ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ನಿವೃತ್ತ ಪೋಸ್ಟ್ ಮಾಸ್ಟರ್ ಹಾಗೂ ರಂಗ ಕಲಾವಿದ ಹೊಸಾಡಿನ ಜಯರಾಮ ನಾವಡ (೭೪) ಅಲ್ಪ ಕಾಲದ ಅಸೌಖ್ಯದಿಂದಾಗಿ ಕೊನೆಯುಸಿರೆಳೆದರು. ರೂಪರಂಗ ನಾಟಕ ಸಂಸ್ಥೆಯ ನಾಟಕಗಳಲ್ಲಿ ಅಭಿನಯಿಸಿ ಅಪಾರ ಜನಮನ್ನಣೆ ಗಳಿಸಿದ್ದ ಜಯರಾಮ ನಾವಡ ಕುಂದೇಶ್ವರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇರಿದಂತೆ ಸಾಮಾಜಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದರು. ಇವರು ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
Author: ನ್ಯೂಸ್ ಬ್ಯೂರೋ
ಸರಳೀಕೃತ ಮರಳು ನೀತಿ ಜಾರಿಯಾಗಲಿ. ಕೊಲ್ಲೂರು ದೇವಳದ ಕಾನೂನು ಸುವ್ಯವಸ್ಥೆ ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು. ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೇಂದ್ರದಲ್ಲಿ ಬಿಜೆಪಿ ಪಕ್ಷವೊಂದೇ ಬಹುಮತದಿಂದ ಅಧಿಕಾರಕ್ಕೇರಿ ಉತ್ತಮ ಆಡಳಿತ ನಡೆಸುತ್ತಿರುವುದು ಕಳೆದು ಹೋದ ವ್ಯವಸ್ಥೆಗೊಂದು ಗೌರವ ತಂದಿರುವುದಲ್ಲದೇ, ಕುಸಿದುಹೋದ ಆಡಳಿತ ಯಂತ್ರಕ್ಕೊಂದು ನವಚೈತನ್ಯ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು. ಅವರು ಕೊಲ್ಲೂರು, ಹಟ್ಟಿಯಂಗಡಿ ದೇವಳಕ್ಕೆ ಭೇಟಿ ನೀಡಿದ ಬಳಿ ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನರೇಂದ್ರ ಮೋದಿ ಅವರ ನೇತೃತ್ವ ಸರಕಾರ ಅಧಿಕಾರಕ್ಕೆ ಬಂದು 21 ತಿಂಗಳುಗಳಲ್ಲಿ ಒಂದೂ ಕಪ್ಪುಚುಕ್ಕೆಯಿಲ್ಲದೇ ಕೆಲಸ ಮಾಡಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದು, ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಯುವಕರ ಕೌಶಲ್ಯಾಭಿವೃದ್ಧಿ, ರೈತರ ಬೆಳೆಗೆ ಪ್ರೀಮಿಯಂ ಭರಿಸುವುದು, ಕೇಂದ್ರ ರಾಜ್ಯ ಸರಕಾರಗಳ ಸೌವಲತ್ತು ನೇರವಾಗಿ ವ್ಯಕ್ತಿಯ ಬ್ಯಾಂಕ್ ಅಕೌಂಟಿಗೆ ತಲುಪುವ ವ್ಯವಸ್ಥೆ, ಜೀವವಿಮೆ, ಶಿಕ್ಷಣ ಸೇರಿದಂತೆ ಹತ್ತಾರು ಜನಪರ ಯೋಜನೆಗಳಿಗೆ ಕೇಂದ್ರ ಸರಕಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಾವು ಕಚ್ಚಿದ್ದಕ್ಕೆ ಮದ್ದಿಲ್ಲ. ನಾಯಿಕಡಿತಕ್ಕೂ ಚುಚ್ಚು ಮದ್ದಿಲ್ಲ. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರದಲ್ಲಿ ಔಷಧವಿಲ್ಲ. ಇಲಾಖೆಗೆ ಔಷಧ ಕೊರತೆಯಿದೆಯಾ. ಹಾಗಿದ್ದರೆ ನನ್ನ ಗಮನಕ್ಕೆ ಏಕೆ ತಂದಿಲ್ಲ. ಬಡವರಿಗೆ ಸಿಗೋ ಸೌಲಭ್ಯ ವಂಚನೆಯಾದರೆ ಕ್ಷಮಿಸೋದಿಲ್ಲ. ಹೀಗೆ ಖಡಕ್ಕಾಗಿ ಎಚ್ಚರಿಸಿದವರು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ. ಕುಂದಾಪುರ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಗಂಗೊಳ್ಳಿ ಆರೋಗ್ಯ ಕೇಂದ್ರದಲ್ಲಿ ಹಾವು ಕಚ್ಚಿದಕ್ಕೆ ಔಷಧ ಸಿಗುತ್ತಿಲ್ಲ ಎಂದು ಜನ ಕಂಪ್ಲೇಂಟ್ ಮಾಡುತ್ತಿದ್ದಾರೆ. ಏಕೀಗೆ ಎಂದು ಪ್ರಶ್ನಿಸಿದರು. ಎಲ್ಲಾ ಆಸ್ಪತ್ರೆಗಳಲ್ಲೂ ಸಮಿತಿ ರಚಿಸಿ, ಕ್ರಮಬದ್ಧವಾಗಿ ಸಭೆ ನಡೆಸಿದ್ದೀರಾ. ಏನಾದರೂ ಕೊರತೆಯಿದ್ದರೆ ಗಮನಕ್ಕೆ ತನ್ನಿ. ಬಡವರ ವಿಷಯದಲ್ಲಿ ರಾಜಿಯಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಕೆಲಸ ಮಾಡಿ, ಕೆಲಸ ಮಾಡಲು ಮನಸ್ಸಿಲ್ಲದಿದ್ದರೆ ಮನೆಗೆ ಹೋಗಿ ಎಂದವರು ವಾರ್ನಿಂಗ್ ಮಾಡಿದರು. ಹಿಂದೆ ಆರೋಗ್ಯ ಇಲಾಖೆ ೨.೫ಲಕ್ಷ ರೂ. ಔಷಧಿ ವಿಕ್ರಯಕ್ಕೆ ಲಿಮಿಟ್ ಹಾಕಿದ್ದು, ಈಗ ೫…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮೊಗವೀರ ಯುವ ಸಂಘಟನೆ ಬೈಂದೂರು-ಶಿರೂರು ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಯಡ್ತರೆಯ ಜೆಎನ್ಆರ್ ಕಲಾಮಂದಿರದಲ್ಲಿ ಜರುಗಿತು. ಮೋಗವೀರ ಯುವ ಸಂಘಟನೆ ಬೈಂದೂರು ಶಿರೂರು ಘಟಕದ ನೂತನ ಅಧ್ಯಕ್ಷ ಗಂಗಾಧರ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಜಗನ್ನಾಥ ಕೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿ ನೂತನ ಪದಾಧಿಕಾರಿಗಳ ಮೂಲಕ ಸಂಘವು ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬೈ ಮೋಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷ ಮಹಾಬಲ ಕುಂದರ್, ಮಾಜಿ ಅಧ್ಯಕ್ಷ ನಾಣು ಡಿ. ಚಂದನ್ ಮಸ್ಕಿ, ಜಿಪಂ ಮಾಜಿ ಅಧ್ಯಕ್ಷ ಮದನ ಕುಮರ್, ಹೆಮ್ಮಾಡಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ, ಸಲಹಾ ಸಮಿತಿ ಸದಸ್ಯ ರಾಮ ಮೊಗವೀರ, ಮೊಗವೀರಗರಡಿ ಶ್ರೀ ಜೈನಜಟ್ಟಿಗೇಶ್ವರ ದೇವಳದ ಅಧ್ಯಕ್ಷ ನಾರಾಯಣ ಅಕ್ಷಯ ಶ್ರೀನಿವಾಸ, ಮೊಗವೀರ ಯುವ ಸಂಘಟನೆಯ ನಿಕಟಪೂರ್ವಾಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷರಂಗದ ಧೀಮಂತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಅವರಿಗೆ ಯಕ್ಷಗಾನ ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ರಘುರಾಮ ಶೆಟ್ಟರ ನಿವಾಸ ಸ್ವಸ್ತಿಯಲ್ಲಿ ಪ್ರದಾನಿಸಲಾಯಿತು. ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯ ಪಳ್ಳಿ ಕಿಶನ್ ಹೆಗ್ಡೆ ಐವತ್ತು ಸಾವಿರ ಮೌಲ್ಯದ ಚೆಕ್ ಹಸ್ತಾಂತರಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ರಘುರಾಮ ಶೆಟ್ಟರ ಮಡದಿ ಹಾಗೂ ಕುಟುಂಬಿಕರು, ಪತ್ರಕರ್ತರಾದ ರಾಮಕೃಷ್ಣ ಹೇರ್ಳೆ, ಶ್ರೀಪತಿ ಹೆಗಡೆ ಹಕ್ಲಾಡಿ ಉಪಸ್ಥಿತರಿದ್ದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಘಟನಾ ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ, ಶಾಸಕ ಗೋಪಾಲ ಪೂಜಾರಿ ಭೇಟಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ವ್ಯಕ್ತಿಯೋರ್ವರನ್ನು ಮಾರಕಾಯುಧಗಳಿಂದ ಹೊಡೆದು ಕೊಲೆಗೈದ ಘಟನೆ ವರದಿಯಾಗಿದ್ದು, ಮೃತರನ್ನು ಪಡುವಾಯಿನ ಮನೆ ನಿವಾಸಿ ಮಾಧವ ಪೂಜಾರಿ ಯಾನೆ ಮಾಸ್ತಿ ಪೂಜಾರಿ (೬೨) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ನಾವುಂದದ ಪಡುವಾಯಿನ ಮನೆ ಎಂಬಲ್ಲಿ ಕಳೆದ ಮೂರು ವರ್ಷಗಳಿಂದ ನೆಲೆಸಿದ್ದ ಮಾಧವ ಪೂಜಾರಿ ಅವರು ಮಗಳೊಂದಿಗೆ ಮುಂಬೈ ತೆರಳುವ ಆಕೆಯನ್ನು ಸಲುವಾಗಿ ನಾವುಂದದ ಮನೆಗೆ ಬರಲು ತಿಳಿಸಿದ್ದರು. ಶನಿವಾರ ಬೆಳಿಗ್ಗೆ ಸುಮಾರು ೫:೩೦ರ ಹೊತ್ತಿಗೆ ಮೈಸೂರಿನಿಂದ ಮಗಳು, ಅಳಿಯ ಹಾಗೂ ಮೊಮ್ಮೊಗ ಆಗಮಿಸಿದಾಗ ಮನೆಯ ಬೀಗ ಹಾಕಲಾಗಿತ್ತು. ಮಗಳು ತಂದೆಯನ್ನು ಕರೆದಾಗಲೂ ಉತ್ತರವಿಲ್ಲದ್ದರಿಂದ ಮುಂಬೈಯಲ್ಲಿ ನೆಲೆಸಿರುವ ತಾಯಿಗೆ ಪೋನಾಯಿಸಿ ವಿಚಾರಿಸಿದ್ದಾರೆ. ಅವರು ವಾಕಿಂಗ್ಗೆ ತೆರಳಿರಬಹುದೆಂಬ ತಾಯಿ ಹೇಳಿದ್ದರಿಂದ ಸ್ವಲ್ಪ ಹೊತ್ತು ಕಾದು ಬಳಿಕ ಅಕ್ಕಪಕ್ಕದ ಮನೆಯವರಲ್ಲೂ ವಿಚಾರಿಸಿದ್ದಾರೆ. ಎಷ್ಟು ಹೊತ್ತಾದರೂ ಹಿಂತಿರುಗದ್ದನ್ನು ನೋಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಳದಲ್ಲಿರುವವರೇ ಚಿನ್ನಾಭರಣ ಕಳವು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿ, ದೇವಳಕ್ಕಷ್ಟೇ ಅಲ್ಲದೇ ಇಡೀ ಊರಿಗೆ ಕಳಂಕ ತಂದಿಟ್ಟಿದ್ದಾರೆ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿ ಮಾನ ಹರಾಜಾಗುತ್ತಿದ್ದರೂ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಹೊಂದಿ ತಪ್ಪಿತಸರಿಗೆ ರಕ್ಷಣೆ ನೀಡುತ್ತಿರುವುದು ವಿಷಾದನೀಯ. ಇನ್ನಾದರೂ ದೇವಳದ ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಗೆಹರಿಸದಿದ್ದರೇ ಗ್ರಾಮಸ್ಥರು ಉಗ್ರ ಪ್ರತಿಭಟನೆಗೂ ಸಿದ್ದ. ಇದು ಕೊಲ್ಲೂರು ಸ.ಹಿ.ಪ್ರಾ. ಶಾಲೆಯ ಸಭಾಗಂಣನಲ್ಲಿ ನಡೆದ ಎರಡನೇ ಸುತ್ತಿನ ಗ್ರಾಮಸಭೆಯ ಕೇಳಿಬಂದ ಒಕ್ಕೊರಲ ಆಗ್ರಹ. ಗ್ರಾಮಸ್ಥ ಹರೀಶ್ ತೋಳಾರ್ ಮಾತನಾಡಿ ಕಳ್ಳತನದ ಆರೋಪದ ಮೇಲೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಆರೋಪಿಗಳು ಮತ್ತೆ ದೇವಸ್ಥಾನದಲ್ಲಿಯೇ ತಿರುಗಾಡುತ್ತಿದ್ದಾರೆ. ಅಪರಾಧ ಎಸಗಿದವರೇ ಇಷ್ಟು ರಾಜಾರೋಷವಾಗಿರುವುದು ತಿರುಗಾಡುತ್ತಿರುವುದು, ಇತರರಿಗೂ ತಪ್ಪು ಮಾಡಿದರೆ ಏನೂ ಆಗದೆಂಬ ಭಾವನೆ ಮೂಡಿಸುತ್ತಿದೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಾಧಾರಗಳನ್ನು ನಾಶಪಡಿಸದೇ ಇರಲಾರರು. ತಪ್ಪಿತಸ್ಥರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಿ ಭಕ್ತರ ಭಾವನೆಗಳಿಗೂ ಬೆಲೆ ಕೊಡಬೇಕಾಗಿದೆ ಎಂದರು. ಕುಂದಾಪ್ರ ಡಾಟ್…
ಕುಂದಾಪುರ: ಇಲ್ಲಿನ ಬಿ.ಸಿ ರಸ್ತೆಯ ಕಾರಂತಬೆಟ್ಟು ನಿವಾಸಿ ವಿಜಯ್ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಎಂದಿನಂತೆ ಊಟ ಮಾಡಿ ಮಲಗಿದ್ದ ವಿಜಯ್ ಬೆಳಿಗ್ಗೆ ಮನೆಯಲ್ಲಿಲ್ಲದಿರುವುದನ್ನು ನೋಡಿ ಹುಡುಕಾಟ ನಡೆಸಿದಾಗ ಮನೆಯ ಹಿತ್ತಲಿನ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಘೋಷಣೆಯಾಗಿದ್ದ ಮೀಸಲಾತಿ ಮೊದಲು ಬಿಜೆಪಿಗೆ ಪರವಾಗಿಯೇ ಇದ್ದರೂ ಎರಡನೇ ಭಾರಿ ಅದು ಬದಲಾಗಿದ್ದರಿಂದ, ಬಹುಮತವಿರುವ ಬಿಜೆಪಿ ಪಕ್ಷಕ್ಕೆ ಈ ಭಾರಿಯೂ ಅಧ್ಯಕ್ಷ ಪಟ್ಟ ತಪ್ಪಿಹೋಗಿದೆ. ಮೊದಲ ಅವಧಿಯಲ್ಲಿ ಬಹುಮತವಿರುವ ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷಗಾದಿ ಏರಲು ಎಸ್ಸಿ ಬಿಸಿಎ ಮಹಿಳೆ ಇಲ್ಲದಿದ್ದ ಕಾರಣ ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಸಿಪಿಎಂ ಪಕ್ಷದ ಕಲಾವತಿ ಯು.