Author: ನ್ಯೂಸ್ ಬ್ಯೂರೋ

ಕುಂದಾಪುರ: ರಬ್ಬರ್ ಬೆಲೆ ಇಳಿತ, ರಬ್ಬರ್ ಇಳುವರಿ ಕಡಿತ ಮತ್ತು ಸಾಲಬಾದೆಯಿಂದ ನೊಂದ ರಬ್ಬರ್ ಕೃಷಿಕ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಬೈಂದೂರು ವಿಧಾನ ಸಭಾ ಕ್ಷೇತ್ರ ಜಡ್ಕಲ್ ಗ್ರಾಮ, ಬೀಸನಪಾರೆ ರಬ್ಬರ್ ಕೃಷಿಕ ಸಿ.ಸಿ.ಜೋಸೆಫ್ (62) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ರಾತ್ರಿ ವಿಷ ಸೇವಿಸಿದ ಜೋಸೆಪ್ ಅವರನ್ನು ಕುಂದಾಪುರ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದ ತಡರಾತ್ರಿ ಮೃತಪಟ್ಟಿದ್ದಾರೆ. ಜೋಸೆಫ್ ಪುತ್ರಿ ಮದುವೆಗಾಗಿಯೂ ಸಾಲ ಮಾಡಿಕೊಂಡಿದ್ದ ಅವರ ಮನೆ ಕಟ್ಟಲು ಮುಂದಾಗಿದ್ದರೂ, ಆರ್ಥಿಕ ಅಡಚಣೆಯಿಂದಾಗಿ ಮನೆ ಕಟ್ಟುವ ಕಾರ್ಯ ಅರ್ಧಕ್ಕೆ ನಿಂತಿದೆ. ಈ ಎಲ್ಲ ತಾಪತ್ರಯಗಳ ನಡುವೆ ರಬ್ಬರ್ ಮಾರುಕಟ್ಟೆ ಕುಸಿದಿರುವುದರಿಂದಾಗಿ ಕಂಗಾಲಾಗಿದ್ದ ಆತ್ಮಹತ್ಯೆಯ ನಿರ್ಧಾರಕ್ಕೆ ಮುಂದಾಗಿದ್ದರು ಎಂದು ಕುಟುಂಬದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೀಸನಪಾರೆಯಲ್ಲಿ ಸಿ.ಸಿ.ಜೋಸೆಫ್ ೧.೩೦ ಎಕ್ರ ರಬ್ಬರ್ ಕೃಷಿ ಮಾಡಿದ್ದು, ಅದಕ್ಕಾಗಿ ಸ್ವಸಹಾಯ ಸಂಘ ಮತ್ತು ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ೧.೩೦ ಲಕ್ಷ ಸಾಲ ಮಾಡಿದ್ದರು. ಬೆಲೆ ಇಳಿತ ಮತ್ತು ಇಳುವರಿ…

Read More

ಕುಂದಾಪುರ: ಶ್ರೀ ವೆಂಕಟರಮಣದೇವ ಶಿಕ್ಷಣ ಮತ್ತು ಸಂಸ್ಕೃತಿ ಪ್ರತಿಷ್ಠಾನ ಮತ್ತು ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆಶ್ರಯದಲ್ಲಿ ಕುಂದಾಪುರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಜತೆಯಾಗಿ ಚುಕ್ಕಿ-ಚಂದ್ರಮ ಎಂಬ ಆಕಾಶ ವೀಕ್ಷಣೆ ಕಾರ‍್ಯಕ್ರಮ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜ್ ಭೌತಶಾಸ್ತ್ರ ಪ್ರಾಧ್ಯಾಪP ಡಾ. ಎ. ಪಿ ಭಟ್, ಆಕಾಶ ಕಾಯಗಳ ಚಲನೆ, ನಕ್ಷತ್ರಗಳ ಹುಟ್ಟು ಸಾವು, ಗ್ರಹಣಗಳು, ನಕ್ಷತ್ರಪುಂಜಗಳು ಮುಂತಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ, ಸಂವಾದ ಚರ್ಚೆ ನಡೆಸಿದರು.  ದೂರದರ್ಶಕದ ಮೂಲಕ ಚಂದ್ರನ ಮೇಲ್ಮೈ ರಚನೆಯನ್ನು ವೀಕ್ಷಿಸಲಾಯಿತು. ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ಧೇಶಕರಾದ ಶ್ರೀ ಎಚ್. ದಿವಾಕರ ಶೆಟ್ಟಿಯವರು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಶ್ರೀ ವೆಂಕಟರಮಣ ಶಾಲೆ ಸಂಚಾಲಕ ರಾಧಾಕೃಷ್ಣ ಶೆಣೈ, ವೆಂಕಟರಮಣ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಶ್ರೀಪತಿ ಹೇರ್ಳೆ, ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಗಣೇಶ ನಾಯಕ, ಪ್ರೌಢಶಾಲಾ ವಿಭಾಗ ಮುಖ್ಯ…

