Author: ನ್ಯೂಸ್ ಬ್ಯೂರೋ

ಬೈಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು, ಇಲ್ಲಿನ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಪ್ರೊ.ಗಿರೀಶ್ ಮನಶಾಸ್ತ್ರಜ್ಞರು ಕುಂದಾಪುರ ಇವರು ಸ್ಮರಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆ ಮತ್ತು ಮನಸ್ಸನ್ನು ಕೇಂದ್ರಿಕರಿಸುವ ಬಗೆ ಹೇಗೆ ಎನ್ನುವ ಕುರಿತು ತಿಳಿಸುತ್ತಾ, ಯಾವುದೇ ವಿಷಯವಾಗಲಿ ನಕರಾತ್ಮಕ ಯೋಜನೆ ನಮ್ಮದಾಗಿರಬೇಕು. ಬದಲಾವಣೆ ಎನ್ನುವುದು ಬದುಕಿನ ನಿಯಮ , ಎಂತಹ ಸವಾಲುಗಳು ಬಂದರೂ ಅದನ್ನು ಎದುರಿಸುವ ಛಲಗಾರಿಕೆ ನಮ್ಮದಾಗಿರಬೇಕು ಎಂದು ತಿಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಬಿ.ಎ. ಮೇಳಿ ಉಪಸ್ಥಿತರಿದ್ದರು . ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ಉಮೇಶ್ ಮಯ್ಯ ಕಾರ‍್ಯಕ್ರಮ ಸಂಯೋಜಿಸಿದರು.

Read More

ಬೈಂದೂರು: ನಾಟಕದಂತಹ ರಂಗಕಲೆಗಳು ಮಕ್ಕಳನ್ನು ಸೃಜನಾತ್ಮಕವಾಗಿ ತೊಡಗಿಕೊಳ್ಳುವಂತೆ ಮಾಡುವುದರೊಂದಿಗೆ ಅವರ ಬೌದ್ಧಿಕ ಬೆಳವಣಿಗೆಗೂ ಪೂರಕವಾಗಿ ನಿಲ್ಲುತ್ತವೆ. ಶಾಲೆಗಳಲ್ಲಿ ಪಠ್ಯವನ್ನು ರಂಗಕಲೆಗಳ ಮೂಲಕ ಮಕ್ಕಳಿಗೆ ಭೋಧಿಸುವಂತಾದರೆ ಅದು ಬಹುಬೇಗ ಮಕ್ಕಳಿಗೆ ತಲುಪುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಬೈಂದೂರಿನ ಶಾರದಾ ವೇದಿಕೆಯಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ ರಂಗ ಸಂಭ್ರಮ-೨೦೧೬ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ ಮಾಧ್ಯಮದಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಕನ್ನಡ ಶಾಲೆಗಳಲ್ಲಿ ಬಲಪಡಿಸಬೇಕಾದರೇ ಅಲ್ಲಿಯೂ ಒಂದು ಇಂಗ್ಲಿಷ್ ಮಾಧ್ಯಮವನ್ನು ಆರಂಭಸಬೇಕು ಎಂಬ ಮಾತುಗಳ ಕೇಳಿಬರುತ್ತಿವೆ. ಆದರೆ ಕನ್ನಡ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಗೊಂದರೇ ಕನ್ನಡವೇ ಇಲ್ಲವಾದಂತಾಗುತ್ತದೆ. ಮಕ್ಕಳು ಇಂಗ್ಲಿಷ್ ಕಲಿಯಲು ನಮ್ಮ ಅಭ್ಯಂತರವಿಲ್ಲ. ಇಂಗ್ಲಿಷ್ ಪರಿಣಾಮಕಾರಿ ಭೋಧನೆಗೆ ಉತ್ತಮ ಶಿಕ್ಷಕರನ್ನು ನೇಮಿಸಲು ಪ್ರಯತ್ನಿಸೋಣ. ಆದರೆ ಕನ್ನಡ ಶಾಲೆಗಳಲ್ಲಿ ಕನ್ನಡ ಮಾಧ್ಯಮವೇ ಇರಲಿ ಎಂದು ಆಶಿಸೋಣ. ಒಂದು ವೇಳೆ ಕನ್ನಡ ಶಾಲೆಗೆ ಧಕ್ಕೆ ಬರುವ ಸ್ಥಿತಿ…

Read More

ಗಂಗೊಳ್ಳಿ: ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನ ಮತ್ತು ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿಯ ೬೧ನೇ ವಾರ್ಷಿಕೋತ್ಸವ ಹಾಗೂ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ೪೨ನೇ ವಾರ್ಷಿಕೋತ್ಸವ ಸಮಾರಂಭ ಇತ್ತೀಚಿಗೆ ಜರಗಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ನಾವುಂದ ಬಡಾಕೇರಿಯ ನಾಗಯಕ್ಷ್ಮೀ ಪಾತ್ರಿಗಳಾದ ವೇದಮೂರ್ತಿ ಲೋಕೇಶ ಅಡಿಗ, ಭಜನೆಯಿಂದ ಭಗವಂತ ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾನೆ. ಸಮಾಜದ ಜನರು ಸುಖಶಾಂತಿ ನೆಮ್ಮದಿಯಿಂದ ಜೀವನ ನಡೆಸಲು ಭಜನೆ ಸಹಕಾರಿಯಾಗುತ್ತದೆ. ಹೀಗಾಗಿ ಭಜನೆ ಮಾಡುವ ಸಂಸ್ಕೃತಿಯನ್ನು ಮನೆ ಮನದಲ್ಲಿ ಮಾಡಿಕೊಳ್ಳಬೇಕು ಎಂದರು. ದೇವಸ್ಥಾನದ ಅಧ್ಯಕ್ಷ, ತಾಲೂಕು ಪಂಚಾಯತ್ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ದಿನಕರ ಹೆಗ್ಡೆ ಧ್ವಜಾರೋಹಣಗೈದರು. ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಲಕ್ಷ್ಮೀನಾರಾಯಣ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ದೇವಸ್ಥಾನದ ಮೊಕ್ತೇಸರ ನರಸಿಂಹ ಕೆ. ಶುಭ ಹಾರೈಸಿದರು. ಇದೇ ಸಂದರ್ಭ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ರಂಗಭೂಮಿಯು ವಿಚಾರ ಪ್ರಚೋದಕ ಹಾಗೂ ಮನೋರಂಜನೆ ಆಧಾರಿತ ನಾಟಕಗಳೆಂಬ ಎರಡು ಕವಲುಗಳಾಗಿ ಸಾಗುತ್ತಿದೆ. ಕೇವಲ ಮನೋರಂಜನೆಯನ್ನು ಉದ್ದೇಶವಾಗಿಟ್ಟುಕೊಂಡು ಆರ್ಥಿಕ ಅಗತ್ಯತೆಯನ್ನು ನೀಗಿಸಿಕೊಳ್ಳುವ ನಾಟಕಗಳಿಂದ ಇತರ ಪ್ರಕಾರದ ನಾಟಕಗಳಿಗೆ ಕಂಟಕ ಬಂದೊದಗಿದೆ ಎಂದು ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಹೇಳಿದರು. ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ಮೂರು ದಿನಗಳ ಕಾಲ ಬೈಂದೂರಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗ ಸಂಭ್ರಮ-2016 ಹಾಗೂ 39ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಜಾತಿ ಸಂಘಟನೆಗಳಿಗೆ ದೊರೆಯುವಷ್ಟು ಬೆಂಬಲ ಕಲಾ ಸಂಘಟಕರಿಗೆ ದೊರೆಯುತ್ತಿಲ್ಲ. ಆದಾಗ್ಯೂ ಎಲ್ಲಾ ಏಳುಬೀಳುಗಳ ನಡುವೆ ಉತ್ಕೃಷ್ಟವಾದ ನಾಟಕಗಳನ್ನು ನೀಡುತ್ತಾ, ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿರುವುದು ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಲಾವಣ್ಯ ಬೈಂದೂರು ಮಾಜಿ ಅಧ್ಯಕ್ಷ ಗಣಪತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಲಾವಣ್ಯದ ಸ್ಥಾಪಕ ಸದಸ್ಯ ಬಿ. ಉಮೇಶ್ ಕುಮಾರ್, ಲಾವಣ್ಯ ಅಧ್ಯಕ್ಷ ಬಿ. ರಾಮ ಟೈಲರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು, ಮಾ.13: ಸಮೀಪದ ನಾವುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳೆರಡು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಮೃತ ಚಾಲಕನನ್ನು ಕೇರಳದ ಕ್ಯಾಲಿಕಟ್ ನಿವಾಸಿ ಮೊಹಮ್ಮದ್ ಅಫ್ಜಲ್ (35) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ಭಟ್ಕಳ ಕಡೆಯಿಂದ ಕುಂದಾಪುರ ಮಾರ್ಗವಾಗಿ ಸಾಗುತ್ತಿದ್ದ ಕಬಿಣ್ಣದ ಸರಳು ತಂಬಿದ್ದ ಲಾರಿ ಹಾಗೂ ಭಟ್ಕಳ ಮಾರ್ಗವಾಗಿ ಸಾಗುತ್ತಿದ್ದ ಔಷಧಿ ಸಾಗಾಟದ ಲಾರಿಯ ನಾವುಂದದ ವಿನಾಯಕ ಹೋಟೆಲ್ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ಮುಖಾಮುಖಿ ಢಿಕ್ಕಿಯಾಗಿತ್ತು. ಅಫಘಾತದ ತೀವ್ರತೆಗೆ ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡು, ಔಷಧಿ ತುಂಬಿದ ಲಾರಿಯ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮತ್ತೊಂದು ಲಾರಿಯ ಚಾಲಕ, ಕ್ಲೀನರ್‌ಗಳು ಗಾಯಗೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಸ್ವಲ್ಪ ಹೊತ್ತಿನ ಬಳಿಕ ವಿಷಯ ತಿಳಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ಲಾರಿಯ ಮಧ್ಯೆ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಕಾರ್ಪೋರೇಶನ್ ಬ್ಯಾಂಕ್‌ ಶಾಖೆಯಲ್ಲಿ ಶನಿವಾರ ಸಂಸ್ಥೆಯ ಸಂಸ್ಥಾಪಕರ 111ನೇ ಜನ್ಮಶತಾಬ್ದಿಯನ್ನು ಆಚರಿಸಲಾಯಿತು. ಶಾಖಾ ಪ್ರಬಂಧಕ ಸಿ. ಎಸ್. ಪೂಜಾರಿ ಬ್ಯಾಂಕ್ ಇಲ್ಲಿಯವರೆಗೆ ಸಾಗಿಬಂದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಸ್ಥಾಪಕರ ದಿನಾಚರಣೆಯಲ್ಲಿ ಬ್ಯಾಂಕಿನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶುಭಹಾರೈಸಿದರು. ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಬೈಂದೂರು: ಕೆನರಾ ಲೋಕಸಭಾ ಸಂಸದ ಆನಂತ್ ಕುಮಾರ್ ಹೆಗಡೆ ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಇಸ್ಲಾಂ ಭಯೋತ್ಪಾದಕ ಧರ್ಮ ಎಂಬ ಆಘಾತಕಾರಿ ಹೇಳಿಕೆ ಖಂಡಿಸಿ ಶಿರೂರು ಸಂಯುಕ್ತ ಜಮಾತ್ ವತಿಯಿಂದ ಶುಕ್ರವಾರ ಬ್ರಹತ್ ಪ್ರತಿಭಟನೆ ನಡೆಯಿತು. ನೂರಾನಿ ಮಸೀದಿಯಿಂದ ಶಿರೂರು ಗ್ರಾಮ ಪಂಚಾಯತ್ ವರೆಗೆ ನೂರಾರು ಮುಸ್ಲಿಂ ಬಾಂಧವರು ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿ ಬಳಿಕ ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೌರಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಕೆ.ಸಿದ್ದೀಕ್, ಇದು ಕೋಮು ಸೌಹಾರ್ದತೆಯನ್ನು ಕೆಡಿಸುವ ಉದ್ದೇಶವಾಗಿದೆ. ಈ ಹೇಳಿಕೆಯಿಂದ ಮುಸ್ಲಿಂ ಜನತೆಗೆ ನೋವುಂಟಾಗಿದೆ. ಶಿರೂರು ಸಂಯುಕ್ತ ಮುಸ್ಲಿಂ ಜನತೆ ತೀವೃವಾಗಿ ಖಂಡಿಸುತ್ತದೆ. ತಪ್ಪು ಹೇಳಿಕಸ್ತರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಅಬೂಬಕರ್, ಸೈಯದ್ ಅರೆಹೊಳೆ, ಅನ್ವರ್ ಶೇಖ್, ಜಮಾಯತ್‌ನ ಇಸ್ಮಾಯಿಲ್ ಮೌಲಾನ, ಗ್ರಾಪಂ ಸದಸ್ಯ ಜಿ.