ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಾತಿ, ಭೌಗೋಳಿಕ, ವರ್ಣ, ಭಾಷೆ, ಲಿಂಗ ಮುಂತಾದ ಅಸಮಾನತೆಗಳು ಭಾರತದ ಸೌಹಾರ್ದತೆಯನ್ನು ಛಿದ್ರಗೊಳಿಸಿವೆ. ಇಂತಹ ಹಲವು ಅಸಮಾನತೆಗಳನ್ನು ಸೃಷ್ಠಿ ಮಾಡಿಕೊಂಡಿರುವ ನಮ್ಮ ಸಮಾಜದಲ್ಲಿ ಸೌಹಾರ್ದತೆಯ ಸ್ಥಾಪನೆ ಎನ್ನುವುದು ಒಂದು ಸವಾಲೇ ಸರಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಮಂಗಳವಾರ ತಾಲೂಕು ಸದ್ಭಾವನಾ ವೇದಿಕೆ ಹಾಗೂ ಕನ್ಯಾನದ ನಮ್ಮ ಭೂಮಿ ಸಂಸ್ಥೆಯ ಆಶ್ರಯದಲ್ಲಿ ಹಟ್ಟಿಯಂಗಡಿ ಸಮೀಪದ ಕನ್ಯಾನದ ನಮ್ಮ ಭೂಮಿ ಸಂಸ್ಥೆಯಲ್ಲಿ ʼಸಂವಿಧಾನದ ಆಶಯಗಳಿಗೆ ಸೌಹಾರ್ದವೇ ಮೆಟ್ಟಿಲುʼ ಎಂಬ ವಿಚಾರ ಸಂಕಿರಣ – ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಕಟ್ಟಿದ ಇದರ ಗೋಡೆಯನ್ನು ಒಮ್ಮೆಲೆ ಹೊಡೆದು ಹಾಕುವುದು ಅಷ್ಟೊಂದು ಸುಲಭವಲ್ಲ. ಆದರೆ ನಾವೆಲ್ಲ ಮನಸ್ಸು ಮಾಡಿದರೆ ಕ್ಷಣಾರ್ಧದಲ್ಲಿ ಕೆಡವಬಹುದು. ಸೌಹಾರ್ದತೆಯನ್ನು ಸಾಧಿಸುವ ಹೆಜ್ಜೆಯನ್ನು ಇಡಬಹುದು ಎಂದರು. ಇದಕ್ಕೆ ಪೂರಕವಾಗಿ ನಮ್ಮೊಂದಿಗೆ ನಮ್ಮ ಸಂವಿಧಾನವಿದೆ. ಎಲ್ಲಾ ರೀತಿಯ ಅಸಮಾನತೆಗಳನ್ನು ತೊಡೆದು ಹಾಕುವ, ಸಮಾನತೆಯನ್ನು ಎತ್ತಿ ಹಿಡಿಯುವ ಎಲ್ಲವನ್ನೂ ಸಂವಿಧಾನ ಒಳಗೊಂಡಿದೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೇಡಿಯೋ ಮಾಧ್ಯಮವು ಇಂದಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ ಎಂದು ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಬುಧವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ 89.6 ಎಫ್.ಎಮ್ ನ ವಾರ್ಷಿಕೋತ್ಸವ “ಹೌಂದೇರಾಯ್ನ ವಾಲ್ಗವಾ” ಸಮಾರಂಭವನ್ನು ದೀಪ ಬೆಳಗಿಸಿ ಮತ್ತು ಗುರು ಮಾರುತಿ ಹೌಂದೇರಾಯ್ನ ವಾಲ್ಗವಾ ತಂಡ ರಿ, ಪಾರಂಪಳ್ಳಿ ಸಾಲಿಗ್ರಾಮ ಅವರಿಗೆ ಸಿಂಗಾರ ಹೂವನ್ನು ನೀಡುವುದರ ಮೂಲಕ ವಿಭಿನ್ನವಾಗಿ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕತೆ ಎನ್ನುವುದು ಹಾಸುಹೊಕ್ಕಾಗಿದೆ. ಆದರೆ ನಾವು ಎಷ್ಟೇ ಆಧುನಿಕೃತಗೊಂಡರೂ ಮೂಲ ಸಂಸ್ಕೃತಿಯನ್ನು ನಾವು ಉಳಿಸಿಕೊಂಡು ಹೋಗಬೇಕು. ಸಾಮಾಜಿಕವಾಗಿ ಚರ್ಚೆಗಳಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಬಹಳವಿದೆ. ಮಾಧ್ಯಮಗಳು ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ವಹಿಸಿದ್ದರು. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮುಖ್ಯ ಅತಿಥಿಗಳಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೇಸಿಐ ಕಟಪಾಡಿ ಆತಿಥ್ಯದಲ್ಲಿ ಮಟ್ಟು ಬೀಚ್ನಲ್ಲಿ ಕಡಲೋತ್ಸವ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳು ನೆರವೇರಿದ್ದು ಈ ಸಂದರ್ಭದಲ್ಲಿ ಜೇಸಿಐ ಹಾಲಾಡಿ ವಾರಾಹಿ ಘಟಕವು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಗದು ಬಹುಮಾನ ಹಾಗೂ ಟ್ರೋಫಿಯೊಂದಿಗೆ ಪ್ರಥಮ ಬಹುಮಾನ ಪಡೆದುಕೊಂಡಿರುತ್ತದೆ. ವಲಯ 15ರ ವಲಯಧಿಕಾರಿ ಜೆಎಫ್ಎಫ್ ಸಂತೋಷ್ ಶೆಟ್ಟಿ, ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಜೇಸಿ ಪ್ರದೀಪ್ ಹಾಲಾಡಿ ಅವರಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಹಸ್ತಾoತರಿಸಿದರು. ಈ ಸಂದರ್ಭದಲ್ಲಿ ಜೇಸಿಐ ಹಾಲಾಡಿ ವಾರಾಹಿ ಘಟಕದ ಉಪಾಧ್ಯಕ್ಷರಾದ ಜೇಸಿ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಜೇಸಿ ಅಶೋಕ್ ಆಚಾರ್ಯ, ಲೇಡಿ ಜೇಸಿ ಅಧ್ಯಕ್ಷೆ ಜೇಸಿ ಅವಶ್ಯ ಶೆಟ್ಟಿ,ಜೇಸಿ ರಾಘವೇಂದ್ರ ಕುದ್ರುಮನೆ, ಜೇಸಿ ನಾಗೇಶ್, ಜೇಸಿ ಕಿರಣ್, ಜೇಸಿ ಪ್ರಶಾಂತ್, ಜೆಸಿ ಶ್ರೀಕಾಂತ್ ಆಚಾರಿ, ಜೇಸಿ ಮಂಜುಳಾ ಶೆಟ್ಟಿ, ಜೇಸಿ ದೀಪ ಶೆಟ್ಟಿ, ಜೇಸಿ ಆಶಾ ರಾಜೀವ ಕುಲಾಲ್, ದೀಪಾ ಪ್ರದೀಪ್, ವಲಯ ಉಪಾಧ್ಯಕ್ಷರು, ವಲಯ ನಿರ್ದೇಶಕರು, ಘಟಕಧ್ಯಕ್ಷರು, ಸದಸ್ಯರು ಮತ್ತಿತರರು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (NCC) ಘಟಕದ ಸಂಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಸಂತ್ ಅವರು ಪ್ರತಿಷ್ಠಿತ ‘ಲೆಫ್ಟಿನೆಂಟ್’ (Lieutenant) ಪದವಿಗೆ ಭಾಜನರಾಗುವ ಮೂಲಕ ಕಾಲೇಜಿಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ಒಟ್ಟು ಮೂರು ತಿಂಗಳ ಕಾಲ ನಡೆದ ‘ಪ್ರಿ-ಕಮಿಷನ್’ (PRCN – Pre-Commission) ಕಠಿಣ ಸೇನಾ ತರಬೇತಿಯಲ್ಲಿ ಅವರು ಪಾಲ್ಗೊಂಡಿದ್ದರು. ಸೇನಾ ಪಡೆಯ ಅತ್ಯುನ್ನತ ಶಿಸ್ತು, ನಾಯಕತ್ವಗುಣಗಳು, ಶಸ್ತ್ರಾಸ್ತ್ರ ಬಳಕೆ ಹಾಗೂ ದೈಹಿಕ-ಮಾನಸಿಕ ಸಾಮರ್ಥ್ಯವನ್ನು ರೂಪಿಸುವ ಈ ತರಬೇತಿಯನ್ನು ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ಲೆಫ್ಟಿನೆಂಟ್ ಶ್ರೇಣಿಯನ್ನು ಪ್ರದಾನ ಮಾಡಲಾಗಿದೆ. ಈ ತರಬೇತಿಯನ್ನು ಪೂರೈಸಿದ ಹಿನ್ನೆಲೆಯಲ್ಲಿ, ಡಾ. ವಸಂತ್ ಅವರು ಇದೀಗ ‘ಅಸೋಸಿಯೇಟ್ ಎನ್ಸಿಸಿ ಅಧಿಕಾರಿ’ಯಾಗಿ (Associate NCC Officer -ANO) ಭಡ್ತಿ ಪಡೆದಿದ್ದಾರೆ. ಒಬ್ಬ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಜವಾಬ್ದಾರಿಯ ಜೊತೆಗೆ ಸೇನಾ ತರಬೇತಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿಗಳು ಸೃಜನಶೀಲ ಚಿಂತನೆಗಳನ್ನು ಹೊಂದಿರಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಿ, ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಠೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಉತ್ತಮವಾಗುತ್ತದೆ. ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಕೃಷ್ಣ ಪೂಜಾರಿ ಹೇಳಿದರು. ಅವರು ಎಸ್. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯಲ್ಲಿ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಎಟಿಎಲ್ ಟಿಂಕರಿಂಗ್ ಲ್ಯಾಬ್ನಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ ’ಎಟಿಎಲ್ ಬೇಸಿಗೆ ಶಿಬಿರ’ವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಎನ್. ಸದಾಶಿವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಸ.ವಿ. ಆಂಗ್ಲ ಮಾಧ್ಯಮ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶಾಂತಿ ಡಿಕೋಸ್ಟ, ಸಂಪನ್ಮೂಲ ವ್ಯಕ್ತಿ ನಿಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಇಂದಿನ ದಿನಗಳಲ್ಲಿ ನಮ್ಮ ಸುತ್ತಲಿನ ಪರಿಸರದಲ್ಲೇ ಅಪಾರ ಮಾಹಿತಿಯಿದ್ದು, ಅದನ್ನು ಅರಿಯಲು ಸದಾ ಮೊಬೈಲ್ ಅಥವಾ ಇಂಟರ್ನೆಟ್ ಅವಶ್ಯಕವಿಲ್ಲ. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ವಸ್ತುಗಳನ್ನು ಗಮನಿಸುವ ಮೂಲಕವೇ ಬಹಳಷ್ಟು ಕಲಿಯಬಹುದು ಎಂದು ಮಾಹೆಯ ಸೌರ ಭೌತಶಾಸ್ತ್ರ ಸಂಶೋಧಕ ಅತುಲ್ ಭಟ್ ಹೇಳಿದರು. ಆಳ್ವಾಸ್ ಶಾಲೆ ಆಯೋಜಿಸಿದ್ದ ‘ಖಗೋಳಶಾಸ್ತ್ರ ಬೇಸಿಗೆ ಶಿಬಿರ 2026ʼ ಉದ್ಘಾಟಿಸಿ ಮಾತನಾಡಿ, ತಂತ್ರಜ್ಞಾನವನ್ನು ಬಳಸುವ ವೇಳೆ ವಿದ್ಯಾರ್ಥಿಗಳು ತಮ್ಮ ಚಿಂತನಾ ಶಕ್ತಿ ಮತ್ತು ನೆನಪಿನ ಸಾಮರ್ಥ್ಯವನ್ನು ಕಳೆದುಕೊಳ್ಳಬಾರದು ಎಂದು ತಿಳಿಸಿದರು.ಹಿಂದಿನ ದಿನಗಳಲ್ಲಿ ಮೊಬೈಲ್ಗಳಿಲ್ಲದೆ ಅನೇಕ ದೂರವಾಣಿ ಸಂಖ್ಯೆಗಳನ್ನೇ ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು. ಆದರೆ ಈಗ ತಂತ್ರಜ್ಞಾನಕ್ಕೆ ಅತಿಯಾಗಿ ಅವಲಂಬಿತರಾಗಿರುವುದರಿಂದ ನೆನಪಿನ ಶಕ್ತಿ ಕುಂದುತ್ತಿದೆ ಎಂದರು. ತಮ್ಮ ಬಾಲ್ಯಯದ ಅನುಭವವನ್ನು ಹಂಚಿಕೊಂಡ ಅವರು, ಖಗೋಳಶಾಸ್ತ್ರ ಕಲಿಯಲು ಸೌಲಭ್ಯಗಳಿಲ್ಲದ ಸಂದರ್ಭದಲ್ಲೂ ಪರಿಶ್ರಮದಿಂದ ನಕ್ಷತ್ರಗಳನ್ನು