Author: ನ್ಯೂಸ್ ಬ್ಯೂರೋ

ಕುಂದಾಪುರ:  ಉದ್ಯೋಗ ಅರಸಿ ಪಟ್ಟಣದ ಕಡೆಗೆ ಮುಖಮಾಡುವ ಯುವಕರು, ಪಟ್ಟಣದ ಸಂಸ್ಕೃತಿ ಹಳ್ಳಿಗೆ ಹೊತ್ತು ಹಿಂದಿರುಗುತ್ತಿದ್ದಾರೆ. ಆದರೆ ಆಧುನಿಕ ತಳಕು ಬಳಕಿನೊಂದಿಗೆ ನಮ್ಮೂರಿನ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಉದ್ಘೋಷಕಿ ರೇವತಿ ಶೆಟ್ಟಿ ಕೋಟ ಹೇಳಿದರು. ಅವರು ಇಲ್ಲಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಕನ್ನಡ ವೇದಿಕೆಯ ಕುಂದಾಪುರದ ‘ಡಿಂಡಿಮ’ ಎರಡನೇ ಭಾನುವಾರದ ಕಾರ್ಯಕ್ರಮದ ಮಾತಿನರಮನೆಯಲ್ಲಿ ‘ನಮ್ಮೂರ ಕಿಂಡಿಯಲ್ಲಿ ಕಂಡ ಕನ್ನಡ ಜಗತ್ತು’ ಎಂಬ ವಿಷಯದ ಕುರಿತು ಮಾತನಾಡಿದರು. ಕುಂದಗನ್ನಡದಲ್ಲಿ ಎಲ್ಲಿಯೂ ಕಾಣದ ಕಂಪಿದೆ, ವೈವಿಧ್ಯತೆ ಇದೆ. ಕುಂದಗನ್ನಡಿಗರ ಸಾಧನೆಯೂ ಅನನ್ಯವಾದುದ್ದಾರೂ ಗುರುತಿಸಿದ್ದು ವಿರಳ. ಕುಂದಗನ್ನಡದ ಬಗೆಗೆ ಕೀಳರಿಮೆಯ ಹೊಂದುವ ಅಗತ್ಯವಿಲ್ಲ. ವ್ಯಾವಹಾರಿಕವಾಗಿ ಯಾವ ಭಾಷೆಯನ್ನು ಬಳಸಿದರೂ ಕೊನೆಪಕ್ಷ ಮನೆಯಲ್ಲಾದರೂ ಕುಂದಗನ್ನಡವನ್ನು ಬಳಸೋಣ ಆ ಮೂಲಕ ಬೆಳೆಸೋಣ ಎಂದವರು ಕರೆ ನೀಡಿದರು. ಕುಂದಾಪುರದ ಪೌರಕಾರ್ಮಿಕೆ ಇಂದಿರಾ ಅವರಿಗೆ ನುಡಿ ಗೌರವ ಸಮರ್ಪಿಸಲಾಯಿತು. ಮಾತಿನರಮನೆಯಲ್ಲಿ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ, ಹಳ್ಳಿ ಶ್ರೀನಿವಾಸ ಭಟ್, ಉಮೇಶ್ ಪುತ್ರನ್ ಉಪಸ್ಥಿತರಿದ್ದರು. ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಮಣ್ಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ…

