ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬಾಳ್ಕುದ್ರು-ಹಂಗಾರಕಟ್ಟೆ ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಇದರ ಆಶ್ರಯದಲ್ಲಿ ಶ್ರೀ ಬ್ರಹ್ಮ ಶ್ರೀ ನಾರಾಯಣಗುರುಗಳ 172ನೇ ಜನ್ಮ ಜಯಂತಿ ಉತ್ಸವವನ್ನು ಶುಕ್ರವಾರದಂದು ವೈಭವದಿಂದ ಆಚರಿಸಲಾಯಿತು. ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 09.೦೦ರಿಂದ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ, ತದನಂತರ ವೇ.ಮೂ ವೆಂಕಟರಣಸೂರ್ಯ ಇವರಿಂದ ಧಾರ್ಮಿಕ ವಿಧಿವಿಧಾನದ ಅಂಗವಾಗಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ ಜರಗಿತು. ಸಂಘದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.ಅಪರಾಹ್ನ ಪ್ರಸಾದ ವಿತರಣೆ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿದವು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶಕುಂತಲ.ವಿ.ಕೋಟ್ಯಾನ್, ಪ್ರಮುಖರಾದ ವಾಸುದೇವ ಕೋಟ್ಯಾನ್, ಉದೇಶ್ ಪೂಜಾರಿ, ಗುರಿಕಾರ ಕುಷ್ಟ ಪೂಜಾರಿ,ಕರುಣಾಕರ ಪೂಜಾರಿ, ರೇಖಾ ಪಿ. ಸುವರ್ಣ, ಕಲಾವತಿ ಆನಂದ್, ಜ್ಯೋತಿ ರವೀಂದ್ರ ಸುವರ್ಣ, ಪ್ರೇಮ ಸತೀಶ್ ಪೂಜಾರಿ, ಸಂಘದ ಪ್ರಮುಖರಾದ ನಾರಾಯಣ ಪೂಜಾರಿ, ಶಂಕರ್ ಪೂಜಾರಿ, ಆನಂದ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿಯ ಹೊಸ ಅಕಾಡೆಮಿಕ್ ಬ್ಲಾಕ್ (ಮೊದಲನೇ ಹಂತ) ಉದ್ಘಾಟನೆಯು ಗಣಹೋಮ ಮತ್ತು ಸರಸ್ವತಿ ಪೂಜೆಯೊಂದಿಗೆ ಸಂಪನ್ನಗೊಂಡಿತು. ಅತ್ಯಂತ ಸಂಭ್ರಮದಲ್ಲಿ ನಡೆದ ಈ ಸಮಾರಂಭದಲ್ಲಿ, ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಸಿದ್ಧಾರ್ಥ ಜೆ. ಶೆಟ್ಟಿ ಮತ್ತು ಅನಿಶಾ ರೈ ದಂಪತಿಗಳು, ಮ್ಯಾನೇಜಿಂಗ್ ಟ್ರಸ್ಟಿ ವಿದ್ಯಾ ಜೆ. ಶೆಟ್ಟಿ, ಟ್ರಸ್ಟಿಗಳಾದ ರಾಮ್ ರತನ್ ಜೆ. ಶೆಟ್ಟಿ, ಕುಟುಂಬಸ್ಥರು, ಆಹ್ವಾನಿತ ಮಹನೀಯರು, ಐಎಂಜೆ ವಿದ್ಯಾಸಂಸ್ಥೆಗಳ, ನಿರ್ದೇಶಕರು, ಪ್ರಾಂಶುಪಾಲರು, ಎಲ್ಲಾ ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅತ್ಯಂತ ನವೀನ ರೀತಿಯಲ್ಲಿ ವಿಶಾಲವಾದ ಜಾಗದಲ್ಲಿ ಮನ ಸೆಳೆಯುವ ವಾಸ್ತುಶಿಲ್ಪದೊಂದಿಗೆ ಮೂಡಿಬಂದ ಕಟ್ಟಡ ಸಮುಚ್ಚಯ ಎಲ್ಲರ ಮನಸೆಳೆಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ದೇಶ ಕಂಡ ಮಹಾನ್ ಸಂತರಲ್ಲಿ ಒಬ್ಬರಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಣೆಯಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುವ ಮೂಲಕ ಹಿಂದುಳಿದ ಸಮಾಜದವರು ಮುಖ್ಯ ವಾಹಿನಿಗೆ ಬರಲು ದಾರಿ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಕಳಕಳಿಯ ಚಟುವಟಿಕೆಗಳ ಮೂಲಕ ದೇಶದೆಲ್ಲೆಡೆ ಸಂಚರಿಸಿ, ಜಗತ್ತಿಗೆ ಸಮಾನತೆ ಎಂಬ ಜ್ಞಾನದ ಬೆಳಕನ್ನು ಹರಿಸಿದ್ದಾರೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ನಗರದ ಬನ್ನಂಜೆ ನಾರಾಯಣ ಗುರು ಆಡಿಟೋರಿಯಂ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಬಿಲ್ಲವರ ಸೇವಾ ಸಂಘ ಉಡುಪಿ ರಿ. ಬನ್ನಂಜೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ದಾರ್ಶನಿಕ, ಆಧ್ಯಾತ್ಮಿಕ ಸಾಧಕರಾಗಿದ್ದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ನಿರ್ಮಾಣಕ್ಕೆ ಮುಂದಾಗಿದ್ದರು. ಕೆಳವರ್ಗದ ಜನರಿಗಾಗಿ ದೇವಾಲಯಗಳನ್ನು ನಿರ್ಮಿಸಿ, ದೇವರನ್ನು ಪೂಜಿಸಲು ಅವಕಾಶ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಸಕರ ಜನಸ್ಪಂದನ ಕನ್ನಡ ಮಾಸಿಕ ಕೊಡಮಾಡುವ ʼಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿʼಗೆ ತಾಲೂಕಿನ ಕಾವಾಡಿ ಗ್ರಾಮದ ಮುಂಬಾರು ಯೋಗಪಟು ನಿರೀಕ್ಷಾ ದಿನಕರ ಶೆಟ್ಟಿ ಅವರಿಗೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಶಿಕ್ಷಣ ಇಲಾಖೆ ಹಾಗೂ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇವರ ಸಂಯುಕ್ತ ಆಶ್ರಯದಲ್ಲಿ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಬೈಂದೂರು ವಲಯ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ 9 ವಿದ್ಯಾರ್ಥಿಗಳು ಭರ್ಜರಿ ಜಯದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. 17ರ ವಯೋಮಾನದ ಬಾಲಕರ ವಿಭಾಗದಲ್ಲಿ ರಯಾನ್ ಅಹಮದ್ ಖಾನ್ , ಸೋಹನ್, ಪ್ರೀತಮ್ ಹಾಗೂ ಸ್ಕಂದ ಪ್ರಥಮ ಸ್ಥಾನ ಪಡೆದರು. ನಿನಾದ್ ಮತ್ತು ಭರತ್ ದ್ವಿತೀಯ ಸ್ಥಾನ ಪಡೆದರು. 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸನ್ಮಿತಾ, ಮತ್ತು ತಕ್ಷಾ ಪ್ರಥಮ ಸ್ಥಾನ ಹಾಗೂ ಉನ್ನತಿ ದ್ವಿತೀಯ ಸ್ಥಾನ ಪಡೆದರು. 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಅಭಿನವ್, ಸಚಿದ್ ಮತ್ತು ಸಾಕ್ಷಿತ್ ಪ್ರಥಮ ಸ್ಥಾನ ಗಳಿಸಿಕೊಂಡರೆ, ದೀಕ್ಷಿತ್ ಹಾಗೂ ಶೈನ್ ದ್ವಿತೀಯ ಸ್ಥಾನ ಗಳಿಸಿದರು. ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿರುವ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸಂಯೋಜಕರಾಗಿ ಹೆಚ್. ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿಯವರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಶ್ರೀ ಬಿ.