ಕುಂದಾಪುರ: ಕುಬುಡೋ ಬುಡೋಕಾನ್ ಕರಾಟೆ ಡೋ.ಕರ್ನಾಟಕ ಇವರು ಅಜ್ಜರಕಾಡಿನ ಮಹಾತ್ಮಗಾಂಧಿ ಕ್ರೀಡಾಂಗಣ ಏರ್ಪಡಿಸಿದ 3ನೇ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಕರಾಟೆ ಸ್ಪರ್ಧಾಕೂಟ 2016 ಬ್ಲಾಕ್ ಬೆಲ್ಟ್ ವಿಭಾಗಲ್ಲಿ ಕು.ದಿವ್ಯಾ.ಎಚ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಕುಮಿಟೆ ವಿಭಾಗದಲ್ಲಿ ದ್ವೀತಿಯ ಸ್ಥಾನ ಹಾಗೂ ವೆಪನ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕೋಟ ಆರಕ್ಷಕ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ.ಎಚ್.ಎಸ್ ಹಾಗೂ ಸುಗುಣಾ ದಂಪತಿಯ ಪುತ್ರಿಯಾಗಿರುತ್ತಾರೆ.ಕಿರಣ್ ಕುಂದಾಪುರ ಅವರಲ್ಲಿ ತರಬೇತಿ ಪಡೆದಿರುತ್ತಾರೆ.
Author: ನ್ಯೂಸ್ ಬ್ಯೂರೋ
ಕುಂದಾಪುರ: ತಾಲೂಕು ವಾದ್ಯ ಕಲಾವಿದರ ಸಂಘ (ರಿ.) ಕೋಟೇಶ್ವರ ಇವರ 3ನೇ ವರ್ಷದ ತ್ಯಾಗರಾಜರ ಆರಾಧನಾ ಕಾರ್ಯಕ್ರಮ ಪ್ರತ್ಯೇಕ ವಾದ್ಯ ಸಂಗೀತ ಸೇವೆ ನೀಡುವುದರ ಮೂಲಕವೇ ಜರಗಿತು. ಪಂಚಗಂಗಾವಳಿಯ ರೈತ ಸೇವಾ ಸಹಕಾರಿ ಸಂಘ ಹೆಮ್ಮಾಡಿ ಇದರ ಅಧ್ಯಕ್ಷ ರಾಜು ದೇವಾಡಿಗ ತ್ರಾಸಿ ಉದ್ಘಾಟಿಸಿದರು. ಸಭಾ ಕಾರ್ಯಕ್ರದ ಅಧ್ಯಕ್ಷತೆಯನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಧಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಧಾನದ ಆಡಳಿತ ಮೋಕ್ತೆಸರ ಪ್ರಭಾಕರ ಶೆಟ್ಟೆ, ಸಪ್ತಸ್ವರ ವಿವಿದೋದ್ಧೇಶ ಸಹಕಾರಿ ಸಂಘ ತಲ್ಲೂರು ಇದರ ಅಧ್ಯಕ್ಷ ಎಂ.ಸಂಜೀವ ದೇವಾಡಿಗ ತಲ್ಲೂರು, ಸಂಗೀತ ಭಾರತಿ ಟ್ರಸ್ಟ್ ಕುಂದಾಪುರದ ಕಾರ್ಯದರ್ಶಿ ನಾರಾಯಣ ದೇವಾಡಿಗ, ಗಂಗಾ ಪ್ರೋಡೆಕ್ಟ್ ಉದ್ಯಮಿಯಾದ ಚಂದ್ರ ಶೇಖರ ದೇವಾಡಿಗ, ಸುಪ್ರೀಮ್ ಮೋಟಾರ್ಸ್ ಕುಂದಾಪುರದ ರಮೇಶ ದೇವಾಡಿಗ ಕೋಟೇಶ್ವರ ಮತ್ತು ಸಂಘದ ಅಧ್ಯಕ್ಷ ಭಾಸ್ಕರ ದೇವಾಡಿಗ ಕೋಟೇಶ್ವರ ಮೊದಲಾದವರು ಉಪಸ್ಧಿತರಿದ್ದರು. ಸಂಘದ ಕಾರ್ಯದರ್ಶಿ ರಾಜೇಶ ದೇವಾಡಿಗ ತ್ರಾಸಿ ಲೆಕ್ಕ ಪತ್ರ ಮಂಡಿನೆ ಮಾಡಿದರು. ಸಭೆಯಲ್ಲಿ ವಿವಿದ…