Read More

ಕುಂದಾಪುರ: ಇಂದಿನ ಕಾಲೇಜುಗಳಲ್ಲಿ ಕ್ರೀಡೆಗೆ ಬೇಕಾದ ಉತ್ತಮ ಸೌಲಭ್ಯಗಳು ದೊರೆಯುತ್ತಿದ್ದರೂ ಕ್ರೀಡೆಯಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಮುನ್ನಡೆಯಿರಿ ಎಂದು ಕರ್ನಾಟಕ ಬ್ಯಾಂಕ್‌ನ ನಿರ್ದೇಶಕರಾದ ಡಾ| ಹೆಚ್. ರಾಮ್‌ಮೋಹನ್ ಹೇಳಿದರು. ಅವರು ಭಂಡಾರ್‌ಕಾರ್ಸ್ ಪಿ.ಯು ಕಾಲೇಜು ಕುಂದಾಪುರ ಮತ್ತು ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಪಿ.ಯು ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು, ಎಸ್.ಪಿ. ತೋಳಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಮಣಿಪಾಲದ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತರಾಮ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಕುಂದಾಪುರದ ಭಂಡಾರ್‌ಕಾರ್ಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್.ಗೊಂಡ, ಭಂಡಾರ್‌ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ಕೆ., ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವಾಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಪೂರ್ವಾಧ್ಯಕ್ಷ ರಾಘವೇಂದ್ರಚರಣ ನಾವಡ ಉಪಸ್ಥಿತರಿದ್ದರು. ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕೃಷಿ ಕಾರ್ಯಗಳ ಯಾಂತ್ರೀಕರಣ ಹಾಗೂ ಹೈಕೋರ್ಟ್‌ನ ತಡೆಯಾಜ್ಞೆಯಿಯಿಂದಾಗಿ ಕೃಷಿಗೆ ಪೂರಕ ಕ್ರೀಡೆಯಾದ ಕಂಬಳಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿತ್ತು. ಆದರೆ ನೂರಾರು ವರ್ಷಗಳಿಂದ ಮುಂದುವರಿದು ಬಂದ ಕಂಬಳ ಕ್ರೀಡೆ ಮತ್ತೆ ತನ್ನ ಸಂಪ್ರದಾಯದೊಂದಿಗೆ ಹೊಸತನವನ್ನು ಕಂಡುಕೊಂಡಿದೆ ಎಂದು ಬೈಂದೂರು ವ್ಯ. ಸೇ. ಸ. ಸಂಘದ ಅಧ್ಯಕ್ಷ ತಗ್ಗರ್ಸೆ ನಾರಾಯಣ ಹೆಗ್ಡೆ ಹೇಳಿದರು. ಅವರು ನಾವುಂದ ವೆಂಕಟರಮಣ ಗಾಣಿಗರ ಕಂಬಳಗದ್ದೆ ವಠಾರದಲ್ಲಿ ಬೈಂದೂರು ವಲಯ ಕಂಬಳ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಸಮಾರಂಭದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗ್ಡೆ, ಮರವಂತೆ ಬಡಾಕೆರೆ ವ್ಯ. ಸೇ.ಸ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಮಹೇಂದ್ರ ಪೂಜಾರಿ, ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಬೈಂದೂರು ರೈತಸಂಘದ ಅಧ್ಯಕ್ಷ ದೀಪಕ್…

