Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಇನ್ನೆಂದೂ ಅ ಮನೆಯಂಗಳದಲ್ಲಿ ಮಕ್ಕಳ ಕಲರವ ಕೇಳಿಸಲಾರದು. ಆ ಮಕ್ಕಳೇ ಕಟ್ಟಿದ ಜೋಕಾಲಿ ಜೀಕಲಾರದು, ಅಲ್ಲಲ್ಲಿ ಅನಾಥವಾಗಿ ಬಿದ್ದಿರುವ ಆಟಿಕೆಗಳು ಸದ್ದು ಮಾಡಲಾರವು. ಸದಾ ಕಾಲ ಮಕ್ಕಳನ್ನು ಕರೆಯುತ್ತಿದ್ದ ತಂದೆಯ ಸ್ವರವೂ ಕೇಳಲಾರದು. ಹಕ್ಕಿಗಳು ಚಿಲಿಪಿಲಿ ಗುಟ್ಟಲಾರವು, ಅಬ್ಬಾ ವಿಧಿಯೇ ನೀನಿಷ್ಟು ಕಠೋರಿಯೇ? ಹಾಗಂತ ಅಲ್ಲಿ ನೆರೆದ ಪ್ರತಿಯೋರ್ವರ ಗಂಟಲಿನಲ್ಲಿ ಸದ್ದಿಲ್ಲದೆ ನಿಟ್ಟುಸಿರೊಂದು ಹೊರಹೊಮ್ಮಿತ್ತು. ಕಣ್ಣಂಚಿನಲ್ಲಿ ಇನ್ನಿಲ್ಲದ ದು:ಖವೊಂದು ಮಡುಗಟ್ಟಿ ನಿಂತಿತ್ತು. ಅಯ್ಯೋ.. ದೇವರೇ ನನ್ನನ್ಯಾಕೆ ಉಳಿಸಿಹೋದೆ ಅದೆಂಥಾ ಪಾಪಕ್ಕೆ ನನಗೇ ಈ ಶಿಕ್ಷೆ ನನ್ನನ್ನೂ ಸಹಾ ಕರೆದು ಕೊ. ಅಂತಾ ಆ ಹೆತ್ತೊಡಲು ಮರುಗುತ್ತಿದ್ದರೇ, ಓಹ್ ಬದುಕೇ ನಿನ್ಯಾಕೆ ಆ ಕುಟುಂಬದ ಪಾಲಿಗೆ ಇಷ್ಟೊಂದು ನಿಷ್ಕರುಣಿಯಾಗಿ ಹೋದೆ. ಎನ್ನುವ ಪ್ರಶ್ನೆ ಅಲ್ಲಿ ಮತ್ತೇ ಮತ್ತೇ ಮಗ್ಗಲು ಬದಲಿಸುತ್ತಿತ್ತು. ಆ ಮನೆಯ ಸಮೀಪದ ತೋಟದ ಕೆರೆಯೊಂದರ ದಂಡೆಯ ಮೇಲೆ ಇಬ್ಬರು ಪುಟ್ಟ ಗಂಡು ಮಕ್ಕಳ ಸಹಿತ ತಂದೆಯೋರ್ವನ ಶವಗಳು ಉದ್ದಕ್ಕೂ ಮೈಚೆಲ್ಲಿದ್ದುದು ಈ ಎಲ್ಲಾ ಸನ್ನಿವೇಶಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಿಸಿಲ ಬೇಗೆಯಿಂದ ಧಗದಗಿಸುತ್ತಿದ್ದ ಕುಂದಾಪುರ ತಾಲೂಕಿನ ಹಲವೆಡೆ ಇಂದು ಸಂಜೆಯ ವೇಳೆಗೆ ಮಳೆಯ ಸಿಂಚನವಾಗಿದೆ. ಕುಂದಾಪುರ ನಗರ ಹಾಗೂ ತಾಲೂಕಿನ ಸಿದ್ಧಾಪುರ, ನೇರಳಕಟ್ಟೆ, ಕೋಟೇಶ್ವರ, ಕೊಲ್ಲೂರು ಭಾಗಗಳಲ್ಲಿ ಲಘ ಮಳೆಯಾಗಿದೆ. ಇನ್ನು ಬೈಂದೂರು, ಉಪ್ಪುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದರೂ ಈವರೆಗೂ ಮಳೆಯಾಗಿಲ್ಲ.  