ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಬೈಂದೂರು – ಶಿರೂರು ಘಟಕ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ ಉಡುಪಿ ಹಾಗೂ ಹೆಲ್ತ್ ಕೇರ್ ಮಂಗಳೂರು ಇವರ ಸಹಯೋಗದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮ ಬಂಟರ ಸಭಾಭವನ ಯಡ್ತರೆಯಲ್ಲಿ ನಡೆಯಿತು. ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ ಎಸ್. ಕೊರವಡಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭಾವಂತ ಸಾಧಕರಿದ್ದಾರೆ. ಸಾಧಿಸುವ ಸಮಯದಲ್ಲಿ ಉತ್ತಮ ಪ್ರೋತ್ಸಾಹ ದೊರೆತಾಗ ಇನ್ನಷ್ಟುಸಾಧನೆ ಸಾಧ್ಯ.ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಸಂಘಟನೆ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಹಾಗೂ ಗೌರವ ಉಳಿಸಿಕೊಂಡಿರುವುದು ಸಂಘದ ಸಮಾಜಮುಖಿ ಸಾಧನೆಯ ಹಿರಿಮೆಯಾಗಿದೆ ಎಂದರು. ಮೊಗವೀರ ಯುವ ಸಂಘಟನೆ ಬೈಂದೂರು – ಶಿರೂರು ಘಟಕದ ಅಧ್ಯಕ್ಷ ಹರೀಶ ಎಂ. ಮಯ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕ ರಾಮ ಮೊಗವೀರ ಕಳವಾಡಿ, ಮೊಗವೀರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕೊಲ್ಲೂರಿನ ಮೂಕಾಂಬಿಕಾ ದೇವಳದ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ನೆಟ್‌ಬಾಲ್ ಪಂದ್ಯಾಟದಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಆರು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. 14 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಮಿತಿ, ಶರಣ್ಯಾ, ಶ್ರೇಯಾ ಹಾಗೂ ತನ್ವಿ ಎಂ. ಮೊಗವೀರ ಮತ್ತು 17 ವರ್ಷ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಾನ್ವಿ ಹಾಗೂ ನಿರೀಕ್ಷಾ ರಾಜ್ಯಮಟ್ಟದ ನೆಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ, ಪರಿಶ್ರಮ ಹಾಗೂ ತಂಡದ ಒಗ್ಗಟ್ಟಿನ ಮೂಲಕ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳ ಈ ಯಶಸ್ಸಿಗೆ ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸಾಧಕ ವಿದ್ಯಾರ್ಥಿಗಳನ್ನು ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಶಾಲೆಯ ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕ ಮತ್ತು ಶಿಕ್ಷಕೇತರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ತೆಕ್ಕಟ್ಟೆಯ ವಿಶ್ವ ವಿನಾಯಕ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಡಗರ, ಸಂಭ್ರಮ ಹಾಗೂ ಉತ್ಸಾಹದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರು ವಿವಿಧ ಮನರಂಜನಾ ಆಟಗಳು, ನೃತ್ಯ, ಹಾಡು, ಹಾಸ್ಯಭರಿತ ಸನ್ನಿವೇಶಗಳು ಹಾಗೂ ಮನರಂಜನಾತ್ಮಕ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಶಿಕ್ಷಕರೇ ಹಾಡಿ, ಕುಣಿತು ಮಕ್ಕಳನ್ನು ರಂಜಿಸಿದಾಗ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಸದಾ ಪಾಠ ಪ್ರವಚನಗಳಲ್ಲಿ ತೊಡಗಿರುವ ಶಿಕ್ಷಕರು ಈ ದಿನ ಮಕ್ಕಳೊಂದಿಗೆ ಬೆರೆತು ನಕ್ಕು ನಲಿದು ಮಕ್ಕಳಿಗೆ ಅವಿಸ್ಮರಣೀಯ ಕ್ಷಣಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯವರು, ಶಾಲಾ ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ ವಲಯ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಇವರ ಸಹಯೋಗದಲ್ಲಿ ಶಂಕರನಾರಾಯಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್, ಶಂಕರನಾರಾಯಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಶಮಿತಾ ರಾವ್ ಹಾಗೂ ರೆನಿಟಾ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕರಾದ ಶೇಖರ್ ಯು. ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರತಿಭಾ ಕಾರಂಜಿಯ ಉದ್ದೇಶ, ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿರುವ ವಿವಿಧ ಪ್ರತಿಭೆಗಳಿಗೆ ಇಂತಹ ವೇದಿಕೆಗಳು ಹೇಗೆ ಪ್ರೋತ್ಸಾಹ ನೀಡುತ್ತವೆ ಎಂಬುದನ್ನು ವಿವರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಎ. ಶಂಕರ್ ಐತಾಳ್ ಅವರು ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆಯುವುದಕ್ಕಿಂತ ಭಾಗವಹಿಸುವ ಅವಕಾಶವನ್ನು ಬಳಸಿಕೊಂಡು ಹೊಸ ಅನುಭವವನ್ನು ಪಡೆಯುವುದು ಮುಖ್ಯವೆಂದು ತಿಳಿಸಿದರು. ಮತ್ತು ಸಂಸ್ಥೆಯು ಅತ್ಯುತ್ತಮ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುತ್ತಿರುವುದು ಹೆಮ್ಮೆಯ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಶ್ರೀ ಮೂಕಾಂಬಿಕಾ ದೇಗುಲಕ್ಕೆ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ಭೇಟಿ ನೀಡಿದರು. ಈ ವೇಳೆ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕುಟುಂಬಿಕರೊಂದಿಗೆ ಚಂಡಿಕಾಹೋಮದಲ್ಲಿ ಪಾಲ್ಗೊಂಡರು. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ಮೊಮ್ಮಗ ಜೊತೆಗಿದ್ದರು. ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರು ದೇವಸ್ಥಾನ ಭೇಟಿಯ ವೇಳೆ ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಕಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಯುವ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ನಡೆದಿದೆ. ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಏಕೈಕ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಮೃತ ದುರ್ದೈವಿ. ಟ್ರಕ್‌ಗೆ ಬೈಕ್ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಕ್ಷಯ್, ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ವರ್ಕ್ ಫ್ರಮ್ ಹೋಮ್‌ನಲ್ಲಿದ್ದ ಅಕ್ಷಯ್, ಭಾನುವಾರ ಕಚೇರಿಗೆ ತೆರಳುವ ಸಲುವಾಗಿ ತಮ್ಮ ಬೈಕ್‌ನಲ್ಲಿ ಮನೆಯಿಂದ ಬೆಂಗಳೂರಿಗೆ ಹೊರಟಿದ್ದರು. ಬೆಳಗ್ಗೆ ಸುಮಾರು 4 ಗಂಟೆಗೆ ಚುಂಗಿಗುಡ್ಡೆಯ ಮನೆಯಿಂದ ತೆರಳಿದ್ದರು. ಚನ್ನರಾಯಪಟ್ಟಣ ಸಮೀಪ ಹೆದ್ದಾರಿಯಲ್ಲಿ ತೆರಳುತ್ತಿದ್ದ ಟ್ರಕ್‌ಗೆ ಬೈಕ್‌ನ ಹ್ಯಾಂಡಲ್‌ನ ತಾಕಿದ್ದರಿಂದ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಭಾಗಕ್ಕೆ ಗಂಭೀರ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಿದ ಸೆಪ್ಟೆಂಬರ್ – 2026ರ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ನೇರಂಬಳ್ಳಿಯ ಪ್ರೇಮಾ ಮತ್ತು ರಾಜು ಪೂಜಾರಿಯವರ ಪುತ್ರಿ ನಕ್ಷಾ ಆರ್. ಪೂಜಾರಿ, ಸುಣ್ಣಾರಿಯ ಭಾಗೀರಥಿ ಮತ್ತು ಅಶೋಕ್ ಶೆಟ್ಟಿಯವರ ಪುತ್ರ ಅಭಿಷೇಕ್, ಜಡ್ಕಲ್‌ನ ಕಸ್ತೂರಿ ಮತ್ತು ವಾಸು ಶೆಟ್ಟಿಯವರ ಪುತ್ರ ಆರ್ತೇಶ್ ಶೆಟ್ಟಿ, ಸಂಗಮ್‌ನ ರೇವತಿ ಮತ್ತು ನಾಗೇಶ್ ನಾಯ್ಕ್ ಅವರ ಪುತ್ರಿ ಐಶ್ವರ್ಯ, ಪಡುಕೋಣೆಯ ಸವಿತಾ ಮತ್ತು ಉದಯ ಅವರ ಪುತ್ರಿ ವರ್ಷಿತಾ ಯು.ಡಿ., ಕೋಟೇಶ್ವರದ ಸುನೀತಾ ಮತ್ತು ಜಗದೀಶ್ ಅವರ ಪುತ್ರ ರೋಹಿತ್, ವಾಲ್ತೂರಿನ ಶ್ಯಾಮಲ ಮತ್ತು ಚಂದ್ರಶೇಖರ್ ಶೆಟ್ಟಿಯವರ ಪುತ್ರಿ ಶಯನಾ ಸಿ. ಶೆಟ್ಟಿ ಸಿ.ಎ. ಫೌಂಡೇಶನ್‌ನಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೂಟ ಮಹಾಜಗತ್ತಿನ ಅಧಿದೇವ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತಕ್ಕೊಳಪಟ್ಟ ಶ್ರೀ ಆಂಜನೇಯ ದೇವರಿಗೆ ದಾನಿಗಳಾದ ಬೆಂಗಳೂರಿನ ಕೆ.ಯಜ್ಞನಾರಾಯಣ ಹೇರ್ಳೆ ಇವರು ಸಮರ್ಪಿಸಿದ ಸ್ವರ್ಣಲೇಪಿತ ಕವಚವನ್ನು ಶ್ರೀ ಗುರುನರಸಿಂಹ ದೇಗುಲದಿಂದ ಮೆರವಣಿಗೆಯ ಮೂಲಕ ಗುರುವಾರ ಸಮರ್ಪಿಸುವ ಕಾರ್ಯಕ್ರಮಗಳು ಜರಗಿದವು. ದೇಗುಲದ ಪ್ರಧಾನ ಅರ್ಚಕ ವೇ.ಮೂ ಜನಾರ್ದನ ಅಡಿಗ,ಕೃಷ್ಣ ಸೋಮಯಾಜಿ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೆರಿತು. ಶ್ರೀ ದೇಗುಲದಲ್ಲಿ ಪೂರ್ವಾಹ್ನ ನವಕಪ್ರಧಾನ ಕಲಾಶಾಭಿಷೇಕ,ಸಂಜೆ ರಂಗಪೂಜೆ,ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರಗಿದವು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಬಂಟ್ವಾಳ ನರಿಕೊಂಬು ಪ್ರಕಾಶ್ ಕಾರಂತ,ಮಾಜಿ ಅಧ್ಯಕ್ಷರಾದ ಜಗದೀಶ್ ಕಾರಂತ್, ಡಾ.