ಎಸ್. ಅವರಿಗೆ ಅಧ್ಯಕ್ಷ ಸ್ಥಾನ ನಿರಾಯಾಸವಾಗಿ ದಕ್ಕಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ ಬಂದಿದ್ದರಿಂದ ಬಿಜೆಪಿ ನಾಗರಾಜ್ ಕಾಮಧೇನು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಕುಂದಾಪ್ರ ಡಾಟ್ ಕಾಂ ವರದಿ. ಎರಡನೇ ಅವಧಿಗೆ ಸಾಮಾನ್ಯ ಮೀಸಲು ಘೋಷಣೆಯಾಗಿ ಬಿಜೆಪಿ ಸದಸ್ಯರಿಗೆ ಅಧ್ಯಕ್ಷರಾಗುವ ಅವಕಾಶವಿತ್ತಾದರೂ, ದಿಢೀರ್ ಬದಲಾದ ಮೀಸಲಾತಿಯಿಂದ, ಬಿಸಿಎ ಮಹಿಳೆಗೆ ಅಧ್ಯಕ್ಷ ಸ್ಥಾನ ಒಲಿದಿದ್ದು, ಆ ಕೆಟಗೆರಿಯ ಸದಸ್ಯರನ್ನು ಹೊಂದಿರದ ಬಿಜೆಪಿಗೆ ಮತ್ತೊಮ್ಮೆ ನಿರಾಸೆ ಮೂಡಿದೆ. ಕಾಂಗ್ರೆಸ್ ತಮ್ಮ ಸದಸ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮೀಸಲು ಬದಲಿಸಿತು ಎಂದು ಬಿಜೆಪಿ…
ಕುಂದಾಪ್ರ ಡಾಟ್ ಕಾಂ: ಚುನಾವಣೆಯಿಂದ ಚುನಾವಣೆಗೆ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈ ಸನ್ನಿವೇಶದಲ್ಲಿ ಕಾರ್ಯಕರ್ತರುಗಳು ಕೂಡಾ ಚಿಂತಿಸಬೇಕಾದ ಅವಶ್ಯಕತೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲರ ಸಾಂಘಿಕ ಪರಿಶ್ರಮದಿಂದ ಜಯ ಲಭಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಈ ಭಾಗದಲ್ಲಿ ಇನ್ನಷ್ಟು ಬಲಿಷ್ಠಗೊಳಿಸುವಲ್ಲಿ ಮುತುವರ್ಜಿ ವಹಿಸಿಕೊಂಡು ಮುಂದಿನ ವಿಧಾನ ಸಭಾ ಚುನಾವಣೆಗೆ ಸಿದ್ಧರಾಗಬೇಕಾಗಿದೆ ಎಂದರು. ಅವರು ವಂಡ್ಸೆಯ ವಿ.ಕೆ.ಶಿವರಾಮ ಶೆಟ್ಟಿ ಅವರ ಕಟ್ಟಡದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ವಂಡ್ಸೆ ಕಚೇರಿ ಉದ್ಘಾಟನೆ ಕಾರ್ಯಕ್ರಮದ ವಂಡ್ಸೆ ಭಾಗದ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಪ್ರತೀ ಶುಕ್ರವಾರ ಬೆಳಿಗ್ಗೆ10 ಗಂಟೆಯಿಂದ 12 ಗಂಟೆಯ ತನಕ ವಂಡ್ಸೆಯ ಕಛೇರಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುತ್ತೇನೆ. ಈ ಭಾಗದಲ್ಲಿ ಜಿ.ಪಂ.ನಿಂದ ಆಗಬೇಕಾದ ಕೆಲಸಗಳಿಗೆ ಸ್ಪಂದಿಸುತ್ತೇನೆ. ಜನರು ನಮ್ಮನ್ನು ಹುಡುಕಿಕೊಂಡು ಬರಬಾರದು, ಜನರಿದ್ದಲ್ಲಿಗೆ ನಾವು ಬರುತ್ತೇವೆ ಎಂದರು. ಜಿ.ಪಂ.ಸದಸ್ಯರ ವಂಡ್ಸೆ ಕಛೇರಿಯನ್ನು ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ವಂಡ್ಸೆ ವಿಶಿಷ್ಠವಾದ ಜಿ.ಪಂ.ಕ್ಷೇತ್ರ.…