Read More

ಕುಂದಾಪುರ: ನಗರಗಳಲ್ಲಿ ಬದುಕುವ ಉತ್ಸಾಹಿಗಳಿಗೊಂದು ಹೊಸ ಹುರುಪಿ ನೀಡಿ, ಪರಿಸರ ಸಂರಕ್ಷಣೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ಒಂದಿಷ್ಟು ಮಂದಿ ಸೈಕಲ್ ಸವಾರಿಗೆ ಹೊರಟಿದ್ದರು. ಬೆಂಗಳೂರು ನಗರನ್ನು ಬಿಟ್ಟು ಸೈಕಲ್ ಮೂಲಕವೇ ತಿರುಗಾಟಕ್ಕೆ ಹೊರಟ ಯುವಕರ ತಂಡ ಬೆಟ್ಟ ಗುಡ್ಡ, ಕಾಡು ಗಿರಿಧಾಮಗಳನ್ನು ಹಾದು ಮರವಂತೆಯ ಸಮದ್ರದಂಚಿಗೆ ತಲುಪುವ ಮೂಲಕ ಟಾಸ್ಕ್ ಪೂರ್ಣಗೊಳಿಸಿದ್ದಾರೆ. [quote font_size=”14″ bgcolor=”#ffffff” bcolor=”#81d742″ arrow=”yes” align=”right”]ಐಸೈಕಲ್ ಕುರಿತು: ಐಸೈಕಲ್ ಬೆಂಗಳೂರಿನಲ್ಲಿ ಮುಂಚೂಣಿಯಲ್ಲಿರುವ ಸೈಕ್ಲಿಂಗ್ ಈವೆಂಟ್ ಸಂಸ್ಥೆ. ಬೆಂಗಳೂರಿನ ನೂರಾರು ಯುವ ಸೈಕಲ್ ಉತ್ಸಾಹಿಗಳು ಸೈಕ್ಲಿಂಗ್‌ನ ಉಪಯೋಗದ ಜೊತೆಗೆ ಅದರ ಅದ್ಭುತ ಮೋಜನ್ನು ಸ್ವತಃ ಮನಗಾಣಿಸುವ ಜೊತೆಗೆ ಇತರರಿಗೂ ಅದರ ಚಮತ್ಕಾರವನ್ನು ಮನವರಿಕೆ ಮಾಡಲು, ತಮ್ಮ ಸಂತೋಷವನ್ನು ಸಮಾನ ಮನಸ್ಕರರ ಜೊತೆಗೆ ಹಂಚಿಕೊಳ್ಳಲು ಆರಂಭಿಸಿದ ಸಂಸ್ಥೆಯೇ ಐಸೈಕಲ್. ಸೈಕಲ್ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಐಸೈಕಲ್ ಸಂಸ್ಥೆ ಸೈಕ್ಲಿಂಗ್ ಗಾಗಿ ನುರಿತ ಸಿಬ್ಭಂಧಿಗಳನ್ನು ಹೊಂದಿದೆ.[/quote] ಸೈಕಲ್ ಸವಾರಿ ಬಯಸುವ ಉತ್ಸಾಹಿಗಳಿಗಾಗಿ ‘ಗ್ರೇಟ್ ಮಲ್ನಾಡ್ ಚಾಲೆಂಜ್-2015’ (ಎಸ್‌ಬಿಐ-ಜಿಎಂಸಿ 2015) ಸೈಕ್ಲಿಂಗ್ ಚಾಲೆಂಜ್…

Read More

ಕೊಲ್ಲೂರು: ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆ ಇವರ ಹೊರಾಂಗಣ ರಕ್ತದಾನ ಶಿಭಿರಕ್ಕೆ ಅವಶ್ಯವಿರುವ ರೂ. 11,12,383.00 ವೆಚ್ಛದ ಅಂಬುಲೆನ್ಸ್ ನ್ನು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣ ಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯ ಅಧ್ಯಕ್ಷ ಎಸ್. ಜಯಕರ ಶೆಟ್ಟಿ, ಕಾರ್ಯದರ್ಶಿ ವೈ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಸಂಚಾಲಕ ಆವರ್ಸೆ ಮುತ್ತಯ್ಯ ಶೆಟ್ಟಿ ಉಪಸ್ಥಿತರಿದ್ದರು. ಕೆ. ನರಸಿಂಹ ಭಟ್ ಇವರು ವಾಹನದ ಪೂಜೆಯನ್ನು ನೆರವೇರಿಸಿ ಹಾರೈಸಿದರು.

