Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ, ಸ್ವಸ್ತಿ ಹೆಗ್ಡೆ 9th (ಹಿಂದಿ ಕಂಠಪಾಠ), ಮೊಹಮ್ಮದ್ ಮಾಯಿಜ್ 7th (ಆರೇಬಿಕ್ ಧಾರ್ಮಿಕ ಪಠಣ), ಚಾರಣ್ಯ ಪ್ರವೀಣ್ ಶೇರೆಗಾರ್ 5th (ಕ್ಲೇ ಮಾಡೆಲಿಂಗ್), ಭಾಗ್ಯಲಕ್ಷಿ ಶೆಣೈ 7th (ಭಕ್ತಿಗೀತೆ), ಶಬರೀಶ್ 7th (ಆಶುಭಾಷಣ), ತನೀಶ್ ಜೆ ಪೂಜಾರಿ 7th (ಮಿಮಿಕ್ರಿ). ಅವರಿಗೆ, ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಪ್ಲವಂಗ ನಾಮ ಸಂವತ್ಸರದ ’ವಸಂತೋತ್ಸವ’2027 ಕುಂದಾಪುರದ ಇತಿಹಾಸ ಪ್ರಸಿದ್ಧ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಈ ಸಂಬಂಧ 2027ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೇವಾಲಯದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಲಿವೆ. ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ವಾರಾಣಾಸಿ ಶ್ರೀ ಕಾಶೀ ಮಠದಲ್ಲಿ ’ವಸಂತೋತ್ಸವ’ 2027 ಆಹ್ವಾನ ಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವದಿಸಿದ್ದಾರೆ. ಶ್ರೀ ಕಾಶೀ ಮಠಾಧೀಶರು ಎಪ್ರಿಲ್ 1ರಂದು ಕುಂದಾಪುರಕ್ಕೆ ಚಿತ್ತೈಸಲಿದ್ದಾರೆ. ಎಪ್ರಿಲ್ 7ರ ಯುಗಾದಿ ದಿನದಿಂದ ’ವಸಂತೋತ್ಸವ’ ಆಚರಣೆ ಆರಂಭವಾಗಲಿದೆ. ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಎಪ್ರಿಲ್ 15, ಶ್ರೀರಾಮ ನವಮಿಯಂದು ನಡೆಯಲಿದ್ದು, ಈ ಸಂಬಂಧ ಎಪ್ರಿಲ್ 11 ರಿಂದ 16ರ ತನಕ ನಡೆಯುವ ಉತ್ಸವಗಳು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಲಿವೆ. ಸಹಸ್ರ ಕಂಭಾಭಿಷೇಕ: ವಸಂತೋತ್ಸವ ಪರ್ವ ಕಾಲದಲ್ಲಿ ಶ್ರೀ ದೇವರ ಪ್ರಿತ್ಯರ್ಥವಾಗಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಪಾರಂಪಳ್ಳಿ ಇಲ್ಲಿ  ಕಾರ್ತಿಕ ಮಾಸದ ಭಜನಾ ಕಾರ್ಯಕ್ರಮದಲ್ಲಿ 96 ವರ್ಷಗಳ ಕಾಲ ಭಜನೆಯನ್ನು ನಡೆಸಿಕೊಂಡು ಬಂದ ಶ್ರೀರಾಮ ವಿಶ್ವಸ್ಥ ಮಂಡಳಿ ಬಾಳ್ಕುದ್ರು ಹಂಗಾರಕಟ್ಟೆ ಭಜನಾ ತಂಡವನ್ನು ಶ್ರೀ ಮಹಾವಿಷ್ಣು ಭಜನಾ ಸಂಘ ಪಾರಂಪಳ್ಳಿ ಇವರ ವತಿಯಿಂದ ಗೌರವ ಸಂಮ್ಮಾನ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹಾ ವಿಷ್ಣು ಭಜನಾ ಸಂಘದ ಅಧ್ಯಕ್ಷ ಶ್ರೀರಾಮಚಂದ್ರ ಉಪಾಧ್ಯ ವಹಿಸಿದರು. ಅತಿಥಿಗಳಾಗಿ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ಅಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ, ಭಜನಾ ಸಂಘದ ಕೋಶಾಧಿಕಾರಿ ನಾಗರಾಜ ಸೋಮಯಾಜಿ, ಮಹಿಳಾ ಭಜನಾ ಸಂಘದ ಅಧ್ಯಕ್ಷೆ  ಮಾಲತಿ ಅಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಮಹಾ ವಿಷ್ಣು ಭಜನಾ ಸಂಘದ ಕಾರ್ಯದರ್ಶಿಯಾದ ಪಿ‌.ವೈ ಕೃಷ್ಣ ಪ್ರಸಾದ್ ಹೇರ್ಳೆ ನಿರೂಪಿಸಿದರು. ಬ್ರಾಹ್ಮಣ ಮಹಾ ಸಭಾದ ಕಾರ್ಯದರ್ಶಿ ರಾಜಾರಾಮ್ ಐತಾಳ್ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಯಕ್ಷಗಾನ ಸಂಘ ಹಾಗೂ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ‘ಬಣ್ಣದ ಮನೆ – ಯಕ್ಷಗಾನ ಕಲಾವಿದರ ಬದುಕಿಗೆ ನುಡಿ ತೋರಣ’ ಎನ್ನುವ ಸರಣಿ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಕಾರ್ಯಕ್ರಮ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಚಂಡೆ ವಾದನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರದ ನ್ಯಾಯವಾದಿ ಹಾಗೂ ಪ್ರಸಂಗಕರ್ತ ಶರತ್ ಕುಮಾರ್ ಶೆಟ್ಟಿ ಮಾತನಾಡಿ, ‘ಬಣ್ಣದ ಮನೆ’ ಎಂಬುದು ಯಕ್ಷಗಾನದ ಕಲಾವಿದರನ್ನು ರೂಪಿಸುವ, ಕಲೆಯ ಪರಂಪರೆ ಮತ್ತು ಅನುಭವಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ವಿಶಿಷ್ಟ ಪರಿಕಲ್ಪನೆಯಾಗಿದೆ. ಇದು ಯಕ್ಷಗಾನದ ವಿಶ್ವವಿದ್ಯಾನಿಲಯವಿದ್ದಂತೆ. ಇಲ್ಲಿ ಕಲೆಯ ಬಗ್ಗೆ ಆಳವಾದ ಆಸಕ್ತಿ, ಸೃಜನಶೀಲ ಚಿಂತನೆ ಹಾಗೂ ನಿರಂತರ ಕಲಿಕೆಯ ಮನೋಭಾವದೊಂದಿಗೆ ತೊಡಗಿಸಿಕೊಂಡಾಗ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಾಧ್ಯ. ಹಿರಿಯ ಕಲಾವಿದರ ಒಡನಾಟ, ಅವರ ಅನುಭವಗಳ ಅರಿವು ಮತ್ತು ಕಲಾಸಾಧನೆಯ ಹಾದಿಯನ್ನು ತಿಳಿದುಕೊಳ್ಳುವುದು ಯುವ ಕಲಾವಿದರಿಗೆ ಅಮೂಲ್ಯ ಮಾರ್ಗದರ್ಶನವಾಗುತ್ತದೆ. ವಿದ್ಯಾರ್ಥಿಗಳು ಯಕ್ಷಗಾನ ಕಲಾವಿದರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಮಾಜ ಸುಸ್ಥಿರವಾಗಿ ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರು ಶಿಕ್ಷಣ ಪಡೆಯುವುದು ಮತ್ತು ನೀಡುವುದು  ಮುಖ್ಯ ಜವಾಬ್ದಾರಿಯಾಗಿರುತ್ತದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಪ್ರೊಚಾನ್ಸಲರ್ ಡಾ. ಹೆಚ್.ಎಸ್. ಬಲ್ಲಾಳ್ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇವರ ಮಾರ್ಗದರ್ಶನದಲ್ಲಿ 31-01-2027ರಂದು ಆಯೋಜಿಸುತ್ತಿರುವ “ಕುಂದಥಾನ್” ಮ್ಯಾರಥಾನ್ ನ ವೆಬ್ ಸೈಟ್ kundathon.basck.in ಮತ್ತು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು. ಉತ್ತಮ ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಲ್ಲದೇ ಹಳ್ಳಿಯ ಜನರಿಗೆ ಮತ್ತು ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಂತೆ ಆಗಬೇಕು. ಅಲ್ಲದೇ ಕೌಶಲ್ಯ ಆಧಾರಿತ ಶಿಕ್ಷಣವನ್ನು ಸಹ ನೀಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು. ಈ ಮ್ಯಾರಥಾನ್ ನಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಕಾಡೆಮಿ ಆಫ್ ಜನರಲ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಮತ್ತು ಮೂಕಾಂಬಿಕಾ ದೇವಾಳದ ಅನುದಾನಿತ ಪ್ರೌಢಶಾಲೆ, ಕೊಲ್ಲೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ 14 ವರ್ಷದ ಬಾಲಕ- ಬಾಲಕಿಯರ ನೆಟ್ ಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದರೆ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಅವಳಿ ಪ್ರಶಸ್ತಿಗೆ ಭಾಜನವಾಗಿದೆ.  ಬಾಲಕರ ತಂಡದಲ್ಲಿ ಸಮರ್ಥ್, ಸಮರ್ಥ್ ಖಾರ್ವಿ, ವೈಭವ್, ನಾಗರಾಜ್, ಅರವ್, ವಿಗ್ನೇಶ್, ಯಶ್ವಿಕ್ ಮತ್ತು ಬಾಲಕಿಯರ ತಂಡದಲ್ಲಿ ಮನ್ವಿತಾ, ಸನ್ನಿಧಿ, ಶ್ರೀ ಲಕ್ಷ್ಮಿ, ಅಪೇಕ್ಷಾ, ಧನ್ಯ ಖಾರ್ವಿ, ಸನ್ನಿಧಿ ಖಾರ್ವಿ, ಶ್ರಾವಣಿ, ಪ್ರತಿನಿಧಿಸಿದ್ದರು. ಒಟ್ಟು ಎಂಟು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ದೀಕ್ಷಿತ್ ಮೇಸ್ತ ಮಾರ್ಗದರ್ಶನ ನೀಡಿದ್ದರು. ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಬೋಧಕ ಬೋಧಕೇತರ ವೃಂದ ಮತ್ತು ಶಿಕ್ಷಕ-ರಕ್ಷಕ ಸಮಿತಿ ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಮಾಜದ ಕಟ್ಟುವ ಕಾಯಕ ನಿತ್ಯನಿಂತರವಾಗಿಸುವುದಲ್ಲದೆ ಸಮಾಜದಲ್ಲಿ ಪ್ರತಿಯೊರ್ವರು ಮುನ್ನಲ್ಲೆಗೆ ಬರಬೇಕು ಎಂಬ ಅಭಿಲಾಷೆ ನನ್ನದಾಗಿದೆ  ಎಂದು ಕರಾವಳಿ ಮೊಗವೀರ ಮಹಾಜನ ಸಂಘದ ಪ್ರಧಾನ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಅಭಿಪ್ರಾಯಪಟ್ಟರು. ಅವರು ಶನಿವಾರ ಸಾಲಿಗ್ರಾಮದ ಗುಂಡ್ಮಿ ಕರಾವಳಿ ಮೊಗವೀರ ಸಭಾಭವನದಲ್ಲಿ ಕರಾವಳಿ ಮೊಗವೀರ ಮಹಾಜನ ಸಂಘ ಕೋಟ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ, ವಿದ್ಯಾರ್ಥಿವೇತನ, ಗುರಿಕಾರಿಗೆ ಗೌರವಧನ, ವೈದ್ಯಕೀಯ ನೆರವು ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮುದಾಯ ಅಭಿವೃದ್ಧಿಯ ಜೊತೆಗೆ ನಾವು ಎತ್ತರಕ್ಕೆ ಬೆಳೆಯಬೇಕು ತನ್ಮೂಲಕ ಸಮಾಜಕ್ಕೆ ಆಸ್ತಿಯಾಗಿ ಹೊರಹೊಮ್ಮಬೇಕು ಎಂದರಲ್ಲದೆ ಕೋಟ ಮೊಗವೀರ ಮಹಾಜನ ಸಂಘ ಒಂದು ಶಕ್ತಿ ಕೇಂದ್ರವಾಗಿ ಸಮುದಾಯದ ಬಡವರ ಕಲ್ಯಾಣಕ್ಕೆ ಶ್ರಮಿಸಲಿದೆ,ಮೊಗವೀರರು ಪ್ರತಿ ಕ್ಷೇತ್ರದಲ್ಲಿ ಮುಂಚೂಣಿಗೆ ನಿಲ್ಲಬೇಕು ಎಂದರು. ಸಭಾಧ್ಯಕ್ಷತೆಯನ್ನು ಕರಾವಳಿ ಮೊಗವೀರ  ಮಹಾಜನ ಸಂಘದ ನೂತನ ಅಧ್ಯಕ್ಷ ಶಿವರಾಂ ಕೆ.ಎಂ. ವಹಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮೊಗವೀರ ಸಮುದಾಯದ ಗುರಿಕಾರರಿಗೆ ಗೌರವಧನ ವಿತರಣೆ, ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ಹಾಗೂ ಮರವಂತೆ ಮೀನುಗಾರರ ಸಹಕಾರ ಸಂಘ ನಿಯಮಿತ, ಮರವಂತೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಮೀನು ಸಾಕಾಣಿಕೆ ತರಬೇತಿಯ ಉದ್ಘಾಟನಾ ಸಮಾರಂಭವು ಮರವಂತೆ ಮೀನುಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೆನರಾ ಬ್ಯಾಂಕ್, ಮರವಂತೆ ಶಾಖೆಯ ವ್ಯವಸ್ಥಾಪಕರಾದ ಸರೀಕ್ ರೇವನ್ ಅವರು ಮಾತನಾಡಿ, ಸಮಾಜದಲ್ಲಿ ಮೀನುಗಾರಿಕೆ ಹಾಗೂ ಮೀನು ಸಾಕಾಣಿಕೆ ಕೃಷಿ ಉದ್ಯಮಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಡಿಮೆ ಬಂಡವಾಳ ಹೂಡಿಕೆಯೊಂದಿಗೆ ಉತ್ತಮ ಆದಾಯ ಗಳಿಸಲು ಈ ಉದ್ಯಮದಲ್ಲಿ ವಿಫುಲ ಅವಕಾಶಗಳಿವೆ. ಆದ್ದರಿಂದ ಶಿಬಿರಾರ್ಥಿಗಳು ತರಬೇತಿಯಲ್ಲಿ ಪಡೆದ ಜ್ಞಾನ ಮತ್ತು ಕೌಶಲ್ಯಗಳನ್ನು ಉದ್ಯಮವಾಗಿ ರೂಪಿಸಿಕೊಂಡು ಸ್ವ ಉದ್ಯೋಗದತ್ತ ಹೆಜ್ಜೆ ಇಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮರವಂತೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾದ ಪ್ರವೀಣ್ ಅವರು ಮಾತನಾಡಿ, ತರಬೇತಿಯಲ್ಲಿ ದೊರೆಯುವ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿಕುಂದಾಪುರ: ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 14 ಮತ್ತು 17 ವರ್ಷ ವಯೋಮಾನದ ಬಾಲಕ ಹಾಗೂ ಬಾಲಕಿಯರ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ 17 ವರ್ಷ ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನ ಗಳಿಸುವ ಮೂಲಕ ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಪಂದ್ಯಾಟದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ನಿಕೇಶ್ ಖಾರ್ವಿ ಅವರು ಅತ್ಯುತ್ತಮ ಸವಾಂಗೀಣ ಆಟಗಾರ ಪ್ರಶಸ್ತಿಯನ್ನು ಹಾಗೂ ನಮನ್ ಕುಮಾರ ಅವರು ಅತ್ಯುತ್ತಮ ಆಕ್ರಮಣಕಾರಿ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪಂಚಶಕ್ತಿ ಸಂಘ ಕೋಡಿತಲೆ ಹೊಸಬೆಂಗ್ರೆ ಇದರ ರಜತ ಮಹೋತ್ಸವದ ಅಂಗವಾಗಿ ನೂತನ ಲಾಂಛನ  ಅನಾವರಣ ಕಾರ್ಯಕ್ರಮ ಇತ್ತೀಚಿಗೆ ಕೋಟದ ಶ್ರೀ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಜರಗಿತು. ಅಮೃತೇಶ್ವರೀ ದೇವಸ್ಥಾನದ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಹಾಗೂ ಧಾರ್ಮಿಕ ಚಿಂತ ಡಾ. ವಿದ್ವಾನ್ ವಿಜಯ ಮಂಜರು ಜೊತೆಯಾಗಿ ಲಾಂಛನ ಬಿಡುಗಡೆಗೊಳಿಸಿದರು. ಬರುವ ಡಿಸೆಂಬರ್ 26ಕ್ಕೆ ನಡೆಯುವ ರಜತ ಮಹೋತ್ಸವವು ನಿರ್ವಿಘ್ನವಾಗಿ ನಡೆಯುವಂತೆ ಶ್ರೀ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರ ನರೇಂದ್ರ ಕುಮಾರ್ ಕೋಟ, ಪಂಚಶಕ್ತಿ ಸಂಘದ ಅಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ, ಉಪಾಧ್ಯಕ್ಷ ವಿಕೇಶ್ ಬಂಗೇರ ಪದಾಧಿಕಾರಿಗಳಾದ ಲಕ್ಷ್ಮಣ ಖಾರ್ವಿ, ಅನೀಶ್ ಖಾರ್ವಿ, ಅನಿಲ ಖಾರ್ವಿ, ಪ್ರವೀಣ ಖಾರ್ವಿ, ಕಿರಣ್ ಪುತ್ರನ್, ಆಕಾಶ್ ಕೋಡಿ,  ಕಾರ್ಯದರ್ಶಿ ಸಂದೀಪ ಎಸ್. ಖಾರ್ವಿ, ಜೊತೆ ಕಾರ್ಯದರ್ಶಿ ಸಂದೇಶ ಖಾರ್ವಿ ಹಾಗೂ ಕೋಶಾಧಿಕಾರಿ ಸಂದೀಪ ಬಿ. ಖಾರ್ವಿ ಉಪಸ್ಥಿತರಿದ್ದರು.

Read More