ಗಂಗೊಳ್ಳಿ: ಸಂಘ ಸಂಸ್ಥೆಗಳು ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ತನ್ನಿಂದಾಗುವ ಸಹಾಯ ಸಹಕಾರವನ್ನು ನೀಡಬೇಕು. ಸಂಘ ಸಂಸ್ಥೆಗಳ ಸದಸ್ಯರಲ್ಲಿ ಒಗ್ಗಟ್ಟು ಅತೀ ಮುಖ್ಯವಾಗಿದ್ದು ಎಲ್ಲರೂ ಒಂದಾಗಿ ಒಂದೇ ಮನಸ್ಸಿನಿಂದ ತಮ್ಮ ಚಟುವಟಿಕೆಗಳನ್ನು ನಡೆಸಬೇಕು. ಗ್ರಾಮದ ಹಾಗೂ ಪರಿಸರದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು. ಕಳೆದ ೨೨ ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಾ, ಧಾರ್ಮಿಕ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಗಂಗೊಳ್ಳಿಯ ಪಂಚಗಂಗಾವಳಿ ಬಳಗದ ಸಾಧನೆ ಶ್ಲಾಘನೀಯ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ಪಂಜುರ್ಲಿ ದೇವಸ್ಥಾನದ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಪಂಚಗಂಗಾವಳಿ ಬಳಗದ ೨೨ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರ ಕಲಾ ಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್, ಶಿರೂರಿನ ಉದ್ಯಮಿ ಗೋಪಾಲಕೃಷ್ಣ, ಗಂಗೊಳ್ಳಿ ರೋಟರಿ ಕ್ಲಬ್ನ ಅಧ್ಯಕ್ಷ ಪ್ರದೀಪ ಡಿ.ಕೆ. ಶುಭ ಹಾರೈಸಿದರು.…
ಕುಂದಾಪುರ: ಉಡುಪಿಯಲ್ಲಿ ನಡೆದ ರಾಷ್ಟ್ರಮಟ್ಟದ ಕುಬುಡೋ ಬುಡೋಕಾನ್ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ, ಹಲವು ಪ್ರಶಸ್ತಿ ಗಳಿಸಿದ ಬುಡೋಕಾನ್ ಕರಾಟೆಯ ಕುಂದಾಪುರ ಶಾಖೆಯ ವಿದ್ಯಾರ್ಥಿಗಳನ್ನು ಶಿಯಾನ್ ಪರಮೇಶ್ ಆಂಧ್ರ ಪ್ರದೇಶ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕರಾಟೆ ಶಿಕ್ಷಕರುಗಳಾದ ಶಿಯಾನ್ ರವಿಕುಮಾರ್ ಉದ್ಯಾವರ ಹಾಗೂ ಸೆನ್ಸಾ ಸಂದೀಪ್ ಪೂಜಾರಿ ಕುಂದಾಪುರ ಇವರು ಉಪಸ್ಧಿತರಿದ್ದರು.
ಕುಂದಾಪುರ: ಕುಂದಪ್ರಭ ಸಂಸ್ಧೆಯಿಂದ ಕೋ.ಮ ಕಾರಂತ ಪ್ರಶಸ್ತಿ ಸ್ವೀಕರಿಸಿದ ಮುಂಬೈ ಉದ್ಯಮಿ ಸುರೇಶ ಡಿ.ಪಡುಕೋಣೆ, ಶಾಂತಾ ಡಿ.ಪಡುಕೋಣೆ ದಂಪತಿಯನ್ನು ದೇವಾಡಿಗ ಸಮಾಜ ಸೇವಾ ಸಂಘ (ರಿ.) ಕುಂದಾಪುರ ಇವರ ವತಿಯಿಂದ ಗೌರವಿಸಲಾಯಿತು. ಸಂಸ್ಧೆಯ ಅಧ್ಯಕ್ಷರಾದ ನಾರಾಯಣ ಕೆ, ಗೌರವಾಧ್ಯಕ್ಷರಾದ ಚಂದ್ರಶೇಖರ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ ಹೇರಿಕೇರಿ,ಉಪಾಧ್ಯಕ್ಷರಾದ ರಾಜಾ ದೇವಾಡಿಗ ಟಿ.ಟಿ.ರಸ್ತೆ ,ಮಾಜಿ ಅಧ್ಯಕ್ಷರಾದ ದತ್ತಾತ್ರೇಯ ದೇವಾಡಿಗ, ನಾಗರಾಜ್ ರಾಯಪ್ಪನ ಮಠ ,ವಿ ದಿನೇಶ ದೇವಾಡಿಗ,ಸಂಘದ ಪ್ರಮುಖರಾದ ಕೃಷ್ಣ ದೇವಾಡಿಗ,ಅನಿಲ ದೇವಾಡಿಗ,ನಿತ್ಯಾನಂದ,ದೇವಾಡಿಗ, ಆಶಾ ದೇವಾಡಿಗ, ವಿನಯಾ ಗಣೇಶ, ಸುಮನಾ ಪ್ರಕಾಶ, ರತ್ನಾಕೃಷ್ಣ, ಶಶಿಕಲಾ ನಾರಾಯಣ, ಜಯಶ್ರೀ ದತ್ತಾತ್ರೇಯ.