Read More

ಕುಂದಾಪುರ: ಬೇರೆಯವರ ನಿರ್ಧಾರಗಳ ಮೇಲೆ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಹೊರಡಬೇಡಿ. ಎಲ್ಲವನ್ನೂ ಅವಲೋಕಿಸಿಕೊಂಡು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಛಾತಿ ಇದ್ದಾಗ ಮಾತ್ರ ಸುಂದರವಾದ ಬದುಕು ನಮ್ಮದಾಗಲು ಸಾಧ್ಯ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಹೇಳಿದರು. ಅವರು ಇತ್ತೀಚೆಗೆ ಕುಂದಾಪುರದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಬದುಕು ಮತ್ತು ವಿದ್ಯಾರ್ಥಿ ಎನ್ನುವ ವಿಚಾರದ ಬಗೆಗ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಜಾಲತಾಣಗಳ ಲೈಕು ಕಮೆಂಟುಗಳಿಂದ ವ್ಯಕ್ತಿತ್ವವನ್ನು ನಿರ್ಧರಿಸಬೇಡಿ. ಉಡಾಫೆಯ ಮನೋಭಾವ ನಮ್ಮ ದೌರ್ಬಲ್ಯವೇ ಹೊರತು ಶಕ್ತಿಯಲ್ಲ. ನಮ್ಮ ಸಾಧನೆಗಳಿಂದ ನಾವು ಗುರುತಿಸಿಕೊಳ್ಳುವಲ್ಲಿ ನಮ್ಮ ಶ್ರಮವಿರಬೇಕು. ಸವಾಲುಗಳನ್ನು ಎದುರಿಸಿ ನಿಲ್ಲುವ ಛಲ ನಮ್ಮದಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕುಂದಾಪುರದ ಡಿ.ವೈ.ಎಸ್.ಪಿ ಎಮ್ ಮಂಜುನಾಥ ಅವರು ಕಾರ‍್ಯಕ್ರವನ್ನು ಉದ್ಘಾಟಿಸಿದರು.ಕಾಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಾಲೂಕು ಪಂಚಾಯತ್ ನ…

Read More

ಬೈಂದೂರು: ಗೋವಾ ರಾಜ್ಯದ ಪಿಲಾರ್‌ನ ಫಾ. ಅಗ್ನೆಲ್ ಕಾಲೇಜಿನಲ್ಲಿ ಫೆ ೧೧ರಂದು ನಡೆಯುವ ’ಸಾಂಪ್ರದಾಯಿಕ ಮನೆಮದ್ದು ಮತ್ತು ಆಧುನಿಕ ವೈದ್ಯಕೀಯ ಉಪಕ್ರಮಗಳು’ ಕುರಿತಾದ ಒಂದು ದಿನದ ವಿಚಾರ ಗೋಷ್ಠಿಯಲ್ಲಿ ವಿಚಾರ ಮಂಡಿಸಲು ಡಾ. ರೂಪಶ್ರೀ ಮರವಂತೆ ಆಮಂತ್ರಿತರಾಗಿದ್ದಾರೆ. ಗೋಷ್ಠಿಯಲ್ಲಿ ಅವರು ’ಗೃಹೋಪಯೋಗಿ ಸಸ್ಯಗಳಿಂದ ಆಯುರ್ವೇದ ಔಷಧಿ ತಯಾರಿ’ ಕುರಿತಾದ ಪೋಪ್ ದ್ವಿತೀಯ ಜಾನ್ ಪಾಲ್ ಸ್ಮಾರಕ ಉಪನ್ಯಾಸ ನೀಡುವರು ಮತ್ತು ’ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಅರಿವಿನ ಸುಲಭ, ಸರಳ ಸಮೂಹ ಸಂವಹನ ವಿಧಾನ’ ಕುರಿತಾದ ಗುಂಪು ಚರ್ಚೆಯಲ್ಲಿ ಭಾಗವಹಿಸುವರು. ಆಯುರ್ವೇದ ಪದವೀಧರೆಯಾಗಿರುವ ಡಾ. ರೂಪಶ್ರೀ ಈ ಹಿಂದೆ ಹಾಸನದ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದು, ಈಗ ಮರವಂತೆಯಲ್ಲಿ ಆಯುರ್ವೇದ ಚಿಕಿತ್ಸಾಲಯ ನಡೆಸುತ್ತಿದ್ದಾರೆ.

