ಗುರುಕುಲ ಪಬ್ಲಿಕ್ ಸ್ಕೂಲ್ & ಪಿಯು ಕಾಲೇಜು | Gurukula Public school and PUC ಬಾಂಡ್ಯ ಎಜುಕೇಶನಲ್ ಟ್ರಸ್ಟ್ | Bhandya Education Trust ® Prospectus 2017-18 ►► ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ: ಮಕ್ಕಳ ಸರ್ವತೋಮುಖ ವಿಕಾಸದ ದಿಕ್ಸೂಚಿ – http://kundapraa.com/?p=23044 ►► ವಕ್ವಾಡಿ ಗುರುಕುಲ ಪದವಿಪೂರ್ವ ಮಹಾವಿದ್ಯಾಲಯ: ವಿದ್ಯಾರ್ಥಿಗಳಿಗೆ ಅವಕಾಶಗಳ ಆಗರ! – http://kundapraa.com/?p=23057 ಗುರುಕುಲ ಪಬ್ಲಿಕ್ ಸ್ಕೂಲ್ & ಪಿಯು ಕಾಲೇಜು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಅನುಪಮಾ ಎನ್‌ಕ್ಲೇವ್, ವಕ್ವಾಡಿ, ಕೋಟೇಶ್ವರ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ – 576257 Ph : +91 8254 262887, 311397 Mob : +91 94820 98367 Email : gurukulpublicschool@gmail.com Website : www.bhandyagurukula.com ►► ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ: ಮಕ್ಕಳ ಸರ್ವತೋಮುಖ ವಿಕಾಸದ ದಿಕ್ಸೂಚಿ – http://kundapraa.com/?p=23044 ►► ವಕ್ವಾಡಿ ಗುರುಕುಲ ಪದವಿಪೂರ್ವ ಮಹಾವಿದ್ಯಾಲಯ: ವಿದ್ಯಾರ್ಥಿಗಳಿಗೆ ಅವಕಾಶಗಳ ಆಗರ! – http://kundapraa.com/?p=23057…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಕ್ಕಳಲ್ಲಿನ ಸೃಜನಾತ್ಮಕ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಸಾಂಸ್ಕೃತಿಕ ಸಂಘಟನೆಗಳು ಹಮ್ಮಿಕೊಳ್ಳುವ ಬೆಸಿಗೆ ಶಿಬಿರಗಳು ಅವರನ್ನು ಮಾನಸಿಕವಾಗಿ ಸದೃಡರನ್ನಾಗಿಸುವುದಲ್ಲದೇ, ಶೈಕ್ಷಣಿಕ ಬೆಳವಣಿಗೆಗೂ ಪೂರಕವಾಗಿ ಪರಿಣಮಿಸುತ್ತದೆ ಎಂದು ಯಡ್ತರೆ ಗ್ರಾಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಹೇಳಿದರು. ಅವರು ಲಾವಣ್ಯ ರಿ. ಬೈಂದೂರು ಹಾಗೂ ಯಡ್ತರೆ ಗ್ರಾಪಂ ಸಹಯೋಗದೊಂದಿಗೆ ಆಯೋಜಿಸಲಾದ ರಂಗ ತರಬೇತಿ ಶಿಬಿರದಲ್ಲಿ ರೂಪುಗೊಂಡ ‘ಹೂವುಗಳು ಅರಳಲಿ’ ಹಾಗೂ ‘ನಾಣಿಭಟ್ಟನ ಸ್ವರ್ಗದ ಕನಸು’ ಮಕ್ಕಳ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಲಾವಣ್ಯದ ಅಧ್ಯಕ್ಷ ರಾಮ ಟೈಲರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಶಂಕರ ಪೂಜಾರಿ, ಬಹುಮಾನದ ಪ್ರಾಯೋಜಕ ಸದಾಶಿವ ಶಾನುಭೋಗ್, ಲಾವಣ್ಯದ ಹಿರಿಯ ಕಲಾವಿದರಾದ ಗಿರೀಶ್ ಬೈಂದೂರು, ಮಹೇಶ್ ನಾಯಕ್, ಲಾವಣ್ಯದ ಪ್ರಾಕ್ತನ ನಟಿ ಡಾ ಪ್ರತಿಭಾ ರೈ, ಲಾವಣ್ಯದ ವ್ಯವಸ್ಥಾಪಕರುಗಳಾದ ಗಣೇಶ ಕಾರಂತ್, ಶ್ರೀನಿವಾಸ ಪ್ರಭು ವೇದಿಕೆಯಲ್ಲಿದ್ದರು. ಲಾವಣ್ಯ ಕಾರ್ಯದರ್ಶಿ ಬಿ. ನರಸಿಂಹ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಆಶ್ರಯದಲ್ಲಿ ನಡೆದ ಒಂದು ದಿನದ ಎಂ.