ಕುಂದಾಪ್ರ ಡಾಟ್ ಕಾಂ ಸುದ್ದಿ ಬೆಂಗಳೂರು: ಯಕ್ಷಗಾನ ಕಂಡ ಚುರುಕ ನಡೆಯ ಖ್ಯಾತ ಕಲಾವಿದ ಗಣಪತಿ ಭಟ್ ಕಣ್ಣಿಮನೆ (47) ಗುರುವಾರ ಸಾಯಂಕಾಲ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಕಣ್ಣಿಮನೆಯವರನ್ನು ಬುಧವಾರ ಸಾಯಂಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ಸಾಯಂಕಾಲ ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಉತ್ತರಕನ್ನಡದ ಹೊನ್ನಾವರ ತಾಲೂಕಿನ ಕಣ್ಣಿಮನೆಯವರಾದ ಗಣಪತಿ ಭಟ್ ಪತ್ರಿ, ಪುತ್ರ, ಪುತ್ರಿ ಹಾಗೂ ಅಪಾರ ಯಕ್ಷಾಭಿಮಾನಿಗಳನ್ನು ಅಗಲಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಬೈಂದೂರು: ಕರಾವಳಿ ಹಾಗೂ ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿರುವ ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರ ಬೈಂದೂರು ವಿಧಾನಸಭಾ ವ್ಯಾಪ್ತಿಯ ಪ್ರಮುಖ ಕ್ಷೇತ್ರಗಳಲ್ಲೊಂದು. ಈ ಸಾಲಿನಲ್ಲಿ ಕ್ಷೇತ್ರ ಪುನರ್‌ವಿಂಗಡೆಯಾದ್ದರಿಂದ ವಿಭಿನ್ನತೆಯಿಂದ ಗುರುತಿಸಿಕೊಂಡಿದೆ. ಕ್ಷೇತ್ರದಲ್ಲಿ ಮೀನುಗಾರಿಕೆ, ಕೃಷಿ ಪ್ರಮುಖ ಉದ್ಯೋಗವಾಗಿದ್ದು ಇಲ್ಲಿನ ರೈತರಿಗೆ ವ್ಯಾಪಕ ಕೃಷಿಯಾಧಾರಿತ ಸಮಸ್ಯೆಯಾದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿದ್ದಲ್ಲ. ಈ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬಿಜೂರು, ಕೆರ್ಗಾಲ್, ಕಂಬದಕೋಣೆ, ಕಿಮಂಜೇಶ್ವರ ಹಾಗೂ ನಾವುಂದ ಗ್ರಾಮಗಳು ಕರಾವಳಿ ಪ್ರದೇಶವನ್ನು ಹೊಂದಿದ್ದರೇ, ಹೇರೂರು ಗ್ರಾಮ ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿದೆ. ಈ ಬಾರಿ ಇಲ್ಲಿ ಮಹಿಳಾ ಮೀಸಲು ಸ್ಥಾನ ಬಂದಿದ್ದು, ಕಾಂಗ್ರೆಸ್ ಬಿಜೆಪಿಯ ನಡುವೆ ನೇರ ಹಣಾಹಣಿ ನಡೆಯಲಿದೆ, ಜೆಡಿಎಸ್ ಸ್ವರ್ಧಿಯ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಜಿಪಂ ಸದಸ್ಯೆ ಗೌರಿ ದೇವಾಡಿಗ ಸ್ಪರ್ಧಿಸುತ್ತಿದ್ದರೇ, ಬಿಜೆಪಿಯಿಂದ ಪ್ರಿಯಾದರ್ಶಿನಿ ದೇವಾಡಿಗ ಕಣಕ್ಕೀಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಕೆರ್ಗಾಲ್ ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷೆ ರೇವತಿ ಪೂಜಾರಿ ಸ್ವಧಾಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ…
‘ಪತ್ರಿಕೆಗೆ ಬರೆಯೋದು ಹೇಗೆ?’ ಎಂಬ ಪುಸ್ತಕದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಕಾರಣವಿಷ್ಟೆ, ತಮ್ಮ ಫೇಸ್ಬುಕ್, ಟ್ವಿಟರ್ ಗೋಡೆಗಳಲ್ಲಿ ಬರೆದುಕೊಳ್ಳುವವರು, ಅದೇ ಬರಹವನ್ನು ಹೇಗೆ ಪತ್ರಿಕೆಯೊಂದಕ್ಕೆ ಬರೆಯಬಹುದು ಎಂಬುದನ್ನು ಈ ಪುಸ್ತಕ ಹೇಳುತ್ತಿದ್ದೆ. ಯುವ ಪತ್ರಕರ್ತ ವಿನಾಯಕ ಕೋಡ್ಸರ, ತಮ್ಮದೇ ಮಿಥಿಲಾ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರಗೆ ತರುತ್ತಿದ್ದಾರೆ. “ನಮ್ಮಲ್ಲಿ ಬರೆಯಬೇಕೆಂಬುದು ಬಹಳಷ್ಟು ಜನರ ಬಯಕೆ. ಬರೆಯುತ್ತಾರೆ ಕೂಡ. ಆದರೆ ಯಾವ ಪತ್ರಿಕೆಗೆ ಹೇಗೆ ಬರೆಯಬೇಕು? ಏನು ಬರೆಯಬೇಕು ಎಂದು ಗೊತ್ತಿಲ್ಲರುವುದಿಲ್ಲ. ಇನ್ನು ಕೆಲ ಪುರವಣಿಯಲ್ಲಿ ಕುಳಿತವರಿಗೆ ಲೇಖಕನಿಗೆ ಚ್ಯುತಿಯಾಗದಂತೆ ಹೇಗೆ ಎಡಿಟ್ ಮಾಡಬೇಕು ಎಂಬ ಸ್ಪಷ್ಟತೆಯಿಲ್ಲ. ಅದಕ್ಕಿಂತ ಮುಖ್ಯವಾಗಿ ಪುರವಣಿಗಳು ಗಂಭೀರತೆ ಕಳೆದುಕೊಳ್ಳುತ್ತಿವೆ. ಓರ್ವ ಲೇಖಕನ ಲೇಖನಕ್ಕೆ ಪ್ರತಿಕ್ರಿಯಿಸುವ ಸೌಜನ್ಯತೆಯನ್ನು ಕಳೆದುಕೊಂಡಿದೆ ಎಂಬ ದೂರು ಇದೆ. ಮತ್ತೊಂದು ಮಗ್ಗುಲಿನಲ್ಲಿ ನೋಡಿದರೆ ಉದ್ದನೆಯ ಇಡೀ ಲೇಖನವನ್ನು ಪೂರ್ತಿಯಾಗಿ ನೋಡುವ ವ್ಯವದಾನ ಹಲವರಿಗಿಲ್ಲ ಎಂಬುದು ಬಹುವಾಗಿ ಕಾಡುತ್ತಿತ್ತು. ಅದಕ್ಕೆ ಉತ್ತರವಾಗಿ ಈ ಪುಸ್ತಕ’ ಎಂದು ಕೋಡ್ಸರ ಬರೆದುಕೊಂಡಿದ್ದಾರೆ. ಅಲ್ಲಿಗೆ ಪುಸ್ತಕದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕನ್ನಡದ ಪ್ರಸಿದ್ಧ ಶೋ ಮಜಾ ಟಾಕೀಸ್‌ನಲ್ಲಿ ಕುಂದಾಪುರದ ಮೂರು ಮುತ್ತು ಖ್ಯಾತಿಯ ರೂಪಕಲಾ ತಂಡದ ಭಾಗವಹಿಸಿದ್ದು ಕಾರ್ಯಕ್ರಮವು ಫೆ.21ರ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ. ಬೇರೆ ಬೇರೆ ನಟರನ್ನು ಶೋನಲ್ಲಿ ಕಾಣುತ್ತಿದ್ದ ಕುಂದಾಪುರಿಗರು ಈಗ ಕುಂದಾಪುರದ ಫೇವರಿಟ್ ನಾಟಕ ತಂಡದ ಮೂವರು ಕಲಾವಿದರು ಭಾಗವಹಿಸಿರುವುದನ್ನು ನೋಡಲು ಕುತೂಹಲಿಗರಾಗಿದ್ದಾರೆ. 20 ದಿನಗಳ ಹಿಂದೆ ರೂಪಕಲಾ ತಂಡದ ಸತೀಶ್ ಪೈ, ಸಂತೋಷ್ ಪೈ, ಅಶೋಕ್ ಶಾನುಭೋಗ್ ಹಾಗೂ ಇತರರು ಭಾಗವಹಿಸಿರುವ ಬಗ್ಗೆ ಕುಂದಾಪ್ರ ಡಾಟ್ ಕಾಂ ನಲ್ಲಿ ಪ್ರಕಟಗೊಂಡ ವರದಿಗೆ ನಿರೀಕ್ಷೆಗೂ ಮೀರಿ ಜನರು ಸ್ಪಂದಿಸಿದ್ದರು. ಅಂದಿನಿಂದಲೂ ಶೋ ಯಾವಾಗ ಎಂಬ ಪ್ರಶ್ನೆ ವಾಟ್ಸಪ್ ಹಾಗೂ ಮೇಲ್ ಮೂಲಕ ಬರುತ್ತಲೇ ಇದ್ದವು. ಇದೀಗ ಕುತೂಹಲ ತಣಿಯುವ ದಿನ ಬಂದಿದೆ. ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಅವರೊಂದಿಗೆ ಕುಳ್ಳಪ್ಪು ತಂಡ ಹೇಗೆ ತರ‍್ಲೆ ಮಾಡಿದ ಅಂತ ನೋಡಲು ಫೆ. 21ರ ಭಾನುವಾರ ಮಿಸ್ ಮಾಡದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬುಧವಾರ ಬೈಂದೂರು ಪೇಟೆಯ ರಸ್ತೆಗಳಲ್ಲಿ ಬೈಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಹಾಗೂ ಬೈಂದೂರು ತಾಲೂಕು ಪಂಚಾಯತ್ ಕ್ಷೇತ್ರದ ಅಭ್ಯರ್ಥಿ ವನಜ ಭಾಸ್ಕರ್ ಪ್ರಚಾರ ನಡೆಸಿದರು. ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ಕಾರ್ಯದರ್ಶಿ ನಾಗರಾಜ ಗಾಣಿಗ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ.ವಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಾರ್ಟಿನ್ ಡಯಾಸ್ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಜೊತೆಗಿದ್ದರು.
ಬೈಂದೂರು ಬಿಜೆಪಿ ಅಧ್ಯಕ್ಷರ ಹುರುಳಿಲ್ಲದ ಆರೋಪ ನೋವುಂಟುಮಾಡಿದೆ ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಚುನಾವಣೆಯಲ್ಲಿ ಸೋಲಿನ ಸುಳಿವು ದೊರೆತ ಭಾಜಪ ಅಭ್ಯರ್ಥಿಗಳ ಕಡೆಯವರು ಸುಳ್ಳು ಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಇಂತಹ ಅಪಪ್ರಚಾರಗಳಿಗೆ ಹೆದರುವುದಿಲ್ಲ. ಬಿಜೆಪಿ ಎಷ್ಟೇ ಪ್ರಯತ್ನ ಪಟ್ಟರೂ ಮತದಾರರ ಮನಸ್ಸನ್ನು ಗೆಲ್ಲಲಾಗಲಿಲ್ಲ. ಹಾಗಾಗಿ ಚುನಾವಣೆ ಘೋಷಣೆ ಯಾದಾಗಿನಿಂದಲೂ ನನ್ನ ವಿರುದ್ದ ಕೆಲವು ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ ಎಂದು ಬೈಂದೂರು ಜಿಲ್ಲಾ ಪಂಚಾಯತ್ ಅಭ್ಯರ್ಥಿ ರಾಜು ಪೂಜಾರಿ ಆರೋಪಿಸಿದರು. ಅವರು ಬೈಂದೂರು ಕಾಂಗ್ರೆಸ್ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನಿರಂತರ ತೇಜೋವಧೆ ಮಾಡಿ, ಸುಳ್ಳಿನ ಕಂತೆ ಹಣೆದರೆ ಗೆಲುವು ಸಾಧ್ಯ ಎಂದು ಬಿಜೆಪಿ ಪಕ್ಷದವರು ತಿಳಿದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಲು ಸರಿಯಾದ ಮಾರ್ಗಗಳಿವೆ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು , ಜನರಿಗೆ ಸರಕಾರದಿಂದ ದೊರೆತ ಸೌಲಭ್ಯಗಳು, ಶಾಸಕ ಕೆ. ಗೋಪಾಲ ಪೂಜಾರಿ ಯವರ ಸಾಧನೆಗಳು ಗೆಲುವಿಗೆ ಪೂರಕವಾಗಿದೆ. ಅದು ಬಿಟ್ಟು ಅನ್ಯ ಮಾರ್ಗದಲ್ಲಿ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ವತಿಯಿಂದ ಕುಂದಾಪುರದ ಗಾಂಧಿ ಪಾರ್ಕ್‌ನಲ್ಲಿರುವ ಗಾಂಧಿ ಪ್ರತಿಮೆ ಬಳಿ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಭಾವಚಿತ್ರವಿರಿಸಿ ಶ್ರದ್ಧಾಂಜಲಿ ಅರ್ಪಿಸಿ, ನುಡಿನಮನ ಸಲ್ಲಿಸಲಾಯಿತು. 2018-19ನೇ ಸಾಲಿನ ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಶೆಟ್ಟಿ ಮಾತನಾಡಿ ಸಿಯಾಚಿನ್‌ನ ಹಿಮಗಟ್ಟುವ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕರ್ತವ್ಯ ನಿರ್ವಹಿಸಿ ದೇಶವೇ ಮೆಚ್ಚುವಂತಹ ಎದೆಗಾರಿಕೆಯನ್ನು ಪ್ರದರ್ಶಿಸಿ ಭಾರತಾಂಬೆಯ ಸುಪುತ್ರರೆನಿಸಿಕೊಂಡ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಇಂದಿನ ಯುವಕರಿಗೆ ಮಾದರಿ ಎಂದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ದಿನಕರ ಪಟೇಲ್ ಮಾತನಾಡಿ ಧಾರವಾಡದ ಬಿಸಿಲಿನ ನಾಡಿನಲ್ಲಿ ಹುಟ್ಟಿ ಬೆಳೆದು ದೇಶ ಸೇವೆಯ ಮಹತ್ವಕಾಂಕ್ಷೆಯನ್ನು ಹೊಂದಿ ಸೇನೆಗೆ ಸೇರಿದ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ -೫೫ ಡಿಗ್ರಿ ಉಷ್ಣಾಂಶವನ್ನು ಹೊಂದಿರುವ ಹಿಮ ವಾತಾವರಣದಲ್ಲಿ ದೇಶವನ್ನು ಕಾಯುವ ಅವರ ಕರ್ತವ್ಯ ನಿಷ್ಠೆ, ದೇಶ ಪ್ರೇಮ ನಮ್ಮೆಲ್ಲರಿಗೂ ಅನುಕರಣೀಯ. ಅವರು ದೇಶಕ್ಕಾಗಿ ನೀಡಿದ ಸೇವೆ ಸ್ಮರಣೀಯ. ಇಂತಹ ಯೋಧರು ಈ ದೇಶದ ನಿಜವಾದ ಆಸ್ತಿ ಎಂದು…
