ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಇದೇ ಬರುವ ಮಾ.1ರಂದು ಏಕಪವಿತ್ರ ನಾಗಮಂಡಲ ಉತ್ಸವ ಜರಗಲಿದ್ದು ಈ ಪ್ರಯುಕ್ತ ಇದರ ಪೂರ್ವಭಾವಿ ಸಭೆ ಕೋಟದ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಸೋಮವಾರ ಜರಗಿತು. ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಚರ್ಚೆಗಳು ಹಾಗೂ ಸಲಹೆಗಳು ಗ್ರಾಮಸ್ಥರಿಂದ ಸ್ವೀಕರಿಸಲಾಯಿತು. ಧಾರ್ಮಿಕ ಸಭೆ ,ಹದಿನಾಲ್ಕು ಗ್ರಾಮಗಳಿಂದ ಹೊರಕಾಣಿಕೆ ಸಮರ್ಪಣೆ ದಿನ ಫೆ.25,26,27ರಂದು ನಿಗದಿ ಮತ್ತು ಭೋಜನ ಶಾಲೆ ಸಿದ್ಧಪಡಿಸುವ ಕುರಿತು, ಪಾರ್ಕಿಂಗ್ ವ್ಯವಸ್ಥೆ ಕುರಿತಂತೆ ಕೋಟ ಠಾಣಾ ಮೈದಾನ, ಮಾಂಗಲ್ಯ ಮಂದಿರ, ಶಾಂಭವೀ ಶಾಲೆ ಮೈದಾನ ಉಪಯೋಗಿಸುವ ನಿರ್ಧಾರ ಕುರಿತು ವಿಸ್ತೃತ ಚರ್ಚೆ ನಡೆಸಿತು. ದೇಗುಲದ ಟ್ರಸ್ಟ್ಗಳಾದ ಸುಭಾಷ್ ಶೆಟ್ಟಿ, ಶಿವ ಪೂಜಾರಿ, ಸುಧಾ ಪೂಜಾರಿ, ಜ್ಯೋತಿ ಡಿ. ಕಾಂಚನ್, ಗಣೇಶ್ ನೆಲ್ಲಿಬೆಟ್ಟು, ಸುಬ್ರಾಯ ಜೋಗಿ, ರತನ್ ಐತಾಳ್ ಗ್ರಾಮದ ಪ್ರಮುಖರಾದ ಕೃಷ್ಣ ಕಾಂಚನ್, ಭುಜಂಗ ಗುರಿಕಾರ, ಶಂಕರ್ ಕುಂದರ್, ಸತೀಶ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ‘ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದರಲ್ಲಿಯೇ ಮುಂದುವರಿಯಬೇಕು. ಪೋಷಕರು ಮಕ್ಕಳಿಗೆ ಅದೇ ಮಾಡಿ ಇದೇ ಮಾಡಿ ಎಂದು ಒತ್ತಡ ಹೇರಬಾರದು’ ಎಂದು ಸು-ಫಮ್- ಸೋ’ ಚಿತ್ರದ ಮೂಲಕ ರವಿಯಣ್ಣ ಎಂದೇ ಪ್ರಸಿದ್ಧಿ ಪಡೆದ, ನಟ ಗೌತಮ್ ಶನೀಲ್ ಕಿವಿಮಾತು ಹೇಳಿದರು. ಅವರು ತಾಲೂಕಿನ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ʼಗುರುಕುಲ ಕಾರ್ನಿವಲ್ ಮಕ್ಕಳ ಹಬ್ಬʼ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಸು ಫ್ರಮ್ ಸೋ’ ಚಿತ್ರದ ನಟ ರವಿಯಣ್ಣ ಮಕ್ಕಳ ಹಬ್ಬದ ಪ್ರಮುಖ ಆಕರ್ಷಣೆಯಾಗಿದ್ದರು. ಚೆಂಡೆವಾದನ ಮೋಜು ಮೋಜಿನ ಮುಖವಾಡ ನೃತ್ಯ ತಂಡದೊಂದಿಗೆ ವೇದಿಕೆಗೆ ಬರುವಾಗ ರವಿಯಣ್ಣನಿಗೆ ಮಕ್ಕಳಿಂದ ಭಾರೀ ಕರತಾಡನದ ಸ್ವಾಗತ ದೊರೆಯಿತು. ಚಿತ್ರದ ಹಾಡಿಗೆ ಮಕ್ಕಳು, ಶಿಕ್ಷಕರೊಂದಿಗೆ ವೇದಿಕೆಯಲ್ಲಿಯೇ ಕುಣಿದು ಕುಪ್ಪಳಿಸಿದರು. ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ಶಾಲಾ ಆವರಣದಲ್ಲಿ ವೈವಿಧ್ಯಮಯ ಮಳಿಗೆ:ಮಕ್ಕಳಿಗೆ ವ್ಯವಹಾರ ಜ್ಞಾನದ ಅರಿವು ಮೂಡಿಸುವ ಸಲುವಾಗಿ ಮಕ್ಕಳು, ಪೋಷಕರ ಸಹಿತ 50 ಕ್ಕೂ ಮಿಕ್ಕಿ ವಾಣಿಜ್ಯ ಮಳಿಗೆಗಳನ್ನು ತೆರೆಯಲಾಗಿತ್ತು. ಮಕ್ಕಳು, ಪೋಷಕರೇ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಚಿತ್ರ ನಟ ರಿಷಬ್ ಶೆಟ್ಟಿ ದಂಪತಿಗಳು ಭೇಟಿ ನೀಡಿ, ಶ್ರೀ ವಿನಾಯಕನಿಗೆ ಪ್ರಿಯವಾದ 125 ತೆಂಗಿನಕಾಯಿ, ಮೂಡುಗಣಪತಿ ಸೇವೆಯನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯರು ರಿಷಬ್ ಶೆಟ್ಟಿ ದಂಪತಿಗಳನ್ನು ಆದರಿಂದ ಬರಮಾಡಿಕೊಂಡು ಶ್ರೀ ದೇವಳದಿಂದ ಗೌರವ ಸಮರ್ಪಣೆಯನ್ನು ಮಾಡಿದರು. ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಸಹೋದರರು ದೇವರ ವಿಶೇಷ ಸಿರಿಮುಡಿಗಂಧ ಪ್ರಸಾದವನ್ನು ನೀಡಿ ಆಶೀರ್ವದಿಸಿದರು. ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಧರ್ಮದರ್ಶಿಗಳಾದ ಕೆ. ಪದ್ಮನಾಭ ಉಪಾಧ್ಯಾಯರು, ಶ್ರೀದೇವಳದ ಆಡಳಿತ ಹಾಗೂ ಅರ್ಚಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿ-ರೀಚ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ನಡೆಸುವ ಸಿ.ಎಸ್ ಫೌಂಡೇಶನ್ ಪರೀಕ್ಷೆಗೆ ಹಾಜರಾದ ಪ್ರಥಮ ವರ್ಷದ ವಾಣಿಜ್ಯ ವಿಭಾಗದ 21 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ 100 ಶೇಕಡಾ ಫಲಿತಾಂಶ ದೊರಕಿರುತ್ತದೆ. ಸಾಧಕ ವಿದ್ಯಾರ್ಥಿಗಳಿಗೆ ತರಬೇತಿ ಮಾರ್ಗದರ್ಶನ ನೀಡಿದ ವಿ-ರೀಚ್ ಸಂಸ್ಥೆ ಹಾಗೂ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾಷೆ ನಾಶ ಆದರೆ ಸಂಸ್ಕೃತಿ ಸತ್ತಂತೆ. ಕುಂದಾಪ್ರ ಕನ್ನಡ ಭಾಷೆ ಉಳಿದಿದೆ, ರಂಗಾಗಿದೆ, ಕಳೆಗಟ್ಟಿದೆ. ಕುಂದಗನ್ನಡದಲ್ಲಿರುವ ಅಮೂಲ್ಯ ದಾಖಲೆಗಳನ್ನು ಕಾಪಾಡುವುದು ಅಗತ್ಯವಾಗಿದೆ. ಇದನ್ನು ಚಂದವಾಗಿ ಮುಂದಿನ ಪೀಳಿಗೆಗೆ ರವಾನಿಸಬೇಕು. ಅದಕ್ಕಾಗಿ ಪದಗಳ, ಸಾಹಿತ್ಯದ ದಾಖಲೀಕರಣವಾಗಬೇಕು. ಕುಂದ ಕನ್ನಡ ಉಳಿಸಲು ಸಾಕಷ್ಟು ಕಾರ್ಯಕ್ರಮ ನಾವು ಮಾಡಿದ್ದೇವೆ. ಆದರೆ ಬರೇ ಗೌಜಿಯಿಂದ ಕುಂದಾಪ್ರ ಕನ್ನಡ ಬೆಳೆಯದು, ಇದಕ್ಕಾಗಿ ಹಿಂದೆ ಶ್ರಮಿಸಿದ ಹಿರಿಯರ ಸಂಗ್ರಹವನ್ನು ಉಳಿಸಿಕೊಳ್ಳಬೇಕು. ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಉತ್ತಮ ಹೆಜ್ಜೆ ಇಟ್ಟಿದೆ” ಎಂದು ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಹೇಳಿದರು. ಅವರು ರವಿವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕುಂದಗನ್ನಡ ಭಾಷಾಭಿವೃದ್ಧಿ ವೇದಿಕೆಯ ಸಮಾಲೋಚನ ಸಭೆಯಲ್ಲಿ ಮಾತನಾಡಿದರು. ಶಿಕ್ಷಕ ಸತೀಶ್ ಕುಮಾರ್ ವಡ್ಡರ್ಸೆ, ಕುಂದಾಪ್ರ ಕನ್ನಡದ ಅನೇಕ ಶಬ್ದಗಳ ಬಳಕೆ ಕಡಿಮೆಯಾಗಿದೆ. ಇವು ಮುಂದಿನ ಪೀಳಿಗೆಗೆ ಸುಲಭದಲ್ಲಿ ಸಿಗುವಂತಿರಬೇಕು. 60 ವಯಸ್ಸು ದಾಟಿದವರ ಬಳಿ ಕುಂದ ಕನ್ನಡದ ಅಪಾರ ಸಂಪತ್ತಿದೆ. ಇದು ಯುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯ ಕಡಲ ತೀರಗಳು ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕಡಲ ತೀರದಲ್ಲಿ ತೆಗೆದುಕೊಳ್ಳಬೇಕಾದ ಭದ್ರತೆ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಕಡಲಲ್ಲಿ ವಿಹರಿಸಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿ ಬೋಟ್ಗಳ ಮೊರೆ ಹೋಗುತ್ತಾರೆ. ಆದ್ದರಿಂದ ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟ್ಗಳು ಬಂದರು, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದೇ ಕಡಲಿಗೆ ಇಳಿಯಬೇಕು ಎಂದರು. ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿ ಬೋಟುಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ 45 ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ನೋಂದಣಿ ಮಾಡಿಕೊಂಡು ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆಯದೇ ಇರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುದುಚೇರಿಯಲ್ಲಿ ನಡೆದ 21ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಓಕವುಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಗ್ಯಾ ದೇವಾಡಿಗ ಪ್ರಥಮ ಸ್ಥಾನ ಪಡೆದು ವಿನ್ನರ್ ಪ್ರಶಸ್ತಿ ಜಯಿಸಿದ್ದಾರೆ ಹಾಗೂ ದ್ವಿತಾ ದೇವಾಡಿಗ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರು ಶಿಕ್ಷಕಿ ಅಂಬಿಕಾ ಕುಂದಾಪುರ ಮತ್ತು ಕೊಂಕಣ ರೈಲ್ವೆ ಟಿ.ಟಿ ಮೋಹನ ದೇವಾಡಿಗ ಬಿಜೂರು ಅವರ ಪುತ್ರಿಯರು. ಅವರಿಗೆ ಕುಂದಾಪುರ ಅಬಾಕಸ್ ಸೆಂಟರ್ನ ಪ್ರಸನ್ನ ಕೆ.ಬಿ, ಮಹಾಲಕ್ಷ್ಮಿ ಹಾಗೂ ದೀಪಾ ಅವರು ತರಬೇತಿ ನೀಡಿದ್ದರು .