Read More

ಗಂಗೊಳ್ಳಿ: ಕೋಮುಸೂಕ್ಷ್ಮ ಪ್ರದೇಶ ಎಂದು ಹೆಸರಾಗಿದ್ದ ಗಂಗೊಳ್ಳಿಯಲ್ಲಿಗ ಯಾವುದೇ ಘರ್ಷಣೆಗಳಿಲ್ಲ. ಆದರೆ ಸ್ಟೀಲ್ ಬೋಟ್ ದುರಸ್ತಿ ನೆಪದಲ್ಲಿ ಕಬ್ಬಿಣ ಮತ್ತು ರಾಸಾಯನಿಕ ವಸ್ತುಗಳ ಬಳಕೆಯಿಂದ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ನಮ್ಮ ರಕ್ಷಣೆ ನಮ್ಮ ಕೈಯಲ್ಲಿ ಎನ್ನುವಂತೆಯೇ ಪರಿಸರದ ರಕ್ಷಣೆಯೂ ನಮ್ಮ ಕೈಯಲ್ಲಿಯೇ ಇದೆ ಎಂದು ಸಾಹಿತಿ, ಅಂಕಣಕಾರ ಕೋ.ಶಿ.ಕಾರಂತ ಹೇಳಿದರು. ಸಂಜೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ’ಗಂಗೊಳ್ಳಿ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಕ್ಯಾಂಡಲ್ ಲೈಟ್ ಪ್ರತಿಭಟನೆ ಎನ್ನುವ ವಿನೂತನ ರೀತಿಯ ಪ್ರತಿಭಟನೆಯಲ್ಲಿ ಮೇಣದ ಬತ್ತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣ ಸಂಯೋಜಕ ಮತ್ತು ಪರಿಸರವಾದಿ ಉದಯ ಗಾಂವ್ಕರ್ ಮಾತನಾಡಿ, ಪ್ರತಿ ಮನುಷ್ಯನಿಗೂ ಅವನ ಕುಟುಂಬದ ಜೊತೆಗೆ ಮಾತ್ರ ಸಂಬಂಧವಲ್ಲ. ಸುತ್ತಮುತ್ತಲಿನ ಜನರ ಜೊತೆಯೂ ಸಂಬಂಧವಿದೆ. ಅದೇ ರೀತಿ ಸುತ್ತಲಿನ ಮರಗಿಡಗಳು, ಪ್ರಾಣಿ ಜಂತುಗಳು, ಗಾಳಿ ಬೆಳಕುಗಳ ನಡುವೆ ಸಂಬಂಧವೂ ಇದೆ. ಇದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು.…

Read More

ಬೈಂದೂರು: ಅತಿಥಿ ಶಿಕ್ಷಕರ ಪ್ರತಿಭಟನೆಯಿಂದಾಗಿ ಕಳೆದ ಹಲವಾರು ದಿನಗಳಿಂದ ವಿಧ್ಯಾರ್ಥಿಗಳ ಭವಿಷ್ಯದ ವಿರುದ್ದ ಆಟವಾಡುತ್ತಿರುವ ಅತಿಥಿ ಶಿಕ್ಷಕರ ವಿರುದ್ದ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಎದುರುಗಡೆ ವಿದ್ಯಾರ್ಥಿಗಳು ಮೂರನೇ ದಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಇವರ ಆಶ್ರಯದಲ್ಲಿ ಪ್ರತಿಭಟನೆ ನೆಡೆಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೇಂದ್ರೀಯ ಕಾರ್ಯಸಮಿತಿ ಸದಸ್ಯೆ ಚೈತ್ರ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹೆಚ್ಚಾಗಿ ಬಡವರು, ಮಧ್ಯಮ ವರ್ಗದ 900 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿರುವ ಬೈಂದೂರು ಪ್ರಥಮ ದರ್ಜೆ ಕಾಲೇಜು ಬೇರೆ ಎಲ್ಲಾ ಕಾಲೇಜಿಗಿಂತ ಒಂದು ರೀತಿಯಲ್ಲಿ ವಿಭಿನ್ನವಾಗಿ ಕಾಣುತ್ತಿದೆ. ಸಾಮಾನ್ಯವಾಗಿ ಎಲ್ಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳು ತರಗತಿ ತಪ್ಪಿಸಿಕೊಳ್ಳುತ್ತಾರೆ. ಆದರೆ ಈಗ ಉಪನ್ಯಾಸಕರು ವಿಧ್ಯಾರ್ಥಿಗಳ ಕಣ್ಣು ತಪ್ಪಿಸಿಕೊಂಡು ತಿರುಗಾಡುವ ಪರಿಸ್ಥಿತಿ ಬಂದಿದೆ ಎಂದರು. ಅತಿಥಿ ಉಪನ್ಯಾಸಕರು ಮುಷ್ಕರದಲ್ಲಿ ನಿರತರಾಗಿದ್ದಾರೆ. ಅವರಿಗೆ ಸಿಗಲೇ ಬೇಕಾಂತಹ ನ್ಯಾಯಕ್ಕಾಗಿ ಅವರು ಹೋರಾಟ ಮಾಡಲಿ. ಈ ವಿಚಾರದಲ್ಲಿ ವಿದ್ಯಾಥಿಗಳಾದ ನಾವು ಕೂಡಾ ಬೆಂಬಲ ಸೂಚಿಸುತ್ತೇವೆ. ಅಂತಿಮ ಪರೀಕ್ಷೆಗಳು ಹತ್ತಿರ ಬರುತ್ತಿದೆ.…