ಕುಂದಾಪ್ರ ಡಾಟ್ ಕಾಂ ಸುದ್ದಿ. ದಿನದಿಂದ ದಿನಕ್ಕೆ ಸೂರ್ಯನ ಶಾಖ ಹೆಚ್ಚುತ್ತಿದ್ದು ಮಳೆಯಿಲ್ಲದೇ ಜನರು ಕಂಗೆಟ್ಟಿದ್ದರು. ಹಲವೆಡೆ ನೀರಿನ ಒರತೆಗಳು ಬತ್ತಿಹೋಗಿ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂದಿನ ತುಂತುರು ಮಳೆ ಕೊಂಚ ಭೂಮಿಯನ್ನು ತಂಪುಗೊಳಿಸುವುದೇ ಹೊರತು ನೀರಿನ ಒರತೆಯನ್ನು ಹೆಚ್ಚಿಸದು. ಹಾಗಾಗಿ ಒಂದು ದೊಡ್ಡ ಮಳೆಯೇ ಬರಲಿ ಎಂದು ಜನ ಕಾಯುತ್ತಿದ್ದಾರೆ. ಇದರ ನಡುವೆ ವರ್ಷದಲ್ಲಿ ಮೊದಲು ಬಿದ್ದ ಹನಿಮಳೆಯನ್ನು ಜನ ಸ್ವಾಗತಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಟವಾಡಲೆಂದು ಕೆರೆಯ ಸಮೀಪ ತೆರಳಿದ್ದ ಇಬ್ಬರು ಮಕ್ಕಳು ಹಾಗೂ ಅವರನ್ನು ರಕ್ಷಿಸಲೆಂದು ತೆರಳಿದ ತಂದೆಯೂ ಸೇರಿದಂತೆ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಸಿದ್ಧಾಪುರ ಸಮೀಪದ ಉಳ್ಳೂರು-74ರಲ್ಲಿ ವರದಿಯಾಗಿದೆ. ಐರ್‌ಬೈಲು ನಿವಾಸಿ ರಾಘವೇಂದ್ರ ಕಿಣಿ (38) ಹಾಗೂ ಅವರ ಮಕ್ಕಳಾದ ಪ್ರಕಾಶ್ (13), ಯೋಗೀಶ್ (12) ಮೃತ ದುರ್ದೈವಿಗಳು. ಕುಂದಾಪ್ರ ಡಾಟ್ ಕಾಂ. ಘಟನೆಯ ವಿವರ ರಾಘವೇಂದ್ರ ಕಿಣಿ  ಅವರ ಇಬ್ಬರು ಮಕ್ಕಳು ತಮ್ಮ ಮನೆಯ ಸಮೀಪದಲ್ಲಿರುವ ತೋಟಕ್ಕೆ ಸ್ನೇಹಿತರೊಂದಿಗೆ ಆಟವಾಡಲೆಂದು ತೆರಳಿದ್ದರು. ಆಟವಾಡುತ್ತಾ ಕೆರೆ ಸಮೀಪ ಬಂದಾಗ ಪ್ರಕಾಶನ ಕಾಲು ಜಾರಿ ಕೆರೆಗೆ ಬಿದ್ದಿದ್ದ. ಆತನ್ನು ರಕ್ಷಿಸಲು ಯೋಗೀಶ್ ಕೂಡ  ಕೆರೆಗೆ ಇಳಿದನಾದರೂ ಇಬ್ಬರೂ  ಕೆರೆಯಲ್ಲಿ ಮುಳುಗುತ್ತಿದ್ದರು. ಇದನ್ನು ಕಂಡ ಆತನ ಸ್ನೇಹಿತರು ಕೂಗಿಕೊಳ್ಳಲಾರಂಭಿದ್ದ. ಕೂಗಾಟ ಕೇಳಿದ ರಾಘವೇಂದ್ರ ಕಿಣಿ ಮನೆಯಿಂದ ಓಡಿಬಂದು ನೋಡಿದ್ದಾರೆ. ಆಳವಿದ್ದ ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಅವರೂ ಕೆರೆಗೆ ಇಳಿದಿದ್ದಾರೆ. ಆದರೆ ಆಳವಿದ್ದ ಕೆರೆಯಲ್ಲಿ ಅವರೂ ಸ್ಥಿಮಿತ ಕಳೆದುಕೊಂಡು  ಮೂವರೂ ನೀರಿನಲ್ಲಿ ಮುಳುಗಿ…

