ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರಸ್ಥಳ ಜಗದ್ಗುರು ನಾಗಲಿಂಗ ಸ್ವಾಮಿ ಹಾಗೂ ವಿಶ್ವಕರ್ಮೇಶ್ವರ ಸಾನಿಧ್ಯವಿರುವ ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಇಲ್ಲಿನ ಕಾಳಿಕಾಂಬಾ ಮಹಿಳಾ ಸಮಿತಿಯ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚಿಗೆ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಉಪ್ರಳ್ಳಿ ಕಾಳಿಕಾಂಬಾ ಮಹಿಳಾ ಸಮಿತಿಯ ನೂತನ ಅಧ್ಯಕ್ಷೆಯಾಗಿ ಪೂರ್ಣಿಮಾ ಗಣೇಶ್ ಆಚಾರ್ಯ ನಾಯ್ಕನಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಲತಾ ಸುರೇಂದ್ರ ಆಚಾರ್ಯ ನೀರ್ಕೆರೆ ಆಯ್ಕೆಗೊಂಡಿದ್ದಾರೆ.
ಸಮಿತಿಯ ಗೌರವಾಧ್ಯಕ್ಷೆ ಜಲಯ ಚಂದ್ರಯ್ಯ ಆಚಾರ್ಯ, ಉಪಾಧ್ಯಕ್ಷರಾಗಿ ಸುಮತಿ ಸದಾನಂದ ಆಚಾರ್ಯ, ಶ್ರೀಧರ ಆಚಾರ್ಯ, ರಾಮಚಂದ್ರ ಆಚಾರ್ಯ, ಸವಿತಾ ನಾಗೇಂದ್ರ ಆಚಾರ್ಯ, ಗಾಯತ್ರಿ ದಿನೇಶ ಆಚಾರ್ಯ, ಶಾಲಿನಿ ಮಹಾಬಲೇಶ್ವರ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ವಿಜಯ ಗಣೇಶ್ ಪುರೋಹಿತರು, ಜ್ಯೋತಿ ದಿನೇಶ್ ಆಚಾರ್ಯ, ಶರಾವತಿ ಯೋಗೀಶ್ ಆಚಾರ್ಯ, ಸುಜಾತ ಉದಯ ಆಚಾರ್ಯ, ಅನುಷಾ ದಿವಾಕರ ಆಚಾರ್ಯ, ಕ್ರೀಡಾ ಕಾರ್ಯದರ್ಶಿಗಳಾಗಿ ಮುಕ್ತ ನಾಗೇಶ್ ಆಚಾರ್ಯ, ಅಕ್ಷತಾ ಪ್ರಶಾಂತ್ ಆಚಾರ್ಯ, ಜಯಶ್ರೀ ಸದಾನಂದ ಆಚಾರ್ಯ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರತ್ನಾವತಿ ಲಕ್ಷ್ಮಣ ಆಚಾರ್ಯ, ಜಯಲಕ್ಷ್ಮಿ ಸುಭಾಷ್ ಆಚಾರ್ಯ, ಜ್ಯೋತಿ ಕೇಶವ ಆಚಾರ್ಯ, ಪುಷ್ಪ ಹರೀಶ್ ಪುರೋಹಿತರು, ಗೌರವ ಸಲಹೆಗಾರರಾಗಿ ಶೈಲಾ ರಾಮಕೃಷ್ಣ ಆಚಾರ್ಯ, ಸುಶೀಲ ಚಂದ್ರಯ್ಯ ಆಚಾರ್ಯ, ಪ್ರತಿಭಾ ವಿಜಯೇಂದ್ರ ಆಚಾರ್ಯ ಆಯ್ಕೆಗೊಂಡಿದ್ದಾರೆ.