ಐ.ಟಿ.ಕೆ ಉದ್ಯೋಗ ಮೇಳ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಯಶಸ್ವಿಯಾಗಿ ನೆರವೇರಿತು. ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಎಂ.ಐ.ಟಿ.ಕೆ ಉದ್ಯೋಗ ಮೇಳ ಉದ್ಯೊಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿದ್ದು, ಈ ಸುವರ್ಣಾವಕಾಶವನ್ನ್ನು ಕಲ್ಪಿಸಿಕೊಟ್ಟ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಅಧ್ಯಕ್ಷರಾದ ಸಿದ್ದಾರ್ಥ ಜೆ. ಶೆಟ್ಟಿಯವರನ್ನು ಅಭಿನಂದಿಸಿದರು. ಮುಖ್ಯ ಅತಿಥಿ ರಮಾನಂದ ನಾಯಕ್ ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಮಾತನಾಡಿ ಮುಂದಿನ ವರ್ಷಗಳಲ್ಲಿ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜಿನ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಎಸ್. ಅಂಸಾಡಿಯವರು ಎಂ.ಐ.ಟಿ.ಕೆ ಉದ್ಯೋಗ ಮೇಳದ ಸಮಗ್ರ ಚಿತ್ರಣವನ್ನು ನೀಡಿದರು. ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಶಶಿಕಲಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಎಂ.ಐ.ಟಿ.ಕೆ ಉದ್ಯೋಗ ಮೇಳದಲ್ಲಿ 30 ಕ್ಕೂ ಹೆಚ್ಚು ಹೆಸರಾಂತ…
ಕುಂದಾಪುರದಲ್ಲೂ ರೆಸಾರ್ಟ್ ರಾಜಕಾರಣದ ನಡಿಯಿತಂತೆ! ಕುಂದಾಪುರ ಪುರಸಭೆ ಅಧ್ಯಕ್ಷರ ಪಕ್ಷದ ಬಗ್ಗೆ ವೃಥಾ ಚರ್ಚೆ. ಅಭಿವೃದ್ಧಿ ಕಾಮಗಾರಿಗಳ ಬಗೆಗಿಲ್ಲದ ಒಲವು ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ರೆಸಾರ್ಟ್ ರಾಜಕಾರಣ ಮಾಡಿ ಕುಂದಾಪುರ ಪುರಸಭೆಯ ಮಾನ ಹರಾಜು ಹಾಕಲಾಗಿದೆ. ಕೈ ಚಿನ್ನೆಯಲ್ಲಿ ಗೆದ್ದು ಬಂದು, ಈಗ ಪಕ್ಷಾಂತರ ಮಾಡಿದವರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಯಾವ ಪಕ್ಷಕ್ಕಾದರೂ ಹೋಗಲಿ. ತಾಕತ್ತಿದ್ದರೆ ರಾಜಿನಾಮೆ ಕೊಟ್ಟ ಮತ್ತೆ ಚುನಾವಣೆಗೆ ನಿಂತು ಗೆದ್ದು ಬನ್ನಿ. ಅದಕ್ಕೂ ಮೊದಲು ಅಧ್ಯಕ್ಷರು ಯಾವ ಪಕ್ಷದವರು ಅಂತ ಸ್ಪಷ್ಟ ಪಡಿಸಿ. ಹೀಗೆಂದು ಕಾಂಗ್ರೆಸ್ ಪಕ್ಷದ ಸದಸ್ಯರೋರ್ವರು ಮಾತು ಮುಗಿಸುವುದರೊಳಗೆ ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ರಣರಂಗವಾಗಿ ಪರಿಣಮಿಸಿತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಕೆಲವು ಸದಸ್ಯರ ಆರೋಪ ಪ್ರತ್ಯಾರೋಪಗಳು ತಾರರಕ್ಕೇರಿ ನೀರಿನ ಬಾಟಲಿ, ಮೈಕ್ ಹಿಡಿದು