ಮರವಂತೆ: ಶಾಲೆಗಳು ಕೇವಲ ಕಲ್ಲು ಮಣ್ಣಿನಿಂದ ಕಟ್ಟಿದ ಕಟ್ಟೋಣವಲ್ಲ. ಇದೊಂದು ಯಜ್ಞಭೂಮಿಯಾಗಿದ್ದು, ಸಮಾಜಕ್ಕೆ ಶಕ್ತಿ ಕೊಡುವ ಕೇಂದ್ರವಾಗಿದೆ. ಇಲ್ಲಿ ಧನಾತ್ಮಕ ಚಿಂತನೆಗಳು ದೊಡ್ಡ ಶಕ್ತಿಯಾಗಬೇಕು. ಇಂತಹ ಸಂಸ್ಥೆಗಳಲ್ಲಿ ಮಕ್ಕಳಿಗೆ ಭಾವನಾತ್ಮಕ ವ್ಯಕ್ತಿತ್ವ ವಿಕಸನದ ಶಿಕ್ಷಣ ಸಿಗುವಂತಾಗಬೇಕು ಎಂದು ಉದ್ಯಾವರ ಮಾಧವ ಆಚಾರ್ಯ ಹೇಳಿದರು. ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲೆಯ 28ನೇ ವಾರ್ಷಿಕೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಿಂದಿನವರಿಂದ ಬಂದ, ಎಲ್ಲರೂ ಒಂದಾಗಿ ಬಾಳೋಣ ಎಂಬ ಕಲ್ಪನೆಗಳು ಶಾಲೆಯಲ್ಲಿ ಮಾತ್ರ ಸಾಧ್ಯ. ಕಿವಿಯಿಂದ ಕೇಳಿದ ಪಾಠ ಮನಸ್ಸಿನೊಳಗೆ ಹೋಗದಿದ್ದರೆ ಏನೂ ಪ್ರಯೋಜನವಾಗದು. ಭಗವಂತ ಕೊಟ್ಟ ಸೂಕ್ಷ್ಮ ಅಂಗಾಗಗಳಲ್ಲಿ ಸಮರ್ಪಕ ವ್ಯವಸ್ಥೆಯಿದೆ. ಪ್ರತಿಯೊಂದನ್ನು ಸ್ವೀಕರಿಸಿ ಪುನಃ ಜಗತ್ತಿಗೆ ನೀಡುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು. ವಿಶೇಷ ಅತಿಥಿಯಾಗಿ ಆಗಮಿಸಿದ ಗುಜರಾತ್ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಧನಾ ರಾವ್ ಮಾತನಾಡಿ, ಮಗು ದೇವರು ಕೊಟ್ಟ ದೇಣಿಗೆ. ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ನಿಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕಲೆಗೆ ವಯಸ್ಸಿನ ಹಂಗಿಲ್ಲ. ಸಮಯದ ಪರಿಧಿ ಇಲ್ಲ. ತನ್ನನ್ನು ಆರಾಧಿಸುವ ಯಾರಿಗೇ ಆದರೂ ಒಲಿಯದೇ ಉಳಿಯೊಲ್ಲ. ಏನನ್ನಾದರೂ ಸಾಧಿಸುವನೆಂಬ ಛಲ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಕಷ್ಟವಲ್ಲ. ಹೌದು ಕುಂದಾಪುರ ಬಹುಪರಿಚಿತ ವೈದ್ಯ ಡಾ. ಎಚ್. ಎಸ್. ಮಲ್ಲಿ ಅವರೊಳಗಿನ ಕಲಾಕಾರ ಕೊಂಚದಿಂದ ಹೊರಬಂದು ಕಲಾಕೃತಿಗಳಾಗಿರುವುದನ್ನು ಕಂಡವರಿಗೆ ಹೀಗೆ ಅನ್ನಿಸದಿರದು. ಕುಂದಾಪುರದ ಕಲಾಮಂದಿರದಲ್ಲಿ ಇತ್ತಿಚಿಗೆ ಡಾ. ಸುಭೋಧ್ಕುಮಾರ್ ಮಲ್ಲಿ ಅವರ ’ಸೃಜನಾ’ ಚಿತ್ರಕಲಾ ಪ್ರದರ್ಶನ ಮೂರು ದಿನಗಳ ಕಾಲ ಏರ್ಪಡಿಸಲಾಗಿತ್ತು. 76ರ ಹರೆಯದ ಮಲ್ಲಿಯವರು ಪ್ರಥಮ ಬಾರಿಗೆ ತಾವು ರಚಿಸಿದ ಚಿತ್ರಕಲೆ ಪ್ರದರ್ಶನವನ್ನು ಏರ್ಪಡಿಸಿ ಚಿತ್ರಕಲಾ ಪ್ರಿಯರ ಮನ ಸೂರೆಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರ ಪ್ರದರ್ಶನ ಮಾತ್ರವಲ್ಲದೇ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದು ಇದರಿಂದ ಸಂಗ್ರಹವಾದ ಹಣವನ್ನು ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ನೀಡುತ್ತಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಬಹಮುಖ ವ್ಯಕ್ತಿತ್ವ: ವೃತ್ತಿಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿ ೪೫ ವರ್ಷಗಳ ಕಾಲ ವೈದ್ಯಕೀಯ…
