ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೈತಕಾಯಕದಲ್ಲಿ ಹಿರಿಯ ತಲೆಮಾರಿನ ಕೊಡುಗೆ ಅನನ್ಯ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಣೂರು ಭಾಸ್ಕರ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ಸ್ನೇಹಕೂಟ ಮಣೂರು ಇವರುಗಳ ಸಹಯೋಗದೊಂದಿಗೆ 52ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು. ಕೃಷಿ ಕ್ಷೇತ್ರದಲ್ಲಿ ದಾರೋಜ್ಜಿಮನೆ ಕುಟುಂಬಿಕರ ಪಾತ್ರ ಅತ್ಯಂತ ಗಣನೀಯ ಪಾತ್ರ ವಹಿಸಿದೆ. ಅದರಲ್ಲೂ ಆನಂದ ಕಾಂಚನ್ ಎಂಬ ಹಿರಿಯ ಕೃಷಿಕರನ್ನು ಪಂಚವರ್ಣದವರು ಗುರುತಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದ್ದಾರೆ. ಒಂದು ಸರಕಾರ ಮಾಡಬೇಕಾದ ಕಾರ್ಯವನ್ನು ಪಂಚವರ್ಣ ಸಂಘಟನೆ ರೈತಾಪಿ ವರ್ಗಕ್ಕೆ ಮನೆಯಂಗಳಕ್ಕೆ ತೆರಳು ಪ್ರೋತ್ಸಾಹಿಸುವ ಕಾರ್ಯ ಅದರಲ್ಲೂ ನಿರಂತರವಾಗಿ ಸರಣಿ ಕಾರ್ಯಕ್ರಮದ ರೂಪದಲ್ಲಿ ನಿರ್ವಹಿಸುವುದು ಶ್ರೇಷ್ಠವಾದ ಕಾರ್ಯವಾಗಿದೆ ಎಂದರು. ಗೋ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಹಾಲಾಡಿ ಗ್ರಾಮದ ಹಿಂದೂ ರುದ್ರಭೂಮಿ ಆವರಣದಲ್ಲಿ ಶ್ರಮದಾನ ಆಯೋಜಿಸಲಾಗಿತ್ತು. ಜೆಸಿಐ ಸದಸ್ಯರು ಸ್ಮಶಾನದ ಆವರಣದಲ್ಲಿ ಬೆಳೆದಿದ್ದ ತ್ಯಾಜ್ಯ ಗಿಡಗಳನ್ನು ಕಡಿದು, ಕಟ್ಟಿಗೆಗಳನ್ನು ಕೂಡಿ ಇಟ್ಟರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಶುಚಿಗೊಳಿದರು. ಜೆಸಿಐ ಹಾಲಾಡಿ ವಾರಾಹಿ ಘಟಕದ ಅಧ್ಯಕ್ಷರಾದ ಪ್ರದೀಪ್ ಹಾಲಾಡಿ ಮಾತನಾಡಿ, ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಪ್ರತಿ ತಿಂಗಳು ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಸುಂದರ ಪರಿಸರ ನಿರ್ಮಾಣ ಮಾಡಲು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಜೆಸಿಐ ಉಪಾಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ ಹಾಲಾಡಿ ಮಾತನಾಡಿ, ಜೆಸಿಐ ಹಾಲಾಡಿ ವಾರಾಹಿ ಸ್ವಚ್ಛತಾ ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜೆಸಿಐ ಘಟಕದ ಕಾರ್ಯದರ್ಶಿ ಅಶೋಕ್ ಆಚಾರಿ ಹಾಲಾಡಿ, ಕೋಶಾಧಿಕಾರಿಯಾದ ಮಹೇಶ್ ಹಾಲಾಡಿ, ಪದಾಧಿಕಾರಿಗಳಾದ ಕೃಷ್ಣ ಭಟ್, ನಾಗೇಶ್ ಕಿಣಿ, ರಾಘವೇಂದ್ರ ಕುದ್ರುಬೆಟ್ಟು, ಮಂಜುಳ ಶೆಟ್ಟಿ, ಆಶಾ ಕುಲಾಲ್, ಜೆಸಿಐ ಸದಸ್ಯರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರೈತರು ಕೃಷಿ ಚಟುವಟಿಕೆಗಳಿಗೆ ತಮ್ಮ ಜಮೀನಿನ ಮಣ್ಣನ್ನು ಬಳಸಲು ಸಾಗಾಣಿಕೆ ಮಾಡುತ್ತಿರುವಾಗ ತೊಂದರೆ ಆಗುತ್ತಿದೆ ಎಂಬ ದೂರುಗಳು ಬರುತ್ತಿವೆ, ಈ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಮಣ್ಣು ಸಾಗಾಣಿಕೆ ಮಾಡುತ್ತಿರುವಾಗ ಅಡ್ಡಗಟ್ಟುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ರೈತರುಗಳು ತಮ್ಮ ಕೃಷಿ ಚಟುವಟಿಕೆಗಳಿಗೆ ತಮ್ಮ ಖಾಸಗಿ ಜಮೀನುಗಳಿಂದ ಮಣ್ಣುಗಳನ್ನು ಸಾಗಾಟ ಮಾಡಿ ಇನ್ನೊಂದು ಜಮೀನಿಗೆ ಬಳಸುತ್ತಿದ್ದಾರೆ. ಆದರೆ ಇನ್ಯಾವುದೋ ಅನ್ಯ ಉದ್ದೇಶಕ್ಕೆ ಬಳಸುತ್ತಿಲ್ಲ. ನಿಯಮಾನುಸಾರ ಅವರುಗಳಿಗೆ ಸಮಸ್ಯೆ ಉಂಟಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಶಾಸಕ ಸುನಿಲ್ ಕುಮಾರ್ ಮಾತನಾಡಿ, ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ದೂರುಗಳನ್ನು ಕೆಲವರು ತಮ್ಮ ಲಾಭಕ್ಕಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ನಾಗಮಂಡಲೋತ್ಸವ ಇದೇ ಮೊದಲಲ್ಲ ಬದಲಾಗಿ ಕೆಲವರ್ಷಗಳ ಹಿಂದೆ ಅಮೃತೇಶ್ವರೀ ದೇಗುಲ ನಾಗಮಂಡಲೋತ್ಸವ ಯಶಸ್ವಿಯಾಗಿ ಪೂರೈಸಿದೆ ಆದರೆ ಪ್ರಸ್ತುತ ನಾಗಮಂಡಲೋತ್ಸವ ಒಂದು ರೀತಿಯಲ್ಲಿ ಭಕ್ತರ ನಿರ್ವಣೆಯೇ ದೊಡ್ಡ ಸವಾಲಿನ ಕಾರ್ಯ. ಈ ದಿಸೆಯಲ್ಲಿ ಸ್ವಯಂಸೇವಕರ ಪಾತ್ರ ಮಹತ್ವವಾದದ್ದು ಎಂದು ಅಮೃತೇಶ್ವರೀ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ನುಡಿದರು. ಇದೇ ಬರುವ ಮಾಚ್೯ 1ರಂದು ಕೋಟ ಅಮೃತೇಶ್ವರೀ ದೇಗುಲದ ವತಿಯಿಂದ ನಡೆಯಲಿರುವ ಏಕಃ ಪವಿತ್ರ ನಾಗಮಂಡಲೋತ್ಸವ ಇದರ ಪೂರ್ವ ಸಿದ್ಧತಾ ಸಭೆಯಲ್ಲಿ ಮಾಹಿತಿ ನೀಡಿ ಸುಮಾರು 30ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸೇರುವ ನಿರೀಕ್ಷೆಯಿದ್ದು ಕೋಟದ ಗಾಂಧಿ ಮೈದಾನದಲ್ಲಿ ಊಟೋಪಚಾರ ಹಾಗೂ ನಾಗಮಂಡಲೋತ್ಸವ ನಡೆಯುವ ಸ್ಥಳವಾಗಿದ್ದು ಕೋಟದ ಶಾಂಭವೀ ಶಾಲಾ ಮೈದಾನ, ಕೋಟ ಪೋಲಿಸ್ ಸ್ಟೇಷನ್ ಮೈದಾನ, ಕೋಟದ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಸ್ಥಳವನ್ನು ಪಾರ್ಕಿಂಗ್ ಸ್ಥಳವಾಗಿ ಗುರುತಿಸಲಾಗಿದೆ. ಜನದಟ್ಟಣೆಯನ್ನು ಸಮರ್ಥವಾಗಿ ಭೋಜನಶಾಲೆಗೆ ಕೊಂಡ್ಯೋಯುವ ಮಾರ್ಗೋಪಾಯಗಳ ಬಗ್ಗೆ ಸಭೆಗೆ ತಿಳಿಸಿದರಲ್ಲದೆ ಅಮೃತೇಶ್ವರೀ ದೇಗುಲದ ಸಂಬಂಧಿಸಿದ ಹದಿನಾಲ್ಕು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾಧಕರ ಸಾಧನೆ ಕಿರಿಯರಿಗೆ ಪ್ರೇರಣೆಯಾಗಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ವ್ಯಕ್ತಿಗಳ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು. ಅವರು ಶನಿವಾರ ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್ ರಿ. ಬೆಂಗಳೂರು ಇವರ ಸಹಯೋಗದಲ್ಲಿ ಕವಿ ಗೋಪಾಲಕೃಷ್ಣ ಅಡಿಗರ 108ನೇ ಜನ್ಮ ದಿನೋತ್ಸವದ ಪ್ರಯುಕ್ತ ಅಡಿಗ ಸಂಸ್ಮರಣೆ ಮತ್ತು ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಮಾತನಾಡಿದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಗಣನಾಥ ಎಕ್ಕಾರು ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶತಮಾನ ಪೂರೈಸಿದ ಅಡಿಗರು ಕಲಿತ ಮಾಧ್ಯಮಿಕ ಶಾಲೆ ವಿಷಯದ ಕುರಿತು ಶಾಲಾ ಮುಖ್ಯೋಪಾಧ್ಯಾಯ ಗಣಪತಿ ಹೋಬಳಿದಾರ್ ಮಾತನಾಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗವು ಫೋರೆನ್ಸಿಕ್ ನರ್ಸಿಂಗ್ ಕುರಿತು ಪ್ರಾದೇಶಿಕ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು . ಸಮ್ಮೇಳನವು ಔಪಚಾರಿಕ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಹೆಯ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ನ ಮನೋವೈದ್ಯಶಾಸ್ತ್ರ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರೆಂಜುಲಾಲ್ ಯೆಶೋಧರನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ, ವೈದ್ಯಕೀಯ-ಕಾನೂನು ಪ್ರಕರಣಗಳಲ್ಲಿ ದಾದಿಯರ ನಿರ್ಣಾಯಕ ಪಾತ್ರ, ಸಾಕ್ಷ್ಯ ಸಂರಕ್ಷಣೆ, ಸಂತ್ರಸ್ತರ ಆರೈಕೆ ಮತ್ತು ಕ್ಲಿನಿಕಲ್ ಅಭ್ಯಾಸದಲ್ಲಿ ಕಾನೂನು ಜವಾಬ್ದಾರಿಗಳನ್ನು ಒತ್ತಿ ಹೇಳಿದರು. ಅವರ ಭಾಷಣವು ವಿಧಿವಿಜ್ಞಾನ ನರ್ಸಿಂಗ್ನ ವಿಸ್ತರಿಸುತ್ತಿರುವ ವ್ಯಾಪ್ತಿ ಮತ್ತು ಅದರ ಪ್ರಾಯೋಗಿಕ ಪರಿಣಾಮಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿತು. ಕಾರ್ಯಕ್ರಮದಲ್ಲಿ ಐಎಂಜೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ.ಎಸ್.ಎನ್.ಭಟ್ ಮಾತನಾಡಿ, ಈ ತರಹದ ಸಮ್ಮೇಳನಗಳು ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಜ್ಞಾನೋನ್ನತಿಗೆ ಸಹಾಯಮಾಡುತ್ತದೆ ಎಂದು ತಿಳಿಸಿದರು. ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಒಂದೇ ಸೂರಿನಡಿ ದೊರಕುವಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಮೂಲಕ ಸರ್ಕಾರದ ಹಲವು ಸೇವೆಗಳು ನಗರ ಭಾಗದ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೂತನ ಯೋಜನೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಜಿಲ್ಲೆಯ ಕಾರ್ಕಳ ಹಾಗೂ ಕಾಪು ಪುರಸಭೆ ಮತ್ತು ಉಡುಪಿ ನಗರಸಭೆಯಲ್ಲಿ ಖಾಲಿ ಇರುವ ಕರ್ನಾಟಕ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತ ಅಭ್ಯರ್ಥಿಗಳಿಂದ ವೆಬ್ಸೈಟ್ https://www.karnatakaone.gov.in/Public/Franchisee Terms ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 2 ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇತ್ತೀಚೆಗಷ್ಟೇ ಕೊರಗ ಸಮುದಾಯದ ಮನೆಯಲ್ಲಿ ವಾಸ್ತವ್ಯ ಹೂಡಿ, ಕೊರಗ ಬಂಧುಗಳೊಂದಿಗೆ ಊಟೋಪಚಾರ, ಸಂವಾದ ನಡೆಸಿ ಸುದ್ದಿಯಾಗಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಇದೀಗ ಎಸ್ಸಿ ಕಾಲನಿಯಲ್ಲಿ ಸಹಭೋಜನ ನಡೆಸಿದ್ದಾರೆ. ಹಟ್ಟಿಯಂಗಡಿ ಗ್ರಾಮದ ಕನ್ಯಾನ ಗುಡ್ಡೆ ಅಂಗಡಿ ಪ್ರದೇಶದ ಎಸ್ಸಿ ಕಾಲೋನಿ ಶಶಿಕುಮಾರ್ ಅವರ ಮನೆಗೆ ಭೇಟಿ ನೀಡಿ, ದಂಪತಿಗಳ ಪಾದಪೂಜೆ ನೆರವೇರಿಸಿ ಸಹಭೋಜನದಲ್ಲಿ ಭಾಗಿಯಾದರು. ಗಂಟಿಹೊಳೆ ಅವರ ಈ ನಡೆಯ ಬಗ್ಗೆ, ಪರಿಶಿಷ್ಟ ಕಾಲನಿಯ ಬಂಧುಗಳು ಸಂತಸ ವ್ಯಕ್ತಪಡಿಸಿದ್ದು “ಶಾಸಕರ ಈ ಕಾರ್ಯ ಸಮಾಜದಲ್ಲಿ ಜಾತಿ ತಾರತಮ್ಯ, ಅಶ್ಪೃಶ್ಯತೆಯ ಮನೋಭಾವನೆಯನ್ನು ತೊಡೆದು ಹಾಕಲಿದೆ” ಎಂದು ಹೇಳಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ಮೀನುಗಾರ ಮುಖಂಡ, ಸಮಾಜ ಸೇವಕ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಮೀನುಗಾರ ಸಮಾಜದ ಮುಖಂಡ ಕೆ. ಮುತ್ತಯ್ಯ ಖಾರ್ವಿ (67) ಉಪ್ಪುಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಸೋಮವಾರ ನಿಧನರಾಗಿದ್ದಾರೆ. ಕರ್ನಾಟಕ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಕಾರ್ಯದರ್ಶಿಯಾಗಿ, ಭಾರತೀಯ ಜನತಾ ಪಾರ್ಟಿ ಮುಖಂಡರಾಗಿ, ಉಪ್ಪುಂದ ಪಂಚಾಯತ್ ಉಪಾಧ್ಯಕ್ಷರಾಗಿ, ನಾಡ ದೋಣಿ ಮೀನುಗಾರರ ಸಂಘ ಬೈಂದೂರು ವಲಯದ ಅಧ್ಯಕ್ಷರಾಗಿ, ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಓಲಗ ಮಂಟಪದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಮಾಜದ ಹಿತವನ್ನೇ ಧೈಯವನ್ನಾಗಿಸಿಕೊಂಡು ನಿಸ್ವಾರ್ಥ ಸಮಾಜಸೇವೆ ಹಾಗೂ ಶುದ್ಧರಾಜಕೀಯದ ಪ್ರತೀಕರಾಗಿದ್ದವರು. ಅದೆಷ್ಟು ಮೀನುಗಾರರು ಅನಾರೋಗ್ಯ ಸಮಯದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆಯನ್ನು ದೊರಕಿಸುವಲ್ಲಿ ಇವರ ಸೇವೆ ಅಮೂಲ್ಯವಾದದ್ದು. ಎಲ್ಲರನ್ನು ಒಗ್ಗೂಡಿ-ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ “ಅಜಾತ ಶತ್ರು” ಎಂಬ ಬಿರುದಿಗೆ ತಕ್ಕವರು. ಸಮಾಜದ ಎಲ್ಲರ ಜತೆ ಬೆರೆತು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಯಕ್ಷಗಾನ ಕಲೆ ಮುಂದಿನ ತಲೆಮಾರಿಗೆ ಕೊಂಡ್ಯೊಯಲು ಸಂಘ ಸಂಸ್ಥೆಗಳ ಪಾತ್ರ ಗಣನೀಯವಾದದ್ದು ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಕೋಡಿ ಕನ್ಯಾಣ ಶ್ರೀರಾಮ ದೇಗುಲದ ವಠಾರದಲಿ ಶ್ರೀ ರಾಮ ಪ್ರಸಾದಿತ ಯಕ್ಷಗಾನ ಕಲಾ ಸಂಘ ಕೋಡಿ ಕನ್ಯಾಣ ಇವರ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇಲ್ಲೆ ಇವರ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಯಕ್ಷ ವೇದಿಕೆ ಕೋಡಿ ಕನ್ಯಾಣ ಇವರ ಕೂಡುವಿಕೆಯಲ್ಲಿ ಪ್ರತೀಶ್ ಕುಮಾರ್ ಬ್ರಹ್ಮಾವರ ಇವರ ನಿರ್ದೇಶನದಲ್ಲಿ ಯಕ್ಷಗಾನ ಕುಶ-ಲವ ಕುಟುಂಬ, ಜಾನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನ ಕಲೆ ಅತ್ಯಂತ ಶ್ರೀಮಂತ ಕಲೆಯಾಗಿದ್ದು ಕರಾವಳಿ ಈ ಮಣ್ಣಿನ ಸೊಗಡಿಗೆ ಭಾಷಾ ಜ್ಞಾನದ ಜತೆಗೆ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ಈ ದಿಸೆಯಲ್ಲಿ ಶ್ರೀರಾಮಪ್ರಸಾದಿತ ಯಕ್ಷಗಾಮ ಕಲಾ ಸಂಘ ಯುವ ಕಲಾವಿದರಿಗೆ ಸ್ಪೂರ್ತಿಯ ನೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ…
