯರ್ ಗೈಡೆನ್ಸ್, ಅಂತರಾಷ್ಟ್ರೀಯ ರೋಟರಿ ಸಮ್ಮೇಳದಲ್ಲಿ ಭಾಗವಹಿಸುವಿಕೆ, ಡಿಸ್ಟ್ರಿಕ್ಟ್ ಗ್ರ್ಯಾಂಟ್ಸ್, ಇಂಟರ್‌ನ್ಯಾಶನಲ್ ಅಂಡರ್‌ಸ್ಟ್ಯಾಂಡಿಂಗ್‌ನಲ್ಲಿ ತೃತೀಯ ಸ್ಥಾನವನ್ನು ಪಡೆಯುವ ಮೂಲಕರೋಟರಿ ಜಿಲ್ಲೆ 3180 ಇದರ ಕೊನೆಯ ಅವಾರ್ಡ್ ನೈಟ್‌ನಲ್ಲಿ 12 ಪ್ರಶಸ್ತಿಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲೆಯಾದ್ಯಂತ ಉದ್ಭವವಾಗಿರುವ ಮರಳು ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, 9/11ರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಅಕ್ರಮ ಸಕ್ರಮ ಹಕ್ಕುಪತ್ರ ವಿತರಣೆಯಲ್ಲಿನ ಗೊಂದಲ ಮುಂತಾದ ಸಾರ್ವಜನಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟ ನೀಡಲು ಜನಪರ ಪ್ರಗತಿಪರ ವೇದಿಕೆ ಸದಾ ಸಕ್ರಿಯವಾಗಿರಬೇಕು. ಈ ಕುರಿತು ಸ್ಪಂದನೆಗೆ ತಾನು ಸದಾ ಸಿದ್ಧನಿರುವುದಾಗಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರ ಕೋಟ ಬ್ಲಾಕ್ ವ್ಯಾಪ್ತಿಯ ಬೆಂಬಲಿಗರ, ಹಿತೈಷಿಗಳ ಹಾಗೂ ಸಮಾನ ಮನಸ್ಕರ ಸಭೆಯು ಇಂದು ಕೋಟದ ಮಾಂಗಲ್ಯ ಸಭಾಮಂದಿರದಲ್ಲಿ ನಡೆಯಿತು. ಕಳೆದ ಮಾರ್ಚ್ ತಿಂಗಳಲ್ಲಿ ಹೆಗ್ಡೆ ಬೆಂಬಲಿಗರಿಂದ ಮೌಲಿಕ ರಾಜಕಾರಣವನ್ನು ಎತ್ತಿ ಹಿಡಿಯುವ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕುಂದಾಪುರದಲ್ಲಿ ಸ್ಥಾಪನೆಗೊಂಡ ಜನಪರ ಪ್ರಗತಿಪರ ವೇದಿಕೆಯ ಘಟಕವನ್ನು ಕೋಟದ ಖ್ಯಾತ ಸಮಾಜಸೇವಕ ಗೋಪಾಲ ಬಂಗೇರರವರ ನೇತೃತ್ವದಲ್ಲಿ ಅಸ್ಥಿತ್ವಕ್ಕೆ ತರುವ ಕುರಿತು ನಿರ್ಣಯವನ್ನು ಕೈಗೊಳ್ಳಲಾಯಿತು. ಕುಂದಾಪುರ ಜನಪರ ಪ್ರಗತಿಪರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಂಡ್ಸೆ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಂಡ್ಸೆ ಒಕ್ಕೂಟದ ಪದಗ್ರಹಣ ಸಮಾರಂಭವು ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರುಗಿತು. ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅದ್ಯಕ್ಷ ಶಶಿಧರ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಜಿ. ಶ್ರೀಧರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಮಾಜಿ ಅದ್ಯಕ್ಷೆ ಜಯಂತಿ ಪಿ. ಶೆಟ್ಟಿ, ಮಾಜಿ ಉಪಾದ್ಯಕ್ಷರಾದ ದಯನಂದ ಆಚಾರಿ, ಮತ್ತು ಪದಾಧಿಕಾರಿಗಳು. ಶಾಲಾಭಿವ್ರದ್ದಿ ಸಮಿತಿಯ ಅದ್ಯಕ್ಷ ಚಂದ್ರ ನಾಯಕ ರಾಯಪ್ನಾಡಿ, ತ್ರಾಸಿ ಮರವಂತೆಯ ವಲಯದ ಮೇಲ್ವಿಚಾರಕರಾದ ಚಂದ್ರ, ಶಿಕ್ಷಕ ಪ್ರಭಾಕರ ಶೆಟ್ಟಿ, ಜನಜಾಗೃತಿ ವೇದಿಕೆ ಸದಸ್ಯ ತಾಂಪಣ್ಣ ಶೆಟ್ಟಿ ಉಪಸ್ಥಿತರಿದ್ದರು. ವಂಡ್ಸೆ ಒಕ್ಕೂಟದ ನೂತನ ಅದ್ಯಕ್ಷರಾಗಿ ಸಂಜೀವಿ, ಉಪಾದ್ಯಕ್ಷರಾಗಿ ಸದಾನಂದ ಆಚಾರಿ ಮತ್ತು ನೂತನ ಪದಾಧಿಕಾರಿಗಳು ಪ್ರದಪ್ರದಾನ ಸ್ವೀಕರಿಸಿದರು. ಒಕ್ಕೂಟದ ಮಾಜಿ ಅದ್ಯಕ್ಷ ಗಿರೀಶ ನಾಯ್ಕ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು. ವಂಡ್ಸೆ ಒಕ್ಕೂಟದ ಸೇವಾಪ್ರತಿನಿಧಿ ಲಾಲಿ ಸೋಜನ ವರದಿ ವಾಚಿಸಿದರು.…

Read More