ಕುಂದಾಪ್ರ ಡಾಟ್ ಕಾಂ ಲೇಖನ ಕುಂದಾಪುರ: ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಹಾಲಿ ಜಿಪಂ ಸದಸ್ಯ ಬಾಬು ಶೆಟ್ಟಿ ಈ ಭಾರಿ ವಂಡ್ಸೆ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಸ್ವರ್ಧಿಸುತ್ತಿದ್ದಾರೆ. ಬಾಬು ಶೆಟ್ಟಿ ಅವರು ಸಮಾಜ ಸೇವೆಗಾಗಿ ಬ್ಯಾಂಕ್ ಉದ್ಯೋಗ ತೊರೆದು, ಹಿಂದೂ ಸಂಘಟನೆಗಳ ಮೂಲಕ ಗುರುತಿಸಿಕೊಂಡು, ಸಮಾಜಸೇವೆಗೈಯುತ್ತಾ, ೨೭ವರ್ಷಗಳಿಂದಲೂ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದು ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿ, ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದು, ಸಹಕಾರಿ, ಧಾರ್ಮಿಕ ರಂಗದಲ್ಲೂ ತೊಡಗಿಸಿಕೊಂಡು ಜನನಾಯಕರಾಗಿ ಬೆಳೆದವರು. ತಗ್ಗರ್ಸೆ ಕಂಠದಮನೆ ಕುಟುಂಬದವರಾದ ಬಾಬು ಶೆಟ್ಟಿ ಬಿಕಾಂ ಪದವೀಧರರು. ವಿಜಯ ಬ್ಯಾಂಕ್ ಉದ್ಯೋಗಿ ಆಗಿದ್ದ ಅವರಿಗೆ ಹಿಂದೂ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಬಾಬು ಶೆಟ್ಟಿ ಅವರಿಗಿದ್ಧ ಆದರಣೀಯ ಭಾವವೇ ರಾಜಕೀಯ ಅಖಾಡಕ್ಕೆ ಇಳಿಯಲು ಪ್ರೇರಣೆಯಾಯಿತು. ಸಕ್ರೀಯ ರಾಜಕಾರಣಿಯಾಗಿದ್ದ ತನ್ನ ಅಣ್ಣ ನಾರಾಯಣ ಹೆಗ್ಡೆ ಅವರೊಂದಿಗಿನ ಒಡನಾಟ, ಬಿಜೆಪಿಯ ರಾಷ್ಟ್ರೀಯ ನಾಯಕರುಗಳ ಪ್ರಭಾವದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ತಮ್ಮ ೩೧ವರ್ಷದ ಸೇವೆಯ…
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಆಶ್ರಯದಲ್ಲಿ ಮತ್ತು ರೋಟರಿ ಸಮುದಾಯ ದಳ, ತಲ್ಲೂರು ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಇದರ ವಠಾರದಲ್ಲಿ ಉಚಿತ ರಕ್ತ ವರ್ಗೀಕರಣ ಶಿಬಿರ ನಡೆಯಿತು. ರೋಟರಿ ದಕ್ಷಿಣದ ಪರವಾಗಿ ಮಾಜಿ ಅಧ್ಯಕ್ಷ ಮತ್ತು ಆರ್‌ಸಿಸಿ ಸಭಾಪತಿ ರೊ.ಕೆ.ಪಿ.ಭಟ್, ಮಾಜಿ ಕಾರ್ಯದರ್ಶಿ ಪ್ರಕಾಶ ನಾಯಕ್, ರೋಟರಿ ಸಮುದಾಯ ದಳದ ಅಧ್ಯಕ್ಷ ಬನಾವಳಿಕರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.ಮೊದಲು ನಡೆದ ಸರಳ ಸಮಾರಂಭದಲ್ಲಿ ರಕ್ತ ವರ್ಗೀಕರಣದ ಮಹತ್ವದ ಬಗ್ಗೆ ತಿಳಿಸಲಾಯಿತು. ನವೀನ ಡಿಸೋಜ ಮತ್ತು ಸಹದ್ಯೋಗಿಗಳು ವರ್ಗೀಕರಣದ ನೇತೃತ್ವ ವಹಿಸಿದ್ದರು. ಸುಮಾರು 195 ಜನರ ರಕ್ತದ ಗುಂಪನ್ನು ಗುರುತಿಸಿ ಕಾರ್ಡ ನೀಡಲಾಯಿತು.ಶಾಲೆಯ ಮಕ್ಕಳು ಮತ್ತು ಸ್ಥಳೀಯ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಒಕ್ಕೂಟ ಇದರು ಸ್ತ್ರೀ ಶಕ್ತಿ ಸಂಘದ ಮಹಿಳಾ ಸದಸ್ಯರು ಇದರ ಪ್ರಯೋಜನ ಪಡೆದರು.
