Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕಲಾರಾಧನೆ ಮೂಲಕ ಸಮಾಜಸೇವೆಗೆ ಮುನ್ನುಡಿ ಇಡುವ ಕಾರ್ಯ ನಿಜಕ್ಕೂ ಶ್ಲಾಘನಾರ್ಹ ಕಾರ್ಯ ಎಂದು ಕೋಟದ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು ಅವರು ಬುಧವಾರ ಸಾಲಿಗ್ರಾಮದ ಪಾರಂಪಳ್ಳಿ ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ಮನೆಯಲ್ಲಿ ಹಮ್ಮಿಕೊಂಡ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇಗುಲದ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟದ ಅಂಗವಾಗಿ ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ನೆರವು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ರವೀಂದ್ರ ಐತಾಳ್‌ರವರ ವಿನೂತನ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರಲ್ಲದೆ ಯಕ್ಷಕಲಾವಿದರಿಗೆ ಸಹಾಯಮಾಡುವ ಮನಸ್ಥಿತಿ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್ ಇಡೀ ಕಲಾವಿದರಿಗೆ ಶ್ರೀರಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಇದೇ ವೇಳೆ ಬಡಗಿನ ಶ್ರೇಷ್ಠ ಸ್ತ್ರೀವೇಷಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ ದಂಪತಿಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತ ರವೀಂದ್ರ ಕೋಟ, ಪವರ್ ಲಿಫ್ಟರ್ ಆದಿತ್ಯ ಸದಾನಂದ್, ಸ್ಥಳೀಯ ಕೃಷಿ ಕಾಯಕಜೀವಿಗಳನ್ನು ಅಭಿನಂದಿಸಲಾಯಿತು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಟಾಪ್ 10 ಸ್ಥಾನದಲ್ಲಿ ಒಟ್ಟು 35 ರ‍್ಯಾಂಕ್‌ಗಳನ್ನು ಪಡೆಯುವುದರ ಮೂಲಕ ಶೇ.100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಪ್ರಾರ್ಥನಾ ಪೈ, ಇಂಚರಾ ಸಿ. ಪೂಜಾರಿ (596) 4ನೇ ರ‍್ಯಾಂಕ್‌, ಅಕ್ಷಯ್ ಅಶ್ವಿನ್ ಪೈ (595) 5ನೇ ರ‍್ಯಾಂಕ್‌, ಪ್ರವೀಣಾ ಪೈ, ದೀಕ್ಷಾ ವಿ. ಕಾಮತ್, ಶ್ರೀನಿಧಿ (593) 7ನೇ ರ‍್ಯಾಂಕ್‌, ಕೌಸ್ತುಬಾ, ವಸಂತ್ ಭಟ್, ವರ್ಷ ಕೆ., ಪ್ರತಿಕ್ಷಿತಾ, ರೇಖಾ ಎಲ್., ಕ್ಷಿಪಾಲಿ (592) 8ನೇ ರ‍್ಯಾಂಕ್‌, ವಿಭವ್ ಮೇಲಾಡಿ, ವಿಜೇತಾ ಆರ್. ಭಟ್(591) 9 ನೇ ರ‍್ಯಾಂಕ್‌, ಧನ್ಯಾ ಜೆ. ಪಟಗಾರ್, ಮೋನಿಶಾ ಪಿ.ವಿ., ರಚನಾ (590) 10ನೇ ರ‍್ಯಾಂಕ್‌ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಬಿ. ಶ್ರೀಲಕ್ಷ್ಮಿ ವಿ. ಅಡಿಗ, ಸಾನಿಕಾ (596) 5ನೇ ರ‍್ಯಾಂಕ್, ರಾಜೇಂದ್ರ ಭಟ್, ಶ್ರಾವ್ಯ (595) 6ನೇ ರ‍್ಯಾಂಕ್‌, ಧನ್ಯಾ ಭಟ್, ಹರ್ಷಿತಾ ಪೂಜಾರಿ, ಕೆ.ಪಿ ಶಾನ್ವಿ, ಸಮೀಕ್ಷಾ ( 594) 7ನೇ ರ‍್ಯಾಂಕ್‌, ತನುಶ್ರೀ ರವಿ ಪೂಜಾರಿ, ಮೇನಕಾ, ಮೊಹಮ್ಮದ್ ಹುಝೈಫಾ (593)…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2026ರಲ್ಲಿ ಅಸಾಧಾರಣ ಸಾಧನೆಗೈದು ತನ್ನ ಶೈಕ್ಷಣಿಕ ಮೇಲುಗೈಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದಿಶಾ 600ರಲ್ಲಿ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ ಅನನ್ಯ ಕೆ., 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಪಡೆದು, ದ್ವಿತೀಯ ಪಿಯು ಫಲಿತಾಂಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಾಧನೆ ಮೆರೆದಿದ್ದಳು. ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಮಂಜುನಾಥ್ ಎಸ್. 598 ಅಂಕಗಳನ್ನು ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮೆರೆದಿದ್ದಾಳೆ. ಈ ವರ್ಷದ ಫಲಿತಾಂಶದಲ್ಲಿ 95 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. 687 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದರೆ, 1557 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, 1892 ವಿದ್ಯಾರ್ಥಿಗಳು 85% ಕ್ಕಿಂತ ಹೆಚ್ಚು (ಡಿಸ್ಟಿಂಕ್ಷನ್) ಅಂಕಗಳನ್ನು ಗಳಿಸಿದ್ದಾರೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 2025-2026ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕುಂದಾಪುರದ ‘ಸುಜ್ಞಾನʼಪಿಯು ಕಾಲೇಜು ತನ್ನ ಮೊದಲ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೇ ಶೇ.100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಎಸ್‌ ಎಸ್‌ ಎಲ್‌ ಸಿಯಲ್ಲಿ ಶೇಕಡಾ 95ಕ್ಕಿಂತ ಅಧಿಕ ಫಲಿತಾಂಶ ಪಡೆದ ಕೇವಲ 9 ವಿದ್ಯಾರ್ಥಿಗಳನ್ನೊಳಗೊಂಡ ಒಟ್ಟು 125 ವಿದ್ಯಾರ್ಥಿಗಳಿರುವ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್‌ ನ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಅಧಿಕ ಅಂಕ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ವಿಜ್ಞಾನ ವಿಭಾಗದಲ್ಲಿ 84 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 5 ಹಾಗೇ ಪ್ರಥಮ ಶ್ರೇಣಿಯಲ್ಲಿ ವಿಜ್ಞಾನ ವಿಭಾಗದಲ್ಲಿ 33, ವಾಣಿಜ್ಯ ವಿಭಾಗದಲ್ಲಿ 2 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿರುವ ವಿಜ್ಞಾನ ವಿಭಾಗದ ಸಾಧಕರು: ಸಮ್ಮೆದ ಪಾರೀಸ ಭೋಜ: 587 ಅಂಕಗಳು ಸಿಂಚನಾ: 586 ಅಂಕಗಳು ಪ್ರತೀಕ್ಷಾ ಎಚ್‌. ಶೆಟ್ಟಿ: 586 ಅಂಕಗಳು ಎನ್‌. ರಕ್ಷಾ: 584…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 2025- 26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ ಐದನೇ ವರ್ಷವೂ ಶೇಕಡ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 589ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಪಟ್ಟಿ:ಪಿಸಿಎಂಬಿ ವಿಭಾಗ:ಶ್ರಾವ್ಯ ಬಾಲಕೃಷ್ಣ 595, ತೇಜಸ್ ಆರ್ ಬಿ 594, ಮೋಕ್ಷ ಬಿ.ಎಂ. 593, ವರ್ಷಿತಾ ಎನ್ 593, ದಿಶಾ ಎ. 592, ಲೇಖನ್ ಕರಿಯಪ್ಪ ಎಂ.ಡಿ. 