ಗುರುತಿಸಿ ಕಲಿತಿದ್ದೇವೆ. ಆ ರೀತಿಯ ಪ್ರಯತ್ನವೇ ನಿಜವಾದ ಜ್ಞಾನವನ್ನು ನೀಡುತ್ತದೆ. ಇಂದಿನ ಕಾಲದಲ್ಲಿ ಮೊಬೈಲ್ ಆ್ಯಪ್ಗಳ ಮೂಲಕ ನಕ್ಷತ್ರಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ ವಾರ್ಷಿಕ ಮಿತ್ರಕೂಟ ಸಮ್ಮಿಲನ 2026 ಕಾರ್ಯಕ್ರಮ ಕಾಲೇಜಿನ ಮುಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ, ಗಂಗೊಳ್ಳಿಯ ಸ್ಟೆಲ್ಲಾ ಮೇರಿಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಪ್ರಣಯ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾಲೇಜು ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿರುವ ವಿದ್ಯಾರ್ಥಿಗಳಿಗೆ ನಿರಂತರ ಬೆಂಬಲ ನೀಡುತ್ತಾ ಬಂದಿದೆ. ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಬದುಕು ಈ ಸಂಸ್ಥೆಗೆ ಬಂದು ಬೆಳಗಿದೆ. ಕಾಲೇಜು ಕನ್ನಡ ಕರಾವಳಿ, ಮಂಗಳೂರು ವಿಶ್ವವಿದ್ಯಾನಿಲಯ ಮಾತ್ರವಲ್ಲ, ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿ ಮೂಡಿ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅವರು ಸಂಸ್ಥೆಯ ಶ್ರೇಯೋಭಿವೃದ್ಧಿಯಲ್ಲಿ ಪ್ರಾಕ್ತನ ವಿದ್ಯಾರ್ಥಿಗಳ ಮಹತ್ವದ ಬಗ್ಗೆ ತಿಳಿಸಿದರು. ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ ಶ್ಯಾನುಭೋಗ್ ಪ್ರಾಸ್ತಾವಿಸಿ, ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಆಶಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಜೈ ಕುಂದಾಪ್ರ ಸೇವಾ ಟ್ರಸ್ಟ್ ಇವರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಪೂರ್ವಭಾವಿಯಾಗಿ ಸಮಾಜದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜಮುಖಿ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಕೋಟ ಹಾಡಿಕೆರೆ ಶ್ರೀ ಶನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು. ಸಕಡ್ ಫೌಂಡೇಶನ್ ಸಂಸ್ಥೆಯ ಪ್ರವರ್ತಕ ಕೆ. ಶ್ರೀಕಾಂತ ಶೆಣೈ ಕೋಟ ಅಧ್ಯಕ್ಷತೆ ವಹಿಸಿದ್ದರು. ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಕಾಯಕ ಜೀವಿಗಳಾದ ಸುಬ್ರಹ್ಮಣ್ಯ ಬೀಜಾಡಿ, ಅನಂತ ಪೂಜಾರಿ, ವೆಂಕಟೇಶ್ ಪೂಜಾರಿ, ಟಿ. ಕೃಷ್ಣ ಪೂಜಾರಿ, ಕೆ. ಅಣ್ಣಯ್ಯ ಮರಕಾಲ ರವರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೋಟ ಶನೀಶ್ವರ ದೇಗುಲದ ಧರ್ಮದರ್ಶಿ ಕೆ. ಭಾಸ್ಕರ್ ಸ್ವಾಮಿ, ಪಂಚವರ್ಣದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಸಂಸ್ಥೆಯ ಗೌರವ ಸಲಹೆಗಾರರಾದ ತಿಮ್ಮ ಕಾಂಚನ್, ಆದಿತ್ಯ ಸಂಸ್ಥೆಯ ಅಧ್ಯಕ್ಷ ಪುಂಡಲೀಕ ಮೊಗವೀರ ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯರಾಜ್ ಸಾಲ್ಯಾನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿ, ದಿವ್ಯ ಕುಂದಾಪುರ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸ್ತುತ ಬೇಸಿಗೆಯ ಹಿನ್ನೆಲೆ, ಬಿಸಿಲಿನ ಪ್ರಖರತೆ ದಿನೇ ದಿನೇ ಹೆಚ್ಚುತ್ತಿದ್ದು, ಶಾಖದ ಹೊಡೆತದಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಹೊರಡಿಸಲಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತೀ ಹೆಚ್ಚು ತಾಪಮಾನದದಿಂದ ಮಾನವನ ಮೇಲೆ ಸಾಮಾನ್ಯವಾಗಿ ನಿರ್ಜಲೀಖರಣ, ಶಾಖ ಸೆಳೆತ, ಶಾಖದ ಬಳಲಿಕೆ ಮತ್ತು ಶಾಖದ ಆಘಾತದಂತಹ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇದ್ದು, ಈ ಬಗ್ಗೆ ರಕ್ಷಣೆ ಪಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಪೋಸ್ಟರ್, ಬ್ಯಾನರ್, ಜಿಂಗಲ್ಸ್ ಗಳ ಮೂಲಕ ಮಾಹಿತಿ ನೀಡುವುದರೊಂದಿಗೆ, ಅರಿವು ಮೂಡಿಸಿ ಜನಸಾಮಾನ್ಯರ ಆರೋಗ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಸಿರು ಕೋಟ ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಕಾರ್ಯ ನಿರತ ಪತ್ರಕರ್ತರ ಸಂಘ ಬ್ರಹ್ಮಾವರ ತಾಲೂಕು, ಕುಂದಾಪ್ರ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಮಂಗಳೂರು, ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಕೋಟತಟ್ಟು ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ಮೇ.3ರಂದು ನಡೆಯುವ ಕಾಲಮಿತಿಯ 6ನೆಯ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ 2026ರ ಸಮ್ಮೇಳನ ಕಾರ್ಯಕ್ರಮ ಜರಗಲಿದೆ. ಸಮ್ಮೇಳನಾಧ್ಯಕ್ಷರಾಗಿ ಕುಂದಾಪ್ರ ಕನ್ನಡದ ಪರಿವ್ರಾಜಕ ಚೇತನ್ ನೈಲಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಕುಂದಾಪ್ರ ಕನ್ನಡದ ಕಂಪನ್ನು ಪಸರಿಸಲು ಹಲವಾರು ಹೊಸ ಯೋಚನೆಗಳ ಕುರಿತು ಕೆಲಸ ಮಾಡುತ್ತ ಸಾಹಿತ್ಯ, ಮತ್ತು ದೃಶ್ಯ ಮಾಧ್ಯಮದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕಿರುಚಿತ್ರಗಳಲ್ಲಿ ಅಭಿನಯಿಸಿ ಕುಂದಾಪ್ರ ಕನ್ನಡಕ್ಕೆ ಒಂದು ಹೊಸ ದುಕ್ಕೆ ನೀಡಿರುವ…
