ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ನೀಡಲಾಗುತ್ತಿರುವ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯು ಕುಂದಾಪುರ ತಾಲೂಕಿನ ಗೊಳಿಹೊಳೆ ಗ್ರಾಮ ಚುಚ್ಚಿಯ ದೀಪಕ್ ಶೆಟ್ಟಿ ಅವರಿಗೆ ಲಭಿಸಿದೆ. ಪ್ರಸ್ತತ ಕತಾರ್‌ನಲ್ಲಿ ವಾಸಿಸುತ್ತಿರುವ ದೀಪಕ್ ಶೆಟ್ಟಿ ಅವರ ಸಾಮಾಜಿಕ ರಂಗದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕರ್ನಾಟಕ ಸಂಘ ಕತಾರ್‌ನ ಸಲಹಾ ಸಮಿತಿ ಅಧ್ಯಕ್ಷರಾಗಿರುವ ದೀಪಕ್ ಶೆಟ್ಟಿ, 2013-15ರ ಸಾಲಿನಲ್ಲಿ ಕತಾರ್ ಕರ್ನಾಟಕ ಸಂಘದ ಅಧ್ಯಕ್ಷರಾಗಿ, ಅದಕ್ಕೂ ಹಿಂದಿನ ಅವಧಿಯಲ್ಲಿ ಸಂಘದ ಕಾರ್ಯದರ್ಶಿಯಾಗಿ, ಕ್ರೀಡಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಒಂದು ದಶಕಗಳಿಂದ ಕತಾರಿನಲ್ಲಿ ನೆಲೆಸಿರುವ ಇವರು ಉದ್ಯೋಗದೊಂದಿಗೆ ತುಳುಕೂಟ, ಬಂಟರ ಸಂಘ, ಭಾರತೀಯ ಸಾಂಸ್ಕ್ರತಿಕ ಕೇಂದ್ರ, ಇಂಡಿಯನ್ ಕಮ್ಯುನಿಟಿ ಬೆನವೊಲಂಟ್ ಪೋರಮ್ ಮುಂತಾದ ಸಂಘ-ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ. ಬಡ ಮಕ್ಕಳ ಹೃದಯ ಚಿಕಿತ್ಸೆಗೆ ಸಹಕಾರ, ಶಾಲೆ, ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಸಹಾಯ ಧನ ಹೀಗೆ ಹಲವು ತೆರನಾಗಿ ಸಾಮಾಜಿಕ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಂದಾಪುರ ತಾಲೂಕಿನ ಜಪ್ತಿಯ ಅನುರಾಧ (೨೩) ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಕಾಲೇಜಿನ ಹಾಸ್ಟೆಲ್‌ನಲ್ಲಿ ಯಾರೂ ಇಲ್ಲದ ಸಂದರ್ಭ ತಾನಿದ್ದ ಕೊಠಡಿಗೆ ಬಾಗಿಲು ಹಾಗಿಕೊಂಡು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಜಪ್ತಿಯ ಜನತಾ ಕಾಲೋನಿಯ ನಿವಾಸಿ ಎಂದು ತಿಳಿದು ಬಂದಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಾಲಗಳು ಮನುಷ್ಯ ಹಾಗೂ ದೇವರ ಸಂಪರ್ಕ ಮಾರ್ಗವಿದ್ದಂತೆ. ಅದು ಸ್ವರ್ಗದ ದಾರಿಯನ್ನು ತೆರೆದಿಡುತ್ತದೆ. ಆದರೆ ಆ ದಾರಿಯಲ್ಲಿ ನಡೆಯಲು ಶುದ್ಧ ಮನಸ್ಸು ಹಾಗೂ ಶ್ರದ್ಧೆ ಇರಬೇಕು ಎಂದು ಉಡುಪಿ ಧರ್ಮ ಪ್ರಾಂತ್ಯದ ಬಿಶಪ್ ಅತಿ ವ| ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಕ್ಷತ್ರಾಕಾರದ ಸಂತ ಫ್ರಾನ್ಸಿಸ್ ಅಸ್ಸಿಸ್ ಚರ್ಚ್ ಲೊಕಾರ್ಪಣೆಗೊಳಿಸಿ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದ ಬಳಿಕ ಅವರು ಸಂದೇಶವಿತ್ತರು. ೪೦ ಕ್ಕೂ ಅಧಿಕ ಧರ್ಮಗುರುಗಳು ಮತ್ತು ಸಹಸ್ರಾರು ಭಕ್ತಾಧಿಗಳೊಂದಿಗೆ ಪವಿತ್ರ ಬಲಿದಾನದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸಚಿವ ವಿನಯ ಕುಮಾರ್ ಸೊರಕೆಯವರೊಡನೆ ಬಿಷಪರು ಗಿಡನೆಟ್ಟು ಮಾತನಾಡಿ ಸಂತ ಫ್ರಾನ್ಸಿಸ್ ಅಸಿಸಿ ಅವರ ಪರಿಸರ ಕಾಳಜಿ ಇಂದಿಗೂ ಸ್ಮರಣೀಯ. ಕ್ಯಾಥೋಲಿಕ್ ಧರ್ಮಗುರುಗಳು ಚರ್ಚ್‌ನೊಂದಿಗೆ ಶಾಲೆಗಳನ್ನು ನಿರ್ಮಿಸಿ ನಿಸ್ವಾರ್ಥ ಸೇವೆಗೈಯುವುದು ಶ್ಲಾಘನೀಯ ಎಂದರು. ಬೈಂದೂರು ಶಾಸಕ ಗೋಪಾಲ ಪೂಜಾರಿ ಇಗರ್ಜಿಯ ಸ್ಮಾರಕ ಪುರವಣಿಗೆಯನ್ನು ಉದ್ಘಾಟಿಸಿದರು. ವಲಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಂಪ್ರದಾಯಿಕ ಶಿಕ್ಷಣದಲ್ಲಿ ಶಿಕ್ಷಕರ ಬೋಧನಾ ನಿರ್ವಹಣೆ ಸರಳ ಸ್ವರೂಪದ್ದಾಗಿರುತ್ತದೆ. ಅವರಿಗೆ ಸಿದ್ಧ ಪಠ್ಯ ಮತ್ತು ಸ್ವೀಕೃತ ಕಲಿಕಾ-ಬೋಧನಾ ವಿಧಾನದ ನೆರವು ಇರುತ್ತದೆ. ಆದರೆ ಬುಡಕಟ್ಟು ಮಕ್ಕಳಿಗೆ ಅವರ ಬದುಕಿನ ವಿಧಾನಗಳನ್ನೇ ಆಕರವಾಗಿ ಬಳಸಬೇಕಾಗಿರುವುದರಿಂದ ಅವರ ಶಿಕ್ಷಕರಿಗೆ ಅದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಅದಕ್ಕೆ ವಿಶೇಷ ಸಾಮರ್ಥ್ಯ ಅಗತ್ಯ. ಆ ಸಾಮರ್ಥ್ಯ ಪ್ರಸಕ್ತ ತರಬೇತಿಯಲ್ಲಿ ಅವರು ಸಂಪಾದಿಸಲಿ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಆಶಿಸಿದರು. ಇಂಡಿಯ ಫೌಂಡೇಶನ್ ಫಾರ್ ಆರ್ಟ್ಸ್ ಟೈಟನ್ ಕಂಪನಿಯ ಪ್ರಾಯೋಜಕತ್ವದಲ್ಲಿ ಕನ್ಯಾನದ ನಮ್ಮಭೂಮಿಯಲ್ಲಿ ನಡೆಸುತ್ತಿರುವ ನಾಲ್ಕು ದಿನಗಳ ’ಪಠ್ಯಕ್ರಮದಲ್ಲಿ ಸ್ಥಳೀಯ ಸಂವೇದನೆಗಳ ಸಮನ್ವಯ’ ಕುರಿತಾದ ’ಕಲಿ-ಕಲಿಸು’ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿದ ಬಳಿಕ ಮಾತನಾಡಿದರು. ಆರಂಭಿಕ ನುಡಿಗಳನ್ನಾಡಿದ ಶಿಬಿರದ ನಿರ್ದೇಶಕ, ಫೌಂಡೇಶನ್‌ನ ಕಲಾ ಶಿಕ್ಷಣ ವಿಭಾಗದ ಕಾರ್ಯಕ್ರಮ ನಿರ್ವಾಹಕ ಟಿ. ಎನ್. ಕೃಷ್ಣಮೂರ್ತಿ ’ಕಲಿ-ಕಲಿಸು’ ತರಬೇತಿಯ ವಿನ್ಯಾಸವನ್ನು ವಿವರಿಸಿದರು. ಮೈಸೂರು ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಗಳಲ್ಲಿ ದುಡಿಯುತ್ತಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತೀರ್ವ ಪೈಪೋಟಿಯಿರುವ ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ. ಇಂತಹ ಪೈಪೋಟಿಯ ಕಾಲದಲ್ಲಿಯೂ ಸಹ ನಾವು ಯಶಸ್ವಿಯಾಗಿ ಉದ್ಯೋಗ ಪಡೆದುಕೊಳ್ಳಲು ಅವಶ್ಯವಾಗಿ ರೂಪಿಸಿಕೊಳ್ಳಬೇಕಾದ ವ್ಯಕ್ತಿತ್ವ, ಸಂದರ್ಶನಕ್ಕೆ ಹಾಜರಾಗುವ ಕ್ರಮ, ವಿಷಯ ಮಂಡನೆಯ ರೀತಿ, ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಬಗೆಯ ಕುರಿತು ಮಂಗಳೂರಿನ ಶ್ರೀನಿವಾಸ ಇನ್ಸ್‌ಟ್ಯೂಟ್‌ನ ಪ್ರಾಧ್ಯಾಪಕ ಪ್ರೊ. ಸುಬ್ರಹ್ಮಣ್ಯ ಸಂದರ್ಶನದ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಬೈಂದೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಈ ಕಾರ‍್ಯಕ್ರಮವನ್ನು ಡಾ. ಉಮೇಶ್ ಮಯ್ಯ ಸಂಯೋಜಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ ಮೇಳಿ ಉಪಸ್ಥಿತರಿದ್ದರು. ಅಂತಿಮ ಬಿ.ಕಾಂ ವಿದ್ಯಾರ್ಥಿನಿ ಕೆ.ಅಂಕಿತಾ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗ್ರಾಮ ಪಂಚಾಯತುಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೇಂದ್ರಿಕೃತ ಸ್ಥಾನವಾಗಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಜನರ ಕೆಲಸಗಳನ್ನು ಸೂಕ್ತ ಸಮಯದಲ್ಲಿ ಮಾಡಿಕೊಟ್ಟಾಗ ಜನರಿಗೆ ಪಂಚಾಯತ್ ಮೇಲೆ ನಂಬಿಕೆ, ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯತ್ ಸದಸ್ಯರು ಪಕ್ಷಬೇಧ ಮರೆತು ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ನೂತನ ಕಾರ್ಯಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪಂಚಾಯತ್‌ನಲ್ಲಿ ಮುಂದಿನ ಐದು ವರ್ಷದ ಯೋಜನೆ ರೂಪಿಸಬೇಕು. ಅಭಿವೃದ್ಧಿ ನೀಲಿನಕ್ಷೆಯನ್ನು ತಯಾರಿಸಿ ಜನಪ್ರತಿನಿಧಿಗಳ ಮೂಲಕ ಯೋಜನೆ ಕಾರ್ಯರೂಪಕ್ಕೆ ಬರಲು ಶ್ರಮಿಸಬೇಕು. ಅನುದಾನ ಹಂಚಿಕೊಳ್ಳುವ ಪದ್ಧತಿಯನ್ನು ತೆಗೆದುಹಾಕಿ, ಗ್ರಾಮದ ಅಭಿವೃದ್ಧಿಗೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಬೇಕು ಎಂದರು. ಜನಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಗಂಗೊಳ್ಳಿ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸರಕಾರ ಸಮ್ಮತಿ ಸೂಚಿಸಿಲ್ಲ. ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯನ್ನು ೫೪ ಲಕ್ಷ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಭರತ ಖಂಡದ ಉದ್ದಗಲಕ್ಕೂ ಸಂಚರಿಸಿ ಧಾರ್ಮಿಕ ಮತ್ತು ಸಾಂಸ್ಕ್ರತಿಕ ತಳಹದಿಯಲ್ಲಿ ಸಮನ್ವಯತೆ, ಏಕತೆಯನ್ನು ಸಾಧಿಸುವಲ್ಲಿ ಶ್ರೀಶಂಕರ ಭಗವತ್ಪಾದರ ಕೊಡುಗೆ ಅಪಾರ. ಶಂಕರಾಚಾರ್ಯರ ಜನ್ಮ ದಿನವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುವುದು ಅವರನ್ನು ಅವತಾರಿ ಪುರುಷರೆಂದು ದಿನನಿತ್ಯ ಅವರ ಸಾಧನೆಗಳನ್ನು ನೆನಪಿಸುವುದು ನಮ್ಮೆಲ್ಲರ ಕೃತಜ್ಞತೆಯ ದ್ಯೋತಕವಾಗಿದೆ ಎಂದು ಕರ್ನಾಟಕ ರಾಜ್ಯ ಶಂಕರ ತತ್ತ್ವ ಪ್ರಸಾರ ಅಭಿಯಾನಂನ ಸಂಚಾಲಕ ಡಾ. ಶಿಕಾರಿಪುರ ಕೃಷ್ಣಮೂರ್ತಿಯವರು ನುಡಿದರು. ಉಪ್ಪುಂದ ಶಂಕರ ಕಲಾ ಮಂದಿರದಲ್ಲಿ ನಡೆದ ಶ್ರೀಶಂಕರ ಅಷ್ಟೋತ್ತರ ಶತನಾಮಾವಳಿ ಜಪಯಜ್ಞ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವ ಪರಂಪರೆ ಮತ್ತು ಸಂಸ್ಕಾರ ವಿಶೇಷತೆಗಳ ಪರಿಚಯ ಮತ್ತು ಅನುಷ್ಠಾನಗಳಿಗಾಗಿ ತಳಮಟ್ಟದಲ್ಲಿ ಧರ್ಮಾಭಿಮಾನಿಗಳು ಸಂಘಟಿತರಾಗಿ ಕ್ರಿಯಾಶೀಲರಾಗುವುದು ಅವಶ್ಯ. ವೇದ ಸಾಹಿತ್ಯ, ದರ್ಶನ ಸಾಹಿತ್ಯ ಮತ್ತು ಆಚಾರ ಸಂಹಿತೆಗಳ ಪ್ರಸ್ತುತತೆ ಕುರಿತು ಚಿಂತನ-ಮಂಥನದಿಂದ ಪ್ರಜ್ಞಾವಂತ ಸಮಾಜದ ನಿರ್ಮಾಣ ಸಾಧ್ಯ ಎಂದರು. ಉಪ್ಪುಂದ ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಉಪ್ಪುಂದದ ಸ್ವಗೃಹದಲ್ಲಿ ಹದಿಮೂರು ಶಾಖಂ ಋಕ್ ಸಂಹಿತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಬಸವಣ್ಣನವರು ಜಾತ್ಯಾತೀತ ಸಮಾಜ ನಿರ್ಮಾಣ ಮಾಡಲು ಹೊರಟ ಮಹಾನ್ ದಾರ್ಶನಿಕ. ಸಾಮಾಜಿಕ ನ್ಯಾಯ, ವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳು, ಸಮಾನತೆ ಮತ್ತು ವಿಶ್ವ ಬಂಧುತ್ವದ ವಿಚಾರಗಳನ್ನು ಬಹಳ ಗಂಭೀರವಾಗಿ ಪ್ರತಿಪಾದಿಸಿದ ಬಸವಣ್ಣನವರ ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು. ಅವರು ಸೋಮವಾರ ಮೇಲ್‌ಗಂಗೊಳ್ಳಿಯ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿದ ಶ್ರೀ ಬಸವೇಶ್ವರ ದೇವಸ್ಥಾನದ ಶ್ರೀ ಬಸವೇಶ್ವರ ಬಾಲಕರ ಭಜನಾ ತಂಡದ ದಶಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ಆರ್ಥಿಕ ಸಮಾನತೆ ಬಂದಾಗ ಸಾಮಾಜಿಕ ಪರಿವರ್ತನೆ ಬರುತ್ತದೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಬಹಳಷ್ಟು ಪ್ರಗತಿ ಕಂಡಿದ್ದು, ಜನಸಂಖ್ಯಾ ಸ್ಪೋಟದ ಪರಿಣಾಮ ಅಭಿವೃದ್ಧಿ ಕುಂಠಿತಗೊಂಡಿದೆ. ಹೀಗಾಗಿ ಜನಸಾಮಾನ್ಯರು ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಜನಪ್ರತಿನಿಧಿಗಳು ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಂಘ ಸಂಸ್ಥೆಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಈ ಪರಿಸರದಲ್ಲಿ ಅನಾಥರಾಗಿ ಅಲೆದಾಡುತ್ತಿದ್ದ ಐವರನ್ನು ಪಾಸ್ಟರ್ ಸುನಿಲ್ ಡಿಸೋಜ ನೇತೃತ್ವದ ಶಂಕರಪುರದ ವಿಶ್ವಾಸದ ಮನೆ ಕಾರ್ಯಕರ್ತರು ಬುಧವಾರ ನಡೆಸಿದ ಮಾನವೀಯ ಕಾರ್ಯಾಚರಣೆಯಲ್ಲಿ ವಿಶ್ವಾಸದ ಮನೆಗೆ ಸೇರಿಸಲಾಯಿತು. ಇಬ್ಬರು ವೃದ್ಧೆಯರು ಬೈಂದೂರು ಬಸ್‌ಸ್ಟ್ಯಾಂಡ್ ಬಳಿ, ೪೦-೪೫ ವಯೋಮಾನದ ಒಬ್ಬ ಗಂಡಸು ಬೈಪಾಸ್ ಹತ್ತಿರ, ಒಬ್ಬ ವೃದ್ಧ ಶಿರೂರು ಗ್ರೀನ್‌ವ್ಯಾಲಿ ಶಾಲೆಯ ಸನಿಹ, ಒಬ್ಬ ಯುವಕ ಶಿರೂರು ಪೇಟೆಯಲ್ಲಿ ಅಲೆದಾಡುತ್ತಿದ್ದರು. ಕಾರ್ಯಾಚರಣೆಯಲ್ಲಿ ವಿಶ್ವಾಸದ ಮನೆಯ ಮುಖ್ಯಸ್ಥ ಪಾಸ್ಟರ್ ಸುನಿಲ್ ಡಿಸೋಜ ಜತೆ ಎಲಿಜಬೆತ್ ಡಿಸೋಜ, ಪ್ರದೀಪ ಮಾಬೆನ್, ಸಿಬ್ಬಂದಿಗಳಾದ ನವೀನ್, ಆಲ್ವಿನ್, ಪ್ರೇಮಾ ಲೋಬೊ, ಪ್ರಫುಲ್ಲಾ ಲೋಬೊ ಇದ್ದರು. ಗಂಗೊಳ್ಳಿಯ ಸಾಮಾಜಿಕ ಕಾರ್ಯಕರ್ತ ’ಗಂಗೊಳ್ಳಿ 24×7’ ಸೇವೆಯ ಇಬ್ರಾಹಿಂ ಗಂಗೊಳ್ಳಿ ತಮ್ಮ ಅಂಬ್ಯುಲನ್ಸ್ ಸಹಿತ ಕೈಜೋಡಿಸಿದರು.
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಇನ್ನೆಂದೂ ಅ ಮನೆಯಂಗಳದಲ್ಲಿ ಮಕ್ಕಳ ಕಲರವ ಕೇಳಿಸಲಾರದು. ಆ ಮಕ್ಕಳೇ ಕಟ್ಟಿದ ಜೋಕಾಲಿ ಜೀಕಲಾರದು, ಅಲ್ಲಲ್ಲಿ ಅನಾಥವಾಗಿ ಬಿದ್ದಿರುವ ಆಟಿಕೆಗಳು ಸದ್ದು ಮಾಡಲಾರವು. ಸದಾ ಕಾಲ ಮಕ್ಕಳನ್ನು ಕರೆಯುತ್ತಿದ್ದ ತಂದೆಯ ಸ್ವರವೂ ಕೇಳಲಾರದು. ಹಕ್ಕಿಗಳು ಚಿಲಿಪಿಲಿ ಗುಟ್ಟಲಾರವು, ಅಬ್ಬಾ ವಿಧಿಯೇ ನೀನಿಷ್ಟು ಕಠೋರಿಯೇ? ಹಾಗಂತ ಅಲ್ಲಿ ನೆರೆದ ಪ್ರತಿಯೋರ್ವರ ಗಂಟಲಿನಲ್ಲಿ ಸದ್ದಿಲ್ಲದೆ ನಿಟ್ಟುಸಿರೊಂದು ಹೊರಹೊಮ್ಮಿತ್ತು. ಕಣ್ಣಂಚಿನಲ್ಲಿ ಇನ್ನಿಲ್ಲದ ದು:ಖವೊಂದು ಮಡುಗಟ್ಟಿ ನಿಂತಿತ್ತು. ಅಯ್ಯೋ.. ದೇವರೇ ನನ್ನನ್ಯಾಕೆ ಉಳಿಸಿಹೋದೆ ಅದೆಂಥಾ ಪಾಪಕ್ಕೆ ನನಗೇ ಈ ಶಿಕ್ಷೆ ನನ್ನನ್ನೂ ಸಹಾ ಕರೆದು ಕೊ. ಅಂತಾ ಆ ಹೆತ್ತೊಡಲು ಮರುಗುತ್ತಿದ್ದರೇ, ಓಹ್ ಬದುಕೇ ನಿನ್ಯಾಕೆ ಆ ಕುಟುಂಬದ ಪಾಲಿಗೆ ಇಷ್ಟೊಂದು ನಿಷ್ಕರುಣಿಯಾಗಿ ಹೋದೆ. ಎನ್ನುವ ಪ್ರಶ್ನೆ ಅಲ್ಲಿ ಮತ್ತೇ ಮತ್ತೇ ಮಗ್ಗಲು ಬದಲಿಸುತ್ತಿತ್ತು. ಆ ಮನೆಯ ಸಮೀಪದ ತೋಟದ ಕೆರೆಯೊಂದರ ದಂಡೆಯ ಮೇಲೆ ಇಬ್ಬರು ಪುಟ್ಟ ಗಂಡು ಮಕ್ಕಳ ಸಹಿತ ತಂದೆಯೋರ್ವನ ಶವಗಳು ಉದ್ದಕ್ಕೂ ಮೈಚೆಲ್ಲಿದ್ದುದು ಈ ಎಲ್ಲಾ ಸನ್ನಿವೇಶಗಳಿಗೆ…