Read More

ಕುಂದಾಪ್ರ ಡಾಟ್ ಕಾಂ ವರದಿ | ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬದುಕು ರೂಪಿಸುವ ಮಹತ್ತರ ಘಟ್ಟ. ಈ ಹಂತದಲ್ಲಿ ಸರಿಯಾದ ಮಾರ್ಗದರ್ಶನ ಹಾಗೂ ಶಿಕ್ಷಣ ದೊರೆತರೆ ಪ್ರತಿಯೊಬ್ಬರ ಜೀವನವೂ ಉಜ್ವಲವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕ ವಾತಾವರಣ ನಿರ್ಮಿಸಬೇಕೆಂಬ ಉದ್ದೇಶದೊಂದಿಗೆ 2003ರಲ್ಲಿ ಸ್ಥಾಪನೆಗೊಂಡ ಕುಂದಾಪುರ ಆರ್.ಎನ್. ಶೆಟ್ಟಿ. ಪಿಯು ಕಾಲೇಜು ಇಂದು ಜಿಲ್ಲೆಯ ಪ್ರತಿಷ್ಠಿತ ಕಾಲೇಜುಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಉಡುಪಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಪಿಯು ಶಿಕ್ಷಣವನ್ನು ಕಾಲೇಜಿನಲ್ಲಿ ನೀಡುತ್ತಾ ಬರಲಾಗಿದೆ. ಈ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದು ತೆರಳಿರುವ ಅದೆಷ್ಟೊ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಉತ್ತಮ ಹುದ್ದೆಗಳನ್ನಲಂಕರಿಸಿ, ಉದ್ಯಮವನ್ನು ನಡೆಸುತ್ತಾ ಮಾದರಿಯಾಗಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ಸಂಸ್ಥೆಯ ನುರಿತ ಹಾಗೂ ಅನುಭವಿ ಉಪನ್ಯಾಸಕ ವೃಂದವು ತಮ್ಮ ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕಾಲೇಜಿನಲ್ಲಿ ದಾಖಲೆಯ ಫಲಿತಾಂಶ ಆರ್‌ಎನ್‌ಎಸ್ ಪಿಯು ಕಾಲೇಜು ಆರಂಭದಿಂದ ಇಂದಿನವರೆಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಸಮೀಪದ ಕಮಲಶಿಲೆ ಗ್ರಾಮದ ಭಟ್ಕಳಮಕ್ಕಿಯಲ್ಲಿ ರಸ್ತೆಯ ವಿಚಾರವಾಗಿ ಕುಟುಂಬಿಕರ ನಡುವೆ ನಡೆದ ತಕರಾರಿಗೆ ಸ್ವಂತ ತಮ್ಮನೇ ತನ್ನ ಮಕ್ಕಳೊಂದಿಗೆ ಅಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆಣ್ಣನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ. ನಾರಾಯಣ ನಾಯ್ಕ (೬೦) ತಮ್ಮ ಹಾಗೂ ತಮ್ಮನ ಮಕ್ಕಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದವರು. ನಾರಾಯಣ ನಾಯ್ಕ ಅವರ ಕೊಲೆಗೆ ಕಾರಣರು ಎನ್ನಲಾದ ಆರೋಪಿಗಳಾದ ನಾಗರಾಜ ನಾಯ್ಕ ಮತ್ತು ಅವರ ಮಕ್ಕಳಾದ ಲಕ್ಷಿ$ಱ್ಪಕಾಂತ ಹಾಗೂ ಚಂದ್ರಕಾಂತ ರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ನೆರೆಕೆರೆಯಲ್ಲಿ ವಾಸವಿದ್ದ ಸಹೋದರರಾದ ನಾರಾಯಣ ನಾಯ್ಕ ಹಾಗೂ ನಾಗರಾಜ್ ನಾಯ್ಕ ನಡುವೆ ದಾರಿ ವಿಚಾರದಲ್ಲಿ ಮನಸ್ತಾಪವಿತ್ತು. ಮೇ.೫ರಂದು ನಾರಾಯಣ ಅವರು ತೋಟಕ್ಕೆ ನೀರು ಹಾಯಿ ಸುವಾಗ ಕ್ಷುಲ್ಲಕ ಕಾರಣಕ್ಕೆ ಅವರ ಸೋದರ ನಾಗರಾಜ ನಾಯ್ಕ ಹಾಗೂ ಅವರ ಮಕ್ಕಳು ಜಗಳಕ್ಕಿಳಿದರು. ಈ ಹಿಂದಿನ ಸಿಟ್ಟನ್ನು ಆ ವೇಳೆ ನಾಗರಾಜ ನಾಯ್ಕ ಪ್ರದರ್ಶಿಸಿದಾಗ ಜಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಶಿರೂರಿನಲ್ಲಿರುವ ಪೋಲಿಸ್ ಚೆಕ್‌ಪೋಷ್ಟ್ ಪಕ್ಕದ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಸುಮಾರು ೬೦ ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದ್ದು, ಕಂದು ಬಣ್ಣದ ಶರ್ಟ್ ಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಕುತ್ತಿಗೆಯಲ್ಲಿ ತಾಯತ ಕಟ್ಟಿದ ಕಪ್ಪು ಬಣ್ಣದ ನೂಲು ಇದೆ. ಬಿಸಿಲಿನ ತಾಪಕ್ಕೆ, ಯಾವುದಾದರು ಕಾಯಿಲೆಯಿಂದ ಅಥವಾ ಹೃದಯಾಘಾತದಿಂದ ದಾರಿ ಮಧ್ಯದಲ್ಲಿ ಬಿದ್ದು ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ. ಶಿರೂರು ಗ್ರಾಪಂ ಸದಸ್ಯ ರಘುರಾಮ ಪೂಜಾರಿ ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಮೃತವ್ಯಕ್ತಿಯ ಗುರುತು ಇದ್ದವರು ಬೈಂದೂರು ಠಾಣೆಗೆ(೦೮೨೫೪-೨೫೧೦೩೩) ತಿಳಿಸುವಂತೆ ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ತಿಳಿಸಿದ್ದಾರೆ,