ಕುಂದಾಪುರ ಡಾಟ್ ಕಾಂ ಸುದ್ದಿ. ಬೈಂದೂರು: ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ, ಯುವ ನಾಯಕ ಸುರೇಶ್ ಬಟವಾಡಿ ಈ ಭಾರಿ ಶಿರೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ವರ್ಧಿಸುತ್ತಿದ್ದಾರೆ. ಹಾಲಿ ಗ್ರಾಮ ಪಂಚಾಯತ್ ಸದಸ್ಯರಾಗಿರುವ ಬಟವಾಡಿ ಅವರು ಪಕ್ಷನಿಷ್ಠ ಕಾರ್ಯಕರ್ತನಾಗಿ, ಬೈಂದೂರು, ಪಡುವರಿ, ಶಿರೂರು ಭಾಗದ ಯುವ ಸಂಘಟಕರಾಗಿ ಎಲ್ಲಾ ಕ್ಷೇತ್ರದಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡು ಜನರ ನಡುವೆಯೇ ಇದ್ದು ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಬಂದವರು. ಪಡುವರಿ ಕಸ್ಟಮ್ ರಸ್ತೆಯ ದಿ. ಶೇಷಯ್ಯ ಶೇರುಗಾರ್ ಅವರ ಪುತ್ರರಾದ ಸುರೇಶ್ ಬಟವಾಡಿ ಅವರು ಬಿಕಾಂ ಪಧವೀಧರರು. ಯುವಕರಿರುವಾಗಲೇ ಸಂಘಟನಾ ಗುಣವನ್ನು ಮೈಗೂಡಿಸಿಕೊಂಡು ಬಂದಿದ್ದ ಬಟವಾಡಿ ಅವರು ಈ ಭಾಗದ ಸಾಮಾಜಿಕ, ಸಹಕಾರಿ, ಸಾಂಸ್ಕೃತಿಕ, ಕ್ರೀಡೆ, ರಾಜಕೀಯ, ಧಾರ್ಮಿಕ ಕ್ಷೇತ್ರದ ತೊಡಗಿಸಿಕೊಂಡು ಹೆಸರು ಮಾಡಿದವರು. ಕುಂದಾಪುರ ಡಾಟ್ ಕಾಂ ಸುದ್ದಿ ತನ್ನ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ ಪಡುವರಿ ಗ್ರಾಮ ಪಂಚಾಯತ್‌ಗೆ ಮೂರು ಭಾರಿ ಆಯ್ಕೆಯಾಗಿರುವ ಬಟವಾಡಿ ಅವರು ಗ್ರಾಪಂ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಈ ಅವಧಿಯಲ್ಲಿ ಸದಸ್ಯರಾಗಿ ಪರಿಣಾಮಕಾರಿಯಾಗಿ…
