Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರ ವತಿಯಿಂದ ಧರ್ಮಸ್ಥಳದಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಮೌಲ್ಯಾಧಾರಿತ ಜ್ಞಾನಬಂಧು ಪುಸ್ತಕದ ಶ್ಲೋಕ ಕಂಠ ಪಾಠ ಸ್ಪರ್ಧೆಯಲ್ಲಿ ಕೋಟೇಶ್ವರ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಸುಷ್ಮಾ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಬಹುಮಾನ ನೀಡಿ ಶುಭ ಹಾರೈಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಂಘ ಸಂಸ್ಥೆಗಳು ಸರಕಾರದ ಹಾಗೂ ಇನ್ನಿತರ ಸಾಮಾಜಿಕ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಜನರಿಗೆ ಬೇಕಾದ ಮಾಹಿತಿ ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ವಿಶೇಷವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡು ಜನರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ತಾಪಂ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಹೇಳಿದರು. ಅವರು ಕೊಡಪಾಡಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗಿರಿಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಆದರ್ಶ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಬಸವರಾಜ್, ಡಾ.ಪ್ರಸನ್ನ, ಕೊಡಪಾಡಿ ಸವ್ಯಸಾಚಿ ಯುವಕ ಮಂಡಲದ ಉಪಾಧ್ಯಕ್ಷ ವಸಂತ ಪೂಜಾರಿ, ತಾಯಿ ಮಾರಿಕಾಂಬ ಮಹಿಳಾ ಮಂಡಳಿಯ ಅಧ್ಯಕ್ಷೆ ವಿಜಯಾ ಬಿ.ಗಾಣಿಗ, ಹವ್ಯಾಸಿ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ನರಸಿಂಹ ಗಾಣಿಗ ಮೊದಲಾದವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಮಾರ್ಚ್ ತಿಂಗಳ ಕಾರ್ಯಕ್ರಮದಲ್ಲಿ ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಅವರು ಹಂಗಾರಕಟ್ಟೆ ಕಲಾ ಕೇಂದ್ರದ ಕಾರ್ಯದರ್ಶಿಯಾದ ರಾಜಶೇಖರ್ ಹೆಬ್ಬಾರ್, ರಾಮದಾಸ್ ಆಚಾರ್ಯ, ಕೋಟೇಶ್ವರ ಅವರನ್ನು ಸನ್ಮಾಸಿದರು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಉದ್ಯಮಿ ಪ್ರಶಾಂತ್ ತೋಳಾರ್, ಕುಂದಾಪುರ ಉಪಸ್ಥಿತರಿದ್ದರು. ಅತಿಥಿಗಳಾಗಿ ವೈಕುಂಠ ಹೆಬ್ಬಾರ್, ವಾಮನ್ ಪೈ ಭಾಗವಹಿಸಿದ್ದರು. ಅನಂತರ ಹಂಗಾರಕಟ್ಟೆ ಕಲಾಕೇಂದ್ರದವರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರೇಕ್ಷಕರನ್ನು ರಂಜಿಸಿತು. ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರೂಪಿಸಿದ್ದರು. ಉದಯ ಭಂಡಾರ್‌ಕಾರ್ ಹಾಗೂ ಮಂಜುನಾಥ ಮೈಪಾಡಿ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬೆಂಗಳೂರಿನ ಪ್ರಸಿದ್ದ ವೈದ್ಯ ಡಾ.