ಕುಂದಾಪ್ರ ಡಾಟ್ ಕಾಂ ಸುದ್ದಿಕೋಟ: ಗಣರಾಜ್ಯೋತ್ಸವ ಮುನ್ನದಿನ ಆಪರೇಶನ್ ಪರಾಕ್ರಮದಲ್ಲಿ ಭಾಗಿಯಾದ ಕಾಸರಗೋಡು ಯೋಧ ಶ್ಯಾಮ್ ರಾಜ್ ಅವರಿಗೆ ಸಾಸ್ತಾನ ಟೋಲ್ನಲ್ಲಿ ಅಗೌರವಾಗಿ ನಡೆಸಿಕೊಂಡ ಪ್ರಕರಣದ ಕುರಿತಂತೆ ಸೋಮವಾರ ಟೋಲ್ ಬಳಿ ನಿವೃತ್ತ ಯೋಧರ ಸಂಘ ಉಡುಪಿ ಹಾಗೂ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಸಾಸ್ತಾನ ಪ್ರತಿಭಟನೆ ಹಮ್ಮಿಕೊಂಡಿತು. ಈ ಹಿನ್ನಲ್ಲೆಯಲ್ಲಿ ಕೋಟ ಠಾಣಾಧಿಕಾರಿ ಪ್ರವೀಣ್ ಕುಮಾರ್ ಮಂಗಳವಾರ ಕೋಟ ಠಾಣೆಯಲ್ಲಿ ಕೆ.ಕೆ. ಆರ್ ಕಂಪನಿ ಮ್ಯಾನೇಜರ್ ತಿಮ್ಮಯ್ಯ ಹಾಗೂ ನಿವೃತ್ತ ಯೋಧರ ಸಂಘ, ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರ ಸಮ್ಮುಖದಲ್ಲಿ ಸಭೆ ಏರ್ಪಡಿಸಿ ಸಮಸ್ಯೆಯ ಕುರಿತಂತೆ ಮಾಹಿತಿ ಕಲೆಹಾಕಿತು. ಹೆದ್ದಾರಿ ಜಾಗೃತಿ ಸಮಿತಿ ಹಾಗೂ ನಿವೃತ್ತ ಸೈನಿಕರು , ಟೋಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದಾದ ತಪ್ಪುಗಳು ಮತ್ತು ಮುಂದಿನ ದಿನಗಳಲ್ಲಿ ನಿವೃತ್ತ ಯೋಧರಿಗೆ ವಿನಾಯಿತಿ,ಸ್ಥಳೀಯ ವಾಹನಗಳಿಗೆ ಸಮಸ್ಯೆ ನೀಡದಂತೆ,ಹೆದ್ದಾರಿ ದಾರಿದೀಪ,,ಸರ್ವಿಸ್ ರಸ್ತೆ ಇಲ್ಲದೆ ಅಪಘಾತ ಪ್ರಕರಣ ಕುರಿತಂತೆ ವಿಸ್ತ್ರತ ಚರ್ಚೆ ಏರ್ಪಟ್ಟಿತ್ತು ಟೋಲ್ ಮ್ಯಾನೇಜರ್ ತಿಮ್ಮಯ್ಯ ಎಕ್ಸ್ ಮಿಲಿಟರಿ:ಸಾಸ್ತಾನ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: “ಸಾಹಿತ್ಯ ಸಂಗೀತಗಳೆರಡು ಸರಸ್ವತಿ ದೇವಿಯ ಸ್ತನದ್ವಯಗಳು ಎಂಬ ಉಕ್ತಿಯಿದೆ. ಸಾಹಿತ್ಯ ಮತ್ತು ಸಂಗೀತಗಳು ಮೇಳೈಸಿದಾಗ ಮನೋರಂಜನೆಯೊಂದಿಗೆ ಬೌದ್ಧಿಕ ವಿಕಾಸವೂ ಸಾಧ್ಯವಾಗುವುದು. ಪುರಾತನ ಮತ್ತು ನವೀನ ಕವಿ ಸಾಹಿತ್ಯಗಳ ರಾಗ ಭಾವಪೂರ್ಣ ಓದು ಗಮಕ ಕಲೆಯಾಗಿ ಪರಂಪರೆಯಿಂದ ಬೆಳೆದುಬಂದಿದೆ. ಯುವ ಜನತೆ ಗಮಕದತ್ತ ಒಲಿದು ಬರಬೇಕು” ಎಂದು ತಾಲೂಕು ಘಟಕ ಗಮಕ ಕಲಾಪರಿಷತ್ತಿನ ಅಧ್ಯಕ್ಷ ಎಚ್. ಸುಜಯೀಂದ್ರ ಹಂದೆ ಹೇಳಿದರು. ಅವರು ಕೋಟದ ಸು.ವಿ.ಕಾ. ಸಾಂಸ್ಕೃತಿಕ ಸಂಘಟನೆಯ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಮನೆಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸಂದರ್ಭದಲ್ಲಿ ನಡೆಸಿದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಘವಾಂಕ ಕವಿಯ ಹರಿಶ್ಚಂದ್ರ ಚರಿತ್ರೆಯ ವಿರೂಪಾಕ್ಷ ಸಾಕ್ಷಾತ್ಕಾರ ಭಾಗವನ್ನು ಗಮಕಿ ಕಾವ್ಯ ಹಂದೆ ವಾಚಿಸಿದರು. ಸುಜಯೀಂದ್ರ ಹಂದೆ ವ್ಯಾಖ್ಯಾನ ಮಾಡಿದರು. ಜಿ.ಎಸ್. ವಿ.ಎಸ್. ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶೀನಾಥ್ ಪೈ, ಕಲಾ ಸಾಹಿತಿ ಜನಾರ್ದನ ಹಂದೆ, ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ರುವಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ನಮ್ಮ ದೇಶದಲ್ಲಿ ಗುರುಕುಲ ಮಾದರಿಯ ಶಿಕ್ಷಣ ಪದ್ದತಿಯನ್ನು ಜಾರಿಗೆ ತರಬೇಕು ಎಂದು ಕೇಮಾರಿನ ಸಾಂದೀಪನಿಸಾಧನಾಶ್ರಮದ ಶ್ರೀ ಈಶ ವಿಠಲದಾಸ ಶ್ರೀಪಾದಂಗಳ ನುಡಿದರು. ಅವರು ಭಾನುವಾರ ಸಾಸ್ತಾನದ ಕಾರ್ತಿಕೇಯ ಎಸ್ಟೇಟ್ನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕಿನ ಸಾಸ್ತಾನ ಮಂಡಲದ ಆಶ್ರಯದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶ್ರೀವಚನ ನೀಡಿ ಮಾತನಾಡಿದರು. ಹಿಂದೆ ಗುರುಕುಲ ಮಾದರಿ ಶಿಕ್ಷಣ ಇದಿತ್ತು ಆದರೆ ಇಂದು ಗುಲಾಮಿ ಶಿಕ್ಷಣದಿಂದ ಇಡೀ ದೇಶವೇ ಸಮಸ್ಯೆ ಎದುರಿಸುತ್ತಿದ್ದೇವೆ. ಸಂಸ್ಕಾರಭರಿತ ಶಿಕ್ಷಣವನ್ನು ನಮ್ಮ ಮುಂದಿನ ತಲೆಮಾರಿಗೆ ತಾಯಂದಿರರು ನೀಡಬೇಕಿದೆ, ಆಂಗ್ಲ ಶಿಕ್ಷಣ ವ್ಯಾಮೂಹದಿಂದ ನಮ್ಮ ಸಂಪ್ರದಾಯ ಪರಂಪರೆಯನ್ನು ಮರೆತು ಬಿಡುತ್ತಿದ್ದೇವೆ ಇದರ ದುಷ್ಪರಿಣಾಮ ಇಂದು ಅನುಭವಿಸುತ್ತಿದ್ದೇವೆ ಇದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮರ್ಪಣಾ ಮನೋಭಾವದಿಂದ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದೆ. ಹಿಂದೂ ಸಮುದಾಯದ ಮಕ್ಕಳಿಗೆ ಭಗವದ್ಗೀತೆ, ರಾಮಾಯಣ ಮಹಾಭಾರತದಂತ ಕಾವ್ಯವನ್ನು ಪ್ರತಿದಿನ ಓದಿಸಿ ಹಿಂದೂ ಧರ್ಮವನ್ನು ನಿರಂತರ ಜಾಗೃತಗೊಳಿಸುವ ಕೆಲಸ ನಮ್ಮ ಪೋಷಕರಿಂದಾಗಬೇಕು…
