Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಪಿ.ಎಂ. ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರನಾರಾಯಣ ಬಿಲ್ಲವ (ಸಿ.ಎನ್‌. ಬಿಲ್ಲವ) ಶಿರೂರು ಅವರು ಕರ್ನಾಟಕ ರಾಜ್ಯ ಸರಕಾರವು ಡಾ. ಸರ್ವೆಪಲ್ಲಿ ರಾಧಕೃಷ್ಣನ್‌ ಅವರ ಹೆಸರಿನಲ್ಲಿ ನೀಡಲಾಗುವ 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 20 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದ್ದು, ಸಿ.ಎನ್‌. ಬಿಲ್ಲವ ಅವರು ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಶಿಕ್ಷಕರಾಗಿದ್ದಾರೆ. ಸಿ.ಎನ್‌. ಬಿಲ್ಲವ ಅವರು 60ಕ್ಕೂ ಹೆಚ್ಚು ಇಲಾಖಾ ತರಬೇತಿ ಪಡೆದಿದ್ದು ಜಿಲ್ಲಾ, ರಾಜ್ಯ ಮಟ್ಟದ ತರಬೇತಿಯ ಜೊತೆಗೆ ಸ್ಕಟ್, ಮಾಹಿತಿ ಸಿಂಧು, ಯೋಗ ಮುಂತಾದ ತರಬೇತಿಯನ್ನು ಪಡೆದಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಚಿತ್ರಕಲೆ, ಕೇ ಆರ್ಟ್ಸ್, ಕ್ರಾಫ್ಟ್, ಮರಳು ಶಿಲ್ಪ,ಕಲಿಕಾ ಮಾದರಿ ತಯಾರಿ, ಕಥೆ, ಕವನ, ನಾಟಕ ರಚನೆ, ಪತ್ರಿಕೆ ಸಂಪಾದಕತ್ವ, ಸಿಮೆಂಟ್ ಕಲಾಕೃತಿ ತಯಾರಿ, ಗಾರ್ಡನ್/ತೋಟಗಾರಿಕೆ ಜೊತೆಗೆ ಯೋಗ, ನಾಟಕ ಮತ್ತು ಯಕ್ಷಗಾನದ ಗೀಳು, ಶಿಕ್ಷಕ ವೃತ್ತಿಯೊಂದಿಗೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ  ಕುಂದಾಪುರದ ಗಾಂಧಿ ಮೈದಾನದಲ್ಲಿ  ನಡೆದ  ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿನಿಯರಾದ ರಿಷಾ, ಸಂಜನಾ, ಪ್ರೀತಿ, ಅಪೂರ್ವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಜೊತೆ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಗಾಣಿಗ, ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ದೈಹಿಕ ಶಿಕ್ಷಣ ಉಪನ್ಯಾಸಕ ರಾಘವೇಂದ್ರ ಗಾಣಿಗ, ದೈಹಿಕ ಶಿಕ್ಷಕ ಉಪನ್ಯಾಸಕರಾದ ಕೃಷ್ಣ ಉಪಸ್ಥಿತರಿದ್ದಾರೆ. ವಿದ್ಯಾರ್ಥಿ ಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶು ಮಂದಿರದ ಆಶ್ರಯದಲ್ಲಿ ಸೇವಾ ಸಂಗಮದ ಪುಟಾಣಿಗಳಿಂದ 41ನೇ ವರ್ಷದ ಶ್ರೀಕೃಷ್ಣ – ರಾಧೆಯರ ಬಾಲ ಲೀಲೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಇತ್ತೀಚಿಗೆ ಜರುಗಿತು. ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ಜಿಲ್ಲಾ ಕಾರ್ಯವಾಹ ಪ್ರಶಾಂತ್ ಅವರು ಮಾತನಾಡಿ, ಶ್ರೀ ಕೃಷ್ಣನ ವೇಷಧಾರಣೆ ಮಾತ್ರದೊಂದಿಗೆ ಶ್ರೀ ಕೃಷ್ಣನ ಆದರ್ಶಗಳನ್ನು ಪಾಲಿಸಲಾಗುವುದಿಲ್ಲ ಜೊತೆಯಲ್ಲಿ ಶ್ರೀ ಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸದ್ವಿನಿಯೋಗವಾಗುವುದೆಂದು ನೆರೆದ ಸಮಸ್ತ ಪಾಲಕವೃಂದಕ್ಕೆ ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ ಅವರು ಮಾತನಾಡಿ, 4 ದಶಕಗಳನ್ನು ಪೂರೈಸಿ 5ನೇ ದಶಕದಲ್ಲಿ ಮುನ್ನಡೆಯುತ್ತಿರುವ ಬೈಂದೂರು ಸೇವಾ ಸಂಗಮದ ಕಾರ್ಯವೈಖರಿ ಮತ್ತು ಪಾಲಕರ ಪ್ರೋತ್ಸಾಹ ಹಾಗೂ ಊರಿನ ಸಮಸ್ತ ಜನತೆಯ ಸಹಕಾರವನ್ನು ಸ್ಮರಿಸುತ್ತ ಮುಂದೆಯೂ ಕೂಡ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ಶ್ರಮಿಸುತ್ತಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಬೇಕೆಂದು ಕರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ರೈಸ್ತ ಭಾಂದವರು ತಮ್ಮ ಚರ್ಚುಗಳಲ್ಲಿ ಕ್ರೈಸ್ತರ ಪವಿತ್ರ ಹಬ್ಬವಾದ ಮೊಂತಿಫೆಸ್ತ್ ( ತೆನೆ ಹಬ್ಬ ) ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಕುಂದಾಪುರ, ಬಸ್ರೂರು, ತಲ್ಲೂರು, ನಾಡ, ತ್ರಾಸಿ, ಬೈಂದೂರು ಸೇರಿದಂತೆ 11 ಚರ್ಚ್ ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನೆರವೇರಿದವು. ಕುಂದಾಪುರದಲ್ಲಿ ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ ಮೊಂತಿ ಫೆಸ್ತ್ ಹುಟ್ಟು ಹಬ್ಬವನ್ನು ಬಹಳ ಶ್ರದ್ದಾಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳು ಬಾಲಾ ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ಬೈಂದೂರಿನ ಹೋಲಿಕ್ರಾಸ್‌ ಚರ್ಚಿನಲ್ಲಿ ತೆನೆ ಹಬ್ಬ ಮೊಂತಿ ಫೆಸ್ತ್ ನ್ನು ಉಡುಪಿಯ ರೆ. ಫಾ. ಅಶ್ವಿನ್‌ ಆರಾನ್ಹಾ , ಚರ್ಚಿನ ಧರ್ಮಗುರು ರೆ.ಫಾ. ವಿನ್ಸೆಂಟ್‌ ಕುವೆಲ್ಲೊ ಮತ್ತು ಬ್ರದರ್‌‌ ಪ್ರಥ್ವಿ ರೊಡ್ರಿಗಸ್ ರವರ ನೇತೃತ್ವದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಸಮಾಜದಲ್ಲಿನ ಅಸ್ಪೃಶ್ಯತೆ ಪಿಡುಗಿಗೆ ತಮ್ಮದೇ ನಿಲುವಿನಲ್ಲಿ ಸಮಾಧಾನಕರ ಉಪಾಯಗಳನ್ನು ಕಂಡುಕೊಂಡು, ಜೀವನವನ್ನು ಸಮಾಜದಲ್ಲಿ ಸಮಾನತೆಗಾಗಿ ಮುಡಿ-ಪಾಗಿಟ್ಟವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಶಾಸಕ ಎ. ಕಿರಣ್ ಕುಮಾರ್‌ ಕೊಡ್ಗಿ ಹೇಳಿದರು. ಅವರು ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುವ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಮಾನವರಲ್ಲಿ ಇರುವುದು ಒಂದೇ ಕುಲ, ಒಂದೇ ಜಾತಿ, ಒಂದೇ ದೇವರು ಎನ್ನುವ ಸಂದೇಶ ನೀಡಿದವರು. ವಿದ್ಯೆಯಿಂದ ಬಲಯುತರಾಗಬೇಕು, ಸಮಾನತೆ ನಮ್ಮ ಉಸಿರಾಗಿರಬೇಕು ಎಂದು ಹೇಳಿದ್ದ ಅವರು, ಕೇರಳದಿಂದ ಆರಂಭ ಮಾಡಿದ್ದ ಸಾಮಾಜಿಕ ಬದಲಾವಣೆ, ದೇಶಾದ್ಯಂತ ವಿಸ್ತರಿಸಿದ್ದರು. ವಿಶ್ವ ಮಾನವತ್ವದ ಗುರು, ಶಾಂತಿ ಪಥದ ನಡಿಗೆ ಹೇಳಿಕೊಟ್ಟಿದ್ದ ಅವರು ಬದುಕಿದ, ಪ್ರತಿಪಾದಿಸಿದ ದಾರಿಯಲ್ಲಿ ನಾವು ಸುಧಾರಣೆಗಳನ್ನು ನಡೆಯೋಣ ಎಂದರು. ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ಕಂದಾಯ ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್, ತಹಶೀಲ್ದಾರ್…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ಸಂದೇಶ ನೀಡಿ ಜಾತಿ ಮತ ಮೇಲು ಕೀಳುಗಳ ಭೇದ ಮರೆಸಿ, ದನಿಯಿಲ್ಲದವರ ದನಿಯಾಗಿ, ಶಕ್ತಿ ಇಲ್ಲದವರಿಗೆ ಆತ್ಮವಿಶ್ವಾಸದ ಶಕ್ತಿ ನೀಡಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಪ್ರೇರೇಪಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಜೀವನ ಎಲ್ಲರಿಗೂ ಮಾದರಿ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟರು ಅವರು ಮಣಿಪುರ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘ ಮಣಿಪುರ ಇವರ ಸಹಕಾರದೊಂದಿಗೆ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾತ್ಮಾಗಾಂಧಿ ಮತ್ತು ರವೀಂದ್ರ ನಾಥ್ ಟಾಗೋರರಂತಹ ವ್ಯಕ್ತಿಗಳು ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದು ಸಮಾನತೆಯ ಸಮಾಜ ರೂಪಿಸುವಲ್ಲಿ ಮಾರ್ಗದರ್ಶನ ಪಡೆದಿದ್ದು, ನಾವೂ ಕೂಡಾ ಅವರ ಆದರ್ಶ ಮತ್ತು ಸಿದ್ಧಾಂತಗಳನ್ನು ಪಾಲನೆ ಮಾಡುವ ಮೂಲಕ ಅವರ ಕನಸನ್ನು…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಪ್ರಥಮ ಬಿ.ಎಸ್.ಸಿ. ವಿದ್ಯಾರ್ಥಿನಿ ಆರ್ಯಶ್ರೀ ಅವರು ಸೆಪ್ಟೆಂಬರ್ 3 ಮತ್ತು 4 ರಂದು ಗೋವಾದಲ್ಲಿ ಇಂಡಿಯಾಸ್ ಟರ್ನ್ಸ್ ಮತ್ತು ಟ್ವಿರ್ಲ್ಸ್ ಅವರು ನಡೆಸಿದ  ಸೀಸನ್ -1 ಅಖಿಲ ಭಾರತ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ  ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರಿಗೆ ಕಾಲೇಜಿನ ವಿಶ್ವಸ್ಥ ಮಂಡಳಿ, ಆಡಳಿತ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು 2024-2025ನೇ ಸಾಲಿನಲ್ಲಿ 1.14 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 17 ಪಾಲು ಮುನಾಫೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಸಹಕಾರಿಯು 3832 ಸದಸ್ಯರನ್ನು ಹೊಂದಿದ್ದು, ಸಹಕಾರಿಯ ದುಡಿಯುವ ಬಂಡವಾಳ 100.80 ಕೋಟಿ ರೂ. ಮತ್ತು 85.56 ಕೋಟಿ ರೂ. ಠೇವಣಿ ಹೊಂದಿದೆ. 24.54 ಕೋಟಿ. ರೂ.