Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಕುಂದಾಪುರ: ಅಸ್ಸಾಂನ ಗುವಾಹಟಿಯಲ್ಲಿ ಜರುಗುತ್ತಿರುವ 12ನೇ ಸೌತ್ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕುಂದಾಪುರ ತಾಲೂಕಿನ ಚಿತ್ತೂರು/ವಂಡ್ಸೆಯ ಯುವಕ ಗುರುರಾಜ್, 56ಕೆ.ಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ನಾಡಿಗೆ ಕೀರ್ತಿ ತಂದಿದ್ದಾನೆ. ಬಡತನದ ನಡುವೆಯೂ ಶ್ರದ್ಧೆ ಹಾಗೂ ಸತತ ಪರಿಶ್ರಮದಿಂದ ಏನನ್ನೂ ಸಾಧಿಸಬಹುದು ಎಂಬುದನ್ನು  ಡ್ರೈವರ್ ಮಗ ತೋರಿಸಿಕೊಟ್ಟಿದ್ದಾನೆ!  ಬಾಲ್ಯದಿಂದಲೇ ಕ್ರೀಡೆಯಲ್ಲಿ ಅದಮ್ಯ ಆಸಕ್ತಿ. ಬಿಡದೇ ಸಾಧಿಸುವ ಛಲ. ಬಡತನದ ನಡುವೆಯೂ ಮಗನ ಆಸಕ್ತಿಗೆ ನೀರೆರೆದು ಪೋಷಿಸಿದ ಪೋಷಕರು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಗುರುಗಳು. ಇವೆಲ್ಲದರ ಸಮ್ಮೀಳಿತದ ಫಲವೇ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಗುರುರಾಜ್ ಎಂಬ ಕುಂದಾಪುರದ ಯುವಕನ ರಾಷ್ಟ್ರ ಮಟ್ಟದ ಸಾಧನೆ. (ಕುಂದಾಪ್ರ ಡಾಟ್ ಕಾಂ ವರದಿ) ಚಿತ್ತೂರು ಗ್ರಾಮದ ಜಡ್ಡು ಮಹಾಬಲ ಪೂಜಾರಿ ಹಾಗು ಪದ್ದು ದಂಪತಿಗಳ ಆರು ಮಕ್ಕಳಲ್ಲಿ ಐದನೇಯವರಾದ ಗುರುರಾಜಗೆ ಓದಿನಷ್ಟೇ ಕ್ರೀಡೆಯಲ್ಲಿಯೂ ಆಸಕ್ತಿ. ತಂದೆ ತಾಯಿಯೂ ಅಷ್ಟೇ. ಮಗನ ಮನದ ಇಂಗಿತ ಅರಿತು ಅವರ ಸಾಧನೆಗೆ ಶಕ್ತಿ ಮೀರಿ ನೆರವಾಗುತ್ತಿದ್ದರು. ಕೊಲ್ಲೂರು…

Read More

ಬೈಂದೂರು: ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಬೈಂದೂರು ಹಾಗೂ ಜೆಸಿಐ ಶಿರೂರು ಸಹಯೋಗದೊಂದಿಗೆ ಶಿರೂರು ಕಾಲೇಜು ಮೈದಾನದಲ್ಲಿ  ಜರುಗಿದ ಆಳ್ವಾಸ್ ಸಾಂಸ್ಕೃತಿಕ ವೈಭವಕ್ಕೆ ಮೈದಾನದ ತುಂಬಾ ಕಿಕ್ಕಿರಿದು ತುಂಬಿದ್ದ ಜನ ಸಾಕ್ಷಿಯಾದರು. ಸಾಂಸ್ಕೃತಿಕ ವೈಭವದ ಫೋಟೋ ಆಲ್ಬಂ ಇಲ್ಲಿದೆ.

Read More

ಬೆಸುಗೆ.. ಬೆಸುಗೆ.. ಜೀವನವೆಲ್ಲ ಸುಂದರ.. ಬೆಸುಗೆ.., ನಾ ನಿನ್ನ ಮರೆಯಲಾರೆ, ಪ್ರಿಯತಮಾ ಕರುಣೆಯ ತೋರೆಯ.., ತೆರೆದಿದೆ ಮನೆ ಓ ಬಾ ಅತಿಥಿ.. ಎನೇನೋ ಆಸೆ ನೀ ತಂದ ಭಾಷೆ.. ಮೊದಲಾದ ಚಲನಚಿತ್ರ ಗೀತೆಗಳನ್ನು ಹಾಡಿ ಕನ್ನಡ ಪ್ರೇಕ್ಷಕರ ಮನದಲ್ಲಿ ಪಡಿಯಚ್ಚು ಮೂಡಿಸಿ ಸಂಗೀತ ಗಾಯನ ಲೋಕದಲ್ಲಿ ಅಗ್ರಮಾನ್ಯ ಸ್ಥಾನವನ್ನು ಅಲಂಕರಿಸಿರುವ ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಫೆ. ೨೧ರಂದು ಕುಂದಾಪುರಕ್ಕೆ ಆಗಮಿಸಲಿದ್ದಾರೆ. ಕೋಟದ ಮನಸ್ಮಿತ ಫೌಂಡೇಶನ್‌ನ ಆಶ್ರಯದಲ್ಲಿ ಸಹನಾ ಗ್ರೂಫ್ ಕೋಟೇಶ್ವರ ಇವರ ಸಹಭಾಗಿತ್ವದಲ್ಲಿ ಕುಂದಾಪುರ ಸಮೀಪದ ಕೋಟೇಶ್ವರದ ಸಹನಾ ಎಸ್ಟೇಟ್‌ನಲ್ಲಿ ಗಾಯಕ ಡಾ. ಸತೀಶ ಪೂಜಾರಿಯವರ ಪರಿಕಲ್ಪನೆ ಹಾಗೂ ನೇತೃತ್ವದಲ್ಲಿ ಕರ್ನಾಟಕದ ಹೆಸರಾಂತ ಗಾಯಕರ ಸಮ್ಮಿಲನದಲ್ಲಿ ಸಂಗೀತ ರಸಸಂಜೆ ’ವಾಣಿಯ ಸ್ವರ ಝೇಂಕಾರ’ ಕಾರ್ಯಕ್ರಮವು ಮಾನಸಿಕ ಅಸ್ವಸ್ಥರ ಸಹಾಯಾರ್ಥವಾಗಿ ಫೆ. 21ರಂದು ಸಂಜೆ 6:30ರಿಂದ ಜರುಗಲಿದೆ. ಈ ರಸಸಂಜೆಯ ’ವಾಣಿಯ ಸ್ವರ ಝೇಂಕಾರ’ದಲ್ಲಿ ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕಿ ವಾಣಿಜಯರಾಂ ಅವರು ಭಾಗವಹಿಸಿ ತಮ್ಮ ಗಾನ…

Read More

ಕುಂದಾಪುರ: ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕಾಗಿ ನಿರ್ಮಿಸಿದ ನೂತನ ರಜತ ರಥವನ್ನು ಕೋಟೇಶ್ವರದಿಂದ ಭವ್ಯ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು. ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಪರವಾಗಿ ಆಡಳಿತ ಮೋಕ್ತೇಸರರಾದ ಶ್ರೀಧರ ಕಾಮತ್ ಮೂಲ್ಕಿಯ ಸಮಾಜ ಭಾಂಧವರನ್ನು ಸ್ವಾಗತಿಸಿಕೊಂಡರು. ದೇವಸ್ಥಾನದ ವತಿಯಿಂದ ದೇವರ ಪ್ರಾರ್ಥನೆ, ರಥಕ್ಕೆ ಆರತಿ ನಡೆಯಿತು. ಜೊತೆ ಮೋಕ್ತೇಸರರಾದ ಶಾಂತಾರಾಮ ಪೈ ಮತ್ತು ವಿಠ್ಠಲದಾಸ ಭಟ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಜತ ರಥವು ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ನಿರ್ಮಾಣಗೊಂಡಿದ್ದು, ಫೆ.10ರಂದು ಕಾಶೀ ಮಠದ ಪೀಠಾಧಿಪತಿ ಶ್ರೀಮದ್ ಸಂಯಮೀಂದ್ರ ಸ್ವಾಮೀಜಿಯವರು ಶ್ರೀ ದೇವರಿಗೆ ಸಮರ್ಪಣೆಗೊಳಿಸಲಿದ್ದಾರೆ.

