ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರಿನಲ್ಲಿ ಪ್ರಪ್ರಥಮ ಬಾರಿಗೆ ಈ ಅದ್ದೂರಿಯ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಿರುವ ಸಂಘಟಕರ ಸಾಹಸ ತುಂಬಾ ಶ್ಲಾಘನೀಯ . ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸರಿಸಮಾನವಾಗುವಂತೆ ಈ ಹೊನಲು ಬೆಳಕಿನ ಪಂದ್ಯಾಟವನ್ನು ಏರ್ಪಡಿಸುವುದರಲ್ಲಿ ಅವರ ಶ್ರಮ ಸಾರ್ಥಕವಾಗಿದೆ ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ ಹೇಳಿದರು. ಅವರು ತಲ್ಲೂರಿನ ಶ್ರೀ ಕುಂತಿಯಮ್ಮ ದೇವಸ್ಥಾನದ ವಠಾರದಲ್ಲಿ ಕೊಂಕಣಿ ಖಾರ್ವಿ ಸಮಾಜ ತಲ್ಲೂರು ಇವರ ವತಿಯಿಂದ ಏರ್ಪಡಿಸಲಾದ ಕೆಕೆವೈಎಸ್ ಟ್ರೋಫಿ 2016 ಹೊನಲು ಬೆಳಕಿನ ಕಬಡಿ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸಮಾರಂಭದ ತಲ್ಲೂರು ಗ್ರಾ.ಪಂ. ಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಮಾತನಾಡಿ ಶಾರೀರದ ವಿಕಸನಕ್ಕೆ ಸ್ನೇಹ ಸಂವರ್ಧನೆಗೆ ಇಂತಹ ಪಂದ್ಯಾಟಗಳು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿ ಜ್ಯೋತಿ ಎ. ಜಿ.ಪಂ. ಸದಸ್ಯರು, ವಸಂತ ಹೆಗ್ಡೆ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತಲ್ಲೂರು, ಜಯಾನಂದ ಖಾರ್ವಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಎಲ್ಲೆಡೆ ಮದುವೆ ಸಮಾರಂಭ. ಸಹಜವಾಗಿ ವಾಹನ ದಟ್ಟಣೆಯೂ ಹೆಚ್ಚಿತ್ತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಕೂಡ ನಡೆಯುತ್ತಿದೆ. ಇಕ್ಕಟ್ಟಾದ ಹೆದ್ದಾರಿಯಲ್ಲಿ ಸಂಚಾರವೇ ಕಷ್ಟಸಾಧ್ಯ ಆಗಿರುವಾಗ ಬಸ್ರೂರು ಮೂರುಕೈ ಬಳಿ ಟ್ಯಾಂಕರೊಂದು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡದ್ದೇ ತಡ, ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಜಾಮ್ ಆಗತೊಡಗಿದವು. ವಾಹನ ದಟ್ಟಣೆ ಹೆಚ್ಚಿದ್ದರಿಂದ ಬೆಳಿಗ್ಗೆ 11ಗಂಟೆಯ ಹೊತ್ತಿಗೆ ಜಾಮ್ ಆಗಿದ್ದು ಮಧ್ಯಾಹ್ನ 2:30ರ ತನಕ ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಟ್ಟರು. ಸುಮಾರು 2ಕಿ.ಮೀ ವರೆಗೆ ಕುಂದಾಪುರ ಹಾಗೂ ಹೊರವಲಯದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಮದುವೆ ಮುಂತಾದ ಶುಭಾ ಸಮಾರಂಭಗಳಿಗೆ ತೆರಳುತ್ತಿದ್ದ ನೂರಾರು ಜನರು ಉರಿಬಿಸಿಲಿನಲ್ಲಿ ರಸ್ತೆ ಮಧ್ಯೆಯೇ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದರು. 