ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ಸಂಸ್ಮರಣೆ ಮತ್ತು ನವೀಕೃತ ಆರ.ಎನ್.ಶೆಟ್ಟಿ ಸಭಾಂಗಣವನ್ನು ಉದ್ಘಾಟನೆ ಕುಂದಾಪುರ: ಶಿಕ್ಷಣವೆನ್ನುವುದು ಬದುಕಿಗೆ ದಾರೀಪವಾಗುವುದಲ್ಲದೇ ಸಮೃದ್ಧ ಬದುಕನ್ನು ಕಟ್ಟಿಕೊಡುತ್ತದೆ. ಅಂತಹ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟವರನ್ನು ಸ್ಮರಿಸುವುದು ಅತ್ಯಗತ್ಯ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಹೆಚ್. ಎಸ್. ಬಲ್ಲಾಳ್ ಹೇಳಿದರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರ ಸಂಸ್ಮರಣೆ ಮತ್ತು ನವೀಕೃತ ಆರ.ಎನ್.ಶೆಟ್ಟಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿನಾಡಿದ ಅವರು ಜನನ ಮರಣಗಳ ನಡುವಿನ ಕಿರು ಅವಧಿಯ ಬದುಕಿನಲ್ಲಿ ಪರೋಪಕಾರಿಯಾಗದಿದ್ದರೇ ಬದುಕಿದ್ದೂ ಇಲ್ಲದಂತಾಗುತ್ತದೆ ಎಂದರು. ಕಾರ್ಯಕ್ರಮದ ಮುಖ್ಯಅತಿಥಿಗಲಾಗಿ ಆಗಮಿಸಿದ್ದ ಯುವಜನ ಮತ್ತು ಮೀನುಗಾರಿಕೆ ಸಚಿವ ಅಭಯಚಮದ್ರ ಜೈನ್ ಮಾತನಾಡಿ ಶಿಕ್ಷಣವೆನ್ನುವುದು ಮರೀಚಿಕೆಯಾಗಿದ್ದ ಕಾಲದಲ್ಲಿ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿ ಜನರ ವಿದ್ಯಾವಂತರಾಗಬೇಕು ಮತ್ತು ಉದ್ಯೋಗಿಗಲಾಗಬೇಕೆಂಬ ಕನಸನ್ನು ನನಸಾಗಿಸಿದ ಸ್ಥಾಪಕರಿಗೆ ಕೃತಜ್ಞರಾಗಿರುವುದು ನಮ್ಮ ಕರ್ತವ್ಯ. ಜನರ ಸೇವೆಗಾಗಿ ಪರೋಪಕಾರಿಗಳಾಗಿ ಬದುಕಬೇಕು. ಅಲ್ಲದೇ ವಿದ್ಯಾಸಂಸ್ಥೆಗಳ ಪರಿಪೂರ್ಣ ಅಭಿವೃದ್ಧಿಗಾಗಿ ಕಾಯಕಲ್ಪವನ್ನು ತೊಡಬೇಕು ಮತ್ತು ಶ್ರಮಿಸಬೇಕು ಎಂದು ಕರೆ ನೀಡಿದರು. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್…
Author: ನ್ಯೂಸ್ ಬ್ಯೂರೋ