ಕುಂದಾಪುರ: ಇಲ್ಲಿ ಆರಾಧನಾ ಮಹೋತ್ಸವದ ಪ್ರಯುಕ್ತ ಗುರುವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಘಂಟೆವರೆಗೆ ಭಜನೆ, ತದನಂತರ ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾ ಸಮಾರಾಧನೆ ನಡೆಯಿತು.ಸಂಜೆ ಶ್ರೀ ಗುರುವರ್ಯರ ಭಾವಚಿತ್ರದೊಂದಿಗೆ ಬೆಳ್ಳಿಯ ಪುಷ್ಪ ರಥ ಸಹಿತ ಕೋಟೇಶ್ವರ ಪೇಟೆಯಲ್ಲಿ ನಗರ ಭಜನೆ, ರಾತ್ರಿ ವಿಶೇಷ ವಸಂತ ಪೂಜೆ, ಶ್ರೀ ಗುರು ಗುಣಗಾನ ನಡೆಯಿತು. ಈ ಸಂಧರ್ಭದಲ್ಲಿ ಮೊಕ್ತೇಸರರಾದ ಆಟಕೆರೆ ಶಾಂತಾರಾಮ ಪೈ,ರತ್ನಾಕರ ವೈಕುಂಠ ಕಾಮತ, ವಿಠಲದಾಸ ಭಟ್ ಉಪಸ್ಥಿತರಿದ್ದರು. ಶ್ರೀ ರಾಮ ಸೇವಾ ಸಂಘದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.
ಬೈಂದೂರು: ದೇಶದಲ್ಲಿ ಕೆಲವು ಕ್ಷುಲ್ಲಕ ಕಾರಣಕ್ಕಾಗಿ ಅಸಹಿಷ್ಣುತೆ ಹೆಸರಿನಲ್ಲಿ ರಾಜಕೀಯ ಮಾಡುವ ಸಾಹಿತಿಗಳು, ಸ್ವಯಂಘೋಷಿತ ಬುದ್ದಿಜೀವಿಗಳು ವಿಪರೀತ ಹೇಳಿಕೆಗಳಿಂದ ಸ್ವಾಥ್ಯ ಸಮಾಜದ ಸಾಮರಸ್ಯ ಹಾಳು ಮಾಡುವುದಲ್ಲದೇ ಕೆಲವರು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಾರೆ. ಆದರೆ ಭಯೋದ್ಪಾದರ ದಾಳಿ, ಶತ್ರುರಾಷ್ಟ್ರಗಳಿಂದ ದೇಶ ಹಾಗೂ ದೇಶವಾಸಿಗಳನ್ನು ಕಾಯುವ ಸೈನಿಕರು ವೀರಮರಣ ಹೊಂದಿದರೆ ಇವರಿಗೆಲ್ಲ ಏನೂ ಅನ್ನಿಸದಿರುವುದು ದೊಡ್ಡ ದುರಂತ ಎಂದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಎಂ. ಗಣಪತಿ ಗೌಡ ಎಳಜಿತ್ ವಿಷಾದಿಸಿದರು. ಬೈಂದೂರು ತೊಂಡೆಮಕ್ಕಿಯಲ್ಲಿ ಜೈ ಜವಾನ್ ವೀರ ಯೋಧರ ಸರಣ ಸಮಿತಿಯ ಮೂರನೇ ವರ್ಷದ ವಾರ್ಷಿಕೋತವದಲ್ಲಿ ಮಂಗಳವಾರ ನಡೆದ ಗಣರಾಜ್ಯೋತ್ವವ ಪ್ರಯುಕ್ತ ಯೋಧರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿಶ್ವದಲ್ಲಿ ಅತಿಹೆಚ್ಚು ಯುವಶಕ್ತಿ ಹೊಂದಿದ ದೇಶ ಭಾರತ. ಇಲ್ಲಿನ ಸೈನಿಕರ ಕಾರ್ಯವೈಖರಿ ಪ್ರಪಂಚವೇ ಹುಬ್ಬೇರಿಸುವಂತೆ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲ್ಲಿ ಹೆಚ್ಚಿನ ಯುವಕರು ಜಡತ್ವ ಹೊಂದಿದ್ದು, ಇದರಿಂದ ಹೊರಗೆ ಬಂದು ಇಂದಿನ ಸ್ಥಿ-ಗತಿಗಳ ಬಗ್ಗೆ ಚಿಂತನೆ ಮಾಡಬೇಕು. ಗ್ರಾಮೀಣ ಭಾಗದ ಮಧ್ಯಮ ವರ್ಗದವರನ್ನು ಹೊರತುಪಡಿಸಿ…
ಕುಂದಾಪುರ: ವೃಂದಾವನಸ್ಥ ಶ್ರೀ ಗುರುವರ್ಯರ ಆರಾಧನಾ ಮಹೋತ್ಸವವನ್ನು ಬಸ್ರೂರು ಕಾಶೀ ಮಠದಲ್ಲಿ ಶ್ರೀ ವೆಂಕಟರಮಣ ದೇವರು ಹಾಗೂ ಶ್ರೀಮತ್ ಕೇಶವೇಂದ್ರ ತೀರ್ಥರು ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಶ್ರೀ ಪಾದಂಗಳವರ ದಿವ್ಯ ವೃಂದಾವನಗಳಲ್ಲಿ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕದೊಂದಿಗೆ, ಭಜನೆ ಸಂಕೀರ್ತನೆ, ಮಹಾಪೂಜೆ ನಡೆಯಿತು. ಸಂಜೆ ಗುರುವರ್ಯರ ಭಾವ ಚಿತ್ರದ ನಗರೋತ್ಸವದೊಡನೆ ಸಂಪನ್ನಗೊಂಡಿತು. ಗೌಡ ಸಾರಸ್ವತ ಸಮಾಜದ ಬ್ರಾಹ್ಮಣ ಸಮಾಜದ ಪ್ರಾಚೀನ ಗುರು ಪೀಠವಾದ ಶ್ರೀ ಕಾಶೀ ಮಠ ಸಂಸ್ಥಾನದ ದಕ್ಷಿಣ ಭಾರತದಲ್ಲಿನ ಮೊತ್ತ ಮೊದಲ ಶಾಖಾ ಮಠವಾದ ಬಸ್ರೂರು ಶ್ರೀ ಕಾಶೀ ಮಠದಲ್ಲಿ ಪರಂಪರೆಯ ಯತಿಶ್ರೇಷ್ಟರಾದ ಹಾಗೂ ಜಿ.ಎಸ್.ಬಿ. ಸಮುದಾಯದ ಆರಾದ್ಯ ಗುರುಗಳಾಗಿ ಎಳು ದಶಕಕ್ಕೂ ಮಿಕ್ಕಿ ಇಡೀ ಸಮಾಜದ ಅಭ್ಯುದಯಕ್ಕೆ ಕಾರಣೀಕರ್ತರಾಗಿ ಸಮಾಜವನ್ನು ಧಾರ್ಮಿಕವಾಗಿ, ನೈತಿಕವಾಗಿ, ಜನ ಪರವಾಗಿ ಆಧ್ಯಾತ್ಮದ ನೆಲೆಯಲ್ಲಿ ಮುನ್ನಡೆಸಿದವರು ಶ್ರೀ ಸುಧೀಂದ್ರ ತೀರ್ಥ ಗುರುವರ್ಯರು. ವೇ.ಮೂ.ದಾಮೋದರ ಆಚಾರ್ಯರು ಗುಣಗಾನದಲ್ಲಿ ಸುಧೀಂದ್ರ ತೀರ್ಥರು ಅತಿ ಧೀರ್ಘಕಾಲ ಸಮಾಜದ ಅಭ್ಯುದಯಕ್ಕಾಗಿ ನಿರಂತರ ಶ್ರಮ ವಹಿಸುತ್ತಾ, ಯತಿ ಪರಂಪರೆಗೆ…
ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜನರು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡುತ್ತಿದ್ದಾರೆ. ಎಲ್ಲಾ ಧರ್ಮಗಳ ಜನರು ಸೌಹಾರ್ದದಿಂದ ಶಾಂತಿಯುತವಾಗಿ ಜೀವನ ನಡೆಸಲು ಇಲಾಖೆ ಸರ್ವ ರೀತಿಯ ಸಹಕಾರ ನೀಡಲಿದೆ. ಜನರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಉತ್ತಮ ವಾತಾವರಣ ನಿರ್ಮಿಸಲು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಹೇಳಿದರು. ಅವರು ಗಂಗೊಳ್ಳಿಯ ಪೊಲೀಸ್ ಹೊರಠಾಣೆಯಲ್ಲಿ ಜರಗಿದ ಗಂಗೊಳ್ಳಿ ಗ್ರಾಮದ ಪೊಲೀಸ್ ಜನಸಂಪರ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಬ್ಯಾನರ್ ಬಂಟಿಂಗ್ಸ್ ಕಟ್ಟುವ ಸಂದರ್ಭ ಅವಘಡ ಸಂಭವಿಸಿರುವುದರಿಂದ ಸಭೆ ಸಮಾರಂಭಗಳ ಬ್ಯಾನರ್ಗಳನ್ನು ಸಂಜೆ ಸೂರ್ಯಾಸ್ತದೊಳಗೆ ಕಟ್ಟಬೇಕು. ಫೆ.