Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವ್ರಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾಗಿ ಆಯ್ಕೆಗೊಂಡ ಜ್ಯೋತಿ ಎಮ್. ಅವರಿಗೆ ತ್ರಾಸಿಯ ಮೊವಾಡಿಯಲ್ಲಿ ಹುಟ್ಟೂರ ಸನ್ಮಾನವನ್ನು ನೀಡಿ ಅಭಿನಂದಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಂತ ಮೊವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ ಪೂಜಾರಿ, ಉಪಾಧ್ಯಕ್ಷೆ ಜೀತ ಡಿ’ಸಿಲ್ವಾ, ಸದಸ್ಯರಾದ ವಿಜಯ ಪೂಜಾರಿ, ರತ್ನಾವತಿ, ಶ್ರೀ ಮಾಣಿ ಸಿದ್ಧಲಿಂಗೇಶ್ವರ ದೇವಸ್ಥಾನ ಮೊಕ್ತೆಸರ ಬಿ.ಕೆ.ನಾರಾಯಣ, ಸುಧಾಕರ್ ಮೊವಾಡಿ, ಮೊವಾಡಿ ಹಾಲು ಉತ್ಪಾದಕರ ಸಂಘ ಕಾರ್ಯದರ್ಶಿ ಶೇಖರ್ ಗಾಣಿಗ, ಡಾ. ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಉಮೇಶ್ ಹಾಗೂ ಮಂಜು ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಧರ್ಮವೆಂಬುದು ಎಲ್ಲರನ್ನೂ ಒಳ್ಳೆಯತನದಲ್ಲಿ ಬದುಕುವಂತೆ ಮಾಡುವ ವ್ಯವಸ್ಥೆ. ಬೆಟ್ಟದಷ್ಟು ಆಶೋತ್ತರಗಳು ಈಡೇರಿಸಿಕೊಳ್ಳುವ ಆತುರದಲ್ಲಿ ಅನ್ಯಾಯ, ಅಧರ್ಮ ಮಿತಿಮೀರಬಾರದು ಎಂಬ ಕಾರಣಕ್ಕೆ ಧರ್ಮದ ಚೌಕಟ್ಟನ್ನು ಹಾಕಲಾಯಿತು. ಧರ್ಮದ ಹಿಂದೆ ದೈವಿಶಕ್ತಿ ಇದ್ದಾಗ ಮನುಷ್ಯ ಸನ್ಮಾರ್ಗದಲ್ಲಿ ನಡೆಯುತ್ತಾನೆ ಎಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಹೇರಂಜಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತ ಶಿಲಾ ದೇಗುಲ ಸಮರ್ಪಣೆ, ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆರ್ಶಿವಚನವಿತ್ತು. ಧರ್ಮ-ಅಧರ್ಮ, ಸುಖ-ದುಖಃಗಳ ಕಲ್ಪನೆಯೇ ಇಲ್ಲದ ಚಾರುವಾಕನ ಸಿದ್ಧಾಂತವನ್ನು ಒಪ್ಪಿ ನಡೆದರೇ ಸಮಾಜಲ್ಲಾಗುವ ಅನ್ಯಾಯಗಳನ್ನು ಸರಿ ಎನ್ನಬೇಕಾದಿತು. ಆಸ್ತಿಕನ ಬದುಕಿನ ನಡೆಯ ಹಿಂದಿನ ದೈವೀಶೃದ್ಧೆ ಹಾಗೂ ನಂಬಿಕೆ ತಪ್ಪು ಮಾಡಲು ಹಿಂಜರಿಯುವಂತೆ ಮಾಡುತ್ತದೆ. ಕೈಮೀರಿ ತಪ್ಪುಗಳಾದಗೂ ಆತ ಪಶ್ಚಾತಾಪ ಪಡುತ್ತಾನೆ. ಜೀವನದಲ್ಲಿ ಧರ್ಮ-ಅಧರ್ಮ, ಪುಣ್ಯ ಪಾಪದ ಕಲ್ಪನೆ ಇದ್ದರೆ ಮಾತ್ರ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ನಮ್ಮನ್ನು ಮೀರಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಿವೈಎಫ್‌ಐ ರಾಜ್ಯಮಟ್ಟದ ಯುವಜನ ಶಿಬಿರ ಇಲ್ಲಿನ ಕಾರ್ಮಿಕ ಭವನದಲ್ಲಿ ಜರುಗಿತು. ಚನೈ ಪತ್ರಿಕೋದ್ಯಮ ಕಾಲೇಜಿನ ಪ್ರಾಧ್ಯಾಪಕ ಕೆ. ನಾಗರಾಜ್ ಉಡುಪ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಕಾರ್ಯದರ್ಶಿ ರಾಜಶೇಖರ ಮೂರ್ತಿ, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಹೆಚ್ ನರಸಿಂಹ, ಸ್ವಾಗತ ಸಮಿತಿ ಅದ್ಯಕ್ಷರಾದ ಉದಯ್ ಕುಮಾರ್ ಹಟ್ಟಿಯಂಗಡಿ, ಸಂತೋಷ ಹೆಮ್ಮಾಡಿ, ರಾಜೇಶ್ ವಡೇರಹೋಬಳಿ ಮೊದಲಾದವರು ಉಪಸ್ಥಿತರಿದ್ದರು.