ಕುಂದಾಪುರ: ತಾಲೂಕಿನ ಹಕ್ಲಾಡಿ ಶ್ರೀ ಕೊಳ್ಕೆಬೈಲು ಸೂರಪ್ಪ ಶೆಟ್ಟಿ ಸರಕಾರಿ ಪೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಬಿ. ಚಂದ್ರಲೇಖಾ ಜೆ.ಹೆಗ್ಡೆ ಚಾಲನೆ ನೀಡಿದರು. ರಘುನಾಥ ಶೆಟ್ಟಿ ಹೊಳ್ಮಗೆ ಧ್ವಜಾರೋಹಣ ನೆರವೇರಿಸಿದರು. ಆನಗಳ್ಳಿ ನರಸಿಂಹ ಶೆಟ್ಟಿ ಬಾಳೆಮನೆ ನೂತನ ಮುಖಮಂಟಪ ಉದ್ಘಾಟಿಸಿದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಳೆಮನೆ ಸಂತೋಷಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಓಎನ್‌ಜಿಸಿ ಸಂಸ್ಥೆಯ ಸಹಾಯಕ ಮಹಾ ಪ್ರಬಂಧಕ ನಾರಾಯಣ ನಾಯ್ಕ್, ಉದ್ಯಮಿ ಚಂದ್ರಶೇಖರ ಶೆಟ್ಟಿ, ಗುಡ್ಡಮ್ಮಾಡಿ ಸುಬ್ರಹ್ಮಣ್ಯ ದೇವಳದ ಧರ್ಮದರ್ಶಿ ಅರುಣಕುಮಾರ್ ಶೆಟ್ಟಿ, ಹೆಮ್ಮಾಡಿ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ದೇವಾಡಿಗ, ಮಾಣೀಕೊಳಲು ಲಕ್ಷ್ಮೀನಾರಾಯಣ ಹೆಬ್ಬಾರ್, ನಿವೃತ್ತ ಆರೋಗ್ಯಾಧಿಕಾರಿ ಎಚ್.ಮಹಾಬಲ ಶೆಟ್ಟಿ, ಉದ್ಯಮಿ ಚತ್ತರಂಜನ್ ಹೆಗ್ಡೆ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಡಾ| ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಸಂಜೀವ ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಮಾಣಿಕೊಳಲು ಶ್ರೀ ಚನ್ನಕೇಶವ ದೇವಾಲಯ ಸನ್ನಿಧಾನದಿಂದ…
ಕುಂದಾಪುರ: ತಮಿಳುನಾಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಡೀ ರಾಜ್ಯವೇ ಜಲಪ್ರಳಯಕ್ಕೆ ತುತ್ತಾಗಿದ್ದು ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲಿನ ಜನತೆ ಶೀಘ್ರ ತೊಂದರೆಯಿಂದ ಪಾರಾಗಲಿ ಹಾಗೂ ಪ್ರಳಯದಂತಹ ಭೀಕರ ಸನ್ನಿವೇಶ ಎಲ್ಲಿಯೂ ಸಂಭವಿಸಬಾರದೆಂದು ಆಶಯದೊಂದಿಗೆ ಲೋಕಕಲ್ಯಾಣಾರ್ಥವಾಗಿ ಅರಾಟೆಯ ದೀಕ್ಷಾ ಯುತ್ ಫ್ರೆಂಡ್ಸ್ ವತಿಯಿಂದ ಇಲ್ಲಿನ ಐತಿಹಾಸಿಕ ಪ್ರಸಿದ್ಧಿಯ ದೇವಸ್ಥಾನ ಗುಜ್ಜಾಡಿ-ಕೊಡಪಾಡಿಯ ಗುಹೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ 7 ಗಂಟೆಯಿಂದ ದೇವಸ್ಥಾನದಲ್ಲಿ ಮಂಗಳಾರತಿ, ಗಣಪತಿ ಹೋಮ ಹಾಗೂ ಗಣಪತಿ ಹಾಗೂ ಗುಹೇಶ್ವರ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.
