ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಪ್ರಯುಕ್ತ ಸ್ಥಳೀಯ ಐರ್ವರು ಇಂಜಿನಿಯರ್ಸ್‌ಗಳನ್ನು ಕೋಟ ಎಂ. ಆರ್. ಕನ್ಸ್ಟ್ರಕ್ಷನ್ಸ್ ಅಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಎಂ. ಆರ್. ಕನ್ಸ್ಟ್ರಕ್ಷನ್ಸ್ನ ಮಿಥಿಲೇಶ್ ಮಣೂರು, ಉಡುಪಿ ಜಿಲ್ಲಾಸ್ಪತ್ರೆ ಇಂಜಿನಿಯರ್ ಪ್ರಕಾಶ್ ಪೂಜಾರಿ ಬನ್ನಾಡಿ, ಪಾಂಚಜನ್ಯ ಸಮೂಹ ಸಂಸ್ಥೆಯ ನಿತೇಶ್ ಶೆಟ್ಟಿ, ಎನ್. ಡಿ. ಕ್ರಾಫ್ಟ್ನ ನಿಕೇಶ್ ಶೆಟ್ಟಿ, ನ್ಯೂಸ್ ನೆಕ್ಸ್ಟ್ ಪ್ರಣೂತ್ ಆರ್. ಜಿ. ಅವರನ್ನು ಗೌರವಿಸಲಾಯಿತು.
ಈ ಸಂದರ್ಭ ರೋಟರಿ ವಲಯ 2ರ ಸಹಾಯಕ ಗವರ್ನರ್ ಸುಧಾಕರ್ ಶೆಟ್ಟಿ, ಮಾಜಿ ಸಹಾಯಕ ಗವರ್ನರ್ ಚಂದ್ರಶೇಖರ್ ಮೆಂಡನ್, ಜೋನಲ್ ಲೆಫ್ಟಿನೆಂಟ್ ದಯಾನಂದ ಆಚಾರ್, ಮಾಜಿ ಅಧ್ಯಕ್ಷರಾದ ಸುರೇಶ್ ಆಚಾರ್, ಶಾನಾಡಿ ಉದಯ ಕುಮಾರ್ ಹೆಗ್ಡೆ, ಸದಸ್ಯರಾದ ರವಿನಾಥ್ ಪೂಜಾರಿ, ಅರುಣ್ ಬಿ.ಕೆ.ಎಸ್ ಗುಂಡ್ಮಿ, ಸಂತೋಷ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.