Read More

ಕೋಟೇಶ್ವರದಲ್ಲಿ ಡಾ.ಬಿ.ಡಿ. ಪಟೇಲ್‌ರಿಗೆ ಗುರುವಂದನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರದ ಹೆಸರಾಂತ ಹೋಮಿಯೋ ಚಿಕಿತ್ಸಾ ಕೇಂದ್ರ ಉತ್ತಮ್ ಹೋಮಿಯೋ ಕ್ಲಿನಿಕ್ ಎರಡೂವರೆ ದಶಕಗಳಿಂದ ಕುಂದಾಪುರದ ಪರಿಸರದ ಜನತೆಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಮನೆ ಮಾತಾಗಿದ್ದು ಇದೀಗ ಸಾರ್ಥಕ ಸೇವೆಯ ಸಂಭ್ರಮದಲ್ಲಿರುವ ಸಂಸ್ಥೆಯು ಗುರುವಂದನಾ ಕಾರ್ಯಕ್ರಮದ ಮೂಲಕ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಏಪ್ರಿಲ್ 3 ರಂದು ಕೋಟೇಶ್ವರದ ಯುವ ಮೆರಿಡಿಯನ್ ಕನ್‌ವೆನ್ಶನ್ ಸೆಂಟರ್, ಮಿನಾಲ್‌ನಲ್ಲಿ ಸಂಜೆ 4 ಗಂಟೆಗೆ ಬೆಂಗಳೂರು ಹಾಗೂ ಚಂಡಿಗಡದ ಸರಕಾರಿ ಹೋಮಿಯಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನಿವೃತ್ತ ಪ್ರಾಂಶುಪಾಲರಾಗಿ ಹೋಮಿಯೋಪತಿ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯ ಹಿನ್ನಲೆಯಲ್ಲಿ ಡಾ. ಬಿ.ಡಿ. ಪಟೇಲ್ ಅವರಿಗೆ ಗುರುವಂದನೆ ಸಲ್ಲಿಸಲಾಗುತ್ತಿದೆ ಆಸಕ್ತ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ಡಾ. ಉತ್ತಮ ಕುಮಾರ ಶೆಟ್ಟಿ ತಿಳಿಸಿದ್ದಾರೆ. ಬೆಳ್ಳಿ ಹಬ್ಬದ ಸಂಭ್ರಮ: 1991ರಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿರುವ ಹೆಗ್ಡೆ ಬಿಲ್ಡಿಂಗ್‌ನಲ್ಲಿ ಆರಂಭಗೊಂಡ ಉತ್ತಮ ಹೋಮಿಯೋ ಕ್ಲಿನಿಕ್ ಕುಂದಾಪುರದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿಯ ಆಡಳಿತಕ್ಕೊಳಪಟ್ಟ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಎ.೩ರ ಭಾನುವಾರ ಮಧ್ಯಾಹ್ನ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ.ಎಸ್. ಯಡಿಯೂರಪ್ಪ ಕಾಲೇಜು ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಬಗ್ಗೆ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ. ಡಾ. ಬಿ.ಬಿ ಕಾಲೇಜಿನಲ್ಲಿ ಕರೆಯಲಾಗಿದ್ದ ಪತ್ರಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಉಡುಪಿ ಪಾಲಿಮಾರು ಮಠದ ಶ್ರೀ ವಿದ್ಯಾಧೀಶ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭೆಯಲ್ಲಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್ ಸದಸ್ಯರಾದ ಶ್ರೀನಿವಾಸ ಪೂಜಾರಿ, ಗಣೇಶ್ ಕಾರ್ಣಿಕ್, ಪ್ರತಾಪಚಂದ್ರ ಶೆಟ್ಟಿ ಹಾಗೂ ಇತರ ಉಪಸ್ಥಿತರಿರಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ದಿ. ಬಸ್ರೂರು ಭುಜಂಗ ಶೆಟ್ಟಿ ಅವರ ನೆನಪಿನಲ್ಲಿ ಆರಂಭಗೊಂಡ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಆರು ವರ್ಷಗಳ ಹಿಂದೆ…

