ಅಂಗಡಿ ಮುಂಗಟ್ಟು ಬಂದ್ ಮಾಡಿದ ಪ್ರತಿಭಟನಾಕಾರರು : ಕ್ಷೇತ್ರಕ್ಕೆ ಬಂದ ಯಾತ್ರಾರ್ಥಿಗಳ ಪರದಾಟ.ಆರೋಪದಲ್ಲಿ ಹುರುಳಿಲ್ಲ ಎಂದ ದೇವಳದ ಆಡಳಿತ ಮಂಡಳಿ. ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಇಲ್ಲಿನ ದೇವಳದ ವಸತಿಗೃಹ ಖಾಸಗೀಕರಣಗೊಳಿಸಿ ಭಕ್ತರಿಂದ ಹೆಚ್ಚಿಗೆ ಹಣ ಸುಲಿಗೆ ಮಾಡುವ ಹುನ್ನಾರ ನಡೆಯುತ್ತಿದೆ. ಪವಿತ್ರ ದೇವಸ್ಥಾನ ಧಾರ್ಮಿಕ ಕ್ಷೇತ್ರವನ್ನಾಗಿ ಉಳಿಸದೇ ಇಲ್ಲಿಯೂ ಲಾಭ-ನಷ್ಟದ ಲೆಕ್ಕ ಹಾಕುತ್ತಿರುವುದು ಸರಿಯಲ್ಲ ಎಂದು ಕೊಲ್ಲೂರು ರಕ್ಷಣಾ ವೇದಿಕೆ ಅಧ್ಯಕ್ಷ ಸಂದೀಪ್ ಹೇಳಿದರು ಅವರು ಕೊಲ್ಲೂರು ಹಿತರಕ್ಷಣ ವೇದಿಕೆ ಆಶ್ರಯದಲ್ಲಿ ಕೊಲ್ಲೂರು ದೇವಸ್ಥಾನ ಆಡಳಿತ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಶ್ರೀ ದೇವಿಯ ಪವಿತ್ರ ತೇಪೋತ್ಸವವು ಕೊಳಚೆ ನೀರಿನಲ್ಲಿ ನಡೆಯುತ್ತಿದೆ. ಒಳಚರಂಡಿ ವ್ಯವಸ್ಥೆಗೆ ಕೇವಲ ಘೋಷಣೆಯಾಗಷ್ಟೇ ಉಳಿದಿದೆ. ಕೊಲ್ಲೂರಿನ ಜನರ ಹಿತ ಕಡೆಗಣಿಸಿ ಕ್ಷೇತ್ರ ವ್ಯಾವಹಾರಿಕರಣಗೊಳಿಸುತ್ತಿರುವುದು ಸರಿಯಲ್ಲ. ದೇವಳದ ಆಡಳಿತ ಮಂಡಳಿ ಹಾಗೂ ಇತರೆ ದೇವಳದ ಹುದ್ದೆಗಳಲ್ಲಿ ಸ್ಥಳೀಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ ಅವರು ದೇವಳದಲ್ಲಿ ದುಡಿಯುವ ನೌಕರರ ಹಿತಾಸಕ್ತಿಯನ್ನು ಅವಗಣಿಸಲಾಗಿದೆ. ಇಲ್ಲಿ ದುಡಿಯುವವರಿಗೆ ಯಾವುದೇ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಫುರ: ಸುರತ್ಕಲ್ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮಡಿದ ವ್ಯಕ್ತಿಯ ಶವವನ್ನು ಬಾರ್ಕೂರು ಬೆಣೆಕುದ್ರುವಿಗೆ ತಂದು ಸಂಸ್ಕಾರ ಮಾಡಿ ದಿನಗಳೇ ಕಳೆದಿತ್ತು. ಆದರೆ ಮೃತಪಟ್ಟು ಸಂಸ್ಕಾರ ಮಾಡಿದ ವ್ಯಕ್ತಿ ಮತ್ತೆ ಪ್ರತ್ಯಕ್ಷವಾಗಿ ಆಶ್ಚರ್ಯ, ಭಯ ಎರಡನ್ನೂ ಹುಟ್ಟಿಸಿದ್ದಾನೆ! ಅಂದಹಾಗೆ ಬಾರ್ಕೂರು ಬೆಣ್ಣೆಕುದ್ರು ಮೂಲದ ಶಂಕರ(48) ಸತ್ತು ಬದುಕಿ ಬಂದ ಅಸಾಮಿ ಕಳೆದ ವಾರ ಮಂಗಳೂರು ಸುರತ್ಕಲ್‌ನ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, ಶವದ ಗುರುತಿಗಾಗಿ ಹಾಗೇಯೇ ಇರಿಸಲಾಗಿತ್ತು. ಈ ವಿಚಾರ ಶಂಕರನ ಸಂಬಂಧಿಗಳು ಅದು ಆತನದೇ ಶವವಾಗಿರಬಹುದೆಂಬ ಅನುಮಾನದಿಂದ ಶವ ಪರಿಶೀಲನೆ ನಡೆಸಿದ್ದರು. ಮೃತಪಟ್ಟ ವ್ಯಕ್ತಿಯ ಕೈಯಲ್ಲಿನ ಗುರುತು ಮತ್ತು ಕೆಲವೊಂದು ನಿರ್ದಿಷ್ಟ ಹೋಲಿಕೆಗಳಿಂದ ಅದು ಶಂಕರನ ಶವ ಎಂದು ತಿರ್ಮಾನಕ್ಕೆ ಬಂದು ಪೊಲೀಸ್ ಇಲಾಖೆಗೆ ತಿಳಿಸಿ ಶವವನ್ನು ಶಂಕರನ ಹುಟ್ಟೂರಾದ ಬಾರ್ಕೂರಿನ ಬೆಣ್ಣೆಕುದ್ರುಗೆ ತಂದು ಸಂಸ್ಕಾರ ಮಾಡಲಾಗಿತ್ತು. (ಕುಂದಾಪ್ರ ಡಾಟ್ ಕಾಂ ವರದಿ) ಇದಾದ ಕೆಲವೇ ದಿನಗಳಲ್ಲಿ ಶಂಕರನ ಬಂಧುವಿಗೊಂದು ಅಚ್ಚರಿ ಕಾದಿತ್ತು. ಸಾಸ್ತಾನದ ಬಾರ್‌ಗೆ ತೆರಳಿದ್ದ ಶಂಕರನ ಆತ ಮೃತಪಟ್ಟ ವಿಚಾರವನ್ನು ಪ್ರಸ್ತಾಪಿಸಿದ್ದರು. ಆಗ…
ಕುಂದಾಪುರ: ತಾಲೂಕಿನ ಅಂಕದಕಟ್ಟೆ ಸಹನಾ ಎಸ್ಟೇಟ್ ನಲ್ಲಿ ಪ್ರತಿಷ್ಠಿತ ಸಹನಾ ಗ್ರೂಫ್ ಅವರ ನೂತನ ಸಹನಾ ಸಭಾಭವನ ಹಾಗೂ ಸಹನಾ ಆರ್ಕಿಟ್ ಹೋಟೇಲ್ ಕಟ್ಟಡ ನ.9ರ ಸಂಜೆ 5ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸಭಾಭವನವನ್ನು ಉದ್ಘಾಟನೆಗೊಳಿಸಿದರೇ, ರಾಜ್ಯ ಪ್ರವಾಸೋದ್ಯಮ ಸಚಿವ ಆರ್. ವಿ. ದೇಶಪಾಂಡೆ ಹೋಟೆಲ್ ಲೋಕಾರ್ಪಣೆಗೊಳಿಸುವರು. ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ ನಾಮಫಲಕ ಅನಾವರಣಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರೇ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ ಹೆಗ್ಡೆ, ಕೋಟೇಶ್ವರ ಗ್ರಾ.ಪಂ ಅಧ್ಯಕ್ಷೆ ಜಾನಕಿ ಬಿಲ್ಲವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.…
ಕುಂದಾಪುರ: ಉದ್ಯೋಗ ಅರಸಿ ಪಟ್ಟಣದ ಕಡೆಗೆ ಮುಖಮಾಡುವ ಯುವಕರು, ಪಟ್ಟಣದ ಸಂಸ್ಕೃತಿ ಹಳ್ಳಿಗೆ ಹೊತ್ತು ಹಿಂದಿರುಗುತ್ತಿದ್ದಾರೆ. ಆದರೆ ಆಧುನಿಕ ತಳಕು ಬಳಕಿನೊಂದಿಗೆ ನಮ್ಮೂರಿನ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಉದ್ಘೋಷಕಿ ರೇವತಿ ಶೆಟ್ಟಿ ಕೋಟ ಹೇಳಿದರು. ಅವರು ಇಲ್ಲಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಕನ್ನಡ ವೇದಿಕೆಯ ಕುಂದಾಪುರದ ‘ಡಿಂಡಿಮ’ ಎರಡನೇ ಭಾನುವಾರದ ಕಾರ್ಯಕ್ರಮದ ಮಾತಿನರಮನೆಯಲ್ಲಿ ‘ನಮ್ಮೂರ ಕಿಂಡಿಯಲ್ಲಿ ಕಂಡ ಕನ್ನಡ ಜಗತ್ತು’ ಎಂಬ ವಿಷಯದ ಕುರಿತು ಮಾತನಾಡಿದರು. ಕುಂದಗನ್ನಡದಲ್ಲಿ ಎಲ್ಲಿಯೂ ಕಾಣದ ಕಂಪಿದೆ, ವೈವಿಧ್ಯತೆ ಇದೆ. ಕುಂದಗನ್ನಡಿಗರ ಸಾಧನೆಯೂ ಅನನ್ಯವಾದುದ್ದಾರೂ ಗುರುತಿಸಿದ್ದು ವಿರಳ. ಕುಂದಗನ್ನಡದ ಬಗೆಗೆ ಕೀಳರಿಮೆಯ ಹೊಂದುವ ಅಗತ್ಯವಿಲ್ಲ. ವ್ಯಾವಹಾರಿಕವಾಗಿ ಯಾವ ಭಾಷೆಯನ್ನು ಬಳಸಿದರೂ ಕೊನೆಪಕ್ಷ ಮನೆಯಲ್ಲಾದರೂ ಕುಂದಗನ್ನಡವನ್ನು ಬಳಸೋಣ ಆ ಮೂಲಕ ಬೆಳೆಸೋಣ ಎಂದವರು ಕರೆ ನೀಡಿದರು. ಕುಂದಾಪುರದ ಪೌರಕಾರ್ಮಿಕೆ ಇಂದಿರಾ ಅವರಿಗೆ ನುಡಿ ಗೌರವ ಸಮರ್ಪಿಸಲಾಯಿತು. ಮಾತಿನರಮನೆಯಲ್ಲಿ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ, ಹಳ್ಳಿ ಶ್ರೀನಿವಾಸ ಭಟ್, ಉಮೇಶ್ ಪುತ್ರನ್ ಉಪಸ್ಥಿತರಿದ್ದರು. ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ…
ಕುಂದಾಪುರ: ಇಂದಿನ ಕಾಲೇಜುಗಳಲ್ಲಿ ಕ್ರೀಡೆಗೆ ಬೇಕಾದ ಉತ್ತಮ ಸೌಲಭ್ಯಗಳು ದೊರೆಯುತ್ತಿದ್ದರೂ ಕ್ರೀಡೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಮುನ್ನಡೆಯಿರಿ ಎಂದು ಕರ್ನಾಟಕ ಬ್ಯಾಂಕ್‌ನ ನಿರ್ದೇಶಕರಾದ ಡಾ| ಹೆಚ್. ರಾಮ್‌ಮೋಹನ್ ಹೇಳಿದರು. ಅವರು ಭಂಡಾರ್‌ಕಾರ್ಸ್ ಪಿ.ಯು ಕಾಲೇಜು ಕುಂದಾಪುರ ಮತ್ತು ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಪಿ.ಯು ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು, ಎಸ್.ಪಿ. ತೋಳಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತರಾಮ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಕುಂದಾಪುರದ ಭಂಡಾರ್‌ಕಾರ್ಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್.ಗೊಂಡ, ಭಂಡಾರ್‌ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ಕೆ., ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವಾಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ ಉಪಸ್ಥಿತರಿದ್ದರು. ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೃಷಿ ಕಾರ್ಯಗಳ ಯಾಂತ್ರೀಕರಣ ಹಾಗೂ ಹೈಕೋರ್ಟ್‌ನ ತಡೆಯಾಜ್ಞೆಯಿಯಿಂದಾಗಿ ಕೃಷಿಗೆ ಪೂರಕ ಕ್ರೀಡೆಯಾದ ಕಂಬಳಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿತ್ತು. ಆದರೆ ನೂರಾರು ವರ್ಷಗಳಿಂದ ಮುಂದುವರಿದು ಬಂದ ಕಂಬಳ ಕ್ರೀಡೆ ಮತ್ತೆ ತನ್ನ ಸಂಪ್ರದಾಯದೊಂದಿಗೆ ಹೊಸತನವನ್ನು ಕಂಡುಕೊಂಡಿದೆ ಎಂದು ಬೈಂದೂರು ವ್ಯ. ಸೇ. ಸ. ಸಂಘದ ಅಧ್ಯಕ್ಷ ತಗ್ಗರ್ಸೆ ನಾರಾಯಣ ಹೆಗ್ಡೆ ಹೇಳಿದರು. ಅವರು ನಾವುಂದ ವೆಂಕಟರಮಣ ಗಾಣಿಗರ ಕಂಬಳಗದ್ದೆ ವಠಾರದಲ್ಲಿ ಬೈಂದೂರು ವಲಯ ಕಂಬಳ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಸಮಾರಂಭದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ, ಮರವಂತೆ ಬಡಾಕೆರೆ ವ್ಯ. ಸೇ.ಸ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಬೈಂದೂರು ರೈತಸಂಘದ ಅಧ್ಯಕ್ಷ ದೀಪಕ್…