ಕೆ . ಹರಿಪ್ರಸಾದ್ ಆದೇಶಿಸಿದ್ದಾರೆ. ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಜವಾಬ್ದಾರಿ ನೀಡಲಾಗಿದೆ . ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ ಅವರು ಈ ಹಿಂದೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಎನ್.ಎಸ್.ಯು.ಐ ಅಧ್ಯಕ್ಷರಾಗಿ, ಮಂಗಳೂರು ವಿ.ವಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾದ್ಯಕ್ಷರಾಗಿ, ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಮತ್ತು ಟಿಎಪಿಸಿಎಂಎಸ್ ಲಿ . ಅಧ್ಯಕ್ಷರಾಗಿದ್ದಾರೆ .
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಹೋದರತ್ವ ಮತ್ತು ರಕ್ಷಣೆಯ ಸಂಕೇತವಾದ ರಕ್ಷಾ ಬಂಧನ ಹಬ್ಬದ ಅಂಗವಾಗಿ ಬಿಜೆಪಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಲಾಯಿತು. ಕಾರಂತ ಥೀಂ ಪಾರ್ಕ್‌ನಲ್ಲಿದ್ದ ಸಂಸದರನ್ನು ಭೇಟಿ ಮಾಡಿದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸಂಸದರಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಶುಭ ಕೋರಿದರು. ಸಹೋದರಿಯರ ರಕ್ಷಣೆ ಮತ್ತು ಸಮಾಜದಲ್ಲಿ ಮಹಿಳೆಯರ ಸುರಕ್ಷತೆಗಾಗಿ ತಮ್ಮ ಜನಸೇವೆ ನಿರಂತರವಾಗಿರಲಿ, ಆಯುಷ್ಯ, ಆರೋಗ್ಯ, ಶಕ್ತಿ ಭಗವಂತ ಕರುಣಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಹಿಳಾ ಮೋರ್ಚಾ ಪದಾಧಿಕಾರಿಗಳಿಗೆ ರಕ್ಷಾ ಬಂಧನದ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ, ಪ್ರಧಾನ ಕಾರ್ಯದರ್ಶಿಗಳಾದ ಶ್ವೇತಾ ಶ್ರೀನಿಧಿ ಉಪಾಧ್ಯಾಯ, ವಿದ್ಯಾ ಸಾಲಿಯಾನ್, ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲ ಶೆಟ್ಟಿ, ಮಂಡಲ ಉಪಾಧ್ಯಕ್ಷೆ ರೂಪಾ ಬಾಬು ಪೈ, ಮಂಡಲ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರಗಿತು. ಹೆಜಮಾಡಿ ಮಹೇಶ್ ಶಾಂತಿ ತಂಡ ಶ್ರೀಮಂದಿರದ ಗುರು ಪೀಠಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಸಂಘದ ವತಿಯಿಂದ ಮಹಾಅನ್ನಸಂತರ್ಪಣೆ ಏರ್ಪಡಿಸಲಾಯಿತು. ಮಂದಿರದ ಅರ್ಚಕರಾದ ಸಂತೋಷ್ ಪೂಜಾರಿ, ಮನೋಹರ್ ಪೂಜಾರಿ ಧಾರ್ಮಿಕ ಕಾರ್ಯದಲ್ಲಿ ಕೈಜೋಡಿಸಿದರು. ಶ್ರೀ ಮಂದಿರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಭೇಟಿ ನೀಡಿ, ಸಂಘದ ಅಧ್ಯಕ್ಷ ಜಿ. ಸದಾನಂದ ಪೂಜಾರಿ, ಪ್ರದಾನ ಕಾರ್ಯದರ್ಶಿ ಪ್ರಸಾದ್ ಬಿಲ್ಲವರೊಂದಿಗೆ ನಾರಾಯಣಗುರು ಸಭಾಭವನದ ಅಭಿವೃದ್ಧಿ ಕುರಿತಂತೆ ಸಮಾಲೋಚಿಸಿ ಗುರುಪೂಜೆಯಲ್ಲಿ ಭಾಗಿಯಾದರು. ಯುವ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಮಹಿಳಾ ಘಟಕದ ವಸಂತಿ ಹಂದಟ್ಟು, ಹಿರಿಯರಾದ ಪುಟ್ಟಣ್ಣ ಪೂಜಾರಿ, ತಿಮ್ಮ ಪೂಜಾರಿ, ಸಿದ್ಧಿ ಶ್ರೀನಿವಾಸ್ ಪೂಜಾರಿ, ಕೃಷ್ಣ ಪೂಜಾರಿ.