Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಾಂಗ್ರೆಸ್ ಅವಧಿಯಲ್ಲಿ ಪೇಪರ್ ಲೀಕ್‌ಗೆ ನೀವೆಷ್ಟು ರಾಜೀನಾಮೆ ಕೊಡಿಸಿದ್ದೀರಿ ಗೋಪಾಲ ಪೂಜಾರಿಯವರೇ?: ರತನ್ ರಮೇಶ್ ಪೂಜಾರಿ
    Uncategorized

    ಕಾಂಗ್ರೆಸ್ ಅವಧಿಯಲ್ಲಿ ಪೇಪರ್ ಲೀಕ್‌ಗೆ ನೀವೆಷ್ಟು ರಾಜೀನಾಮೆ ಕೊಡಿಸಿದ್ದೀರಿ ಗೋಪಾಲ ಪೂಜಾರಿಯವರೇ?: ರತನ್ ರಮೇಶ್ ಪೂಜಾರಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇತ್ತೀಚೆಗೆ ನಡೆದ ನೀಟ್ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ಅತ್ಯಂತ ದುರದೃಷ್ಟಕರ ಮತ್ತು ಯಾರೂ ಸಹಿಸಲಾಗದ್ದು. ಲಕ್ಷಾಂತರ ಶ್ರಮಜೀವಿ ವಿದ್ಯಾರ್ಥಿಗಳು ಈ ಲೋಪಗಳಿಂದಾಗಿ ಸಂಕಟ ಅನುಭವಿಸಿದ ಬಗ್ಗೆ ನಮಗೆ ತೀವ್ರ ನೋವು ಹಾಗೂ ಸಂವೇದನೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಈಗಾಗಲೇ ಪಾರದರ್ಶಕತೆ ತರಲು ಕಠಿಣ ಕಾನೂನುಗಳು ಹಾಗೂ ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಹೀಗಿರುವಾಗ, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಮಾಜಿ ಶಾಸಕರಾದ ಗೋಪಾಲ್ ಪೂಜಾರಿ ಅವರ ಹೇಳಿಕೆಯು ಕೇವಲ ಅಗ್ಗದ ಪ್ರಚಾರ ಹಾಗೂ ರಾಜಕೀಯ ಅವಕಾಶವಾದಿತನವಾಗಿದೆ ಎಂದು ಕರ್ನಾಟಕ ಬಿಜೆಪಿಯ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಾಧ್ಯಮ ವಕ್ತಾರ ರತನ್ ರಮೇಶ್ ಪೂಜಾರಿ ಟೀಕಿಸಿದ್ದಾರೆ.

    Click Here

    Call us

    Click Here

    ಕೇಂದ್ರ ಸರಕಾರ ನಾವು ವಿದ್ಯಾರ್ಥಿಗಳ ಪರವಾಗಿ ದೃಢವಾಗಿ ನಿಲ್ಲುತ್ತೇವೆ ಮತ್ತು ಈ ಕೃತ್ಯಕ್ಕೆ ಕಾರಣರಾದವರು ಕಾನೂನಿನ ಸಂಪೂರ್ಣ ಶಿಕ್ಷೆಯನ್ನು ಎದುರಿಸಲೇಬೇಕು.ಸೋರಿಕೆಯಲ್ಲಿ ಭಾಗಿಯಾದ ತಪ್ಪಿತಸ್ಥರು ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಈ ಸಮಸ್ಯೆಯ ಗಂಭೀರತೆಯನ್ನು ಮನಗಂಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತ ಸರ್ಕಾರವು ಈಗಾಗಲೇ ಪಾರದರ್ಶಕತೆ ತರಲು ಕಠಿಣ ಕಾನೂನುಗಳು ಹಾಗೂ ಸಮಗ್ರ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿದೆ. ಹತ್ತು ವರ್ಷ ಸಜೆ, 10 ಕೋಟಿ ರೂಪಾಯಿಯ ದಂಡ ವಿಧಿಸಿ ಕಾನೂನು ತರಲಾಗಿದೆ. ಅಷ್ಟೇ ಅಲ್ಲದೆ ವಿಶ್ವ ಪ್ರಸಿದ್ಧ ತಂತ್ರಜ್ಞಾನ ಪರಿಣಿತರಾದ ನಂದನ್ ನೀಲಕಣಿ ಇವರ ನೇತೃತ್ವದಲ್ಲಿ ಹೈ ಪವರ್ಡ್ ಟಾಸ್ಕ್ ಫೋರ್ಸ್ ಕೂಡ ರಚಿಸಲಾಗಿದೆ.

