Author: ನ್ಯೂಸ್ ಬ್ಯೂರೋ

ಕುಂದಾಪುರ: ವೃತ್ತಿ-ಪ್ರವೃತ್ತಿಗಳಲ್ಲಿ ಸೋಲ-ಗೆಲುವನ್ನು ಸಮಾನವಾಗಿ ಸ್ವೀಕರಿಸಬಲ್ಲ ಮನೋಭಾವದ ಭವಿಷ್ಯದ ಬೆಳವಣಿಗೆಯೇ ಪೂರಕವಾಗುವುದಲ್ಲದೇ ಬದುಕಿನಲ್ಲಿ ಗೆಲ್ಲುವ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ ಎಂದು ಅಂತರಾಷ್ಟ್ರೀಯ ತರಬೇತಿದಾರ ಸದಾನಂದ ನಾವಡ ಹೇಳಿದರು. ಅವರು ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ಕ್ರೀಡೋತ್ಸವದಲ್ಲಿ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಮಾತನಾಡಿದರು. ಪಠ್ಯ ವಿಷಯಗಳಿಂದ ಹೊರತಾದ ಸೃಜನಶೀಲ ಪ್ರವೃತ್ವವನ್ನು ರೂಡಿಸಿಕೊಂಡ ಯಶಸ್ವೀ ವ್ಯಕ್ತಿಗಳ ಬದುಕು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಿದೆ ಎಂದರು. ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾಕೃಷ್ಣ ಶೆಣೈ, ಕೋಶಾಧಿಕಾರಿ ಕೋಡಿ ಶ್ರೀನಿವಾಸ ಶೆಣೈ, ಆಡಳಿತಾಧಿಕಾರಿ ಪಿ. ಶ್ರೀಪತಿ ಹೇರ್ಳೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ನಾಯಕ್, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ರೂಪಾ ಶೆಣೈ, ಪ್ರಾಥಮಿಕ ಶಾಲಾ ಮುಖ್ಯಸ್ಥರಾದ ಜಯಶೀಲಾ ನಾಯಕ್ ಉಪಸ್ಥಿತರಿದ್ದರು. ಕ್ಯಾರೋಲಿನ್ ಸ್ವಾಗತಿಸಿ, ನೀಲೇಶ್ ಪ್ರಭು ಅಭ್ಯಾಗತರನ್ನು ಪರಿಚಯಿಸಿದರು. ಸಹನಾ ಭಟ್ ವಂದಿಸಿದರು. ನಿಶ್ಮಾ ಕಾರ್ಯಕ್ರಮ ನಿರ್ವಹಿಸಿದರು.

Read More

ಬೈಂದೂರು: ಕೃಷಿಯಿಂದ ಏನೂ ಪ್ರಯೋಜನವಾಗದು. ಕೃಷಿ ಅನುತ್ಪಾದಕ ಕ್ಷೇತ್ರವೆಂದು ಸಾರಾಸಗಟಾಗಿ ತಿರಸ್ಕರಿಸಿ ಇತ್ತೀಚಿನ ದಿನಗಳಲ್ಲಿ ಕೃಷಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಈ ಕ್ಷೇತ್ರದಲ್ಲಿ ಯಾಕೆ ಹೀಗಾಗಿದೆ ಎಂದು ಕೃಷಿಪತ್ತಿನ ಸಹಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಉಡುಪಿ ತೆಂಕನಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಪ್ರಾಧ್ಯಾಪಕ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಹೇಳಿದರು. ನಾಗೂರು ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಪ್ರಾಯೋಜಿಸಿದ ರೈತಶಕ್ತಿ, ರೈತ ಸೇವಾ ಒಕ್ಕೂಟ ಉಪ್ಪುಂದ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಇವರ ಸಹಭಾಗಿತ್ವದಲ್ಲಿ ನಡೆದ 62ನೇ ಸಹಕಾರಿ ಸಪ್ತಾಹ ಹಾಗೂ ಸಹಕಾರಿ ಮಾರುಕಟ್ಟೆ ಸಂಸ್ಕರಣ ಮತ್ತು ಮೌಲ್ಯವರ್ಧನೆ ಕುರಿತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ಕೃಷಿ ಇಲ್ಲದೇ ಜಗತ್ತಿನ ಯಾವುದೇ ಮೂಲೆಯಲ್ಲಿ ಯಾರೂ ಬದುಕಲು ಸಾಧ್ಯವಿಲ್ಲ. ಅತೀ ದೊಡ್ಡಪ್ರಮಾಣದಲ್ಲಿ ಜನಸಂಖ್ಯೆ ಬೆಳೆಯುತ್ತಿದೆ, ಹಾಗಾಗಿ ಅಷ್ಟೇ ದೊಡ್ಡಪ್ರಮಾಣದಲ್ಲಿ ಆಹಾರ ಉತ್ಪಾದನೆ ಕೃಷಿಯಿಂದ ಮಾತ್ರ ಸಾಧ್ಯ. ನಮ್ಮ ಆಹಾರವನ್ನು ನಮಗೆ…

