Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಾದಕ ದ್ರವ್ಯಗಳ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ  ಸಮುದಾಯದ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ನಾಯಕ್ ಕರೆ ನೀಡಿದರು. ಅವರು ಶುಕ್ರವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “DRUGS ಬೇಡ BRO!” ಮತ್ತು ಮಾದಕ ವಸ್ತುಗಳಿಗೆ NO -ಜೀವನಕ್ಕೆ YES” ಎಂಬ ಯುವಜನರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ವಸ್ತುಸ್ಥಿತಿ ಆತಂಕಕಾರಿಯಾಗಿದೆ. ಹೆಚ್ಚಿನ ಯುವಕರು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅವರು ತಮ್ಮ ಶೈಕ್ಷಣಿಕ ಹಿನ್ನೆಡೆ, ಮಾನಸಿಕ, ದೈಹಿಕ ಆರೋಗ್ಯವನ್ನು ಕಳೆದುಕೊಂಡು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಕುಟುಂಬ, ಸಮಾಜ ಊರು ಮತ್ತು ದೇಶಕ್ಕೆ ಹೊರೆಯಾಗುತ್ತಿದ್ದಾರೆ. ಮಾದಕದ್ರವ್ಯ ಸೇವನೆಯ ವ್ಯಸನಿಗಳ ಸಂಖ್ಯೆ ಸಹ ವಿಪರೀತಕ್ಕೆ ತಲುಪಿದೆ. ಇದು ಸಮಾಜದ ಮತ್ತು ದೇಶದ ಬೆಳವಣಿಗೆಗೆ ಮಾರಕವಾಗಿದೆ. ಹಾಗಾಗಿ ಮಾದಕ ದ್ರವ್ಯಗಳ ಸೇವನೆಯ ವಿರುದ್ದ ಯುವಕರಲ್ಲಿ ಜಾಗೃತಿ ಮೂಡಿಸಬೇಕು . ಉತ್ತಮ ಸಮಾಜ ನಿರ್ಮಾಣಕ್ಕೆ ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು, ಇಲಾಖೆಗಳು,ವಿದ್ಯಾರ್ಥಿಗಳು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ಅಘೋರೇಶ್ವರ ಮೆಲೋಡೀಸ್ ಗ್ರೂಪ್ ಸಂಗೀತ ತರಬೇತಿ ಕೇಂದ್ರ ಕೋಟ ಇವರ ಆಶ್ರಯದಲ್ಲಿ ಗಾನ ಕೋಗಿಲೆ ಎಸ್. ಜಾನಕಿ ಅವರಿಗೆ ಗೀತ ನಮನ ಹಾಗೂ ನುಡಿ ನಮನ ಕಾರ್ಯಕ್ರಮ ಕೋಟ ಸಂಗೀತ ಸಂಸ್ಥೆಯಲ್ಲಿ ಯಶಸ್ವಿಯಾಗಿ ಇತ್ತೀಚಿಗೆ ಜರಗಿತು. ನುಡಿ ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉಪನ್ಯಾಸಕ ಗಾಯಕ ಕೃಷ್ಣ ಸಾಸ್ತಾನ ಮಾತನಾಡಿ, ಎಸ್. ಜಾನಕಿ ಅಮ್ಮನವರು ಸರಳ ವ್ಯಕ್ತಿತ್ವದ ನೈಜ ಸ್ವರೂಪದ ಒಬ್ಬ ಗಾಯಕಿ. ಹಲವಾರು ಭಾಷೆಗಳಲ್ಲಿ ತನ್ನ ಸಿರಿ ಕಂಠದ ಮೂಲಕ, ಹಾಡಿನ ಮೂಲಕ ಎಲ್ಲರ ಮನಸ್ಸನ್ನು ಗೆದ್ದ ಗಾಯನ ಲೋಕಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು. ಉದ್ಯಮಿ ಎಂ.