ಮೀರಾ ಕರಾಣಿ ಮಹ್ಮದ್ ಸವೂದ್ ಮುಂತಾದವರು ಹಾಜರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕಾಂಗ್ರೆಸ್ ಪಕ್ಷಕ್ಕೆ ಒಬ್ಬರೇ ನಾಯಕರಲ್ಲ. ಒಬ್ಬರು ಹೋದರೆ ಮತ್ತೊಬ್ಬರು ಬರುತ್ತಾರೆ. ಪಕ್ಷ ಸೋಲಿಗೆ ಒಂದೊಂದು ಘಟನೆಗಳು ಕಾರಣವಾಗುತ್ತವೇ ಹೊರತೂ ವ್ಯಕ್ತಿಯಲ್ಲ ನಡೆಯಲ್ಲ. ಜೆಪಿ ಹೆಗ್ಡೆಯವರನ್ನು ಮತ್ತೆ ಪಕ್ಷಕ್ಕೆ ಕರೆರದ್ದು ನಿಜ. ಆದರೆ ಅವರಿಂದಲೇ ಕಾಂಗ್ರೆಸ್ ಅಲ್ಲ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿರುಗೇಟು ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಜೆಪಿ ಇಲ್ಲದಿದ್ದರೆ ಕಾಂಗ್ರೆಸ್ ಮುಳುಗುತ್ತದೆ ಎಂದು ಅಂದಿನ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ ಅವರೇ ಪಕ್ಷಕ್ಕೆ ಮರಳುವಂತೆ ವಿನಂತಿಸಿಕೊಂಡಿದ್ದರು ಎಂಬ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆಯ ಬಗ್ಗೆ ಕುಂದಾಪ್ರ ಡಾಟ್ ಕಾಂ ಪ್ರಶ್ನಿಸಿದಾಗ ಶಾಸಕ ಪೂಜಾರಿ ಅವರು ಹೀಗೆ ಉತ್ತರಿಸಿದ್ದಾರೆ. ಜಯಪ್ರಕಾಶ್ ಹೆಗ್ಡೆಯವರು ಒಬ್ಬ ಉತ್ತಮ ನಾಯಕರು, ಎಂಪಿ ಆಗಿದ್ದವರು. ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್‌ನಿಂದ ಹೊರನಡೆದಿದ್ದಾರೆ. ಹಾಗಾಗಿ ಕಾಂಗ್ರೆಸ್‌ನಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಮರಳಿ ಬನ್ನಿ ಎಂದಷ್ಟೇ ವಿಧಾನ ಪರಿಷತ್ ಚುನಾವಣೆಯ ಬಳಿಕ ಹೇಳಿದ್ದೆ. ಆದರೆ ಅವರಿಲ್ಲದಿದ್ದರೂ, ತಾನಿಲ್ಲದಿದ್ದರೂ ಪಕ್ಷವನ್ನು ಮುನ್ನಡೆಸಲು ಮತ್ಯಾರೋ ಬರುತ್ತಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಬೆಂಬಲಿಗರು, ಹಿತೈಷಿಗಳ ಮತ್ತು ಸಮಾನ ಮನಸ್ಕರಿಂದ ಮೌಲ್ಯಯುತ ರಾಜಕಾರಣ ಎತ್ತಿ ಹಿಡಿಯುವ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ’ಜನಪರ, ಪ್ರಗತಿಪರ’ ಎಂಬ ಸಂಘಟನೆ ಹುಟ್ಟುಹಾಕಲಾಯಿತು. ಕುಂದಾಪುರ ಹಿರಿಯ ರಾಜಕಾರಣಿ ಮಾಣಿಗೋಪಾಲ್ ನಿವಾಸ ದ್ವಾರಕದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಸಂಘಟನೆಗೆ ತಾತ್ಕಾಲಿಕ ಸಂಚಾಲನ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದ್ದು, ಮಾಣಿ ಗೋಪಾಲ ಮುಖ್ಯ ಸಂಚಾಲಕರಾಗಿಯೂ, ವಿ. ಚಂದ್ರಶೇಖರ ಹೆಗ್ಡೆ ದಬ್ಬೆಕಟ್ಟೆ, ಕಾಳಪ್ಪ ಪೂಜಾರಿ, ರಾಮಕೃಷ್ಣ ಹೇರ್ಳೆ, ಗಿರೀಶ್ ಜಿ.ಕೆ, ಶೈಲೇಶ್ ಕುಂದಾಪುರ ಮತ್ತು ಕಾಳಾವರ ಶ್ರೀಧರ್ ಆಚಾರ್ಯ ಅವರನ್ನು ಸಹಸಂಚಾಲಕರಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂತೋಷ್ ದೇವಾಡಿಗ ಕೆ.ಎನ್, ಸ್ಟೀವನ್ ಡಿ.ಕೋಸ್ತ, ವಿಜಯ ಡಿಸೋಜ, ನಾಗರಾಜ ಪುತ್ರನ್, ರಂಜಿತ್ ಕುಮಾರ್ ಶೆಟ್ಟಿ, ದೀಪಕ್ ನಾವುಂದ, ಸುಖ್‌ಪಾಲ್, ಚಂದ್ರಶೇಖರ ಶೆಟ್ಟಿ, ಸತೀಶ್ ಹೆಗ್ಡೆ, ಕೋಡಿ ಸುನಿಲ್ ಪೂಜಾರಿ ಉಪಸ್ಥಿತರಿದ್ದರು. ಮಾರ್ಚ್ ತಿಂಗಳ ಕೊನೆ ವಾರದಲ್ಲಿ ಸಂಘಟನೆಯ ವಿದ್ಯುಕ್ತ…

Read More