ಹೊಡೆದಾಡುವವರೆಗೂ ಮುಂದುವರಿದಿತ್ತು. ಪುರಸಭೆ ಹಿರಿಯ ಸದಸ್ಯ ಮೋಹನ್‌ದಾಸ್ ಶೆಣೈ ಸದಸ್ಯರ ಮನ ಒಲಿಸುವ ಪ್ರಯತ್ನ ಮಾಡಿ, ಸದಸ್ಯರ ತಮ್ಮ ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ರಕ್ತ ಅಗತ್ಯತೆಯನ್ನು ಪೂರೈಸಿ ಮಾದರಿಯಾಗಿರುವ ಕುಂದಾಪುರದ ಬ್ಲಡ್ ಬ್ಯಾಂಕ್‌ಗೆ ಮತ್ತಷ್ಟು ಸುಸಜ್ಜಿತ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದಿಂದ ೧೨ ಲಕ್ಷ ರೂ ಅನುದಾನ ನೀಡಲಾಗುವುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಹೇಳಿದ್ದಾರೆ. ಕುಂದಾಪುರ ರೆಡ್ ಕ್ರಾಸ್ ಸೊಸೈಟಿ ವಾರ್ಷಿಕೋತ್ಸವ ಮತ್ತು ರೆಡ್‌ಕ್ರಾಸ್ ಸಂಸ್ಥಾಪಕರ ದಿನಾಚರಣೆ ಕುಂದಾಪುರ ಪದವಿಪೂರ್ವ ಕಾಲೇಜ್ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಉತ್ತಮ ಮಾನವೀಯ ಸೇವೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆಗೆ ವಿಶ್ವಾಸವುಳ್ಳ ಸಂಸ್ಥೆ ಎಂಬ ಹೆಗ್ಗಳಿಕೆಯಿದೆ. ಸೈನಿಕರ ಕಷ್ಟ ನೋಡಿ ಮಾನವೀಯತೆ ನೆಲೆಯಲ್ಲಿ ಸ್ಥಾಪನೆಯಾದ ಸೊಸೈಟಿ ಮೂಲಕ ಹೆನ್ರಿ ಮಾನವೀಯ ನೆಲೆಯಲ್ಲಿ ವಿಶ್ವಮಟ್ಟಕ್ಕೆ ಏರಿದ್ದಾರೆ ಎಂದು ಹೇಳಿದರು. ಕುಂದಾಪುರ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಎಸ್.ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಔಷಧ ನಿಯಂತ್ರಕ ಸಹಾಯಕಾಧಿಕಾರಿ ಷಾ, ಕಾರ‍್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಇಲ್ಲಿನ ಮೇಲ್‌ಗಂಗೊಳ್ಳಿಯ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ 29ನೇ ವಾರ್ಷಿಕೋತ್ಸವ, ಅಮೃತ ಯುವತಿ ಮಂಡಲ ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇವುಗಳ 23ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ.ಆರ್. ಅಂಬೇಡ್ಕರ್‌ರವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಮೇಲ್‌ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಚೆಂದು ಧ್ವಜಾರೋಹಣಗೈದು ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಂಜೆ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ ವಹಿಸಿದ್ದರು. ಕೋಟದ ಮತ್ಸ್ಯೋದ್ಯಮಿ ಪ್ರಶಾಂತ ಕುಂದರ್, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್ ಶುಭ ಹಾರೈಸಿದರು. ಇದೇ ಸಂದರ್ಭ ಗಂಗೊಳ್ಳಿ ಸ.ವಿ.ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕೀಲ ಮಹಾಬಲ ಅವರನ್ನು ಸನ್ಮಾನಿಸಲಾಯಿತು. ಬೈಂದೂರಿನ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮಣ ಯಡ್ತರೆ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರದ ಸೌಂದರ್ಯವನ್ನು ಆಗಸದೆತ್ತರದಲ್ಲಿ ಕಂಡು ಕಣ್ತುಂಬಿಕೊಳ್ಳಬೇಕೆಂಬ ಇಂಗಿತವಿದೆಯೇ? ನಮ್ಮೂರ ಪ್ರವಾಸಿ ತಾಣಗಳನ್ನು ನಿಮಿಷಗಳಲ್ಲಿ ಸುತ್ತಿ ಬರಬೇಕೆಂಬ ಹಂಬಲವಿದೆಯೇ? ಮತ್ತೇಕೆ ತಡ. ಕೋಟೇಶ್ವರದ ಯುವ ಮೆರಿಡಿಯನ್‌ಗೆ ಬನ್ನಿ. ಕುಂದಾಪುರವನ್ನು ಸುತ್ತುಹೊಡೆಸಲು ತಮಗೊಂದು ಹೆಲಿಕಾಪ್ಟರ್ ಕಾಯ್ತಿದೆ! ಹೌದು ಕುಂದಾಪುರ ಕೋಟೇಶ್ವರದಲ್ಲಿನ ಯುವ ಮೆರಿಡಿಯನ್‌ನಲ್ಲಿ ಹೆಲಿಟೂರಿಸಂ ಆರಂಭಿಸಲು ದೆಹಲಿಯ ಏವಿಯೇಷನ್ ಕಂಪೆನಿಯು ಮುಂದೆ ಬಂದಿದ್ದು ಉಡುಪಿಯಲ್ಲಿ ಆರಂಭಿಸಿದ ಪ್ರಾಯೋಗಿಕ ಹೆಲಿಟೂರಿಸಂ ಈಗ ಕುಂದಾಪುರಕ್ಕೂ ವಿಸ್ತಾರಗೊಂಡಿದೆ. ಪ್ರಯೋಗಾರ್ಥವಾಗಿ ಆರಂಭಿಸಲಾಗಿರುವ ಹೆಲಿಟೂರಿಸಂ ಸೌಲಭ್ಯವು ಏ.27ರಿಂದಲೇ ಆರಂಭಗೊಂಡಿದ್ದು ಮೇ.1ರ ತನಕ ಪ್ರವಾಸಿಗರಿಗೆ ಪ್ರತಿದಿನ ಮಧ್ಯಾಹ್ನ 3 ಗಂಟೆ ಬಳಿಕ ಲಭ್ಯವಾಗಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ರಜೆಯಲ್ಲಿ ಜಾಲಿ ರೈಡ್, ಅಡ್ವೆಂಚರ್ ರೈಡ್: ಹೆಲಿಕಾಪ್ಟರ್‌ನಲ್ಲಿ ಹಾರಾಡಬಯಸುವ ಪ್ರವಾಸಿಗರಿಗೆ ಎರಡು ಬಗೆಯ ಆಫರ್ ನೀಡಲಾಗಿದ್ದು ಜಾಲಿ ರೈಡ್ ಮತ್ತು ಅಡ್ವೆಂಚರ್ ರೈಡ್ ಎಂಬ ಎರಡು ಪ್ಯಾಕೇಜ್ ಒಳಗೊಂಡಿದೆ. ಜಾಲಿ ರೈಡ್‌ನಲ್ಲಿ ಕೋಟೇಶ್ವರ, ಕುಂದಾಪುರ, ಬಬ್ಬುಕುದ್ರು ಮತ್ತು ಸುತ್ತಲಿನ ಹಿನ್ನೀರಿನ ಪ್ರದೇಶಗಳನ್ನು ನೋಡಲು ಅವಕಾಶವಿದ್ದರೇ, ಅಡ್ವೆಂಚರ್ ರೈಡ್‌ನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ವಿದ್ಯಾರ್ಥಿಯ ನಡೆ, ನುಡಿ, ಶೀಲ, ಚಾರಿತ್ರ್ಯದಲ್ಲಿ ಗಮನಾರ್ಹ ಬದಲಾವಣೆಗಳಾಗಿ ಒಂದು ಸುಂದರ ವ್ಯಕ್ತಿತ್ವ ನಿರ್ಮಾಣವಾಗುವುದರ ಜೊತೆಗೆ ಸಮಾಜದ ಸತ್ಪ್ರಜೆಯಾಗುವಂತಾದರೇ ಶಿಕ್ಷಣದ ಉದ್ದೇಶ ಸಾರ್ಥಕ್ಯಗೊಳ್ಳಲಿದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಸ್ವಾಮಿ ಜೀತಕಾಮನಂದಾಜಿ ಮಹಾರಾಜ್ ಹೇಳಿದರು. ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸ್ವಾಮೀ ವಿವೇಕಾನಂದರ ಪುತ್ಥಳಿಯನ್ನು ಅನಾವರಣಗೊಳಿಸಿದ ಬಳಿಕ ಸಾದೃಶ್ಯ ಆರ್ಟ್ ಗ್ಯಾಲರಿ ಲೋಕಾರ್ಪಣೆಗೊಳಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಬುದ್ದಿವಂತರು. ಆದರೆ ಬದುಕಿನ ಸಮಸ್ಯೆಗಳನ್ನು ಎದುರಿಸುವ ಮನೋಬಲದ ಕೊರೆತೆ ಕಾಡುತ್ತಿದೆ. ಶಿಕ್ಷಣದಿಂದ ವಿದ್ಯಾರ್ಥಿಯ ಬುದ್ಧಿಮತ್ತೆಯ ಜೊತೆಗೆ ಆತ್ಮಸ್ಥೈರ್ಯವೂ ಹೆಚ್ಚುವಂತಾಗಬೇಕು. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅಂಕಗಳಿಕೆಗೆ ಪ್ರಾಮುಖ್ಯತೆ ನೀಡಿದಷ್ಟೇ, ಅವರಲ್ಲಿನ ಸೃಜನಾತ್ಮಕ ಪ್ರತಿಭೆಗೆ ಪ್ರೂತ್ಸಾಹ ನೀಡುವಂತಾಗಬೇಕು ಎಂದರು. ಗಿಡ, ಮರಗಳಿಂದ ತುಂಬಿರುವ ಗುರುಕುಲ ಶಿಕ್ಷಣ ಸಂಸ್ಥೆಯು ಅನಾದಿ ಕಾಲದ ಋಷಿಮುನಿಗಳ ಗುರುಕುಲ ಪದ್ದತಿ ನೆನಪಿಸುವಂತಿದೆ. ಇಲ್ಲಿನ ಪರಿಸರ ಮಕ್ಕಳ ಮನಸ್ಸು ಸೃಜನಾತ್ಮಕವಾಗಿ ಅರಳುವಂತೆ ಮಾಡುವಂತೆ ಮಾಡುವುದಲ್ಲದೇ ಪ್ರಕೃತಿಯಲ್ಲಿ ವೈವಿಧ್ಯತೆಯನ್ನು ತುಂಬಿಕೊಂಡು ಬೆಳೆಯುವಂತೆ ಮಾಡುತ್ತದೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಿಳೆಯೋರ್ವಳನ್ನು ಅಮಾನುಷವಾಗಿ ಕೊಲೆಗೈದು ರಸ್ತೆಯ ಬದಿಯಲ್ಲಿ ಎಸೆದಿದ್ದ ಅಪರಾಧಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ್ ವಿ. ಪಾಟೀಲ್ ಗಲ್ಲುಶಿಕ್ಷೆ ವಿಧಿಸಿದ್ದಾರೆ. ಆರು ವರ್ಷದ (ಜೂನ್ 2010) ಹಿಂದೆ ಅಕ್ಕಯ್ಯ ಯಾನೆ ಜಯಾ ಎಂಬಾಕೆಯನ್ನುಕೊಲೆಗೈದ ಹೆಮ್ಮಾಡಿ ಸತೀಶ್ ಪೂಜಾರಿ (30) ಗಲ್ಲುಶಿಕ್ಷೆಗೆ ಒಳಗಾದ ಆಪರಾಧಿ. ಕೊಲೆ ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು ಸೂಕ್ತ ಸಾಕ್ಷಾಧಾರಗಳಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಕುಂದಾಪುರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಯು. ಶ್ರೀನಿವಾಸ ಹೆಗಡೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಘಟನೆಯ ವಿವರ: ಕುಂದಾಪುರದ ಖಾಸಗಿ ಶಾಲಾ ವಾಹನವೊಂದರಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡಿಕೊಂಡಿದ್ದ ಅಕ್ಕಯ್ಯ ಯಾನೆ ಜಯಾ ಎಂಬಾಕೆ ಸತೀಶ್ ಪೂಜಾರಿ ಹಾಗೂ ಆತನ ಭಾವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಸತೀಶ್ ಪೂಜಾರಿಯ ಭಾವನೊಂದಿಗೆ ತನ್ನನ್ನು ಮದುವೆ ಮಾಡಿಕೊಂಡುವಂತೆ ಆತನನ್ನು ಪದೇ ಪದೇ ಪೀಡಿಸುತ್ತಿದ್ದಳು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಲ್ಕುಂದ ನಿವಾಸಿ, ಪ್ರತಿಷ್ಟಿತ ಚೊಲ್ಪಾಡಿ ಮನೆತನದ ನಿವೃತ್ತ ಯೋಧ ಚೋಲ್ಪಾಡಿ ರಮೇಶ್ ಕಾಮತ್‌ರ ಧರ್ಮಪತ್ನಿ ರೇಷ್ಮಾ ಅಲಿಯಾಸ್ ರಾಜೇಶ್ವರಿ ಕಾಮತ್(47) ಅಲ್ಪಕಾಲದ ಅಸೌಖ್ಯದಿಂದ ಎ.೨೮ ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಈಕೆ ಸದೃಹಣಿಯಾಗಿದ್ದು ಇವರ ಪತಿ ಚೋಲ್ಪಾಡಿ ರಮೇಶ್ ಕಾಮತ್ ಭಾರತೀಯ ಸೇನೆಯಲ್ಲಿ ಅಪ್ರತಿಮ ಶೌರ‍್ಯ ಸಾಧನೆಗಾಗಿ ಮೆರಿಟೋರಿಯಸ್ ಅವಾರ್ಡ್ ಪುರಸ್ಕೃತರು. ಮೃತರು ಪತಿ ರಮೇಶ್ ಕಾಮತ್, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