592, ಪೂರ್ಣಿಮಾ ಕೆ ಎ 592, ಪ್ರಜ್ಞಾ ಎಸ್ 591, ಅನನ್ಯ ರಾಜಶೇಖರ್ ಬಿ 590, ಧೃವ ವಿ ಬಿ 589, ಬಿಂದು ಪಿ ಗೌಡ 589, ನಾಗಶ್ರೀ ರಾಮಚಂದ್ರ ಗೌಡ 589, ತೇಜಸ್ ಹೆಗ್ಡೆ ಹೆಚ್ ಡಿ 589, ಭೂಮಿಕಾ ಎಸ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: 2025 – 26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಕೇವಲ 45% ನಿಂದ ಹಿಡಿದು 50%, 55%, 60% ಅಂಕ ಪಡೆದ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಕಾಲೇಜು ಪ್ರಾರಂಭದಿಂದ ಸತತ 4ನೇ ವರ್ಷವೂ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದೆ. 15ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ:ರಶ್ಮಿ ಪೈ 598, ಶ್ರಾವ್ಯ ದೇವಾಡಿಗ 597, ಅಕ್ಷತಾ ವೀರಣ್ಣ 596, ಪ್ರಜ್ಞಾ ಎಸ್. ಪೂಜಾರಿ 594, ಇಂಚರಾ ಅಶೋಕ್ 594, ಮಾನ್ಯ 592, ಪ್ರಸಾದ್ ಪೂಜಾರಿ 591, ಸ್ಮೃತಿಕಾ 590 ಅಂಕಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ:ಶಮ್ಯ ಶೆಟ್ಟಿ 597, ಪ್ರಥಮ ಕಾಂಚನ್ 596, ಸುಚಿತ್ರ 595, ಅನ್ವಿತಾ 594, ಸಾನಿಕಾ 593, ರನ್ಮಯ್ 592, ಕಲ್ಪಿತಾ 592, ಪ್ರೀತನ್ 591 ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಯಕ್ಷಗಾನದಲ್ಲಿ ಕೋಟ ವೈಕುಂಠರ ಪಾತ್ರ ಗಣನೀಯವಾದದ್ದು ಎಂದು ಕೋಟದ ಅಮೃತೇಶ್ವರೀ ಮೇಳದ ಯಜಮಾನ ಆನಂದ್ ಸಿ. ಕುಂದರ್ ಹೇಳಿದರು. ಅವರು ಬುಧವಾರ ಕೋಟತಟ್ಟು ಬಾರಿಕೆರೆ ಹತ್ತು ಸಮಸ್ತರ ವತಿಯಿಂದ ಹಮ್ಮಿಕೊಂಡ ಕೋಟ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮೇಳದ ಗ್ರಾಮದ ಸೇವೆಯಾಟದಲ್ಲಿ ಕೋಟ ಸುರೇಶ್ ಬಂಗೇರರಿಗೆ ಯಕ್ಷಕಲಾವಿದ ಕೋಟ ವೈಕುಂಠ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಒರ್ವ ಕಲಾವಿದ ರಂಗಸ್ಥಳದಲ್ಲಿ ಹೇಗೆ ಪಳಗಬೇಕು ಎಂಬುವುದನ್ನು ಕೋಟ ವೈಕುಂಠರು ಆ ಕಾಲಘಟ್ಟದಲ್ಲಿ ತೊರಿಸಿಕೊಟ್ಟಿದ್ದಾರೆ,ಯಕ್ಷಗಾನ ಮೇಳವನ್ನು ಮುನ್ನುಡೆಸುವುದರೊಂದಿಗೆ ತನ್ನ ವೇಷ ನಿರ್ವಹಿಸುವ ಅವರ ಪರಿ ಪದಗಳಲ್ಲಿ ವರ್ಣಿಸಲು ಸಾಲದು ಅದೇ ರೀತಿ ತನ್ನ ಸಂಪ್ರದಾಯ ಬದ್ಧ ಯಕ್ಷಕಲೆಯ ಮೂಲಕ ಸುರೇಶ್ ಬಂಗೇರರು ಯಕ್ಷಕಲಾ ಕ್ಷೇತ್ರಕ್ಕೆ ಧಾರೆ ಎರೆದಿದ್ದಾರೆ ಎಂದರು. ಈ ಸಂದರ್ಭದಲ್ಲಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರರಿಗೆ ಕೋಟ ವೈಕುಂಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೋಟತಟ್ಟು ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ, ಯಕ್ಷ ಸಂಘಟಕರಾದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೇಸಾ ಪದವಿ ಪೂರ್ವ ಕಾಲೇಜು ಈ ವರ್ಷದ ಪದವಿ ಪೂರ್ವ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಒಟ್ಟು 175 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 92 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 83 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಂಜನಾ 595 ಅಂಕಗಳನ್ನು ಪಡೆದು 99.16% ಫಲಿತಾಂಶದೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನವನ್ನು ತಂದುಕೊಟ್ಟಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಅಮೂಲ್ಯ ಕೂಡ 595 ಅಂಕಗಳನ್ನು ಗಳಿಸಿ 99.16% ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆಡಿದ್ದಾರೆ. ಇವರ ಸಾಧನೆ ಕಾಲೇಜಿನ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ವಿದ್ಯಾರ್ಥಿಗಳ ಈ ಉಜ್ವಲ ಸಾಧನೆಗೆ ಉಪನ್ಯಾಸಕರ ಪರಿಶ್ರಮ, ಸಮರ್ಪಿತ ಬೋಧನೆ ಹಾಗೂ ಸಮಗ್ರ ಮಾರ್ಗದರ್ಶನವೇ ಪ್ರಮುಖ ಕಾರಣವಾಗಿದ್ದು, ಸಂಸ್ಥೆಯ ಶೈಕ್ಷಣಿಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ  ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ  ‘ಕಂಪ್ಯೂಟೇಶನಲ್ ಇಂಟೆಲಿಜೆನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್ ಟೆಕ್ನಾಲಜೀಸ್’ (ICCIEST-2026) ಎಂಬ ಬೃಹತ್ ಅಂತರರಾಷ್ಟ್ರೀಯ ಸಮ್ಮೇಳನವನ್ನು ಅತ್ಯಂತ ವೈಭವದಿಂದ ಉದ್ಘಾಟಿಸಲಾಯಿತು. ದೀಪ ಬೆಳಗಿಸುವ  ಮೂಲಕ  ಚಾಲನೆಗೊಂಡ ಈ ಕಾರ್ಯಕ್ರಮದಲ್ಲಿ ಭಾರತದ ತಾಂತ್ರಿಕ ಮತ್ತು ರಕ್ಷಣಾ ವಲಯದ ಪ್ರಮುಖರು ಭಾಗವಹಿಸಿದ್ದರು. ಸೈಬರ್ ಸೆಕ್ಯೂರಿಟಿ ಅಸೋಸಿಯೇಷನ್ ಆಫ್ ಇಂಡಿಯಾ (ನವದೆಹಲಿ) ಮಹಾನಿರ್ದೇಶಕರು ಮತ್ತು ಎಂ.ಐ.ಟಿ.ಕೆ ಮುಖ್ಯ ಸಲಹೆಗಾರರಾದ ವಿಜಯಂತ್ ಗೌರ್ ಮಾತನಾಡಿ, “ನೀವು ಭವಿಷ್ಯದ ಡಿಜಿಟಲ್ ಕಾವಲುಗಾರರು” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಡಿಜಿಟಲೀಕರಣ ಹೆಚ್ಚುತ್ತಿರುವ ಈ ಕಾಲದಲ್ಲಿ ಸೈಬರ್ ಭದ್ರತೆ ಕೇವಲ ವೃತ್ತಿಯಲ್ಲ, ಅದು ರಾಷ್ಟ್ರಕ್ಕೆ ಮಾಡುವ ಸೇವೆ ಎಂದು ಅವರು ಪ್ರತಿಪಾದಿಸಿದರು. ಲೆಫ್ಟಿನೆಂಟ್ ಕರ್ನಲ್ ಸಂತೋಷ್ ಖಾಡ್ಸರೆ ಅವರು ರೈತ ಕುಟುಂಬದಿಂದ ಬಂದು ಭಾರತೀಯ ಸೇನೆ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ತಾವು ಸಾಧಿಸಿದ ಹಾದಿಯನ್ನು ಹಂಚಿಕೊಂಡರು, ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿತು. ಉಡುಪಿ ಸೈಬರ್ ಕ್ರೈಮ್ ಇನ್ಸ್ಪೆಕ್ಟರ್ ನೀಲೇಶ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಸಂಘ ಸಂಸ್ಥೆಗಳು ಸಮಾಜದ ಆಗುಹೋಗುಗಳಿಗೆ ಸದಾ ಸ್ಪಂದಿಸಬೇಕು. ಪರಿಸರದ ಎಲ್ಲಾ ಚಟುವಟಿಕೆಗಳಲ್ಲಿ ಕೈಜೋಡಿಸಿ ಗ್ರಾಮದ ಅಭಿವೃದ್ಧಿಗೆ ಸಹಾಯ ಮಾಡಬೇಕು. ಸಮಾಜದಲ್ಲಿ ಅತ್ಯುತ್ತಮ ಸೇವೆ ಮಾಡುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಅವರು ಗಂಗೊಳ್ಳಿ ಲೈಟ್‌ಹೌಸ್ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಸೋಮವಾರ ಜರಗಿದ ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್‌ನ 35ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ವಿದ್ಯುತ್ ಗುತ್ತಿಗೆದಾರ ಕೆ.ಆರ್. ನಾಯ್ಕ್, ಶ್ರೀ ನಾರಾಯಣಗುರು ಜನ ಸೇವಾ ಸಂಘ ಗಂಗೊಳ್ಳಿ ಅಧ್ಯಕ್ಷ ಗೋಪಾಲ ಪೂಜಾರಿ, ಪಂಚಗಂಗಾವಳಿ ಬಳಗ ಗಂಗೊಳ್ಳಿ ಇದರ ಅಧ್ಯಕ್ಷ ರೋಶನ್ ಖಾರ್ವಿ, ಗುತ್ತಿಗೆದಾರ ಜಯಂತ್ ಶೇರುಗಾರ್, ಗಂಗೊಳ್ಳಿ ಗ್ರಾಪಂ ಸದಸ್ಯ ಮಹೇಶ್ (ಅಯ್ಯಪ್ಪ), ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ, ಯೂತ್ ಕ್ಲಬ್ ಅಧ್ಯಕ್ಷ ಕೆ.ಚಂದ್ರ…

Read More