ಬಿ.ಗೋವರ್ಧನ್ ಹೆಗ್ಡೆ (70) ಭಾನುವಾರ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಕಾರ್ಕಳ ತಾಲ್ಲೂಕಿನ ಬೋಳಮಡಿಮಾರ ಗುತ್ತುವಿನ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿಯನ್ನು ಪಡೆದುಕೊಂಡ ಬಳಿಕ ೨೦ ವರ್ಷಗಳ ಕಾಲ ಅರಸಿಕೆರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಬಳಿಕ ಬೆಂಗಳೂರಿನ ಇಲ್ಯಾಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ಹುಯ್ಯಾರು ಪಟೇಲ್ ಹಿರಿಯಣ್ಣ ಶೆಟ್ಟಿ ಹಾಗೂ ಕಾರ್ಕಳದ ಮಾಜಿ ಶಾಸಕ ಬೋಳ ರಘುರಾಮ ಶೆಟ್ಟಿಯವರ ಅಳಿಯನಾಗಿದ್ದ ಅವರು ವಿಧಾನಪರಿಷತ್ ಸದಸ್ಯ ಕೆ.ಪ್ರತಾಪ್‌ಚಂದ್ರ ಶೆಟ್ಟಿಯವರ ಭಾವನವರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರಿ ಶಾಲೆಯ ಕಟ್ಟಡವನ್ನು ಪರವಾನಿಗೆ ಇಲ್ಲದೇ ಖಾಸಗಿ ಕಾರ್ಯಕ್ರಮಗಳಿಗೆ ನೀಡುವುದಿಲ್ಲ ಎಂದಿದ್ದ ಶಾಲೆಯ ಮುಖ್ಯೋಪಧ್ಯಾಯ ಪದ್ಮನಾಭ ಅಡಿಗ ಅವರನ್ನು ಗುರಿಯಾಗಿಸಿಕೊಂಡು ವಾಣಿಶ್ರೀ ಹೆಬ್ಬಾರ್, ಅನುಪ್ ಕುಮಾರ್, ರಾಜೇಶ್ ಆಚಾರ್ಯ ಹಾಗೂ ಗಿರೀಶ್ ಎಂಬುವವರು ಗ್ರಾಪಂ ಸಾಮಾನ್ಯ ಸಭೆಯಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಆ ಬಳಿಕ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಶಾಲೆ ಬೀಗ ಹಾಕುವುದಲ್ಲದೇ, ಹಲ್ಲೆ ನಡೆಸುವುದಾಗಿ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶನಿವಾರ ನಡೆದ ಬೀಜಾಡಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಹಾಜರಾಗಿದ್ದ ಬೀಜಾಡಿ ಮೂಡುವಿನ ಸ.ಹಿ.ಪ್ರಾ ಶಾಲೆಯ ಮುಖ್ಯೋಪಧ್ಯಾಯರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿರುವುದನ್ನು ಖಂಡಿಸಿ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಮುಖ್ಯೋಪಧ್ಯಾಯ ಪದ್ಮನಾಭ ಅಡಿಗ ಪ್ರತಿಕ್ರಿಯಿಸಿ ಇಲಾಖೆಯ ನಿಯಮದಂತೆ ಡಿಸೆಂಬರ್ ಬಳಿಕ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಶಾಲೆಯನ್ನು ಬಿಟ್ಟುಕೊಡುವಂತಿಲ್ಲ. ಕಳೆದ ಭಾರಿ ಬಿಟ್ಟುಕೊಟ್ಟಾಗಲೂ ಮಲಿನಗೊಂಡಿದ್ದ ಶಾಲೆಯ ಪರಿಸರವನ್ನು ಸಂಸ್ಥೆಯವರು ಮಾಡದಿದ್ದದ್ದರಿಂದ ಶಾಲಾ ಮಕ್ಕಳು ಸ್ವಚ್ಚಗೊಳಿಸಿದ್ದರು. ಹಾಗಾಗಿ ಈ…

Read More

