Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್‌ನಲ್ಲಿ ಸಂವಿಧಾನದ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಭೋದನೆ ಕಾರ್ಯಕ್ರಮ ಜರಗಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಪ್ರತಿಜ್ಞಾ ವಿಧಿ ನೆರವೆರಿಸಿದರು. ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ದೇಶದ ಅತಿ ಉನ್ನತವಾದ ಸಂವಿಧಾನದ ಬಗ್ಗೆ ಪ್ರತಿಯೊಬ್ಬರು ಅರಿತು ಕಾರ್ಯಾಚರಿಸುವಂತ್ತಾಗಬೇಕು. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಲ್ಲಾ ವರ್ಗದ ಹಾಗೂ ದೇಶದ ಸಾರ್ವಭೌಮವನ್ನು ಗಟ್ಟಿಗೊಳಿಸಿದೆ ಅಲ್ಲದೆ ಜಾತ್ಯಾತೀತ ರಾಷ್ಟ್ರಕ್ಕೆ ಮುನ್ನುಡಿ ಬರೆದಿದೆ ಎಂದರು. ಈ ಸಂದರ್ಭದಲ್ಲಿ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್, ಕಾರಂತ ಪ್ರತಿಷ್ಠಾನದ ಸುಬ್ರಾಯ ಆಚಾರ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಮಂಗಳವಾರದಂದು ವಾರ್ಷಿಕ ಕ್ರೀಡಾಕೂಟವು ಸಂಪನ್ನಗೊಂಡಿತು. 14 ಮತ್ತು 17 ರ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಉದ್ದಜಿಗಿತ, ಗುಂಡೆಸೆತ, 100ಮೀ, 200ಮೀ, 400ಮೀ, 800ಮೀ, 1500ಮೀ ಓಟ ಮತ್ತು ರಿಲೇ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಈ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದ ಗೌತಮ ಶೆಟ್ಟಿ ಅವರು ಉದ್ಘಾಟನೆ ನಡೆಸಿ ಮಾತನಾಡಿ, ಆಟಗಳಲ್ಲಿ ಸೋಲು ಗೆಲುವು ಮುಖ್ಯವಾದುದಲ್ಲ. ಅದರಲ್ಲಿ ತೊಡಗಿಸಿಕೊಳ್ಳುವುದು ಅತಿಮುಖ್ಯ. ಆಟಗಳನ್ನು ಆಡುವಾಗ ನಮ್ಮ ನಮ್ಮ ಆಟಗಳಲ್ಲಿ ಆನಂದವನ್ನು ಹೊಂದಬೇಕು. ಪ್ರತಿಯೊಂದು ಸ್ಪರ್ಧೆಯಲ್ಲೂ ನಮ್ಮ ಕ್ರೀಡಾ ಜೀವನಕ್ಕೆ ಏನು ಪಡೆದಿದ್ದೇವೆ ಎನ್ನುವುದು ಮುಖ್ಯ. ಆಟಗಳಿಂದ ಉತ್ತಮ ಆರೋಗ್ಯವಂತೂ ನಮಗೆ ಸಿದ್ಧಿಸುತ್ತದೆ. ನಮ್ಮ ಮನಸ್ಸನ್ನು ಸದಾ ನಿರ್ಮಲವಾಗಿಟ್ಟುಕೊಂಡು ಆಡಬೇಕು. ಎಂದು ತಮ್ಮ ಜೀವನದ ಅನುಭವಗಳ ಮೂಲಕ ತಿಳಿ ಹೇಳಿದರು. ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಹಾಗೂ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ಹಾಗೂ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಬ್ರಹ್ಮಾವರ  ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಮಂಗಳೌಆರದಂದು  ನಡೆದ ಅಂತರ್ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಪ್ರಮುಖ ಬಿ. ಪೂಜಾರಿ ಅವರು ಏಳು ವರ್ಷ ವಯೋಮಿತಿಯ ವಿಭಾಗದ ಚದುರಂಗ ಸ್ಪರ್ಧೆಯಲ್ಲಿ ಐದೂ ಸುತ್ತಿನಲ್ಲೂ ವಿಜೇತನಾಗಿ ಜಿಲ್ಲಾ ಚಾಂಪಿಯನ್ ಆಗಿ ಹೊರಹೊಮ್ಮಿ,  ಅತ್ಯುನ್ನತ ಸಾಧನೆಯನ್ನು ಮಾಡಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಂತಹ ಗಣೇಶ ಮೊಗವೀರ, ಶಾಲಾ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಅವರು ಶುಭಾಶಯಗಳನ್ನು ಕೋರಿದ್ದಾರೆ. ಭೋದಕ – ಬೋಧಕೇತರ ವೃಂದದವರು ವಿದ್ಯಾರ್ಥಿಯ ಈ ಸಾಧನೆಯನ್ನು ಕೊಂಡಾಡಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ದಿನವೂ ಹತ್ತಾರು ಮಕ್ಕಳನ್ನು ತಮ್ಮ ಸ್ವಂತ ಮನೆಯ ಮಕ್ಕಳಂತೆ ಕಾಳಜಿಯಿಂದ ಆರೈಕೆ ಮಾಡುವ, ಅಕ್ಷರದ ಅರಿವು ಮೂಡಿಸುವ, ಸಂಸ್ಕೃತಿಯನ್ನು ಕಲಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಮತ್ತು ಅಭಿನಂದನನೀಯವಾದದ್ದು  ಎಂದು ಗಂಗೊಳ್ಳಿಯ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಮಡಿವಾಳ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗ ರಿ. ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಗಂಗೊಳ್ಳಿ ವಲಯದ 18 ಅಂಗನವಾಡಿ ಮತ್ತು ಶಿಶು ಮಂದಿರದ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಅಭಿನಂದಿಸುವ ಮಾತೃ ದೇವೋ ಭವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಂಗೊಳ್ಳಿಯ ಉದ್ಯಮಿ ವಿಠ್ಠಲ್ ಜಿ. ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಭವಾನಿ ಶಂಕರ್ ಖಾರ್ವಿ, ಮತ್ಸ್ಯೋದ್ಯಮಿ ರಾಘವೇಂದ್ರ ವಸಂತ ಮೇಸ್ತ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಶೇರುಗಾರ, ಗಂಗೊಳ್ಳಿಯ ಉದ್ಯಮಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯಕ್ಷಗಾನ ರಂಗದ ಶ್ರೇಷ್ಠ ಸಾಧಕ , ಪ್ರಸಂಗಕರ್ತ, ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ (89) ಅವರು ಬುಧವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಯಕ್ಷ ಕವಿ ಕಂದಾವರ ರಘುರಾಮಶೆಟ್ಟಿ ಅವರು ಬಹುಮುಖ ಪ್ರತಿಭೆಯ ಶ್ರೇಷ್ಠ ಪ್ರಸಂಗಕರ್ತರು. ನೂರು ನಾಟಕಗಳಲ್ಲಿ ಹಾಸ್ಯ ನಟನಾಗಿ, ಯಕ್ಷಗಾನದ ಭಾಗವತರಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ, ಪ್ರಸಂಗಕರ್ತರಾಗಿ, ನಾಟಕ, ಶಿಶು ಗೀತೆ ಅಭಿನಯ ಗೀತೆ, ಕವನಗಳನ್ನು ರಚಿಸಿದ ಅವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದರು. ಪ್ರಸಂಗಕರ್ತರಾಗಿ ಕಂದಾವರ ರಘುರಾಮ ಶೆಟ್ಟಿ ಅವರು ‘ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದರು. ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿಯಂತಹ ಸೂಪರ್ ಹಿಟ್ ಪ್ರಸಂಗಗಳನ್ನು ಕೊಡುಗೆಯಾಗಿ ನೀಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾಗಿ ಪುರಾಣ ಪ್ರವಚನದಲ್ಲಿ ವಾಚಕರಾಗಿ, ಪ್ರವಚಕರಾಗಿದ್ದರು. ಆರರಿಂದ ಏಳು ಪ್ರಶಸ್ತಿಗಳನ್ನು ಪಡೆದಿದ್ದರು. ಕಂದಾವರ ರಘುರಾಮ ಶೆಟ್ಟಿಯವರು ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ಕಂದಾವರದಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ  ’ಸಿದ್ಧಿಸೌರಭ 2025’ ವಾರ್ಷಿಕೋತ್ಸವ ಸಮಾರಂಭವು ಇತ್ತೀಚಿಗೆ ಬಹಳ ಅದ್ದೂರಿಯಾಗಿ ಜರುಗಿತು. ಈ ಕಾರ್ಯಕ್ರಮಕ್ಕೆ  ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ವೀಣಾ ಬನ್ನಂಜೆ ಅವರು ಮಾತನಾಡಿ, ಈ ಕಾಲದಲ್ಲಿ ಮಕ್ಕಳು ವಿದ್ಯಾಭ್ಯಾಸದ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಹಾಳಾಗುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಏಳಿಗೆಗಾಗಿ ಶಾಲೆಗಳು, ಪೋಷಕರು ಪ್ರಯತ್ನಿಸಬೇಕಾದರೆ ಬಹಳಷ್ಟು ಸಮಸ್ಯೆಗಳು ತಲೆದೋರುತ್ತವೆ. ಕೆಲವಷ್ಟು ಮೊಬೈಲ್ ಆಟಗಳು, ಆಡಿ ಬೆಳೆಯಬೇಕಾದ ಮಕ್ಕಳ ಜೀವನದ ಆಟವನ್ನೇ ಮುಗಿಸುತ್ತಿವೆ. ಹೊರಾಂಗಣ ಆಟಗಳು ಎಲ್ಲಿ ಅಧಿಕವಾಗಿರುವುದೋ ಅಲ್ಲಿ ಈ ರೀತಿಯ ಸಮಸ್ಯೆಗಳು ತಲೆದೋರಲಾರವು. ಈ ಶಾಲೆಯ ಕ್ರೀಡಾಸಾಧನೆಯನ್ನು ನೋಡಿದರೆ, ನಿಶ್ಚಯವಾಗಿ ಮಕ್ಕಳಿಗೆ ಹೊರಾಂಗಣ ಆಟಗಳು ಲಭಿಸುತ್ತಿವೆ ಎಂದು ಮನದಟ್ಟಾಗುತ್ತಿದೆ. ಇಲ್ಲಿ ರಚಿತವಾದ ಪ್ರತಿಯೊಂದು ವಿಭಾಗಕ್ಕೂ ಮತಂಗ, ಶಿಬಿ, ಘಟೋತ್ಕಚ ಮೊದಲಾದ ಬೇರೆ ಬೇರೆ ಹೆಸರನ್ನಿಟ್ಟಿರುವುದು ಮತ್ತು ಅವು ಬಹಳ ಅರ್ಥಗರ್ಭಿತವಾಗಿರುವುದು ಕಂಡುಬರುತ್ತಿವೆ. ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಕಗಳಿಗೆ ಮಾತ್ರ ಸೀಮಿತವಾದ ಜೀವನ ನಮ್ಮದಲ್ಲ. ಅದನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ‘ಸುರಭಿ ಸಂಸ್ಥೆ ಮಕ್ಕಳಿಗೆ` ಕಲಾ ಶಿಕ್ಷಣ ನೀಡುವುದರ ಮೂಲಕ ಸಮಾಜಕ್ಕೂ ಕಲಾ ಸೇವೆ ನೀಡುತ್ತಿದೆ. ಇದಕ್ಕೆ ಪ್ರತಿಫಲವಾಗಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ’ ಎಂದು ವಿಜಯ -ಬ್ಯಾಂಕ್ ನಿವೃತ್ತ ಸೀನಿಯ‌ರ್ ಮ್ಯಾನೇಜರ್ ವಸಂತ ಹೆಗ್ಡೆ ಹೇಳಿದರು. ಅವರು ಇಲ್ಲಿನ ಸೇನೇಶ್ವರ ದೇವಾಲಯದ ವೇದಿಕೆಯಲ್ಲಿ ಕನ್ನಡ ಶಾರದಾ- ರಾಜ್ಯೋತ್ಸವ ಅಂಗವಾಗಿ ನಡೆದ ಕನ್ನಡ ನುಡಿ ಹಬ್ಬ, ರಾಜ್ಯಮಟ್ಟದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು. ಕಥಾ ಸ್ಪರ್ಧೆಯಲ್ಲಿ ರಂಜಿನಿ ಅಡಿಗ, ಕುಮಾರಸ್ವಾಮಿ ಲೇಔಟ್ ಬೆಂಗಳೂರು ಸುರಭಿ ಸಂಸ್ಥೆಗೆ ದೊರೆತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ವಸಂತ ಹೆಗ್ಡೆ ಅನಾವರಣಗೊಳಿಸಿದರು. ಅವರ ‘ಮುಸಾಫಿರ್ ಹೂಂ ಯಾರೋಂ’ ಕಥೆ ಪ್ರಥಮ, ಸದಾಶಿವ ಸೊರಟೂರು ಹೊನ್ನಾಳಿ, ದಾವಣಗೆರೆ ಅವರ ‘ಬ್ಲಾಕ್ ಅಂಡ್ ವೈಟ್’ ದ್ವಿತೀಯ, ಲಕ್ಷ್ಮಣ ಶೆರೆಗಾರ ಗೋಕಾಕ್ ಬೆಳಗಾವಿ ಅವರ ‘ಬಿಡುಗಡೆ’ ತೃತೀಯ ಬಹುಮಾನ ಪಡೆದರು. ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಪ್ರಸ್ತುತ ದಿನಗಳಲ್ಲಿ ಮೊಬೈಲ್ ಗೀಳಿನಿಂದ ಮಕ್ಕಳು ಹೊರಬರಬೇಕು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ಅನಂತ ಪದ್ಮನಾಭ ಐತಾಳ್ ಹೇಳಿದರು. ಅವರು ಮಂಗಳವಾರ ನ್ಯೂ ಕಾರ್ಕಡ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬ್ರಹ್ಮಾವರ ವಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ, 2025-26 ಕಾರ್ಕಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವಿಕೆ ಬಹುಮುಖ್ಯವಾಗಿದೆ, ಈ ದಿಸೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪ್ರತಿಭೆ ಅನಾವರಣಗೊಳ್ಳುವ ವೇದಿಕೆಯಾಗಿದೆ ಎಂದರಲ್ಲದೆ ಗುರು ಹಿರಿಯರ ಬಗ್ಗೆ ಭಯದ ನೆರಳಲ್ಲಿ ಬದುಕಿದ ಅನುಭವಗಳನ್ನು ಹಂಚಿಕೊಂಡ ಅವರು ಸ್ಪರ್ಧೆಯಲ್ಲಿ ಭಾಗವಹಿಸುವಿಕೆಯ ಮೂಲಕ ತಮ್ಮಲ್ಲಿರುವ ವಿವಿಧ ಸಾರ್ಮಥ್ಯವನ್ನು ತೊರ್ಪಡಿಸಿ ಎಂದು ಕರೆಕೊಟ್ಟರು. ಕಾರ್ಯಕ್ರಮದಲ್ಲಿ ಮಕ್ಕಳು ರಚಿಸಿದ ಚಿಟ್ಟೆಯನ್ನು ವೇದಿಕೆಯಲ್ಲಿದ್ದ ಗಣ್ಯರು ಅನಾವರಣಗೊಳಿಸಿದರು. ಸಭೆಯಲ್ಲಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 104ನೇ ಶ್ರೀರಾಮ ಭಜನಾ ಸಂಕೀರ್ತನಾ ಸಪ್ತಾಹವು ಮಂಗಳವಾರದಂದು ಬೆಳಿಗ್ಗೆ ಆರಂಭಗೊಂಡಿತು. ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ದೀಪ ಬೆಳಗಿಸಿ ಸಪ್ತಾಹಕ್ಕೆ ಚಾಲನೆ ನೀಡಿದರು. ಜತೆ ಮೊಕ್ತೇಸರರು, ಆಡಳಿತ ಮಂಡಳಿ ಸದಸ್ಯರು, ಭಜನಾ ಮಂಡಳಿಯವರು, ಅರ್ಚಕ ವೃಂದದವರು ಪಾಲ್ಗೊಂಡಿದ್ದರು. ಡಿಸೆಂಬರ್ 2ರ ತನಕ ಸಪ್ತಾಹ ನಡೆಯಲಿದ್ದು, ಊರ, ಪರವೂರ ಸಂತ ಮಂಡಳಿಯವರು ಏಳು ದಿನ ಹಗಲು ರಾತ್ರಿ ನಡೆಯುವ ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: 2025 ನವೆಂಬರ್‌ನಲ್ಲಿ ನಡೆದ ಸಿ.ಎಸ್.ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ವರ್ಷಾ ಕೋಟ್ಯಾನ್, ರ್ಯಾನ್‌ ಮಾಸ್ಕರೇನ್ಹಸ್, ಸುಪ್ರೀತಾ ಎಂ. ಕೆ., ಸಿಂಚನಾ, ವೀಕ್ಷಾ, ಮನೀಷಾ, ರಿಯಾ ಅಂಜುಮ್, ಸಿ. ಜ್ನಾನಿಕಾ ಶೆಟ್ಟಿ, ವೈಷ್ಣವಿ ರಾಜೇಶ್ ರೇನಕೆ ಹಾಗೂ ಅಭಿಷ್ ಆಚಾರ್ಯ ಮೊದಲ ಪ್ರಯತ್ನದಲ್ಲಿ  ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಆಳ್ವಾಸ್ ಕಾಲೇಜು 77% ದಷ್ಟು ಫಲಿತಾಂಶ ದಾಖಲಿಸಿದೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕರಾದ ಅಶೋಕ ಕೆ.ಜಿ ಹಾಗೂ ಸಿ.ಎಸ್. ಸಂಯೋಜಕರಾದ ದೀಕ್ಷಾ ಅಸ್ರಣ್ಣ ಅಭಿನಂದಿಸಿದ್ದಾರೆ.

Read More