Read More

ಕುಂದಾಪುರ: ಪ್ರತಿಯೊಂದು ವೃತ್ತಿಗೆ ಅದರದ ಆದ ಗೌರವವಿರುತ್ತದೆ. ತಮ್ಮ ವೃತ್ತಿಯಲ್ಲಿ ಶಿಸ್ತು, ಗುಣಮಟ್ಟದ ಸೇವೆ, ಸೇವಾವಧಿಯನ್ನು ಗುರುತಿಸಿ ಅಂತಹ ವೃತ್ತಿ ಸಾಧಕರನ್ನು ಗುರುತಿಸಿ ಗೌರವಿಸಿದಾಗ ಅವರಲ್ಲಿ ಸಾರ್ಥಕ ಭಾವ ಮನೆ ಮಾಡುತ್ತದೆ. ವೃತ್ತಿಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಕೊಳ್ಳಲು ಅವರಿಗೆ ಪ್ರೇರಣೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಹಾಗಾಗಿ ರೋಟರಿಯಲ್ಲಿ ವೃತ್ತಿಪರ ಸೇವೆಗೆ ಆದ್ಯತೆಯನ್ನು ನೀಡಲಾಗಿದೆ ಎಂದು ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ ಶೆಟ್ಟಿ ಮೊಳಹಳ್ಳಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೋಟರಿಯಲ್ಲಿ ವೃತ್ತಿ ಸೇವೆ ಕುರಿತು ಮಾಹಿತಿ ನೀಡುತ್ತಾ ಮಾತನಾಡಿದರು. ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ಕೆ. ದಿನಕರ ಪಟೇಲ್, ಕಾರ್ಯದರ್ಶಿ ಸಿ. ಎಚ್. ಗಣೇಶ್ ಉಪಸ್ಥಿತರಿದ್ದರು.

Read More

ಬೈಂದೂರು: ನಮ್ಮ ಕಾಲೇಜಿನ 20 ಅತಿಥಿ ಉಪನ್ಯಾಸಕರು ವಿವಿಧ ಕಾರಣಗಳಿಂದ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಯಂ ಉಪನ್ಯಾಸಕರು ಇರುವುದು ಕೇವಲ ಮೂರು ಜನ ಮಾತ್ರ. ಅಂತಿಮ ಪರೀಕ್ಷೆಗಳು ಹತ್ತಿರ ಬರುತ್ತಿದೆ. ಇದಕ್ಕೆ ತಯಾರಿ ನಡೆಸಬೇಕಾಗಿದೆ. ಆದರೆ ಯಾವ ಪಾಠವೂ ಸರಿಯಾಗಿ ಬೋಧಿಸಲಿಲ್ಲ. ಮಾಡಬೇಕಾಗಿರುವ ಪಾಠಗಳು ಬಹಳ ಬಾಕಿಯಿದೆ. ಪರಿಸ್ಥಿತಿ ಹೀಗಾದರೆ ನಮ್ಮ ಮುಂದಿನ ಭವಿಷ್ಯವೇನು? -ಇದು ಬೈಂದೂರು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಒಕ್ಕೊರಲಿನ ಕೂಗು. ಸುಮಾರು 900 ವಿದ್ಯಾರ್ಥಿಗಳಿರುವ ಬೈಂದೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಒಂದು ತಿಂಗಳಿಂದ 20 ಜನ ಅತಿಥಿ ಉಪನ್ಯಾಸಕರು ಪಾಠ ಮಾಡದೇ ತರಗತಿಗಳಿಗೆ ಗೈರಾಗುತ್ತಿರುವುದು ವಿದ್ಯಾರ್ಥಿಗಳನ್ನು ಕೆರಳಿಸಿದೆ. ಈ ಕುರಿತು ಗುರುವಾರ ಎಲ್ಲಾ ವಿದ್ಯಾರ್ಥಿಗಳು ಒಂದಾಗಿ ಇದ್ದಕಿದ್ದಂತೆ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಮೆರವಣಿಗೆಯಲ್ಲಿ ಸಾಗಿಬಂದ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ವಿಶೇಷ ತಹಶೀಲ್ದಾರರ ಕಚೇರಿಗೆ ತೆರಳಿ ಸಹಾಯಕ ತಹಶೀಲ್ದಾರ್ ಶಂಕರ್ ಶೆಟ್ಟಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮುಷ್ಕರ ಅಂತ್ಯಗೊಳಿಸಿದರು. ನಮಗೆ…