ಕುಂದಾಪುರ: ನಗರಗಳಲ್ಲಿ ಬದುಕುವ ಉತ್ಸಾಹಿಗಳಿಗೊಂದು ಹೊಸ ಹುರುಪಿ ನೀಡಿ, ಪರಿಸರ ಸಂರಕ್ಷಣೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಒಂದಿಷ್ಟು ಮಂದಿ ಸೈಕಲ್ ಸವಾರಿಗೆ ಹೊರಟಿದ್ದರು. ಬೆಂಗಳೂರು ನಗರನ್ನು ಬಿಟ್ಟು ಸೈಕಲ್ ಮೂಲಕವೇ ತಿರುಗಾಟಕ್ಕೆ ಹೊರಟ ಯುವಕರ ತಂಡ ಬೆಟ್ಟ ಗುಡ್ಡ, ಕಾಡು ಗಿರಿಧಾಮಗಳನ್ನು ಹಾದು ಮರವಂತೆಯ ಸಮದ್ರದಂಚಿಗೆ ತಲುಪುವ ಮೂಲಕ ಟಾಸ್ಕ್ ಪೂರ್ಣಗೊಳಿಸಿದ್ದಾರೆ. [quote font_size=”14″ bgcolor=”#ffffff” bcolor=”#81d742″ arrow=”yes” align=”right”]ಐಸೈಕಲ್ ಕುರಿತು: ಐಸೈಕಲ್ ಬೆಂಗಳೂರಿನಲ್ಲಿ ಮುಂಚೂಣಿಯಲ್ಲಿರುವ ಸೈಕ್ಲಿಂಗ್ ಈವೆಂಟ್ ಸಂಸ್ಥೆ. ಬೆಂಗಳೂರಿನ ನೂರಾರು ಯುವ ಸೈಕಲ್ ಉತ್ಸಾಹಿಗಳು ಸೈಕ್ಲಿಂಗ್‌ನ ಉಪಯೋಗದ ಜೊತೆಗೆ ಅದರ ಅದ್ಭುತ ಮೋಜನ್ನು ಸ್ವತಃ ಮನಗಾಣಿಸುವ ಜೊತೆಗೆ ಇತರರಿಗೂ ಅದರ ಚಮತ್ಕಾರವನ್ನು ಮನವರಿಕೆ ಮಾಡಲು, ತಮ್ಮ ಸಂತೋಷವನ್ನು ಸಮಾನ ಮನಸ್ಕರರ ಜೊತೆಗೆ ಹಂಚಿಕೊಳ್ಳಲು ಆರಂಭಿಸಿದ ಸಂಸ್ಥೆಯೇ ಐಸೈಕಲ್. ಸೈಕಲ್ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಐಸೈಕಲ್ ಸಂಸ್ಥೆ ಸೈಕ್ಲಿಂಗ್ ಗಾಗಿ ನುರಿತ ಸಿಬ್ಭಂಧಿಗಳನ್ನು ಹೊಂದಿದೆ.[/quote] ಸೈಕಲ್ ಸವಾರಿ ಬಯಸುವ ಉತ್ಸಾಹಿಗಳಿಗಾಗಿ ‘ಗ್ರೇಟ್ ಮಲ್ನಾಡ್ ಚಾಲೆಂಜ್-2015’ (ಎಸ್‌ಬಿಐ-ಜಿಎಂಸಿ 2015) ಸೈಕ್ಲಿಂಗ್ ಚಾಲೆಂಜ್…
ಕೊಲ್ಲೂರು: ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆ ಇವರ ಹೊರಾಂಗಣ ರಕ್ತದಾನ ಶಿಭಿರಕ್ಕೆ ಅವಶ್ಯವಿರುವ ರೂ. 11,12,383.00 ವೆಚ್ಛದ ಅಂಬುಲೆನ್ಸ್ ನ್ನು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣ ಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯ ಅಧ್ಯಕ್ಷ ಎಸ್. ಜಯಕರ ಶೆಟ್ಟಿ, ಕಾರ್ಯದರ್ಶಿ ವೈ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಸಂಚಾಲಕ ಆವರ್ಸೆ ಮುತ್ತಯ್ಯ ಶೆಟ್ಟಿ ಉಪಸ್ಥಿತರಿದ್ದರು. ಕೆ. ನರಸಿಂಹ ಭಟ್ ಇವರು ವಾಹನದ ಪೂಜೆಯನ್ನು ನೆರವೇರಿಸಿ ಹಾರೈಸಿದರು.