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಸಮೀಪದ ಕಮಲಶಿಲೆ ಗ್ರಾಮದ ಭಟ್ಕಳಮಕ್ಕಿಯಲ್ಲಿ ರಸ್ತೆಯ ವಿಚಾರವಾಗಿ ಕುಟುಂಬಿಕರ ನಡುವೆ ನಡೆದ ತಕರಾರಿಗೆ ಸ್ವಂತ ತಮ್ಮನೇ ತನ್ನ ಮಕ್ಕಳೊಂದಿಗೆ ಅಣ್ಣನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆಣ್ಣನಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬುಧವಾರ ಸಂಭವಿಸಿದೆ. ನಾರಾಯಣ ನಾಯ್ಕ (೬೦) ತಮ್ಮ ಹಾಗೂ ತಮ್ಮನ ಮಕ್ಕಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದವರು. ನಾರಾಯಣ ನಾಯ್ಕ ಅವರ ಕೊಲೆಗೆ ಕಾರಣರು ಎನ್ನಲಾದ ಆರೋಪಿಗಳಾದ ನಾಗರಾಜ ನಾಯ್ಕ ಮತ್ತು ಅವರ ಮಕ್ಕಳಾದ ಲಕ್ಷಿ$ಱ್ಪಕಾಂತ ಹಾಗೂ ಚಂದ್ರಕಾಂತ ರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ನೆರೆಕೆರೆಯಲ್ಲಿ ವಾಸವಿದ್ದ ಸಹೋದರರಾದ ನಾರಾಯಣ ನಾಯ್ಕ ಹಾಗೂ ನಾಗರಾಜ್ ನಾಯ್ಕ ನಡುವೆ ದಾರಿ ವಿಚಾರದಲ್ಲಿ ಮನಸ್ತಾಪವಿತ್ತು. ಮೇ.೫ರಂದು ನಾರಾಯಣ ಅವರು ತೋಟಕ್ಕೆ ನೀರು ಹಾಯಿ ಸುವಾಗ ಕ್ಷುಲ್ಲಕ ಕಾರಣಕ್ಕೆ ಅವರ ಸೋದರ ನಾಗರಾಜ ನಾಯ್ಕ ಹಾಗೂ ಅವರ ಮಕ್ಕಳು ಜಗಳಕ್ಕಿಳಿದರು. ಈ ಹಿಂದಿನ ಸಿಟ್ಟನ್ನು ಆ ವೇಳೆ ನಾಗರಾಜ ನಾಯ್ಕ ಪ್ರದರ್ಶಿಸಿದಾಗ ಜಗಳ…

Read More

ಕುಂದಾಪ್ರ ಡಾಟ್ ಕಾಂ | ಬೈಂದೂರು ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮಹಾ  ರಥೋತ್ಸವದ ವಿಶೇಷ ಚಿತ್ರಗಳು. | ಸುನಿಲ್ ಹೆಚ್. ಜಿ. ಬೈಂದೂರು. ► ಬೈಂದೂರು ಹಬ್ಬ – ಶ್ರೀ ಸೇನೇಶ್ವರ ಮನ್ಮಹಾ ರಥೋತ್ಸವದ ಸಂಭ್ರಮ – http://kundapraa.com/?p=13955 .

