ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ ಚಿಕ್ಕಮ್ಮನಸಾಲು ರಸ್ತೆ ಕುಂದಾಪುರ ಇಲ್ಲಿನ ದೇವಸ್ಥಾನದ ವಠಾರ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಭಾಸ್ಕರ ಎಸ್ ಪುತ್ರನ್, ದೇವಳದ ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಭಾಗವಹಿಸಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿವರ್ತನ ಪುನರ್ ವಸತಿ ಕೇಂದ್ರ ಮತ್ತು ಮನಸ್ಮಿತಾ ಫೌಂಡೇಶನ್, ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ ೧೫ನೇ ಉಚಿತ ಮಾನಸಿಕ ಆರೋಗ್ಯ ತಪಾಸಣಿ ಮತ್ತು ಔಷಧ ವಿತರಣಿ ಶಿಬಿರ ನಡೆಯಿತು. ಜನತಾ ಫಿಶ್ ಮಿಲ್ ಇದರ ನಿರ್ದೇಶಕರಾದ ರಕ್ಷಿತ್ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾನಸಿಕ ರೋಗವು ಒಂದು ಸಾಮಾಜಿಕ ಕಳಂಕವೆಂದು ಭಾವಿಸದೇ ಮನೋ ವೈದ್ಯರ ಚಿಕಿತ್ಸೆಯನ್ನು ಪಡೆಯುವ ಪ್ರವೃತ್ತಿ ಇಂದು ಜನರಲ್ಲಿ ಹೆಚ್ಚುತ್ತಿದೆ ಹಾಗೂ ಅವರಿಗೂ ಮತ್ತು ಅವರ ಕುಟುಂಬದವರಿಗೂ ಮಾನಸಿಕ ನೆಮ್ಮದಿ ಸಿಗುವಂತಾಗುತ್ತಿದೆ ಹಾಗೆಯೇ ಈ ಪರಿಸರದ ಜನರು ಶಿಬಿರದ ಪ್ರಯೋಜನವನ್ನು ಇನ್ನು ಹೆಚ್ಚು ಪಡೆಯುವಂತಾಗಲಿ ಎಂದು ಹಾರೈಸಿದರು ಹಾಗೂ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಕೆ. ಹರೀಶ್ ಕುಮಾರ್ (ಇಂಜಿನಿಯರ್ ಉಡುಪಿ) ಅವರು ಮಾತನಾಡಿ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ ಆದಷ್ಟು ಶ್ರೀಘ್ರದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಪರಿವರ್ತನ ಕೇಂದ್ರದ ವೈದ್ಯಕೀಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಅಂಗವಾಗಿ ಬೈಂದೂರಿನಲ್ಲಿ ಜ.28ರಂದು ನಡೆಯಲಿರುವ ’ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭದ ಕರಪತ್ರ, ವಿವೇಕ್ ಬ್ಯಾಂಡ್ ಹಾಗೂ ಭಿತ್ತಿ ಪತ್ರವನ್ನು ನಾಗೂರು ಸಂದೀಪನ್ ಆಂಗ್ಲ ಮಾದ್ಯಮ ಶಾಲೆಯ ರಂಗಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು. ಸಂದೀಪನ್ ಶಾಲೆಯ ಅಧ್ಯಕ್ಷರಾದ ಪ್ರಕಾಶ್ ರಾವ್ ಬಿಡುಗಡೆಗೊಳಿಸಿದರು. ಸಮರ್ಥ ಭಾರತ ಬೈಂದೂರು ವಿಭಾಗದ ಗೌರವಾದ್ಯಕ್ಷ ವಿಶ್ವೇಶ್ವರ ಅಡಿಗ, ಕಾರ್ಯಾದ್ಯಕ್ಷ ಜಯಾನಂದ್ ಹೋಬಳಿದಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಂಚಾಲಕ ಶ್ರೀಧರ ಬಿಜೂರು, ಸಹ ಸಂಚಾಲಕ ಭೀಮೇಶ್, ಖಜಾಂಚಿ ಬಾಲಕೃಷ್ಣ ಬೈಂದೂರು, ಉದ್ಯಮಿಗಳಾದ ಗೋಪಾಲಕೃಷ್ಣ, ಪ್ರಕಾಶ್ ಭಟ್, ಗಿರೀಶ್ ಬೈಂದೂರು, ಲಿಂಗಯ್ಯ, ಶಿಕ್ಷಕರಾದ ಎ. ವೆಂಕಟೇಶ್, ರಾಜೇಶ್, ಗಣಪತಿ ಹೋಬಳಿದಾರ್, ಮಹೇಶ್ ಮಂಜೇಶ್ವರ, ಅನಿಲ್ ಕುಮಾರ್ ಟಿ. ಎನ್. ಸುರೇಶ್ ಮಲ್ಲಯ್ಯ ಮೊದಲಾದವರು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಬೈಂದೂರಿನಲ್ಲಿ ಜ.28ರಂದು ಹಮ್ಮಿಕೊಳ್ಳಲಾಗಿರುವ ’ವಿವೇಕ ಪರ್ವ’ ದೇಶಭಕ್ತ ಹೃದಯಗಳ ಅಪೂರ್ವ ಸಂಗಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಿವೇಕ್ ಬ್ಯಾಂಡ್‌ನ ನೂತನ ಟೀ ಶರ್ಟ್‌ಗಳನ್ನು ಬೈಂದೂರಿನ ಸಮರ್ಥ ಭಾರತ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಲಾಯಿತು. ಸಮರ್ಥ ಭಾರತ ಬೈಂದೂರು ವಿಭಾಗದ ಕಾರ್ಯಾಧ್ಯಕ್ಷ ಜಯಾನಂದ್ ಹೋಬಳಿದಾರ್ ಹಾಗೂ ಸಹಸಂಚಾಲಕ ಭಿಮೇಶ್ ಕುಮಾರ್ ’ಬಿ ಗುಡ್ ಡೂ ಗುಡ್’ ಸಂದೇಶ ಹೊತ್ತ ಟೀಶರ್ಟ್ ಬಿಡುಗಡೆಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಕಾರ್ಮಿಕ ವೇದಿಕೆ ರಿ. ಉಡುಪಿ ಹಾಗೂ ಶ್ರೀ ಮಹಾಗಣಪತಿ ಫ್ರೆಂಡ್ಸ್ ಹೊಲಾರ್, ಗೋಳಿಹೊಳೆ ಇವರ ಸಂಯುಕ್ತಾಶ್ರಯದಲ್ಲಿ ಎಂಡೋಸಲ್ಫಾನ್ ಮತ್ತು ಪೋಲಿಯೊ ಪೀಡಿತ ಮಕ್ಕಳ ಸಹಾಯಾರ್ಥವಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾಟ ’ಎಂ.ಜಿ. ಟ್ರೋಫಿ -2017’ ಹಾಗೂ ’ಕೊಡಚಾದ್ರಿ ಕಾರ್ಮಿಕರ ಸಂಗಮ’ ಕಾರ್ಯಕ್ರಮ ಜನವರಿ 28ರಂದು ಗೊಳಿಹೊಳೆ ಗ್ರಾಮದ ಹೊಲಾರ್ ಶ್ರೀ ಮಹಾಗಣಪತಿ ಕ್ರೀಡಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ಥಳೀಯ ಕ್ರೀಡಾಪಟುಗಳಿಗೆ ಸನ್ಮಾನ, ಕಾರ್ಮಿಕ ನೊಂದಣಿ ಮತ್ತು ಬಡ ರೈತ ಕೂಲಿಕಾರ್ಮಿಕರಿಗೆ ಉಚಿತ ವಿಮಾ ಸೌಲಭ್ಯ, ಮನು ಹಂದಾಡಿ ಮತ್ತು ತಂಡದಿಂದ ಹಾಸ್ಯಸಂಜೆ ಕಾರ್ಯಕ್ರಮಗಳು ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ – 8748964418, 9482623111
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜಯಪುರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ.ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಜ್ಞಾ ಎನ್ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಾಕಾಳಿ ಮಹಿಳಾ ಮಂಡಳಿ (ರಿ) ಖಾರ್ವಿಕೇರಿ ಕುಂದಾಪುರ ಇದರ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಶಿಯನ್ ತರಬೇತಿ ಶಿಬಿರವನ್ನು ಶ್ರೀ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಸ್ತೂರಿ ಡಿ ಪಟೇಲ್ ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಅಂಬಿಕಾ ಧೀರಜ್ ನೆರವೇರಿಸಿ, ಸೌಂದರ್ಯವು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಕಿಯೋನಿಕ್ಸ್ ಸಂಸ್ಥೆಯ ಧೀರಜ್, ರೋಟರಿ ಕ್ಲಬ್ ಸನ್‌ರೈಸ್‌ನ ಮಾಜಿ ಅಧ್ಯಕ್ಷರಾದ ದಿನಕರ ಪಟೇಲ್ ಹಾಗೂ ಬ್ಯೂಟಿಶಿಯನ್ ತರಬೇತುದಾರರಾದ ಶ್ರೀಮತಿ ರತ್ನ ತೇಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮ ವಿ. ಸ್ವಾಗತಿಸಿದರು. ಶ್ರೀಮತಿ ಗೀತಾ ವಸಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರೂಪಾ ಎಂ. ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಹೊಸೂರಿನ ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯಲ್ಲಿ ಡಿಸೆಂಬರ್ ೩೦ರಂದು ನಡೆಯಿತು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡಬೇಕು. ಇಂತಹ ಎನ್.ಎಸ್.ಎಸ್. ಶಿಬಿರಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಬದುಕಿನ ಶಿಕ್ಷಣವನ್ನು ನೀಡುತ್ತದೆ. ಸಮಾಜದ ಕಟ್ಟಕಡೆಯ ಮಗು ಶಿಕ್ಷಣ ಪಡೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಗಳ ಮುಖ್ಯ ಧ್ಯೇಯ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ ಸಮಾರೋಪ ಭಾಷಣದಲ್ಲಿ ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ದೇವಲ್ಕುಂದ ಅಶೋಕ ಶೆಟ್ಟಿ, ಹೊಸೂರು ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಆ ಕಾಲದ ಹಾಡುಗಳ ಖದರೇ ಬೇರೆ. ಈ ಕಾಲದ ಸಂಗೀತ ಮತ್ತೆ ಮತ್ತೆ ಕೇಳಿದರೆ ಬೋರೇ. ಹೀಗೆ ರಾಗ ಎಳೆತ ಕೂರಬೇಡಿ! ಆ ಕಾಲ ಹಾಡುಗಳನ್ನು ಈ ಕಾಲದಲ್ಲಿ ಕೇಳುವ ಅವಕಾಶ ಕುಂದಾಪುರದ ಕಲಾಕ್ಷೇತ್ರ ಮಾಡಿಕೊಟ್ಟಿದೆ. ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜನವರಿ 7ರ ಶನಿವಾರ ಸಿತಾರ್ ವಾದಕ ಅವಿನಾಶ್ ಹೆಬ್ಬಾರ್ ಸವಿನೆನಪಿಗಾಗಿ ಉಸ್ತಾದ್ ಫಯಾಝ್ ಖಾನ್ ಅವರಿಂದ ‘ಭಜನಾ ಸಂಧಾ’ ನಡೆದರೇ, ಜನವರಿ 8ರ ಭಾನುವಾರ ಸಂಜೆ 6ರಿಂದ ‘ಇನಿದನಿ’ ಸುಮಧುರ ಕನ್ನಡ ಹಾಡುಗಳ ಸಂಗೀತ ಸಂಜೆ ನಡೆಯಲಿದೆ. ಇಂದಿಗೂ ಕಾಡುವ ಹಳೆಯ ಹಾಡುಗಳು ಪ್ರಸಿದ್ಧ ಸಂಗೀತಗಾರರ ಕಂಠದಿಂದ ಮೂಡಿಬರಲಿದೆ. ಭಜನಾ ಸಂಧ್ಯಾ ಹಾಗೂ ಇನಿದನಿ ಸಂಗೀತಪ್ರಿಯರನ್ನು ಒಂದಿಷ್ಟು ಹೊತ್ತು ಸಂಗೀತ ಲೋಕದಲ್ಲಿ ತೇಲಿಸಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೈಹಿಕ ಮಾನಸಿಕ ತೊಂದರೆಗಳಾದಾಗ ಯಾವಾಗಲೂ ದೇಹದ ಒಳಕ್ಕೆ ರಾಸಾಯನಿಕ ಔಷಧ ಸೇವಿಸುವುದನ್ನು ಕನಿಷ್ಠಗೊಳಿಸಿ ದೇಸೀ ಚಿಕಿತ್ಸೆಗಳಾದ ಯೋಗ, ಪ್ರಾಣಾಯಾಮ, ಅಕ್ಯುಪ್ರೆಶರ್ ಮುದ್ರೆ ವಿಜ್ಞಾನ, ಆಯಸ್ಕಾಂತ, ಆರ್ಯುವೇದ ಚಿಕಿತ್ಸೆಗಳನ್ನು ಬಳಸುವುದರಿಂದ ಬಹಳಷ್ಟು ಗುಣಪಡೆದು ಸರಳ, ಸುಲಭ ಮತ್ತು ಸಹಜತೆಯಿಂದ ಬಾಳಬಹುದು ಎಂದು ಸಾಹಿತಿ ಯು ವರಮಹಾಲಕ್ಷ್ಮೀ ಹೊಳ್ಳ ನುಡಿದರು. ಅವರು ಉಪ್ಪುಂದ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ಹೊಳ್ಳರ ದತ್ತಿನಿಧಿ, ಸುವಿಚಾರ ಬಳಗ ಮತ್ತು ಮಹಿಳಾ ವಿವಿದೊದ್ದದೇಶ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಜನವರಿ ೨ ರಿಂದ ೮ ರ ತನಕ ಆಯೋಜಿಸಿದ ಶಿಬಿರದಲ್ಲಿ ರಾಜಸ್ಥಾನದ ಡಾ ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ್ ಸಂಸ್ಕಾರದ, ಡಾ|| ಭೂಪೇಂದ್ರ ಚೌಧರಿ ಮತ್ತು ತಂಡದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಡಾ ಭೂಪೇಂದ್ರ ಚೌಧರಿಯವರು ಅಂಗೈ, ಅಂಗಾಲು, ಬೆನ್ನುಹುರಿ, ಸೊಂಟ ಮುಂತಾದೆಡೆ ಹರಿಯುವ ನರಮಂಡಲಗಳನ್ನು ಪ್ರಚೋದಿಸಿ ಸಶಕ್ತಗೊಳಿಸುವುದರಿಂದ ಉದ್ಯೋಗ ಮತ್ತು ಆಹಾರ ನಿಮಿತ್ತ ಬರುವ ಹಲವಾರು…
