Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕನ್ನಡ ಭಾಷೆಯ ಉಳಿವಿನ ಬಗ್ಗೆ ಮಾತನಾಡುವುದರ ಜೊತೆಗೆ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೂ ಸಮಾಜ ಕಾಳಜಿ ವಹಿಸಬೇಕು. ಆಂಗ್ಲ ಮಾಧ್ಯಮದ ಮೇಲಿನ ಹೆಚ್ಚುತ್ತಿರುವ ಒಲವಿನಿಂದ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದು, ಅವುಗಳ ಉಳಿವಿಗೆ ಪೋಷಕರು, ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಅಗತ್ಯ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಸುಧಾರಾಣಿ ಹೇಳಿದರು. ಅವರು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ನಡೆದ ‘ಕನ್ನಡ ನುಡಿ ಹಬ್ಬ ಸಂಭ್ರಮ–2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ ಕೇವಲ ಸಂವಹನದ ಸಾಧನವಲ್ಲ. ಅದು ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ. ಆಧುನಿಕ ಜಗತ್ತಿನಲ್ಲಿ ಇತರ ಭಾಷೆಗಳನ್ನು ಕಲಿಯುವುದು ಅಗತ್ಯವಾದರೂ ಮಾತೃಭಾಷೆಯನ್ನು ಮರೆಯಬಾರದು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಓದುವ, ಕನ್ನಡದಲ್ಲಿ ಮಾತನಾಡುವ ಹಾಗೂ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡದ ಮೇಲಿನ ಅಭಿಮಾನ ಘೋಷಣೆಗಳಿಗೆ ಸೀಮಿತವಾಗದೆ ದೈನಂದಿನ ಬದುಕಿನಲ್ಲೂ ವ್ಯಕ್ತವಾಗಬೇಕು ಎಂದರು. ಆಳ್ವಾಸ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಶ್ರೀ ವೇಣುಗೋಪಾಲ ಕೃಷ್ಣ ಎಜುಕೇಶನಲ್ ಸೊಸೈಟಿ ಮೂಡುಕೇರಿ ಬಾರ್ಕೂರು, ಗೀತಾನಂದ ಫೌಂಢೇಶನ್ ಮಣೂರು ಪಡುಕರೆ, ಉಸಿರು ಕೋಟ, ಶ್ರೀ ಚಂದು ಪೂಜಾರಿ ದತ್ತಿನಿಧಿ ಸಾಸ್ತಾನ, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಇವರ ಆಸರೆಯಲ್ಲಿ ನಡೆಯುವ 6ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ವಿವೇಕ ಬಾಲಕಿಯರ ಫ್ರೌಢಶಾಲೆ ಕೋಟದ ಐಶ್ವರ್ಯ ಜೆ ನಾರಿ ಆಯ್ಕೆಯಾಗಿದ್ದಾರೆ. ಬರಹಗಾರ್ತಿಯಾಗಿ ಗುರುತಿಸಿಕೊಂಡು ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತು ಹಲವಾರು ಪ್ರಬಂಧ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುವ ಅವರು ಜನಾರ್ಧನ ಹಾಗೂ ಸುಜಾತ ಅವರ ಪುತ್ರಿಯಾಗಿರುತ್ತಾರೆ. ಬಹುಮುಖ ಪ್ರತಿಭೆಯಾಗಿರುವ ಇವರು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯೆಕ್ಷೆಯಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಆನಂದ ಸಿ ಕುಂದರ್, ಕಾರ್ಯದರ್ಶಿ ನರೇಂದ್ರಕುಮಾರ್ ಕೋಟ, ಪಿಡಿಓ ರವೀಂದ್ರ ರಾವ್ ಪ್ರಕಟಣೆಯಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.09 ರಂದು ಆಯೋಜಿಸಲಾಗಿರುವ ಬೈಂದೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಶಾಲೆಯ ವಠಾರದಲ್ಲಿ ಸೋಮವಾರ ನಡೆಯಿತು. ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಅವರು ಮಾತನಾಡಿ, ಇಲಾಖೆಯಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಹಾಗೂ ಬೇಕಾಗುವ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಪ್ರದೀಪ ಕುಮಾರ ಶೆಟ್ಟಿ ಅವರು ಪ್ರತಿಭಾ ಕಾರಂಜಿ ಉದ್ದೇಶ ಮತ್ತು ಅದರ ನಿರ್ವಹಣೆಯ ಕುರಿತಾಗಿ ಮಾಹಿತಿ ನೀಡಿದರು. ಪ್ರತಿಭಾ ಕಾರಂಜಿಯ ತಾಲೂಕು ನೋಡಲ್ ಅಧಿಕಾರಿ ಸತ್ಯನಾ ಕೋಡೇರಿ ಅವರು ಕಾರ್ಯಕ್ರಮದ ಸಮಿತಿಗಳನ್ನು ರಚಿಸಿ ಅದರ ಕಾರ್ಯ ಚಟುವಟಿಕೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾರಾಯಣ ಆಚಾರ ಅವರು ಕಾರ್ಯಕ್ರಮಕ್ಕೆ ಬೇಕಾಗುವ ಹೆಚ್ಚಿನ ಸಂಪನ್ಮೂಲ ಸಂಗ್ರಹಿಸುವ ಮೂಲಕ ಉತ್ತಮ ರೀತಿಯಲ್ಲಿ ಆಯೋಜಿಸಲು ಎಲ್ಲರೂ ಸಹಕರಿಸಬೇಕು ಎಂದರು. ಸಭೆಯಲ್ಲಿ ಶಿಕ್ಷಣ ಸಂಯೋಜಕ ವೆಂಕಪ್ಪ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಯುಜಿ ಲ್ಯಾಟರಲ್ ಎಂಟ್ರಿ ಕೋಟಾದಡಿ ಅಂತಿಮ ಸುತ್ತಿನ ಪ್ರವೇಶಾತಿ ಪ್ರಕ್ರಿಯೆಯ ನಂತರವೂ ಭರ್ತಿಯಾಗದೇ ಉಳಿದಿರುವ ವಿವಿಧ ಸ್ನಾತಕ ಪದವಿ ಕಾರ್ಯಕ್ರಮಗಳ ಪ್ರವರ್ಗವಾರು ಸೀಟುಗಳನ್ನು ನವೆಂಬರ್ 24ರಂದು ಮುಕ್ತ ಕೌನ್ಸೆಲಿಂಗ್ ಆಯ್ಕೆ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ. ಈ ಮುಕ್ತ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪ್ರವೇಶಾತಿ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣ www.uahs.edu.in ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಸೂಕ್ತ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ಖುದ್ದಾಗಿ ಕುಲಸಚಿವರ ಕಾರ್ಯಾಲಯ, ಶರಾವತಿ ಆಡಳಿತ ಭವನ, 2ನೇ ಮಹಡಿ, ಇರುವಕ್ಕಿ-577412 ಶಿವಮೊಗ್ಗ ಜಿಲ್ಲೆ ಇಲ್ಲಿಗೆ ನವೆಂಬರ್ 24 ರ ಬೆಳಗ್ಗೆ 11 ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ. ನಿಗದಿತ ಸಮಯ ಮೀರಿದ ಅಭ್ಯರ್ಥಿಯ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಲಭ್ಯವಿರುವ ಸೀಟುಗಳಿಗೆ ಮುಕ್ತ ಕೌನ್ಸೆಲಿಂಗ್ ಆಯ್ಕೆ ಪ್ರಕ್ರಿಯೆಗಳನ್ನು ಕೆಳದಿ ಶಿವಪ್ಪ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ರೋಟರಿ ಕ್ಲಬ್‌ ತೀರ್ಥಹಳ್ಳಿ ಆತಿಥ್ಯದಲ್ಲಿ ನಡೆದ ರೋಟರಿ ಜಿಲ್ಲಾ ಮಟ್ಟದ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಅರುಣ್‌ ಕುಮಾರ್‌ ಶಿರೂರು ನೇತ್ರತ್ವದ ಬೈಂದೂರು ರೋಟರಿ ತಂಡ ಭಾಗವಹಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸುವ ಮೂಲಕ ವಲಯ 1ರ ಸತತ ನಾಲ್ಕನೇ ಬಾರಿ ಚಾಂಪಿಯನ್‌ ಪಟ್ಟಗಳಿಸುವ ಮೂಲಕ ದಾಖಲೆ ನಿರ್ಮಾಣವಾಗಿದೆ. ರೋಟರಿ ಜಿಲ್ಲಾ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಕಂದಾಯ ಜಿಲ್ಲೆಗಳ 11 ವಲಯದ ಒಟ್ಟು 87 