ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಬೈಂದೂರು ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ದೂರದರ್ಶನ ಚಂದನದ ಉದಯ ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕದ ರಾಮ ಬಿಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಸ್ಟ್ರೋ ಮೋಹನ್ ಅಧ್ಯಕ್ಷತೆಯಲ್ಲಿ ಶನಿವಾರ ಬೈಂದೂರು ಪ್ರವಾಸಿ ಬಂಗಲೆಯಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿಜಯವಾಣಿಯ ನರಸಿಂಹ ನಾಯಕ್, ಕೋಶಾಧಿಕಾರಿಯಾಗಿ ಉದಯವಾಣಿಯ ಕೃಷ್ಣ ಬಿಜೂರು ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ವಿಫೋರ್ ನ್ಯೂಸ್ನ ಜಯಪ್ರಕಾಶ್ ವಿ. ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಯಡಾಡಿ-ಮತ್ಯಾಡಿಯಲ್ಲಿ ನಡೆದ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಸ್ಮರಣ ಶಕ್ತಿಯ ತಂತ್ರಗಳುಎನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜೆ.ಸಿ.ಐ. ತರಬೇತುದಾರರು ಹಾಗೂ ಶಿಕ್ಷಕರಾದ ಅಶೋಕ್ ತೆಕ್ಕಟ್ಟೆ ಅವರು ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ ಸ್ಮರಣ ಶಕ್ತಿಯ ವಿವಿಧ ತಂತ್ರಗಳನ್ನು ಮನವರಿಕೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್, ಬಿದ್ಕಲ್ಕಟ್ಟೆ ಇಲ್ಲಿನ ಪ್ರಾಂಶುಪಾಲರಾದ ವಿಘ್ನೇಶ್ವರ ಅಡಿಗ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮ ಜಪ್ತಿ, ಸಾಕು ಜಪ್ತಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಸವಿತಾ, ರಾಧಾ, ಚೈತ್ರ ಹುಣ್ಸೆಮಕ್ಕಿ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸ್ವಯಂಸೇವಕಿ ಸಿಂಚನ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮುಂದಿನ ಪೀಳಿಗೆಗೆ ನಾವು ಪರಿಶುದ್ಧ ಪ್ರಕೃತಿಯನ್ನು ಬಿಟ್ಟುಹೋಗಬೇಕು. ಅಂತಹ ಮಹಾನ್ ಕಾರ್ಯವನ್ನು ಮುನಿಯಾಲು ಸಂಜೀವಿನಿ ಗೊಧಾಮದ ಮೂಲಕ ರಾಮಕೃಷ್ಣ ಆಚಾರ್ಯರು ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ ಕೊಲ್ಲಾಪುರ ಸಿದ್ದಗಿರಿ ಮಠದ ಪೂಜ್ಯಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನುಡಿದರು. ಅವರು ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಶುಕ್ರವಾರ ಸಂಜೆ ಶ್ರೀನಿವಾಸ ಸಭಾಮಂಟಪದಲ್ಲಿ ರೈತಪೀಠ ಪ್ರಶಸ್ತಿಯನ್ನು ಪ್ರದಾನ ಸಡಗರದಲ್ಲಿ ಆಶೀರ್ವಚನ ನೀಡಿದರು. ಕೃಷಿಯಿಂದಲೇ ದೇಶದ ಭವ್ಯ ಬೆಳವಣಿಗೆ ಸಾಧ್ಯವಿದೆ. ಅದು ಮುಂದಿನ ಅನಿವಾರ್ಯ ಕೂಡ ಆಗಲಿದೆ, ಅಂತಹ ಮಹಾನ್ ಕಾರ್ಯಗಳು ನಮ್ಮಿಂದಲೇ ಆರಂಭವಾಗಬೇಕು, ಪ್ರಕೃತಿ ನಾಶ ಮಾಡಿದರೆ, ಮನುಷ್ಯ ನಾಶವಾದಂತೆ. ಪ್ರಕೃತಿ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿದ್ದೇವೆ ಎಂದರ್ಥ. ಪ್ರಕೃತಿಯನ್ನು ನಾಶ ಮಾಡಿ ಬೆಳವಣಿಗೆ ಎನ್ನುವುದು ಹುಚ್ಚುತನ. ನಮ್ಮ ಕ್ಷಣಿಕ ಸಂತೋಷಕ್ಕೆ ಮುಂದಿನ ಪೀಳಿಗೆಗೆ ನಾವೇನು ಕೊಡುಗೆ ನೀಡುತ್ತೇವೆ. ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ಈ ಶುದ್ಧವಾಗಿರಬೇಕು. ಗೋಧಾಮದಲ್ಲಿ ಕೃಷಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕುಂದಾಪುರ ತಾಲೂಕು ಘಟಕದ 2025-28ನೇ ಸಾಲಿನ ನೂತನ ಅಧ್ಯಕ್ಷರಾಗಿ ಯು ಚಾನೆಲ್ ನ ನಾಗರಾಜ ರಾಯಪ್ಪನಮಠ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಕರ್ನಾಟಕದ ಗಣೇಶ್ ಬೀಜಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಅಸ್ಟ್ರೋ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕುಂದಾಪುರದ ಕೋಯ ಕುಟ್ಟಿ ಹಾಲ್ ನಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ಉದಯವಾಣಿಯ ಸತೀಶ್ ಆಚಾರ್ ಮತ್ತು ಕುಂದ ಪ್ರಭದ ಸಂತೋಷ್ ಕುಂದೇಶ್ವರ, ಕೋಶಾಧಿಕಾರಿಯಾಗಿ ಕನ್ನಡ ಪ್ರಭಾದ ಶ್ರೀಕಾಂತ್ ಹೆಮ್ಮಾಡಿ, ಕಾರ್ಯದರ್ಶಿಗಳಾಗಿ ವಿಜಯವಾಣಿಯ ಮಂಜುನಾಥ ಶೆಣೈ ಜನ್ನಾಡಿ ಹಾಗೂ ದಾಯ್ಜಿ ವಲ್ಡ್೯ ನ ರಾಘವೇಂದ್ರ ಬಿ. ಮತ್ತು ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಪ್ರಶಾಂತ್ ಪಾದೆ, ನಾಗರಾಜ ವಂಡ್ಸೆ, ಶ್ರೀಕರ್ ಎಸ್., ಸತೀಶ್ ಎಂ.ಬಿ., ವಿನಯ ಪಾಯಸ್, ಎಂ. ನಿತ್ಯಾನಂದ, ಸಂತೋಷ್ ಶೆಟ್ಟಿ, ಜಗದೀಶ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬದುಕಿನಲ್ಲಿ ಎರಿಳಿತಗಳು ಸಹಜ. ಸಾಂಸ್ಕೃತಿಕ ಕ್ಷೇತ್ರದ ಪಯಣಗಳು ಜೀವನಾನುಭವ ನೀಡುತ್ತದೆ. ಮಾತ್ರವಲ್ಲದೆ ನನ್ನಂಥ ಸಾವಿರಾರು ಜನರಿಗೆ ಬದುಕು ನೀಡಿದೆ. ನೂರಾರು ಶ್ರೇಷ್ಟ ಪ್ರಶಸ್ತಿಗಳನ್ನು ಪಡೆದಿದ್ದರು ಸಹ ಜನರ ನಡುವೆ ಗುರುತಿಸಿ ದೊರೆಯುವ ಗೌರವ ಅತೀ ಶ್ರೇಷ್ಟವಾಗಿರುತ್ತದೆ. ಬಿಂದುಶ್ರೀ ಪ್ರಶಸ್ತಿ ಸಾರ್ಥಕತೆಯ ಸಂತೃಪ್ತಿಯಾಗಿದೆ. ಜೀವನದ ಕೊನೆ ಉಸಿರಿರುವ ತನಕ ಕಲಾ ಸೇವೆಯ ಮೂಲಕ ಸಮಾಜದ ಋಣ ತೀರಿಸುವ ಜವಬ್ದಾರಿ ಇದೆ ಎಂದು ರಂಗಭೂಮಿ ಕಲಾವಿದೆ ಹಾಗೂ ಹಿರಿಯ ಚಲನಚಿತ್ರ ನಟಿ ಉಮಾಶ್ರೀ ಹೇಳಿದರು. ಅವರು ಸುರಭಿ ರಿ. ಬೈಂದೂರು ಸಾಂಸ್ಕೃತಿಕ, ಸಾಹಿತ್ಯ ಸೇವಾ ಪ್ರತಿಷ್ಠಾನ ಇದರ 26ನೇ ವರ್ಷದ ಅಂಗವಾಗಿ ದಿ. ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣಿಯ ಸಾಂಸ್ಕೃತಿಕೋತ್ಸವದ ಪ್ರಯುಕ್ತ ಬೈಂದೂರು ಶಾರದಾ ವೇದಿಕೆಯಲ್ಲಿ ಎರಡನೇ ದಿನದ ಸುರಭಿ ಜೈಸಿರಿ 2026ನೇ ಸಾಲಿನ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸ್ವೀಕರಿಸಿ ಮಾತನಾಡಿದರು. ಬೈಂದೂರು ಶಾಸಕ ಗುರುರಾಜ ಗಂಟೆಯೊಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಬೆಂಗಳೂರು ಇವರು ಅಯೋಜಿಸಿದ ಅಖಿಲ ಭಾರತ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಅಪೂರ್ವ ವೈಷ್ಣವಿ (3ನೇ ಸ್ಥಾನ) ಹಾಗೂ ಸುಕೃತಿ ಪಡಿಯಾರ್ (7ನೇ ಸ್ಥಾನ) ವನ್ನು ಪಡೆದಿರುತ್ತಾರೆ. ಅವರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಬೋಧಕ-ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಯುತ್ ರೆಡ್ ಕ್ರಾಸ್ ಘಟಕದ ವತಿಯಿಂದ “ಸಂಕಲ್ಪದಿಂದ ವಿಜಯದೆಡೆಗೆ- ಭಾರತೀಯ ತಂತ್ರಜ್ಞಾನದ ಉತ್ಕರ್ಷ” ಎಂಬ ವಿಷಯದ ಕುರಿತಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ರಕ್ಷಣಾ ಸಚಿವಾಲಯದ ಡಿಆರ್ಡಿಓ ಸಂಸ್ಥೆಯ ಜಯಪ್ರಕಾಶ್ ರಾವ್ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಅವರು ಭಾರತದಲ್ಲಿ ರಕ್ಷಣಾ ವಲಯದ ವೇಗವಾದ ಅಭಿವೃದ್ಧಿ, ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ “ಆಪರೇಷನ್ ಸಿಂಧೂರ್” ಕುರಿತು ವಿವರಿಸಿದರು. ದೇಶ ಸೇವೆಗೆ ಯುವಕರು ರಕ್ಷಣಾ ಪಡೆಗಳಿಗೆ ಸೇರುವಂತೆ ಕರೆ ನೀಡಿದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಾರತದ ಯುವಕರನ್ನು ಹೇಗೆ ಪ್ರೋತ್ಸಾಹಿಸಿದರು ಎಂಬುದನ್ನು ಉದಾಹರಿಸಿ, ವಿದ್ಯಾರ್ಥಿಗಳು ಕನಸು ಕಾಣಬೇಕು ಮತ್ತು ಅದನ್ನು ಸಾಧಿಸಲು ಪರಿಶ್ರಮಿಸಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ಬಿಸಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸ್ವರ್ಣ ರಾಣಿ, ಉಪನ್ಯಾಸಕ ಸಂಯೋಜಕಿ ಶ್ರೀಮತಿ ಭಾರತಿ ಗಾಣಿಗ, ವಿದ್ಯಾರ್ಥಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಮಾಧ್ಯಮ ಅಕಾಡೆಮಿಯು ಮೈಸೂರು ವಿಭಾಗ ಮಟ್ಟದ ಪತ್ರಕರ್ತರಿಗೆ ಸಂವಿಧಾನ ಮತ್ತು ಪತ್ರಿಕೋದ್ಯಮ, ಫ್ಯಾಕ್ಟ್ ಚೆಕ್ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಬಳಕೆ ಕುರಿತಂತೆ ಫೆಬ್ರವರಿ 27ರಂದು, ಕೊಡಗಿನಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ತರಬೇತಿ ಸಹಕಾರಿಯಾಗಲಿದೆ. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಮೈಸೂರು ವಿಭಾಗದ (ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ) ಜಿಲ್ಲೆಯ ಪತ್ರಕರ್ತರು ಗೂಗಲ್ ಫಾರ್ಮ್ https://forms.gle/ZJ4X7NjBodXmzeUu5 ನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 22ರ ವರೆಗೆ ವಿಸ್ತರಿಸಲಾಗಿದೆ. ತರಬೇತಿಯ ಆಯ್ಕೆ ಕುರಿತಂತೆ ಅಕಾಡೆಮಿಯ ತೀರ್ಮಾನವೇ ಅಂತಿಮ ಎಂದು ಅಕಾಡೆಮಿಯ ಕಛೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿತು. ಕಾರ್ಯಕ್ರಮವನ್ನು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್, ಸಾಮಾಜಿಕ ಕಾರ್ಯಕರ್ತ ಐರೋಡಿ ವಿಠ್ಠಲ್ ಪೂಜಾರಿ, ಪಾಂಡೇಶ್ವರ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಲಿಲಾವತಿ ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರೋಗ್ಯ ಕೇಂದ್ರದ ರಜನಿ ಕಾರ್ಯಕ್ರಮ ನಿರೂಪಿಸಿ, ಫಾರ್ಮಸಿ ಅಧಿಕಾರಿ ಸೀಮಾ ಮ್ಯಾಥ್ಯೂ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೃಷಿಲೋಕ ಮುನಿಯಾಲಿನ ಗೋಧಾಮವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 21ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗುರುವಾರ ಭಕ್ತಿ ವೈಭವದ ಚಾಲನೆ ನೀಡಲಾಯಿತು. ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್ ಮತ್ತು ಕುಟುಂಬಸ್ಥರು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ಸಹಿತ ಋತ್ವಿಜರನ್ನು ಸ್ವಾಗತಿಸಿದರು. 6 ಕಾಯಿ ಗಣಯಾಗ, ಉಗ್ರಾಣ ಮುಹೂರ್ತ, ಅನ್ನಾರಾಧನ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತ್ರತ್ವದಲ್ಲಿ ವಾಸುದೇವ ಭಟ್ ಅವರ ಸಹಯೋಗದಲ್ಲಿ ನಡೆಯಿತು. ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ಸವಿತಾ ಆರ್. ಆಚಾರ್, ಅನುಷಾ ಆಚಾರ್, ಪ್ರಜ್ವಲ್, ಆಚಾರ್, ಪೂಜಾ ಆಚಾರ್, ತೇಜಸ್…