ಕುಂದಾಪುರ: ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ಇತಿಹಾಸ ಉಪನ್ಯಾಸಕಿ ಶ್ರೀಮತಿ ಪೂರ್ಣಿಮಾ.ಪಿ.ನಾಯಕ್ ಅವರು ಉಡುಪಿಯಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಕ್ರ ಎಸೆತದಲ್ಲಿ ಪ್ರಥಮ ಮತ್ತು ೮೦೦ ಮೀ ಓಟದ ಸ್ವರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಗಂಗೊಳ್ಳಿ: ಪರಿಸರ ರಕ್ಷಣೆ ಎನ್ನುವದು ಕೇವಲ ವೇದಿಕೆಗಳಿಗೆ ಸೀಮಿತವಾಗಬಾರದು. ನಮ್ಮ ಕಾಳಜಿ ಎಚ್ಚರಿಕೆ ಎಲ್ಲವೂ ಕಾರ‍್ಯರೂಪದಲ್ಲಿ ಮೂಡಿಬರಬೇಕು.ಪ್ರಕೃತಿಯೊಂದಿಗೆ ಅಭಿವೃದ್ಧಿಯ ಚಿಂತನೆ ಮತ್ತು ನಡೆಗಳು ನಮ್ಮದಾಗಬೇಕು ಎಂದು ಎಂದು ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿಯ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಕುರಿತಾದ ಕಾರ‍್ಯಕ್ರಮದಲ್ಲಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಆರ್ ಎನ್ ರೇವಣ್‌ಕರ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ ನಾಯ್ಕ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿದ್ಯಾರ್ಥಿನಿ ವಿದ್ಯಾ ಸ್ವಾಗತಿಸಿದರು. ನವ್ಯಶ್ರೀ ಪ್ರಾರ್ಥಿಸಿದರು. ಅನುಷಾ ಕಾರ‍್ಯಕ್ರಮ ನಿರೂಪಿಸಿದರು.ನಿಖಿಲ್ ಧನ್ಯವಾದ ಅರ್ಪಿಸಿದರು. ವರದಿ ; ನರೇಂದ್ರ ಎಸ್ ಗಂಗೊಳ್ಳಿ
ಶಂಕರನಾರಾಯಣ: ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕಟ್ಟೆಮಕ್ಕಿ ಎಂಬಲ್ಲಿ ಆಳವಾದ ಕಂದಕದ ಒಳಗೆ ಜಿಂಕೆಯೊಂದು ಸತ್ತು ಬಿದ್ದಿರುವುದು ಅರಣ್ಯ ರಕ್ಷಕ ಆನಂದ ಬಳೆಗಾರ್ ಎಂಬುವವರಿಗೆ ಪತ್ತೆಯಾಗಿತ್ತು. ಪ್ರಾಣಭಯದಿಂದ ಓಡಿಬಂದ ಜಿಂಕೆ ಕಂದಕದಲ್ಲಿ ಬಿದ್ದು ಸತ್ತಿರಬಹುದು ಎಂದು ಶಂಕಿಸಲಾಗಿದ್ದು, ಸ್ಥಳೀಯ ಪಶುವೈದ್ಯಾಧಿಕಾರಿಗಲ ಸಮ್ಮುಖದಲ್ಲಿ ಜಿಂಕೆಯ ಮೃತದೇಹವನ್ನು ದಹನ ಮಾಡಲಾಯಿತು.
ಕುಂದಾಪುರ: ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರು ಸಲ್ಲಿಸಿದ ಒಟ್ಟು 336 ಅರ್ಜಿಗಳನ್ನು ಪರಿಶೀಲಿಸಿ, ಅಂತಿಮ ನಿವೇಶನ ರಹಿತರ ಪಟ್ಟಿ ಸಿದ್ಧ ಪಡಿಸಲಾಗಿದ್ದರೂ ಕುಂದಾಪುರ ತಹಶೀಲ್ದಾರ್ ಕಛೇರಿಯಿಂದ ಕಂದಾಯ ಸರಕಾರಿ ಭೂಮಿಯನ್ನು ಗುರುತಿಸಿ – ಹಕ್ಕು ಪತ್ರ ವಿತರಣೆ ಮಾಡುವುದಕ್ಕೆ ಕ್ರಮ ವಹಿಸಿದ ಸರಕಾರದ ಬಡವರ ವಿರೋಧಿ ಧೋರಣೆ ಖಂಡಿಸಿ ಪೆಬ್ರವರಿ ತಿಂಗಳಲ್ಲಿ ತಹಶೀಲ್ದಾರ್ ಕಛೇರಿ ಎದುರು ಜರಗುವ ಅನಿರ್ಧಿಷ್ಟಾವಧಿ ಧರಣಿ ಮುಷ್ಕರ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ ಹೇಳಿದರು. ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡನಿವೇಶನ ರಹಿತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ತಾಲೂಕಿನಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಪಡುಕೋಣೆ, ಯು. ದಾಸಭಂಡಾರಿ, ಎಚ್. ನರಸಿಂಹ, ಸುರೇಶ ಕಲ್ಲಾಗರ, ಕುಶಲಿ, ಪದ್ಮಾವತಿ ಶೆಟ್ಟಿ, ನಾಗರತ್ನ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ತಾಲೂಕು ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿ…
ಗಂಗೊಳ್ಳಿ: ಗುಜ್ಜಾಡಿ ಮಂಕಿಯಲ್ಲಿನ ಸ್ಪಂದನ ಯುವ ಸಂಘದ ವಾರ್ಷಿಕೋತ್ಸವ ಸಮಾರಂಭ ಇತ್ತೀಚಿಗೆ ಮಂಕಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು. ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗುಜ್ಜಾಡಿ ಗ್ರಾಪಂ ಸದಸ್ಯ ತಮ್ಮಯ್ಯ ದೇವಾಡಿಗ ಶುಭಾಶಂಸನೆಗೈದರು. ಇದೇ ಸಂದರ್ಭ ಮಂಕಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಆಶಾಭಾನು ಅವರನ್ನು ಸನ್ಮಾನಿಸಲಾಯಿತು. ಮಂಕಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಶ್ರೀಯಾನ್, ಉಪ್ಪಿನಕುದ್ರು ಶಾಲೆಯ ಮುಖ್ಯೋಪಾಧ್ಯಾಯ ಭಾಸ್ಕರ ಮಯ್ಯ, ಮತ್ಸ್ಯೋದ್ಯಮಿ ಮೋಹನ ಖಾರ್ವಿ ಗಂಗೊಳ್ಳಿ, ಮಂಕಿ ಶಾಲೆಯ ಮುಖ್ಯೋಪಾಧ್ಯಾಯ ಶಂಕರ ಬಿಲ್ಲವ, ಗುಜ್ಜಾಡಿ ಗ್ರಾಪಂ ಸದಸ್ಯೆ ನಿರ್ಮಲಾ ಶೆಡ್ತಿ, ಸ್ಪಂದನ ಯುವ ಸಂಘದ ಮಾರ್ಗದರ್ಶಕರಾದ ಪುಂಡಲೀಕ ಮಂಕಿ ಮತ್ತು ಪರಮೇಶ್ವರ ಶ್ರೀಯಾನ್ ಹಾಗೂ ಸಂಘದ ಅಧ್ಯಕ್ಷ ರಾಘವೇಂದ್ರ ಉಪಸ್ಥಿತರಿದ್ದರು. ಸಚಿನ್ ಆರ್. ಸ್ವಾಗತಿಸಿದರು. ಕಾರ್ಯದರ್ಶಿ ಪ್ರತಾಪ ವರದಿ ವಾಚಿಸಿದರು. ರೇಷ್ಮಾ ಕುಂದರ್ ವಂದಿಸಿದರು.