ಬೈಂದೂರು: ಕಳೆದ 18ವರ್ಷಗಳಿಂದ ಬೈಂದೂರು ಬಿಎಸ್‌ಎನ್‌ಎಲ್ ಕಛೇರಿಯಲ್ಲಿ ಹಿರಿಯ ಟೆಲಿಕಾಂ ಕಛೇರಿ ಸಹಾಯಕಿ ಆಗಿ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ತೆರೆಸಾ ಪೌಲೂಸ್ ಅವರನ್ನು ಕಛೇರಿಯ ಸಿಬ್ಬಂಧಿಗಳು ಬೀಳ್ಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ದೂರವಾಣಿ ಸಬ್‌ಡಿವಿಜನ್ ಇಂಜೀನಿಯರ್ ಭಾಸ್ಕರ್ ಭಟ್ ವಹಿಸಿದ್ದರು. ಕುಂದಾಪುರ ವಿಭಾಗೀಯ ಇಂಜಿನಿಯರ್ ಉಪ್ಪುಂದ ಸತ್ಯನಾರಾಯಣ ಪುರಾಣಿಕ್ ನಿವೃತ್ತರಿಗೆ ಬಿಎಸ್‌ಎನ್‌ಎಲ್ ಸ್ಮರಣಿಕೆ ನೀಡಿ ಅವರ ಸೇವೆಯನ್ನು ಸ್ಮರಿಸಿ ಶುಭಕೋರಿದರು. ಈ ಸಂದರ್ಭ ಸಿನೀಯರ್ ಸುಪರ್‌ವೈಸರ್ ಮೋಹನ ಹೆಬ್ಬಾರ್, ಅಯ್ಯಪ್ಪನ್, ಹಿರಿಯ ಮೆಕಾನಿಕ್‌ಗಳಾದ ರಾಮ ಮೊಗವೀರ, ಪಿ. ಭಾಸ್ಕರ, ಬಿ. ನಾಗಪ್ಪ, ಗಂಗಾಧರ, ಕುಪ್ಪಯ್ಯ, ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದು ನಿವೃತ್ತರಿಗೆ ಶುಭಕೋರಿದರು.
ಬೈಂದೂರು: ರಾಜ್ಯದಲ್ಲಿರುವ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿರಿಸಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ವರ್ಗದವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಅವರಿಂದಾಗುತ್ತಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಯಡ್ತರೆ ಗ್ರಾಪಂ ಆವರಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಶ್ರಮಶಕ್ತಿ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಯಡಿ ರೂ. 101.42ಲಕ್ಷ ಸಾಲ, ಸಹಾಯಧನ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದರು. 2015-16ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಾದ ಶ್ರಮಶಕ್ತಿ ಯೋಜನೆಯಡಿ ಒಟ್ಟು 144 ಫಲಾನುಭವಿಗಳಿಗೆ ರೂ. 33.70ಲಕ್ಷ ಕಿರುಸಾಲ ಯೋಜನೆಯಡಿ ಒಟ್ಟು 25 ಸ್ವಸಹಾಯ ಸಂಘಗಳ 299 ಫಲಾನುಭವಿಗಳಿಗೆ ರೂ. 29.90ಲಕ್ಷ, ಅರಿವು ವಿದ್ಯಾಭ್ಯಾಸ ಸಾಲಯೋಜನೆಯಡಿ ಒಟ್ಟು 28ಫಲಾನುಭವಿಗಳಿಗೆ ರೂ.24.40ಲಕ್ಷ, ಸ್ವಾವಲಂಬನಾ ಯೋಜನೆಯಡಿ ಒಟ್ಟು 26 ಫಲಾನುಭವಿಗಳಿಗೆ ರೂ.6.66ಲಕ್ಷ ಹಾಗೂ ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆಯಡಿಯಲ್ಲಿ 13 ಫಲಾನುಭವಿಗಳಿಗೆ ರೂ. 6.76ಲಕ್ಷ…
