Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಬ್ಬರು ಸರಗಳ್ಳರನ್ನು ಕೋಟ ಪೊಲೀಸ್‌ ಠಾಣೆಯ ಸಿಬ್ಭಂದಿಯೋರ್ವರು ಸಾಹಸ ಮೆರೆದು ಬಂಧಿಸಿದ್ದು, ಆರೋಪಿಗಳನ್ನು ಬುಧವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಾವುಂದ ನಿವಾಸಿಗಳಾದ ನಾಗೇಶ ಖಾರ್ವಿ(22), ಮಧುಕರ ಖಾರ್ವಿ (25) ಆರೋಪಿಗಳು. ಬೈಕ್‌ನಲ್ಲಿ 15 ಕಿ.ಮೀ. ಬೆನ್ನಟ್ಟಿ ಬಂಧನ ಆರೋಪಿಗಳು ಸೋಮವಾರ ರಾತ್ರಿ ಪಲ್ಸರ್‌ ಬೈಕ್‌ನಲ್ಲಿ ಬಂದು ಸಾಲಿಗ್ರಾಮ ಸಮೀಪ ಕಾರ್ಕಡ ಹಿ.ಪ್ರಾ. ಶಾಲೆ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳ ಕುತ್ತಿಗೆಯಿಂದ ಸರ ಅಪಹರಿಸಲು ಪ್ರಯತ್ನಿಸಿದ್ದು, ಈ ಸಂದರ್ಭ ಆಕೆ ಜೋರಾಗಿ ಕೂಗಿಕೊಂಡಿದ್ದರು. ಆಗ ಸಮೀಪ ಕರ್ತವ್ಯ ನಿರತರಾಗಿದ್ದ ಕೋಟ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಪ್ರದೀಪ್‌ ನಾಯಕ್‌ ಬೈಕ್‌ನಲ್ಲಿ ಅವರನ್ನು ಬೆನ್ನಟ್ಟಿದ್ದು, ಆರೋಪಿಧಿಗಳು ಬೈಕಿನಲ್ಲಿ ಬ್ರಹ್ಮಾವರ ಕಡೆಗೆ ವೇಗವಾಗಿ ಸಾಗಿದರು. ಅನಂತರ ಬ್ರಹ್ಮಾವರ ಆಕಾಶವಾಣಿ ಸರ್ಕಲ್‌ನಿಂದ ಬಾಕೂìರು ರಸ್ತೆಯ ಮೂಲಕ ಪರಾರಿಯಾಗಲು ಯತ್ನಿಸಿದಾಗ ಪ್ರದೀಪ್‌ ನಾಯಕ್‌ ಕೂಡ ಅಷ್ಟೇ ವೇಗದಲ್ಲಿ ಅವರನ್ನು ಬೆನ್ನಟ್ಟಿ ಘಟನೆ ಈ ಕುರಿತು ಸ್ಥಳೀಯರಿಗೆ ಹಾಗೂ ಉನ್ನತ ಪೊಲೀಸ್‌…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ದೇವಾಡಿಗ (36) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ. ಬೈಂದೂರು ವಿದ್ಯಾನಗರ ನಿವಾಸಿಯಾದ ಸುಬ್ರಹ್ಮಣ್ಯ ಅವರು ಅತಿಥಿ ಉಪನ್ಯಾಸಕರಾಗಿ ಬೈಂದೂರು ಕಾಲೇಜು ಹಾಗೂ ಭಟ್ಕಳದ ಸಿದ್ಧಾರ್ಥ ಕಾಲೇಜಿನಲ್ಲಿ ಸೇವೆಸಲ್ಲಿಸುತ್ತಿದ್ದರು. ಪ್ರಗತಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಿರ್ದೇಶಕಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಾಯಿ, ಓರ್ವ ಸಹೋದರ, ಈರ್ವರು ಸಹೋದರಿಯರು, ಬಂಧುಗಳು ಹಾಗೂ ವಿದ್ಯಾರ್ಥಿ ವೃಂದವನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತಿಹಾಸ ಪ್ರಸಿದ್ಧ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ಸಾನಿಧ್ಯ ಸಂಕೋಚ ಹಾಗೂ ಬಾಲಾಲಯ ಪ್ರತಿಷ್ಠೆ ಧಾರ್ಮಿಕ ಕಾರ್ಯಕ್ರಮಗಳು ಎರಡು ದಿನಗಳ ಪರ್ಯಾಂತ ಸಾಂಗವಾಗಿ ಜರುಗಿದವು. ಶ್ರೀ ದೇವಳದ ಅಮೂಲಾಗ್ರ ಜೀಣೋದ್ಧಾರದ ಪ್ರಯುಕ್ತ ವೇದಮೂರ್ತಿ ಕುತ್ಯಾರು ಕೇಂಜಿ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ಸಾನಿಧ್ಯ ಸಂಕೋಚ ಬಾಲಾಲಯ ಪ್ರತಿಷ್ಠೆ ಕಾರ್ಯಕ್ರಮಗಳು ಜರುಗಿದವು. ನಾಗದೇವರ ದರ್ಶನ, ಕಾಲಭೈರವ ದೇವರ ದರ್ಶನ, ವಿವಿಧ ಹೋಮ ಹವನಾದಿಗಳು ಜರುಗಿದವು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ವೆಂಕಟ ಪೂಜಾರಿ, ಧಾರ್ಮಿಕ ಮುಂದಾಳು ಬಿ.ಎಂ. ಸುಕುಮಾರ ಶೆಟ್ಟಿ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಗಂಗಾನಾಡು, ತೊಕ್ತಿ, ಕ್ಯಾರ್ತೂರು, ಎತ್ತೆಬೇರು ಗ್ರಾಮಗಳಿಗೆ ತಾಲೂಕು ಪಂಚಾಯತ್ ಅನುದಾನದಡಿಯಲ್ಲಿ ಅಳವಡಿಸಲಾದ ಸೋಲಾರ್ ದೀಪಗಳನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ., ಬೈಂದೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ವೆಂಕಟ ಪೂಜಾರಿ, ಭಾಸ್ಕರ ಮರಾಠಿ, ಸ್ಥಳೀಯ ಸಿ.ಜೆ. ಪೌಲೋಸ್ ಹಾಗೂ ಇತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ ಎನ್ನುವ ಮಾತನ್ನು ಇಟ್ಟುಕೊಂಡೆ, ಬಾಲ್ಯದಲ್ಲಿ ತಂದೆ-ತಾಯಿಯ ಆಶ್ರಯದಲ್ಲಿ, ಯೌವನದಲ್ಲಿ ಸಂಗಾತಿಯ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿ ಮಹಿಳೆ ಬೆಳೆಯುವುದರಿಂದ ಆಕೆ ಸಮಾನ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎನ್ನುವ ದ್ವಂದ್ವ ವಾದದ ನಡುವೆ ಮಹಿಳೆಯರು ಇಂದು ಸಮಾಜದಲ್ಲಿ ಸಾಕಷ್ಟು ಪ್ರಬಲರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಕಾನೂನು ಜ್ಞಾನ ಕೂಡಾ ಅತೀ ಅಗತ್ಯ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಬಾರ್ ಅಸೋಸಿಯೇಶನ್ ಕುಂದಾಪುರ, ಅಭಿಯೋಜಕ ಇಲಾಖೆ ಕುಂದಾಪುರ, ಜೆಸಿಐ ಕುಂದಾಪುರ, ರೋಟರಿ ಕುಂದಾಪುರ, ಮಹಾವಿಷ್ಣು ಯುವಕ ಮಂಡಲ (ರಿ) ಹರೇಗೋಡು, ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕುಂದಾಪುರ , ಮಾನಸತಿ ಯುವತಿ ಮಂಡಲ ಹರೇಗೋಡು ಹಾಗೂ ಶ್ರೀ ಸಾಯಿ ಮಂಟಪ ಶ್ಯಾಮಿಯಾನ ಮತ್ತು ಡೆಕೊರೇಟರ‍್ಸ್ ಕಟ್ಟು ಹೆಮ್ಮಾಡಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವ್ಯಾಸರಾಜ ಮಠದಲ್ಲಿ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ನವೀಕೃತಗೊಂಡ ಶ್ರೀ ರಾಮಚಂದ್ರತೀರ್ಥ ಶ್ರೀ ಪಾದಂಗಳರವರ ಮತ್ತು ಶ್ರೀ ಹಯಗ್ರೀವ ತೀರ್ಥ ಶ್ರೀಪಾದಂಗಳರವರ ವೃಂದಾವನಗಳ ಉದ್ಘಾಟನೆಯನ್ನು ಮಠಾದೀಶರಾದ ಪೂಜ್ಯ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀ ಪಾದಂಗಳರವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ವೇದಮೂರ್ತಿ ಶ್ರೀ ವಿಜಯ ಪೆಜತ್ತಾಯ ಇವರ ನೇತೃತ್ವದಲ್ಲಿ ವೃಂದಾವನಗಳ ಸ್ಥಾನ ಶುಧ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷೋಘ್ನ ಹೋಮ, ಪುಣ್ಯಾಹವಾಚನ, ವೃಂದಾವನ ಶುದ್ಧಿ, ಪವಮಾನ ಹೋಮ, ವಿರಾಜಮಂತ್ರ ಹೋಮ, ನವಕ ಪ್ರಧಾನ ಹೋಮ, ಆಶ್ಲೇಷಾ ಬಲಿ ಸೇರಿದಂತೆ ಅನೇಕ ದಾರ್ಮಿಕ ವಿಧಿ ವಿಧಾನಗಳು ನಡೆದವು. ಸಮಾಜ ಭಾಂದವರಿಂದ ಶ್ರೀ ಗುರುಗಳ ಪಾದ ಪೂಜೆ, ಹಾಗೂ ಗುರುಗಳಿಂದ ಮುದ್ರಾಧಾರಣೆ ಕಾರ್ಯಕ್ರಮ ನಡೆಯಿತು. ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಹೊಟೇಲ್ ಉದ್ಯಮಿಗಳಾದ ಹಳ್ಳಿಮನೆ ಸಂಜೀವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆಯ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಕಾರ‍್ಯಕ್ರಮ ಜರುಗಿತು. ಉಡುಪಿ ಎ.ವಿ.ಬಾಳಿಗ ಅಡ್ಮಿನಿಸ್ಟ್ರೇಟರ್ ಶ್ರೀಮತಿ. ಸೌಜನ್ಯ ಶೆಟ್ಟಿ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಬಳಿಕ ಮಾತನಾಡಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವವಾಗಿದೆ ಮಕ್ಕಳು ಹಿರಿಯರು ಹೇಳಿದ್ದನ್ನು ಕೇಳುವುದಿಲ್ಲ, ಬದಲಾಗಿ ನಾವು ಮಾಡುವುದನ್ನು ಅನುಕರಣೆ ಮಾಡುತ್ತಾರೆ. ಮಕ್ಕಳ ಮನಸ್ಸು ಹೂವಿನಂತೆ ಮೃದುವಾಗಿರುತ್ತದೆ. ಅವರ ಸೂಕ್ಷ್ಮತೆಗಳನ್ನು ಅರಿತು