Read More

ಕುಂದಾಪುರ: ರಾಸಾಯಿನಿಕ ಮಿಶ್ರಿತ ಆಹಾರ ಪದಾರ್ಥಗಳ ಬಳಕೆಯಿಂದ ಮಾರಕ ರೋಗಗಳಿಗೆ ತುತ್ತಾಗುವ ಅಪಾಯವಿದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ತಂಪು ಪಾನೀಯಗಳಿಂದ ಹಿಡಿದು ಬಣ್ಣ ಬಣ್ಣದ ಚಾಕಲೇಟ್‌ನಲ್ಲಿಯೂ ರುಚಿಗಾಗಿ ರಾಸಾಯನಿಕವನ್ನು ಬಳಸುತ್ತಾರೆ ಅಂತಹ ಪದಾರ್ಥಗಳ ನಿರಂತರ ಸೇವನೆ ನಮ್ಮ ಆರೋಗ್ಯವನ್ನು ಹದಗೆಡಿಸುತ್ತದೆ ಆದುದರಿಂದ ಶುದ್ಧ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ರೂಢಿಸಿಕೊಳ್ಳಿ ಎಂದು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹೇಳಿದರು. ಅವರು  ರೋಟರಿ ಕ್ಲಬ್ ಕುಂದಾಪುರ ಆಶ್ರಯದಲ್ಲಿ ಇಡೂರು ಕುಂಜ್ಞಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿಶ್ವ ಕ್ಯಾನ್ಸ್‌ರ್ ದಿನದ ಅಂಗವಾಗಿ ಆರೋಗ್ಯ ಮಾಹಿತಿಯನ್ನು ನೀಡುತ್ತಾ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ನಿಯೋಜಿತ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉದ್ಯಮಿ ರವೀಂದ್ರನಾಥ ಶೆಟ್ಟಿ, ಅದಿತಿ ಮೆಡಿಕಲ್‌ನ ಮಾಲಕ ಚಂದ್ರಶೇಖರ ಶೆಟ್ಟಿ, ಶಾಲಾ ಮುಖ್ಯೋಪಧ್ಯಾಯಿನಿ ಗೀತಾ ಬಿ., ರೋಟರಿ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಶಿಕ್ಷಕಿ ಆಶಾಕಿರಣ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Read More