Read More

ಕುಂದಾಪುರ: ಗ್ರಾಮೀಣ ಪ್ರದೇಶಗಳ ಜನರ ಹಿತ ಕಾಪಾಡಿಕೊಳ್ಳುವುದರೊಂದಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಹಳ್ಳಿ ಜನರಿಗೆ ಕೆನರಾ ಬ್ಯಾಂಕ್ ಉತ್ತಮ ಸೇವೆ ನೀಡಲು ಬದ್ಧವಾಗಿದೆ. ಬ್ಯಾಂಕ್ ಸ್ಥಾಪನೆಯ ಉದ್ದೇಶಗಳನ್ನು ಹಾಗೂ ಸಂಸ್ಥಾಪಕರ ಆಶಯಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಮುನ್ನಡೆಯುತ್ತಿದೆ. ಬ್ಯಾಂಕಿನ ಎಲ್ಲಾ ಚಟುವಟಿಕೆಗಳಿಗೆ ಸ್ಫೂರ್ತಿಯಾಗಿರುವ ಅಮ್ಮೆಂಬಳ ಸುಬ್ಬರಾವ್ ಅವರ ದೂರದರ್ಶಿತ್ವವೇ ಬ್ಯಾಂಕಿನ ಪ್ರಗತಿಗೆ ಕಾರಣವಾಗಿದೆ ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಾರ್ಯಾಲಯದ ವಿಭಾಗೀಯ ಪ್ರಬಂಧಕ ವಸಂತ ಶೆಟ್ಟಿ ಹೇಳಿದರು. ಅವರು ಗುರುವಾರ ಕೆನರಾ ಬ್ಯಾಂಕ್ ನೇರಳಕಟ್ಟೆ ಶಾಖೆಯ ಆಶ್ರಯದಲ್ಲಿ ಜರಗಿದ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಇದೇ ಸಂದರ್ಭ ಹಿರಿಯ ಗ್ರಾಹಕರಾದ ಮಾಧವ ನಾಯಕ್ ನೇರಳಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಮತ್ತು ಅರ್ಹ ಫಲಾನುಭವಿಗಳಿಗೆ ಸಾಲಪತ್ರ ವಿತರಿಸಲಾಯಿತು. ಬ್ಯಾಂಕಿನ ಎಜಿಎಂ ಐ.ಸಿ.ಶೆಟ್ಟಿ, ಕರ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರವಿದಾಸ, ಉದ್ಯಮಿಗಳಾದ ಅಶೋಕಕುಮಾರ್ ಶೆಟ್ಟಿ, ಗೋಪಾಲ ಶೆಟ್ಟಿ, ನಾರಾಯಣ ನಾಯಕ್, ಬ್ಯಾಂಕಿನ ಗ್ರಾಹಕರು,…