Read More

ಗಂಗೊಳ್ಳಿ : ಇಲ್ಲಿನ ಮುಖ್ಯರಸ್ತೆಯ ಕೆನರಾ ಬ್ಯಾಂಕ್ ಬಳಿ ಇರುವ ಕಟ್ಟಡದಲ್ಲಿ ಪತಂಜಲಿ ಉತ್ಪನ್ನಗಳ ಮಳಿಗೆ ’ನಾಯಕ್ ಸ್ಟೋರ‍್ಸ್’ನ ಉದ್ಘಾಟನೆ ಶನಿವಾರ ನಡೆಯಿತು. ಕುಂದಾಪುರದ ಉದ್ಯಮಿ ಸುರೇಶ ಭಂಡಾರ್‌ಕಾರ್ ಅವರು ಪತಂಜಲಿ ಉತ್ಪನ್ನಗಳ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಆಶೀರ್ವಚನ ನೀಡಿ ಮಾತನಾಡಿದ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ ಅವರು, ದೇಶಾದ್ಯಂತ ಪತಂಜಲಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪತಂಜಲಿ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮವಾಗಿದ್ದು, ಇದನ್ನು ಜನರು ಹೆಚ್ಚೆಚ್ಚು ಬಳಸಬೇಕು. ಗಂಗೊಳ್ಳಿಯಲ್ಲಿ ಪತಂಜಲಿ ಉತ್ಪನ್ನಗಳು ದೊರೆಯುತ್ತಿರುವುದು ಶ್ಲಾಘನೀಯ ಎಂದರು. ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖಾ ಪ್ರಬಂಧಕ ಯು.ಜಗನ್ನಾಥ ಹಾಗೂ ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ಎಂ.ಜಿ.ವಸಂತ ನಾಯಕ್ ಬೆಂಗಳೂರು, ವಿವೇಕ ಪೈ ಬೆಂಗಳೂರು, ಸೀಮಾ ಮೋಹನ ನಾಯಕ್, ಅಕ್ಷತಾ ವಿವೇಕ ಪೈ, ಎಂ.ಜಿ.ರಾಮಕೃಷ್ಣ ನಾಯಕ್, ಎಂ.ಜಿ.ನಾರಾಯಣ ನಾಯಕ್, ಜಿ.ರಾಧಾಕೃಷ್ಣ ನಾಯಕ್, ಉಮೇಶ ಕಾಮತ್, ಎನ್.ಮಾಲಾ ಕೆ.ನಾಯಕ್, ಮಳಿಗೆಯ ಮುಖ್ಯಸ್ಥ ಎಂ.ಜಿ. ಅಜಿತ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಧ್ಯಕಾಲಿನ ಯುಗದ ಪ್ರಾಚೀನತೆಯನ್ನು ಪಡೆದಿರುವ ಯಕ್ಷಗಾನ ಕಲೆ ಕರಾವಳಿಯ ದೆವಸ್ಥಾನಗಳಲ್ಲಿ ಭಕ್ತಿಯ ಒಂದು ಭಾಗವಾಗಿಯೇ ಇದೆ. ಇಂದು ದೇವಸ್ಥಾನಗಳೆಲ್ಲಾ ಶಕ್ತಿ ಕೇಂದ್ರಗಳಾಗುವ ಭರದಲ್ಲಿ ಇಂತಹ ಸಾವಿರಾರು ಕಲೆಗಳು ಸ್ಥಿತ್ಯಂತರವನ್ನು ಪಡೆಯುವಂತಹ ಸ್ಥಿತಿಯಿಂದ ದೂರ ಉಳಿದು ತಮ್ಮ ತನವನ್ನು ಕಾಪಾಡಿಕೊಳ್ಳಬೇಕಾಗಿದೆ. ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ. ಬಿ.