ಕೆ ಎಸ್ ಕಾರಂತ್ ,ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯಾ, ಕಾರ್ಯದರ್ಶಿ ಪರುಷರಾಮ್ ಭಟ್, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಹೊಳ್ಳ, ಸಮಿತಿಯ ಸದಸ್ಯರಾದ ಕೆ. ತಾರಾನಾಥ ಹೊಳ್ಳ,ಪ್ರಸನ್ನ ತುಂಗ, ಬಿ.ಜಿ ಕೃಷ್ಣಮೂರ್ತಿ ಮಯ್ಯ, ಮಾಜಿ ಉಪಾಧ್ಯಕ್ಷ ರಘುನಾಥ್ ಸೋಮಯಾಜಿ, ಬೈಂದೂರು ಚಂದ್ರಶೇಖರ್ ನಾವಡ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್, ಅಂಗಸಂಸ್ಥೆ ಪಿ.ಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ : ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಬಾರಂದಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಮುದಾಯ ಆರೋಗ್ಯ ಧಿಕಾರಿ ಸತೀಶ್ ಹಾಗೂ ಪಿಎಚ್‌ಸಿ ದಿವ್ಯ ಅವರಿಂದ ಆರೋಗ್ಯ ಅರಿವು ಹಾಗೂ ವಿದ್ಯಾರ್ಥಿಗಳಿಗೆ ತಪಾಸಣೆ ಕಾರ್ಯಕ್ರಮ ಮತ್ತು ಗಂಗೊಳ್ಳಿ ಮುಖ್ಯ ಆರಕ್ಷಕ ಮಂಜುನಾಥ್ ಅವರಿಂದ ಕಾನೂನು ಅರಿವು ಹಾಗೂ ಉತ್ತಮ ಶಿಸ್ತಿನ ಜೀವನ ಮೂಡಿಸುವ ಕಾರ್ಯಕ್ರಮ ನಡೆಯಿತು. ಇಂದಿನ ಮಕ್ಕಳು ಉತ್ತಮ ಆರೋಗ್ಯ ರೂಪಿಸುವ ಕುರಿತಾಗಿ ಆಹಾರ ಸೇವನೆ ಕುರಿತು ವ್ಯದ್ಯಾಧಿಕಾರಿ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಮೂಲಕ ತಿಳಿಸಿ ನಂತರ ವೈದ್ಯಕಿಯ ತಪಾಸಣೆ ನೆಡೆಸಿದರು. ಪ್ರಭಾರ ಮುಖ್ಯ ಶಿಕ್ಷಕರಾದ ತಾರಾ ನಿರೂಪಿಸಿ, ಶಿಕ್ಷಕಿ ವಸಂತಿ ಧನ್ಯವಾದ ಸಲ್ಲಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಷ್ಠಿತ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮೀಡಿಯಾ ಕ್ಲಬ್ ಆಗಿರುವ ‘ಫ್ರೇಮ್‌ಎಕ್ಸ್’ (FrameX) ನ ಸಕ್ರಿಯ ಸದಸ್ಯರು ವಿವಿಧ ಕಾಲೇಜುಗಳಲ್ಲಿ ಆಯೋಜಿಸಲಾಗಿದ್ದ ಅಂತರ-ಕಾಲೇಜು ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಹಲವು ಬಹುಮಾನಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಮೀಡಿಯಾ ಕ್ಲಬ್‌ನ ಪ್ರತಿಭಾವಂತ ವಿದ್ಯಾರ್ಥಿಗಳಾದ ಸ್ಪೃತಿಕ್ ಎನ್. ನಾಯ್ಕ್ ಮತ್ತು ಕಾರ್ತಿಕ್ ಎನ್. ನಾಯ್ಕ್ ಅವರು ತಮ್ಮ ಅದ್ಭುತ ಪ್ರತಿಭೆಯ ಮೂಲಕ ವಿವಿಧ ಕಾಲೇಜುಗಳ ರೀಲ್ಸ್ ಮೇಕಿಂಗ್ ಹಾಗೂ ವೀಡಿಯೋಗ್ರಫಿ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಎನ್‌ಐಟಿಕೆ (NITK) ಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸ್ಪೃತಿಕ್ ಎನ್. ನಾಯ್ಕ್ ಅವರು ಪ್ರಥಮ ಸ್ಥಾನವನ್ನು ಹಾಗೂ ಕಾರ್ತಿಕ್ ಎನ್. ನಾಯ್ಕ್ ಅವರು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕಾರ್ತಿಕ್ ಎನ್. ನಾಯ್ಕ್ ಅವರು ಪ್ರಥಮ ಸ್ಥಾನವನ್ನು ಮತ್ತು ಸ್ಪೃತಿಕ್ ಎನ್. ನಾಯ್ಕ್ ಅವರು ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಲ್ಲದೆ, ಶ್ರೀ ಶಾರದಾ…
