ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2024 -25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ತತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಸತತ ಮೂರನೇ ವರ್ಷವೂ ಶೇಕಡಾ ನೂರು ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ . ವಿಜ್ಞಾನ ವಿಭಾಗದಲ್ಲಿ 204 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 113 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 113 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ . ವಾಣಿಜ್ಯ ವಿಭಾಗದಲ್ಲಿ 88 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 36 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 52 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ .ವಿಜ್ಞಾನ ವಿಭಾಗದಲ್ಲಿ- ಶ್ರದ್ದಾ ಎಸ್. ಮೊಗವೀರ (591), ಅಮೂಲ್ಯ (586 ), ಸಾನಿಕ ಎಸ್. ದೇವಾಡಿಗ (586 ), ಶೋಭಿತ್ (584), ಅಭಿದೀಪ್ ಹೆಬ್ಬಾರ್ (583 ), ಇಶ್ರ್ರಾ (582), ಚಿರಂತನ್ (581 ), ಸ್ವಾತಿ ಭಟ್ (581 ), ರಕ್ಷಿತಾ (579 ), ಅದಿತಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಳು, ರಸ್ತೆ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರಾಷ್ಟೀಯ ಹೆದ್ದಾರಿ ಅಭಿಯಂತರರಿಗೆ ಸೂಚನೆ ನೀಡಿದರು. ಅವರು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಬ್ರಹ್ಮಾವರ ತಾಲೂಕಿನ ಆಕಾಶವಾಣಿ ಜಂಕ್ಷನ್ನಿಂದ ಬ್ರಹ್ಮಾವರ ಮಹೇಶ್ ಆಸ್ಪತ್ರೆ ಜಂಕ್ಷನ್ ವರೆಗೆ ಫ್ಲೆಓವರ್ ಅಥವಾ ಅಂಡರ್ಪಾಸ್ ನಿರ್ಮಿಸುವ ಕುರಿತು ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಕುಂದು ಕೊರತೆಗಳ ಕುರಿತು ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 100 ಕಿ.ಮೀ.ಗೂ ಹೆಚ್ಚು ಉದ್ದ ರಾಷ್ಟೀಯ ಹೆದ್ದಾರಿ 66 ಹಾದು ಹೋಗಿದ್ದು, ಪೂರ್ಣ ಪ್ರಮಾಣದಲ್ಲಿ ಸರ್ವಿಸ್ ರಸ್ತೆ, ಮೂಲಭೂತ ಸೌಕರ್ಯಗಳಾದ ಚರಂಡಿ, ದಾರಿದೀಪ, ಸೇರಿದಂತೆ ಮತ್ತಿತರ ನಿರ್ವಹಣೆ ಕೊರತೆಯಿಂದಾಗಿ ಹೆದ್ದಾರಿಯಲ್ಲಿ ಸಾರ್ವಜನಿಕರ ಸುಗಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿಗೆ ಶೇ.90.48 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 127 ವಿದ್ಯಾರ್ಥಿಗಳಲ್ಲಿ 114 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 27 ವಿದ್ಯಾರ್ಥಿಗಳು ವಿಶಿಷ್ಠ ದರ್ಜೆಯಲ್ಲಿ, 68 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಕೃತ ವಿಷಯದಲ್ಲಿ 13 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದರೆ, ಗಣಿತಶಾಸ್ತçದಲ್ಲಿ ಹಾಗೂ ವ್ಯವಹಾರ ಅಧ್ಯಯನದಲ್ಲಿ ತಲಾ ಒಬ್ಬ ವಿದ್ಯಾರ್ಥಿ 100 ಅಂಕಗಳನ್ನು ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 577 ಅಂಕಗಳನ್ನು ಪಡೆದಿರುವ ಕ್ಷಮಾ ಆರ್.ಆಚಾರ್ಯ ಕಾಲೇಜಿನ ಅಗ್ರ ಸ್ಥಾನಿಯಾಗಿ ಮೂಡಿ ಬಂದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ 576 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ (576), ದಿವ್ಯಾ ಡಿ.ಮೇಸ್ತ (565), ಸೃಷ್ಟಿ (559), ಪ್ರಥಮ್ ಟಿ.ನಾಯಕ್ (553), ಸುಶ್ಮಿತಾ (545), ಶ್ರೀರಕ್ಷಾ ಶೆಣೈ (544), ಮೊತಾಸೀನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಒಂದು ಸರಕಾರಿ ಅಥವಾ ಅನುದಾನಿತ ಶಾಲೆ ಶತಮಾನ ಕಾಣುವುದು ಸುಲಭದ ಮಾತಲ್ಲ ಅದನ್ನು ಮುನ್ನಡೆಸುವ ಮಹತ್ಕಾರ್ಯ ನಿಜಕ್ಕೂ ಅಭಿನಂದನಾರ್ಹವಾಗಿದೆ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಸಾಸ್ತಾನದ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಶತಮಾನೋತ್ಸವ ಸಂಭಮದ ಅಂಗವಾಗಿ ಶತಾವರ್ತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಮಾಡಿದರು. ಸರಕಾರಿ ಮತ್ತು ಅನುದಾನಿತ ಶಾಲೆಗಳ ಸ್ಥಿತಿಗತಿ ಅವಲೋಕಿಸಿದರೆ ಬಾರಿ ಕ್ಲಿಷ್ಟಕರವಾಗಿದೆ. ಈ ದಿಸೆಯಲ್ಲಿ ಶಾಲಾಭಿವೃದ್ಧಿಗೆ ಬೇಕಾದ ಸಮಿತಿಗಳ ಮೂಲಕ ಶಾಲೆ ಉಳಿಸಿ ಬೆಳೆಸುವ ಪ್ರಯತ್ನ ಶ್ಲಾಘನೀಯ ಎಂದರಲ್ಲದೆ ದೇಶ ಕಟ್ಟುವ ಶಿಕ್ಷಣ ಅದರಲ್ಲೂ ಎಲ್ಲಾ ಜಾತಿಮತ ಧರ್ಮಗಳನ್ನು ಮೀರಿ ಸಂಘರ್ಷ ಇಲ್ಲದ ಶಿಕ್ಷಣ ನಮ್ಮ ಮಕ್ಕಳಿಗೆ ಸಿಗುವಂತ್ತಾಗಬೇಕು ಈ ನಿಟ್ಟಿನಲ್ಲಿ ಪಾಂಡೇಶ್ವರ ಈ ಶಾಲೆಯ ಅಭಿವೃದ್ಧಿ ಅದಕ್ಕೆ ಬೇಕಾದ ಮೂಲಸೌಕರ್ಯಗಳ ಅನುಕೂಲತೆಯ ವಾತಾವರಣ ಸೃಷ್ಠಿಯಾಗಲಿ ತನ್ಮೂಲ ಇಡೀ ವ್ಯವಸ್ಥೆ ಮಾದರಿ ಶಾಲೆಯಾಗಿ ಅನುದಾನಿತ ವ್ಯವಸ್ಥೆಗೆ ಮುನ್ನುಡಿ ಬರೆಯಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳಲ್ಲಿ ಒಟ್ಟು 45 ವಿದ್ಯಾರ್ಥಿಗಳು ರಾಜ್ಯದ ಪ್ರಥಮ 10 ರ್ಯಾಂಕ್ಗಳಲ್ಲಿ ಸ್ಥಾನವನ್ನು ಪಡೆಯುವ ಮೂಲಕ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾರ್ವತ್ರಿಕ ದಾಖಲೆಯನ್ನು ನಿರ್ಮಿಸಿದೆ. ವಿಜ್ಞಾನ ವಿಭಾಗದಲ್ಲಿ ಸಂಸ್ಥೆಯ ಬಿಂದು ನವಲೆ, ರಾಜ ಯದು ವಂಶಿ ಯಾದವ್ ಹಾಗೂ ವಿಜೇತ್ ಜಿ ಗೌಡ 598 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಕ್ಷಯ್ ಎಂ. ಹೆಗ್ಡೆ ಹಾಗೂ ಪ್ರೇಕ್ಷಾ ಎಂ. ಎಸ್. 