ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 104ನೇ ಶ್ರೀರಾಮ ಭಜನಾ ಸಂಕೀರ್ತನಾ ಸಪ್ತಾಹವು ಮಂಗಳವಾರದಂದು ಬೆಳಿಗ್ಗೆ ಆರಂಭಗೊಂಡಿತು.
ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ದೀಪ ಬೆಳಗಿಸಿ ಸಪ್ತಾಹಕ್ಕೆ ಚಾಲನೆ ನೀಡಿದರು. ಜತೆ ಮೊಕ್ತೇಸರರು, ಆಡಳಿತ ಮಂಡಳಿ ಸದಸ್ಯರು, ಭಜನಾ ಮಂಡಳಿಯವರು, ಅರ್ಚಕ ವೃಂದದವರು ಪಾಲ್ಗೊಂಡಿದ್ದರು.

ಡಿಸೆಂಬರ್ 2ರ ತನಕ ಸಪ್ತಾಹ ನಡೆಯಲಿದ್ದು, ಊರ, ಪರವೂರ ಸಂತ ಮಂಡಳಿಯವರು ಏಳು ದಿನ ಹಗಲು ರಾತ್ರಿ ನಡೆಯುವ ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.