ಸಿ ಚಂದ್ರಶೇಖರ್ ಪಾಂಡೇಶ್ವರ ಜಾನಕಿ ಅಮ್ಮ ಹಾಡಿರುವ ಹಾಡುಗಳನ್ನು, ಗಾಯಕರಾದ ನಾವೆಲ್ಲರೂ ಅನುಕರಣೆಮಾಡಿ ಹಾಡಿ ಅವರಂತೆ ದೊಡ್ಡ ಗಾಯಕರಾಗಿ ಬೆಳೆಯಬೇಕು ಅನ್ನುವ ಮಾತನ್ನು ವ್ಯಕ್ತ ಪಡಿಸಿದರು. ಕೋಟ ಸಿ ಎ ಬ್ಯಾಂಕನ ನಿರ್ದೇಶಕ ರಂಜಿತ್, ಶ್ರೀ ಶಾಸ್ತ ಮೊಬೈಲ್ ಸೆಂಟರ್ ಕೋಟ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಧ್ವನಿ ಬೆಳಕು ಸಂಯೋಜಕರ ಸಂಘಟನೆ ರಿ. ಉಡುಪಿ ಜಿಲ್ಲೆ ಬೈಂದೂರು ವಲಯ ಇದರ 15ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಹಾಸಭೆಯು ಇತ್ತೀಚಿಗೆ ಯಡ್ತರೆ ಜೆ.ಎನ್.ಆರ್ ಕಲಾಮಂದಿರದಲ್ಲಿ ಜರುಗಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕಿ ಪೂರ್ಣಿಮಾ ಧ್ವನಿ ಬೆಳಕು ಸಂಯೋಜಕರ ಸಂಘಟನೆಯ 15ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಶುಭಹಾರೈಸಿದರು. ಚಲನಚಿತ್ರ ನಟ ಹಾಗೂ ಜಾದೂಗಾರ ಓಂ. ಗಣೇಶ ಉಪ್ಪುಂದ ಕಾರ್ಯಕ್ರಮಕ್ಕೆ ಶುಭಶಂಸನೆ ಗೈದು ಮಾತನಾಡಿ, ಸದಸ್ಯರ ಸಂಖ್ಯೆ ಹೆಚ್ಚಾದಂತೆ ಸಂಘಟನೆಯ ತಾಕತ್ತು ಬಲಗೊಳ್ಳುತ್ತದೆ. ಈ ಸಂಘಟನೆಯಲ್ಲಿ ಉದ್ಯಮದ ಮಾಲೀಕನೇ ನೌಕರನಾಗಿ ದುಡಿಯುತ್ತಿರುತ್ತಾನೆ. ಧ್ವನಿ ಮತ್ತು ಬೆಳಕು ಇಲ್ಲವಾದರೆ ಯಾವುದೇ ಸಮಾರಂಭದ ಕಾರ್ಯಗಳು ಯಶಸ್ವಿ ಆಗದು. ಈ ನಿಟ್ಟಿನಲ್ಲಿ ಸಂಘದ ಸದಸ್ಯರೆಲ್ಲರೂ ಪರಸ್ಪರ ಪೈಪೋಟಿಗಳಿಯದೇ ಧನಾತ್ಮಕ ಚಿಂತನೆಗಳ ಮೂಲಕ ಸೌಹಾರ್ದಯುತವಾಗಿ ಸಮಾಜಕ್ಕೂ ನ್ಯಾಯ ಸಿಗುವ ರೀತಿಯಲ್ಲಿ ವ್ಯವಹಾರ ಮಾಡುವಂತಾಗಬೇಕು. ಜೀವನೋಪಾಯಕ್ಕಾಗಿ ಮಾಡುವ ನಮ್ಮ ಉದ್ಯೋಗವನ್ನು ಮೊದಲು ನಾವು ಗೌರವಿಸಬೇಕು ಆಗ ನಮ್ಮನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ‘ವಿದ್ಯಾರ್ಥಿ ಜೀವನದ ಸವಾಲುಗಳು-ಪರಿಹಾರಗಳು’ ಎಂಬ ವಿಷಯದಡಿ ಕಾರ್ಯಾಗಾರ ನಡೆಯಿತು.. ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಲಿಯುವುದು ಒಂದು ಸವಾಲಾದರೆ ಕಲಿಯಲೇಬೇಕು ಎಂಬುದು ಅದಕ್ಕೆ ಉತ್ತರ. 25 ವರ್ಷ ನೀವು ಕಷ್ಟಪಟ್ಟರೆ ಮುಂದಿನ 75 ವರ್ಷ ಸುಖವಾಗಿ ಬಾಳಬಹುದು. ಜೀವನದಲ್ಲಿ ಉತ್ತಮ ಗುರಿಯ ಜೊತೆಗೆ ಗುರಿ ತಲುಪುವಲ್ಲಿ ಆಯ್ಕೆ ಮಾಡಿಕೊಂಡ ಮಾರ್ಗ ಉತ್ತಮವಾಗಿರಬೇಕು. ಸಮಯ ಪಾಲನೆ, ವೈಯಕ್ತಿಕ ವೇಳಾಪಟ್ಟಿ, ಉತ್ತಮ ಸ್ನೇಹಿತರ ಆಯ್ಕೆ, ಸ್ವಚ್ಛತೆ, ವ್ಯಾಯಾಮ, ಶಕ್ತಿಯುತ ಆರೋಗ್ಯಕರ ಶರೀರ ಮುಂತಾದ ವಿಷಯಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಅಜ್ಞಾನದ ಆಕರ್ಷಣೆಗೆ ಒಳಗಾಗದೆ, ಆಷಾಢಭೂತಿ ವ್ಯಕ್ತಿತ್ವ ಬಿಡಬೇಕು ಎಂದು ತಿಳಿಸಿದರು. ವಿದ್ಯಾರ್ಥಿ ಜೀವನದ ಅದ್ಭುತ ಕಾಲಘಟ್ಟ, ಪಠ್ಯ ವಿಷಯಗಳನ್ನು ತಿಳಿಯುವುದರ ಜೊತೆಗೆ ಅದು ಚಾರಿತ್ರ್ಯ ನಿರ್ಮಾಣ ಮಾಡಿಕೊಳ್ಳುವ ಕಾಲ, ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜುಲೈ 18ರಿಂದ 23, 2026ರವರೆಗೆ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಪುರುಷ ಹಾಗೂ ಮಹಿಳೆಯರ ಕ್ಲಾಸಿಕ್ ಮತ್ತು ಇಕ್ವಿಪ್ಡ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ನ್ಯೂ ಹರ್ಕ್ಯುಲಸ್ ಜಿಮ್‌ನ ವ್ಯವಸ್ಥಾಪಕರಾದ ಡಾ. ಸತೀಶ್ ಖಾರ್ವಿ ಅವರು ಅಪೂರ್ವ ಸಾಧನೆ ಮಾಡಿದ್ದಾರೆ. ಎಂ–2 ವಿಭಾಗದ ಕ್ಲಾಸಿಕ್ ಹಾಗೂ ಇಕ್ವಿಪ್ಡ್ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧಿಸಿದ ಅವರು ಒಟ್ಟು 4 ಚಿನ್ನದ ಪದಕ, 3 ಬೆಳ್ಳಿ ಪದಕ ಹಾಗೂ 1 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ, ಎರಡು ವಿಭಾಗಗಳಲ್ಲಿ ಒಟ್ಟು 6 ರಾಷ್ಟ್ರೀಯ ಡೆಡ್ಲಿಫ್ಟ್ ನೂತನ ದಾಖಲೆಗಳನ್ನು ನಿರ್ಮಿಸಿ ದೇಶದ ಮಟ್ಟದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಡಾ. ಸತೀಶ್ ಖಾರ್ವಿ ಅವರ ಈ ಸಾಧನೆಯು ಕುಂದಾಪುರ, ಉಡುಪಿ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯನ್ನು ತಂದಿದ್ದು, ಕ್ರೀಡಾಭಿಮಾನಿಗಳು, ಶಿಷ್ಯರು, ಸ್ನೇಹಿತರು ಹಾಗೂ ಸಾರ್ವಜನಿಕರು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ದೋಹಾ: ಬಂಟ್ಸ್ ಕತಾರ್ ವತಿಯಿಂದ ಆಯೋಜಿಸಲಾದ “ಆಟಿ ಡೊಂಜಿ ದಿನ 