ಕುಂದಾಪುರ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ಹಾಗೂ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ಜಂಟಿ ಆಶ್ರಯದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡ ನಿವೇಶನ ರಹಿತರಿಂದ ಮನೆ, ನಿವೇಶನ ಕೋರಿಕೆಗೆ ಸ್ವೀಕರಿಸಿದ 282 ಅರ್ಜಿಗಳನ್ನು ಅಂತಿಮ ಪಟ್ಟಿ ಸಿದ್ಧ ಪಡಿಸಿ ವರ್ಷ ಒಂದು ಕಳೆದರೂ ಸರಕಾರಿ ಜಾಗ ಗುರುತಿಸಿ ನಿವೇಶನ ರಹಿತರಿಗೆ ಹಕ್ಕು ಪತ್ರ ಕೊಡಲು ಮುಂದಾಗದ ಜಿಲ್ಲಾಡಳಿತ ವಿರುದ್ಧ ಜನವರಿ ತಿಂಗಳಲ್ಲಿ ಬೃಹತ್ ಪ್ರತಿಭಟನಾ ಮುಷ್ಕರ ನಡೆಸುವುದಕ್ಕೆ ಪೂರ್ವಭಾವಿ ತಯಾರಿಗಾಗಿ ನಿವೇಶನ ರಹಿತರ ಸಮಾವೇಶ ಕುಂಭಾಶಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಜರಗಿತು. ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ನಿವೇಶನ ರಹಿತರ ಸಭೆಯನ್ನುದ್ದೇಶಿಸಿ, ಮಾತನಾಡುತ್ತಾ ಕುಂಭಾಶಿ ಗ್ರಾಮದ ನಾಗರಿಕರಿಗೆ ಮೂಲಭೂತ ಸೌಕರ್ಯ ಕೊಡದ ಸ್ಥಳಿಯಾಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ವೆಂಕಟೇಶ ಕೋಣಿ, ಕಾಂಚನಮಾಲ, ಎಚ್. ನರಸಿಂಹ, ನಾಗರತ್ನ ನಾಡ, ಪದ್ಮಾವತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯದಲ್ಲಿ ಮಳೆ ಕಡಿಮೆ ಇರುವುದರಿಂದ ಮುಂದೆ ತಲೆದೂರಬಹುದಾದ ವಿದ್ಯುತ್ ಸಮಸ್ಯೆ ನಿವಾರಣೆಗೆ ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದ್ದು ಡಿಸೆಂಬರ್ 15ರ ಬಳಿಕ ಈ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು ಎಂದು ರಾಜ್ಯ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಚಂಡಿಕಾ ಯಾಗ ನೆರವೇರಿಸಿ, ದೇವಿ ಮೂಕಾಂಬಿಕೆಗೆ ಪೂಜೆ ಸಲ್ಲಿಸಿದ ಬಳಿಕ ‘ಕುಂದಾಪ್ರ ಡಾಟ್ ಕಾಂ’ನೊಂದಿಗೆ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಈಗಿನಂತೆಯೇ ಮಾಮೂಲಿಯಾಗಿ ವಿದ್ಯುತ್ ನೀಡಲಾಗುವುದು. ಪವರ್‌ಕಟ್ ಸಮಸ್ಯೆ ನಿವಾರಣೆಗೆ ಮುಂಜಾಗ್ರತಾ ಕ್ರಮವಾಗಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಶೇಖರಿಸಿಡಲಾಗಿದೆ ಎಂದ ಅವರು ಉಡುಪಿ ಜಿಲ್ಲೆಗೆ ವಿದ್ಯುತ್ ಕೊರತೆ ಸರಿದೂಗಿಸಲು ವಿಶೇಷ ಗಮನ ಹರಿಸಿದ್ದು ಈ ಭಾಗದಲ್ಲಿಯೇ ವಿದ್ಯುತ್ ಉತ್ಪಾದನೆಯಾಗುತ್ತಿರುವುದರಿಂದ ಶಾಸಕ ಪ್ರಮೋದ್ ಮಧ್ವರಾಜ್ ಅವರ ಕೋರಿಕೆಯ ಮೇರೆಗೆ ದಿನದ 24ಗಂಟೆಯೂ ವಿದ್ಯುತ್ ನೀಡುವ ಆದೇಶ ಹೊರಡಿಸಲಾಗಿದೆ ಎಂದರು. ಹೊಸ ಬೆಳಕು ಎಂಬ ಯೋಜನೆಯಡಿಯಲ್ಲಿ ವಿದ್ಯುತ್ ಮಿತ ಬಳಕೆಗಾಗಿ…