Read More

ಬೈಂದೂರು: ಕಳೆದ 18ವರ್ಷಗಳಿಂದ ಬೈಂದೂರು ಬಿಎಸ್‌ಎನ್‌ಎಲ್ ಕಛೇರಿಯಲ್ಲಿ ಹಿರಿಯ ಟೆಲಿಕಾಂ ಕಛೇರಿ ಸಹಾಯಕಿ ಆಗಿ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ತೆರೆಸಾ ಪೌಲೂಸ್ ಅವರನ್ನು ಕಛೇರಿಯ ಸಿಬ್ಬಂಧಿಗಳು ಬೀಳ್ಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ದೂರವಾಣಿ ಸಬ್‌ಡಿವಿಜನ್ ಇಂಜೀನಿಯರ್ ಭಾಸ್ಕರ್ ಭಟ್ ವಹಿಸಿದ್ದರು. ಕುಂದಾಪುರ ವಿಭಾಗೀಯ ಇಂಜಿನಿಯರ್ ಉಪ್ಪುಂದ ಸತ್ಯನಾರಾಯಣ ಪುರಾಣಿಕ್ ನಿವೃತ್ತರಿಗೆ ಬಿಎಸ್‌ಎನ್‌ಎಲ್ ಸ್ಮರಣಿಕೆ ನೀಡಿ ಅವರ ಸೇವೆಯನ್ನು ಸ್ಮರಿಸಿ ಶುಭಕೋರಿದರು. ಈ ಸಂದರ್ಭ ಸಿನೀಯರ್ ಸುಪರ್‌ವೈಸರ್ ಮೋಹನ ಹೆಬ್ಬಾರ್, ಅಯ್ಯಪ್ಪನ್, ಹಿರಿಯ ಮೆಕಾನಿಕ್‌ಗಳಾದ ರಾಮ ಮೊಗವೀರ, ಪಿ. ಭಾಸ್ಕರ, ಬಿ. ನಾಗಪ್ಪ, ಗಂಗಾಧರ, ಕುಪ್ಪಯ್ಯ, ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದು ನಿವೃತ್ತರಿಗೆ ಶುಭಕೋರಿದರು.

Read More

ಬೈಂದೂರು: ರಾಜ್ಯದಲ್ಲಿರುವ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿರಿಸಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ವರ್ಗದವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಅವರಿಂದಾಗುತ್ತಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಯಡ್ತರೆ ಗ್ರಾಪಂ ಆವರಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಶ್ರಮಶಕ್ತಿ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಯಡಿ ರೂ. 101.42ಲಕ್ಷ ಸಾಲ, ಸಹಾಯಧನ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದರು. 2015-16ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಾದ ಶ್ರಮಶಕ್ತಿ ಯೋಜನೆಯಡಿ ಒಟ್ಟು 144 ಫಲಾನುಭವಿಗಳಿಗೆ ರೂ. 33.70ಲಕ್ಷ ಕಿರುಸಾಲ ಯೋಜನೆಯಡಿ ಒಟ್ಟು 25 ಸ್ವಸಹಾಯ ಸಂಘಗಳ 299 ಫಲಾನುಭವಿಗಳಿಗೆ ರೂ. 29.90ಲಕ್ಷ, ಅರಿವು ವಿದ್ಯಾಭ್ಯಾಸ ಸಾಲಯೋಜನೆಯಡಿ ಒಟ್ಟು 28ಫಲಾನುಭವಿಗಳಿಗೆ ರೂ.24.40ಲಕ್ಷ, ಸ್ವಾವಲಂಬನಾ ಯೋಜನೆಯಡಿ ಒಟ್ಟು 26 ಫಲಾನುಭವಿಗಳಿಗೆ ರೂ.6.66ಲಕ್ಷ ಹಾಗೂ ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆಯಡಿಯಲ್ಲಿ 13 ಫಲಾನುಭವಿಗಳಿಗೆ ರೂ. 6.76ಲಕ್ಷ…

