Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಕ್ಕೊಳಪಟ್ಟ ಮೂಡಬಿದ್ರೆಯ ಮಹಾವೀರ ಕಾಲೇಜು ಸಿಬ್ಬಂದಿ ಸಂಘ ಆಯೋಜಿಸಿದ ಅಂತರ ಕಾಲೇಜು ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಸಿಬ್ಬಂದಿಗಳ ತಂಡ ಜಯ ಗಳಿಸಿದೆ. ಅಂತಿಮ ಪಂದ್ಯದಲ್ಲಿ ಎದುರಾಳಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಸಿಬ್ಬಂದಿಗಳ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಭಂಡಾರ್ಕಾರ್ಸ್ ಕಾಲೇಜಿನ ಉಪನ್ಯಾಸಕ ಶರಣ್ ಅವರು ಉತ್ತಮ ಬ್ಯಾಟ್ಸಮನ್ ಮತ್ತು ಅನಂತ ಪೈ ಉತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದುಕೊಂಡರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ದೇಶದ ಸಾವಿರಾರು ವರ್ಷಗಳ ಹಿಂದಿನ ಸಂಸ್ಕೃತಿಗಳನ್ನು ಉಳಿಸಿ ಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ಇಂದಿನ ಕಾಲದಲ್ಲಿ ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ಸಿಗದ ಸಂಸ್ಕಾರ ಸಂಸ್ಕೃತಿಯನ್ನು ಯುವಕ ಮಂಡಲಗಳ ಸ್ನೇಹಿತರು ಜವಾಬ್ದಾರಿಯಿಂದ ನೀಡಿದಲ್ಲಿ ನಮ್ಮ ಪುರಾತನ ಸಂಸ್ಕ್ರತಿಯನ್ನು ಉಳಿಸಲು ಸಾಧ್ಯ ಎಂದು ಉಡುಪಿಯ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಮಲ್ಪೆ ಹೇಳಿದರು. ಅವರು ಇತ್ತೀಚಿಗೆ ಸ್ನೇಹ ಯುತ್ ಕ್ಲಬ್ ಹೊಸಪೇಟೆ ತ್ರಾಸಿ ಇವರ ಆಶ್ರಯದಲ್ಲಿ ಜರಗಿದ ಸ್ನೇಹೋತ್ಸವ-2016 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿ ಜಿಪಂ ಸದಸ್ಯೆ ಶೋಭಾ ಜಿ. ಪುತ್ರನ್, ಜಿಪಂ ಮಾಜಿ ಸದಸ್ಯ ಅನಂತ ಮೊವಾಡಿ, ತ್ರಾಸಿ ಗ್ರಾಪಂ ಸದಸ್ಯ ರವೀಂದ್ರ ಖಾರ್ವಿ, ಹೊಸಪೇಟೆ ಹೋಳಿ ಉತ್ಸವ ಸಮಿತಿ ಅಧ್ಯಕ್ಷ ಚೌಕಿ ಜಗನ್ನಾಥ ಖಾರ್ವಿ ಸ್ನೇಹ ಸಂಘದ ಸ್ಥಾಪಕಾಧ್ಯಕ್ಷ ಗೋಪಾಲ ಖಾರ್ವಿ, ಹೊಸಪೇಟೆ ಮಹಿಳಾ ಹೋಳಿ ಉತ್ಸವ ಸಮಿತಿ ಅಧ್ಯಕ್ಷೆ ಪಾರ್ವತಿ ಬಿ. ಖಾರ್ವಿ, ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿ ನಾಗರಾಜ ಖಾರ್ವಿ, ಯುತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ತೀವ್ರ ಪೈಪೋಟಿಯಿರುವಂತಹ ಪ್ರಸ್ತುತ ದಿನಗಳಲ್ಲೂ ಸಹ, ಸರಿಯಾದ ಪೂರ್ವ ಸಿದ್ಧತೆಗಳೊಡನೆ ನಾವು ಐಬಿಪಿಎಸ್ ಪರೀಕ್ಷೆಯನ್ನು ಬರೆದದ್ದೇ ಆದಲ್ಲಿ ಬ್ಯಾಂಕ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ಬೆಸೆಂಟ್ ಮ್ಯಾನೇಜ್‌ಮೆಂಟ್ ಕಾಲೇಜಿನ ಕಾಯರ‍್ಕಟ್ಟೆಯ ಡಾ. ನಾರಾಯಣ ಹೇಳಿದರು. ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ನಡೆದ ಬ್ಯಾಂಕ್ ಪರೀಕ್ಷೆ ಮಾಹಿತಿ ಶಿಬಿರದಲ್ಲಿ ಅವರು ಮಾತನಾಡಿದರು. ಪ್ರಾಧ್ಯಾಪಕ ರವೀಶ್ ಮಾತನಾಡಿ ಸರಳ ರೀತಿಯಲ್ಲಿ ಸುಲಭ ಮಾರ್ಗದಲ್ಲಿ ವಿದ್ಯಾರ್ಥಿಗಳು ಗಣಿತ ಮತ್ತಿತರ ರೀಸನಿಂಗ್ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಲಿತದ್ದೇ ಆದಲ್ಲಿ ಸಮಯದ ಉಳಿತಾಯದೊಡನೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯ ಎಂದರು. ಕಾರ್ಯಾಗಾರವನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಉಮೇಶ್ ಮಯ್ಯ ಸಂಯೋಜಿಸಿದರು. ಪ್ರಾಂಶುಪಾಲ ಪ್ರೊ.ಬಿ.ಎ ಮೇಳಿ ಉಪಸ್ಥಿತರಿದ್ದರು. ಕುಮಾರಿ ಪೂರ್ಣಿಮಾ ಎನ್.ಆರ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಚತುಷ್ಪಥ ಹೆದ್ದಾರಿಗೆ ಸೇರುವ ಎಲ್ಲ ಗ್ರಾಮ ರಸ್ತೆಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು, ಬೀದಿದೀಪ ಇಲ್ಲದ ರಸ್ತೆಗಳಿಗೆ ಅದನ್ನು ಅಳವಡಿಸುವುದರೊಂದಿಗೆ ಹಿಂದೆ ಅಳವಡಿಸಿರುವ ದೀಪಗಳು ಬೆಳಗುವಂತೆ ಮಾಡವುದು, ಚರಂಡಿಗಳ ಮಳೆಗಾಲ ಪೂರ್ವ ಹೂಳೆತ್ತುವುದು, ಹರಿಶ್ಚಂದ್ರ ಮಾರ್ಗದ ಕೇಂದ್ರೀಕೃತ ಸೋಲಾರ್ ದೀಪ ಲೋಪ ಸರಿಪಡಿಸುವುದು, ಸ್ಮಶಾನ ಅಭಿವೃದ್ಧಿಗೆ ಕ್ರಮ, ವಾರ್ಡ್‌ಸಭೆಗಳನ್ನು ಮತದಾನ ಕೇಂದ್ರದಲ್ಲೇ ನಡೆಸುವುದು, ರಸ್ತೆಗಳಿಲ್ಲದ ಜನವಸತಿ ಪ್ರದೇಶಗಳಿಗೆ ರಸ್ತೆ ನಿರ್ಮಿಸುವುದಕ್ಕೆ ನೀಡಿದ ಆದ್ಯತೆಯನ್ನು ಇದ್ದವುಗಳನ್ನು ಸುಸ್ಥಿತಿಯಲ್ಲಿಡುವುದಕ್ಕೂ ಆದ್ಯತೆ ನೀಡುವುದು. ಇದು ಮರವಂತೆ ಗ್ರಾಮ ಪಂಚಾಯಿತಿಯ ಸುವರ್ಣ ಸಭಾಭವನದ ಅಟಲ್ ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ಎರಡನೆ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯಿತಿಯ ಲೋಪ ಮತ್ತು ಮಾಡಬೇಕಾದ ಕೆಲಸಗಳ ಕುರಿತು ಗ್ರಾಮಸ್ಥರು ಅಹವಾಲುಗಳನ್ನಿಟ್ಟು ಎಚ್ಚರಿಸಿದ ಪರಿ. ಗ್ರಾಮಸ್ಥರಾದ ಎಸ್. ಜನಾರ್ದನ ಮಂಡಿಸಿ, ಎಂ. ವಿನಾಯಕ ರಾವ್ ಅನುಮೋದಿಸಿದ ಹತ್ತು ನಿರ್ಣಯಗಳನ್ನು ಸಭೆ ಸರ್ವಾನುಮತದಿಂದ ಸ್ವೀಕರಿಸಿತು. ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಅನಿತಾ ಆರ್. ಕೆ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಲೂಕಿನ ಕಾಲ್ತೋಡು ಗ್ರಾಮದ ಉಂತುನ ಹೊಳೆಯ ಈರಣ್ಣನ ಮಕ್ಕಿಯಲ್ಲಿ 13ನೇ ಶತಮಾನದ ಕನ್ನಡ ಶಾಸನವೊಂದು ಪತ್ತೆಯಾಗಿದೆ. ಶಿವಸ್ತುತಿಯೊಂದಿಗೆ ಪ್ರಾರಂಭವಾಗಿರುವ ಶಾಸನದಲ್ಲಿ ಶಕ ವರ್ಷ 1219 ರ ಉಲ್ಲೇಖವಿದ್ದು, ಅದು ಕ್ರಿ.ಶ. 1293ಕ್ಕೆ ಸರಿಹೊಂದುತ್ತದೆ. ಈ ಬಗ್ಗೆ ಸಂಶೋಧಕ ಎಂ.ಎಸ್.ಆರ್.ಎಸ್. ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಕುಂದಾಪ್ರ ಡಾಟ್ ಕಾಂ ಗೆ ತಿಳಿಸಿದ್ದಾರೆ. ಪತ್ತೆಯಾಗಿರುವ ಶಾಸನದಲ್ಲಿ ಶ್ರೀ ಮತ್ಪ್ರಾಪ ಚಕ್ರವರ್ತಿ ದೇವರ‍್ಸ ಎಂಬ ಹೆಸರನ್ನು ಗುರುತಿಸಲಾಗಿದೆ. ಆದರೆ ಶಾಸನದ ವಿವರಗಳಿಂದ ಈ ದೇವರ‍್ಸ ಯಾರು ಎಂದು ಸ್ಪಷ್ಟವಾಗುವುದಿಲ್ಲ. ಶಾಸನೋಕ್ತ ಕಾಲದಲ್ಲಿ ನಾಗದೇವರ‍್ಸ ಎಂಬ ಆಳುಪ ದೊರೆ ತುಳುನಾಡಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ಮಾಹಿತಿ ಇತರೆ ದಾಖಲೆಗಳಲ್ಲಿ ದೊರೆಯುತ್ತದೆ. ಆದ್ದರಿಂದ ಶಾಸನೋಕ್ತ ದೇವರ‍್ಸ ಆಳುಪ ದೊರೆ ನಾಗದೇವರ‍್ಸನೆಂದು ಭಾವಿಸಬಹುದಾಗಿದೆ. ಈತನ ಆಳ್ವಿಕೆಯ ಕಾಲದಲ್ಲಿ ಹೇರಳಿಯ ಅಂದರೆ ಈಗಿನ ಹೇರಂಜಾಲುವಿನ ಹೆಬ್ಬಾರಿಯರ ಮಠಕ್ಕೆ ಕೊಟ್ಟ ಭೂಮಿ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಶಾಸನದ ಕೊನೆಯಲ್ಲಿ ಶಾಪಾಶಯವಿರುವ ಬಗ್ಗೆ ತಿಳಿಸಲಾಗಿದೆ.…

Read More

ಬಹುನಿರೀಕ್ಷೆಯ ಕುಂದಗನ್ನಡದ ಚಿತ್ರ ಬಿಲಿಂಡರ್ ಗೆ ಕನ್ನಡದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹಾಡಿರುವ ಹಾಡಿ ಕೇಳಿ… ರವಿ ಬಸ್ರೂರು ಅವರ ಕುಂದಗನ್ನಡದ ಪ್ರೀತಿಗೆ ಸಾಥ್ ನೀಡಿರುವ ಪುನಿತ್ ಅವರೂ ಕುಂದಗನ್ನಡದಲ್ಲಿಯೇ ಹಾಡಿದ್ದಾರೆ. ನೋಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ಮಂಗಳೂರಿನ ಅಲ್ಪೈನ್ ಅಸೋಸಿಯೇಟ್ಸ್ ಸಹಯೋಗದಲ್ಲಿ ಬಾರಿಗೆ ಉಚಿತ ಹಿಜಮಾ ಯುನಾನಿ ಚಿಕಿತ್ಸಾ ಶಿಬಿರ ಸರಕಾರೀ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ್ರ ರಾಜು ದೇವಾಡಿಗ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುಜಾಹಿದ್ ನಖುದಾ, ಗಂಗೊಳ್ಳಿ ಜಾಮಿಯ ಮಸೀದಿಯ ಕಾರ್ಯದರ್ಶಿ ಅಬ್ದುಲ್ ಹಮೀದ್, ಮುಬಾರಕ್ ಕ್ರಿಕೆಟ್ ಕ್ಲಬ್‌ನ ಸದಸ್ಯ ನೂರ್ ಅಮಿನ್ ಹಾಗೂ ಅಲ್ಪೈನ್ ಅಸೋಸಿಯೇಟ್ಸ್ ಮಂಗಳೂರಿನ ಸ್ಥಾಪಕ ಝಹೀರ್ ಅಹಮೆದ್ ನಾಖುದ ಉಪಸ್ಥಿತರಿದ್ದರು. ಸುಮಾರು 80 ಪುರುಷರು ಹಾಗೂ 50 ಮಹಿಳೆಯರು ಹಿಜಾಮಾ ಚಿಕಿತ್ಸೆಯ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ಶಿಬಿರದಲ್ಲಿ ಮಂಗಳೂರಿನ ಡಾ. ಸಯೇದ್ ಝಾಹಿದ್ ಹುಸ್ಸೈನ್, ಉಡುಪಿಯ ಡಾ. ರುಕ್ಸರ್ ಅಂಜುಮ್ ಅವರಿಂದ ಉಚಿತ ಹಿಜಾಮಾ, ಯುನಾನಿ ಚಿಕಿತ್ಸೆ, ಸಲಹೆಯನ್ನು ನೀಡಲಾಯಿತು. ನವದೆಹೆಲಿಯ ರೆಕ್ಸ್ ರೆಮೆದಿಎಸ್ ಪ್ರೈವೇಟ್ ಲಿಮಿಟೆಡ್, ಉಡುಪಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರದ್ದುಗೊಂಡಿರುವ ಬಿಪಿಎಲ್ ಕಾರ್ಡ್ ಸಮಸ್ಯೆ, ಸರಕಾರಿ ಭೂಮಿ, ಕೆರೆ ಅತಿಕ್ರಮಣ, ತ್ಯಾಜ್ಯ ವಿಲೇವಾರಿ ಸಮಸ್ಯೆ, ಅನಿಯಮಿತ ವಿದ್ಯುತ್ ಕಡಿತ, ಪ್ರಮುಖ ಚರಂಡಿಗಳ ಅತಿಕ್ರಮಣ ತೆರವುಗೊಳಿಸದಿರುವುದು ಮತ್ತು ಹೂಳೆತ್ತದಿರುವುದು, ಗ್ರಾಮ ಪಂಚಾಯತ್ ಕ್ರಿಯಾ ಯೋಜನೆ ಮಾಡದಿರುವುದು ಮೊದಲಾದ ಗಂಭೀರ ಸಮಸ್ಯೆಗಳು ಇತ್ತೀಚಿಗೆ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ದ್ವಿತೀಯ ಗ್ರಾಮಸಭೆಯಲ್ಲಿ ಪ್ರಸ್ತಾಪಗೊಂಡಿತು. ಸರಕಾರದ ತಪ್ಪು ನಿರ್ಧಾರದಿಂದ ಬಡವರ ನೂರಾರು ಬಿಪಿಎಲ್ ಕಾರ್ಡ್ ರದ್ದುಗೊಂಡಿದ್ದು, ಸರಕಾರ ಈ ವಿಚಾರದಲ್ಲಿ ನಿಯಮಗಳನ್ನು ಸಡಿಲಿಸಿ ಬಡವರಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ತ್ಯಾಜ್ಯ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಕಳೆದ ಅನೇಕ ವರ್ಷಗಳಿಂದ ಈ ಸಮಸ್ಯೆ ಇದ್ದರೂ ಸರಕಾರವಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಸ್ಥಳವನ್ನು ಗುರುತಿಸಿ ನೀಡಿಲ್ಲ ಅಲ್ಲದೆ ತ್ಯಾಜ್ಯ ವಿಲೇವಾರಿಗೆ ಗಂಭೀರ ಸಮಸ್ಯೆ ಇಲ್ಲದ ಗ್ರಾಮಗಳಿಗೆ ಸರಕಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಶೀ ಮಠದ ಶ್ರೀಮದ್ ಯಾದವೇಂದ್ರ ತೃತೀಯ ಸ್ವಾಮೀಜಿಯವರ ಪುಣ್ಯತಿಥಿಯ ದಿನದಂದು ಹೊನ್ನಾವರದ ವೃಂದಾವನದಲ್ಲಿ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಿಂದ ಸುಮಾರು 25 ಯುವಕರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ವಿಶೇಷ ಮದ್ಯಾಹ್ನ ಪೂಜೆ ನಡೆಯಿತು. ಈ ಸಮಯದಲ್ಲಿ ಊರ ಪರವೂರ ಸಮಾಜ ಭಾಂದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದ ಐವತ್ತು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಕೆಲವಾರು ಏಳು-ಬೀಳುಗಳನ್ನು ಕಂಡು ಈಗ ಫಿನಿಕ್ಸ್‌ನಂತೆ ಮತ್ತೆ ಗರಿಗೆದರಿ ತನ್ನ ನೈಜತೆಯ ಮೂಲದಲ್ಲಿ ನಿಂತಿದೆ. ಮನುಷ್ಯರ ನಡೆವೆ ಸಂಬಂಧಗಳನ್ನು ಬೆಸೆಯುವ ಏಕೈಕ ಮಾಧ್ಯಮ ರಂಗಭೂಮಿ ಮಾತ್ರ ಎಂದು ಚಿಂತಕ, ವಿಮರ್ಶಕ, ರಂಗನಿರ್ದೇಶಕ ನಾ. ಶ್ರೀನಿವಾಸ್ ಮೈಸೂರು ಹೇಳಿದರು. ಸುರಭಿ ಬೈಂದೂರು, ರಂಗಸ್ಥಳ ಉಪ್ಪುಂದ ಜಂಟಿ ಆಶ್ರಯದಲ್ಲಿ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ವಿಶ್ವರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಮನುಷ್ಯನಿಗೆ ಸಾಮಾನ್ಯ ತಿಳುವಳಿಕೆ, ತತ್ವ ಹಾಗೂ ಆಡಂಬರವಿಲ್ಲದ ಆತ್ಮವಿಶ್ವಾಸದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ವರ್ತನೆಗಳನ್ನು ಕಲಿಸುತ್ತದೆ. ಹಾಂಗಂತ ಇದು ಸೆಲೆಬ್ರಿಟಿಗಳನ್ನು ತಯಾರು ಮಾಡುವ ಕಾರ್ಖಾನೆಯಲ್ಲ. ಮನುಷ್ಯರನ್ನು ತಯಾರು ಮಾಡುವಂತ ಒಂದು ಶೈಕ್ಷಣಿಕ ಕ್ಷೇತ್ರ. ಜನಸಮುದಾಯದ ಮನಸಿನ ಆಳಕ್ಕೆ ಮುಟ್ಟುವಂತೆ ಸೂಕ್ತವಾದ ಸೌಂದರ್ಯ ಪ್ರಜ್ಞೆಯ ಅಭಿರುಚಿಯನ್ನು ಬೆಳೆಸುವ ಹಾಗೂ ಸಮಾಜಕ್ಕೆ ಧನಾತ್ಮಕ ಸಂದೇಶ ನೀಡುವ ಕೇಂದ್ರವಾಗಿದೆ. ಜಗತ್ತಿನಲ್ಲಿ ಎಲ್ಲೆಡೆಯೂ ರಂಗಭೂಮಿ ಇದೆ. ಅದರೆ ಕ್ರೌರ್ಯದ ರಂಗಭೂಮಿಕ್ಕಿಂತ ಆದರ್ಶಗಳನ್ನು ಪ್ರೇರಿಪಿಸುವಂತಹ…

Read More