Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ.ಎ.18: ಸದ್ಯದಲ್ಲೇ ಹಸೆಮಣೆ ಏರಬೇಕಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ನಾಡಾ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕು ಯಾನೆ ಸುಶೀಲ ಮಡಿವಾಳ್ತಿ ಎಂಬುವವರ ಪುತ್ರ ಮಂಜುನಾಥ ನಾಡ (26) ನೇಣಿಗೆ ಶರಣಾದ ಯುವಕ. ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದ ಮಂಜುನಾಥನಿಗೆ ಕೆಲವು ತಿಂಗಳುಗಳ ಹಿಂದಷ್ಟೇ ಕೆದೂರಿನ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮೇ.2ರಂದು ಮದುವೆ ನಡೆಯುವುದಿತ್ತು. ಆ ಕಾರಣದಿಂದಾಗಿ ಊರಿನಲ್ಲಿಯೇ ಇದ್ದ ಮಂಜುನಾಥ ಸೋಮವಾರ ಏಕಾಏಕಿ ನಾಪತ್ತೆಯಾಗಿದ್ದರಿಂದ ಹುಡುಕಾಟ ನಡೆಸಿದಾಗ ಮನೆಯ ಸಮೀಪದ ಹಾಡಿಯೊಂದರಲ್ಲಿ ನೇಣು ಬಿಗಿದುಕೊಂಡಿರುವುದು ತಿಳಿದುಬಂದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮದುವೆ ತಯಾರಿಯಲ್ಲಿದ್ದ ಯುವಕ ಏಕಾಏಕಿ ಆತ್ಮಹತ್ಯೆ ನಿರ್ಣಯ ಕೈಗೊಂಡಿರುವುದು ಅವರ ಬಂಧುಗಳು ಹಾಗೂ ಸ್ನೇಹಿತರನ್ನು ಆತಂಕಕ್ಕೆ ನೂಕಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. / ಕುಂದಾಪ್ರ ಡಾಟ್ ಕಾಂ ಸುದ್ದಿ.

Read More

ಕುಂದಾಪ್ರ ಡಾಟ್ ಕಾಂ ನೋಟ್. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎ.25ರಂದು ವಿಕಲಚೇತನರ ಸಮಾವೇಶ, ಪ್ರತಿಭಾ ಹಾಗೂ ಕೌಶಲ್ಯ ಅನಾವರಣದ ಕುರಿತು ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ತಿಳಿಸಿದ್ದಾರೆ. ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಲಾಂಚನ, ಅಮಂತ್ರಣ ಪತ್ರಿಕೆ ಹಾಗೂ ಸರಕಾರದ ಸೌಲಭ್ಯಗಳ ಮಾಹಿತಿಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ವಿಕಲಚೇತನರ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು, ಅವರಲ್ಲಿರುವ ಸುಪ್ತ ಪ್ರತಿಭೆ ಮತ್ತು ಕೌಶಲವನ್ನು ಗುರುತಿಸಿ ಪ್ರೋತ್ಸಾಹಿಸಲು ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವುದು ಕಾರ್ಯಕ್ರಮ ಆಯೋಜನೆಯ ಉದ್ದೇಶ. ವಿಕಲಚೇತನರ ಪ್ರತಿಭಾ ಪ್ರದರ್ಶನ ಮತ್ತು ಅವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮವನ್ನು ಯುವ ಉದ್ಯಮಿ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾದಿಕಾರಿಗಳಾದ ಹೆಚ್ ಶಾಂತಾರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಪಾಂಡುರಂಗ ಶಾನುಭೋಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ 11ನೆ ಉಳ್ಳೂರು ಗ್ರಾಮದ ಉಪ್ರಳ್ಳಿಯ ಜನಾರ್ದನ ದೇವಸ್ಥಾನವು ಸುಮಾರು 1300ವರ್ಷಗಳ ಹಿಂದಿನದೆಂದು ನಂಬಲಾಗುತ್ತಿದೆ. ಇದು ಮುಜರಾಯಿ ಇಲಾಖೆಯ ತಸದೀಕು ಪಡೆಯುತ್ತಿದೆ. ಪಾಣಿಪೀಠದ ಮೇಲೆ ನಿಂತ ಭಂಗಿಯಲ್ಲಿ ಪ್ರತಿಷ್ಠಾಪಿತವಾಗಿರುವ ಸಾಲಿಗ್ರಾಮ ಶಿಲೆಯ ಜನಾರ್ದನ ದೇವರ ವಿಗ್ರಹವು 3 ಅಡಿ ಎತ್ತರವಾಗಿದ್ದು, ತುಂಬ ಸುಂದರವಾಗಿದೆ. ಗರ್ಭಗುಡಿ, ಗೋಪುರ, ತೀರ್ಥಮಂಟಪ, ಹೆಬ್ಬಾಗಿಲು, ಸುತ್ತ ಪೌಳಿ, ಬಲಿಕಲ್ಲುಗಳನ್ನು ಹೊಂದಿರುವ ಈ ದೇವಾಲಯ ಒಂದು ಕಾಲದಲ್ಲಿ ಊರಿನ ಪ್ರಮುಖ ದೇವಾಲಯವಾಗಿತ್ತು. ಜೀರ್ಣಗೊಂಡ ದೇವಾಲಯವನ್ನು ಶಿಲಾಮಯವಾಗಿ ಮರುನಿರ್ಮಿಸುವ ಕಾರ್ಯ ಇದೀಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎ. 19ರಿಂದ 21ರ ವರೆಗೆ ನಡೆಯುವ ಸಮಾರಂಭದಲ್ಲಿ ಅದನ್ನು ದೇವರಿಗೆ ಸಮರ್ಪಿಸಲಾಗುವುದು. 19ರಂದು ಪ್ರತಿಷ್ಠಾಪೂರ್ವ ವಿಧಿಗಳು ನಡೆದು, ೨೦ರಂದು ದೇವರ ಪುನರ್‌ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮಕಲಶ ಸ್ಥಾಪನೆ ನಡೆಯುವುದು. 21ರಂದು ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯುವುದು. ಅದರ ಪೂರ್ವದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಬಿ. ಅಪ್ಪಣ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣ ಓದು ಬರಹಗಳಿಂದ ಗಳಿಸುವ ಜ್ಞಾನಕ್ಕೆ, ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳಿಗೆ ಸೀಮಿತವಾಗಬಾರದು. ಅದು ಸಂಸ್ಕೃತಿಯನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣಾರ್ಥಿಗೆ ಜೀವನ ಮೌಲ್ಯವನ್ನು ಕಲಿಸಬೇಕು ಎಂದು ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ ಹೇಳಿದರು. ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ  ನಡೆದ ಶೈಕ್ಷಣಿಕ ಸಭೆಯಲ್ಲಿ ಅವರು ಅಮೃತ ನುಡಿ ಆಡಿದರು.  ಪಟ್ಟಣಗಳಲ್ಲಿ, ಆಂಗ್ಲಭಾಷಾ ಮಾಧ್ಯಮದಲ್ಲಿ ಕಲಿತವರು ಮಾತ್ರ ವಿಶೇಷ ಸಾಧನೆ ಮಾಡುತ್ತಾರೆ ಎನ್ನುವುದು ಸತ್ಯವಲ್ಲ. ಹೆಚ್ಚಿನ ಸಾಧಕರು ಹಳ್ಳಿಗಳಿಂದ, ಮಾತೃಭಾಷಾ ಶಾಲೆಗಳಿಂದ ಬಂದಿದ್ದಾರೆ ಎಂದ ಅವರು ಗುಣಮಟ್ಟದ ಶಿಕ್ಷಣ ಸಾಧ್ಯ ಎನ್ನುವುದನ್ನು ಹಲವು ಮಾತೃಭಾಷಾ ಮಾಧ್ಯಮ ಶಾಲೆಗಳು ತೋರಿಸಿಕೊಟ್ಟಿವೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಸ್ವಾಗತಿಸಿದರು. ಖಂಬದಕೋಣೆಯ ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರ, ನಾವುಂದ ಸಮೂಹ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಯಕರಿಗೆಲ್ಲಾ ನಾಯಕತ್ವದ ಗುಣ ಇರಬೇಕೆಂದಿಲ್ಲ. ಆದರೆ ನಾಯಕತ್ವದ ಗುಣ ಹೊಂದಿದವರು ಖಂಡಿತ ನಾಯಕರಾಗುತ್ತಾರೆ. ಸಮಯ ಪ್ರಜ್ಞೆ ಹಾಗೂ ತಾಳ್ಮೆ ನಾಯಕತ್ವದ ಪ್ರಮುಖ ಅಂಶಗಳು. ಯಾವುದೇ ಜಾತಿ ಧರ್ಮವನ್ನಾಧರಿಸಿ ನಾಯಕತ್ವ ಗುಣ ಬೆಳೆಯುವುದಿಲ್ಲ. ಬದಲಾಗಿ ಅದು ನಮ್ಮ ಮನಸ್ಸಿನ ಮೂಲಕ ಬೆಳೆಯುತ್ತದೆ ಎಂದು ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ, ಕುಂದಾಪುರ ಪೊಲೀಸ್ ಉಪ ವಿಭಾಗದ ಉಪ ಅಧೀಕ್ಷಕ ಎಂ. ಮಂಜುನಾಥ ಶೆಟ್ಟಿ ಹೇಳಿದರು. ಅವರು ಕಾಳಾವರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಕಾಳಾವರ ಇದರ ವತಿಯಿಂದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯುವ ಮುಂದಾಳುಗಳಿಗಾಗಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಮೋಹನಚಂದ್ರ ಕಾಳಾವರ್ಕರ್ ಸಂಸ್ಥೆಯ ಧ್ಯೇಯೋದ್ಧೇಶ ಮತ್ತು ನಡೆದು ಬಂದ ದಾರಿಯನ್ನು ಸವಿಸ್ತಾರವಾಗಿ ವಿವರಿಸಿದರು. ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹಾಗೂ ಕಾಳಾವರ ಗ್ರಾಮ…

Read More

ಕುಂದಾಪುರ : ಸರಕಾರಗಳು ಜನರ ಪ್ರಗತಿಯನ್ನು ಗುರಿಯಾಗಿರಿಸಿಕೊಂಡು ಯೋಜನೆಗಳನ್ನು ರೂಪಿಸುತ್ತವೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಅವುಗಳ ಅನುಷ್ಠಾನ ಹಂತದಲ್ಲಿ ಜನರು ಕೈಜೋಡಿಸಿದರೆ ಈ ಯೋಜನೆಗಳಿಗೆ ಬಲ ಬರುತ್ತದೆ. ಈ ಮಾತಿಗೆ ಮರವಂತೆಯ ಜನರ ಉಪಕ್ರಮ ಒಂದು ಅತ್ಯುತ್ತಮ ನಿದರ್ಶನ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ನಡೆದ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಧ್ಯಕ್ಷತೆ ವಹಿಸಿ, ನೂತನ ಅಮೃತ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಮರವಂತೆ ಗ್ರಾಮ ಪಂಚಾಯತ್ ತನ್ನ ವಿಶಿಷ್ಟ ಸಾಧನೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇದೀಗ ಇಲ್ಲಿನ ಜನರು ಸರಕಾರಿ ಶಾಲೆಗೆ ಶಾಶ್ವತ ಕೊಡುಗೆಗಳನ್ನು ನೀಡುವ ಮೂಲಕ ಶಾಲೆಯ ಅಮೃತ ಮಹೋತ್ಸವವನ್ನು ಅನ್ವರ್ಥಗೊಳಿಸಿದ್ದಾರೆ. ಜನರ ಕೊಡುಗೆಗೆ ಪ್ರತಿಯಾಗಿ ಸರಕಾರವೂ ಸ್ಪಂದಿಸಲಿದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿ, ಕೆನಡಾದಲ್ಲಿ ಜೈವಿಕ ತಂತ್ರಜ್ಞಾನ ವಿಜ್ಞಾನಿಯಾಗಿರುವ ಶಾಲೆಯ ಹಿಂದಿನ ವಿದ್ಯಾರ್ಥಿ ಡಾ. ಎಂ. ಶ್ರೀನಿವಾಸ ಮಧ್ಯಸ್ಥ ಅಮೃತ ಮಹೋತ್ಸವವನ್ನು ಉದ್ಘಾಟಿಸಿದರು. ತಮ್ಮ ಬಾಲ್ಯದ ಬದುಕು, ಶಾಲೆಯಲ್ಲಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ರಾಮ ನವಮಿಯ ಪ್ರಯುಕ್ತ ನಡೆದ ಹಗಲೋತ್ಸ, ಬೆಳ್ಳಿ ಪಲ್ಲಕ್ಕಿ ಉತ್ಸವ, ರಾತ್ರಿ ಬೆಳ್ಳಿಯ ಪುಷ್ಪ ರಥ ಉತ್ಸವ ಜರಗಿತು. ನಂತರ ದೇವಳದಲ್ಲಿ ಅಷ್ಟಾವಧಾನ, ವಿಶೇಷ ವಸಂತ ಪೂಜೆ ನಡೆಯಿತು ಹಾಗೂ ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರು, ಸಮಾಜ ಭಾಂದವರು ಉಪಸ್ಥಿತರಿದ್ದರು. ವರದಿ: ರಮೇಶ್ ಭಟ್

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಸುರೇಶ್ ಗೋಪಿ ಭೇಟಿ ನೀಡಿ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 25ವರ್ಷಗಳಿಂದ ಮಳಯಾಳಂ ಚಿತ್ರರಂಗದಲ್ಲಿ ಅಭಿನಯಿಸುತ್ತಿರುವ ಸುರೇಶ್ ಗೋಪಿ, ಪೊಲೀಸ್ ಪಾತ್ರಗಳಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿ ಮಿಂಚುತ್ತಾ ಬಂದವರು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸುತ್ತಾ ಬಂದಿದ್ದ ಅವರು ಇತ್ತಿಚಿಗಷ್ಟೇ ಕೇರಳದಲ್ಲಿ ಬಿಜೆಪಿಗೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಸುರೇಶ್ ಗೋಪಿ ಕೊಲ್ಲೂರಿಗೆ ಭೇಟಿ ನೀಡಿದ ಸಂದರ್ಭ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ ಬರಮಾಡಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಮಗಳ ಮದುವೆಗೆ ಲವಲವಿಕೆಯಿಂದ ತಿರುಗಾಡುತ್ತಿದ್ದ ತಂದೆಯ ಜೀವ ಸಂಜೆಯ ವೇಳೆಗೆ ದುರಂತ ಅಂತ್ಯ ಕಂಡಿದೆ. ಕೊಲ್ಲೂರಿಗೆ ಸಮೀಪದ ಮಹಾಸತಿ ಕಟ್ಟೆಗೆ ದೀಪ ಹಚ್ಚಿ ಹಿಂತಿರುತ್ತಿದ್ದ ಕೆ. ಭಾಸ್ಕರ ಗಾಣಿಗ (54) ಅವರ ಬೈಕಿಗೆ ಕಾಡುಕೋಣ ಢಿಕ್ಕಿ ಹೊಡೆದು ತೀವ್ರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೊಲ್ಲೂರು ಹೊರವಲಯದಲ್ಲಿರುವ ಶ್ರೀ ಮಹಾಸತಿ ಕಟ್ಟೆಗೆ ಸಾಯಂಕಾಲ ಎಂದಿನಂತೆ ದೀಪಹಚ್ಚಿ ತಮ್ಮ ಬೈಕಿನಲ್ಲಿ ಹಿಂತಿರುಗುತ್ತಿದ್ದಾಗ ರಸ್ತೆಯಲ್ಲಿ ಎದುರಾದ ಕಾಡುಕೋಣ ಇವರ ಬೈಕಿಗೆ ಢಿಕ್ಕಿಹೊಡೆದು ಕಾಡಿನಲ್ಲಿ ಮರೆಯಾಗಿತ್ತು. ಬೈಕಿನೊಂದಿಗೆ ನೆಲಕ್ಕುರುಳಿ ತೀವ್ರ ಗಾಯಗೊಂಡ ಇವರನ್ನು ರಾತ್ರಿ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಎ.27ರ ಮಗಳ ಮದುವೆಗೆ ತಯಾರಿಯಲ್ಲಿದ್ದ ಕುಟುಂಬವನ್ನು ಇವರ ಅನಿರೀಕ್ಷಿತ ಸಾವು ಕಂಗೆಡಿಸಿದೆ. ಮೃತರು ಸಹೋದರ, ತಾಪಂ ಮಾಜಿ ಸದಸ್ಯ ಕೆ. ರಮೇಶ್ ಗಾಣಿಗ ಸೇರಿದಂತೆ ಪತ್ನಿ, ಪುತ್ರ, ಹಾಗೂ…

Read More

ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಗರ ಪ್ರದೇಶಗಳಲ್ಲಿ ಭಾಷೆ, ಸಂಸ್ಕೃತಿಯ ಉಳಿವು ಸಾಧ್ಯವಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಇದನ್ನು ನಿರೀಕ್ಷಿಸಬಹುದು. ಯುವಕರ ಸಂಘಟನೆಗಳು ವಾರ್ಷಿಕೋತ್ಸವಕ್ಕಷ್ಟೇ ಸೀಮಿತವಾಗಿರದೇ ತಮ್ಮೂರಿನ ಅಭಿವೃದ್ಧಿಯ ಜತೆಗೆ ಸಂಸ್ಕೃತಿ-ಸಂಪ್ರದಾಯಗಳ ಉಳಿವಿಗೂ ಪಣತೊಡಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ರಿ. ಇದರ 11ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಜರುಗಿದ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಇಪ್ಪತ್ತು ಸಾವಿರಕ್ಕೂ ಅಧಿಕ ಇತಿಹಾಸವಿರುವ ಸುಂದರ ದೇಶ ನಮ್ಮದು. ಎಲ್ಲಾ ವೈರುಧ್ಯಗಳ ನಡುವೆ ನಮ್ಮ ಹಿರಿಕರು ದೇಶವನ್ನು ಸದೃಡವಾಗಿ ಕಟ್ಟಿ ಹೋಗಿದ್ದಾರೆ. ಆದರೆ ನಾವು ಸ್ವಾತಂತ್ರ್ಯವನ್ನು ಕಂಡು ಇಷ್ಟು ವರ್ಷಗಳಾದರೂ ಜನಾಂಗ, ವಿದ್ಯೆ, ಐಶ್ವರ್ಯ ಮುಂತಾದವುಗಳಲ್ಲಿ ಅಂತರವನ್ನು ಕಾಣುತ್ತಿದ್ದೇವೆ. ನಮ್ಮನ್ನಾಳುವವರಿಂದಲೂ ಈ ಅಂತರವನ್ನು ದೂರಮಾಡಲು ಸಾಧ್ಯವಾಗಿಲ್ಲ.…

Read More