ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಂದಿನ ಸ್ಪರ್ಧಾತ್ಮಕ ಶಿಕ್ಷಣ ರಂಗದಲ್ಲಿ ಶಿಕ್ಷಕರ ಎದುರು ಹಲವಾರು ಸವಾಲುಗಳಿವೆ. ಆ ಸವಾಲುಗಳನ್ನು ಎದುರಿಸಲು ನಮ್ಮ ನಮ್ಮ ಶಿಕ್ಷಕರು ಸಮರ್ಥರಾಗಿದ್ದರೂ ಕೂಡ, ಸವಾಲಿನ ಒಳಮಿಡಿತಗಳನ್ನು ಅರ್ಥಮಾಡಿಕೊಂಡು ಆ ದಿಸೆಯಲ್ಲಿ ಸಾಗಿ ಮತ್ತು ಅವುಗಳನ್ನು ಯಶಸ್ವಿಯಾಗಿ ಎದುರಿಸಿ ಶೈಕ್ಷಣಿಕ ರಂಗವನ್ನು ಬಲಪಡಿಸಬೇಕು. ಜೊತೆಗೆ ಹೊಸ ಹೊಸ ಶೈಕ್ಷಣಿಕ ಸಾಧ್ಯತೆಗಳ ಬಗ್ಗೆ ತೆರೆದುಕೊಳ್ಳುತ್ತಾ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಲೋಕೇಶ್ ಸಿ. ತಿಳಿಸಿದರು. ಅವರು ಶನಿವಾರ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿ ಹಾಜಿ ಅಬ್ದುಲ್ಲಾ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಏಸ್ಕ್ರೀಟ್ ಅಡೇಷನ್ಸ್ ಇಂಡಿಯಾ ಪ್ರೈ.ಲಿ, ಉಸಿರು ಕೋಟ ಅವರ ಆಶ್ರಯದಲ್ಲಿ ನಡೆದ ೫ನೆಯ ವರ್ಷದ ಡಾ| ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಶಿಕ್ಷಣ ರಂಗದ ಸೂಕ್ಷ್ಮ ಒಳತೋಟಿಗಳನ್ನು ಅರಿತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನವೆಂಬರ್ 1ರ ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಹಾಗೂ ‘ಡಾ.ಎಚ್. ಶಾಂತರಾಮ್ ಯಕ್ಷಗಾನ ಪುರಸ್ಕಾರ’ ಕಾರ್ಯಕ್ರಮದ ಕುರಿತ ಆಯ್ಕೆ ಸಮಿತಿಯ ಪೂರ್ವಭಾವಿ ಸಭೆಯು ಡಾ.ಎಚ್. ಶಾಂತರಾಮ್ ಅವರ ಸ್ವಗೃಹದಲ್ಲಿ ನಡೆಯಿತು. ಯಕ್ಷಗಾನ ಪುರಸ್ಕಾರಕ್ಕೆ ಬಡಗು ತಿಟ್ಟಿನ ಖ್ಯಾತ ಹಾಸ್ಯಗಾರರಾದ ಮಹಾಬಲೇಶ್ವರ ಭಟ್, ಕ್ಯಾದಗಿ ಅವರನ್ನು ಆಯ್ಕೆ ಮಾಡಲಾಯಿತು. ಶ್ರೀರಂಗ ತುಲಾಭಾರ ಪ್ರಸಂಗದ ತಾಳಮದ್ದಲೆ ಮಾಡಲು ನಿರ್ಧರಿಸಲಾಯಿತು. ಹಿಮ್ಮೇಳದ ಭಾಗವತರಾಗಿ ಚಂದ್ರಕಾಂತ, ಮೂಡುಬೆಳ್ಳೆ, ಮದ್ದಲೆಯಲ್ಲಿ ಎನ್.ಜಿ ಹೆಗಡೆ,ಯಲ್ಲಾಪುರ, ಚಂಡೆಯಲ್ಲಿ ರಾಮಕೃಷ್ಣ,ಮಂದಾರ್ತಿ. ಅರ್ಥಧಾರಿಗಳಾಗಿ ರಾಧಾಕೃಷ್ಣ,ಕಲ್ಚಾರ್, ಪವನ್,ಕಿರಣಕೆರೆ, ಹರೀಶ್, ಬಲಂತಿಮೊಗರು, ಸುಜಯೇಂದ್ರ ಹಂದೆ ಕೋಟ, ಸ್ಫೂರ್ತಿ ಶಾನುಭಾಗ್, ಮಂದಾರ್ತಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಪೂರ್ವಭಾವಿ ಸಭೆಯಲ್ಲಿ ಡಾ.ಎಚ್. ಶಾಂತರಾಮ್, ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ. ಶಾಂತರಾಮ್ ಪ್ರಭು, ರಾಜ್ಯೋತ್ಸವ ಯಕ್ಷಗಾನ ತಾಳಮದ್ದಳೆ ಪುರಸ್ಕಾರ ಸಮಿತಿಯ ಸದಸ್ಯರಾದ ಕಿಶನ್ ಹೆಗ್ಡೆ, ಪಳ್ಳಿ, ಮುರಳಿ, ಕಡೆಕಾರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮತ್ತು ಕಾಲೇಜಿನ ಲಲಿತ ಕಲಾ ಸಂಘದ ಸಂಚಾಲಕರಾದ ಶಶಾಂಕ್ ಪಟೇಲ್, ಕೆಳಮನೆ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ತೆಕ್ಕಟ್ಟೆ ಕೊಮೆ ನಿವಾಸಿ ಹದಿನಾಲ್ಕು ವರ್ಷ ಪ್ರಾಯದ ಬಾಲಕನೋರ್ವನಿಗೆ ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ವ್ಹೀಲ್ಚೇರ್ ಮತ್ತು ಆರ್ಥಿಕ ನೆರವನ್ನು ಭಾನುವಾರ ನೀಡಲಾಯಿತು. ಅಲ್ಲದೇ ಬಾಲಕನ ಸಹೋದರಿಯ ಪಿ.