2026” ವೈಭವದ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕತಾರ್‌ನಲ್ಲಿರುವ ಕರ್ನಾಟಕದ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ಕರಾವಳಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಏಕತೆಯ ಪ್ರತೀಕವಾಗಿ ಮೂಡಿಬಂತು. ಆಟಿ ಡೊಂಜಿದಿನವು ಕರಾವಳಿ ಕರ್ನಾಟಕದಲ್ಲಿ ಮಳೆಗಾಲದ ಸಂದರ್ಭದಲ್ಲಿ ಜನರು ಪ್ರಕೃತಿಯಲ್ಲಿ ಲಭ್ಯವಿದ್ದ ಆಹಾರ ಪದಾರ್ಥಗಳನ್ನು ಅವಲಂಬಿಸಿ ಬದುಕುತ್ತಿದ್ದ ಜೀವನಶೈಲಿಯನ್ನು ನೆನಪಿಸುವ ವಿಶಿಷ್ಟ ಆಚರಣೆಯಾಗಿದೆ. ಈ ಕಾರ್ಯಕ್ರಮದ ಮೂಲಕ ಆ ಪಾರಂಪರಿಕ ಜೀವನ ಪದ್ಧತಿ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಅತ್ಯಂತ ಸುಂದರವಾಗಿ ಮರುಸೃಷ್ಟಿಸಿ, ಇಂದಿನ ಯುವ ಪೀಳಿಗೆಗೆ ತಮ್ಮ ಪೂರ್ವಜರ ಜೀವನ ವಿಧಾನವನ್ನು ಅರಿತುಕೊಳ್ಳುವ ಅಪೂರ್ವ ಅವಕಾಶ ಕಲ್ಪಿಸಲಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬಂಟ್ಸ್ ಕತಾರ್ ಸದಸ್ಯರು ಪ್ರಕೃತಿಯಲ್ಲಿ ಲಭ್ಯವಿರುವ ಋತುಸಹಜ ಪದಾರ್ಥಗಳನ್ನು ಬಳಸಿ ಪ್ರೀತಿಯಿಂದ ಸಿದ್ಧಪಡಿಸಿದ 52 ಬಗೆಯ ಸಾಂಪ್ರದಾಯಿಕ ಕರಾವಳಿ ಕರ್ನಾಟಕದ ಖಾದ್ಯಗಳ ಪ್ರದರ್ಶನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸುರಗಂಗಾ ಕಲಾ-ಸಾಹಿತ್ಯ ಮಹಿಳಾ ವೇದಿಕೆ ಕುಂದಾಪುರ ಆಯೋಜಿಸಿದ ಕರಾವಳಿ ಮಹಿಳಾ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ವಿಜಯಶ್ರೀ ಎಂ. ಹಾಲಾಡಿ ಅವರ ಮುಂಡಪ್ಪ ಮಾವಿನ ಮರʼ ಕಥೆ ಪ್ರಥಮ ಸ್ಥಾನ ಪಡೆದಿದೆ. ಪೂರ್ಣಿಮಾ ಹೆಗಡೆ ಅವರ ನಾಳೆಗಳನ್ನು ಬಿತ್ತಿದ ನಿನ್ನೆಗಳು’ಕಥೆ ದ್ವಿತೀಯ, ಶ್ರೀರಂಜಿನಿ ಅವರ ’ಮಂಜುಮಾಮಿಯ ಹೂದೋಟ’ಕಥೆ ತೃತೀಯ ಸ್ಥಾನ ಪಡೆದಿದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು:ಶಾಂತಲಾ ರಾವ್ (ಮನೆಯೊಳಗೊಂದು ಮನೆ), ಭಾರತಿ ಮರವಂತೆ (ಗಂಗಿ) ಭವ್ಯ ಹಳೆಯೂರು (ಅವಳ ನಿರ್ಧಾರ), ಯಶಸ್ವಿನಿ  ಶ್ರೀಧರ ಮೂರ್ತಿ (ಕಥೆಯ ಹೂವೊಂದು ಅರಳಿ), ನಿರ್ಮಲಾ ನಾಯಕ್ (ತನು ಸುಟ್ಟ ಬೂದಿಯಲ್ಲಿ ಪುನಃ ಹುಟ್ಟಿ) ಆಶಾ ಮಯ್ಯ ಪುತ್ತೂರು (ಟ್ರಂಕಿನೊಳಗಣ ಬೆಚ್ಚನೆ ಕನಸು). ಈ ಕಥಾಸ್ಪರ್ಧೆಯಲ್ಲಿ 125ಕ್ಕೂ ಹೆಚ್ಚು ಕಥೆಗಳು ಬಂದಿದ್ದವು. ತೀರ್ಪುಗಾರರಾಗಿ ಖ್ಯಾತ ಲೇಖಕರಾದ ಪ್ರೊ.