Read More

ಬೈಂದೂರು: ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದ ಜನರಿಗೆ ತಮ್ಮ ಆರೋಗ್ಯ ಸಮಸ್ಯೆಯಿಂದ ದೂರದ ಆಸ್ಪತ್ರೆಗಳಗೆ ಹೋಗಲು ಅನಾನುಕೂಲತೆಯಿಂದ ಕಷ್ಟಸಾಧ್ಯ. ಹೀಗಾಗಿ ಆಯಾ ಹಳ್ಳಿಯಲ್ಲಿರುವ ಸಂಘ-ಸಂಸ್ಥೆಗಳು ಆರೋಗ್ಯ ಶಿಬಿರಗಳ ಮೂಲಕ ತಜ್ಞವೈದ್ಯರನ್ನು ಹಳ್ಳಿಗೆ ಕರೆಯಿಸಿ ಚಿಕಿತ್ಸೆ ಕೊಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಯಡ್ತರೆ ಗ್ರಾಪಂ ವ್ಯಾಪ್ತಿಯ ಸಹಿಪ್ರಾ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಸಂಘದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಇವರ ಸಹಯೋಗದಲ್ಲಿ ಆಯೋಜಿಸಲಾದ ಉಚಿತ ದಂತ, ನೇತ್ರ ಚಿಕಿತ್ಸಾ ಮತ್ತು ರಕ್ತವರ್ಗೀಕರಣ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘ ಪ್ರಾರಂಭಗೊಂಡ ದಿನದಂದೇ 55 ವರ್ಷ ಇತಿಹಾಸವುಳ್ಳ ಈ ಭಾಗದ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ವ್ಯವಸ್ಥಿತವಾಗಿ ಬೃಹತ್ ಮಟ್ಟದ ಆರೋಗ್ಯ ಶಿಬಿರ ಸಂಘಟಿಸಿ ಈ ಭಾಗದ ಜನರಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಡ್ತರೆ ಗ್ರಾಪಂ ಅಧ್ಯಕ್ಷ…

Read More

ಬೈಂದೂರು: ಕಿಂಡಿ ಅಣೆಕಟ್ಟು(ಬ್ಯಾರೇಜ್) ನಿರ್ಮಾಣದಿಂದ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಮದ್ದೋಡಿ-ಕುಂಜಳ್ಳಿ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ರೂ. 35ಲಕ್ಷ ವೆಚ್ಚದ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಈ ಮೊದಲು ಇಲ್ಲಿನ ರೈತರು ಹರಿಯುವ ನದಿಗೆ ಸ್ವತಃ ಕಟ್ಟು ನಿರ್ಮಿಸಿ ಕೃಷಿಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬ್ಯಾರೇಜ್‌ನಿಂದ ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದರು. ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ್ ಗಾಣಿಗ, ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಎಸ್. ರಾಜು ಪೂಜಾರಿ, ಕೆ. ರಮೇಶ ಗಾಣಿಗ, ರಾಮ ಕೆ., ಗುತ್ತಿಗೆದಾರ ಪ್ರದೀಪ್ ಶೆಟ್ಟಿ, ಇಂಜಿನಿಯರ್ ಅಲ್ವಿನ್ ಹಾಗೂ ಊರಿನವರು ಉಪಸ್ಥಿತರಿದ್ದರು.

Read More

ಬೈಂದೂರು: ಇಲ್ಲಿಗೆ ಸಮೀಪದ ಶಿರೂರು ಗ್ರೀನ್ ವ್ಯಾಲಿ ಶಾಲೆಯ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ತಿರುವಿನಲ್ಲಿ ಇನ್ನೋವಾ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡು ಓರ್ವನಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಮಧ್ಯಾಹ್ನದ ಸುಮಾರಿಗೆ ನಡೆದಿದೆ. ಭಟ್ಕಳ ಮೂಲಕ ಶಾದಿಕ್ ಹಾಗೂ ಮಹಮ್ಮದ್ ಮೀರಾ ಗಂಭೀರವಾಗಿ ಗಾಯಗೊಂಡವರು. ಭಟ್ಕಳದವರಾದ 6ಮಂದಿ ಬೆಳಿಗ್ಗೆ ದುಬೈನಿಂದ ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿದು ಅಲ್ಲಿಂದ ಇನೋವಾ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಹುಬ್ಬಳಿಯಿಂದ ಉಡುಪಿಗೆ ಕಡೆಗೆ ಸಾಗುತ್ತಿದ್ದ ಟ್ರಕ್ ಒಂದು ಡಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಅದರಲ್ಲಿದ್ದ 6 ಮಂದಿಯಲ್ಲಿ ಒಬ್ಬ ಗಂಭೀರ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯವಾಗಿತ್ತು. ಈ ಪೈಕಿ ಈರ್ವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More