ಯು.ಸಿ.ವರೆಗಿನ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚವನ್ನು ಕ್ಲಬ್ ವತಿಯಿಂದ ಬರಿಸುವ ಬಗ್ಗೆ ಆಶ್ವಾಸನೆ ನೀಡಲಾಯಿತು. ಈ ಸಂದರ್ಭ ಮಾಜಿ ಸಹಾಯಕ ಗವರ್ನರ್ ಹಾಗೂ ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ, ಜೋನಲ್ ಲೆಫ್ಟಿನೆಂಟ್ ದಯಾನಂದ್ ಆಚಾರ್, ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ. ಮೆಂಡನ್, ಮಾಜಿ ಅಧ್ಯಕ್ಷರಾದ ಡಾ. ಗಣೇಶ್ ಯು, ಸುರೇಶ್ ಆಚಾರ್, ಪ್ರಕಾಶ್ ಹಂದಟ್ಟು, ಸದಸ್ಯರಾದ ಭಾಸ್ಕರ್ ಪೂಜಾರಿ, ರಾಘವೇಂದ್ರ ಪೂಜಾರಿ, ವಸಂತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬಿಲ್ಲವ ಯುವ ವೇದಿಕೆ ಪಾಂಡೇಶ್ವರ ನೇತೃತ್ವದಲ್ಲಿ ಕಲ್ಪತರು ಸ್ವ – ಸಹಾಯ ಸಂಘಗಳ ವಾರ್ಷಿಕ ಸಭೆ ಪಾಂಡೇಶ್ವರ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಕೋಟ ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ಮಹಾಂತೇಶ್ ಅವರು ಪ್ರಸ್ತುತ ಮೊಬೈಲ್ ಅಪರಾಧ ಬಗ್ಗೆ ಮಹಿಳಾ ಸುರಕ್ಷಿತೆ ಬಗ್ಗೆ ಮಾಹಿತಿ ಒದಗಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ನರೇಂದ್ರ ಕುಮಾರ್ ಕೋಟ ಒಟ್ಟಾರೆ ಸಾಮಾಜಿಕ ವ್ಯವಸ್ಥೆ ಅಡಿಯಲ್ಲಿ ಎಲ್ಲರೂ ಒಗ್ಗಟ್ಟು ಒಮ್ಮತ ದಲ್ಲಿ ಬಾಳಬೇಕು ಎಂಬುದನ್ನು ಸೂಚಿಸಿದರು. ಸಾಹಿತಿ ನರೇಂದ್ರ ಕುಮಾರ್, ಕೋಟ ಆರಕ್ಷರ ಕ್ರೈಂ ವಿಭಾಗದ ಠಾಣಾಧಿಕಾರಿ ಮಹಾಂತೇಶ್ ಜಬಾಗೌಡ ಇವರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಂಘದ ಅಧ್ಯಕ್ಷರಾದ ರವಿಕಿರಣ್ ಪೂಜಾರಿ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಸ್ತಾನ ಬಿಲ್ಲವ ಸಂಘದ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ ಪಾಂಡೇಶ್ವರ ಪಂಚಾಯತ್ ಮಾಜಿ ಸದಸ್ಯೆ ಸುಜಾತಾ ವೆಂಕಟೇಶ್ ಪೂಜಾರಿ ಉಸ್ಥಿತಸಿದ್ದರು. ಕಲ್ಪತರು ಸಂಘದ ಸೀಮಾ ವಿಜಯ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿಯ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನಲ್ಲಿ ಸೆಪ್ಟೆಂಬರ್ 11, 12 ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್-ಕಾಲೇಜು ಚೆಸ್ ಚಾಂಪಿಯನ್ಶಿಪ್ನಲ್ಲಿ ಪುರುಷರ ವಿಭಾಗದಲ್ಲಿ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ತಂಡ ಎರಡನೇ ಬಾರಿ ಪ್ರಥಮ ಸ್ಥಾನವನ್ನು ಗಳಿಸಿ ಗುಲಾಬಿ ಶಿವರಾಮ ನೊಂಡ ಪರ್ಯಾಯ ಪಾರಿತೋಷಕವನ್ನು ಪಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಕ್ಷಿತ್ ರಾವ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ ಟಿ.