ಉದಯಕುಮಾರ್ ಹುಬ್ಬು,  ಡಾ.ಬಿ.ಜನಾರ್ದನ ಭಟ್ ಬೆಳ್ಮಣ್ಣು, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಸಹಕರಿಸಿದ್ದರು. ಆಗಸ್ಟ್ 8ರಂದು ಶನಿವಾರ ಮಧ್ಯಾಹ್ನ 2.30ಕ್ಕೆ ಬಹುಮಾನ ವಿತರಣಾ ಕಾರ್ಯಕ್ರಮ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ನಡೆದ (CISCE)ವಲಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಪಂದ್ಯಾವಳಿಯಲ್ಲಿ ಶಾಲೆಯ 14 ವರ್ಷದ ಬಾಲಕಿಯರ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇವರಲ್ಲಿ ಶ್ರಾವಣಿ ಪಾಟೀಲ್, ವರ್ಷಿಣೀ ಐ ಪಿ, ಸನ್ನಿಧಿ ಬಿ, ಹೆಚ್ ಯಾಮಿನಿ, ಲಕ್ಷ್ಮಿ, ಆಷಾ ಎಸ್. ಎಲ್, ವೇದಶ್ರೀ, ಸಹನ ಎಸ್ ಕೆ, ಆರಾಧ್ಯಾ ಆರ್ ಹೆಚ್ ಎಂಬ ೯ ಜನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಹಾಗೆಯೇ, 14 ವರ್ಷದೊಳಗಿನ ಬಾಲಕರ ತಂಡವು ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಇವರಲ್ಲಿ ವಿಕಾಸ್ ಗೌಡ, ಅಕುಲ್ ಡಿ ಜಿ, ಆಯುಷ್ ಹಿರೇಮಠ ಎಂಬ 3 ಜನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. 17 ವರ್ಷದೊಳಗಿನ ಬಾಲಕರ ತಂಡವು ತೃತೀಯ ಸ್ಥಾನವನ್ನು ಪಡೆದು ಕೊಂಡಿದೆ. ಇವರಲ್ಲಿ ಅಭಿಷೇಕ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಡಿಗ್ರಾಮ ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ ಹಾಗೂ ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ನೇತೃತ್ವದಲ್ಲಿ ಪಂಚವರ್ಣ ಸಂಘಟನೆ ಕೋಟ, ಗೀತಾನಂದ ಫೌಂಡೇಶನ್ ಮಣೂರು ಮಾರ್ಗದರ್ಶನದಲ್ಲಿ ಕೋಡಿಗ್ರಾಮದಲ್ಲಿ ಮೂರನೇ ವರ್ಷದ ಪಂಚವರ್ಣ ಹಸಿರು ಹೆಜ್ಜೆ ಮನೆಗೊಂದು ಗಿಡ ನೆಡುವ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಕೋಡಿ ಹೊಸಬೇಂಗ್ರೆಯ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೊರಗ ಪೂಜಾರಿ ಮನೆಯಿಂದ ಮನೆಗೊಂದು ಪಾರಿಜಾತ, ಲಕ್ಷ್ಮಣ ಫಲ ಹಾಗೂ ವಿವಿಧ ಹಣ್ಣುಗಳ ಗಿಡ ನೆಡುವ ಕಾರ್ಯಕ್ರಮದ ಚಾಲನೆ ನೀಡಲಾಯಿತು. ಕಾರ್ಯಕ್ರಮ ಸಂಯೋಜಕರಾಗಿ ಅಂಗನವಾಡಿ ಕಾರ್ಯಕರ್ತೆ ಯಮುನಾ ಲಕ್ಶ್ಮಣ ಕುಂದರ್ ನೆರೆದಿದ್ದ ಪರಿಸರಾಸಕ್ತರಿಗೆ ಹಸಿರು ಹಸಿರು ಹೆಜ್ಜೆ ಮಹತ್ವ ತಿಳಿಸಿದರು. ಕಾರ್ಯಕ್ರಮ ಸಂಯೋಜಕರಾದ ಕೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷಗಳಾದ ಪ್ರಭಾಕರ್ ಮೆಂಡನ್, ಗೀತಾ ಖಾರ್ವಿ ಹಸಿರು ಮಹತ್ವ ಸಾರಿದರು.ಕೋಡಿ ಕನ್ಯಾನ ಅಂಗನವಾಡಿ ಕಾರ್ಯಕರ್ತೆ ಪ್ರೀತಿ ಎಸ್, ಸಮನ್ವಯ ಸಂಜೆವಿನಿ ಮಾಜಿ ಅಧ್ಯಕ್ಷೆ ದೀಪಾ ಆರ್ ಖಾರ್ವಿ, ಸ್ತ್ರೀ ಶಕ್ತಿ ಸಂಘದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಲಯನ್ಸ್‌ ಕ್ಲಬ್‌ ತೆಕ್ಕಟ್ಟೆ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಕುಂಭಾಶಿಯ ಗ್ರಾಯತ್ರಿ ಸಭಾಂಗಣದಲ್ಲಿ ಬುಧವಾರ ಜರುಗಿತು. ಪದಪ್ರದಾನ ಅಧೀಕಾರಿ MJF Ln ಹೃಷಿಕೇಶ್‌ ಹೆಗ್ಡೆ ಮತ್ತು ಜಿಲ್ಲಾ GAT ಆಫೀಸರ್ ಲಯನ್‌ ಅರುಣ್‌ ಹೆಗ್ಡೆ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷರಾಗಿ ವಕ್ವಾಡಿ ಸಂಪತ್‌ ಕುಮಾರ್‌ ಶೆಟ್ಟಿ, ಕಾರ್ಯದರ್ಶಿಯಾಗಿ ಅರುಣ್‌ ಶೆಟ್ಟಿ ಉಳ್ತೂರು ಮತ್ತು ಖಜಾಂಚಿಯಾಗಿ ಹೆಚ್.‌ ಚಂದ್ರಕಾಂತ್‌ ಶೆಟ್ಟಿ ಮತ್ತು ಪದಾಧಿಕಾರಿಗಳ ತಂಡ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಲಯ II ರ ವಲಯಾಧ್ಯಕ್ಷರಾದ ಲಯನ್‌ ಪ್ರವೀಣ್‌ ಹೆಗ್ಡೆ ಬನ್ನಾಡಿ, ಪ್ರಾಂತ್ಯ 2ರ ಪ್ರಾಂತ್ಯಾಧ್ಯಕ್ಷರಾದ ಲಯನ್‌ ಸರಸ್ವತಿ ಜಿ. ಪುತ್ರನ್‌, ಕಾರ್ಯದರ್ಶಿ ಲಯನ್ ಆಶಾ ಶಿವರಾಮ ಶೆಟ್ಟಿ, ಎಕ್ಸ್ಟೆಂಶನ್‌ ಚೇರ್‌ಪರ್ಸನ್‌ ಮಲ್ಯಾಡಿ ಸೀತಾರಾಮ ಶೆಟ್ಟಿ, ಮುಖ್ಯಅತಿಥಿಯಾಗಿ ಆಗಮಿಸಿದ ಗೌತಮ್‌ ಶೆಟ್ಟಿ ಟಾರ್ಪೊಡಸ್‌ ಸ್ಪೋರ್ಟ್ಸ್‌ ಕ್ಲಬ್‌ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಲಯನ್‌ ಕೆ. ಸೀತಾರಾಮ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. 2025-26ನೇ…

Read More