2:30ರ ತರುವಾಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಸಂಚಾಯ ಸುಗಮವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂದಗತಿಯಲ್ಲಿ ಸಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಬಸ್ರೂರು ಮೂರುಕೈಯಿಂದ ಕುಂದಾಪುರ ಶಾಸ್ತ್ರೀವೃತ್ತದ ವರೆಗೆ ಸಂಚರಿಸುವುದೇ ದುಸ್ತರವೆನಿಸಿದೆ. ಕುಂದಾಪುರ ಪೊಲೀಸರು ಸುಗಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರಿ ಪ್ರಾಥಮಿಕ ಶಾಲೆಗಳ ಹಿಂದಿನ ಸ್ಥಿತಿಗೆ ಪ್ರಸಕ್ತ ಸ್ಥಿತಿಯನ್ನು ಹೋಲಿಸಿದರೆ ದಿಗ್ಭ್ರಮೆ ಉಂಟಾಗುತ್ತದೆ. ಅಲ್ಲೀಗ ಪೋಷಕರ ಹೊಣೆ ಮಕ್ಕಳನ್ನು ಕಳುಹಿಸುವುದಕ್ಕಷ್ಟೆ ಸೀಮಿತವಾಗಿ. ಆ ಬಳಿಕದ ಅವರ ಮಕ್ಕಳ ಎಲ್ಲ ಅಗತ್ಯಗಳನ್ನು ಸರಕಾರ ಪೂರೈಸುತ್ತಿದೆ. ಅಲ್ಲಿ ಆಂಗ್ಲ ಮಾಧ್ಯಮ ತರಗತಿಗಳೂ ನಡೆಯುತ್ತಿವೆ. ಅಷ್ಟಾದರೂ ಪೋಷಕರು ಅದರಿಂದ ಪ್ರಭಾವಿತರಾಗುತ್ತಿಲ್ಲ. ಅದರ ನಡುವೆ ಕೆಲವು ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೈಪೋಟಿ ನಡೆಯುತ್ತಿರುವ ವಿದ್ಯಮಾನವೂ ಇದೆ. ಅದಕ್ಕೆ ಆ ಶಾಲೆಗಳು ಪೋಷಕರಲ್ಲಿ ಮೂಡಿಸಿರುವ ಭರವಸೆ ಕಾರಣ. ಇದನ್ನು ಎಲ್ಲ ಶಾಲೆಗಳು ಗಮನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಪ್ರಾಕ್ತನ ವಿದ್ಯಾರ್ಥಿ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ವಸ್ತಿ ಭಾಷಣ ಮಾಡಿದ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಶುಭಾ ಮರವಂತೆ ಮೊದಲ ಬಾರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಾಮಾನ್ಯ ಜನರಿಗೆ ಕಾನೂನು ಅರಿವು ಮೂಡಿಸುವುದು ಮತ್ತು ಕಾನೂನು ಮಾಹಿತಿ ನೀಡುವ ಉದ್ದೇಶದಿಂದ ಕಾನೂನು ಸಾಕ್ಷರತೆ ಮತ್ತು ಲೋಕ ಅದಾಲತ್ ಕಾರ್ಯಕ್ರಮ ರೂಪಿಸಲಾಗಿದೆ. ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕು ದೊರೆಯಬೇಕಿದೆ. ನಮಗೆ ದೊರೆಬೇಕಾಗಿರುವ ಹಕ್ಕುಗಳನ್ನು ಪಾಲಿಸಿಕೊಳ್ಳುವುದರ ಜೊತೆಗೆ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಸಾಮಾನ್ಯ ಜನರಿಗೆ ಕಾನೂನಿನ ನೆರವು ಸಿಗಬೇಕೆಂಬ ದೃಷ್ಟಿಯಿಂದ ತಾಲೂಕು ಕಾನೂನು ಸೇವಾ ಸಮಿತಿಯನ್ನು ರಚಿಸಲಾಗಿದ್ದು, ಎಲ್ಲರೂ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಈ ವೇದಿಕೆ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಕುಂದಾಪುರದ ೨ನೇ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕಾ ದಂಡಾಧಿಕಾರಿ ಝೈಬುನ್ನಿಸಾ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್ ಕುಂದಾಪುರ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ…