597 ಅಂಕಗಳೊಂದಿಗೆ ತೃತೀಯ ಸ್ಥಾನ, ಪದ್ಮಾವತಿ ಮಲ್ಲೇಶಪ್ಪ 596 ಅಂಕಗಳೊಂದಿಗೆ 4ನೇ ಸ್ಥಾನ, ದರ್ಶನ್ ಶೆಟ್ಟಿ 595 ಅಂಕಗಳೊಂದಿಗೆ 5ನೇ ಸ್ಥಾನ, ವೈಭವ್ ಎಂ, ಚೈತನ್ಯ, ಸ್ಪಂದನ 594 ಅಂಕಗಳೊಂದಿಗೆ 6ನೇ ಸ್ಥಾನ, ವರ್ಷ 593 ಅಂಕಗಳೊಂದಿಗೆ 7ನೇ ಸ್ಥಾನ, ನೇತ್ರಾ ಪಾಲ್, ಸೃಷ್ಟಿ, ಚಿನ್ಮಯಿ, ಪ್ರಣಾಮ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ 4ನೇ ವರ್ಷವೂ ಶೇಖಡಾ 100 ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. ಪರೀಕ್ಷೆ ಬರೆದ ಎಲ್ಲಾ 692 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಮೇಘನಾ ಯು. ವೈ 594 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಅಮೃತ ಬಸವರಾಜ್ ಬಣಕಾರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ, ಶ್ರೀನಿಧಿ ಡಿ 591 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ಸ್ಥಾನ, ಪ್ರಜ್ವಲ್ ಎಸ್. ಎನ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ, ತೇಜಸ್ ವಿ. ನಾಯಕ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ್ದಾರೆ. ಒಟ್ಟು ಪರೀಕ್ಷೆಗೆ ಹಾಜರಾದ 592 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು 97% ಕ್ಕಿಂತ ಅಧಿಕ, 168 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ, 379 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಕಲ್ಯಾಣಪುರದಲ್ಲಿ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪ. ಪೂ. ಕಾಲೇಜು ದ್ವಿತೀಯ ವರ್ಷದಲ್ಲೂ ಶೇಕಡ 100 ಫಲಿತಾಂಶದ ದಾಖಲಿಸಿದೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಮೃತ ಬಸವರಾಜ್ ಬಣಕರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಶ್ರೀರಕ್ಷಾ 589 ಅಂಕ, ಸುಶ್ಮಿತಾ 588 ಅಂಕ, ಆಕಾಶ್ ಶೇಥಿಯಾ 586 ಅಂಕ, ಶಶಾಂಕ್ ಎಸ್ ಭಟ್ 585 ಅಂಕಗಳನ್ನು ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಗೆ ಹಾಜರಾದ 162 ವಿದ್ಯಾರ್ಥಿಗಳಲ್ಲಿ 108 ಅತ್ಯುನ್ನತ ದರ್ಜೆ ಹಾಗೂ 54ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಪಡೆದಿದ್ದಾರೆ. ತ್ರಿಷಾ ವಿದ್ಯಾ ಸಂಸ್ಥೆಯು ತನ್ನ ಪ್ರಾರಂಭದ ವರ್ಷದಿಂದಲೂ ಶೇ. 100ರ ಫಲಿತಾಂಶದ ದಾಖಲಿಸಿದ್ದು, ಅತ್ಯುತ್ತಮ ಬೋಧಕ ಮತ್ತು ಬೋಧಕೇತರ ವೃಂದದವರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿಯ ಫಲಿತಾಂಶ ದಾಖಲಿಸಿರುವ ಸಂಸ್ಥೆ ಉಡುಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 10 ರ್ಯಾಂಕ್ ಪಡೆಯುವುದರ ಮೂಲಕ ಶೇ. 