ರೋಟರಿ ಕ್ಲಬ್‌ಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೈಂದೂರು ರೋಟರಿ ಕುಂದಾಪುರದಲ್ಲಿ ನಡೆದ ವಲಯ ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟದ ಅರ್ಹತೆ ಪಡೆದಿತ್ತು. ಮಹಿಳೆಯರ ಸಿನಿಮಾ ಹಾಡು ಸ್ಪರ್ಧೆಯಲ್ಲಿ ಪೂರ್ಣಿಮಾ ಪ್ರಥಮ, ಡ್ಯುಯೆಟ್‌ ಹಾಡು ಸ್ಪರ್ಧೆಯಲ್ಲಿ ಉದಯ ಆಚಾರ್‌, ಪೂರ್ಣಿಮಾ ಪ್ರಥಮ, ಏಕಾಭಿನಯ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಪ್ರಥಮ ಸ್ಥಾನ ಗಳಿಸಿದ್ದಾರೆ. ರೈತ ಹೋರಾಟ ಕಥೆಯ ನಾಟಕಕ್ಕೆ ಪ್ರಶಸ್ತಿ:ಬೈಂದೂರಿನಲ್ಲಿ ನಿರಂತರ 432 ದಿನಗಳ ಕಾಲ ರೈತರು ಹೋರಾಟ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಹಕಾರಿ ಸಂಸ್ಥೆಗಳು ಕೇವಲ ಲಾಭ ಗಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸದೆ, ರೈತರು ಹಾಗೂ ಜನಸಾಮಾನ್ಯರ ಸೇವೆಗೆ ಆದ್ಯತೆ ನೀಡಬೇಕು. ಜನರ ವಿಶ್ವಾಸ, ಪಾರದರ್ಶಕ ಆಡಳಿತ ಮತ್ತು ಸೇವಾ ಮನೋಭಾವವೇ ಸಹಕಾರಿ ಕ್ಷೇತ್ರದ ನಿಜವಾದ ಶಕ್ತಿಯಾಗಿದೆ ಎಂದು ಉಪ್ಪುಂದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘ, ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಹಕಾರಿ ಸಂಘ  ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೋಟದ ಬಿ.ಸಿ. ಹೊಳ್ಳ ಸಹಕಾರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಉಡುಪಿ ಜಿಲ್ಲೆಯಲ್ಲಿ 735 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಸುಮಾರು 55 ಸಾವಿರ ರೈತರು ಹಾಲು ಪೂರೈಸುತ್ತಿದ್ದು, ವಾರ್ಷಿಕವಾಗಿ ಸುಮಾರು 750 ಕೋಟಿ ರೂ. ಹಣ ರೈತರಿಗೆ ಪಾವತಿಯಾಗುತ್ತಿದೆ. ಇದು ಗ್ರಾಮೀಣ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಹಾಗೂ ವಿವಿಧ ರಾಜ್ಯಗಳ ಕಲಾಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಪಾವಳಿ ಸಂಭ್ರಮ ಗಮನ ಸೆಳೆಯಿತು. ವೈವಿಧ್ಯತೆಯಲ್ಲಿ ಏಕತೆಯ ಆಶಯದೊಂದಿಗೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಮೂಡುಬಿದಿರೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಪ್ರದಾಯ, ಧಾರ್ಮಿಕ ಆಚರಣೆ ಹಾಗೂ ಕಲಾಪ್ರದರ್ಶನಗಳ ಸಮ್ಮಿಲನ ಕಂಡುಬಂತು. ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರಿನ ಶ್ರೀ ಮೂಕಾಂಬಿಕಾ ಚೆಂಡೆ ಬಳಗದ ಚೆಂಡೆ, ವಯೋಲಿನ್ ಹಾಗೂ ಕೀಬೋರ್ಡ್ಗಳ ಸಮ್ಮಿಲನದೊಂದಿಗೆ ಮೂಡಿಬಂದ ಸಿಂಗಾರಿ ಮೇಳ ವಿಶೇಷ ಮೆರುಗು ನೀಡಿತು. ದಕ್ಷಿಣ ಕನ್ನಡದ ಸಾಂಸ್ಕೃತಿಕ ಅಸ್ಮಿತೆಯನ್ನು ಬಿಂಬಿಸುವ ದಶಶಂಖಗಳು, ದಶಕೊಂಬುಗಳು, 30 ಶ್ವೇತಛತ್ರಗಳು, ವೇದಮಂತ್ರಗಳನ್ನು ಪಠಿಸುವ ವಿಪ್ರರ ತಂಡ ಹಾಗೂ ಪ್ರಣತಿ ಹಿಡಿದ 50 ದೇವಕನ್ನಿಕೆಯರ ಭವ್ಯ ಮೆರವಣಿಗೆ ನಡೆಯಿತು. ಸ್ಯಾಕ್ಸೋಫೋನ್ ಮತ್ತು ನಾಗಸ್ವರಗಳ ಮಂಗಳನಾದದ ನಡುವೆ ಭತ್ತದ ತೆನೆ, ಮಾವು, ಹಲಸು, ಕೆಸು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಗ್ರಾಮೀಣ ಜನರ ಆರೋಗ್ಯದ ಕಾಳಜಿಯಿಂದ ರೋಟರಿ ಕ್ಲಬ್ ತೆಕ್ಕಟ್ಟೆಯ ವತಿಯಿಂದ ಉಚಿತ ಚರ್ಮರೋಗ ತಪಾಸಣಾ ಶಿಬಿರವನ್ನು ಮಂಗಳವಾರ ಕುಂಭಾಶಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಂಭಾಶಿ ಮತ್ತು ಇತರ ಸ್ವಯಂಸೇವಾ ಸಂಘಟನೆಗಳ ಸಹಯೋಗದೊಂದಿಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯಕೀಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವಲ್ಲಿ ಇಂತಹ ಶಿಬಿರಗಳ ಮಹತ್ವವನ್ನು ವಿವರಿಸಿದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಚರ್ಮರೋಗ ತಜ್ಞರಾದ ಡಾ. ಸತೀಶ್ ಪೈ ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕುಷ್ಠರೋಗ ಸೇರಿದಂತೆ ವಿವಿಧ ಚರ್ಮರೋಗಗಳ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು. ಚರ್ಮರೋಗಗಳನ್ನು ಆರಂಭಿಕ ಹಂತದಲ್ಲಿಯೇ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಅಡಂಬರದ ಬದುಕನ್ನು ಇಷ್ಟ ಪಡದ ಕಾರಂತರು ನೇರ ನಡೆ ನುಡಿಯ ವ್ಯಕ್ತಿತ್ವವನ್ನು ಹೊಂದಿದವರು. ಯಕ್ಷಗಾನದ ಕುರಿತು ಆಸಕ್ತಿಯನ್ನು ಹೊಂದಿದ ಅವರು ಯಕ್ಷಗಾನದ ಉಳಿವಿಗಾಗಿ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ. ಕಾರಂತರಂತಹ ಸಾಹಿತಿಯನ್ನು ಪಡೆದಿರುವುದು ನಾಡಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎಂದು ಜಾನಪದ ವಿದ್ವಾಂಸ ಮತ್ತು ನಿವೃತ್ತ ಪ್ರಾಂಶುಪಾಲ ಕನರಾಡಿ ವಾದಿರಾಜ ಭಟ್ ಹೇಳಿದರು.  ಅವರು ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ರಂಗೋಲಿ ಕಲಾ ಪರಿಷತ್ ರಿ. ಸಹಯೋಗದಲ್ಲಿ ನಡೆದ ಮಕ್ಕಳಿಗಾಗಿ ಕಾರಂತರು-9 ಶಾಲಾ ವಿದ್ಯಾರ್ಥಿಗಳಿಗೆ ಕಾರಂತರ ಪರಿಚಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಮಕ್ಕಳ ಬಗೆಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ಕಾರಂತರು ಮಕ್ಕಳ ಭೌತಿಕ ಬೆಳವಣಿಗೆಗಾಗಿ ಮಕ್ಕಳ ಸಾಹಿತ್ಯವನ್ನು ರಚಿಸಿದ್ದಾರೆ. ಮಕ್ಕಳ ಕೌಶಲ್ಯಭಿವೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಮಕ್ಕಳ ಸಂಪೂರ್ಣ ಪಾಲ್ಗೋಳ್ಳುವಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸುತ್ತದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ, ಸ್ವಸ್ತಿ ಹೆಗ್ಡೆ 9th (ಹಿಂದಿ ಕಂಠಪಾಠ), ಮೊಹಮ್ಮದ್ ಮಾಯಿಜ್ 7th (ಆರೇಬಿಕ್ ಧಾರ್ಮಿಕ ಪಠಣ), ಚಾರಣ್ಯ ಪ್ರವೀಣ್ ಶೇರೆಗಾರ್ 5th (ಕ್ಲೇ ಮಾಡೆಲಿಂಗ್), ಭಾಗ್ಯಲಕ್ಷಿ ಶೆಣೈ 7th (ಭಕ್ತಿಗೀತೆ), ಶಬರೀಶ್ 7th (ಆಶುಭಾಷಣ), ತನೀಶ್ ಜೆ ಪೂಜಾರಿ 7th (ಮಿಮಿಕ್ರಿ). ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More