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಸಲ್ಲಿಸಲಾಗುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ಕೇಂದ್ರದಲ್ಲಿ ಶೂನ್ಯ ಅರ್ಜಿ ಸಾಧನೆಗೈದಿರುವ ಕುಂದಾಪುರ ಹೋಬಳಿಯ ಅಟಲ್‌ಜೀ ಜನಸ್ನೇಹ ಕೇಂದ್ರವು ಸಕಾಲಿಕ ವಿಲೇವಾರಿಯಲ್ಲಿ  (AJSK TImely Disposal Ranking) ರಾಜ್ಯದಲ್ಲೇ ಮೊದಲ ಪಡೆದಿದೆ. ಕೋಲಾರ ಜಿಲ್ಲೆಯ ಮುಳುಬಾಗಿಲು ಅವನಿ ದ್ವಿತೀಯ ಪಡೆದಿದ್ದರೇ, ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ಹಚ್ಚೋಳ್ಳಿ ತೃತೀಯ ಹಾಗೂ ಉತ್ತರ ಕನ್ನಡದ ಸಿರಸಿ ಮತ್ತು ಉಡುಪಿ ತಾಲೂಕು ಅನುಕ್ರಮವಾಗಿ ಐದನೇ ಮತ್ತು ಏಳನೇ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಕುಂದಾಪುರ ಈ ಭಾರಿ ಉತ್ತಮ ಪ್ರಗತಿ ಸಾಧಿಸಿದೆ. ತಾಲೂಕಿನ ಒಟ್ಟು ಮೂರು ನಾಡ ಕಛೇರಿಗಳಲ್ಲಿ ಜನಸ್ನೇಹಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಕಳೆದ ತಿಂಗಳಿನಲ್ಲಿ ಒಟ್ಟು 947 ಅರ್ಜಿ ಸಲ್ಲಿಕೆಯಾಗಿದ್ದವು. ಆ ಪೈಕಿ 48 ಅರ್ಜಿಗಳು ತಿರಸ್ಕೃತಗೊಂಡಿದ್ದು, ಉಳಿದ ಅಷ್ಟೂ ಅರ್ಜಿ ವಿಲೇವಾರಿಯಾಗಿದ್ದವು. ಪ್ರತಿದಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹಾಲಾಡಿಯಲ್ಲಿ ಯಕ್ಷಗಾನ ಮೇಳದ ಕ್ಯಾಬ್ ಹಾಗೂ ಬೈಕ್ ನಡುವಿನ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಘಟನೆ ವರದಿಯಾಗಿದೆ. ಶಿರಿಯಾರ ಯಡಾಡಿ ನಿವಾಸಿ ಗಣೇಶ್ ಹೆಗ್ಡೆ (35) ಮೃತ ದಾರುಣವಾಗಿ ಮೃತಪಟ್ಟ ದುರ್ದೈವಿ.  ಕುಂದಾಪ್ರ ಡಾಟ್ ಕಾಂ ಸುದ್ದಿ. ಸಾಲಿಗ್ರಾಮ ಮೇಳಕ್ಕೆ ಸೇರಿದ ಮಿನಿ ಬಸ್‌ನಲ್ಲಿ ಮೇಳದ ಕಲಾವಿದರು ರಾತ್ರಿ ಯಕ್ಷಗಾನವನ್ನು ಮುಗಿಸಿ ಬೆಳಿಗ್ಗೆ ಬೇರೊಂದೆಡೆಗೆ ಪ್ರಯಾಣ ಬೆಳೆಸಿರುವಾಗ ಹಾಲಾಡಿ ಸರ್ಕಲ್ ಬಳಿ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಯಾಬ್‌ನಲ್ಲಿದ್ದ ಕಲಾವಿದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಂಗಳೂರು ವಿವಿ ಪದವಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅಂಕಪಟ್ಟಿಯು ಹಲವಾರು ಲೋಪಗಳಿಂದ ಕೂಡಿದ್ದು, ಉತ್ತರ ಪತ್ರಿಕೆಯನ್ನು ಮರುಮೌಲ್ಯಮಾಪನ ಹಾಗೂ ಇನ್ನಿತರ ಗೊಂದಲಗಳನ್ನು ನಿವಾರಿಸಬೇಕೆಂದು ಆಗ್ರಹಿಸಿ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಅಂಕದಕಟ್ಟೆ ಮಾತನಾಡಿ ೧, ೩ ಮತ್ತು ೫ನೇ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹಲವಾರು ತಪ್ಪುಗಳು ಕಂಡುಬಂದಿದೆ. ಅಂಕಪಟ್ಟಿಯಲ್ಲಿ ಹೆಚ್ಚಿನ ಅಂಕ ಇದ್ದರೂ ಕೊನೆಯಲ್ಲಿ ಅನುತ್ತೀರ್ಣವೆಂದು ನಮೂದಿಸಲಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಪರಿಗಣಿಸಲಾಗಿದ್ದು, ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಉತ್ತೀರ್ಣವೆಂಬ ಫಲಿತಾಂಶ ಬಂದಿದೆ. ವಿಶಿಷ್ಟ ದರ್ಜೆಯಲ್ಲಿ ಪಡೆಯುವ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಆತಂಕ ತಂದೊಡ್ಡಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಂಗಳೂರು ವಿವಿಗೆ ಅಪಾರ ಗೌರವಿದ್ದು, ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಆದರೆ ಈ ಭಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾಲಬಾಧೆಯಿಂದ ನೊಂದ ಕೃಷಿಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಾಲ್ಕಲ್‌ನಲ್ಲಿ ನಡೆದಿದೆ. ತಂಗಚ್ಚನ್ ಯಾನೆ ಥೋಮಸ್ (49) ಮೃತ ದುರ್ದೈವಿ. ಘಟನೆಯ ವಿವರ: ಕುಂದಾಪುರ ಹಾಲ್ಕಲ್ ನಿವಾಸಿಯಾದ ತಂಗಚನ್ ತನ್ನ ಎರಡು ಎಕರೆ ಭೂಮಿಯಲ್ಲಿ ರಬ್ಬರ್, ತೆಂಗಿನತೋಟ ಹಾಗೂ ನರ್ಸರಿಯನ್ನು ಹೊಂದಿದ್ದು, ಕೃಷಿಯ ನಿರ್ವಹಣೆಗಾಗಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು ೫ಲಕ್ಷಕ್ಕೂ ಮಿಕ್ಕಿ ಸಾಲ ಮಾಡಿಕೊಂಡಿದ್ದ. ಸಾಲವನ್ನು ಮರುಪಾವತಿ ಮಾಡುವಂತೆ ಬ್ಯಾಂಕಿನಿಂದ ನೋಟಿಸ್ ಜಾರಿಯಾಗಿತ್ತು. ಕುಂದಾಪ್ರ ಡಾಟ್ ಕಾಂ. ಆದರೆ ನಿರೀಕ್ಷೆಯಂತೆ ಬೆಳೆ ಬಾರದ ಹಿನ್ನೆಲೆಯಲ್ಲಿ ಅಪಾರ ನಷ್ಟ ಅನುಭವಿಸಿದ್ದನೆನ್ನಲಾಗಿದ್ದು, ಸಾಲ ಮರುಪಾವತಿ ಮಾಡಲಾಗದೇ ಆತ್ಯಹತ್ಯೆಗೆ ಮುಂದಾಗಿದ್ದ. ಈವರೆಗೆ ತಾಲೂಕಿನಲ್ಲಿ ೫ ರೈತರ ಆತ್ಮಹತ್ಯಾ ಪ್ರಕರಣ ವರದಿಯಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ರೈತನ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೀಳರಿಮೆಯನ್ನು ಬಿಟ್ಟು ಸ್ವಪ್ರಯತ್ನದಿಂದ ಮುಂದೆ ಬಂದು ಸಮಾಜ ಸೇವಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ನಮ್ಮ ಏಳಿಗೆಯ ಜೊತೆಗೆ ಎಲ್ಲರ ಏಳಿಗೆ ಸಾಧಿಸಿದಾಗ ನಿಮ್ಮ ಶಕ್ತಿ ಉನ್ನತ ಮಟ್ಟದಲ್ಲಿ ಬೆಳೆದು ಸಮಾಜ ಬೆಳೆಯಲು ಸಾದ್ಯ ಎಂದು ಕುಂದಾಪುರ ಕುಲಾಲ ಸಂಘದ ಗೌರವಾಧ್ಯಕ್ಷ ಡಾ.ಎಂ.ವಿ.ಕುಲಾಲ ಹೇಳಿದರು. ಅವರು ವಕ್ವಾಡಿ ಮಗದಬೆಟ್ಟು ಮೈದಾನದಲ್ಲಿ ನಡೆದ ಕರಾವಳಿ ಕುಲಾಲ ಯುವ ವೇದಿಕೆ ವಕ್ವಾಡಿ ಘಟಕ ಉದ್ಘಾಟಿಸಿ ಮಾತನಾಡಿದರು. ನೂತನ ವೇದಿಕೆಯ ಅಧ್ಯಕ್ಷ ವಕ್ವಾಡಿ ನರಸಿಂಹ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಕರಾವಳಿ ಕುಲಾಲ ಯುವ ವೇದಿಕೆ ಸ್ಥಾಪಕಾಧ್ಯಕ್ಷ ಡಾ. ಎಂ. ಅಣ್ಣಯ್ಯ ಕುಲಾಲ ದಿಕ್ಸೂಚಿ ಬಾಷಣ ಮಾಡಿದರು. ವೇದಿಕೆಯಲ್ಲಿ ಕುಂದಾಪುರ ಕುಲಾಲ ಸಂಘದ ಅಧ್ಯಕ್ಷ ನಿರಂಜನ ಕುಲಾಲ, ಕರ್ನಾಟಕ ರಾಜ್ಯ ಕುಂಬಾರ ಸಂಘದ ಅಧ್ಯಕ್ಷ ರಾಮ ಕುಲಾಲ ಪಕ್ಕಾಲು, ಕರ್ನಾಟಕ ರಾಜ್ಯ ಕುಂಬಾರ ಸಂಘದ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಸುನೀಲ್.ಎಸ್ ಮೂಲ್ಯ, ಕರಾವಳಿ ಕುಲಾಲ ಯುವ ವೇದಿಕೆ ಉಡುಪಿ…

Read More