ದೇಶ ಕಾಯೋ ಸೈನಿಕರಿಗೆ ಬಗ್ಗೆ ಕನ್ಹಯ್ಯಾ ಆರೋಪಕ್ಕೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯಾ ಕುಮಾರ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು ಜೆಎನ್‌ಯು ಹಳೆ ವಿದ್ಯಾರ್ಥಿನಿ ಪ್ರಸ್ತುತ ಅದೇ ಕಾಲೇಜಿನ ಪ್ರಾಧ್ಯಾಪಕಿ ಇದನ್ನು ಸಾಕ್ಷೀಕರಿಸಿದ್ದಾರೆ. ಕನ್ಹಯ್ಯಾ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳೊಂದಿಗೆ (ಈಗ ಹಳೆ ವಿದ್ಯಾರ್ಥಿನಿ) ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ೨೦೧೫ ರ ಜೂನ್‌ನಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಕನ್ಹಯ್ಯಾ ಕುಮಾರ್‌ನನ್ನು ವಿದ್ಯಾರ್ಥಿನಿಯೋರ್ವಳು ಪ್ರಶ್ನಿಸಿದ್ದಳು. ಆಗ ಕನ್ಹಯ್ಯಾ ’ಇದು ನನ್ನ ಹಾಸ್ಟೇಲ್, ನೀನು ಹುಚ್ಚಿ’ ಎಂದು ನಿಂದಿಸಿದ್ದಲ್ಲದೇ ’ನಿನ್ನನ್ನು ನೋಡಿಕೊಳ್ಳುತ್ತೇನೆ. ನನ್ನ ವಿರುದ್ದ ಅದೇನು ಮಾಡುತ್ತೀಯಾ ಮಾಡು’ ಎಂದಿದ್ದರು ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿ ಜೆಎನ್‌ಯು ಆಡಳಿತ ಮಂಡಳಿಗೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಳು. (ದೂರು ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.) ಆದರೆ ಕನ್ಹಯ್ಯಾ…
Author: ನ್ಯೂಸ್ ಬ್ಯೂರೋ
ಖುದ್ದು ವಿಚಾರಣೆಗೆ ಹಾಜರಾಗುವಂತೆ ಪ್ರಾಂಶುಪಾಲರಿಗೆ ನೋಟಿಸ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಂತ್ರಿಕ ಪದವಿ ವಿದ್ಯಾರ್ಥಿನಿಯೊಬ್ಬಳು ಸೆಮಿಸ್ಟರ್ ನಲ್ಲಿ ತನಗೆ ಕಡಿಮೆ ಅಂಕ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ ಮೂಡ್ಲಕಟ್ಟೆ ತಾಂತ್ರಿಕ ಕಾಲೇಜು ಪ್ರಾಂಶುಪಾಲರಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಸೆಮಿಸ್ಟರ್ ನಲ್ಲಿ ತನಗೆ ಕಡಿಮೆ ಅಂಕ ನೀಡಿರುವುದನ್ನು ಪ್ರಶ್ನಿಸಿ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ಎಸ್. ಮುನವರ ಸುಲ್ತಾನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐದು ಬಾರಿ ನೋಟಿಸ್ ನೀಡಿದ್ದರೂ ಈ ಬಗ್ಗೆ ಕಾಲೇಜಿನಿಂದ ವಿವರಣೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ, ಹೈಕೋರ್ಟ್ ಆದೇಶಗಳಿಗೆ ನಿರ್ಲಕ್ಷ್ಯ ತೋರುತ್ತಿರುವ ಕಾಲೇಜು ಆಡಳಿತ ಮಂಡಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಪ್ರಾಂಶುಪಾಲರಿಗೆ ಖುದ್ದು ಹಾಜರಾಗುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿದ್ಯಾರ್ಥಿನಿ ಎಸ್. ಮುನವರ ಸುಲ್ತಾನ್ ಮೊದಲ ಹಾಗೂ ಎರಡನೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರ ಪ್ರದೇಶಗಳಲ್ಲಿ ಸರಕಾರಿ ಹಾಸ್ಟೆಲ್ ಸ್ವಂತ ಕಟ್ಟಡವಿಲ್ಲದೇ ಅವ್ಯವಸ್ಥೆಯಿಂದ ಕೂಡಿರುವಾಗ ನೆಹರೂ ಮೈದಾನದ ಬಳಿಯ ಸರಕಾರಿ ಕಟ್ಟಡದಲ್ಲಿನ ಹಾಸ್ಟೆಲನ್ನು ಕೋಟೇಶ್ವರದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಪ್ರಯತ್ನದ ಹಿಂದೆ ಯಾರದ್ದೂ ಲಾಭಿ ಇಲ್ಲದಿಲ್ಲ. ಅನಗತ್ಯವಾಗಿ ಹಾಸ್ಟೆಲ್‌ನ್ನು ಕೋಟೇಶ್ವರಕ್ಕೆ ಸ್ಥಳಾಂತರಿಸಿ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟುಮಾಡಿದರೇ ಉಗ್ರ ಹೋರಾಟವನ್ನು ಕೈಗೊಳ್ಳವುದಾಗಿ ಡಿವೈಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ ಎಚ್ಚರಿಸಿದ್ದಾರೆ. ಕುಂದಾಪುರದ ಹಾಸ್ಟೆಲ್ ಸ್ಥಳಾಂತರ ಹಾಗೂ ಇನ್ನಿತರ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕ ಕುಂದಾಪುರದ ಮಿನಿವಿಧಾನದ ಸೌಧದ ಎದರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಸ್‌ಎಪ್‌ಐ ಕುಂದಾಪುರ ತಾಲೂಕು ಘಟಕದ ಅಧ್ಯಕ್ಷ ಅಕ್ಷಯ ವಡೇರಹೋಬಳಿ ಮಾತನಾಡಿ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದ ಕಾರಣ ಸರಕಾರಿ ಶಾಲಾ-ಕಾಲೇಜು, ಹಾಸ್ಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಮುಂದಿನ ರಾಜ್ಯ ಬಜೆಟ್‌ನಲ್ಲಿ ಶೇ.೩೦ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಲಿ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಮಹಿಳೆಯರೂ ಪುರುಷರಿಗೆ ಸರಿಸಾಟಿಯಾಗಿ ನಿಂತಿದ್ದಾರೆ. ಸಮಾಜದ ಯಶಸ್ವೀ ಪುರುಷರ ಹಿಂದೆ ಮಹಿಳಾ ಶ್ರಮವಿರುತ್ತದೆ. ಮಹಿಳೆಯರಿಗೆ ಪೂಜ್ಯ ಸ್ಥಾನವಿದ್ದರೂ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯನ್ನು ಕಡೆಗಣಿಸುವುದು ತರವಲ್ಲ ಎಂದು ಕುಂದಾಪುರ ಫ್ಯಾಶನ್ ಕೋರ್ಟ್ ನಿರ್ದೇಶಕಿ ಶಿಲ್ಪಾ ಕೆ. ಮಧ್ಯಸ್ಥ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕ್ ಒಕ್ಕೂಟ, ಕುಂದಾಪುರ ರೋಟರಿ ಮಿಡ್ ಟೌನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕುಂದಾಪುರ ಮೂಕಾಂಬಿಕಾ ಮಹಿಳಾ ಮಂಡಳಗಳ ಒಕ್ಕೂಟ ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲರಿಗೂ ಎಲ್ಲಾ ಸಮಯದಲ್ಲೂ ಅವಕಾಶ ಸಿಗೋದಿಲ್ಲ. ಜೀವನದಲ್ಲಿ ಒಮ್ಮೊಮ್ಮೆ ಒಳ್ಳೆಯ ಅವಕಾಶ ಸಿಗುತ್ತಿದ್ದು, ಅದನ್ನು ಬಳಸಿಕೊಂಡು ಎತ್ತರಕ್ಕೆ ಏರಬೇಕು. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಿರದೆ ಸಮಾಜದ ಎಲ್ಲಾ ಸ್ಥರದ ಮಹಿಳೆಯರು ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಅನುದಿನವೂ ಮಹಿಳೆಯರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರದ್ಧಾಭಕ್ತಿಯ ಕ್ಷೇತ್ರ ಕೊಲ್ಲೂರು ದೇವಳದಲ್ಲಿ ನಡೆದಿರುವ ಕಳ್ಳತನದಿಂದಾಗಿ ಇತರೇ ರಾಜ್ಯದವರು ಕರ್ನಾಟಕವನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದು, ರಾಜ್ಯದ ಘನತೆ ಕುಗ್ಗವಂತಾಗಿದೆ. ಇಡಿ ಪ್ರಕರಣದ ಹಿಂದೆ ಕಾಣದ ಕೈ ಕೆಲಸಮಾಡಿದ್ದು, ಇದೂವರೆಗೆ ರಾಜ್ಯ ಸರಕಾರ ಘಟನೆ ಬಗ್ಗೆ ತುಟಿ ಬಿಚ್ಚದಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣ ನ್ಯಾಯಸಮ್ಮತ ತನಿಖೆ ಮತ್ತು ಸತ್ಯ ಹೊರತರುವ ನಿಟ್ಟಿನಲ್ಲಿ ಸಿಬಿಐಗೆ ವಹಿಸಬೇಕು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಆಗ್ರಹಿದ್ದಾರೆ. ಕುಂದಾಪುರ ತಾಪಂ. ಮಾಜಿ ಅಧ್ಯಕ್ಷ ಬೆಳ್ಳಾಡಿ ಶಂಕರ ಶೆಟ್ಟಿ ಮನೆಯಲ್ಲಿ ನಾಡಾ ಗ್ರಾಮ ಸಾರ್ವಜನಿಕ ಸನ್ಮಾನ ಕಾರ‍್ಯಕ್ರಮದಲ್ಲಿ ಜಿಪಂ.ತಾಪಂ ವಿಜೇತ ಅಭ್ಯರ್ಥಿಗಳ ಸನ್ಮಾನಿಸಿ ಅವರು ಮಾತನಾಡಿದರು. ಕೊಲ್ಲೂರು ಮೂಕಾಂಬಿಕೆ ಭಕ್ತರು ಭಯ, ಭಕ್ತಿಯಿಂದ ಅಭರಣ ಅರ್ಪಿಸುತ್ತಾರೆ. ಆದರೆ ದೇವಳದ ಸಿಬ್ಬಂದಿ ಭಯವಿಲ್ಲದೆ ಹಣ ಚಿನ್ನ ದೇವಸ್ಥಾನದಿಂದ ಸಲೀಸಾಗಿ ಹೊರಗೊಯ್ಯುತ್ತಾರೆ. ಇಲ್ಲಿ ಎಲ್ಲರ ಬೇಜವಾಬ್ದಾರಿ ಇರುವುದು ಸ್ಪಷ್ಟ. ಸರಕಾರ ನ್ಯಾಯಸಮ್ಮತ ತನಿಖೆ ಮಾಡದಿದ್ದರೆ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದವರು…
ಕುಂದಾಪುರ: ಗಂಗೊಳ್ಳಿ ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಹಕ್ಲಾಡಿ ಬಟ್ಟೆಕುದ್ರುವಿನ ಶ್ರೀ ರಾಮ ಯುವಕ ಭಜನಾ ಮಂದಿರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಗುಲ್ವಾಡಿಯ ಶ್ರೀ ಶಿವಶಂಕರ ಭಜನಾ ಮಂಡಳಿಯು ದ್ವಿತೀಯ ಸ್ಥಾನವನ್ನು ಹಾಗೂ ಗುಲ್ವಾಡಿಯ ವೀರಾಂಜನೇಯ ಭಜನಾ ಮಂಡಳಿ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಸಂಜೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಂಗೊಳ್ಳಿಯ ಉದ್ಯಮಿ ವಿಜಯ ಭಾಸ್ಕರ ಶೆಣೈ ವಹಿಸಿದ್ದರು. ಶ್ರೀ ಶಾರದೋತ್ಸವ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆ ಅನಿತಾ ಶೇಟ್, ರವಿಚಂದ್ರ ಬಟ್ಟೆಕುದ್ರು ಹಕ್ಲಾಡಿ ಹಾಗೂ ಜಯಕರ ಗುಲ್ವಾಡಿ, ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಜಿ. ಮೊದಲಾದವರು ಉಪಸ್ಥಿತರಿದ್ದರು. ಶಂಕರ ಜಿ. ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ ಮೇಲ್‌ಗಂಗೊಳ್ಳಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಉಪ್ಪುಂದ ಮಡಿಕಲ್ ಅರಮಕೋಡಿ ಶ್ರೀ ಈಶ್ವರ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ಉಪ್ಪೊಂದೋತ್ಸವದ ಅಂಗವಾಗಿ ಮಡಿಕಲ್ ಕಡಲ ತೀರದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ನೇತೃತ್ವದಲ್ಲಿ ಋತ್ವಿಜರಿಂದ ವೇದಘೋಷ ಸಹಿತಾ 108 ಆರತಿಯ ಗಂಗಾಪೂಜೆ ನೇರವೇರಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಅರಮಕೋಡಿ ಈಶ್ವರ ಸೇವಾ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯ ಐ. ನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕುಮಾರ ಬಿ.ಎಚ್.ಕೆ, ಉಪ್ಪುಂದ ಮಡಿಕಲ್ ರಾಣಿಬಲೆ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉದ್ಯಮಿ ರಾಮ ಕೆ., ಈಶ್ವರ ಸೇವಾ ಸಮಿತಿಯ ಅಧ್ಯಕ್ಷ ಮುರುಳೀಧರ್ ಉಪಸ್ಥಿತರಿದ್ದರು. ಗೋಪಾಲ ಸ್ವಾಗತಿಸಿ, ಪ್ರಸನ್ನ ಕುಮಾರ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ಬಾಗಲಕೋಟೆ ತುಳಸಿಗೇರಿ ಕುವೆಂಪು ಶತಮಾನೋತ್ಸವ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮಲ್ಲಕಂಬ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಧರ್ಮಸ್ಥಳ ಮೇಳದ ಸ್ತ್ರೀ ಪಾತ್ರಧಾರಿ ಶಶಿಧರ ಪಡುಕೋಣೆ ಇಂದು ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕೆಲ ದಿನಗಳ ಹಿಂದ ಅಸೌಖ್ಯರಾಗಿದ್ದ ಶಶಿಧರ್ ಅವರು ಧಾರಾವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಗುಣಮುಖರಾಗಿದ್ದ ಅವರು ಮತ್ತೆ ಇಂದು ಅಸೌಖ್ಯರಾಗಿದ್ದರಿಂದ ಉಡುಪಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಕುಂದಾಪ್ರ ಡಾಟ್ ಕಾಂ ಸುದ್ದಿ. ಧರ್ಮಸ್ಥಳ ಮೇಳದ ಎರಡನೇ ಸ್ತ್ರೀ ವೇಷಧಾರಿಯಾಗಿದ್ದ ಶಶಿಧರ್ ಲಾಲಿತ್ಯಪೂರ್ಣ ಹೆಜ್ಜೆಗಾರಿಕೆ ಸ್ವರಬಾರ ಅಭಿನಯ ಛಾತುರ್ಯದಿಂದ ಬ್ರಮರಕುಂತಳೆ ತಾರಾವಳಿ ಪದ್ಮಗಂದಿ ಮುಂತಾದ ಪಾತ್ರಗಳಿಗೆ ಅದ್ಭುತ ನ್ಯಾಯ ಒದಗಿಸಿದ ಕಲಾವಿದ. ಈ ಹಿಂದೆ ಪೇರ್ಡೂರು ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಶಶಿಧರ್ ಅವರ ಅಗಲುವಿಕೆ ಯಕ್ಷಾಭಿಮಾನಿಗಳನ್ನು ದಿಗ್ಬ್ರಾಂತರನ್ನಾಗಿಸಿದೆ. ಕೆಲವು ದಿನಗಳ ಹಿಂದಷ್ಟೆ ಕಣ್ಣಿಮನೆ ಅವರನ್ನು ಕಳೆದುಕೊಂಡಿದ್ದ ಯಕ್ಷಪ್ರಿಯರು ಈಗ ಮತ್ತೊಬ್ಬ ಉದಯೋನ್ಮಖ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಪ್ರತಿಷ್ಠಿತ ನಾಟಕ ಸಂಸ್ಥೆ ಲಾವಣ್ಯ ರಿ. ಬೈಂದೂರು ಇದರ ವಾರ್ಷಿಕ ರಂಗ ಸಂಭ್ರಮ ಹಾಗೂ 39ನೇ ವಾರ್ಷಿಕೋತ್ಸವ ಮಾರ್ಚ್11ರಿಂದ 13ರ ವರೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಮಾರ್ಚ್11ರ ಶುಕ್ರವಾರ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಮೂರು ದಿನಗಳ ಕಾಲ ನಾಟಕ ಪ್ರದರ್ಶನ ರಂಗ ಕಲಾವಿದರಿಗೆ ಸನ್ಮಾನ ನಡೆಯಲಿದೆ. ಮಾ.11ರ ಸಭಾಕಾರ್ಯಕ್ರಮದಲ್ಲಿ ಹಿರಿಯ ರಂಗಕಲಾವಿದ ಭವಾನಿಶಂಕರ್ ನಾಯಕ್ ಅವರಿಗೆ ಸನ್ಮಾನ ಹಾಗೂ ಲಾವಣ್ಯ ಪ್ರಸ್ತುತಿಯ ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ನಾಟಕ ಮುದ್ದಣ್ಣನ ಪ್ರಮೋಶನ್ ಪ್ರಸಂಗದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಭಿನಂದನಲಾಗುವುದು. ಬಳಿಕ ರಂಗಸಂಗಾತಿ ಮಂಗಳೂರು ಪ್ರಸ್ತುತಿಯ ಮೋಹನಚಂದ್ರ ನಿರ್ದೇನದ ನೆಮ್ಮದಿ ಅಪಾರ್ಟ್‌ಮೆಂಟ್ ನಾಟಕ ಪ್ರದರ್ಶನಗೊಳ್ಳಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಮಾಚ್12ರಂದು ಹಿರಿಯ ರಂಗ ಕಲಾವಿದ ವಿ.ಹೆಚ್. ನಾಯಕ್ ಸನ್ಮಾನಗೊಳ್ಳಲಿದ್ದು ಬಳಿಕ ಲಾವಣ್ಯ ಬೈಂದೂರು ಪ್ರಸ್ತುತಿಯ ಗಿರೀಶ್ ಬೈಂದೂರು ನಿರ್ದೇಶನದ ಗಾಂಧಿಗೆ ಸಾವಿಲ್ಲ ನಾಟಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಏ.6ರಂದು ಕುಂದಾಪುರ ಹಾಗೂ ಗಂಗೊಳ್ಳಿಗೆ ಆಗಮಿಸಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ತಿಳಿಸಿದ್ದಾರೆ. ಕುಂದಾಪುರದಲ್ಲಿ ಬೆಳಿಗ್ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮಾವೇಶವನ್ನು ಉದ್ಘಾಟಿಸಿದ ಬಳಿಕ, ಮರವಂತೆಯ ಎರಡನೇ ಹಂತದ ಬಂದರು ಕಾಮಗಾರಿ ವೀಕ್ಷಣೆ ನಡೆಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಂಗೊಳ್ಳಿಯ 102ಕೋಟಿ ಹಾಗೂ ಕೊಡೇರಿಯ 33ಕೋಟಿ ಅನುದಾನದ ಬಂದರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಉಡುಪಿ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