ಬೈಂದೂರು: ಆಧುನಿಕ ಮಾನವ ಸಂಪನ್ಮೂಲ ಕೌಶಲ ವೃದ್ಧಿಯಲ್ಲಿ ಮತ್ತು ಜೀವನದ ವಿವಿಧ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಭಗವದ್ಗ್ಭಿತೆಯ ಅಂಟಿಸಿಕೊಳ್ಳದ ಮುಕ್ತ ಕಾರ್ಯವಿಧಾನವನ್ನು ಯಶಸ್ವಿ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿಯೂ ಭಗವದ್ಗ್ಭಿತೆಯ ವಿಚಾರಗಳು ಉಪಯುಕ್ತತೆಯನ್ನು ಕಂಡಿವೆ. ಗೀತೆಯ ಕುರಿತು ಹಲವು ಅಪವ್ಯಾಖ್ಯಾನಗಳನ್ನು ನಿವಾರಿಸಿ ಅದರ ಉಪಯುಕ್ತತೆಯನ್ನು ಸಾರುವ ಅಭಿಮಾನ ಸಮನ್ವಯ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದು ಬೆಂಗಳೂರಿನ ಮಾಧ್ಯಮ ಭಾರತೀಯ ನಿರ್ದೇಶಕ ಹಿರಿಯ ಪರ್ತಕರ್ತ ಮೊಗೇರಿ ಜಯರಾಮ ಅಡಿಗರು ಹೇಳಿದರು. ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆವರಣದಲ್ಲಿ ಶ್ರೀ ಸೂರ್ಯ ಸಿದ್ಧಾಂತ ಪೌಂಡೇಶನ್, ಪಂಚಾಂಗ ಮಂದಿರ ಮೊಗೇರಿ ಸಹಕಾರದೊಂದಿಗೆ ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀಗಳ ಶ್ರೀಮದ್ಭಗವದ್ಗೀತಾ ಪ್ರಸಾರ ಅಭಿಯಾನದ ಪ್ರವಾಚಕರು ಉಪನ್ಯಾಸಕರುಗಳಿಗೆ ಏರ್ಪಡಿಸಿದ ಶಿಬಿರದ ಉದ್ಘಾಟಿಸಿ ಮಾತನಾಡಿದರು. ಶಿಬಿರದ ನಿರ್ದೇಶಕ ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ಪ್ರಾಂಶುಪಾಲ ಪ್ರೋ.ನಾರಾಯಣ ರಾವ್ ಮಾತನಾಡಿ, ವ್ಯಕ್ತಿತ್ವದ ನಿರ್ಮಾಣದಲ್ಲಿ ಸ್ವಭಾವ ಮತ್ತು ಕೆಲಸದಲ್ಲಿನ ಸಂಬಂಧಗಳು ಪ್ರಭಾವ ಬೀರುತ್ತವೆ. ಸ್ವ-ಸ್ವಭಾವ, ಸ್ವಧರ್ಮಗಳನ್ನು ಹೀಗೆಳೆಯದೇ ಕೌಶಲ್ಯ ವೃದ್ಧಿ ಕಡೆ…
ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ನ ನೂತನ ಅಧ್ಯಕ್ಷರಾಗಿ ರಾಮನಾಥ ಚಿತ್ತಾಲ್, ಕಾರ್ಯದರ್ಶಿಯಾಗಿ ನಾಗರಾಜ ಖಾರ್ವಿ ಜಿಎಫ್ಸಿಎಸ್ ಆಯ್ಕೆಯಾಗಿದ್ದಾರೆ. ಎಂ.ಅನಂತ ಪೈ (ಖಜಾಂಚಿ), ಬಿ.ಗಣೇಶ ಶೆಣೈ (ಉಪಾಧ್ಯಕ್ಷ), ಎಂ.ನಾಗೇಂದ್ರ ಪೈ (ಜತೆ ಕಾರ್ಯದರ್ಶಿ), ಎಂ.ರಮೇಶ ಪೈ, ಕೆ.ಶ್ರೀನಿವಾಸ ನಾಯಕ್, ಕೆ.ರಾಮನಾಥ ನಾಯಕ್, ರಮೇಶ ಖಾರ್ವಿ, ಎನ್.ಅಶ್ವಿನ್ ನಾಯಕ್, ಎಂ.ನಾಗೇಂದ್ರ ಪೈ, ಕೃಷ್ಣಾನಂದ ಮಡಿವಾಳ, ಬಿ.ರಾಘವೇಂದ್ರ ಪೈ, ಕೆ.ಕೃಷ್ಣ ಭಟ್, ರಾಘವೇಂದ್ರ ಭಂಡಾರ್ಕಾರ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾದರು.