ಕುಂದಾಪುರ: ಕೋಣಿಯ ಮಾತಾ ಮಾಂಟೆಸ್ಸೋರಿ ಶಾಲೆಯಲ್ಲಿ ಚಿಣ್ಣರಿಗಾಗಿ ಬಯಲಿನಾಟ ಕಾರ್ಯಕ್ರಮ ಜರುಗಿತು. ಪ್ರಥ್ವಿ ಪೂಜಾರಿ ಹಾಗೂ ಶಕ್ತಿ ಶೆಟ್ಟಿ ದೀಪ ಬೆಳಗುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಹಾಗೂ ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ, ಶಿಕ್ಷಕಿಯರಾದ ಗೀತಾ ಶೆಟ್ಟಿ, ಸುಮಿತ್ರ ಹಾಗೂ ಪೋಷಕರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಮುಖ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರಕಾರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿದೆ. ಗುತ್ತಿಗೆ ಕಾರ್ಮಿಕ ಕಾನೂನಿಗೆ ತಿದ್ದುಪಡಿ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರಾಷ್ಟ್ರವ್ಯಾಪೀ ಕನಿಷ್ಠ ವೇತನ ನಿಗದಿ ಮಾಡಬೇಕು. ಅಸಂಘಟಿತ ಕಾರ್ಮಿಕರ ಸಮಾಜಿಕ ಭದ್ರತಾ ನಿಧಿ ಸ್ಥಾಪನೆಮಾಡಬೇಕು. ಕಲ್ಯಾಣ ಯೋಜನೆಗಳ ಜಾರಿಗಾಗಿ ಹಣ ಮೀಸಲಿಡಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರತಾಪಸಿಂಹ ಹೇಳಿದರು. ಇಲ್ಲಿನ ಕಾರ್ಮಿಕ ಭವನದಲ್ಲಿ ಸಿಐಟಿಯು ಕಾರ್ಮಿಕ ಸಂಘದ ಕುಂದಾಪುರ ತಾಲೂಕು 3ನೇ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಪ್ರತಾಪಸಿಂಹ ಮಾತನಾಡುತ್ತಿದ್ದರು. ಕೇಂದ್ರ ಸರಕಾರ ದೇಶದ ಅಭಿವೃದ್ಧಿ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತದೆ. ಅಭಿವೃದ್ಧಿ ಪ್ರಗತಿ ಹೇಗೆ ಅನುಷ್ಟಾನಗೊಳಿಸಲಾಗುತ್ತದೆ ಎಂಬುದರ ಅರಿವು ಮಾಡಿಕೊಳ್ಳಬೇಕು. ಅಭಿವೃದ್ಧಿ ವ್ಯಾಪ್ತಿಯಲ್ಲಿ ಕಾರ್ಮಿಕರು, ಕೂಲಿಕಾರರು ಬರುವುದಿಲ್ಲ. ದುಡಿಯಲು ಕೂಲಿ ಕಾರ್ಮಿಕರು ಆದರೆ ಅಭಿವೃದ್ಧಿಯ ಪಾಲಕ್ಕೆ ನಾವು ಅರ್ಹರಲ್ಲ ಎಂಬ ಭಾವನೆ ಮೂಡುತ್ತಿದೆ. ಅಭಿವೃದ್ಧಿ ಎಂದರೆ ವೈಭವದ ಜೀವನ ಅಲ್ಲ. ಕನಿಷ್ಠ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ.ಎ.18: ಸದ್ಯದಲ್ಲೇ ಹಸೆಮಣೆ ಏರಬೇಕಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ನಾಡಾ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕು ಯಾನೆ ಸುಶೀಲ ಮಡಿವಾಳ್ತಿ ಎಂಬುವವರ ಪುತ್ರ ಮಂಜುನಾಥ ನಾಡ (26) ನೇಣಿಗೆ ಶರಣಾದ ಯುವಕ. ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ ನಡೆಸುತ್ತಿದ್ದ ಮಂಜುನಾಥನಿಗೆ ಕೆಲವು ತಿಂಗಳುಗಳ ಹಿಂದಷ್ಟೇ ಕೆದೂರಿನ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಮೇ.2ರಂದು ಮದುವೆ ನಡೆಯುವುದಿತ್ತು. ಆ ಕಾರಣದಿಂದಾಗಿ ಊರಿನಲ್ಲಿಯೇ ಇದ್ದ ಮಂಜುನಾಥ ಸೋಮವಾರ ಏಕಾಏಕಿ ನಾಪತ್ತೆಯಾಗಿದ್ದರಿಂದ ಹುಡುಕಾಟ ನಡೆಸಿದಾಗ ಮನೆಯ ಸಮೀಪದ ಹಾಡಿಯೊಂದರಲ್ಲಿ ನೇಣು ಬಿಗಿದುಕೊಂಡಿರುವುದು ತಿಳಿದುಬಂದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮದುವೆ ತಯಾರಿಯಲ್ಲಿದ್ದ ಯುವಕ ಏಕಾಏಕಿ ಆತ್ಮಹತ್ಯೆ ನಿರ್ಣಯ ಕೈಗೊಂಡಿರುವುದು ಅವರ ಬಂಧುಗಳು ಹಾಗೂ ಸ್ನೇಹಿತರನ್ನು ಆತಂಕಕ್ಕೆ ನೂಕಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. / ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪ್ರ ಡಾಟ್ ಕಾಂ ನೋಟ್. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎ.25ರಂದು ವಿಕಲಚೇತನರ ಸಮಾವೇಶ, ಪ್ರತಿಭಾ ಹಾಗೂ ಕೌಶಲ್ಯ ಅನಾವರಣದ ಕುರಿತು ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ತಿಳಿಸಿದ್ದಾರೆ. ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಲಾಂಚನ, ಅಮಂತ್ರಣ ಪತ್ರಿಕೆ ಹಾಗೂ ಸರಕಾರದ ಸೌಲಭ್ಯಗಳ ಮಾಹಿತಿಗಳ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾಹಿತಿ ನೀಡಿದರು. ವಿಕಲಚೇತನರ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವುದು, ಅವರಲ್ಲಿರುವ ಸುಪ್ತ ಪ್ರತಿಭೆ ಮತ್ತು ಕೌಶಲವನ್ನು ಗುರುತಿಸಿ ಪ್ರೋತ್ಸಾಹಿಸಲು ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದು ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವುದು ಕಾರ್ಯಕ್ರಮ ಆಯೋಜನೆಯ ಉದ್ದೇಶ. ವಿಕಲಚೇತನರ ಪ್ರತಿಭಾ ಪ್ರದರ್ಶನ ಮತ್ತು ಅವರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮವನ್ನು ಯುವ ಉದ್ಯಮಿ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾದಿಕಾರಿಗಳಾದ ಹೆಚ್ ಶಾಂತಾರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಪಾಂಡುರಂಗ ಶಾನುಭೋಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ 11ನೆ ಉಳ್ಳೂರು ಗ್ರಾಮದ ಉಪ್ರಳ್ಳಿಯ ಜನಾರ್ದನ ದೇವಸ್ಥಾನವು ಸುಮಾರು 1300ವರ್ಷಗಳ ಹಿಂದಿನದೆಂದು ನಂಬಲಾಗುತ್ತಿದೆ. ಇದು ಮುಜರಾಯಿ ಇಲಾಖೆಯ ತಸದೀಕು ಪಡೆಯುತ್ತಿದೆ. ಪಾಣಿಪೀಠದ ಮೇಲೆ ನಿಂತ ಭಂಗಿಯಲ್ಲಿ ಪ್ರತಿಷ್ಠಾಪಿತವಾಗಿರುವ ಸಾಲಿಗ್ರಾಮ ಶಿಲೆಯ ಜನಾರ್ದನ ದೇವರ ವಿಗ್ರಹವು 3 ಅಡಿ ಎತ್ತರವಾಗಿದ್ದು, ತುಂಬ ಸುಂದರವಾಗಿದೆ. ಗರ್ಭಗುಡಿ, ಗೋಪುರ, ತೀರ್ಥಮಂಟಪ, ಹೆಬ್ಬಾಗಿಲು, ಸುತ್ತ ಪೌಳಿ, ಬಲಿಕಲ್ಲುಗಳನ್ನು ಹೊಂದಿರುವ ಈ ದೇವಾಲಯ ಒಂದು ಕಾಲದಲ್ಲಿ ಊರಿನ ಪ್ರಮುಖ ದೇವಾಲಯವಾಗಿತ್ತು. ಜೀರ್ಣಗೊಂಡ ದೇವಾಲಯವನ್ನು ಶಿಲಾಮಯವಾಗಿ ಮರುನಿರ್ಮಿಸುವ ಕಾರ್ಯ ಇದೀಗ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎ. 19ರಿಂದ 21ರ ವರೆಗೆ ನಡೆಯುವ ಸಮಾರಂಭದಲ್ಲಿ ಅದನ್ನು ದೇವರಿಗೆ ಸಮರ್ಪಿಸಲಾಗುವುದು. 19ರಂದು ಪ್ರತಿಷ್ಠಾಪೂರ್ವ ವಿಧಿಗಳು ನಡೆದು, ೨೦ರಂದು ದೇವರ ಪುನರ್‌ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮಕಲಶ ಸ್ಥಾಪನೆ ನಡೆಯುವುದು. 21ರಂದು ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯುವುದು. ಅದರ ಪೂರ್ವದಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಬಿ. ಅಪ್ಪಣ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣ ಓದು ಬರಹಗಳಿಂದ ಗಳಿಸುವ ಜ್ಞಾನಕ್ಕೆ, ಪರೀಕ್ಷೆಗಳಲ್ಲಿ ಪಡೆಯುವ ಅಂಕಗಳಿಗೆ ಸೀಮಿತವಾಗಬಾರದು. ಅದು ಸಂಸ್ಕೃತಿಯನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣಾರ್ಥಿಗೆ ಜೀವನ ಮೌಲ್ಯವನ್ನು ಕಲಿಸಬೇಕು ಎಂದು ಕೋಟ ಪಡುಕೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ ಹೇಳಿದರು. ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಶೈಕ್ಷಣಿಕ ಸಭೆಯಲ್ಲಿ ಅವರು ಅಮೃತ ನುಡಿ ಆಡಿದರು. ಪಟ್ಟಣಗಳಲ್ಲಿ, ಆಂಗ್ಲಭಾಷಾ ಮಾಧ್ಯಮದಲ್ಲಿ ಕಲಿತವರು ಮಾತ್ರ ವಿಶೇಷ ಸಾಧನೆ ಮಾಡುತ್ತಾರೆ ಎನ್ನುವುದು ಸತ್ಯವಲ್ಲ. ಹೆಚ್ಚಿನ ಸಾಧಕರು ಹಳ್ಳಿಗಳಿಂದ, ಮಾತೃಭಾಷಾ ಶಾಲೆಗಳಿಂದ ಬಂದಿದ್ದಾರೆ ಎಂದ ಅವರು ಗುಣಮಟ್ಟದ ಶಿಕ್ಷಣ ಸಾಧ್ಯ ಎನ್ನುವುದನ್ನು ಹಲವು ಮಾತೃಭಾಷಾ ಮಾಧ್ಯಮ ಶಾಲೆಗಳು ತೋರಿಸಿಕೊಟ್ಟಿವೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಸ್ವಾಗತಿಸಿದರು. ಖಂಬದಕೋಣೆಯ ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರ, ನಾವುಂದ ಸಮೂಹ…