ಪಿ, ನರೇಂದ್ರ ಕುಮಾರ್ ಕೋಟ, ಸತೀಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ,ಕುಂದಾಪುರ: ವಿಶ್ವ ಛಾಯಾಗ್ರಹಣ ಸಪ್ತಾಹದ ಅಂಗವಾಗಿ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ (IMJISC) ಛಾಯಾಗ್ರಹಣ ಮತ್ತು ಡಿಜಿಟಲ್ ಕ್ಲಬ್ ವತಿಯಿಂದ ಡಿಜಿಟಲ್ ಮೀಡಿಯಾ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರವನ್ನು Eaeor Tech ಸಂಸ್ಥಾಪಕರಾದ ಅನೀಶ್ ಪುತ್ರನ್ ನಡೆಸಿಕೊಟ್ಟರು. ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕಲಿಕೆಯನ್ನು ಒಳಗೊಂಡ ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಫೋಟೋಶಾಪ್, ಫೋಟೋ ಎಡಿಟಿಂಗ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಷನ್‌ನ ಮೂಲ ಕೌಶಲ್ಯಗಳನ್ನು ಪರಿಚಯಿಸಲಾಯಿತು. ಇಂದಿನ ಸೃಜನಶೀಲ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಡಿಜಿಟಲ್ ಮೀಡಿಯಾ ಕೌಶಲ್ಯಗಳ ಬೆಳೆಯುತ್ತಿರುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಕಾರ್ಯಕ್ರಮವನ್ನು ಸಿಬ್ಬಂದಿ ಸಂಯೋಜಕರಾದ ಜಿತೇಶ್ ಕುಮಾರ್ ಎ.ಎಚ್. ಹಾಗೂ ವಿದ್ಯಾರ್ಥಿ ಸಂಯೋಜಕರಾದ ತೃತೀಯ ಬಿಸಿಎ ವಿದ್ಯಾರ್ಥಿ ರಾಹಿಲ್ ಮತ್ತು ತೃತೀಯ ಬಿ.ಕಾಂ ವಿದ್ಯಾರ್ಥಿನಿ ಸಾನಿಯಾ ಆಯೋಜಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಐಎಂಜೆಐಎಸ್‍ಸಿ) ಮೂಡ್ಲಕಟ್ಟೆ ಸಂಸ್ಥೆಯಲ್ಲಿ ಅಂಗದಾನ ದಿನಾಚರಣೆಯನ್ನು ಆಚರಿಸಲಾಯಿತು. ಯೂತ್ ರೆಡ್ ಕ್ರಾಸ್ ಮತ್ತು ಸಮುದಾಯ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಡಿಜಿಟಲ್ ಪೋಸ್ಟರ್ ರಚನಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಒಟ್ಟು 30 ವಿದ್ಯಾರ್ಥಿಗಳು ಭಾಗವಹಿಸಿ, ಅಂಗದಾನದ ಮಹತ್ವ ಮತ್ತು ಜೀವ ಉಳಿಸುವಲ್ಲಿ ಅದರ ಪಾತ್ರವನ್ನು ಸಾರುವ ಸೃಜನಶೀಲ ಡಿಜಿಟಲ್ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಕಲೆ ಮತ್ತು ಸೃಜನಶೀಲತೆಯ ಮೂಲಕ ಈ ಮಹತ್ಕಾರ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರದರ್ಶನವು ವಿದ್ಯಾರ್ಥಿಗಳಿಗೆ ವೇದಿಕೆಯಾಯಿತು. ಕಾರ್ಯಕ್ರಮಕ್ಕೆ ಯೂತ್ ರೆಡ್ ಕ್ರಾಸ್ ಸಂಘದ ಉಪನ್ಯಾಸಕ ಸಂಯೋಜಕರಾದ ಭಾರತಿ ಮತ್ತು ರಕ್ಷಿತಾ ಹಾಗೂ ಸಮುದಾಯ ಸೇವಾ ಸಂಘದ ಉಪನ್ಯಾಸಕ ಸಂಯೋಜಕರಾದ ಚೈತನ್ಯ ಮತ್ತು ಶ್ವೇತಾ ಅವರು ಮಾರ್ಗದರ್ಶನ ನೀಡಿದರು.