ಬೈಂದೂರು: ರಾಜ್ಯದಲ್ಲಿ ಪ್ರತೀ ವರ್ಷ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನೀಯರ್ ಪದವಿ ಪಡೆಯುತ್ತಿದ್ದಾರೆ. ಮೂಲಭೂತಸೌಕರ್ಯಗಳ ಬದಲಾವಣೆಯಾಗದ, ನಮ್ಮ ಹಿಂದಿನವರ ಹಾಗೆ ಹೊಸತನವೇನೂ ಇಲ್ಲದ ಈ ಪದವಿ ಪಡೆದು ವೃತ್ತಿ ಪ್ರಾರಂಬಿಸುವ ಮೊದಲು ನಾವು ಕಲಿತ ಶಿಕ್ಷಣದಲ್ಲಿ ಹೊಸ ಚಿಂತನೆಗಳು ಹಾಗೂ ಒಳ್ಳೆಯ ಉದ್ದೇಶದಿಂದ ಕೂಡಿದ ಅಗತ್ಯವಾದ ಬದಲಾವಣೆಗಳಾಬೇಕು. ಸಮಾಜದ ಪಾಲುದಾರಿಕೆ ಹಾಗೂ ಉತ್ತಮ ನಾಗರೀಕತೆಗೆ ಉನ್ನತ ಶಿಕ್ಷಣದ ಅಗತ್ಯವಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕೆ. ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶಿರೂರು ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ೧೫ನೇ ವಾರ್ಚಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಸ್ವ-ಅಭಿವೃದ್ಧಿನ್ನೆ ಗಮನದಲ್ಲಿಟ್ಟುಕೊಂಡು ದೊಡ್ಡ ಮೊತ್ತದ ಸಂಪಾದನೆಗಾಗಿ ಸೀಮಿತವಾದ ಉನ್ನತ ಶಿಕ್ಷಣದಿಂದ ಲಾಭವಾಗದು. ಇಂಜಿನೀಯರ್, ಡಾಕ್ಟರ್ ಆಗುವ ವಿದ್ಯಾರ್ಥಿಗಳಿಗೆ ಹೊಸ ಆವಿಷ್ಕಾರದ ಸರದಾರವಾಗುವ ದೊಡ್ಡ ಕನಸಿನೊಂದಿಗೆ ದೂರದೃಷ್ಠಿತ್ವದಿಂದ ಕೂಡಿದ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಸಾಮಾನ್ಯ ಜನರಿಗೂ ಅನುಕೂಲವಾಗುವಂತಹ ಸಾಧನಗಳನ್ನು ತಯಾರಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ಹೊಸ ಸಂಶೋದನೆಯಿಂದ…
ಬೈಂದೂರು: ಇಲ್ಲಿಗೆ ಸಮೀಪದ ನಾಕಟ್ಟೆಯಲ್ಲಿ ಬೈಕ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಶಿರೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಕಾರು ಓವರಟೇಕ್ ಮಾಡುವ ಭರದಲ್ಲಿ ನಾಕಟ್ಟೆ ಸಮೀಪ ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಮಂಜುನಾಥ ಹಾಗೂ ಸೀತಾರಾಮ ಎಂಬುವವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಈರ್ವರನ್ನೂ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಕಾರಿನ ಮುಂಭಾಗ ಹಾಗೂ ಬೈಕ್ ನುಜ್ಜುಗುಜ್ಜಾಗಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಶ್ರದ್ಧೆ, ಪ್ರಾಮಾಣಿಕತೆಯ ಹಾದಿಯಲ್ಲಿ ನಂಬಿಕೆಯೊಂದಿಗೆ ಸಾಗಿದಾಗ ಯಶಸ್ಸು ಅರಸಿ ಬರುವಂತೆ ಕಲಾ ಜಗತ್ತಿನಲ್ಲಿ ನಿಷ್ಠೆ, ಪ್ರಾಮಾಣಿಕ ಪ್ರಯತ್ನ, ಅಚಲ ವಿಶ್ವಸದಿಂದ ಸುಂದರ ಕಲಾ ಜಗತ್ತನ್ನು ಸೃಷ್ಠಿಸಲು ಸಾಧ್ಯ ಎಂಬುದನ್ನು ಉಪ್ಪಿನಕುದ್ರು ಭಾಸ್ಕರ ಕಾಮತರು ತೋರಿಸಿಕೊಟ್ಟಿದ್ದಾರೆ ಎಂದು ಸುದ್ದಿಮನೆಯ ವಾರಪತ್ರಿಕೆ ಸಂಪಾದಕ ಸಂತೋಷ ಕೋಣಿ ಹೇಳಿದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಡಿಸೆಂಬರ್ ತಿಂಗಳ ಕಾರ್ಯಕ್ರಮದಲ್ಲಿ ಗೊಂಬೆಮನೆ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಗೊಂಬೆಯಾಟ ಅಕಾಡೆಮಿ ಸ್ಥಾಪಿಸಿ ಪ್ರತಿಭಾನ್ವಿತರಿಗೆ ಅವಕಾಶ ಕಲ್ಪಿಸುವ ಜೊತೆಗೆ ಪರಿಸರದ ಜನರಿಗೆ ಕಲಾಪ್ರಪಪಂಚದ ಅನಾವರಣ ಮಾಡಿಸುತ್ತಿರುವುದು ಶ್ಲಾಘನೀಯ. ನಿವೃತ್ತ ಪದವೀಧರ ಮುಖ್ಯೋಪಧ್ಯಾಯರಾದ ಟಿ. ವಿಷ್ಟು ಕಾಮತ್ ಹಾಗೂ ಯಕ್ಷಗಾನ ಕಲಾವಿದ ಹೆಮ್ಮಾಡಿ ರಾಮಚಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು. ನಾರಾಯಣ ಮೇಲಾಡಿ ಉಪಸ್ಥಿತರಿದ್ದರು. ಗೊಂಬೆಯಾಟ ಅಕಾಡೆಮಿಯ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದ್ದರು. ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ವಿದ್ಯಾರ್ಥಿಗಳಿಂದ ’ವೀರಮಣಿ ಕಾಳಗ’ ಯಕ್ಷಗಾನ ಬಯಲಾಟ ಜರುಗಿತು.
ಕುಂದಾಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ದಕ್ಷಿಣಕನ್ನಡ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್. ಪ್ರಕಾಶ್ ಶೆಟ್ಟಿ ಚುನಾವಣೆ ಕಣದಿಂದ ಹಿಂದೆ ಸರಿದು ಪಕ್ಷದ ಇನ್ನೋರ್ವ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಕುಂದಾಪುರ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಕ್ಷದ ಇನ್ನೋರ್ವ ಅಭ್ಯರ್ಥಿ ಪ್ರವೀಣ್ ಚಂದ್ರ ಜೈನ್ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ನಿರ್ದೇಶನದಂತೆ ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ. ಚುನಾವಣೆ ಕಣದಲ್ಲಿ ಅಭ್ಯರ್ಥಿ ಎಂದು ಘೋಷಿಸಿದಾಗ ಪಕ್ಷ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಲ್ಲದೇ ಮುಂದೆ ಪಕ್ಷ ಸಂಘಟನೆ ವಿಚಾರದಲ್ಲಿ ಹಿರಿಯರೊಂದಿಗೆ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಹೇಳಿದರು. ಜೆಡಿಎಸ್ ಈ ಬಾರಿ ಪರಿಷತ್ ಚುನಾವಣೆಗೆ ದಕ್ಷಿಣಕನ್ನಡ ಕ್ಷೇತ್ರದಲ್ಲಿ ಇಬ್ಬರೂ ಅಭ್ಯರ್ಥಿಗಳಿಗೆ ಸ್ಪರ್ಧೆಗಾಗಿ ಬಿ. ಫಾರ್ಮ ನೀಡಿತ್ತು, ಅಂತಿಮ ಕ್ಷಣದಲ್ಲಿ ಕೆಲವು ಬದಲಾವಣೆ ತರುವ ನಿಟ್ಟಿನಲ್ಲಿ ಪಕ್ಷಾಧ್ಯಕ್ಷರ ಸ್ವರ್ಧೆಯಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆ. ಪಕ್ಷದ ಅಧೀಕೃತ ಅಭ್ಯರ್ಥಿ…
