ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪತಿ ಮತ್ತು ಪುತ್ರನ ಅಗಲಿಕೆಯ ನೋವಿನಿಂದ ಮನನೊಂದ ಮಹಿಳೆಯೊಬ್ಬರು ವಿಷಪ್ರಾಶನ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತೆಕ್ಕಟ್ಟೆಯ ಗ್ರಾಮ ಪಂಚಾಯತ್ ಸಮೀಪದಲ್ಲಿ ಸಂಭವಿಸಿದೆ. ತಾರಾ ದೇವಾಡಿಗ (55) ಮೃತಪಟ್ಟವರು. ತೆಕ್ಕಟ್ಟೆಯ ಮಲ್ಯಾಡಿ ರಸ್ತೆಯಲ್ಲಿನ ದೂರವಾಣಿ ಕೇಂದ್ರ ಕಚೇರಿಯ ಸಮೀಪದಲ್ಲಿನ ಬಾಡಿಗೆ ಮನೆಯಲ್ಲಿ ಪತಿ ಹಾಗೂ ಪುತ್ರನೊಂದಿಗೆ ತಾರಾ ವಾಸವಾಗಿದ್ದರು. ಮೇ.15ರಂದು ಮನೆಗೆ ಆಧಾರವಾಗಿದ್ದ ಪತಿ ಮಾಧವ ದೇವಾಡಿಗ (60) ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ರಕ್ಷಣೆಗೆ ಧಾವಿಸಿದ ಮಗ ಪ್ರಸಾದ್ ದೇವಾಡಿಗ (23) ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಪತಿ ಹಾಗೂ ಮಗನನ್ನು ರಕ್ಷಿಸಲು ಬಾವಿಗೆ ಹಾರಿದ ತಾರಾ ದೇವಾಡಿಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಪತಿ ಹಾಗೂ ಪುತ್ರನ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಅವರು ಸುಮಾರು ಐದು ತಿಂಗಳ ಬಳಿಕ ತೆಕ್ಕೆಟ್ಟೆ ಗ್ರಾಮ ಪಂಚಾಯತ್ ಕಚೇರಿಯ ಸಮೀಪದಲ್ಲಿ ವಿಷ ಪ್ರಾಶನ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಜುನಾಥ ಎಜುಕೇಷನ್ ಟ್ರಸ್ಟ್ ರಿ., ಹೃದಯವಾಹಿನಿ ಕರ್ನಾಟಕ, ಮಂಗಳೂರು ಹಾಗೂ ಎಸ್.ಕೆ. ಮುನ್ಸಿಪಾಲ್ ಎಂಪ್ಲಾಯಿಸ್ ಯೂನಿಯನ್ ರಿ. ಮಂಗಳೂರು ಸಹಯೋಗದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ 2025 ಅಕ್ಟೋಬರ್ 09 ಗುರುವಾರದಂದು ನಡೆಯುವ ದ್ವಿತೀಯ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನದಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಿ., ಕನ್ನಡ ಗ್ರಾಮ ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಗಡಿನಾಡು ಕಾಸರಗೋಡಿನ ಸಾಹಿತ್ಯ, ಸಾಂಸ್ಕೃತಿಕ ಕನ್ನಡ ಸಂಘಟಕ, ಕನ್ನಡ ಚಿಂತಕ, ಶಿವರಾಮ ಕಾಸರಗೋಡು ಅವರಿಗೆ ಪ್ರತಿಷ್ಠಿತ ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನದ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ನಲ್ಲಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳ ಪುಟ್ಟ ಹುಲಿ ಕುಣಿತ ಹಾಗೂ ಮುದ್ದು ಶಾರದೆ ಸ್ಪರ್ಧೆಗಳು ಮಕ್ಕಳ ಕಲೆ, ಶಿಸ್ತು ಮತ್ತು ಭಾವನಾತ್ಮಕತೆಯ ಅದ್ಭುತ ಪ್ರದರ್ಶನವಾಗಿದ್ದವು. ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ನಿರ್ದೇಶಕರಾದ ಶಮಿತಾ ರಾವ್ ಹಾಗೂ ರೆನಿಟಾ ಲೋಬೋ ಅವರು ತೀರ್ಪುಗಾರರ ಜೊತೆಯಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ನೃತ್ಯ ಗುರುಗಳಾದ ಜಗದೀಶ್ ಬನ್ನಂಜೆ, ಕಲಾವಿದರು ಮತ್ತು ಚಿತ್ರಕಲಾ ಶಿಕ್ಷಕರಾದ ರಾಘವೇಂದ್ರ ಚಾತ್ರಮಕ್ಕಿ ಹಾಗೂ ಗಣಿತ ಉಪನ್ಯಾಸಕಿ ಮಾತ್ರವಲ್ಲದೆ ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆ ಸಿಂಧೂರ ರಾವ್ ಉಪಸ್ಥಿತರಿದ್ದರು. ಪ್ರಧಾನ ತೀರ್ಪುಗಾರರಾದ ರಾಘವೇಂದ್ರ ಚಾತ್ರಮಕ್ಕಿ ಅವರು ಮಾತನಾಡಿ, “ಸಂಸ್ಕೃತಿಯ ಬುನಾದಿ ಬೆಳೆಸುವ ಕೆಲಸವನ್ನು ಮದರ್ ತೆರೆಸಾ ಶಿಕ್ಷಣ ಸಂಸ್ಥೆ ಅತ್ಯಂತ ಸುಂದರವಾಗಿ ನಿರ್ವಹಿಸುತ್ತಿದೆ. ಇಂತಹ ವೇದಿಕೆಗಳು ಮಕ್ಕಳಲ್ಲಿ ಸಂಸ್ಕಾರ, ಶಿಸ್ತು ಮತ್ತು ಭಾವನಾತ್ಮಕ ಅರಿವನ್ನು ಬೆಳೆಸುತ್ತವೆ,” ಎಂದು ಪ್ರಶಂಸಿಸಿ ಮಕ್ಕಳಿಗೆ ಶುಭ ಹಾರೈಸಿದರು. ಮುದ್ದು ಶಾರದೆಯರಾಗಿ ಸಜ್ಜಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ತನ್ನ ವೈಯಕ್ತಿಕ ಜೀವನಕ್ಕಾಗಿ ಏನನ್ನು ಬಯಸದೆ ಸಮಾಜಕ್ಕಾಗಿಯೇ ಜೀವನವನ್ನು ಸಮರ್ಪಿಸಿಕೊಂಡ ಜೀವನದ ಯಶೋಗಾಧೆ ಅತ್ಯಮೂಲ್ಯವಾದದ್ದು ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಸೋಮವಾರ ಕೋಟದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಾಂಸ್ಕೃತಿಕ ಚಿಂತಕ, ಶಿಕ್ಷಕ ಸಂತೋಷ್ ಕುಮಾರ್ ಕೋಟ ಸಹಾಯರ್ಥವಾಗಿ ಅವರ ಕುಟುಂಬಕ್ಕೆ ನೆರವಾಗುವ ಯಕ್ಷಗಾನ ಕಾರ್ಯಕ್ರಮದಲ್ಲಿ ನಿಧಿ ಹಸ್ತಾಂತರಿಸಿ ಮಾತನಾಡಿದರು. ಜೀವನದಲ್ಲಿ ಪ್ರತಿಕ್ಷಣ ಪ್ರತಿಜೀವ ಕೂಡಾ ಮಹತ್ವವಾದದ್ದು. ಈ ಹಿನ್ನಲ್ಲೆಯಲ್ಲಿ ಪ್ರತಿಯೊಬ್ಬರು ಸಂಚಾರ ವ್ಯವಸ್ಥೆಯಲ್ಲಿ ರಕ್ಷಣೆ ಬೇಕಾಗುವ ಪರಿಕರವನ್ನು ಕಟ್ಟುನಿಟ್ಟಾಗಿ ಧರಿಸಿಕೊಳ್ಳಿ, ನೀವು ನಿಮ್ಮ ಜೀವದ ಬಗ್ಗೆ ಚಿಂತಿಸದಿದ್ದಾಗ ಮನೆಯವರ ಪಾಡು ಶೋಚನೀಯ ವ್ಯವಸ್ಥೆಗೆ ತಲುಪುತ್ತದೆ. ಈ ದಿಸೆಯಲ್ಲಿ ಅವರ ಕುಟುಂಬಕ್ಕೆ ನೆರವಾಗುವ ಇಂತಹ ಕಾರ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಮಾತನಾಡಿ, ಸಂತೋಷ್ ಕುಮಾರ್ ವ್ಯಕ್ತಿತ್ವ ಹಾಗೂ ಅವರಿಗೆ ಸಮಾಜದ ಬಗ್ಗೆ ಇದ್ದ ಕಾಳಜಿ, ಶಿಕ್ಷಣದ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ನಾಗೂರು ರೈಲ್ವೆ ಬ್ರಿಡ್ಜ್ ಕ್ರಾಸ್ ಮಾಡುತ್ತಿದ್ದ ವ್ಯಕ್ತಿ ರೈಲು ಬಡಿದು ಮೃತಪಟ್ಟಿದ್ದಾರೆ. ಹೇರೂರು ನಿವಾಸಿ ದಿವಾಕರ ಆಚಾರ್ಯ (56) ಮೃತಪಟ್ಟವರು. ಮರದ ಕೆಲಸ ಮಾಡಿಕೊಂಡಿದ್ದ ಅವರು ಭಾನುವಾರ ಸಂಜೆ ರೈಲ್ವೆ ಮೇಲ್ ಸೇತುವೆ ಕ್ರಾಸ್ ಮಾಡುತ್ತಿರುವ ವೇಳೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದಲ್ಲಿ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರದ ಶಿರಿಯಾರ ಗ್ರಾಮದ ಶಿರಿಯಾರ ಅಂಗನವಾಡಿ ಬಳಿಯ ಗುಡ್ಡಟ್ಟು ಗಣಪತಿ ದೇವಸ್ಥಾನ ರಸ್ತೆಯ ಕಮಲಮ್ಮ ಮನೆಯಲ್ಲಿ ವಾಸವಾಗಿರುವ ಸುಬ್ರಹ್ಮಣ್ಯ ಭೋವಿ ಎಂಬವರ ಪುತ್ರ ಆನಂದ್ (26) ಎಂಬಾತನನ್ನು ಬಂಧಿಸಲಾಗಿದೆ. ಕುಂದಾಪುರದ ಯಡಾಡಿ ಮತ್ಯಾಡಿ ನಿವಾಸಿ ಬಸವ ಪೂಜಾರಿ (72) ನೀಡಿದ ದೂರಿನ ಪ್ರಕಾರ, ಸೆ.26 ರಂದು ಸಂಜೆ 7 ಗಂಟೆಯಿಂದ ಸೆ. 27 ರಂದು ಬೆಳಿಗ್ಗೆ 9 ಗಂಟೆಯ ನಡುವೆ ತಮ್ಮ ನಿವಾಸದಲ್ಲಿ ಗೋದ್ರೇಜ್ ಕಪಾಟಿನಲ್ಲಿ ಇರಿಸಲಾಗಿದ್ದ 18 ಗ್ರಾಂ ಚಿನ್ನದ ಸರವನ್ನು ಕಳವು ಮಾಡಲಾಗಿದೆ. ಕದ್ದ ಸರದ ಅಂದಾಜು ಮೌಲ್ಯ 1,45,000 ರೂ. ಅಂದಾಜಿಸಲಾಗಿದೆ. ದೂರಿನ ಆಧಾರದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಆರ್, ಪಿಎಸ್ಐ ಸುಧಾ ಪ್ರಭು ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಗ್ರಾಮಾಂತರದ ನೂತನ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸಂತೋಷ್ ಕಾಯ್ಕಿಣಿ ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ. ಮುರ್ಡೇಶ್ವರದಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೈಂದೂರು ಸಬ್ ಇನ್ಸಪೆಕ್ಟರ್ ಆಗಿದ್ದ ಸಂತೋಷ್ ಕಾಯ್ಕಿಣಿ ಅವರು ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಬಳಿಕ ಕೋಟ, ಹೊನ್ನಾವರದ ಪೊಲೀಸ್ ಠಾಣೆ, ನಕ್ಸಲ್ ನಿಗ್ರಹ ದಳದ ಶೃಂಗೇರಿ ಕ್ಯಾಂಪ್ನಲ್ಲಿ ಸಬ್ ಇನ್ಸಪೆಕ್ಟರ್ ಸೇವೆ ಸಲ್ಲಿಸಿ ಅಲ್ಲಿಯೇ ಇನ್ಸ್ಪೆಕ್ಟರ್ ಆಗಿ ಭಡ್ತಿ ಹೊಂದಿದ್ದರು. ಬಳಿಕ ಬೈಂದೂರು, ಮುರುಡೇಶ್ವರದಲ್ಲಿ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ 131 ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ತಕ್ಷಣದಿಂದ ಜಾರಿಯಾಗುವಂತೆ ವರ್ಗಾವಣೆ ಮಾಡಲಾಗಿದೆ. ಕುಂದಾಪುರ ಗ್ರಾಮಾ೦ತರ ವೃತ್ತವು ಕಂಡೂರು, ಶಂಕರನಾರಾಯಣ, ಅಮಾಸೆಬೈಲು ಠಾಣಾ ವ್ಯಾಪ್ತಿಯನ್ನು ಒಳಗೊಂಡಿದೆ. ಇನ್ನು ಬೈಂದೂರಿನಲ್ಲಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಸವಿತ್ರ ತೇಜ್ ಅವರನ್ನು ಮಂಗಳೂರು ಐಜಿಪಿ ಕಛೇರಿಗೆ ವರ್ಗಾವಣೆ ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಶಿವರಾಮ ಕಾರಂತ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗಾಗಿನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ. ದೇವಾಡಿಗ ಪ್ರಥಮ ಸ್ಥಾನವನ್ನು ಗಳಿಸಿರುತ್ತಾನೆ. ಈತ ಗಂಗೊಳ್ಳಿಯ ಚಿತ್ರಕಲಾ ಶಿಕ್ಷಕ ಮಾಧವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್. ದಂಪತಿ ಪುತ್ರ. ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಎಸ್ಡಿಎಂಸಿ ಬಳಗ, ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಚಿತ್ರಪಾಡಿ ಈಶಲಾಸ್ಯ ನಾಟ್ಯಾಲಯ ಅವರಿಂದ ನೃತ್ಯಾಂಜಲಿ ಕಾರ್ಯಕ್ರಮ ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಜರಗಿತು. ನೃತ್ಯಗುರು ವಿದ್ವಾನ್ ಸುಧೀರ್ ರಾವ್ ಕೊಡವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಅನಂತ ಪದ್ಮನಾಭ ಐತಾಳ ವಹಿಸಿದ್ದರು. ಈ ವೇಳೆ ನೃತ್ಯಗುರು ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಸಾಂಸ್ಕೃತಿಕ ಚಿಂತಕಿ ಪ್ರೇಮ ಶೆಟ್ಟಿ ಉಪಸ್ಥಿತರಿದ್ದರು. ಈಶ್ಯಲಾಸ್ಯ ನಾಟ್ಯಾಲಯದ ಮುಖ್ಯಸ್ಥೆ ಅಮೃತ ವೆಂಕಟೇಶ ಮಯ್ಯ ಕಾರ್ಯಕ್ರಮ ಸಂಯೋಜಿಸಿದರು. ಡಾ. ಸ್ವಾತಿ ಉಪಾಧ್ಯ ನಿರೂಪಿಸಿ, ವಿದ್ವಾನ್ ಮಂಜುನಾಥ ಉಪಾಧ್ಯ ಸ್ವಾಗತಿಸಿ, ರಾಜ ಪಾರಂಪಳ್ಳಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಈಶಲಾಸ್ಯ ತಂಡದಿಂದ ನೃತ್ಯ ಕಾರ್ಯಕ್ರಮ ಜರಗಿತು. ಈಶಲಾಸ್ಯ ತಂಡದ ವನಿತಾ ಉಪಾಧ್ಯ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಓಡಿಶಾ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ 40ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 14 ಬಾಲಕರು ಹಾಗೂ 07 ಬಾಲಕಿಯರು ಸೇರಿದಂತೆ ಒಟ್ಟು 21 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಂದೇ ಸಂಸ್ಥೆಯಿಂದ 21 ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ಬಾಲಕಿಯರ ವಿಭಾಗ:ಐಶ್ವರ್ಯ (ಚಕ್ರ ಎಸೆತ), ಗೀತಾ (400 ಮೀ.), ನಾಗಿನಿ (1000 ಮೀ.), ಚರಿಶ್ಮಾ (1000 ಮೀ.), ವೈಷ್ಣವಿ (ಉದ್ದ ಜಿಗಿತ), ಪ್ರೇಕ್ಷಿತಾ (ಜಾವಲಿನ್ ಎಸೆತ), ಮೇಘಾ (ತ್ರಯಥ್ಲಾನ್ ಸಿ). ಬಾಲಕರ ವಿಭಾಗ: ನೋಯಿಲ್ (ಉದ್ದ ಜಿಗಿತ), ಗುರು (ಹೆಪ್ಟಾಥ್ಲಾನ್), ದಯಾನಂದ (400 ಮೀ., 4 *400 ರಿಲೇ), ದರ್ಶನ (5 ಕಿ.ಮೀ ನಡಿಗೆ), ಕವೀಶ್ ನಾಯ್ಕ (ಜಾವಲಿನ್ ಎಸೆತ), ಮನಿಷ್ (ಉದ್ದ ಜಿಗಿತ), ಲೋಹಿತ್ ಗೌಡ (ಉದ್ದ ಜಿಗಿತ), ನವೀನ್ (ಉದ್ದ ಜಿಗಿತ), ಕೃಷ್ಣ ಪ್ರಕಾಶ (ಜಾವಲಿನ್ ಎಸೆತ), ಮೈಲಾರಿ (ಜಾವಲಿನ್…
