ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಟ್ಟಿಯಂಗಡಿ : 1008ತೆಂಗಿನ ಕಾಯಿ ಮಹಾಗಣಪತಿ ಹವನ, 108 ಶ್ರೀ ಸತ್ಯಗಣಪತಿ ವ್ರತ ಸಂಪನ್ನ ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿ ಮಹೋತ್ಸವವು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಂಗವಾಗಿ ನೆರವೇರಿತು. ಸೆ.5ರಂದು ಶ್ರೀ ಮಹಾಗಣಪತಿ ಹೋಮ ಸಂಕಲ್ಪ, ೧೦೦೮ ತೆಂಗಿನ ಕಾಯಿ ಮಹಾಗಣಪತಿ ಹವನದ ಪೂರ್ಣಾಹುತಿ, ಮಹಾ ಪೂಜೆ ವಿದ್ಯುಕ್ತವಾಗಿ ಋತ್ವಿಜರ ವೇದ ಮಂತ್ರಘೋಷಗಳೊಂದಿಗೆ ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ರಾತ್ರಿ ರಂಗಪೂಜಾದಿ ಸೇವೆಗಳು ಜರುಗಿತು. ಸತ್ಯಗಣಪತಿ ವ್ರತ : ಸೆ. 6ರಂದು 108 ಶ್ರೀ ಸತ್ಯಗಣಪತಿ ವ್ರತ ಹಾಗೂ ಕಥಾ ನಿರೂಪಣೆ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರ ಅನುಕೂಲಕ್ಕಾಗಿ ಆಡಳಿತ ಮಂಡಳಿ ಉತ್ತಮ ವ್ಯವಸ್ಥೆಯನ್ನು ರೂಪಿಸಿತ್ತು. ನೂಕುನುಗ್ಗಲುಗಳಿಲ್ಲದೆ ಭಕ್ತರು ಸಾಂಗವಾಗಿ ಶ್ರೀ ದೇವರ ದರ್ಶನ ಪಡೆದರು. ಸಂಜೆ ನೃತ್ಯ ವಸಂತ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಣೇಶ ಚತುರ್ಥಿಯ ಅಂಗವಾಗಿ ತಾಲೂಕಿನ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಆನೆಗುಡ್ಡೆ ಶ್ರಿ ವಿನಾಯಕ ದೇವಳದಲ್ಲಿ ಹಬ್ಬದ ಅಂಗವಾಗಿ ಗಣಯಾಗ, ವಿಶೇಷ ಪೂಜೆ ನಡೆಯಿತು. ಸಹಸ್ರಾರು ಭಕ್ತರು ವಿಶೇಷ ದಿನದಂದು ದೇವಶ ದರ್ಶನ ಪಡೆದು ಪುನೀತರಾದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಹಕಾರಿ ಸಂಘವು ಆರಂಭವಾಗಿ ಕೇವಲ ಮೂರು ವರ್ಷದಲ್ಲಿ 9ಕೋಟಿಗೂ ಅಧಿಕ ವಹಿವಾಟುಗಳನ್ನು ನಡೆಸಿ ಸದಸ್ಯರ, ನಿರ್ದೇಶಕರ ಸಹಕಾರದಿಂದ ಪ್ರಗತಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ. ಆದುದರಿಂದ ಪ್ರಸಕ್ತ ಸಾಲಿನಲ್ಲಿ ಉತ್ತಮ ಆದಾಯ ಗಳಿಸಿದ ಹಿನ್ನೆಲೆಯಲ್ಲಿ ಶೇ.15 ಡಿವಿಡೆಂಟ್‌ನ್ನು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷರಾದ ರಾಜೇಂದ್ರ ಹೆಗ್ಡೆ ಹೇಳಿದರು. ಇತ್ತಿಚಿಗೆ ಸಂಘದ ಕಛೇರಿಯಲ್ಲಿ ಜರುಗಿದ ಹಂಗಳೂರಿನ ಆದಿತ್ಯ ವಿವಿಧೋದ್ದೇಶ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕಳೆದ ವರ್ಷದ ಆಯವ್ಯಯವನ್ನು ಮಂಡಿಸಿ 2016-17ನೇ ಸಾಲಿನ ಅಂದಾಜು ಆಯವ್ಯಯವನ್ನು ಸಭೆಯ ಗಮನಕ್ಕೆ ತರಲಾಯಿತು. ಆಡಳಿತ ಮಂಡಳಿಯ ಉಪಾಧ್ಯಕ್ಷ ವಿ. ದಿನೇಶ್ ದೇವಾಡಿಗ, ನಿರ್ದೇಶಕರಾದ ರತ್ನಾಕರ ಕೊಟೇಕಾರ್, ಸಂಜೀವ ದೇವಾಡಿಗ, ಕೃಷ್ಣ ದೇವಾಡಿಗ, ಪ್ರವೀಣಕುಮಾರ್ ಕೆ.