ಬೈಂದೂರು: ಅವಕಾಶ ವಂಚಿತರಾಗುತ್ತಿರುವ ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಸುಪ್ತಪ್ರತಿಭೆಗಳನ್ನು ಗುರುತಿಸಿ ವಿದ್ಯಾಸಂಸ್ಥೆಗಳು, ಶಿಕ್ಷಕರು, ಪಾಲಕರು ಹಾಗೂ ಸಂಘ-ಸಂಸ್ಥೆಗಳು ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಉಪ್ಪುಂದ ಸಪಪೂ ಕಾಲೇಜಿನ ಎಸ್‌ಡಿಎಂಸಿ ಉಪಾಧ್ಯಕ್ಷ ಮಂಜುನಾಥ ಖಾರ್ವಿ ಹೇಳಿದರು. ಉಪ್ಪುಂದ ಸಪಪೂ ಕಾಲೇಜು ಹಾಗೂ ಸ್ಥಳೀಯ ಜೆಸಿಐ ಘಟಕ ಜಂಟಿಯಾಗಿ ವಲಯದ ಆಯ್ದ ಪ್ರಾಥಮಿಕ ಶಾಲಾ ಏಳನೇ ತರಗತಿಯ ವಿದ್ಯಾಥಿಗಳಿಗೆ ಆಯೋಜಿಸಿದ ಚಿತ್ರ-ಚಿತ್ತಾರ 2016 ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಕೇವಲ ಅಂಕಗಳಿಕೆ ವಿದ್ಯಾರ್ಥಿಗಳಿಗೆ ಮಾನದಂಡವಾಗಬಾರದು. ಪಾಠದ ಜೊತೆಗೆ ಪಾಠೇತರ ಶಿಕ್ಷಣವೂ ಅಷ್ಟೇ ಮುಖ್ಯ. ನಾಲ್ಕುಗೋಡೆಗಳ ಮಧ್ಯ ಕಲಿಸುವ ಪಾಠದ ಜೊತೆಗೆ ಪರಿಣತಿ ಹೊಂದಿದ ತರಬೇತುದಾರರಿಂದ ವಿವಿಧ ಕಲೆಗಳ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಪಾಠೇತರ ಶಿಕ್ಷಣದ ಅರಿವು ಮೂಡಿಸಬೇಕು. ಇದರಿಂದ ಮಕ್ಕಳು ಕಲಾತ್ಮಕ ಜೀವನಕ್ಕೆ ಒಗ್ಗಿಕೊಳ್ಳಲು ಸಹಕಾರಿಯಾಗುತ್ತದೆ. ಮಕ್ಕಳು ಕೂಡಾ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಸಾಧನೆಯ ದಾರಿ ಕಂಡುಕೊಳ್ಳಬೇಕು ಎಂದ ಸಲಹೆ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲೆ ಜಾನಕಿ ಎಂ. ನಾಯ್ಕ್ ಅಧ್ಯಕ್ಷತೆವಹಿಸಿದ್ದರು. ಪ್ರಾಂಶುಪಾಲ ಯು.…

Read More

ಗಂಗೊಳ್ಳಿ: ಗಂಗೊಳ್ಳಿಯ ಜನರ ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿರುವ ವೇಗ ನಿಯಂತ್ರಣಗಳಿಗೆ (ರಸ್ತೆ ಉಬ್ಬುಗಳು) ಸರಿಯಾದ ಬಣ್ಣವಿಲ್ಲದಿರುವುದರಿಂದ ಜನರು ಹಾಗೂ ವಾಹನ ಸವಾರರು ಬಹಳಷ್ಟು ಸಮಸ್ಯೆಗಳನ್ನು ಹಾಗೂ ತೊಂದರೆಯನ್ನು ಅನುಭವಿಸುತ್ತಿದ್ದರು. ಜನರ ಹಾಗೂ ವಾಹನ ಸವಾರರ ಸಮಸ್ಯೆಗಳಿಗೆ ಸ್ಪಂದಿಸಿದ ಗಂಗೊಳ್ಳಿಯ ವೀರ ಸಾವರ್ಕರ್ ದೇಶ ಪ್ರೇಮಿಗಳ ಬಳಗದ ಯುವಕರ ತಂಡ ಸೋಮವಾರ ರಾತ್ರಿಯಿಂದ ಬೆಳಗಿನ ವರೆಗೆ ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿರುವ ಎಲ್ಲಾ ವೇಗ ನಿಯಂತ್ರಣಗಳಿಗೆ (ಹಮ್ಸ್) ಉತ್ತಮವಾದ ರಬ್ಬರ್ ಗುಣಮಟ್ಟದ ಪೈಂಟಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಲವು ಬಾರಿ ಈ ರಸ್ತೆ ಉಬ್ಬುಗಳಿಗೆ ಪೈಂಟಿಂಗ್ ಮಾಡಲಾಗಿದ್ದರೂ ಕೆಲವೇ ದಿನಗಳಲ್ಲಿ ಇದು ಅಳಿಸಿ ಹೋಗುತ್ತಿತ್ತು. ರಸ್ತೆಗಳಲ್ಲಿ ಉಬ್ಬುಗಳಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡ ಯಾವುದೇ ಸೂಚನಾ ಫಲಕ ಅಳವಡಿಸಿರುವುದರಿಂದ ವಾಹನ ಸವಾರರಿಗೆ ರಸ್ತೆ ಉಬ್ಬುಗಳನ್ನು ಅಂದಾಜಿಸುವಲ್ಲಿ ವಿಫಲರಾಗಿ ಅವಘಡಗಳು ಸಂಭವಿಸುತ್ತಿದ್ದವು. ಈ ಕಾರ್ಯಕ್ಕೆ ಉತ್ತಮ ಗುಣಮಟ್ಟದ ಪೈಂಟನ್ನು ನೀಡಿ ಸಹಕರಿಸಿದ ಎಂ.ಮಾಧವ ಸುಬ್ರಾಯ ಪೈ ಅಂಗಡಿಯ ಮಾಲೀಕ ಎಂ.ನಾಗೇಂದ್ರ…

