ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೆಸಿಐ ಕುಂದಾಪುರ ಸಿಟಿ ಆಯೋಜಿಸಿದ ಜೆಸಿಐ ಸಪ್ತಾಹದ ಉದ್ಘಾಟನೆಯಲ್ಲಿ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ, ವಿದ್ಯಾದೀವಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕುಂದಾಪುರದ ಪೊಲೀಸ್ ವೃತ್ತನಿರೀಕ್ಷಕ ಜಯರಾಮ್ ಡಿ. ಗೌಡ, ಲಯನ್ ಜಿಲ್ಲೆ 317 ಸಿಯ ಪ್ರಥಮ ಉಪ ಗವರ್ನರ್ ಹರಿಪ್ರಸಾದ್ ರೈ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ, ಜೆಸಿಐ ಸಪ್ತಾಹದ ಸಂಚಾಲಕ ರಾಘವೇಂದ್ರ ಕುಲಾಲ್, ನಿಕಟಪೂರ್ವ ಅಧ್ಯಕ್ಷ ಯುಸೂಫ್ ಸಲೀಮ್, ಜೆಸಿಐನ ಪದಾಧಿಕಾರಿಗಳಾದ ನವೀನ್ ಸಂಭ್ರಮ್, ದೀಪಾ ಉಪಸ್ಥಿತರಿದ್ದರು. ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷ ಕಿರಣ್ ದೇವಾಡಿಗ ಸ್ವಾಗತಿಸಿ, ಹುಸೇನ್ ಹೈಕಾಡಿ ಪ್ರಸ್ತಾವಿಸಿದರು. ಕಾಲೇಜಿನ ಇಂಗ್ಲೀಷ್ ಸಹಾಯಕ ಪ್ರಾಧ್ಯಾಪಕಿ ಸ್ವಾತಿ ಜಿ. ರಾವ್ ವಂದಿಸಿ, ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ (ಕಭೀ), ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಭೌತಚಿಕಿತ್ಸೆಯ ದಿನದ ಅಂಗವಾಗಿ ಬ್ರಹ್ಮಾವರದ ರುಡ್ ಸೆಟ್ ಸಂಸ್ಥೆಯಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು DLO ಮತ್ತು KaBHI ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ. ಲತಾ ನಾಯಕ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿ, ಪಾರ್ಶ್ವವಾಯು ತಡೆಗಟ್ಟುವಿಕೆ, ಆರಂಭಿಕ ರೋಗನಿರ್ಣಯ ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವದ ಕುರಿತು ಮಾತನಾಡಿದರು. ಅಲ್ಲದೆ ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಭೌತಚಿಕಿತ್ಸಕರ ಪಾತ್ರವನ್ನು ಶ್ಲಾಘಿಸಿದರು.ನಂತರ ಕಭೀ ಕಾರ್ಯಕ್ರಮ ದ ಕುರಿತು ಹಾಗೂ ಪಾರ್ಶ್ವವಾಯು (ಸ್ಟ್ರೋಕ್) ತಡೆಗಟ್ಟುವಿಕೆ ಮತ್ತು ಹೃದಯರಕ್ತನಾಳದ ಆರೋಗ್ಯದ ಕುರಿತು ಸಾರ್ವಜನಿಕ ಜಾಗೃತಿ ಅಧಿವೇಶನ ನಡೆಯಿತು. ಈ ಅಧಿವೇಶನದಲ್ಲಿ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟುವಿಕೆ, ನಿರ್ವಹಣೆ ಮತ್ತು ಪುನರ್ವಸತಿಯಲ್ಲಿ ಭೌತಚಿಕಿತ್ಸಕರ ಮಹತ್ವದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜನರ ಸಮಸ್ಯೆ ಹಾಗೂ ಅಹವಾಲುಗಳನ್ನು ಅವರಿರುವಲ್ಲಿಯೇ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ನೀಡಲು ಸರಕಾರವು ಮಹತ್ವಕಾಂಕ್ಷಿ ಯೋಜನೆಯಾದ ಪ್ರಜಾಸೇವಾ ಆಂದೋಲನ ಸಭೆಗಳನ್ನು ರಾಜ್ಯದಾದ್ಯಂತ ಆಯೋಜಿಸುವುದರೊಂದಿಗೆ ಆ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಹೇಳಿದರು. ಅವರು ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಪ್ರಜಾಸೇವಾ ಇಲಾಖೆ ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಹಯೋಗದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವೆ ಆಂದೋಲನ ಸಭೆಗೆ ಚಾಲನೆ ನೀಡಿದ್ದು, ರಾಜ್ಯದಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮ ಆಯೋಜಿಸಲು ನಿರ್ಧಾರಿಸಲಾಗಿತ್ತು. ಆದರೆ ಉಡುಪಿಯಲ್ಲಿ ಆ ದಿನದಂದು ಜಿಲ್ಲೆಯ ಜನತೆಯ ಅತೀ ದೊಡ್ಡ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ 2026-27ನೇ ಸಾಲಿನ ಕರಾಟೆ ಸ್ಪರ್ಧೆಯು ಬುಧವಾರ ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳದ ಟಿ.ಪಿ.ಇ.ಒ ಹಾಗೂ ಡಿ.ಪಿ.ಇ.ಒ ಆಗಿರುವ ರವಿಚಂದ್ರ ಕಾರಂತ, ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ತಹಶೀಲ್ದಾರರಾದ ಪ್ರದೀಪ್ ಕೆ. ಆರ್., ಕರ್ನಾಟಕ ರಾಜ್ಯ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉಡುಪಿ ಘಟಕದ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ, ಕುಸುಮಾಕರ್ ಶೆಟ್ಟಿ ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ರೋಹಿತಾಕ್ಷ, ಉಡುಪಿ ಜಿಲ್ಲಾ ಕರಾಟೆ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ವಾಮನ್ ಪಾಲನ್ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ಅಕ್ಷತಾ ಶೆಣೈ ಉಪಸ್ಥಿತರಿದ್ದರು. ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿರುವ ಸುಮಾರು 200ಕ್ಕೂ ಹೆಚ್ಚು ಬಾಲಕ ಬಾಲಕಿಯರು ಕರಾಟೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ರಿಯೇಟಿವ್ ಕಾಲೇಜು, ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಗೊಂಡು ಇತಿಹಾಸ ಸೃಷ್ಟಿಸಿದ್ದಾರೆ. 17ರ ವಯೋಮಾನದ ಹುಡುಗರ -58ಕೆಜಿ ವಿಭಾಗದಲ್ಲಿ ಸಾಯಿನಾಥ್ ಆಚಾರ್ಯ, -78 ಕೆಜಿ ವಿಭಾಗದಲ್ಲಿ ಪ್ರೀತಮ್ ಹಾಗೂ 14ರ ವಯೋಮಾನದ ಬಾಲಕರ -60 ಕೆಜಿ ವಿಭಾಗದಲ್ಲಿ ಸಾಕ್ಷಿತ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿಕೊಂಡರು. 17ರ ವಯೋಮಾನದ ಹುಡುಗರ-54 ಕೆಜಿ ವಿಭಾಗದಲ್ಲಿ ರಜತ್ ಆರ್ ಮತ್ತು 14ರ ವಯೋಮಾನದ ಹುಡುಗರ +60ಕೆಜಿ ವಿಭಾಗದಲ್ಲಿ ಆಶೀಷ್ ಹಾಗೂ -35 ಕೆಜಿ ವಿಭಾಗದಲ್ಲಿ ಸರ್ಮಥ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕ ಪಡೆದರು. ಅನುಭವಿ ಮತ್ತು ಪ್ರಭಾವಿ ತರಬೇತುದಾರರ ಮೂಲಕ ನಿತ್ಯದ ತರಬೇತಿ ತರಗತಿಗಳು, ಕಟ್ಟುನಿಟ್ಟಿನ ಫಿಟ್ನೆಸ್ ತಂತ್ರಗಳು, ಸ್ಪರ್ಧಾಳುಗಳ ನಿಯಮಿತ ಮೌಲ್ಯಮಾಪನಗಳು, ಸತ್ವಯುತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ನಕಲಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಕೊಠಡಿ ಕಾಯ್ದಿರಿಸುವುದಾಗಿ ಹೇಳಿ ಕೇರಳದ ಮೂಲದ ಭಕ್ತರಿಗೆ ಮೋಸ ಮಾಡಿದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಕೇರಳದ ಭಕ್ತರೋರ್ವರು ನಕಲಿ ವೆಬ್‌ಸೈಟ್ ನಂಬಿ ಆನ್‌ಲೈನ್‌ನಲ್ಲಿ ಮುಂಗಡ ಕೊಠಡಿ ಕಾಯ್ದುಕೊಳ್ಳಲು 1500 ರೂ. ನೀಡಿದ್ದರು. ಅದರಂತೆ ಸೆ.7 ರಂದು ಕೊಲ್ಲೂರಿಗೆ ಆಗಮಿಸಿದ್ದ ಅವರು ಆ ವಸತಿ ಗೃಹದ ಸಿಬ್ಬಂದಿಯನ್ನು ವಿಚಾರಿಸಿ ರಶೀದಿ ತೋರಿಸಿದಾಗ ಅದು ನಕಲಿ ವೆಬ್‌ಸೈಟ್ ಅನ್ನುವುದು ಬೆಳಕಿಗೆ ಬಂತು. ಮೋಸ ಹೋದ ಭಕ್ತರು ದೇಗುಲದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಅವರನ್ನು ಸಂಪರ್ಕಿಸಿ ಕೊಲ್ಲೂರು ಠಾಣೆಗೆ ದೂರು ನೀಡಿದ್ದಾರೆ. ಈ ಹಿಂದೆ ಇದೇ ರೀತಿ ನಕಲಿ ವೆಬ್‌ಸೈಟ್ ಮೂಲಕ ಭಕ್ತರಿಗೆ ಮೋಸ ಮಾಡಿದ ಪ್ರಕರಣದಲ್ಲಿ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿತ್ತು. ಕೊಲ್ಲೂರಿಗೆ ಆಗಮಿಸುವ ಭಕ್ತರು ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವ ಸಲುವಾಗಿ ದೇಗುಲದಿಂದ ಮಾಡಿರುವ ವ್ಯವಸ್ಥೆಯನ್ನು ಅನುಸರಿಸಬೇಕೆಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ವಿನಂತಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇವರ ವತಿಯಿಂದ ರುದ್ರಭೂಮಿ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ಹಮ್ಮಿಕೊಂಡಿದ್ದರು. ಕೋಡಿ ಹಿಂದೂ ರುದ್ರಭೂಮಿ ಸ್ವಚ್ಛಗೊಳಿಸುವ ಮೂಲಕ ಕೃಷ್ಣ ಮಾಸ್ಟರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಮಾಜಿ ಸದಸ್ಯರಾದ ಅಂಥೋನಿ ನಾಯಕ್, ಅಣ್ಣಪ್ಪ ಕುಂದರ್, ಸ್ಥಳೀಯರಾದ ವಾಮನ್ ಡಿ. ಸಾಲಿಯನ್, ಕೃಷ್ಣ ಪೂಜಾರಿ, ರಾಘವೇಂದ್ರ ಸುವರ್ಣ, ರಾಘವೇಂದ್ರ ಕರ್ಕೇರ, ಜಯಂತ್ ಅಮೀನ್, ವಿಜಯ್ ನಾಯಿರಿ, ಸಂತೋಷ್ ಖಾರ್ವಿ, ಅಶೋಕ್ ತಿಂಗಳಾಯ, ಸುರೇಶ್ ಖಾರ್ವಿ,ಗೀತಾ ಖಾರ್ವಿ, ಯಮುನ ಕುಂದರ್, ಸುದಿನ ಕೋಡಿ, ಸುರೇಶ್ ಖಾರ್ವಿ, ಸುರೇಶ್ ಖಾರ್ವಿ ಕೋಡಿ ತಲೆ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಕ್ಷಗಾನ, ನಾಟಕವಲ್ಲದೆ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಕರಾವಳಿಯ ಬಡಗಿನ ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕಾಳಿಂಗ ನಾವಡ ನೆನಪಿನಲ್ಲಿ ಪ್ರತಿ ವರ್ಷ ಯಕ್ಷಗಾನ ಕ್ಷೇತ್ರದಲ್ಲಿನ ಪ್ರತಿಭಾನ್ವಿತರೋರ್ವರಿಗೆ ಕಾಳಿಂಗ ನಾವಡ ಪ್ರಶಸ್ತಿಯನ್ನು ನೀಡುತಿದ್ದು, ಇಪ್ಪತ್ತೈದು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಸಹಿತ ಪ್ರಶಸ್ತಿಯು ಒಳಗೊಂಡಿರುತ್ತದೆ. ಈ ಬಾರಿ 17ನೇ ವರ್ಷದ 2026ರ ಸಾಲಿನ ಕಲಾಕದಂಬ ಕಾಳಿಂಗ ನಾವಡ ಪ್ರಶಸ್ತಿಯನ್ನು ಹಲವಾರು ವರ್ಷಗಳಿಂದ ಯಕ್ಷಗಾನದ ಮದ್ದಲೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಡಾ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಸತತ 19 ವರ್ಷಗಳ ಕಾಲ ಮದ್ದಲೆಗಾರರಾಗಿ ದೇಶ ವಿದೇಶಗಳಲ್ಲೂ ತಮ್ಮ ಪ್ರತಿಭೆಯನ್ನು ಮೆರೆದ ದೇವದಾಸ ರಾವ್ ಕೂಡಿದಿ ಅವರಿಗೆ ಇದೇ ಬರುವ ಅಕ್ಟೋಬರ್ ತಿಂಗಳ 11ನೇ ತಾರೀಖಿನ ಭಾನುವಾರ ಸಂಜೆ ಬೆಂಗಳೂರಿನ ಬಸವನಗುಡಿಯ ನರಸಿಂಹರಾಜ ಕಾಲೋನಿಯಲ್ಲಿರುವ ಡಾ. ಸಿ. ಅಶ್ವಥ್ ಕಲಾಭವನದಲ್ಲಿ ಹಮ್ಮಿಕೊಂಡಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ, ಮಂಗಳೂರು ವತಿಯಿಂದ 2025–26ನೇ ಸಾಲಿನ ತಾಲೂಕಿನ ಉತ್ತಮ ಗುಣಮಟ್ಟದ ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಶಸ್ತಿಯನ್ನು ಕೊಮೆ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ರಾಜು ಪೂಜಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಅವರು ಸ್ವೀಕರಿಸಿದರು. ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಮೆ ಹಾಲು ಉತ್ಪಾದಕರ ಸಹಕಾರಿ ಸಂಘವು ಹೈನುಗಾರರ ಅಭಿವೃದ್ಧಿ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಸಂಘದಲ್ಲಿ ಸಾಂದ್ರ ಶೀತಲೀಕರಣ ಘಟಕ (BMC) ಹೊಂದಿದ್ದು ಸಂಘವು ಇದುವರೆಗೆ ಮೂರು ಬಾರಿ ಉತ್ತಮ BMC ಪ್ರಶಸ್ತಿ, ನಾಲ್ಕು ಬಾರಿ ಉತ್ತಮ ಗುಣಮಟ್ಟದ ಸಂಘ ಪ್ರಶಸ್ತಿ ಹಾಗೂ ಎರಡು ಬಾರಿ ತಾಲೂಕಿನ ಅತ್ಯುತ್ತಮ ಸಂಘ ಪ್ರಶಸ್ತಿ ಪಡೆದುಕೊಂಡಿರುವುದು ಸಂಘದ ಗುಣಮಟ್ಟದ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ. ಸಂಘದ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಮತ್ತು ಹೈನುಗಾರರ ಸಹಕಾರದಿಂದ ಈ ಸಾಧನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ತು ಉದ್ಘಾಟನಾ ಸಮಾರಂಭ ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಎನ್. ಕೆ.ಕೆ.ಸಿ ಪ್ರೈ. ಲಿಮಿಟೆಡ್ ಜಪ್ತಿ ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರಾದ ಜಯಪ್ರಕಾಶ್ ಎ. ಶೆಟ್ಟಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾದುದು ಇಲ್ಲಿ ಸಿಗುವ ಅವಕಾಶವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಇಂತಹ ವೇದಿಕೆ ಸಹಾಯಕವಾಗುವುದರ ಜೊತೆಗೆ ಭವಿಷ್ಯದ ಜವಬ್ದಾರಿಯುತ ನಾಗರಿಕರನ್ನು ರೂಪಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಬ್ದಾರಿ ಮತ್ತು ಸಹಕಾರ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉತ್ತಮ ನಾಯಕರಾಗಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೆಟ್ರಿಕ್ ನಂತರದ ವಸತಿ ನಿಲಯದ ವಾರ್ಡನ್ ಭಾಸ್ಕರ ಪೂಜಾರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ನಾಳೆಯ ನಾಯಕರಾಗುವುದರಿಂದ ಇಂತಹ ಸಂಘಟನೆ ವಿದ್ಯಾರ್ಥಿಗಳ ಪ್ರತಿಭೆ, ಸಾಮರ್ಥ್ಯ ಮತ್ತು ಜವಬ್ದಾರಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ…