ಬಿ., ಎ. ಜಯರಾಮ ಶೆಟ್ಟಿ, ಹರೀಶ್ ಬಿಲ್ಲವ, ಉದಯ ಮೆಂಡನ್, ಸಂತೋಷ ಕೋಣಿ, ಪ್ರಶಾಂತ ಕೊಲ್ಲೂರು, ಆಶಾ ಚಂದ್ರಶೇಖರ್, ವಿಜಯಲಕ್ಷ್ಮೀ ಗಣೇಶ್, ರವೀಂದ್ರ ಹೆಗ್ಡೆ, ಜಾರ್ಜ್ ಕರ್ವೆಲ್ಲೊ ಇನ್ನಿತರರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಲಲಿತ ಕಲಾ ಸಂಘದ ಆಶ್ರಯದಲ್ಲಿ ಖ್ಯಾತ ರಾಷ್ಟ್ರ ಮಟ್ಟದ ಕರಾಟೆ ಪಟು ಕಾರ್ತಿಕ್ ಕಟೀಲು ಮತ್ತು ಅವರ ತಾಯಿ ಶೋಭಲತಾ ಕಟೀಲು ಮಹಿಳೆಯರು ಸ್ವರಕ್ಷಣೆ ಮಾಡುವ ಕೆಲವು ಸುಲಭ ಕೌಶಲ್ಯಗಳನ್ನು ಪ್ರಾತ್ಯಕ್ಷಿತೆಯ ಮೂಲಕ ತೋರಿಸಿದರು. ಸುಮಾರು ಏಳು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿ, ಇದೇ ಸಂದರ್ಭದಲ್ಲಿ ಕಾರ್ತಿಕ್ ಕಟೀಲು ಜೊತೆ ಸಂವಾದ ನಡೆಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಜೇಶ್ ಶೆಟ್ಟಿ, ಲಲಿತ ಕಲಾ ಸಂಘದ ಸಂಯೋಜಕಿ ಸ್ಫೂರ್ತಿ ಎಸ್. ಫೆರ್ನಾಂಡಿಸ್, ಸಹ ಸಂಯೋಜಕಿ ಅನ್ವಿತಾ, ವಿದ್ಯಾರ್ಥಿ ಪ್ರತಿನಿಧಿಗಳಾದ ವೆಂಕಟೇಶ್, ಶಿಲ್ಪಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಶಾಂತಿ ಸ್ವಾಗತಿಸಿದರು, ರಜತ್ ಅತಿಥಿಗಳನ್ನು ಪರಿಚಯಿಸಿದರು, ಬ್ರಿಟಾ ಡಿ’ಸೋಜಾ ವಂದಿಸಿದರು, ವಿಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆರಳೆಣಿಕೆಯಷ್ಟು ಗ್ರಾಮಸ್ಥರಿಂದ ನಡೆಯುತ್ತಿದ್ದ ಮೊಳ್ಳಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಈ ಬಾರಿ ಸಭಾಂಗಣ ತುಂಬಿ ಹೋಗಿದ್ದು ಮೊದಲ ಇತಿಹಾಸವಾದರೆ ಕೇವಲ ಮೂರು ಇಲಾಖೆಯ ಅಧಿಕಾರಿಗಳು ಮಾತ್ರ ಗ್ರಾಮಸಭೆಗೆ ಹಾಜರಾಗುವ ಮೂಲಕ ನಿಯಮ ಉಲ್ಲಂಘಿಸಿದ ಘಟನೆ ಮಂಗಳವಾರ ಮೊಳ್ಳಹಳ್ಳಿ ಗ್ರಾಮ ಪಂಚಾಯತಿ ಸಭಾಗಣದಲ್ಲಿ ಮಂಗಳವಾರ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಪಶುಸಂಗೋಪನಾ ಇಲಾಖಾಧಿಕಾರಿ ಹಾಗೂ ಅರಣ್ಯ ಇಲಾಖೆ ಬಿಟ್ಟರೆ ಮತ್ಯಾವುದೇ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗದೇ ಇರುವುದರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಸಭೆಯಲ್ಲಿ ಅಧಿಕಾರಿಗಳ ಗೈರಾಗಿರುವುದರಿಂದ ಮೂವರು ಅಧಿಕಾರಿಗಳು ಮಾಹಿತಿ ನಿಡಿದ ತಕ್ಷಣ ಮೊಳಹಳ್ಳಿಯ ಸರ್ವೇ ನಂಬ್ರ ೨೫೨ರಲ್ಲಿ ಅಕ್ರಮ ಕ್ರಶರ್ ನಡೆಯುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಾಪ್ ಶೆಟ್ಟಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದೂವರೆ ವರ್ಷದಿಂದ ಪರವಾನಿಗೆ ನವೀಕರಣ ಆಗದೇ ಇದ್ದರೂ ಅಲ್ಲಿ ಕಲ್ಲು ಕೋರೆ ಕೆಲಸ ಮಾಡುತ್ತಿದೆ.…
19ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲೆರಿಕಲ್ ಕೇಡರ್‌ನ ಹುದ್ದೆಗಳಿವೆ – ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಕುಂದಾಪ್ರ ಡಾಟ್ ಕಾಂ ಮಾಹಿತಿ ರಾಜ್ಯದಲ್ಲಿ 1,467 ಹುದ್ದೆಗಳು ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) 19ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕ್ಲೆರಿಕಲ್ ಕೇಡರ್‌ನ ಹುದ್ದೆಗಳಿವೆ. ಒಟ್ಟು 19,243 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ರಾಜ್ಯದಲ್ಲಿಯೇ 1,467 ಹುದ್ದೆಗಳು ಖಾಲಿ ಇವೆ. ಕಳೆದ ಬಾರಿಯಂತೆ ಈ ಬಾರಿಯೂ ಐಎಎಸ್, ಕೆಎಎಸ್ ಮಾದರಿಯಲ್ಲಿ ಎರಡು ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಬಾರಿಯೂ ಸಂದರ್ಶನ ಇರುವುದಿಲ್ಲ. ಮುಖ್ಯಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ. ಅರ್ಹತೆ ಏನು? : ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಪರೀಕ್ಷೆ ಬರೆಯಬಹುದು. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿಗೆ ಸರಿಸಮನಾದ ಕೋರ್ಸ್ ಮಾಡಿದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಯು ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸುವ ಜ್ಞಾನ ಹೊಂದಿರುವುದು ಕಡ್ಡಾಯ. ಹೀಗಾಗಿ ಕಂಪ್ಯೂಟರ್ ಕಲಿಕೆಯ ಬಗ್ಗೆ ದೃಢೀಕರಣ ಪತ್ರವನ್ನು ಕೂಡ ಅಭ್ಯರ್ಥಿಯು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಇಂಡಿಯ ಲಿಟ್ರಸಿ ಮಿಷನ್ ಅಡಿಯಲ್ಲಿ ಆಶಾಕಿರಣ ಯೋಜನೆ ಅನ್ವಯ ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ವತಿಯಿಂದ ನಡೆದ ಆಶಾಕಿರಣ ಯೋಜನೆಯ ವಲಯ ಮಟ್ಟದ ಮಾಹಿತಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಮಾತನಾಡಿ ರೂ.೨೧೦೦ ನೀಡಿ ಉತ್ತರ ಭಾರತದ ಒಂದು ಮಗುವನ್ನು ದತ್ತು ತೆಗೆದುಕೊಂಡು ಆ ಮಗುವಿನ ಉಜ್ವಲ ಭವಿಷ್ಯವನ್ನು ರೂಪಿಸುವ ಯೋಜನೆಯೇ ಆಶಾಕಿರಣ ಯೋಜನೆ ಎಂದರು. ರೋಟರಿ ಸನ್ ರೈಸ್ ಅಧ್ಯಕ್ಷ ಕೆ.ನರಸಿಂಹ ಹೊಳ್ಳ ಸ್ವಾಗತಿಸಿ, ರೋಟರಿ ಸನ್‌ರೈಸ್ ಎಂಟು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ರೋಟರಿ ವಲಯ ಒಂದರ ಸಹಾಯಕ ಗವರ್ನ್‌ರ್ ಮಧುಕರ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ವಲಯ ಸೇನಾನಿ ಅಬುಶೇಖ ಸಾಹೇಬ್, ವಲಯ ಲಿಟ್ರಸಿ ಚೇರ‍್ಮನ್ ಲುಯಿಸ್ ಜೆ ಫೆರ್ನಾಂಡಿಸ್ , ರೋಟರಿ ಸನ್‌ರೈಸ್ ಸ್ಥಾಪಕ ಅಧ್ಯಕ್ಷ ದಿನಕರ ಆರ್ ಶೆಟ್ಟಿ, ಹಾಗೂ ವಲಯ ಒಂದರ ಎಲ್ಲಾ ಏಳು ಅಧ್ಷಕ್ಷರು ಮತ್ತು ಕಾರ್ಯದರ್ಶಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದ ಸಮರೋಪ ಸಮಾರಂಭ ಇತ್ತಿಚಿಗೆ ನಡೆಯಿತು. ಉಡುಪಿ ಜಿಲ್ಲೆ ಕರ್ನಾಟಕದಲ್ಲಿಯೇ ಮಾದರಿ ಜಿಲ್ಲೆ, ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯವಾಗಬೇಕು, ಬಹುಮಾನ ಬರಲಿ, ಬಾರದೇ ಇರಲಿ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯವಾದುದು. ಬಹುಮಾನ ವಿಜೇತ ಎಲ್ಲಾ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಎತ್ತಿ ಹಿಡಿಯಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ ಭಂಡಾರ್‌ಕಾರ‍್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಜಿ. ಎಂ. ಗೊಂಡ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್ ಪಿ ನಾರಾಯಣ ಶೆಟ್ಟಿ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಕೊಡಲಾಗಿದೆ, ಅದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು, ಇಂದು ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಯಾಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರುಗಳಿಗೆ ಶುಭ ಹಾರೈಸಿ ಮತ್ತೊಮ್ಮೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ಜೊತೆಗೆ ಸಹಭಾಗಿತ್ವದ ಯೋಜನೆಯನ್ನು ರೂಪಿಸಿದಲ್ಲಿ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಡಿವಾಳ ಸಂದೇಶ್ ಹೇಳಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಂಡ “ಗ್ರಾಮ ಅಭ್ಯುದಯ ಅಭಿಯಾನ”ದ ಉದ್ಘಾಟಿಸಿ ಮಾತನಾಡಿದರು. ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಚಿತ್ತೂರು ಗ್ರಾಮ ಪಂಚಾಯತ್ ಪಿ.ಡಿ.ಓ. ಸಂದೇಶ್ ಶೆಟ್ಟಿ, ಪ್ರತಿಯೊಬ್ಬನೂ ತನ್ನ ಸಾಮಾಜಿಕ ಜವಾಬ್ದಾರಿಯನ್ನರಿತು ಕಾರ್ಯಪ್ರವತ್ತನಾದರೆ, ದೇಶದ ಸರ್ವಾಂಗೀಣ ಅಭಿವ್ರದ್ಧಿ ಸಾಧ್ಯ ಎಂದರು. ಸಂಘ ಸಂಸ್ಥೆಗಳು ಗ್ರಾಮ ಪಂಚಾಯತ್ ಜೊತೆಗೆ ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡಿದರೆ, ಸಂಪನ್ಮೂಲಗಳ ಸದ್ಬಳಕೆಯಿಂದ ಸರಕಾರದ ಸೌಲಭ್ಯಗಳು ಸರಿಯಾಗಿ ಜನರಿಗೆ ತಲುಪಿ, ತನ್ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಬಲಗೊಳ್ಳುವುದು, ಸ್ವಚ್ಛ ಭಾರತ್ ಫ್ರೆಂಡ್ಸ್ ನವರು ಚಿತ್ತೂರು ಗ್ರಾಮವನ್ನು ಆಯ್ಕೆ ಮಾಡಿ ಮುಂದಿನ ಮೂರು ತಿಂಗಳುಗಳ ಕಾಲ ವಿವಿಧ ಕಾರ್ಯಕ್ರಮವನ್ನು ಮಾಡಲಿದ್ದು ಅವರಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು. ಚಿತ್ತೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀಮಂತರು ತಮ್ಮ ಮನೆಯಲ್ಲೇ ನೀರು ಶುದ್ಧೀಕರಣ ವ್ಯವಸ್ಥೆ ಹೊಂದುತ್ತಾರೆ. ಬಡವರಿಗೆ ಆ ಸಾಮರ್ಥ್ಯ ಇಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 10 ಸಾವಿರ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮುಂದಾಗಿದೆ. ಈಗಾಗಲೇ ಕೆಲವು ಕಡೆ ಇದು ಆರಂಭವಾಗಿದ್ದು ಹಂತಹಂತವಾಗಿ ಎಲ್ಲೆಡೆ ಸ್ಥಾಪನೆಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಮರವಂತೆ ಗ್ರಾಮ ಪಂಚಾಯತ್‌ನಲ್ಲಿ ಅವರು ಘಟಕ ಉದ್ಘಾಟಿಸಿದ ಬಳಿಕ ಮಾತನಾಡಿದರು. ಹೆಚ್ಚಿನ ಕಾಯಿಲೆಗಳು ಕಷ್ಮಲಯುಕ್ತ ನೀರು ಕುಡಿಯುವುದರಿಂದ ಬರುತ್ತದೆ. ಆದುದರಿಂದ ಗ್ರಾಮ ಪಂಚಾಯತ್ ಈ ಬಗ್ಗೆ ಜಾಗೃತಿ ಮೂಡಿಸಿ ಜನರು ಕುಡಿಯಲು ಈ ನೀರು ಬಳಸುವಂತೆ ಮಾಡಬೇಕು. ಪ್ರತಿದಿನ ಈ ಘಟಕದಲ್ಲಿ 8000 ಲಿಟರ್ ನೀರು ಶುದ್ಧವಾಗುತ್ತದೆ. ಒಂದು ರೂಪಾಯಿಗೆ ಹತ್ತು ಲಿಟರ್ ನೀರು ಸಿಗುತ್ತದೆ ಎಂದರು. ಮುಂದಿನ ದಿನದಲ್ಲಿ ರೂ 20 ಕೋಟಿ ವೆಚ್ಚದಲ್ಲಿ ಮರವಂತೆ, ನಾವುಂದ, ಕಿರಿಮಂಜೇಶ್ವರ, ಹೇರೂರು ಗ್ರಾಮಗಳನ್ನು ಒಳಗೊಂಡ…