೧ರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಇಲ್ಲದಿದ್ದಲ್ಲಿ ದಂಡ ವಿಧಿಸಲಾಗುವುದು. ಮುಂಬರುವ ತಾಪಂ. ಜಿಪಂ ಚುನಾವಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆ ಕ್ರಮಕೈಗೊಂಡಿದ್ದು, ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದರು. ಬೈಂದೂರು ಪೊಲೀಸ್ ವೃತ್ತ…
ಕುಂದಾಪುರ: ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತ ಉಪಖಂಡದಲ್ಲಿ ವೈವಿಧ್ಯಮಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ನಮಗೆ ಭಾರತೀಯ ಸಮುದಾಯದ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಪುನರ್ ಪರಿಶೀಲನೆಗೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿಬಂದಿದೆ. ಪೂರಕವಾಗಿ ಭಾರತೀಯ ಸಾಹಿತ್ಯ ಮತ್ತು ಭಾಷೆಯ ಅಧ್ಯಯನ ಬಹಳ ಮುಖ್ಯವಾಗಿದೆ ಎಂದು ಪ್ರಸಿದ್ಧ ಲೇಖಕ ಪ್ರೊ.ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಣಿಪಾಲ ವಿಶ್ವವಿದ್ಯಾಲಯದ ಡಾ. ಟಿ.ಎಂ.ಎ ಪೈ ಭಾರತೀಯ ಸಾಹಿತ್ಯ ಪೀಠ ಮತ್ತು ಕಾಲೇಜಿನ ಡಾ.ಹೆಚ್. ಶಾಂತಾರಾಂ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆಯ ಸಹಯೋಗದಲ್ಲಿ ಭಾರತೀಯ ಕಥನ ಸಾಹಿತ್ಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯ ಭಾರತೀಯ ಸಾಹಿತ್ಯದಲ್ಲಿ ಈ ಹಿಂದೆ ಭಾಷೆಗಳಲ್ಲಿ ಭಿನ್ನತೆ ಇರಲಿಲ್ಲ. ಕನಿಷ್ಠ ಎರಡರಿಂದ ಮೂರು ಭಾಷೆಗಳ ಜ್ನಾನ ಇರುತ್ತಿತ್ತು. ಕಾಲಕಳೆದಂತೆ ವಸಾಹತುಷಾಹಿ ಇಂಗ್ಲೀಷ್ ಭಾಷೆಯ ಪ್ರಭಾವಕ್ಕೆ ಸಿಲುಕಿ ಕೇವಲ ಇಂಗ್ಲೀಷ್ ಬಿಟ್ಟರೆ ನಮ್ಮ ಭಾಷೆ ಮಾತ್ರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಭಾಷಾವಾರು ಪ್ರಾಂತ್ಯ ವಿಂಗಡಣೆಯು…