100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸುಮಿತ್ರಾ ಭಟ್ (593 ) ರಾಜ್ಯಕ್ಕೆ 7ನೇ ರ್ಯಾಂಕ್, ಸನ್ನಿಧಿ ಎಮ್ (592) 8ನೇ ರ್ಯಾಂಕ್, ಕೀರ್ತನಾ, ರಂಜಿತಾ (591), 9ನೇ ರ್ಯಾಂಕ್, ಅನನ್ಯ, ಚೈತ್ರಾ, ನಿಶಾ, ಸಾತ್ವಿಕ್( 590) 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿ. ದಿವೀಶ್ ಶೆಣೈ (592) 8ನೇ ರ್ಯಾಂಕ್, ಪ್ರಣವಿ ಉಳ್ಳೂರ್ ಕೆ. (590) 10ನೇ ರ್ಯಾಂಕ್ ಪಡೆದುಕೊಳ್ಳುವುದರ ಮೂಲಕ ಸಾಧನೆ ಮೆರೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 183 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 125 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 110 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 44ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಕೃತ 42, ಸಂಖ್ಯಾಶಾಸ್ತ್ರ …
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಶಂಕರನಾರಾಯಣದ ಮದರ್ ತೆರೇಸಾ’ಸ್ ಪಿ ಯು ಕಾಲೇಜಿಗೆ ರಾಜ್ಯಮಟ್ಟದಲ್ಲಿ 2 ರ್ಯಾಂಕ್ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಅಕ್ಷಿತಾ 590 ಅಂಕ 98.3 ಪ್ರತಿಶತದೊಂದಿಗೆ ರಾಜ್ಯಮಟ್ಟದಲ್ಲಿ 9ನೇ ರ್ಯಾಂಕ್ ಪಡೆದು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ನಿಶಾ ನಾರಾಯಣ್ ತೊಳಾರ್ 593 ಅಂಕ 98.83 ಪ್ರತಿಶತದೊಂದಿಗೆ ರಾಜ್ಯಮಟ್ಟದಲ್ಲಿ 6ನೇ ರ್ಯಾಂಕ್ ಪಡೆದು ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಕ್ಷಿತಾ ಗಣಿತದಲ್ಲಿ 100 ಅಂಕ ಪಡೆದಿದ್ದಾರೆ. ನಿಶಾ ಅರ್ಥಶಾಸ್ತ್ರದಲ್ಲಿ -100, ವ್ಯವಹಾರ ಅಧ್ಯಯನ -100,ಲೆಕ್ಕಶಾಸ್ತ್ರ- 100 ಸಂಖ್ಯಾಶಾಸ್ತ್ರದಲ್ಲಿ – 100 ಅಂಕ ಪಡೆದಿದ್ದಾರೆ. ಅತ್ತ್ಯುತ್ತಮ ಫಲಿತಾಂಶ ದಾಖಲಿಸಿ ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80.76 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 655 ವಿದ್ಯಾರ್ಥಿಗಳ ಪೈಕಿ 529 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 202 ವಿದ್ಯಾರ್ಥಿಗಳು ಹಾಗೂ 327 ವಿದ್ಯಾರ್ಥಿನಿಯರಿದ್ದಾರೆ. ವಿಷಯವಾರು ಫಲಿತಾಂಶದಲ್ಲಿ ಹಿಂದಿ, ಸಂಸ್ಕೃತ, ಬಯಾಲಾಜಿ, ಐಟಿ ಹಾಗೂ ಆಟೋಮೊಬೈಲ್ ವಿಷಯದಲ್ಲಿ ಶೇ.100 ಫಲಿತಾಂಶ ಬಂದಿದ್ದು, ಬ್ಯುಸಿನೆಸ್ ಸ್ಟಡೀಸ್ ವಿಷಯದಲ್ಲಿ ಶೇ.88.06 ಫಲಿತಾಂಶ ದಾಖಲಿಸಿದ್ದಾರೆ. ಉಳಿದ ವಿಷಯಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸಲಾಗಿದೆ.