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಕುಂದಾಪುರ: ತಾಲೂಕಿನ ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಿದ ಕರ್ನಾಟಕದ ಮೊದಲ ನಕ್ಷತ್ರಾಕಾರದ ಚರ್ಚ್ ಎಂಬ ಖ್ಯಾತಿಗೆ ಪಾತ್ರವಾಗಿರುವ ‘ಸಂತ ಫ್ರಾನ್ಸಿಸ್ ಆಸಿಸಿ ಚರ್ಚ್’ ಮೇ 12ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಅತಿ ವಂದನೀಯ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಲೋಕಾರ್ಪಣೆಗೊಳಿಸಿ ಕೃತಜ್ಞಾತ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಕರ್ನಾಟಕದ ಮೊದಲ ನಕ್ಷತ್ರಾಕಾರದ ಚರ್ಚ್: ಕ್ರೈಸ್ತ ಧರ್ಮಿಯರಲ್ಲಿ ನಕ್ಷತ್ರ ಆರಾಧನೆಗೆ ವಿಶೇಷ ಸ್ಥಾನವಿದೆ. ಯೇಸುವಿನ ಜನನದ ವಾರ್ತೆಯನ್ನು ನಕ್ಷತ್ರದ ಮೂಲಕವೇ ಪಂಡಿತರಿಗೆ ತಲುಪಿಸಲಾಗಿತ್ತು ಎಂಬ ಐತಿಹ್ಯ ನಕ್ಷತ್ರಕ್ಕೆ ಪವಿತ್ರ ಸ್ಥಾನವನ್ನೊದಗಿಸಿದೆ. ಇದೇ ಕಾರಣದಿಂದ ತಲ್ಲೂರಿನಲ್ಲಿ ಸಂತ ಫ್ರಾನ್ಸಿಸ್ ಅಸಿಸಿ ಚರ್ಚ್ ಮರುನಿರ್ಮಾಣ ಮಾಡುವಾಗ ನಕ್ಷಾತ್ರಕಾರದ ವಿನ್ಯಾಸವನ್ನು ಅಳವಡಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವಿನ್ಯಾಸವನ್ನು ಹೊಂದಿದ ಪ್ರಥಮ ಚರ್ಚ್ ಎಂಬ ಹೆಗ್ಗಳಿಕೆಗೆಗೂ ಪಾತ್ರವಾದಂತಾಗಿದೆ. ಚರ್ಚಿನ ಒಳಭಾಗದಲ್ಲಿಯೂ ಸುತ್ತಲೂ ನಕ್ಷತ್ರದ ಆಕಾರಗಳು ಕಂಗೊಳಿಸುತ್ತಿದ್ದು, ಸಂಪೂರ್ಣ ಚರ್ಚಿನ ವಿನ್ಯಾಸ ಮನಸೂರೆಗೊಳಿಸುವಂತಿದೆ. ಚರ್ಚಿನ ಒಳಗೆ ವಿಸ್ತಾರವಾದ ಬಲಿಪೀಠವನ್ನು ನಿರ್ಮಿಸಲಾಗಿದ್ದು, ಬಲಿಪೀಠದ ಎರಡು…

Read More

ಕುಂದಾಪ್ರ ಡಾಟ್ ಕಾಂ ಮುಂಬೈ ವರದಿ: ಶ್ರೀ ಮಹಾವಿಷ್ಣು ಬಂಟ ಯಕ್ಷ ಕಲಾವೇದಿಕೆಯ ವಾರ್ಷಿಕೋತ್ಸವ ಮತ್ತು ಸ್ನೇಹಕೂಟದ ಸಮಾರಂಭ ಇತ್ತಿಚೆಗೆ ಮುಂಬೈ ಬಂಟರ ಸಂಘದಲ್ಲಿ ಜರುಗಿತು. ಸಮಾರಂಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ, ತೆಂಕು ಮತ್ತು ಬಡಗು ತಿಟ್ಟುಗಳ ಭಾಗವತ, ಉದ್ಯಮಿ ಕುಂದಾಪುರದ ದೇವಲ್ಕುಂದ ಭಾಸ್ಕರ ಶೆಟ್ಟಿ ಅವರಿಗೆ ದಿವಂಗತ ಕಣಂಜಾರು ಆನಂದ ಶೆಟ್ಟಿ ಸ್ಮರಣಾರ್ಥ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಂಟರವಾಣಿ ಸಂಪಾದಕರಾದ ಅಶೋಕ ಪಕ್ಕಳರವರು ನಿರೂಪಿಸಿದರು. ಬಂಟರ ಸಂಘದ ಅದ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿರವರು ಸ್ವಾಗತಿಸಿದರು. ಸಮಿತಿ ಕಾರ್ಯಧ್ಯಕ್ಷರಾದ ರವೀಂದ್ರನಾಥ ಭಂಡಾರಿಯವರು ಧನ್ಯವಾದ ಸಮರ್ಪಿಸಿದರು..

Read More