Read More

ಬೈಂದೂರು: ಶನಿವಾರ ಮಧ್ಯಾಹ್ನದ ವೇಳೆಗೆ ಬೈಂದೂರಿನ ಹೊಸ ಬಸ್ ನಿಲ್ದಾಣದ ಬಳಿ ಹಾಗೂ ನಾಕಟ್ಟೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬೈಂದೂರಿನ ಶಿಕ್ಷಕ ಹಾಗೂ ಹೋಟೆಲ್ ನೌಕರರೋರ್ವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಘಟನೆಯ ವಿವರ: ನಾವುಂದದ ಗೋಪಾಲ ಪೂಜಾರಿ(೪೦) ಎಂಬುವವರು ಬೈಂದೂರು ತಹಶೀಲ್ದಾರರ ಕಛೇರಿ ರಸ್ತೆಯಿಂದ ಹೊಸ ಬಸ್ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರೂರು ಕಡೆಯಿಂದ ಬೈಕಿನಲ್ಲಿ ಬರುತ್ತಿದ್ದ ವೇಳೆ ಶಿರೂರು ಬದಿಯಿಂದ ಬರುತ್ತಿದ್ದ ಕಂಟೆನರ್ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಿರಸಿ ಮೂಲದವರಾದ ಗೋಪಾಲ ಪೂಜಾರಿ ಹೋಟೆಲೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದು ಇತ್ತಿಚಿಗೆ ನಾವುಂದದ ತನ್ನ ಹೆಂಡತಿಯ ಮನೆಗೆ ಬಂದಿದ್ದರೆನ್ನಲಾಗಿದೆ. ಕೆಲಸದ ನಿಮಿತ್ತ ಬೈಂದೂರಿಗೆ ಬಂದು ನಾವುಂದಕ್ಕೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಈ ಅಪಘಾತ ನಡೆದ ಸ್ವಲ್ಪ ಹೊತ್ತಿನಲ್ಲೇ ಪಡುವರಿಯ ಜನಾರ್ಧನ ಆಚಾರ್ಯ(45) ಎಂಬುವವರು ಬೈಂದೂರು ಸಮೀಪದ ನಾಕಟ್ಟೆಯ…

Read More

ನೀವು ವಾಟ್ಸಾಪ್ ಬಳಕೆ ಮಾಡ್ತಾ ಇರೋರಾಗಿದ್ದರೆ ನಾವು ಹೇಳುವ ವಿಷಯ ನಿಮಗೆ ಉಪಯೋಗವಾಗುತ್ತದೆ. ವಾಟ್ಸಾಪ್ ಬಳಕೆ ಮಾಡುವ ನೀವು ಎಂದಿಗೂ ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್, ಬ್ಯಾಂಕ್ ವಿವರಗಳು, ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ. ಪಾಸ್ ವರ್ಡ್ ಸಹಾಯದಿಂದ ನಿಮ್ಮ ಅಪ್ಲಿಕೇಷನ್ ಭದ್ರಪಡಿಸಿಕೊಳ್ಳಬಹುದು. ವಾಟ್ಸಾಪ್ ಈ ಸೌಲಭ್ಯ ನೀಡಿಲ್ಲ. ಆದರೆ ಬೇರೆ ಅಪ್ಲಿಕೇಷನ್ ನಿಂದ ಡೌನ್ ಲೋಡ್ ಮಾಡಿಕೊಂಡು ಪಾಸ್ ವರ್ಡ್ ಹಾಕಿಕೊಳ್ಳಿ. ಮೊಬೈಲ್ ಕಳೆದಾಗ ನಿಮ್ಮ ಮಾತುಕತೆಯ ಗೌಪ್ಯತೆಯನ್ನು ಇದು ಕಾಪಾಡುತ್ತದೆ. (ಕುಂದಾಪ್ರ ಡಾಟ್ ಕಾಂ) ನೀವು ಆನ್ಲೈನ್ ನಲ್ಲಿ ಇದ್ದೀರಾ ಅಥವಾ ಆಪ್ಲೈನ್ ನಲ್ಲಿ ಇದ್ದೀರಾ ಎಂಬುದು ಬೇರೆಯವರಿಗೆ ತಿಳಿಯಬಾರದೆಂದು ನೀವು ಬಯಸಿದರೆ ಆ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಬಹುದು. ಆಂಡ್ರಾಯ್ಡ್, ಬ್ಲಾಕ್ ಬೆರ್ರಿ, ಐಒಎಸ್ ಸೇರಿದಂತೆ ವಿಂಡೋಸ್ ಫೋನ್ ನಲ್ಲಿ ಈ ಸೌಲಭ್ಯವಿದೆ. ವಾಟ್ಸಾಪ್ ನಲ್ಲಿ ಹಾಕಿದ ಪ್ರೊಪೈಲ್ ಫೋಟೋವನ್ನು ಯಾರು ಬೇಕಾದರೂ ಡೌನ್ ಲೋಡ್ ಮಾಡಬಹುದು. ಹಾಗಾಗಿ ಪ್ರೊಫೈಲ್ ಫೋಟೋ ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಿ. contacts Only ಎಂಬುದನ್ನು…