ಅರ್ಥೈಸಿಕೊಳ್ಳಬೇಕಾಗಿರುವುದು ಪೋಷಕರ ಕರ್ತವ್ಯ. ಮಕ್ಕಳಿಗೆ ಹೊಡೆಯುವುದರಿಂದ ಅವರ ಬೆಳವಣಿಗೆಯ ವ್ಯಕ್ತಿತ್ವವನ್ನು ಚಿವುಟಿದಂತಾಗುತ್ತದೆ. ಆ ನಿಟ್ಟಿನಲ್ಲಿ ಪೋಷಕರು ಶಿಕ್ಷಕರ ಜೊತೆಗೂಡಿ ಸಹಕರಿಸಿದಾಗ ಉತ್ತಮ ಮಕ್ಕಳನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆಯೆಂದು ನುಡಿದರು. ಈ ಸಂದರ್ಭದಲ್ಲಿ ಬಾಂಡ್ಯ ಶಿಕ್ಷಣಸಂಸ್ಥೆಯ ಜಂಟಿ ಕಾರ‍್ಯನಿರ್ವಾಹಕಿ ಅನುಪಮ. ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಂಶುಪಾಲರಾದ ಸಾಯಿಜು ಕೆ. ಆರ್. ನಾಯರ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಐಸಿರಿ ಮತ್ತು ವೇದಾಂತ್ ಕಾರ‍್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಆದ್ಯಾ ಶೆಟ್ಟಿ ಸ್ವಾಗತಿಸಿದರು. ಮೂಸಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟ್‌ರಿ ಕ್ಲಬ್ ಕುಂದಾಪುರ ಸನ್‌ರೈಸ್ ನೇತೃತ್ವದಲ್ಲಿ ಕೋಡಿಯ ಕಡಲ ಕಿನಾರೆಯಲ್ಲಿ ಸಂಭ್ರಮದಿಂದ ರೋಟರಿ ಮತ್ತು ವಿಶ್ವ ತಿಳುವಳಿಕೆಯ ದಿನಾಚರಣೆ ಜರುಗಿತು. ಸತ್ಯ ಶಾಂತಿ ಮತ್ತು ತ್ಯಾಗದ ಸಂಕೇತವಾದ ರಾಷ್ಟ್ರದ ತ್ರಿವರ್ಣ ಧ್ವಜ ಮೂರು ಧರ್ಮದ ಪ್ರಮುಖರು ಒಟ್ಟಾಗಿ ಬಿಡಿಸುವುದರ ಮೂಲಕ ಸಹಬಾಳ್ವೆಯ ಸಂಕೇತವೆಂಬಂತೆ ವಿಶಿಷ್ಟ ರೀತಿಯಲ್ಲಿ ಉದ್ಧಾಟಿಸಲಾಯಿತು. ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತ್ಯಾಧಿಕಾರಿ ಡಾ|| ಎಚ್.ವಿ. ನರಸಿಂಹಮೂರ್ತಿ ಸಾಮಾಜಿಕ ಕಾರ್ಯಕರ್ತ ಎಲ್. ಎನ್. ಹಾಜಿ ಇಬ್ರಾಹಿಂ ಸಾಹೇಬ್ ಕೋಟ, ಕುಂದಾಪುರದ ಚರ್ಚ್‌ನ ಧರ್ಮ ಗುರುಗಳಾದ ಅತಿ ವಂದನೀಯ ಫಾದರ್ ಅನಿಲ್ ಡಿಸೋಜ ರವರು ಮುಖ್ಯ ಅತಿಥಿಗಳಾಗಿದ್ದರು. ಸರ್ವೆಜನಾಃ ಸುಖಿನೋ ಭವಂತು, ಸರ್ವ ಧರ್ಮಗಳ ಶಾಂತಿಯ ನೆಲವೀಡು ನಮ್ಮ ಭಾರತ ಎಂದು ಎಚ್.ವಿ.ನರಸಿಂಹಮೂರ್ತಿಯವರು ಹೇಳಿದರು. ದೇವನೊಬ್ಬನೆ, ನಾಮ ಹಲವು ಸೌಹಾರ್ದತೆಯಲ್ಲಿ ಜೀವನ ಸಾಗಿಸೋಣ ಎಂದು ಹಾಜಿ ಇಬ್ರಾಹಿಂ ಸಾಹೇಬ್ ಕೋಟ ಹೇಳಿದರು. ಶಾಂತಿ ಸೌಹಾರ್ಧತೆಯಿಂದ ಬಾಳಲು ಪರಧರ್ಮ ಸಹಿಷ್ಣುತೆ ಅತೀ ಅಗತ್ಯ ಎಂದು ಅತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಎರಡನೇ ಬಾರಿಗೆ ಪಡೆದುಕೊಂಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತು ಉಡುಪಿ ಸಹಯೋಗದಲ್ಲಿ ಮಣಿಪಾಲ ರಜತಾದ್ರಿ ಜಿಲ್ಲಾದಿಕಾರಿ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಪಂಚಾಯತ್ ಅದ್ಯಕ್ಷ ದಿನಕರ ಬಾಬು ಪ್ರಶಸ್ತಿ ಪ್ರಧಾನ ಮಾಡಿದರು. ಶಾಲಾ ಮುಖ್ಯ ಶಿಕ್ಷಕ ಸದಾನಂದ ನಾಯಕ, ಸಹಶಿಕ್ಷಕ ಪ್ರಭಾಕರ ಶೆಟ್ಟಿ , ಚಂದ್ರಶೇಖರ ಶೆಟ್ಟಿ ಹಾಗೂ ವಿದ್ಯಾರ್ಥಿ ವೃಂದದೊಂದಿಗೆ ಪ್ರಶಸ್ತಿ ಸ್ವೀಕರಿಸಿದರು .ಹಿರಿಯ ಸಿವಿಲ್ ನ್ಯಾಯಧೀಶರಾದ ಲತಾ, ಅಪರ ಜಿಲ್ಲಾದಿಕಾರಿ ಅನುರಾದ , ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ , ಡಿ.ಡಿ.ಪಿ.ಐ. ದಿವಕರ ಶೆಟ್ಟಿ ಉಪಸ್ತಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳ ದೈಹಿಕ ದೃಢತೆಯಲ್ಲಿ ಪೌಷ್ಠಿಕ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಉಪಯೋಗಿಸುವ ಸಿದ್ಧ ಪಾನೀಯಗಳು ಹಾಗೂ ಆಹಾರ ಪದಾರ್ಥಗಳು ಮಕ್ಕಳ ಬೆಳವಣಿಗೆಗೆ ಮಾರಕ. ಹಾಗೆಯೇ ಎಳೆ ವಯಸ್ಸಿನ ಕಲಿಕೆಯಲ್ಲಿ ಮೊಂಟೆಸ್ಸೋರಿ ಶಿಕ್ಷಣವು ಹೆಚ್ಚು ಪರಿಣಾಮಕಾರಿಯಾಗಿದ್ದು, ಆರು ವರ್ಷ ತುಂಬಿದ ಮಗುವನ್ನು ಮಾತ್ರ ೧ನೇ ತರಗತಿಗೆ ದಾಖಲಿಸುವುದು ವೈಜ್ಞಾನಿಕವಾಗಿಯೂ ಸೂಕ್ತ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಬಿ ರಾಜೇಂದ್ರ ಶೆಟ್ಟಿ ನುಡಿದರು. ಅವರು ಮಾತಾ ಮೊಂಟೆಸ್ಸೋರಿಯ 7ನೇ ವಾರ್ಷಿಕೋತ್ಸವದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಕೋಣಿ ಗ್ರಾಮದ ಪಂಚಾಯತ್‌ನ ಅಧ್ಯಕ್ಷ ಸಂಜೀವ ಮೋಗವೀರ ಮಾತನಾಡುತ್ತಾ ಕಳೆದೇಳು ವರ್ಷಗಳಿಂದ ಈ ಸಂಸ್ಥೆ ಸುಂದರ ಪರಿಸರದೊಂದಿಗೆ ಶೈಕ್ಷಣಿಕ ಪರಿಕರಗಳೊಂದಿಗೆ ಶಿಕ್ಷಣ ನೀಡುತ್ತಾ ಕುಂದಾಪುರ ತಾಲೂಕಿನ ವಿವಿಧ ಕಡೆಗಳಿಂದಲೂ ಪುಟಾಣಿಗಳನ್ನು ಆಕರ್ಷಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು. ಪಂಚಾಯತ್‌ನ ಮಾಜಿ ಸದಸ್ಯ ಕೃಷ್ಣ ಪೂಜಾರಿ ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ಚ್ಂದ್ರ…

Read More