ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಕಾರ್ಕಳ ತಾಲೂಕು ಮಟ್ಟದ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ 2026-27ನೇ ಸಾಲಿನ ಕಬಡ್ಡಿ ಪಂದ್ಯಾವಳಿಯು ಗುರುವಾರ ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರಾದ ಚೇತನ್ ಹಾಗೂ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರು ಉಡುಪಿ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ರೆಫ್ರಿ ಬೋರ್ಡ್‌ನ ಅಧ್ಯಕ್ಷರಾದ ಶಶಿಧರ್ ಶೆಟ್ಟಿ, ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್, ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‌ನ ಪ್ರಾಂಶುಪಾಲೆ ಅಕ್ಷತಾ ಶೆಣೈ ಉಪಸ್ಥಿತರಿದ್ದರು. ರಾಜ್ಯ ಕಬಡ್ಡಿ ಅಸೋಸಿಯೇಶನ್‌ನ ತೀರ್ಪುಗಾರರಾದ ಸಂತೋಷ್, ಪ್ರಶಾಂತ್ ಶೆಟ್ಟಿ, ಅಣ್ಣಪ್ಪ ಭಾಗವಹಿಸಿದ್ದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿರುವ ಸುಮಾರು 8 ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಸಮರ ಕಲೆಯ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಶಶಿಧರ್ ಶೆಟ್ಟಿ ಅವರು ಮಾತನಾಡಿ, ಕ್ರಿಯೇಟಿವ್ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಕ್ರಿಯೇಟಿವ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ಕಾಯಿದೆ ಹಾಗೂ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವಿದ್ದಾಗ ಮಾತ್ರ ಹಿರಿಯರ ಮೇಲಾಗುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ. ಈ ಬಗ್ಗೆ ಜನರಿಗೆ ಹೆಚ್ಚು ಜಾಗೃತಿ ಮೂಡಿಸುವ ಮೂಲಕ ಹಿರಿಯ ಜೀವಗಳು ತಮ್ಮ ಸಂಧ್ಯಾ ಕಾಲದಲ್ಲಿ ನೆಮ್ಮದಿಯ ಜೀವನ ಜೀವಿಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಸಿದ್ದಪ್ಪ ಗಂಗಣ್ಣನವರ್ ಹೇಳಿದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ತಂದೆ ತಾಯಿಯರ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ನಡೆದ ಆರುಣ್ಯ 2026ರ ಅಂತರ ಕಾಲೇಜು ಮ್ಯಾನೇಜಮೆಂಟ್ ಫೆಸ್ಟ್ ನಲ್ಲಿ ವಕ್ವಾಡಿಯ ಗುರುಕುಲ ಪದವಿಪೂರ್ವ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಾಂಸ್ಕೃತಿಕ, ಮ್ಯಾನೇಜಮೆಂಟ್, ಕಾಮರ್ಸ್, ಐಟಿ ಮತ್ತು ಕ್ರೀಡಾ ವಲಯಕ್ಕೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳಾದ ಸ್ಕಿಟ್, ಡ್ಯಾನ್ಸ್, ಸ್ಕ್ವಾಟ್, ಕ್ವಿಜ್, ಪೋಸ್ಟರ್ ಮೇಕಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದು, ವೆರೈಟಿ ಶೋ, ಪುಶಪ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಸ್ಕಿಟ್‌ನಲ್ಲಿ ಪೌರವ್, ಹೇಮಂತ್, ತನುಶಿ, ತನ್ಮಯಿ, ಪುಶಪ್ ಮತ್ತು ಸ್ಕ್ವಾಟ್ ನಲ್ಲಿ ಅನಿಶ್ ಮತ್ತು ಶ್ರಾವ್ಯ, ಕ್ವಿಜ್ ನಲ್ಲಿ ದರ್ಶನ್ ಮತ್ತು ಕುಶಾಲ್, ಡ್ಯಾನ್ಸ್ ನಲ್ಲಿ ಪ್ರಜನ್ಯ, ಸಿರಿಶಾ, ಅಧಿತಿ ಪಟೇಲ್, ಹಿತೈಷಿ, ತನುಶಿ, ತನ್ಮಯಿ, ಪೋಸ್ಟರ್ ಮೇಕಿಂಗ್ ನಲ್ಲಿ ಆದಿತ್ಯ ಎಸ್ ನಾಯ್ಕ್ ಸುಪ್ರೀತ್, ವೈರಟಿ ಶೋನಲ್ಲಿ ನಿತ್ಯ, ಕೀರ್ತನ, ಸ್ಪಂದನ, ವೈಷ್ಣವಿ, ಸುಮಿತ್, ರೋಹನ್, ಭರತ್, ಆದಿತ್ಯ ನಾಯಕ್, ಪ್ರೀತಮ್ ಎಂ, ಭಾಗವಹಿಸಿ ಪ್ರಶಸ್ತಿ ಗೆದ್ದು ಕಾಲೇಜಿಗೆ …
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಯಂಗಡಿಯವರು ಗಣೇಶ ಚತುರ್ಥಿಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ಸಾಂಸ್ಕçತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 9 ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿಜೇತ ವಿದ್ಯಾರ್ಥಿಗಳ ವಿವರ ಇಂತಿದೆ:ಇಂಗ್ಲೀಷ್ ಭಾಷಣ – ಸ್ಪರ್ಶ, ಪ್ರಥಮ, ಹಿಂದಿ ಭಾಷಣ – ತೃಪ್ತಿ ಶೆಟ್ಟಿ, ದ್ವಿತೀಯ, ಹಿಂದಿ ಭಾಷಣ – ಡಿ. ಸಾನ್ವಿ – ತೃತೀಯ, ದೇಶ ಭಕ್ತಿ ಗೀತೆ – ಸುಮೇಧ ತುಂಗಾ, ದ್ವಿತೀಯ, ಪ್ರತ್ಯುಶ್ – ರೋಪ್ ಸ್ಕಿಪ್ಪಿಂಗ್ – ಪ್ರಥಮ, ಸುಡೊಕೊ – ವನ್ಮಯಿ ದ್ವಿತೀಯ, ಯೋಗ – ಅಕ್ಷತ ಪೈ – ಪ್ರಥಮ, ಗೂಡು ದೀಪ ಧ್ಯಾನ್ – ತೃತೀಯ, ರೂಬಿಕ್ಸ್ ಕ್ಯೂಬ್ – ಪ್ರಜ್ವಲ್ – ತೃತೀಯ. ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ನಿರ್ದೇಶಕ ಹರೀಶ್ ಮರವಂತೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಕೋಟ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಜಮಾಬಂದಿ ಪ್ರಕ್ರಿಯೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು. ಈ ಜಮಾಬಂದಿ ಕಾರ್ಯಕ್ರಮದಲ್ಲಿ ವಾರ್ಷಿಕ ಲೆಕ್ಕಪತ್ರಗಳ ಪರಿಶೀಲನೆಯನ್ನು ಜಮಾಬಂದಿ ಅಧಿಕಾರಿ ಜಿಲ್ಲಾ ಯೋಜನಾಧಿಕಾರಿ ಉದಯ್ ಶೆಟ್ಟಿ ನಿರ್ವಹಿಸಿ ಹಿಂದೆ ಪಂಚಾಯತ್ ಜಮಾಬಂದಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಪರಿಶೀಲಿಸುವ ಕಾಲಘಟ್ಟ ಇದಿತು ಆದರೆ ಇಂದು ಮಾಹಿತಿ ಹಕ್ಕಿನಲ್ಲೆ ಸ್ಥಳೀಯಾಡಳಿತದ ಕದ ತಟ್ಟುತ್ತಾರೆ ಈ ಹಿನ್ನಲೆಯಲ್ಲಿ ಜಮಾಬಂದಿ ಔಪಚಾರಿಕವಾಗಿ ನಡಯುತ್ತಿದೆ ಎಂದರು. ಜಮಾಬಂದಿ ಸಹಾಯಕ ಅಧಿಕಾರಿಗಳಾಗಿ ಆನಂದ್ ನಾಯ್ಕ್ ವರದಿ ವಾಚಿಸಿದರು.ಸಹಾಯಕಾಗಿ ಸುಧಾಕರ್ ಆಚಾರ ಸಹಕರಿಸಿದರು. ಪಂಚಾಯತ್ ರಾಜ್ ಇಂಜಿನಿಯರ್ ಹರ್ಷಿತ್, ಆಡಳಿತಾಧಿಕಾರಿ ಪ್ರತಾಪ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಪಂಚಾಯತ್ ಮಾಜಿ ಅಧ್ಯಕ್ಷರು, ಸದಸ್ಯರು, ಸಂಜೀವಿನ ಸಂಘಟನೆ ಪದಾಧಿಕಾರಿಗಳು, ಗ್ರಾಮಸ್ಥರು ಭಾಗಿಯಾದರು. ಜಮಾಬಂದಿಯನ್ನು ಪಂಚಾಯತ್ ಪಿಡಿಒ ಉಮೇಶ್ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸ್ಫೂರ್ತಿ ಮಾತು ಕಾರ್ಯಕ್ರಮದ 18ನೇ ಸರಣಿಯಲ್ಲಿ “ಜೆನ್ ಜಿ: ಹೊಸ ಭಾರತದ ನವಶಕ್ತಿ” ಎಂಬ ವಿಷಯದ ಮೇಲೆ ನಾಡಿನ ಖ್ಯಾತ ಲೇಖಕ, ಚಿಂತಕ, ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸಿ ಮಾತನಾಡಿದರು. ‘ಇಂದಿನ ಯುವಜನತೆ ಭಾರತೀಯ ಇತಿಹಾಸ ಮತ್ತು ಪರಂಪರೆಯನ್ನು ಮನೋಜ್ಞವಾಗಿ ಅರ್ಥೈಸಿಕೊಳ್ಳಬೇಕು. ಭಾರತೀಯ ನೆಲಮೂಲ ಸಂಸ್ಕೃತಿಯನ್ನು ಜಗತ್ತಿನೆಲ್ಲೆಡೆ ಪಸರಿಸುವ ಕಾರ್ಯಕ್ಕೆ ಮುಂದಾಗಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿಯೆ ತೊಡಗಿ ತಮ್ಮ ಅನನ್ಯ ಭವಿಷ್ಯ ಹಾಳು ಮಾಡಿಕೊಳ್ಳುವ ಬದಲು ಹೊಸ ಹೊಸ ಆವಿಷ್ಕಾರಗಳತ್ತ ಮುಖ ಮಾಡಬೇಕೆಂದು ತಿಳಿಸಿದರು. ಭಾರತದ ಅಸ್ತಿತ್ವ ಮತ್ತು ಅಸ್ಮಿತೆ ಉಳಿಯಬೇಕಾದರೆ ಜೆನ್-ಜಿ ಗಳ ಕೊಡುಗೆ ಅಮೂಲ್ಯ ಎನಿಸಿಕೊಳ್ಳುತ್ತದೆ. ಇಂದಿನ ಜಿನ್-ಜಿ ಗಳು ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ತಾತ್ವಿಕ ಚಿಂತನೆಗಳನ್ನು ಬದುಕಿಗೆ ಅಳವಡಿಸಿಕೊಳ್ಳುವುದರ ಮುಖೇನ ದೇಶದ ಹಿತ ಕಾಪಾಡಬೇಕು. ಭಾರತ ವಿರೋಧಿ ಕಾರ್ಯಗಳಿಂದ ದೂರವಿದ್ದು ದೇಶಕ್ಕೆ ಪೂರಕವಾದ ಕೆಲಸಗಳಲ್ಲಿ ತೊಡಗಬೇಕು. ಈಗಾಗಲೇ ತ್ಯಾಗ, ಬಲಿದಾನಗಳಿಂದ ಸುಭದ್ರವಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕಬಡ್ಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆರಿದ ಮಮತಾ ಪೂಜಾರಿಯವರ ಸಾಧನೆಯ ದಾರಿಯನ್ನು ನೀವುಗಳು ಪ್ರೇರಣೆಯಾಗಿ ಪಡೆದು ಸಾಧನೆಯ ಮಜಲುಗಳನ್ನು ಏರಿ ಎಂದು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹೇಳಿದರು. ಅವರು ಗುರುವಾರ ಕೆ.ಪಿ.ಎಸ್ ಮಣೂರು ಪಡುಕರೆ ಶಾಲಾ ಮೈದಾನದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆ.ಪಿ.ಎಸ್) ಮಣೂರು ಪಡುಕರೆ ಸಾರಥ್ಯದಲ್ಲಿ 14 ಮತ್ತು 17 ರ ವಯೋಮಾನದ ಬಾಲಕ-ಬಾಲಕಿಯರಿಗಾಗಿ ಹಮ್ಮಿಕೊಳ್ಳಲಾದ ಬ್ರಹ್ಮಾವರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಕಬಡ್ಡಿಯಲ್ಲಿ ನಿರಂತರ ತರಬೇತಿ ಪರಿಶ್ರಮ ಅಗತ್ಯ ,ಅರ್ಹತೆ ಪ್ರತಿಯೊರ್ವರಲ್ಲೂ ಇರುತ್ತದೆ ಆದರೆ ಅದನ್ನು ಸದ್ಭಳಕೆ ಮಾಡಿಕೊಳ್ಳುವ ವಿಧಾನವನ್ನು ನೀವುಗಳು ತರಬೇತುದಾರರ ಮೂಲಕ ಅನುಷ್ಠಾನಗೊಳಿಸಿಕೊಳ್ಳಿ ಎಂದರು. ಕೋಟ ಮಣೂರು ಗೀತಾನಂದ ಫೌಂಡೇಶನ್ ನಿರ್ದೇಶಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಅವರು ದೀಪ ಬೆಳಗಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು. ಇದೇ ವೇಳೆ ಕ್ರೀಡಾಸ್ಪೂರ್ತಿ ಪಾರಿವಾಳವನ್ನು ಹಾರಿಬಿಡುವ ಮೂಲಕ ಅಧೀಕೃತವಾಗಿ ಚಾಲನೆ ನೀಡದ ರಾಜೇಂದ್ರ ಸುವರ್ಣ ಕ್ರೀಡಾಳುಗಳ ಕೈಕುಲುಕಿ ಶುಭಹಾರೈಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಮತ್ತು ಹಳೆ ವಿದ್ಯಾರ್ಥಿ ಸಂಘ ಗುಜ್ಜಾಡಿ ಇವರ ಆಶ್ರಯದಲ್ಲಿ “ಶ್ರೀ ಕೃಷ್ಣ ಜನ್ಮಾಷ್ಟಮಿ” ಪ್ರಯುಕ್ತ ಪೂರ್ವ ಪ್ರಾಥಮಿಕ ಮಕ್ಕಳಿಗಾಗಿ “ಮುದ್ದು ಕೃಷ್ಣ ಮುದ್ದು ರಾಧೆ” ಸ್ಪರ್ಧೆ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ನಾರಾಯಣ ಆಚಾರ್ಯ ಗುಜ್ಜಾಡಿ ವಹಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಶಾಲಾ ಮುಖ್ಯೋಪಾಧ್ಯಾಯ ಗಂಗಾಧರ ಬಂಟ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಎ.ಆರ್.ವಲಿವುಲ್ಲಾ. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಡಿ., ಎಸ್.ಡಿ.ಎಂ.ಸಿ ಸದಸ್ಯೆ ಕವಿತಾ ಸೀತಾರಾಮ ಗಾಣಿಗ ಉಪಸ್ಥಿತರಿದ್ದರು. ನಯನ ಮೇಸ್ತ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸಂಸ್ಥಾಪಕರಾದ ಡಾ. ಎ. ಎಸ್. ಭಂಡಾರ್ಕರ್ ಅವರ ಪುತ್ರಿ ಮಹಾಮಾಯಾ ಭಂಡಾರ್ಕರ್ ಅವರು ತಮ್ಮ ತಾಯಿ ದಿವಂಗತ ಸುಲೋಚನಾಬಾಯಿ ಭಂಡಾರ್ಕರ್ ಅವರ ಜನ್ಮದಿನದ ಸ್ಮರಣಾರ್ಥ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಾಗಿ ವಿಶೇಷ ಭೋಜನ ಕೂಟವನ್ನು ಆಯೋಜಿಸಿದರು. ಸುಲೋಚನಾಬಾಯಿ ಭಂಡಾರ್ಕರ್ ಅವರ ಸ್ಮರಣೆ ಹಾಗೂ ಗೌರವಾರ್ಥವಾಗಿ ಆಯೋಜಿಸಲಾದ ಈ ಭೋಜನ ಕೂಟವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಈ ಆತ್ಮೀಯ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಮಹಾಮಾಯಾ ಭಂಡಾರ್ಕರ್ ಅವರ ಉದಾರ ಮನೋಭಾವ ಹಾಗೂ ಸಂಸ್ಥೆಯ ಮೇಲಿನ ನಿರಂತರ ಕಾಳಜಿ ಮತ್ತು ಬೆಂಬಲಕ್ಕೆ ಭಂಡಾರ್ಕಾರ್ಸ್ ಕಾಲೇಜು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರಾವಳಿ ಕರ್ನಾಟಕದ ಯುವಜನರಿಗೆ ಉದ್ಯೋಗ ಮತ್ತು ವೃತ್ತಿ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ನಡೆಯುತ್ತಿರುವ ಪ್ರಾದೇಶಿಕ ಪ್ರಮುಖ ಕಾರ್ಯಕ್ರಮವಾದ ಜಾಬ್ಸ್ ಎಕ್ಸ್ಪ್ರೆಸ್ 2026, ಸೆಪ್ಟೆಂಬರ್ 17 ಮತ್ತು 18, 2026ರಂದು ಕುಂದಾಪುರದ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 35ಕ್ಕೂ ಅಧಿಕ ಪ್ರಮುಖ ಕಂಪನಿಗಳು ಭಾಗವಹಿಸಲಿದ್ದು, 5,000ಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಒದಗಿಸಲಿವೆ. ಇದರ ಮೂಲಕ ಕರಾವಳಿ ಕರ್ನಾಟಕದ ವಿದ್ಯಾರ್ಥಿಗಳು, ಪದವೀಧರರು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ನೇರವಾಗಿ ಕಂಪನಿಗಳೊಂದಿಗೆ ಸಂಪರ್ಕ ಸಾಧಿಸಿ ವೃತ್ತಿ ಅವಕಾಶಗಳನ್ನು ಪಡೆಯಲು ವೇದಿಕೆ ಕಲ್ಪಿಸಲಾಗುತ್ತಿದೆ. ನುವಿನ್ ಗ್ಲೋಬಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (Nuhvin Global Services Pvt. Ltd.), 24/7.ai, ಟಾಟಾ ವಿಸ್ಟ್ರಾನ್ (TATA Wistron), ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (Tata Electronics Pvt. Ltd.), ವಿಪ್ರೋ ಕವಾಸಕಿ ಪ್ರಿಸಿಷನ್ ಮೆಕ್ ಲಿಮಿಟೆಡ್ (Wipro Kawasaki Precision Mech Ltd.), ವಿನ್‌ಮ್ಯಾನ್ ಸಾಫ್ಟ್‌ವೇರ್ (Winman Software), ಎಮ್ಮ್ವೀ (EMMVEE), ಫ್ಲಿಪ್‌ಕಾರ್ಟ್…