ಎನ್. ಶುಭ ಹಾರೈಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್, ಕುಂದಾಪುರದ ಬಿ.ಎಸ್ಸಿ. ನರ್ಸಿಂಗ್ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವಿಕೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಕಮಲಾ ಬಾಳಿಗ ಮೆಮೋರಿಯಲ್ ಹಾಲ್, ಎ.ವಿ. ಬಾಳಿಗ ಆಸ್ಪತ್ರೆ, ದೊಡ್ಡಣಗುಡ್ಡೆ ಉಡುಪಿ ಇಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ದೇಶ ಆತ್ಮಹತ್ಯೆ ತಡೆಗಟ್ಟುವಿಕೆಯ ಕುರಿತು ಜಾಗೃತಿ ಮೂಡಿಸುವುದು, ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸುವುದು ಹಾಗೂ ಭಾವನಾತ್ಮಕ ಸಂಕಷ್ಟದಲ್ಲಿರುವವರು ಸಮಯೋಚಿತವಾಗಿ ಸಹಾಯ ಮತ್ತು ಬೆಂಬಲವನ್ನು ಪಡೆಯುವಂತೆ ಪ್ರೇರೇಪಿಸುವುದಾಗಿತ್ತು. ಕಾರ್ಯಕ್ರಮಕ್ಕೆ ಎ.ವಿ.ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಹಾಗೂ ನರ್ಸಿಂಗ್ ಸೂಪರಿಂಟೆಂಡೆಂಟ್ ಪ್ರಮೀಳಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ನ ಸಹಾಯಕ ಉಪನ್ಯಾಸಕಿ ಚೇತನಾ ಆರ್. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಂಚನಾ ನಿರೂಪಿಸಿದರು. ಅಂಕಿತಾ ಸ್ವಾಗತ ಭಾಷಣ ಮಾಡಿದರು ಹಾಗೂ ಶೋಭಾ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಿಂದ ನೃತ್ಯ, ಮನೋವೈಜ್ಞಾನಿಕ ಆಟ, ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.ಕಿರು ನಾಟಕದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಮತ್ತು ಕಾಮರ್ಸ್ ಅಸೋಸಿಯೇಶನ್ ಉದ್ಘಾಟನಾ ಕಾರ್ಯಕ್ರಮವು ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸುಕೇಶ್ ಚಂದ್ರಶೇಖರ ಅವರು ಮಾತನಾಡಿ, ವಾಣಿಜ್ಯ ವಿಭಾಗವು ಕೇವಲ ಲೆಕ್ಕಪತ್ರಕ್ಕೆ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಹಣಕಾಸು, ತೆರಿಗೆ, ವಿಮೆ, ಉದ್ಯಮಶೀಲತೆ ನಿರ್ವಹಣೆ, ಡಿಜಿಟಲ್ ವಾಣಿಜ್ಯ & ಸರಕಾರಿ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶ ಒದಗಿಸುತ್ತದೆ. ಆದ್ದರಿಂದ ಸರಿಯಾದ ಶಿಕ್ಷಣ, ವೃತ್ತಿಪರ ಕೌಶಲ್ಯ, ಕಂಪ್ಯೂಟರ್ ಜ್ಞಾನ, ಸಂವಹನ ಕೌಶಲ್ಯ ಮತ್ತು ಪ್ರಾಯೋಗಿಕ ಅನುಭವ ಹೊಂದಿರುವ ವಾಣಿಜ್ಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವಿಚಂದ್ರ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ಪೂಜಾ ಕಾರ್ಯಕ್ರಮ ನಿರೂಪಿಸಿದರು. ಐಕ್ಯೂ ಎಸಿ ಘಟಕ ಸಂಯೋಜಕ ಸಂದೀಪ ಕೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕಳೆದ ಹತ್ತು ವರ್ಷಗಳಿಂದ ನಿರಂತರ ಲಾಭಾಂಶದೊAದಿಗೆ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಿರುವ ಆಳ್ವಾಸ್ ಸಹಕಾರ ಸಂಘವು