Read More

ಬೈಂದೂರು: ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಐದು ದಿನಗಳ ಕಾಲ ಜರುಗುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಮತ್ತು ವಿಶೇಷ ಚತುಃಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಮಂಗಳವಾರ ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ಬಿ, ಕೃಷ್ಣಮೂರ್ತಿ ನಾವಡ, ಆನಗಳ್ಳಿ ಚನ್ನಕೇಶವ ಗಾಯತ್ರಿ ಭಟ್ಟ, ಕೆರೆಕಟ್ಟೆ ಸೀತಾರಾಮ ಅಡಿಗರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ದೇವತಾ ಕಾರ್ಯಕ್ಕೆ ಭಕ್ತರು ಬೈಂದೂರಿನ ವಿವಿಧ ಭಾಗಗಳಿಂದ ಹೊರೆಕಾಣಿಕೆಯನ್ನು ವಾದ್ಯಘೋಷಗಳೊಂದಿಗೆ ಮೆರವಣಿಗೆ ಮೂಲಕ ತಂದು ಸಮರ್ಪಿಸಿದರು. ಸಂಜೆ ರಾಕ್ಷೋಘ್ನಹೋಮ, ವಾಸ್ತುಪೂಜೆ, ಬಲಿ ಕುಂಡಮಂಟಪ ಸಂಸ್ಕಾರ, ಅಗ್ನಿಜನನ ನಡೆಯಿತು.

Read More

ಬೈಂದೂರು: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಕೆಲಸ ಭದ್ರತೆ ನೀಡಬೇಕಿದ್ದ ಸರಕಾರ ಖಾಯಂ ಉಪನ್ಯಾಸಕರ ನೇಮಕಾತಿಯಲ್ಲಿ ತಾರತಮ್ಯ ನೀತಿ ತಳೆದು ನಮ್ಮನ್ನು ಬೀದಿ ತರುವ ಹುನ್ನಾರ ನಡೆಸಿದೆ ಎಂದು ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧಕ್ಷ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ಆರೋಪಿಸಿದರು. [quote font_size=”16″ bgcolor=”#ffffff” arrow=”yes” align=”right”]ಸ್ಥಳಕ್ಕಾಗಮಿಸಿದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಈ ವಿಚಾರವನ್ನು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸುತ್ತೇನೆ. ನಿಮ್ಮ ಹೋರಾಟಕ್ಕೆ ಧನಿಯಾಗಿ ನಿಲ್ಲುತ್ತೇನೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಯ ಬಳಿಕ ಮುಂದಿನ ನಿರ್ಣಯ ಕೈಗೊಳುವ ಬಗ್ಗೆ ಚಿಂತಿಸುವುದಾಗಿ ತಿಳಿಸಿದರು. ಸಮಾಜದ ಸತ್ಪ್ರಜೆಗಳನ್ನು ರೂಪಿಸುವ ನೀವುಗಳೇ ಚುನಾವಣೆ ಬಹಿಷ್ಕಾರದಂತಹ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದು ಪ್ರತಿಭಟನಾಕಾರ ಮನವೋಲಿಸಿದರು.[/quote] ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಎದುರು ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯ ನೇತೃತ್ವ ವಹಿಸಿ…

Read More

ಗಂಗೊಳ್ಳಿ: ಇತ್ತೀಚಿನ ದಿನಗಳಲ್ಲಿ ಸಂಸ್ಕೃತಿ ಸಂಸ್ಕಾರದ ಕೊರತೆಯಿಂದ ಯುವಜನರು ದಾರಿ ತಪ್ಪುತ್ತಿದ್ದಾರೆ. ಇಂದು ಮಕ್ಕಳಿಗೆ ಹೆಚ್ಚೆಚ್ಚು ಕಲಿಯಲು ಪ್ರೋತ್ಸಾಹ ದೊರೆಯುತ್ತಿದ್ದರೂ ಅವರಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರದ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ ಎಂದು ತೆಕ್ಕಟ್ಟೆ ಸೇವಾ ಸಂಗಮದ ವಿಶ್ವಸ್ಥ ಕೃಷ್ಣರಾಯ ಶ್ಯಾನುಭಾಗ್ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಆಶ್ರಯದಲ್ಲಿ ಶಿಶು ಮಂದಿರದ ನಗರ ಜಯವಂತ ನಾಯಕ್ ಸಭಾಭವನದಲ್ಲಿ ಜರಗಿದ ಪಾಲಕರ ಮಿಲನ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಮಾತನಾಡಿದರು. ನಾವು ನಮ್ಮ ಜೀವನದ ಅವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮಕ್ಕಳನ್ನು ಮುದ್ದು ಮಾಡುವುದು, ಅವರ ಅವಶ್ಯಕತೆಗಳನ್ನು ಪೂರೈಸುವುದು ಸಹಜ. ಆದರೆ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದುದು ಅತ್ಯವಶ್ಯಕ. ಅವರು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದು ಗುರುತಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಹೆತ್ತವರ ಹಾಗೂ ಪೋಷಕರು ತಮ್ಮ ಮಕ್ಕಳ ಕಡೆ…

Read More

ಬೈಂದೂರು: ಇಲ್ಲಿನ ಐತಿಹಾಸಿಕ ಪ್ರಸಿದ್ದ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಫೆ.09ರಿಂದ ಫೆ.13ರವರೆಗೆ ನಡೆಯಲಿರುವ ಸಾರ್ವಜನಿಕ ಲಕ್ಷಮೋದಕ ಗಣಪತಿ ಮಹಾಯಾಗ ಮತ್ತು ಫೆ.13ರಂದು ನಡೆಯುವ ವಿಶೇಷ ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ದತೆ ಪೂರ್ಣಗೊಂಡಿದೆ. ಧಾರ್ಮಿಕ ಪೂಜೆಗಳು ನಡೆಯುವ ಸ್ಥಳದಲ್ಲಿ ಬೃಹತ್ ಚಪ್ಪರ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಸುಮಾರು 20 ಸಾವಿರ ಜನರು ಕುಳಿತುಕೊಳ್ಳಬಹುದಾದ ಅನ್ನಸಂತರ್ಪಣೆ ಚಪ್ಪರಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಕೂಡಾ ಸ್ವಯಂಸೇವಕರು ವಿಶೇಷ ಮುತುವರ್ಜಿವಹಿಸಿ ಕೆಲಸ ಮಾಡುತ್ತಿದ್ದಾರೆ. ಫೆ.09 ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಪ್ರಾರಂಭಗೊಳ್ಳಲಿದೆ. ಸಂಜೆ ರಾಕ್ಷೋಘ್ನಹೋಮ, ವಾಸ್ತುಪೂಜೆ, ಬಲಿ ಕುಂಡಮಂಟಪ ಸಂಸ್ಕಾರ, ಅಗ್ನಿಜನನ ನಡೆಯಲಿದೆ. ಫೆ.10ರಂದು ಬೆಳಿಗ್ಗೆ ಲಕ್ಷಮೋದಕ ಗಣಪತಿ ಮಹಾಯಾಗಾರಂಭ ಹಾಗೂ ಸಂಜೆ ವಿಶೇಷ ಪೂಜೆ, ಅಷ್ಟಾವಧಾನ ಸೇವೆ, ಶ್ರೀಮಹಾಸತಿ ಅಮ್ಮನವರ ಸನ್ನಿಧಿಯಲ್ಲಿ ವರ್ಧಂತಿ ಅಂಗವಾಗಿ ಅಷ್ಟೋತ್ತರ ಶತಕಲಶ ಸ್ಥಾಪನೆ, ಕಲಾತತ್ವಹೋಮ ನಡೆಯಲಿದೆ. ಫೆ.11ರಂದು ಬೆಳಿಗ್ಗೆ ಲಕ್ಷಮೋದಕ ಗಣಪತಿ ಮಹಾಯಾಗ, ಶ್ರೀಮಹಾಸತಿ ಅಮ್ಮನವರಿಗೆ ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ ಹಾಗೂ ಸಂಜೆ…

Read More