Read More

ಬೈಂದೂರು: ಇಲ್ಲಿನ ಸುರಭಿ (ರಿ.) ಬೈಂದೂರು ‘ರಂಗಧ್ವನಿ – 2015’ ಮೂರು ದಿನಗಳ ನಾಟಕೋತ್ಸವದಲ್ಲಿ ರಂಗಭೂಮಿಯ ಮೂಲ ಆಶಯ ಕೇವಲ ಮನರಂಜನೆಯಲ್ಲ ಬದಲಿಗೆ ಸಾಮಾಜಿಕ ಅಸಮಾನತೆ, ಸ್ತ್ರೀ ಶೋಷಣೆ, ಧರ್ಮಾಧಾರಿತ ಸಂಘರ್ಷ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹಾಗೂ ವ್ಯವಸ್ಥೆಯಲ್ಲಿನ ಅನ್ಯಾಯದ ವಿರುದ್ಧ ದನಿಯಾಗುವುದಾಗಿದೆ ಎಂಬ ಮಾತನ್ನು ಪುಷ್ಠಿಕರಿಸುವ ರಂಗ ಪ್ರದರ್ಶನ ನಡೆಯಲಿದೆ. ರಂಗಭೂಮಿಯ ಮೂಲಕ ಮಹಿಳಾ ಶೋಷಣೆಯ ವಿರುದ್ಧ ರಂಗಧ್ವನಿ ಮೊಳಗಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕಿ ವೈದೇಹಿ ಚಾಲನೆ ನೀಡಲಿದ್ದಾರೆ. ಮಹಿಳೆ ಮೇಲೆ ಈ ಸಮಾಜದಲ್ಲಿ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅಸ್ತಿತ್ವಕ್ಕಾಗಿ ಅವಳು ನಡೆಸುವ ಹೋರಾಟ, ಪ್ರತಿರೋಧದ ವಿಭಿನ್ನ ನೆಲೆಗಳನ್ನು ತೋರಿಸುವ, ವರ್ಗ ಸಂಘರ್ಷದ ವಿವಿಧ ಮಜಲುಗಳನ್ನು ಹಾಗೂ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಿರುವ ನಾಟಕಗಳಾದ ರಂಗಮಂಟಪ ಬೆಂಗಳೂರು ಅಭಿನಯಿಸುವ, ವೈದೇಹಿಯವರ ಕಥೆಗಳ ಆಧಾರಿತ ’ಅಕ್ಕು’, ಡಾ. ಶ್ರೀಪಾದ್ ಭಟ್ಟರ ನಿರ್ದೇಶನದ ಸುರಭಿ ಬೈಂದೂರು ಅಭಿನಯಿಸುವ, ಕನ್ನಡ ಕಾವ್ಯಗಳ ರಂಗಪ್ರಸ್ತುತಿ ’ಕಾವ್ಯರಂಗ’, ರಥಬೀದಿ ಗೆಳೆಯರು…