ತನ್ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ. ಸಂಘದ ವತಿಯಿಂದ ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ಗೆ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ಇದರ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ದೀಪ ಬೆಳಗಿಸುವ ಮೂಲಕ ಡಯಾಲಿಸಿಸ್ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರೋಗ್ಯ ಸೇವೆಯ ಅಗತ್ಯವಿರುವ ಜನರಿಗೆ ಗುಣಮಟ್ಟದ ಹಾಗೂ ಕೈಗೆಟಕುವ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಇಂತಹ ಕೊಡುಗೆಗಳು ಮಹತ್ವದ್ದಾಗಿವೆ. ಆಳ್ವಾಸ್ ಸಹಕಾರ ಸಂಘವು ಕಳೆದ ಒಂದು ದಶಕದಿಂದ ತನ್ನ ಕಾರ್ಯಚಟುವಟಿಕೆಗಳ ಮೂಲಕ ಉತ್ತಮ ಆರ್ಥಿಕ ಫಲಿತಾಂಶ ದಾಖಲಿಸುವುದರ ಜೊತೆಗೆ, ಸಂಘದ ಉದ್ದೇಶಕ್ಕೆ ಅನುಗುಣವಾಗಿ ಲಾಭಾಂಶದ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ. ವಿಶೇಷವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶಾರದೋತ್ಸವ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ಕೆ ಸೀಮಿತಗೊಳ್ಳದೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳ ಮೂಲಕ ವೇದಿಕೆ ಕಲ್ಪಿಸುತ್ತಿದೆ ಇದು ಪಾಂಡೇಶ್ವರ ಶಾರದೋತ್ಸವ ವೇದಿಕೆ ಸಾಕ್ಷಿ ಎಂದು ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು. ಅವರು ಶುಕ್ರವಾರ ಕೋಟ ಅಮೃತೇಶ್ವರೀ ದೇಗುಲದಲ್ಲಿ ಪಾಂಡೇಶ್ವರ ಶಾರದೋತ್ಸವ ಸಮಿತಿ 33ನೇ ವರ್ಷದ ಶಾರದೋತ್ಸವ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಹಬ್ಬ ಹರಿದಿನಗಳು ಗ್ರಾಮದ ಒಗ್ಗೂಟ್ಟಿನ ಪ್ರದರ್ಶನದ ಜೊತೆಗೆ ಜನಸಮುದಾಯವನ್ನು ಧಾರ್ಮಿಕವಾಗಿ ಗಟ್ಟಿಗೊಳಿಸಲಿದೆ ಈ ದಿಸೆಯಲ್ಲಿ ಶಾರದೋತ್ಸವ ಸಂಭ್ರಮದ ತೊರಣವಾಗಿ ಭಕ್ತಾದಿಗಳ ಸಮ್ಮಿಲನಕ್ಕೆ ಸಾಕ್ಷಿಯಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಚಂದ್ರಮೋಹನ್ ಪೂಜಾರಿ, ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ, ಚಂದ್ರ ಆಚಾರ್, ಜೀರ್ಣೋದ್ಧಾರ ಸಮಿತಿಯ ಭುಜಂಗ ಗುರಿಕಾರ, ಸಮಿತಿಯ ಗೌರವಾಧ್ಯಕ್ಷ ಪ್ರತಾಪ್ ಶೆಟ್ಟಿ ಸಾಸ್ತಾನ, ಉಪಾಧ್ಯಕ್ಷೆ ಲೀಲಾವತಿ ಗಂಗಾಧರ್,ಕಾರ್ಯದರ್ಶಿ ದಿನಕರ್ ಪಾಂಡೇಶ್ವರ,ಕೋಶಾಧಿಕಾರಿ ವಿಶ್ವನಾಥ ಆಚಾರ್, ಸಮಿತಿಯ ಪ್ರಮುಖರಾದ ನಾರಾಯಣ ಆಚಾರ್, ಸುಮಿತ್ರಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಬಾಕ್ಸಿಂಗ್ನಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅನ್ವಿತ್ ಪೂಜಾರಿ ಬಾಕ್ಸಿಂಗ್ ಅಖಾಡದಲ್ಲಿ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ದಿತೀಜ್ ಬೆಳ್ಳಿ ಪದಕದ ಸಾಧನೆಯೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