ಗಳನ್ನು ವಿವಿಧ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ. ವೆಂಕಟೇಶ ಶೆಣೈ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾಗೃಹದಲ್ಲಿ ಭಾನುವಾರ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ 105ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತ್ವರಿತ ಹಾಗೂ ಉತ್ಕೃಷ್ಟ ದರ್ಜೆಯ ಗ್ರಾಹಕ ಸೇವೆಯನ್ನು ನೀಡಲು ಮತ್ತು ಸದಸ್ಯರಿಗೆ ನಗದು ರಹಿತ ವ್ಯವಹಾರ ನಡೆಸಲು ಸಹಕಾರಿಯು ಶ್ರಮಿಸುತ್ತಿದೆ. 2025-26ನೇ ಸಾಲಿನಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಆಡಳಿತ ಮಂಡಳಿ ಮಹತ್ವದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಸಾಸ್ತಾನದ ಗೋಳಿಗರಡಿ ಬ್ರಹ್ಮಬೈದರ್ಕಳ ದೈವಸ್ಥಾನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತೋತ್ಸವ ಅಂಗವಾಗಿ ಯುವ ಕಲಾವಿದೆ ಪ್ರಜ್ಞಾ ಜಿ. ಹಂದಟ್ಟು ಅವರ ಕೈಯಂಗಳದಿ ಮೂಡಿಬಂದ ಬೃಹತ್ ಬ್ರಹ್ಮಶ್ರೀ ನಾರಾಯಣ ಗುರುಗಳ ರಂಗೋಲಿ ಚಿತ್ರ ವಿಶೇಷವಾಗಿ ಗಮನ ಸೆಳೆಯಿತು. ಈ ಹಿಂದೆ ಕಟೀಲು ದುರ್ಗಾಪರಮೇಶ್ವರಿ, ಕೋಟ ಅಮೃತೇಶ್ವರಿ, ಚಿತ್ರನಟ ದೊಡ್ಡಣ್ಣ ಸೇರಿದಂತೆ ಅನೇಕ ಗಣ್ಯ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ಈ ಕಲಾವಿದೆ ಗುರುವಿಲ್ಲದೆ ಚಿತ್ರ ಕಲಾವಿದೆಯಾಗಿದ್ದು ಯೂಟೂಬ್ ಮೂಲಕ ಕಲಿತು ಇಂದು ಚಿತ್ರಕಲಾವಿದೆಯಾಗಿ ಗುರುತಿಸಿಕೊಂಡಿದ್ದಾಳೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಕಾರ್ಕಳ ತಾಲೂಕಿನ ಕುಕ್ಕುಂದೂರು ವಲಯ ಮಟ್ಟದ ನೂತನ ಸಂಘವನ್ನು ಪೊಸನೊಟ್ಟು ಅಂಬೇಡ್ಕರ್ ಭವನದಲ್ಲಿ ಉದ್ಘಾಟಿಸಲಾಯಿತು. ನೂತನ ಸಂಘದ ಉದ್ಘಾಟನೆಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶಶಿಕಲಾ ಅವರು ದೀಪವನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಸಮುದಾಯದ ಹಿರಿಯರು ಸುಧಾಕರ ಹಾಗೂ ಗೋಪ ಅವರು ಡೋಲು ಬಾರಿಸುವ ಮೂಲಕ ಸಂಘಟನೆಗೆ ಚಾಲನೆ ನೀಡಿದರು. ಪ್ರಾಸ್ತಾವಿಕ ಸಂಘಟನೆಯ ಬಲವರ್ಧನೆ ಕುರಿತು ಹಾಗೂ ಸಂಘನೆ ಬೆಳೆದು ಬಂದ ಹಾದಿಯ ಕುರಿತು ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷರಾದ ಬೊಗ್ರ ಕೊರಗ ಕೊಕ್ಕರ್ಣೆ ಇವರು ಮಾಹಿತಿ ನೀಡಿದರು. ನಂತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಚುನಾವಣಾ ಅಧಿಕಾರಿಯಾಗಿ ಒಕ್ಕೂಟದ ನಿಕಟ ಪೂರ್ವ ಕೋಶಾಧಿಕಾರಿ ಸತೀಶ್ ಪೆರ್ಡೂರು ಹಾಗೂ ಗೆಳೆಯರ ಬಳಗ ತಂಡದ ಅಧ್ಯಕ್ಷರು ಚಂದ್ರ ಕಳ್ತೂರು ನೆರವೇರಿಸಿದರು. ಅಧ್ಯಕ್ಷರಾಗಿ ಶಶಿಕಲಾ ಪಡ್ಯ, ಉಪಾಧ್ಯಕ್ಷರು ಸುಧಾಕರ ಕುಕ್ಕುಂದೂರು, ಕಾರ್ಯದರ್ಶಿ ಗೀತಾ ಪೊಸನೊಟ್ಟು, ಕೋಶಾಧಿಕಾರಿ ವಸಂತ, ಜೊತೆ ಕಾರ್ಯದರ್ಶಿ ಲಿಖಿತ,…

Read More