Read More

ಗಂಗೊಳ್ಳಿ: ಭಕ್ತಿಯಿಂದ ದೇವರ ಪ್ರೀತಿಗಳಿಸಲು ಸಾಧ್ಯವಿದೆ. ಭಕ್ತಿ, ಶ್ರದ್ಧೆ ಹಾಗೂ ಪ್ರಾಮಾಣಿಕತೆಗೆ ದೇವರು ಒಲಿಯುತ್ತಾನೆ. ನಮ್ಮಲ್ಲಿ ಕರುಣೆ, ಮಿತೃತ್ವ ಭಾವನೆ ಇರಬೇಕು. ಯಾರೊಬ್ಬರನ್ನು ದ್ವೇಷಿಸದೆ ಎಲ್ಲರನ್ನೂ ಪ್ರೀತಿಯಿಂದ ನಾವೆಲ್ಲರೂ ಒಂದೇ ಎಂಬ ಭಾವದಿಂದ ನೋಡಬೇಕು. ನಮ್ಮಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿಕೊಂಡು ಸಮಾಜದಲ್ಲಿ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಬೆಳೆಯಬೇಕು ಎಂದು ತಾಳಗುಪ್ಪ ಕೂಡ್ಲಿ ಬಾರಂಗಿ ಮಹಾಸಂಸ್ಥಾನದ ಶ್ರೀ ಮ| ನಿ| ಪ್ರ. ಸಿದ್ಧವೀರ ಮಹಾಸ್ವಾಮಿಗಳು ಹೇಳಿದರು. ಅವರು ಸೋಮವಾರ ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ಬಾವಿಕಟ್ಟೆ ಬಳಿಯ ಶ್ರೀ ಬಸವೇಶ್ವರ ದೇವಸ್ಥಾನದ ನವೀಕೃತ ನೂತನ ಕಟ್ಟಡ ಲೋಕಾರ್ಪಣೆ ಮತ್ತು ಶಿವಲಿಂಗ, ನಂದಿ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಮಸ್ತ ಜೀವಿಗಳು ಬಯಸುವುದು ಸುಖವನ್ನು. ಸುಖ ದೊರೆಯಬೇಕಾದರೆ ಭಗವಂತನ ಸ್ತುತಿ, ಆರಾಧನೆ, ಉಪಾಸನೆ ಮಾಡಬೇಕು. ಪ್ರತಿನಿತ್ಯ ಮನೆಗಳಲ್ಲಿ ದೇವರ ಪೂಜೆ, ಆರಾಧನೆ ನಿರಂತರವಾಗಿ ನಡೆಯುತ್ತಿರಬೇಕು. ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನಮ್ಮಿಂದಾಗುವ ಸೇವೆ ಸಲ್ಲಿಸಬೇಕು. ಹಿಂದುಳಿದ ಸಮಾಜದವರಲ್ಲಿನ ಒಗ್ಗಟ್ಟು…

Read More