Read More

ಕುಂದಾಪುರ: ಜ್ಞಾನ, ಕೌಶಲ್ಯ ಮತ್ತು ಮನೋಬಲ ವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಪೂರಕ ಪರಿಸರವನ್ನು ನಿರ್ಮಾಣ ಮಾಡಿ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಉದ್ಯೋಗ ಪಡೆಯವ ಸಾಮರ್ಥ್ಯವನ್ನು ಹೆಚ್ಚಿಸಲು ಪಠ್ಯದ ಜೊತೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ರ್ತ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ.ಕಾಲೇಜು ಹಾಗೂ ಇಲ್ಲಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ‘ಆರ್ಥಿಕಾಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ’ ವಿಷಯದ ಕುರಿತು ವೃತ್ತಿಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವಿದ್ಯಾರ್ಥಿಗಳ ಮನೋಬಲವನ್ನು ಕುಂಟಿತಗೊಳಿಸುತ್ತದೆಯೇ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್,ಕೆಎಎಸ್ ಮತ್ತಿತರ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ದೇಶದ ಅಭಿವೃದ್ಧಿಗೆ ತೊಡಕಾಗುವ ಭ್ರಷ್ಟಾಚಾರ ಸಮಸ್ಯೆಯನ್ನು ತೊಡೆದು ಹಾಕಲು ಸಾದ್ಯ ಎಂದರು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಕಂಟ್ರಾಕ್ಟರ್ ಸಟ್ವಾಡಿ…

Read More

ಕುಂದಾಪುರ: ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಬೆಳಗಿನ ಜಾವ ನಡೆಯಿತು. ಭಕ್ತರು ದೇವಳದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಆಕರ್ಷಕವಾಗಿ ಜೋಡಿಸಿದ ಸಾವಿರಾರು ಹಣತೆಗಳನ್ನು ಬೆಳಗಿರುವುದು ನೋಡುಗರ ಕಣ್ಣಿಗೆ ಮುದ ನೀಡಿದವು. ನೂರಾರು ಭಕ್ತರು ಶ್ರೀದೇವರ ವಿಶ್ವರೂಪ ದರ್ಶನ ಪಡೆದು ಕೃತಾರ್ಥರಾದರು. ದೇವಳದ ಸುತ್ತ ರಚಿಸಲಾದ ರಂಗೋಲಿಗಳ ಮಧ್ಯೆ ಬೆಳಗುತ್ತಿದ್ದ ಹಣತೆಗಳ ನೋಡುಗರ ಕಣ್ಣಿಗೆ ಮುದ ನೀಡಿದವು. ಸಾವಿರಾರು ಹಣತೆಗಳನ್ನು ದೇವಳದ ಒಳಾಂಗಣ, ಹೊರಾಂಗಣದಲ್ಲಿ ಆಕರ್ಷಕವಾಗಿ ಜೋಡಿಸಲಾಗಿತ್ತು. ಮುಂಜಾನೆಯಿಂದಲೇ ಮಕ್ಕಳು, ವೃದ್ಧರು, ಹೆಂಗಳೆಯರು ಸೇರಿದಂತೆ ಊರ ಪರಊರಿನಿಂದ ಭಗವದ್ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ವಿಶ್ವರೂಪ ದರ್ಶನ ಪಡೆದರು. ಶ್ರೀದೇವರನ್ನು ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ಬೆಳಿಗ್ಗೆ 3:30ರಿಂದ ಭಜನೆ, ಸುಪ್ರಭಾತ ಸೇವೆ, ಕಾಕಾಡಾರತಿ, ಜಾಗರ ಪೂಜೆ ನಡೆಯಿತು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ…