    ಕೇಂದ್ರದತ್ತ ಬೆರಳು ತೋರಿಸುವ ಮೊದಲು ಗೋಪಾಲ್ ಪೂಜಾರಿ ಅವರು ಈ ಮೂಲಭೂತ ಪ್ರಶ್ನೆಗೆ ಉತ್ತರಿಸಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಲು ಸಾಲು ಪರೀಕ್ಷಾ ಅಕ್ರಮಗಳು ಮತ್ತು ಪತ್ರಿಕೆ ಸೋರಿಕೆಗಳು ನಡೆದು ಸಾವಿರಾರು ಯುವಕರ ಭವಿಷ್ಯ ಕತ್ತಲಾದಾಗ ಎಷ್ಟು ಮಂದಿ ಕಾಂಗ್ರೆಸ್ ಸಚಿವರು ಅಥವಾ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದರು? ಈ ಹಿಂದೆ ಕಿಮ್ಮನೆ ರತ್ನಾಕರ್ ಅವರು ಶಿಕ್ಷಣ ಮಂತ್ರಿ ಆಗಿದ್ದಾಗ ಕೇವಲ 1 ತಿಂಗಳ ಅವಧಿಯಲ್ಲಿ ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಇತ್ತೀಚೆಗಷ್ಟೇ ಮಧು ಬಂಗಾರಪ್ಪನವರು ಶಿಕ್ಷಣ ಮಂತ್ರಿಯಾಗಿದ್ದಾಗ ಎಸ್ ಎಸ್ ಎಲ್ ಸಿ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಮೊನ್ನೆಯಷ್ಟೇ ಕಾಂಗ್ರೆಸ್ ಸರ್ಕಾರದ ಕೆಳಗಡೆ ಕೆಪಿಎಸ್ಸಿ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ರಾಜ್ಯಾದ್ಯಂತ ಹೋರಾಟಗಳಾಗಿತ್ತು. ಈ ಎಲ್ಲಾ ಅಕ್ರಮಗಳ ಹೊಣೆ ಹೊತ್ತು ಕಾಂಗ್ರೆಸ್ ಪಕ್ಷದ ಯಾವ ಸಚಿವರಾಗಲಿ ರಾಜಿನಾಮೆ ನೀಡಿದ ಉದಾಹರಣೆ ಇದೆಯೇ?

    ಕರ್ನಾಟಕದಲ್ಲಿ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವ ವಿಷಯದಲ್ಲಿ ಕಾಂಗ್ರೆಸ್‌ನ ಇತಿಹಾಸವು ಸಾಂಸ್ಥಿಕ ವೈಫಲ್ಯ, ಬೇಜವಾಬ್ದಾರಿ ಮತ್ತು ಶೂನ್ಯ ಹೊಣೆಗಾರಿಕೆಯಿಂದ ಕೂಡಿದೆ. ತಮ್ಮ ಆಡಳಿತಾವಧಿಯಲ್ಲಿ ರಾಜ್ಯಮಟ್ಟದ ಪರೀಕ್ಷೆಗಳು ಪದೇ ಪದೇ ಹಾದಿತಪ್ಪಿದಾಗ ಒಬ್ಬೇ ಒಬ್ಬ ಕಾಂಗ್ರೆಸ್ ನಾಯಕನೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ.

    ತಮ್ಮದೇ ಪಕ್ಷದ ಕಪ್ಪು ಚರಿತ್ರೆಯನ್ನು ಮರೆತು, ವಿದ್ಯಾರ್ಥಿಗಳ ಭವಿಷ್ಯ ಮತ್ತು ಆತಂಕವನ್ನು ಇಟ್ಟುಕೊಂಡು ರಾಜಕೀಯ ಲಾಭ ಗಿಟ್ಟಿಸಲು ಯತ್ನಿಸುತ್ತಿರುವುದು ಕಾಂಗ್ರೆಸ್‌ನ ಕಪಟತನವನ್ನು ಎತ್ತಿ ತೋರಿಸುತ್ತದೆ. ಮೋದಿ ಸರ್ಕಾರವು ಬರಿ ಮಾತಿನಲ್ಲಿ ರಾಜಕೀಯ ಮಾಡದೆ, ಯುವಜನತೆಯ ಭವಿಷ್ಯಕ್ಕಾಗಿ ವ್ಯವಸ್ಥೆಯನ್ನು ಸರಿಪಡಿಸುವ ದೃಢ ನಿರ್ಧಾರಕ್ಕೆ ಬದ್ಧವಾಗಿದೆ ಎಂದು ಕರ್ನಾಟಕ ಬಿಜೆಪಿಯ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಾಧ್ಯಮ ವಕ್ತಾರ ರತನ್ ರಮೇಶ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ: ಸರಸ್ವತಿ ವಿದ್ಯಾಲಯದಲ್ಲಿ ಇ – ವೇಸ್ಟ್ ಮ್ಯಾನೇಜ್ಮೆಂಟ್‌ ಕಾರ್ಯಕ್ರಮ

    05/09/2026

    ಬೈಂದೂರು ರುದ್ರಭೂಮಿ ಅಭಿವೃದ್ದಿಗೆ ನೆರವು

    01/09/2026

    ರೋಟರಿ ಕುಂದಾಪುರ ಆತಿಥ್ಯದಲ್ಲಿ ಯಶಸ್ವಿಯಾದ ವಲಯ ಮಟ್ಟದ ರೈಲಾ ಕಾರ್ಯಕ್ರಮ

    24/08/2026
    Leave A Reply Cancel Reply

    17 − ten =

    Call us

    Click Here

    Call us

    Call us

    Call us
    Highest Viewed Recently
    • ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘ ವಾರ್ಷಿಕ ಮಹಾಸಭೆ – ಶೇ.17 ಡಿವಿಡೆಂಡ್ ಘೋಷಣೆ
    • ಆಧುನಿಕ ಕಾಲದ ಆಹಾರ ಕ್ರಮಗಳಿಂದ ಅನಾರೋಗ್ಯ: ಪ್ರೇಮಮೂರ್ತಿ
    • ಶಂಕರನಾರಾಯಣ: ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ
    • ಆಳ್ವಾಸ್ ಕೇರಳೀಯಂ: ಕೇರಳದ ಸಾಂಸ್ಕೃತಿಕ ವೈವಿಧ್ಯ ಅನಾವರಣ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ಭಾಷಾ ಸಂಘ ಲಿಂಗ ಕಲ್ಪವೃಕ್ಷ – ವಾರ್ಷಿಕ ಚಟುವಟಿಕೆ ಉದ್ಘಾಟನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.