36 ಕ್ವಾರ್ಟಸ್ ವಾಸಕ್ಕೆ ಸಿದ್ಧ: ಮಾರ್ಚ್ನಲ್ಲಿ ದ್ವಿತೀಯ ಹಂತ ಪೂರ್ಣ: ಎಸ್ಪಿ ಅಣ್ಣಾಮಲೈ ಕುಂದಾಪುರ: ಪೊಲೀಸರ ಬಹುಕಾಲದ ಬೇಡಿಕೆಯಾದ ಸುಸಜ್ಜಿತ ವಸತಿಗೃಹ ಅಂತು ಅಂತಿಮ ಹಂತ ತಲುಪಿದೆ. ಸುಮಾರು 2.96ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಮುಚ್ಚಯದಲ್ಲಿ 76 ಪೇದೆ ಹಾಗೂ 6 ಉನ್ನತ ಮಟ್ಟದ ಅಧಿಕಾರಿಗಳ ವಾಸಕ್ಕೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣಗೊಂಡಿದ್ದು ಮೊದಲ ಹಂತ 36ರ ವಸತಿಗೃಹವನ್ನು ವಾಸಕ್ಕೆ ಸಿದ್ಧಗೊಂಡಿದ್ದು ಕಾಮಗಾರಿಗೆ ಸಮುಚ್ಚಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಕಾಮಗಾರಿ ಪ್ರಗತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಪೊಲೀಸ್ ಗೃಹ 2020ಯೋಜನೆಯ ಅನ್ವಯ ಕುಂದಾಪುರದ ಫೆರಿ ರಸ್ತೆಯಲ್ಲಿ ನಿರ್ಮಾಣಗೊಂಡ ಪೊಲೀಸ್ ವಸತಿ ಸಮುಚ್ಛಯ ಸಾಂಕೇತಿಕವಾಗಿ ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸುದ್ಧಿಗಾರರ ಜೊತೆ ಮಾತನಾಡಿ, ಕುಂದಾಪುರದ ಪೊಲೀಸ್ ಸಿಬ್ಬಂದಿಗಳ ವಸತಿ ಸಮಸ್ಯೆ ಹಲವು ದಿನಗಳಿಂದ ಇದ್ದು ಪೊಲೀಸ್ ಸಿಬ್ಬಂದಿಗಳು ಕ್ವಾರ್ಟಸ್ ಇಲ್ಲದೇ ಬೇರೆ ಬೇರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಂಗ್ರೆಸ್ಸಿನ ಸಭೆಗಳಲ್ಲಿ ತಾನು ಸ್ವತಂತ್ರವಾಗಿ ಸ್ವರ್ಧಿಸಿರುವುದೇ ದೊಡ್ಡ ಪ್ರಮಾದ ಎಂಬಂತೆ ತನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ. ಹೀಗೆ ನಿರಾಧಾರವಾಗಿ ಆರೋಪಿಸುವ ಬದಲು ತನ್ನೊಂದಿಗೆ ಬಹಿರಂಗವಾಗಿ ವಿಷಯಾಧಾರಿತ ಚರ್ಚೆಗೆ ಬನ್ನಿ ಎಂದು ವಿಧಾನ ಪರಿಷತ್ ಸ್ವತಂತ್ರ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಸವಾಲು ಹಾಕಿದರು. ಹೆಮ್ಮಾಡಿ ಜೂವೆಲ್ ಪಾರ್ಕ್ನಲ್ಲಿ ನಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆ ಬೇರೆ ಪಕ್ಷದಿಂದ ಬಂದವರು ಎಂದು ಆರೋಪಿಸುವ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಮಾಜಿ ಶಾಸಕ ಯು.ಆರ್.ಸಭಾಪತಿ ಮೂಲ ಕಾಂಗ್ರೆಸಿಗರಾ? ಅವರೂ ಕೂಡ ಬೇರೆ ಬೇರೆ ಪಕ್ಷದಿಂದ ಕಾಂಗ್ರಸ್ಗೆ ಬಂದವರಲ್ಲವೇ ಎಂದು ಪ್ರಶ್ನಿಸಿದರು. ಅಧಿಕಾರ ದಾಹ ಯಾರಿಗೆ? ಜೆಪಿ ಹೆಗ್ಡೆಗೆ ಅಧಿಕಾರದಾಹ ಎಂದು ಗೂಬೆ ಕೂರಿಸಿವ ಕಾಂಗ್ರೆಸ್ಸಿಗರಿಗೆ ತಾನು ಎರಡು ಬಾರಿ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಸರಕಾರ ನಿಲುವು ಸರಿಕಾಣದಿದ್ದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಕುಮಾರ ಸ್ವಾಮಿ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುತ್ತೇನೆ…