ಶಿವರಾಮ ಶೆಟ್ಟಿ ಹೇಳಿದರು. ಅವರು ಕೊಟೇಶ್ವರದ ನಮ್ಮ ಕಲಾಕೇಂದ್ರ ಆಯೋಜಿಸಿದ ಒಂದು ವಾರದ ಯಕ್ಷಹಬ್ಬದ ಕೊನೆಯ ದಿನದ ಯಕ್ಷಧ್ವಜ ಪುರಸ್ಕಾರವನ್ನು ನೀಡಲು ಆಗಮಿಸಿದ್ದರು. ಬಡಗು ತಿಟ್ಟಿನ ಪ್ರಖ್ಯಾತ ಕಲಾವಿದ ಹಾಸ್ಯ ಚಕ್ರವರ್ತಿ ಹಳ್ನಾಡಿ ಜಯರಾಮ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯ್ತು. ಗೌರವವನ್ನು ಸ್ವೀಕರಿಸಿದ ಹಳ್ನಾಡಿಯವರು ಮಾತನಾಡಿ ರಾಜ್ಯದ ನಾನಾಭಾಗಗಳಲ್ಲಿ ನಾನು ತಿರುಗಾಟ ಮಾಡಿ ಸನ್ಮಾನ ಸ್ವೀಕರಿಸಿದರೂ ಸಹ ಕರಾವಳಿಯಲ್ಲಿ ಮೊದಲಿಗೆ ನನಗೆ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ಹೃದಯ ತುಂಬಿ ಬಂದಿದೆ. ನನ್ನ ಸಮಾಜವೇ ನನ್ನನ್ನು ಗುರುತಿಸದ ಸಂದರ್ಭದಲ್ಲಿ ನಮ್ಮ ಕಲಾಕೇಂದ್ರದ ಸನ್ಮಾನ ತೃಪ್ತಿ ತಂದಿದೆ ಎಂದರು. ಸಭಾಧ್ಯಕ್ಷತೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದ್ವಿತೀಯ ಪಿಯುಸಿಯ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಮತ್ತೆ ಲೀಕೌಟ್ ಆಗಿರುವುದನ್ನು ಖಂಡಿಸಿ ಕುಂದಾಪುರ ವಿವಿಧ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಳು ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ತಿಳಿಯದೇ ಗ್ರಾಮೀಣ ಭಾಗದಿಂದ ಪರೀಕ್ಷಾ ಕೇಂದ್ರಕ್ಕೆ ಬಂದು, ಪರೀಕ್ಷೆ ಬರೆಯಲಾಗದೆ ಅಸಾಯಕತೆಯಿಂದ ಹೊರ ಬಂದ ವಿದ್ಯಾರ್ಥಿಗಳ ಸಹನೆ ಕಟ್ಟೆಯೊಡೆದು ವ್ಯವಸ್ಥೆಯ ವಿರುದ್ಧ ದಿಕ್ಕಾರ ಕೂಗಿದರು. ನಾವ್ಯಾಕೆ ಪರೀಕ್ಷೆ ಬರೀಬೇಕು. ಯಾರೋ ಮಾಡಿದ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸಬೇಕು. ಕಷ್ಟಪಟ್ಟು ಓದಿದ್ದೆಲ್ಲಾ ವೇಸ್ಟ್. ಒಮ್ಮೆ ಕೆಮೆಸ್ಟ್ರೀ ಪ್ರಶ್ನೆ ಪತ್ರಿಕೆ ಲೀಕ್ ಆಯಿತು. ಹೋಗಲಿ ಆಂತ ಮತ್ತೆ ಪರೀಕ್ಷೆ ಬರೆಯಲು ಬಂದರೆ, ಅದೂ ಲೀಕ್. ಮತ್ತೆ ಲೀಕ್ ಆಗೋದಿಲ್ಲ ಎನ್ನೋದು ಏನು ಗ್ಯಾರೆಂಟಿ ಎಂದು ಆಕ್ರೋಶ ಹೊರಗೆಡವಿದರು. ಪದೇ ಪದೇ ಪರೀಕ್ಷೆ ಬರೆಯಬೇಕಾ. ಮುಂದೆ ಸಿಇಟಿ ಬರಬೇಕು. ಜೆಇ ಬರೆಯಬೇಕು. ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ಮತ್ತೆ ಪರೀಕ್ಷೆ ತಗಳೋದಾ, ಸಿಇಟಿಗೆ ಜೆಇಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಂಗೊಳ್ಳಿ ಕುಂದಾಪುರದ ನಡುವೆ ಪಂಚಗಂಗಾವಳಿ ನದಿಗೆ ಸೇತುವೆ ನಿರ್ಮಾಣಗೊಂಡರೆ ಕರಾವಳಿಯ ಈ ಭಾಗದ ಲಕ್ಷಾಂತರ ಮಂದಿಗೆ ಅನುಕೂಲವಾಗುವುದಲ್ಲದೇ ಕೋಟ್ಯಾಂತರ ರೂಪಾಯಿ ಉಳಿತಾಯವಾಗುತ್ತದೆ, ಉದ್ಯಮ, ವ್ಯವಹಾರದಲ್ಲೂ ಪ್ರಗತಿಯಾಗುತ್ತದೆ, ಹಲವು ಗ್ರಾಮಗಳ ಅಭಿವೃದ್ಧಿಗೂ ಕಾರಣವಾಗುತ್ತದೆ. ಹಾಗಾಗಿ ಈ ಸೇತುವೆ ನಿರ್ಮಾಣಕ್ಕಾಗಿ ಎಲ್ಲರ ಸಹಕಾರ ಪಡೆದು ಹೋರಾಟ ನಡೆಸೋಣ ಎಂದು ಗಂಗೊಳ್ಳಿಯಲ್ಲಿ ಈ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಗ್ರಾ.ಪಂ.ಸದಸ್ಯ ಯೂನಸ್ ಸಾಹೇಬ್ ಮಾತನಾಡಿ ಗಂಗೊಳ್ಳಿ ಹಾಗೂ ಪರಿಸರ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಈ ಸೇತುವೆ ಆಗಲೇಬೇಕಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು. ಕುಂದಾಪುರ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ ಕುಂದಾಪುರ ಪುರಸಭೆಯಿಂದ ಈ ಯೋಜನೆ ಮಂಜೂರಾತಿಗಾಗಿ ಎಲ್ಲಾ ರೀತಿಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಪುರಸಭಾ ಉಪಾಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ಈ ಯೋಜನೆ ಕಾರ್ಯಗತ ಮಾಡುವುದು ಅಷ್ಟು ಸುಲಭವಲ್ಲ, ಇದಕ್ಕಾಗಿ ವಿಧಾನಸೌಧದಲ್ಲೂ, ಗಂಗೊಳ್ಳಿ ಕುಂದಾಪುರದಲ್ಲೂ ಬಹಳಷ್ಟು ಹೋರಾಟ ನಡೆಸಬೇಕಾಗುತ್ತದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಮಾರ್ಚ್ 31 ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿಯ ರಸಾಯನ ಶಾಸ್ತ್ರ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೂಡ ಸೋರಿಕೆಯಾಗಿ ಪರೀಕ್ಷೆ ರದ್ದು ಗೊಳಿಸಿದ್ದರಿಂದ ಕುಪಿತರಾದ ಪರೀಕ್ಷೆ ಬರೆಯಬೇಕಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಿಯು ಇಲಾಖೆಯ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು. ಮತ್ತೆ ಮತ್ತೆ ಪ್ರಶ್ನೆ ಪತ್ರಿಕೆಗಳು ಲೀಕ್ ಆಗುತ್ತಿರುವುದು ವ್ಯವಸ್ಥೆಯಲ್ಲಿನ ಅತ್ಯಂತ ದೊಡ್ಡ ಹುಳುಕನ್ನು ಎತ್ತಿ ತೋರಿಸುತ್ತಿದೆ. ಈ ಅವಾಂತರಕ್ಕೆ ಇಲಾಖೆಯಲ್ಲಿನ ಅಧಿಕಾರಿಗಳೇ ಕಾರಣ. ಒಂದಷ್ಟು ಹಣದ ಆಸೆಗಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಡನೆ ಆಟವಾಡುವ ತಪ್ಪಿತಸ್ಥರನ್ನು ಶೀಘ್ರವಾಗಿ ಬಂಧಿಸಿ ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮತ್ತು ಭವಿಷ್ಯದಲ್ಲಿ ಅವರನ್ನು ಯಾವ ಹುದ್ದೆಗಳಿಗೂ ಪರಿಗಣಿಸಬಾರದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು. ಪರೀಕ್ಷೆ ರದ್ದಾದ ಕಾರಣ ಆಕ್ರೋಶಿತಗೊಂಡಿದ್ದ ವಿದ್ಯಾರ್ಥಿಗಳು ಪಿಯು ಇಲಾಖೆಯ ವಿರುದ್ಧ ಫೋಷಣೆಗಳನ್ನು ಕೂಗಿದರು. ವಿದ್ಯಾರ್ಥಿಗಳ ಪರವಾಗಿ ಬಿಂದು ,ವಿಜೇಶ್, ರಾಜು ಮಾತನಾಡಿದರು.ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿದರು.

Read More