Read More

ಭಾರತೀಯ ಸಂಸ್ಕೃತಿಯ ಉಳಿವು ಬೆಳವಣಿಗೆಗೆ ಭರತನಾಟ್ಯದ ಕೊಡುಗೆ ಅಪಾರ : ಡಾ|| ಎಚ್. ರಾಮಮೋಹನ್ ಕುಂದಾಪುರ: ಭಾವ ರಾಗ ತಾಳ ಮೂರು ಮೇಳ್ಯೆಸಿರುವ ಅದ್ಭುತ ನೃತ್ಯ ಕಲೆಗೆ ಜಗತ್ತಿನಾದ್ಯಂತ ಮನ್ನಣೆ ದೊರೆತಿದೆ. ಮೈಮನಗಳಿಗೆ ರೋಮಾಂಚನ ಮೂಡಿಸಿ ಕಲೆಯ ರಸ ಸ್ವಾದವನ್ನು ಆಸ್ವಾದಿಸುವಂತ ಭರತನಾಟ್ಯವು ಭಾರತೀಯ ಸಂಸ್ಕೃತಿಯ ಉಳಿವಿಗೆ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಕರ್ನಾಟಕ ಬ್ಯಾಂಕ್‌ನ ನಿರ್ದೇಶಕರಾದ ಡಾ|| ಎಚ್. ರಾಮಮೋಹನ್ ಹೇಳಿದರು. ಅವರು ನೃತ್ಯವಸಂತ ನಾಟ್ಯಾಲಯ (ರಿ.) ಕುಂದಾಪುರದ ದಶಮಾನೋತ್ಸವದ ಅಂಗವಾಗಿ ಹಂಗಳೂರಿನ ಅನಂತ ಪದ್ಮನಾಭ ಸಭಾಗೃಹದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ ದಶಾರ್ಪಣಂ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಉದ್ಯಮಿ ಬಿಜೂರು ರಾಮಕೃಷ್ಣ ಶೇರಿಗಾರ್ ಬಹುಮಾನ ವಿತರಿಸಿ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಆಯೊಜಿಸಿ ಯಶಸ್ವಿಯಾಗಿ ನಡೆಸಿದ ಸಂಘಟಕರನ್ನು ಪ್ರಶಂಸಿಸಿದರು. ಸೀನಿಯರ್ ವಿಭಾಗದಲ್ಲಿ ದಿವ್ಯ ಬಿ.ಕೆ. ಮಂಗಳೂರು ಪ್ರಥಮ, ಶರಣ್ಯ ಬಿ. ಮಂಗಳೂರು ದ್ವಿತೀಯ, ಧೀಮಹಿ ಉಡುಪಿ ತೃತೀಯ ಸ್ಥಾನ ಪಡೆದರೇ ಜ್ಯೂನಿಯರ್ ವಿಭಾಗದಲ್ಲಿ ತ್ವಿಷಾ ಆರ್. ಶೆಟ್ಟಿ…

Read More

ಕುಂದಾಪುರ: ಉಡುಪಿ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಜಿಲ್ಲಾ ಕರಾಟೆ ಟೀಚರ್ಸ್ ಅಸೋಶಿಯೇಷನ್ ಆಶ್ರಯದಲ್ಲಿ ಇತ್ತೀಚಿಗೆ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಆಯ್ಕೆ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಉಪ್ಪುಂದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಲಕ್ಷ್ಮೀಕಾಂತ್ ಎನ್.ಆರ್. (45-50) ಬ್ರೌನ್‌ಬೆಲ್ಟ್‌ನಲ್ಲಿ ವೈಯಕ್ತಿಕವಾಗಿ ಪ್ರಥಮ ಸ್ಥಾನ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು. ಅಲ್ಲದೇ ನಾಗೂರು ಸಂದೀಪನ್ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಹನೀಶ್ ಎನ್.ಆರ್.(26-30ಕೆ.ಜಿ) ಪ್ರಥಮ ಹಾಗೂ ಶ್ರೇಯಸ್ ಎನ್.ಆರ್. (30-35ಕೆಜಿ) ಬ್ರೌನ್‌ಬೆಲ್ಟ್‌ನಲ್ಲಿ ದ್ವಿತೀಯ ಮತ್ತು ಕುಮಿಟೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರದ ಕಿರಣ್‌ಕುಮಾರ್ ಅವರಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ.

Read More